
ಸಿರವಾರ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು- ಅಧ್ಯಕ್ಷರಾಗಿ ಆಯ್ಕೆಯಾದ ಭೂಪನಗೌಡ
3rd September 2024
ಇಂದು ಸಿರವಾರ ಪಟ್ಟಣದ ಪಟ್ಟಣ-ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಭೂಪನ್ ಗೌಡ ಅವರು ಲ್ಯಾಟರಿಯ ಮೂಲಕ ಗೆಲುವು ಸಾಧಿಸಿದ ಹಿನ್ನೆಲೆ ಶಾಸಕರಾದ ಹಂಪಯ್ಯ ಜಿ ನಾಯಕ್ ಹಾಗೂ ಸಂಸದರಾದ ಜಿ ಕುಮಾರ ನಾಯಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು..
ಈ ಸಂದರ್ಭದಲ್ಲಿ ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು...

Dam
27th August 2024
ಟಿಬಿ ಡ್ಯಾಮ್ ನ ಸ್ಟಾಪ್ ಲಾಕ್ ಗೇಟ್ ಅಳವಡಿಸಿದ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಸದ ಜಿ ಕುಮಾರ ನಾಯಕ..
ದಿಟ್ಟ ಹೆಜ್ಜೆ ನ್ಯೂಸ್
ಹೊಸಪೇಟೆ: ಕರ್ನಾಟಕದ ನಾಲ್ಕು ಜಿಲ್ಲೆಗಳು ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದ್ದ 40 ಟಿಎಂಸಿ ನೀರು ತಡೆಯುವ ಸ್ಟಾಪ್ ಲಾಕ್ ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾದ ಎಲ್ಲಾ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಕುಮಾರ್ ನಾಯಕ ಅವರು ಅಭಿನಂದನೆ ಸಲ್ಲಿಸಿದರು.
ಅವರಿಂದು ತುಂಗಭದ್ರಾ ಜಲಾಶಯದ ಪ್ರದೇಶಕ್ಕೆ ಭೇಟಿ ನೀಡಿ,ನದಿಗೆ ಹರಿದು ಹೋಗುತ್ತಿರುವ ನೀರು ತಡೆಯುವ ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾದ ಕಾರ್ಮಿಕರು,ಅಧಿಕಾರಿಗ ಅಭಿನಂದಿಸಿ ಮಾತನಾಡಿದರು.
ಭೋರ್ಗರೆದು ಪ್ರವಾಹದ ನೀರಿನೊಂದಿಗೆ ಸೆಣಸಾಡಿ ಜಲಾಶಯದ ಕುಸಿದ 19ನೇ ಗೇಟ್ ಸ್ಥಳದಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸುವ ಮೂಲಕ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುತ್ತಿರುವ ಸುಮಾರು 40 ಟಿಎಂಸಿ ನೀರು ಉಳಿಸುವಲ್ಲಿ ಅಧಿಕಾರಿಗಳು ಮತ್ತು ವಿವಿಧ ಕಂಪನಿಯ ಕಾರ್ಮಿಕರ ಸಾಧನೆ ಶ್ಲಾಘನೀಯವಾಗಿದೆ.
ನಾನು ಒಬ್ಬ ಸಿವಿಲ್ ಇಂಜಿನಿಯರ್ ಆಗಿದ್ದರಿಂದ, ಈ ಕಾರ್ಯ ಎಂತಹ ಕಷ್ಟಕರ ಎನ್ನುವ ಮನವರಿಕೆ ಇದೆ. ಕೇವಲ ಆರು ದಿನಗಳಲ್ಲಿ ನದಿಗೆ ಹರಿದು ಹೋಗುತ್ತಿರುವ ಬಹುಪಾಲು ನೀರು ತಡೆಯುವಲ್ಲಿ ಯಶಸ್ವಿಯಾದ ಜಲಾಶಯದ ಕಾರ್ಮಿಕರು, ಅಧಿಕಾರಿಗಳು ಮತ್ತು ವಿವಿಧ ಕಂಪನಿಯ ತಜ್ಞರು ಪ್ರಶಂಸಾರ್ಹರಾಗಿದ್ದಾರೆ.
ಜಲಾಶಯದ 19ನೇ ಗೇಟ್ ಕುಸಿತದಿಂದ ಭಾರಿ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿರುವ ಘಟನೆಯಿಂದ ರೈತರು ತೀವ್ರ ಆತಂಕಕ್ಕೆ ಗುರಿಯಾಗಿದ್ದರು. ಗೇಟ್ ಅಳವಡಿಕೆ ಹೇಗೆ ಎನ್ನುವ ಸವಾಲನ್ನು ಜಲಾಶಯದ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ನಿವಾರಿಸುವ ಮೂಲಕ ಇಂದು ರೈತರ ಆತಂಕ ದೂರ ಮಾಡಿದ್ದಾರೆ. ಇವರ ಕಾರ್ಯ ಸಾಧನೆಗೆ ಸರ್ಕಾರದಿಂದ ಸೂಕ್ತ ಬಹುಮಾನ ನೀಡುವಂತೆ ನಾನು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ಅದೃಷ್ಟವಶಾತ್ ಮೇಲ್ಭಾಗದಲ್ಲಿ ಇನ್ನೂ ಮಳೆ ಪ್ರಮಾಣ ಉತ್ತಮವಾಗಿದೆ. ಸ್ಟಾಪ್ ಲಾಂಗ್ ಗೇಟ್ ಅಳವಡಿಕೆಯ ನಂತರ ಆರು ಟಿಎಂಸಿ ನೀರು ಜಲಾಶಯಕ್ಕೆ ಸಂಗ್ರಹವಾಗಿದೆ. ಎಲ್ಲ ಶ್ರೇಯಸ್ಸು ಇಲ್ಲಿಯ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಸಲ್ಲುತ್ತದೆ ಎಂದರು.

ಅಂಬೇಡ್ಕರ್ ಭವನ ಸ್ವಚ್ಚತೆಗೆ ಮನವಿ
24th August 2024
ಅಂಬೇಡ್ಕರ್ ಸಮುದಾಯ ಭವನದ ಸ್ವಚ್ಚತಾ ಕಾಪಾಡಲು ಮನವಿ
ದಿಟ್ಟ ಹೆಜ್ಜೆ ನ್ಯೂಸ್
ಕವಿತಾಳ: ಪಟ್ಟಣದ ಆರನೇ ವಾರ್ಡನಲ್ಲಿರುವ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದ ಸುತ್ತ ಮುತ್ತಲೂ ಗಿಡ ಗಂಟೆಗಳ ಬೆಳೆದು ಅಸ್ವಚತೆಯಿಂದ ಕೂಡಿದೆ, ಇದಕ್ಕೆಪಟ್ಟಣ ಪಂಚಾಯತಯ ನಿರ್ಲಕ್ಷ್ಯಅಂಬೇಡ್ಕರ್ವೆ ಕಾರಣ ಎಂದು ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಆರೋಪಿಸಿದರು.
ಪಟ್ಟಣದ ಆರನೇ ವಾರ್ಡನಲ್ಲಿರು ಸಮುದಾಯ ಭವನವು ಸುಮಾರು ವರ್ಷಗಳಿಂದ ಪಾಳು ಬಿದ್ದಾಗ ಸ್ಥಿತಿಯಲ್ಲಿದೇ ಸಮುದಾಯ ಭವನಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಬೋರವೆಲ್ , ಭವನದ ಸುತ್ತ ಕಂಪೌಂಡ ಸುಸಜ್ಜಿತ ಗೇಟ್ ನ ವ್ಯವಸ್ಥೆ ಮಾಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಂದು ರೆಡ್ಡಿ ರಾಯನ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿ ಮನವಿ ಸಲ್ಲಿಸಿದ್ದವೇ ಆದರೆ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯತ ಆಡಳಿತ ವಿಫಲವಾಗಿದೆ ಒಂದು ವೇಳೆ ಇದೇ ರೀತಿ ಮುಂದುವರೆದರೆ ಪಟ್ಟಣ ಪಂಚಾಯತಿ ಮುಂಬಾಗದಲ್ಲಿ ಅನಿರ್ದಿಷ್ಟವಾಧಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ಆಜಾಪ್ಪ ಬುಳ್ಳಾಪೂರು, ಫಕೀರಪ್ಪ, ಅಮರೇಶ ಬುಳ್ಳಾಪೂರ, ವೀನೋದ ಶೇಖರಪ್ಪ ಸೋಮನಮರಡಿ, ತಿಮ್ಮಣ್ಣ , ರವಿ, ಅಶೋಕ ಮುಂತಾದವರು.