
13th August 2024
ಕವಿತಾಳ,ಅ13: ಮಸ್ಕಿ ತಾಲೂಕಿನ ಹಾಲಾಪೂರು ಮತ್ತು ಪಾಮನಕಲ್ಲೂರು, ಅಮೀನಗಡ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಮಸ್ಕಿ ಶಾಸಕ ಆರ್ ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೆಸಿದರು.
ನಂತರ ಮಾತನಾಡಿ 2023-24ನೇ ಸಾಲಿನ ಕೆಕೆಆರ್ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ಸುಮಾರು 50 ಲಕ್ಷ ರೂ.ಗಳು ಅನುದಾನದಲ್ಲಿ ತುಗ್ಗಲದಿನ್ನಿ ಕ್ಯಾಂಪ್ ಮತ್ತು ಆನಂದಗಲ್ ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ, ಗುಡಿಹಾಳ, ಅಮೀನಗಡ ಗ್ರಾಮದಲ್ಲಿ 50 ಲಕ್ಷ ರೂ.ಗಳು ವೆಚ್ಚದಲ್ಲಿ ಸಿಸಿ ರಸ್ತೆ, ಡೋಣಮರಡಿ 25 ಲಕ್ಷ ರೂ.ಗಳು ಹಾಗೂ ಮೈಬೂಬ ನಗರ ಕ್ಯಾಂಪ್ ನಲ್ಲಿ 20 ಲಕ್ಷ ರೂ.ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಲಾಯಿತು. ಒಟ್ಟಾರೆಯಾಗಿ 2.45 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೋಳ್ಳಲಾಗಿದೆ ಎಂದು ಹೇಳಿದರು.
ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಾದ ಸಿಸಿ ರಸ್ತೆ, ಚರಂಡಿ ಸೇರಿದಂತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೋಮಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಇನ್ನಷ್ಟು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ, ಕಾಮಗಾರಿ ನಿರ್ವಹಿಸುವ ಗುತ್ತೆದಾರರು ಗುಣ ಮಟ್ಟದ ಕಾಮಗಾರಿಯನ್ನು ಸ್ಥಳಿಯರ ವಿಶ್ವಾಸಕ್ಕೆ ತೆಗೆದುಕೊಂಡು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಪಂಚ ಗ್ಯಾರಂಟಿ ಅಧ್ಯಕ್ಷ ಮಹಿಬೂಬ ಸಾಬ್ ಮುದ್ದಾಪೂರು, ಪಾಮನಕಲ್ಲೂರು ಗ್ರಾಪಂ ಅಧ್ಯಕ್ಷ ಪಾರ್ವತಮ್ಮ, ಅಮೀನಗಡ ಗ್ರಾಪಂ ಅಧ್ಯಕ್ಷ ಬಸಲಿಂಗಮ್ಮ, ಹಿರೇದಿನ್ನಿ ಗ್ರಾಪಂ ಅಧ್ಯಕ್ಷ ಅಯ್ಯಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ರಾಜಾಸಾಬ್, ಲಕ್ಷಣ ತೂಪ್ಪದೂರು, ಕರಿಯಪ್ಪ ಗುತ್ತೇದಾರ, ಕರಿಯಪ್ಪ ಹಾಲಾಪುರು,, ಸಿದ್ದನಗೌಡ, ಶರಣಪ್ಪ, ಅಬ್ದುಲ್ ಸಾಬ್, ರವಿ, ನಾಗಪ್ಪ, ಅಮೀನಗಡ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶಾಂತ ಮೇಟಿ, ಪಾಮನಕಲ್ಲೂರು ಪಿಡಿಒ ಕೃಷ್ಣ ಹುನಗುಂದ,ನ ಹಾಲಾಪೂರು ಪಿಡಿಒ ರಾಮಣ್ಣ, ಮಲ್ಲದಗುಡ್ಡ ಗ್ರಾಮದ ಪಿಡಿಒ ಬಸಲಿಂಗಪ್ಪ ಸೇರಿದಂತೆ ಗ್ರಾಮದ ಗ್ರಾಮಸ್ಥರು ಇದ್ದರು.
non