28th September 2024
ದುಡಿಮೆ ನ್ಯೂಸ್ ಲೈನ್
ರಾಯಚೂರು,ಸೆ.28-ನಗರದ ರಿಮ್ಸ್ ವೈದ್ಯಕೀಯ ಕಾಲೇಜಿಗೆ ಮರಣಾನಂತರ ದೇಹದಾನ ಹಾಗೂ ನೇತ್ರದಾನ ಮಾಡುವ ಸಂಕಲ್ಪ ಮಾಡಿ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದ ದಂಪತಿಗಳಾದ ಮಾನವಿಯ ಕೋನಾಪುರಪೇಟೆಯ ಕೆ ಪಾರ್ವತಿ ಮತ್ತು ಕೆ ಸಿದ್ದಯ್ಯ ಸ್ವಾಮಿ ನಿವೃತ್ತ ಪ್ರಬಂಧಕರು ಪಿ ಎಲ್ ಡಿ ಬ್ಯಾಂಕ್ ಮಾನವಿ ಅವರನ್ನು ಲಯನ್ಸ್ ಕ್ಲಬ್ ಮಾನವಿ ವತಿಯಿಂದ ಸನ್ಮಾನಿಸಲಾಯಿತು.
ಐಎಂಎ ಮಾನವಿ ಅಧ್ಯಕ್ಷರಾದ ಡಾ. ಶರಣಪ್ಪ, ನಿವೃತ್ತ ಆಯುಷ್ ವೈದ್ಯಾಧಿಕಾರಿಯಾದ ಡಾ. ಚಂದ್ರಶೇಖರ ಸುವರ್ಣಗಿರಿಮಠ, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಶ್ರೀ ಉಮಾಶಂಕರ್ ಕಲ್ಮಠ, ಪ್ರಸೂತಿ ತಜ್ಞರಾದ ಡಾ. ಪ್ರಜ್ಞಾ ಹರಿಪ್ರಸಾದ್, ನಾಗರಾಜ ಬಳಿಗಾರ, ಎಲ್ಐಸಿಯ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಬಾಳಿ, ಎ ವೈ ದೇವರಮನಿ , ಕೆ. ಶಂಕರಗೌಡ ಮತ್ತು ದೇವೇಂದ್ರ ದುರ್ಗದ ಉಪಸ್ಥಿತರಿದ್ದರು.
28th September 2024
ದುಡಿಮೆ ನ್ಯೂಸ್ ಲೈನ್
ರಾಯಚೂರು,ಸೆ.28-ಸ್ವಾತಂತ್ರö್ಯ ಹೋರಾಟಗಾರ ಕ್ರಾಂತಿಕಾರಿ ಷಹೀದ್ ಭಗತ್ ಸಿಂಗ್ ಅವರ 117ನೇ ಜನ್ಮದಿನೋತ್ಸವವನ್ನು ಅಖಿಲಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ-ಎಐಆರ್ ಎಸ್ಓ ಹಾಗೂ ಅಖಿಲಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ಆರ್ವೈಎಫ್ಐ ಜಂಟಿ ಸಂಘಟನೆಗಳ ನೇತೃತ್ವದಲ್ಲಿ ನಗರದ ಆಶಾಪೂರ ರಸ್ತೆಯಲ್ಲಿರುವ ಟಿಯುಸಿಐ ಕಾರ್ಮಿಕ ರಾಜ್ಯ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಭಗತ್ ಸಿಂಗ್ ಜನ್ಮದಿನದ ನಿಮಿತ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ವಿದ್ಯಾರ್ಥಿ-ಯುವಜನ ರಾಜ್ಯ ಮುಖಂಡರಾದ, ಅಜೀಜ್ ಜಾಗಿರದಾರ್, ಭಗತ್ ಸಿಂಗ್ 1907ರ ಸೆಪ್ಟಂಬರ್ 28ರಂದು. ಈಗ ಪಾಕಿಸ್ಥಾನದ ಭಾಗವಾಗಿರುವ ಪಂಜಾಬ್ ಪ್ರಾಂತ್ಯದ ಲ್ಯಾಲ್ಪುರ ಜಿಲ್ಲೆಯ ಜರನ್ವಾಲಾ ತಹಶೀಲ್ನ ಬಾಂಗಾ ಎಂಬ ಜಿಲ್ಲೆಯಲ್ಲಿ ಭಗತ್ ಸಿಂಗ್ ಹುಟ್ಟಿದ್ದು. ತನ್ನ ತಾರುಣ್ಯದಲ್ಲೇ ಭಗತ್ ಸಿಂಗ್ ಕಟ್ಟಾ ಕ್ರಾಂತಿಕಾರಿಯಾಗಿದ್ದರು. ಕಾರ್ಲ್ ಮಾರ್ಕ್ಸ್, ಲೆನಿನ್ ಮೊದಲಾದವರ ಚಿಂತನೆಗಳಿAದ ತೀವ್ರ ಪ್ರಭಾವಿತರಾಗಿದ್ದ ಭಗತ್ ಸಿಂಗ್ ಸಹಜವಾಗಿಯೇ ಸಮಾಜವಾದದೆಡೆಗೆ ಆಕರ್ಷಿತರಾಗಿದ್ದರು ಎಂದರು.
ಧರ್ಮವು ಅಫೀಮು ಆಗಬಲ್ಲುದು ಎಂಬ ಸತ್ಯವನ್ನು ಅರಿತ ಭಗತ್ಸಿಂಗ್, ತನ್ನ ಕ್ರಾಂತಿಕಾರಿ ಹೋರಾಟವನ್ನು ಧರ್ಮ ನಿರಪೇಕ್ಷತೆಯ ಆಧಾರದಲ್ಲೇ ನಡೆಸಬೇಕೆಂಬ ಧ್ಯೇಯ ಹೊಂದಿದ್ದು ಅಂತೆಯೇ ನಡೆದರು. ನಾವು ಅವರ ಮಾರ್ಗದರ್ಶನದ ಆಶಯಗಳನ್ನು ಈಡೇರಿಸುವ ದೃಡ ಸಂಕಲ್ಪ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ನಿರಂಜನ್ ಕುಮಾರ್, ಯಲ್ಲಪ್ಪ, ರವಿಚಂದ್ರನ್, ಆನಂದ್ ಕುಮಾರ್, ಹನೀಫ್ ಅಬಕಾರಿ, ಸಂತೋಷ್, ಮಾರೆಪ್ಪ ಸೇರಿದಂತೆ ಇದ್ದರು.