
4th July 2025
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಖಮುನಿ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು ಕಳೆದ ಸುಮಾರು ನಾಲ್ಕು ತಿಂಗಳಲ್ಲಿ ರೂ.4,003,10/- (ನಾಲ್ಕು ಲಕ್ಷದ ಮೂರುನೂರಾ ಹತ್ತು ರೂಪಾಯಿ) ಸಂಗ್ರಹವಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಹಣವನ್ನು ಎಣಿಕೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್, ದೋಟಿಹಾಳ ಗ್ರಾಮ ಆಡಳಿತ ಅಧಿಕಾರಿ ಮೌನೇಶ್ ಮಡಿವಾಳ, ಮಂಜುನಾಥ್ ಗುಡ್ಡದ, ನಾಗಪ್ಪ ಚೂರಿ ಹಾಗೂ ಸಹಾಯಕ ಸಿಬ್ಬಂದಿಗಳು ರಾಜೇಸಾಬ, ಶರಣಪ್ಪ ಸೇರಿದಂತೆ ಶುಖಮುನಿಸ್ವಾಮಿ ದೇವಸ್ಥಾನ ಟ್ರಸ್ಟಿನ ಪದಾಧಿಕಾರಿಗಳು ಇದ್ದರು.
27th June 2025
ನಮ್ಮ ನ್ಯೂಜ್ ಕುಷ್ಟಗಿ : ಮಾದಿಗ ಸಮುದಾಯದ ಕುಮಾರಿ ಸಂಜನಾ ಇವರು MBBS ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3800 Rank ಗಳಿಸಿ ಉತ್ತಮ ಸಾಧನೆ ಮಾಡಿದ್ದಕ್ಕೆ ಹಾಗೂ ಕುಮಾರ ಪ್ರಪುಲ್ ಹೊಸಮನಿ NEET ಪರೀಕ್ಷೆಯಲ್ಲಿ 2613 Rank ಗಳಿಸಿದ್ದಕ್ಕೆ ಗುರುವಾರದಂದು ಕುಷ್ಟಗಿ ನಗರದ ವಾಲ್ಮೀಕಿ ಭವನದಲ್ಲಿ ತಾಲೂಕಿನ ಮಾದಿಗ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮಾದಿಗ ಸಮುದಾಯದ ನೌಕರರಾದ ಶಶಿಕಾಂತ ಶಾಖಾಪೂರ ಶಿಕ್ಷಣ ಇಲಾಖೆ ದೋಟೀಹಾಳ ಇವರ ಸಹೋದರನ ಮಗಳಾದ ಕುಮಾರಿ ಸಂಜನಾ ಇವರು MBBS ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3800 Rank
ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಹಾಗೂ ಶ್ರೀಯುತ ದಂಡಪ್ಪ ಹೊಸಮನಿ CRP ಶಿಕ್ಷಣ ಇಲಾಖೆ ಇವರ ಪುತ್ರ ಪ್ರಪುಲ್ ದಂಡಪ್ಪ ಹೊಸಮನಿ NEET ಪರೀಕ್ಷೆಯಲ್ಲಿ 2613 Rank ಗಳಿಸಿದ್ದಾರೆ.
ಮಾದಿಗ ಸಮುದಾಯದ ಎಲ್ಲಾ ನೌಕರರು ಸೇರಿ ದಿನಾಂಕ 26-6-2025 ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಇದೇ ವೇಳೆ ಕುಮಾರಿ ಸಂಜನಾ ಹಾಗೂ ಕುಮಾರ ಪ್ರಪುಲ್ ಇರ್ವರಿಗೆ ಅಭಿನಂದನೆ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಾಷಯಗಳನ್ನು ತಿಳಿಸಲಾಯಿತು.
ಕೋರಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಲಕ್ಷ್ಮಣ್ ಸರ್, ಕಾರ್ಯದರ್ಶಿ ಮಹಾಂತೇಶ ಜಾಲಿಗಿಡದ, ಖಜಾಂಚಿ ವಿಜಯಕುಮಾರ್ ಮೈತ್ರಿ, ಸಂಘಟನಾ ಕಾರ್ಯದರ್ಶಿ ಮಹೇಂದ್ರ ಹೋಸಮನಿ, ವಿಠಲ್ ಎಮ್, ಮಾರ್ಗದರ್ಶಕರು, ದಂಡಪ್ಪ ಸರ್ ಹಾಗೂ ಮಾದಿಗ ಸಮಾಜದ ವಕೀಲರಾದ ಶಿವಕುಮಾರ ದೊಡ್ಡಮನಿ, ಸುಖಮುನಿ ಗುಮಗೇರ ಹಾಗೂ ಚಿದಾನಂದ ಇಂಡಿ, ಧರ್ಮರಾಜ, ದೊಡ್ಡಮನಿ, ಬುಡ್ಡಪ್ಪ ದೋಟಿಹಾಳ, ಮಂಜುನಾಥ ಹೊಸಮನಿ, ಶ್ರೀಕಾಂತ್ ಕೆಂಗಾರಿ, ಪರಶುರಾಮ ಸರ್, ಲಕ್ಷ್ಮಣ್ ಸರ್ ಸೇರಿದಂತೆ ಇತರರಿದ್ದರು.
26th June 2025
ನಮ್ಮನ್ಯೂಜ್, ಜಿ ಎಂ ನ್ಯೂಜ್ ಕುಷ್ಟಗಿ : ಪೊಲೀಸ್ ಇಲಾಖೆ ಕುಷ್ಟಗಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕುಷ್ಟಗಿ, ತಾಲೂಕು ವಕೀಲರ ಸಂಘ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25-06-2025 ಬುಧುವಾರದಂದು ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮವು ಕುಷ್ಟಗಿ ನಗರದ ಬಸವ ಭವನದಲ್ಲಿ ನಡೆಯಿತು.
ಮಂಜುನಾಥ ಆರ್. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ತಾಲೂಕಾ ಕಾನೂನು ಸೇವಾ ಸಮಿತಿ, ಕುಷ್ಟಗಿ ಇವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಯುವಕರು ತಮ್ಮ ಆರೋಗ್ಯದ ಮೇಲೆ ಕಾಳಜಿ
ಹೊಂದಬೇಕು, ಮಾದಕ ವಸ್ತುಗಳ ಸೇವನೆಯು ನಮ್ಮ ಜೀವನವನ್ನು ಹಾಳು ಮಾಡುತ್ತದೆ ಹೀಗಾಗಿ ಅವುಗಳಿಂದ ಬಹುದೂರವೇ ಇರುವುದು ಒಳ್ಳೆಯದು ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಮಾತನಾಡಿ, ಇತ್ತೀಚೆಗೆ ಪ್ರಚಾರ ಮಾಧ್ಯಮದ ಮೂಲಕ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಸಾಕಷ್ಟು ಮಾಹಿತಿಗಳನ್ನು ನೀಡುತ್ತಿವೇ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎನ್ನುವ ವಿಚಾರ ತಿಳಿದು ನಡೆದುಕೊಳ್ಳಬೇಕು. ನಮ್ಮ ದೇಶದ ಭವಿಷ್ಯ ರೂಪಿಸ ಬೇಕಾದರೆ ಯುವಕರು ಮಾದಕ ವಸ್ತುಗಳ ಸೇವನೆ ಬಗ್ಗೆ ಹಾಗೂ ಮಾರಾಟದ ಬಗ್ಗೆ ಜಾಗೃತಿ ಇರಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ ಹೆತ್ತವರು ಮಕ್ಕಳ ಬಗ್ಗೆ ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ನಿರತರಾಗಿದ್ದಾರೆ, ಆದರೆ ಕೆಟ್ಟ ಸ್ನೇಹಿತರ ಸಹವಾಸದಿಂದಾ ಡ್ರಗ್ಸ್ ಚಟಕ್ಕೆ ಬಲಿಯಾಗದೆ ಎಚ್ಚರವಿರಲಿ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂಬುದನ್ನು ಅರಿತು ಬಾಳಬೇಕು ಎಂದರು. ಕಾರ್ಯಕ್ರಮ ಕುರಿತು ವಕೀಲರ ಸಂಘದ ಅಧ್ಯಕ್ಷರಾದ
ಎಸ್.ಜಿ.ಪಾಟೀಲ್, ಪಿಎಸ್ಐ ಹನಮಂತಪ್ಪ ತಳವಾರ ಮಾತನಾಡಿದರು. ವೇದಿಕೆ ಮೇಲೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುನಾಥ ಆರ್. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಚೌಳಗಿ, ಆರಕ್ಷಕ ವೃತ್ತ ನಿರೀಕ್ಷಕರಾದ ಯಶವಂತ್ ಬಿಸನಳ್ಳಿ, ವಕೀಲರ ಸಂಘದ ಅಧ್ಯಕ್ಷರಾದ ಎಸ್.ಜಿ.ಪಾಟೀಲ್, ಆರಕ್ಷಕ ಉಪ ನಿರೀಕ್ಷಕರಾದ ಹನಮಂತಪ್ಪ ತಳವಾರ, ವಕೀಲರ ಸಂಘದ ಕಾರ್ಯದರ್ಶಿ ಆನಂದ ಡೊಳ್ಳಿನ, ಮತ್ತು ವಕೀಲರಾದ ರಮೇಶ್ ಪಿ. ಹಾಗೂ ಎನ್ ಟಿ ಮದ್ನಾಳ್ ಉಪಸ್ಥಿತರಿದ್ದರು.
ಬಸವರಾಜ್ ಪೊಲೀಸ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಇದೇ ವೇಳೆ ಎಸ್ ವಿ ಎಂ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ಮತ್ತು ಬಿಜೆಎಸ್ ಪ್ಯಾರಾ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಕಾಲೇಜ್ ಅಧ್ಯಕ್ಷರಾದ ಶ್ರೀಶೈಲ್ ವಾದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದಕ್ಕೂ ಮೊದಲು ಕುಷ್ಟಗಿ ನಗರದ ಮಲ್ಲಯ್ಯ ವೃತದಿಂದ ಬಸವೇಶ್ವರ ವೃತ್ತದವರೆಗೆ ಜಾಥಾ ಕಾರ್ಯಕ್ರಮ ನಡೆಯಿತು.
ವರದಿ : ಭೀಮಸೇನರಾವ್ ಕುಲಕರ್ಣಿ ಜಿ ಎಂ ನ್ಯೂಜ್ ಕುಷ್ಟಗಿ.
14th June 2025
ಕುಷ್ಟಗಿ : ಮೈತ್ರಿ ಮೆಲೋಡೀಸ್ ಕಲಾ ವೃಂದ ಗಜೇಂದ್ರಗಡ ಹಾಗೂ ಬಿಜಕಲ್ಲ ಗ್ರಾಮದ ಕಲಾಭಿಮಾನಿಗಳ ಸಹಕಾರದೊಂದಿಗೆ ಸ್ವರ ಸಂಗಮ ಕಲಾ ವೃಂದ ಬೆಂಗಳೂರು ಇವರ ಸಹಯೋಗದಲ್ಲಿ ಕುಷ್ಟಗಿ ತಾಲೂಕಿನ ಬಿಜಕಲ್ಲ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಕರೋಕೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನಾಳೆ ದಿನಾಂಕ: 15-06-2025 ಭಾನುವಾರ ಮುಂಜಾನೆ 09.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಬಿಜಕಲ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ
ಈ ಕಾರ್ಯಕ್ರಮವು ನಡೆಯಲಿದ್ದು, ಅಧ್ಯಕ್ಷತೆಯನ್ನು
ಶ್ರೀ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ವಿರಕ್ತಮಠ, ಬಿಜಕಲ್ ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಜುನಾಥ ಎಂ. ಕೂಡ್ಲಿಗಿ ಅಧ್ಯಕ್ಷರು, ಸ್ವರ ಸಂಗಮ ಕಲಾ ವೃಂದ, ಬೆಂಗಳೂರು,
ರೆಹಮಾನ್ ಹೆಚ್. ಕೋಳೂರು ಪ್ರಧಾನ ಕಾರ್ಯದರ್ಶಿ, ಸ್ವರ ಸಂಗಮ ಕಲಾ ವೃಂದ, ಬೆಂಗಳೂರು, ಶರಣಪ್ಪ ಎಂ. ತಳುವಗೆರೆ ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸೇವಾ ಸಮಿತಿ, ಬಿಜಕಲ್, ಶಾಂತರಾಜ್ ಗೋಗಿ ಸಂಸ್ಥಾಪಕರು ಶಿಲೆಗಳು ಸಂಗೀತವ ಹಾಡಿವೆ ಗೆಳೆಯರ ಬಳಗ ಕುಷ್ಟಗಿ, ಲಕ್ಷ್ಮಿ ನಾರಾಯಣ ರಾವ್ ಎಸ್.ಪಿ.
ಸಮಾಜ ಸೇವಕರು ಮತ್ತು ಗಾಯಕರು, ಬೆಂಗಳೂರು,
ರಾಜು ಮೆರ್ವಾಡೇ ಅಧ್ಯಕ್ಷರು, ರಾಜ್ ಮೆಲೋಡಿಸ್ ಮತ್ತು ಕರೋಕೆ ಸ್ಟುಡಿಯೋ, ಯಲಬುರ್ಗಾ,
ನಿಂಗರಾಜ್ ವರ್ಮಗಾಳಿ, ಬಿಜಿ ನ್ಯೂಸ್ ಚಾನೆಲ್ ಸಂಪಾದಕರು ಹಾಗೂ ರಾಗ ಕರೋಕೆ ಸ್ಟುಡಿಯೋ ಅಧ್ಯಕ್ಷರು, ಗಜೇಂದ್ರಗಡ, ಸಂಗಪ್ಪ ಜಿ. ತಗ್ಗಿನಮನಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬಿಜಕಲ್,
ಸಣ್ಣ ಹನುಮಂತಪ್ಪ ಬೋವಿ ಗ್ರಾಮ ಪಂಚಾಯಿತಿ ಸದಸ್ಯರು, ಬಿಜಕಲ್, ಮಲ್ಲಿಕಾರ್ಜುನ್ ಶಿ. ಉಪನಾಳ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್,
ಶ್ರೀಮತಿ ಮಲ್ಲಿಕಾ ಬಿ. ಜಗಲಿ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಶ್ರೀಮತಿ ಹುಲಿಗೆಮ್ಮ ಕೆ. ಪಿಡ್ಡಪ್ಪನವರ್ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಶ್ರೀಮತಿ ಲಕ್ಷ್ಮವ್ವ ಡಿ, ಛಲವಾದಿ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಶ್ರೀಮತಿ ಮಲ್ಲಮ್ಮ ಎಂ. ಮೇಟಿ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಸುನಿಲ್ ಕುಮಾರ್ ಗಾಯಕರು, ಕುಷ್ಟಗಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಶೀರ್ ಅಹ್ಮದ್ ಎಂ.ಶಿವಮೊಗ್ಗ ಗಾಯಕರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾಗಿರುವ ಬಾಷ ಬಳಿಗಾರ, ರಾಜು ಗಜೇಂದ್ರಗಡ, ನರಸಿಂಹದಾಸ ತೋಟದ ಇವರು ತಿಳಿಸಿದ್ದಾರೆ.
ಸ್ವರ ಸಂಗಮ ಕಲಾ ವೃಂದ(ರಿ.) ಬೆಂಗಳೂರು ಇದರ ಸಹಕಾರದೊಂದಿಗೆ ನಾಳೆ ಬಿಜಕಲ್ ಗ್ರಾಮದಲ್ಲಿ ಈ ಕರೋಕೆ ಕಾರ್ಯಕ್ರಮ ನಡೆಯಲಿದ್ದು ಕಲಾಭಿಮಾನಿಗಳು ಸಂಗೀತದ ಆಸಕ್ತಿ ಉಳ್ಳವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷರಾದ ಮಂಜುನಾಥ ಎಂ., ಉಪಾಧ್ಯಕ್ಷರಾದ ಧನರಾಜ್, ಪ್ರಧಾನ ಕಾರ್ಯದರ್ಶಿ ರೆಹಮಾನ್ ಸಾಬ್, ಸಹ ಕಾರ್ಯದರ್ಶಿ ಸಿದ್ದಣ್ಣ ಪೂಜೇರಿ, ಖಜಾಂಚಿ ವಸೀಂ ಅಕ್ರಂ, ಹಾಗೂ ಸದಸ್ಯರಾದ ವೀರಭದ್ರಯ್ಯ ಗಬ್ಬೂರು, ಬಿ.ಪಿ. ಬಿಂದು, ಎಂ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ವರದಿ. ಭೀಮಸೇನರಾವ್ ಕುಲಕರ್ಣಿ ಜಿ ಎಂ ನ್ಯೂಜ್ ಕುಷ್ಟಗಿ.
13th May 2025
ಕುಷ್ಟಗಿ ೧೩ ಇದೇ ತಿಂಗಳು ದಿನಾಂಕ ೧೫ ಗುರುವಾರ ಬೆಳಿಗ್ಗೆ ೯/೪೫ ಕ್ಕೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣನವರಿಂದಾ ಕುಷ್ಟಗಿಯ ರೈಲ್ವೆ ಸ್ಟೇಶನ್ ಮೂಲಕ ಕುಷ್ಟಗಿ ಯಿಂದ ಗದಗವರೆಗೆ ನೂತನ ರೈಲ್ವೆ ಚಾಲನೆ ಸಿಗುತ್ತಿರುವದು ಸಂತಸ ತಂದಿದೆ.
ಗದಗ - ವಾಡಿ ರೈಲು ಮಾರ್ಗದ ಕನಸು ಈಗಲಾದರೂ ಈಡೇರಿಕೆಗೆ ಅವಕಾಶ ದಕ್ಕಿದ್ದು ಇದರ ಹಿಂದೆ ಹಲವಾರು ಸಂಘ ಸಂಸ್ಥೆಗಳ ಹೋರಾಟದ ನೆರಳು ಇದೆ.
ಕಳೆದ ೨೮ ವರ್ಷಗಳ ಹಿಂದೆ ಕನ್ನಡ ಕ್ರಿಯಾ ಸಮಿತಿಯ ತಾಲೂಕು ಘಟಕವು ಇಲ್ಲಿನ ತಹಶಿಲ್ದಾರ ಕಛೇರಿ ಮುಂದೆ ಕುಷ್ಟಗಿ ಯಿಂದ ರೈಲು ಸಂಪರ್ಕಕ್ಕೆ ಒತ್ತಾಯಿಸಿ ೧೯೯೭ ರಲ್ಲಿ ಗದಗ ವಾಡಿ ರೈಲು ಮಾರ್ಗದ ಕಾಮಗಾರಿ ಆರಂಭಿಸಲು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿತ್ತು.
ತಾಲೂಕು ಕನ್ನಡ ಕ್ರಿಯಾ ಸಮಿತಿಯ ತಾಲೂಕು ಅಧ್ಯಕ್ಷ ರವಿಂದ್ರ ಬಾಕಳೆ ಗೌರವಾಧ್ಯಕ್ಷ ಶರಣಪ್ಪ ವಡಗೇರಿ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮನೋಹರ ಬಡಿಗೇರೆ ಬಿಜಕಲ್,ಸಂತೋಷ ಜೋಶಿ, ಮನೋಹರ ಕಮ್ಮಾರ,ಶೇಖಪ್ಪ ಪಾಟೀಲ್, ರಾಜು ಕೆಂಚನಗೌಡಾ,ಕುಮಾರ ಶೆಟ್ಟರ ಸೇರಿದಂತೆ ಅನೇಕರು ಭಾಗವಹಿಸಿ ತಹಶಿಲ್ದಾರ ಮುಖಾಂತರ ಗದಗ ವಾಡಿ ರೈಲು ಮಾರ್ಗ ಶೀಘ್ರವಾಗಿ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು ಸ್ಮರಣೀಯ .
ಅಂದು ಹೋರಾಟ ಮಾಡಿದ ನಂತರ ಕಾಮಗಾರಿ ಆಮೇಗತಿಯಲ್ಲಿ ಆರಂಭವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ನಡೆದ ಗದಗ ವಾಡಿ ರೈಲು ಮಾರ್ಗ ಕುಷ್ಟಗಿ ಯಿಂದ ಹುಬ್ಬಳ್ಳಿ ವರೆಗೆ ಪೂರ್ಣಗೊಂಡ ಪರಿಣಾಮ ಕುಷ್ಟಗಿ ಸ್ಟೇಶನ್ ನಲ್ಲಿ ಚಾಲನೆ ಸಿಗುತ್ತಿರುವದಕ್ಕೆ ಕನ್ನಡ ಕ್ರಿಯಾ ಸಮಿತಿಯ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
5th May 2025
ಜಿ ಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ ಪಟ್ಟಣದ ಆರಾಧ್ಯ ದೇವರಾದ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರ ಜಾತ್ರಾ ಮಹೋತ್ಸವವು ನಾಳೆ ದಿನಾಂಕ 06-05-2025 ರಿಂದ 14-05=2025 ರ ವರೆಗೆ ಜರುಗಲಿದ್ದು ರಥೋತ್ಸವವು ವೈಶಾಖ ಶುದ್ಧ ಪೂರ್ಣಿಮಾ ದಿನಾಂಕ 12-05-2025 ರಂದು ವಿಜೃಂಭಣೆಯಿಂದ ನಡೆಯಲಿದೆ.
--------ಜಾತ್ರಾ ಕಾರ್ಯಕ್ರಮಗಳ ವಿವರ-------
ದಿನಾಂಕ : 06:05:2025 ಮಂಗಳವಾರ ವೈಶಾಖ
ಶು॥ ನವಮಿ ಬೆಳಗ್ಗೆ 8:00 ಗಂಟೆಗೆ ಶ್ರೀ ಅಡವಿ
ಮುಖ್ಯಪ್ರಾಣೇಶನ ಉತ್ಸವ ಮೂರ್ತಿಯನ್ನು ಅರ್ಚಕರ
ಮನೆಯಿಂದ ದೇವಸ್ಥಾನದವರೆಗೆ ಭಜನೆ ಹಾಗೂ
ಮೆರವಣಗೆಯೊಂದಿಗೆ ಕರೆದುಕೊಂಡು ಬರುವುದು.
ನಂತರ ಶ್ರೀ ಬೃಹತಿ ಸಹಸ್ರಯಾಗದ ಕಲಶ ಪ್ರತಿಷ್ಠಾಪನೆ, ತದಂಗ, ಮದ್ಯಾಹ್ನ 12:00 ಕ್ಕೆ ವಿಧಿವತ್ತಾಗಿ ವೇದಮಂತ್ರ ಪಠಣದೊಂದಿಗೆ ಕಂಕಣ ಬಂಧನ ಹಾಗೂ ಗರುಡ ಪಟ ನಂತರ ನೈವೇದ್ಯ ತೀರ್ಥ ಪ್ರಸಾದ. ಸಂಜೆ 07-30 ಕ್ಕೆ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಸ್ವಸ್ತಿವಾಚನ ಮಹಾಮಂಗಳಾರುತಿ.
ದಿನಾಂಕ 07-05-2025 ಬುಧವಾರ ವೈಶಾಖ
ಶು॥ ದಶಮಿಯಿಂದ ಬೆಳಗ್ಗೆ 7:30 ರಿಂದ 9:00 ರ
ವರೆಗೆ ವಾಯುಸ್ತುತಿ ಪುರಶ್ಚರಣ ಮಧು ಅಭಿಷೇಕ,
ಪಂಚಾಮೃತ, ವೇದಪಠಣ ಪಲ್ಲಕ್ಕಿ ಉತ್ಸವದೊಂದಿಗೆ
ಬಲಿಹರಣ ಬೆಳಗ್ಗೆ: 09:00 ರಿಂದ ಶ್ರೀ ಬೃಹತಿ
ಸಹಸ್ರಯಾಗ ಮಧ್ಯಾಹ್ನ : 12-00 ಗಂಟೆಗೆ
ಪೂರ್ಣಾಹುತಿ, 12:30 ಗಂಟೆಗೆ ನೈವೇದ್ಯ, ತೀರ್ಥ
ಪ್ರಸಾದ ರಾತ್ರಿ 7:00 ಗಂಟೆಗೆ ಬಲಿಹರಣ ಪಲ್ಲಕ್ಕಿ,
ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆ, 07:30 ರಿಂದ 09 ರವರೆಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ-ತದಂಗ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ವೆಂಕಟೇಶ ಸ್ತವರಾಜ ಹಾಗೂ ಲಕ್ಷ್ಮೀಶೋಭಾನ ಪಾರಾಯಣ.
ದಿನಾಂಕ: 08-05-2025 ಗುರುವಾರ ವೈಶಾಖ
ಶು II ಏಕಾದಶಿ ಬೆಳಗ್ಗೆ 8:30 ಗಂಟೆಗೆ ಪಲ್ಲಕ್ಕಿ ಉತ್ಸವ
ಪ್ರಾಕಾರ ಪ್ರದಕ್ಷಿಣೆ, ರಾತ್ರಿ 8:30 ಗಂಟೆಗೆ ಪಲ್ಲಕ್ಕಿ ಉತ್ಸವ, ಹರಿವಾಣ ಸೇವಾ ಹಾಗೂ ಪತ್ತಾ ಸೇವೆ.
ದಿನಾಂಕ : 09-05-2025 ಶುಕ್ರವಾರ ವೈಶಾಖ ಶು॥
ದ್ವಾದಶಿ ಬೆಳಗ್ಗೆ 5:00 ಕ್ಕೆ ವೇದಪಠಣ ಪಲ್ಲಕ್ಕಿ
ಉತ್ಸವದೊಂದಿಗೆ ಬಲಿಹರಣ, 06:00 ಕ್ಕೆ ನೈವೇದ್ಯ ತೀರ್ಥಪ್ರಸಾದ, ರಾತ್ರಿ 7:30 ಗಂಟೆಗೆ ಬಲಿಹರಣ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ.
ದಿನಾಂಕ :10-05-2025 ಶನಿವಾರ ವೈಶಾಖ
ಶು II ತ್ರಯೋದಶಿ “ಶ್ರೀ ನರಸಿಂಹ ಜಯಂತಿ” ಬೆಳಗ್ಗೆ
7:00 ರಿಂದ ಪಂಚಾಮೃತ ಸೇವೆ, 08:00 ಕ್ಕೆ ಪಲ್ಲಕ್ಕಿ
ಉತ್ಸವ, ಬಲಿಹರಣ 9-00 ಗಂಟೆಗೆ ಮನ್ಯುಸೂಕ್ತ ಹಾಗೂ ವಾಯುಸ್ತುತಿ ಪುರಶ್ಚರಣ ಹೋಮ, ಮಧ್ಯಾಹ್ನ 12:30 ಗಂಟೆಗೆ
ನೈವೇದ್ಯ ತೀರ್ಥ ಪ್ರಸಾದ ರಾತ್ರಿ 7:30 ರಿಂದ ಬಲಿಹರಣ, ಪಲ್ಲಕ್ಕಿ ಸೇವಾ, ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆ, ನಂತರ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾದೀಪ ನಮಸ್ಕಾರ ಪೂಜೆ ತದಂಗ ಸಾಮೂಹಿಕ ದುರ್ಗಾ ಸುಳಾದಿ ಹಾಗೂ ನರಸಿಂಹ ಸುಳಾದಿ ಪಾರಾಯಣ.
ದಿನಾಂಕ: 11-05-2025 ಭಾನುವಾರ ವೈಶಾಖ
ಶು॥ ಚರ್ತುದಶಿ ಬೆಳೆಗ್ಗೆ 7: 00 ಕ್ಕೆ ಮಧು ಅಭಿಷೇಕ,
ಪಂಚಾಮೃತ ಸೇವೆ, 08:00 ಕ್ಕೆ ಪಲ್ಲಕ್ಕಿ ಉತ್ಸವ,
ಬಲಿಹರಣ 9:00 ರಿಂದ ಭೂವರಾಹ ಮಂತ್ರ ಹಾಗೂ
ಪರ್ಜನ್ಯ ಸೂಕ್ತ ಹೋಮ, ಮಧ್ಯಾನ್ಹ 12:30ಕ್ಕೆ ನೈವೇದ್ಯ, ತೀರ್ಥ ಪ್ರಸಾದ ರಾತ್ರಿ 8:30 ರಿಂದ ದಂಡ ಬಲಿ, ರಥೋತ್ಸವ, ಹರಿವಾಣ ಸೇವೆ, ಪತ್ತಾಸೇವೆ, ಮಹ ಮಂಗಳಾರತಿ ಹಾಗೂ ತೊಟ್ಟಿಲು ಸೇವೆ.
ದಿನಾಂಕ: 12-05-2025 ಸೋಮವಾರ ವೈಶಾಖ
ಶು॥ ಪೌರ್ಣಿಮ ಬೆಳೆಗ್ಗೆ: 07-00 ಕ್ಕೆ ಮಧು ಅಭಿಷೇಕ,
ಪಂಚಾಮೃತ ಅಭಿಷೇಕ, ಶ್ರೀ ವ್ಯಾಸಪೂಜಾ,
10-00 ರಿಂದ ರಥಾಂಗ ಹಾಗೂ ಪವಮಾನ ಹೋಮ,
ಸತ್ಯನಾರಾಯಣ ಪೂಜಾ ಸಾಯಂಕಾಲ
6-00 ಗಂ ಗೆ “ಮಹಾ ರಥೋತ್ಸವ” ನಂತರ
ಹರಿವಾಣ ಸೇವೆ , ಪತ್ತಾಸೇವೆ, ನೈವೇದ್ಯ ತೀರ್ಥ ಪ್ರಸಾದ.
ದಿನಾಂಕ: 13-05-2025 ಮಂಗಳವಾರ ವೈಶಾಖ
ಬ!! ಪ್ರತಿಪದ ಬೆಳೆಗ್ಗೆ: 7-00 ಕ್ಕೆ ಮಧು ಅಭಿಷೇಕ,
ಪಂಚಾಮೃತ ಅಭಿಷೇಕ, ಯಜುರ್ವೇದ ಸಂಹಿತಾ
ಯಾಗದ ಕಲಶ ಪ್ರತಿಷ್ಠಾಪನೆ, ಸಂಜೆ 6-00 ಕ್ಕೆ (ಕೊಂಡ)
ಅವಭ್ರತಸ್ನಾನ, ಹರಿವಾಣ ಸೇವೆ, ಪತ್ತಾಸೇವೆ, ನೈವೇದ್ಯ ನಂತರ ಕಂಕಣ ಹಾಗೂ
ಗರುಡ ಪಟ ವಿಸರ್ಜನೆ, ತೀರ್ಥ ಪ್ರಸಾದ.
ದಿನಾಂಕ: 14-05-2025 ಬುಧವಾರ ವೈಶಾಖ
ಬII ದ್ವಿತಿಯ ಬೆಳೆಗ್ಗೆ: 7-00 ಕ್ಕೆ ಪಂಚಾಮೃತ ಅಭಿಷೇಕ, ನಂತರ ಯಜುರ್ವೇದ ಸಂಹಿತಾ ಯಾಗ,
ಮಧ್ಯಾಹ್ನ 12-30ಕ್ಕೆ ನೈವೇಧ್ಯ ತೀರ್ಥ ಪ್ರಸಾದ, ಸಂಜೆ 6-00 ಗಂಟೆಗೆ ದೇವಸ್ಥಾನದಿಂದ ಅರ್ಚಕರ ಮನೆಯವರೆಗೆ ಮೆರವಣಿಗೆಯೊಂದಿಗೆ ಉತ್ಸವ ಮೂರ್ತಿಯನ್ನು ಪುರ ಪ್ರವೇಶ.
........ ವಿಶೇಷ ಕಾರ್ಯಕ್ರಮ---------
ದಿನಾಂಕ 09:05:2025 ಶುಕ್ರವಾರ ದಂದು ರಾತ್ರಿ 7:00 ರಿಂದ 09:00 ಗಂಟೆಯವರೆಗೆ ನಾಡಿನ ಪ್ರಖ್ಯಾತ ಗಾಯಕರಾದ ಶ್ರೀ ಡಾ|| ಪಂ. ರಮೇಶ ಕುಲಕರ್ಣಿ ಕಲಬುರಗಿ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ “ದಾಸವಾಣಿ” ಕಾರ್ಯಕ್ರಮ ಇರಲಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಅಡವಿರಾಯನ ಕೃಪೆಗೆ ಪಾತರಾಗಬೇಕೆಂದು ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನ ವಿಶ್ವಸ್ಥ
ಸಮಿತಿಯ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಪುರ ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
9th April 2025
ಕುಷ್ಟಗಿ: ತಾಲೂಕಾಡಳಿತ ಹಾಗೂ ಜೈನ ಸಮಾಜದ ನೇತೃತ್ವದಲ್ಲಿ ಏಪ್ರೀಲ್ ತಿಂಗಳ 10 ರಂದು ಭಗವಾನ ಮಹಾವೀರ ಜಯಂತಿ ಆಚರಣೆಯನ್ನು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಆಚರಿಸಲು ತಹಶೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಸೋಮವಾರ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅಧ್ಯಕ್ಷತೆಯಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಹಿನ್ನೆಲೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನವೀಕರಣಗೊಂಡ ಜೈನ ಬಸದಿ ಉದ್ಘಾಟನೆ ಹಾಗೂ ತಾಲೂಕಿನಲ್ಲಿ ನಿಲೋಗಲ್ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಜೈನ ಸಮುದಾಯ ವಾಸವಿದೆ. ತಾಲೂಕಾಡಳಿತ ಆಚರಿಸಲಾಗುವ ಜಯಂತಿಯನ್ನು ಅದೇ ಗ್ರಾಮದಲ್ಲಿ ಆಚರಿಸಲು ಜೈನ ಸಮುದಾಯದ ಅಧ್ಯಕ್ಷ ಶಾಂತರಾಜ್ ಗೋಗಿ ಮನವಿ ಮಾಡಿದರು.
ತಹಶೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ದಿನ ಸರಕಾರಿ ರಜೆ ಇದ್ದು, ಆ ದಿನ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಏಪ್ರೀಲ್ 11ರಂದು ಜೈನ ಸಮುದಾಯ, ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ಆಚರಿಸುವ ಬಗ್ಗೆ ಪ್ರಸ್ತಾಪಿಸಿದರು.
ನಿಲೋಗಲ್ ಗ್ರಾಮದಲ್ಲಿ ಆಚರಿಸಿದರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಅವರು, ನಾನು ಮಾತ್ರ ಆ ದಿನ ಖಂಡಿತವಾಗಿ ಭಾಗವಹಿಸುವೆ. ಸದರಿ ನಿಲೋಗಲ್ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಲು ನೋಟೀಸ್ ಜಾರಿ ಮಾಡುವುದಾಗಿ ತಿಳಿಸಿದರು. ಮಹಾವೀರ ಜಯಂತಿಗೆ ಸರ್ಕಾರ ರಜೆ ನೀಡಿರುವುದು ಸರಕಾರಿ ಅಧಿಕಾರಿಗಳಿಗೆ ನೆಪ ಆಗಬಾರದು, ನಿಲೋಗಲ್ ಗ್ರಾಮ ತಾಲೂಕಾ ಕೆಂದ್ರದಿಂದ ದೂರ ಇದೆ ಎಂದು ಹಿಂಜರಿಯದೇ ಸದರಿ ಕಾರ್ಯಕ್ರಮಕ್ಕೆ ಹಾಜರಾಗಲು ಮನವಿ ಮಾಡಿದರು.
ಜೈನ ಸಮುದಾಯದ ಶಾಂತರಾಜ್ ಗೋಗಿ ಜೈನ್, ಅಮರಚಂದ್ ಜೈನ್, ವೀರೇಶ ಬಂಗಾರಶೆಟ್ಟರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಸುಂದರ್, ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಕಂದಾಯ ಇಲಾಖೆಯ ಸುಂದರೇಶಕುಮಾರ್ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
9th April 2025
ಜಿಎಂ ನ್ಯೂಜ್ ಕುಷ್ಟಗಿ : ಇಲ್ಲಿಯ ಶ್ರೀ ಅಡವಿರಾಯ ದೇವಸ್ಥಾನದ ಶ್ರೀ ರಾಮದೇವರ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವವು ಭಾನುವಾರದಂದು ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ಸೀತಾ ರಾಮರಿಗೆ ಮುಂಜಾನೆ 8:00 ಗಂಟೆಗೆ
ಫಲ ಪಂಚಾಮೃತ ಅಭಿಷೇಕ, 9:00 ರಿಂದ 11:30 ರ ವರೆಗೆ ಶ್ರೀ ರಾಮ ತಾರಕ ಮಂತ್ರ ಹೋಮ, ಮಧ್ಯಾಹ್ನ 12:00 ಗಂಟೆಗೆ ಶ್ರೀ ರಾಮ ದೇವರ ತೊಟ್ಟಿಲು ಸೇವೆ, 12:30 ಗಂಟೆಗೆ ಮಹಾ ನೈವೇದ್ಯ , 1:00 ಗಂಟೆಗೆ ಸರ್ವರಿಗೂ ತೀರ್ಥ ಪ್ರಸಾದ ನಡೆಯಿತು.
ಶ್ರೀ ರಾಮ ದೇವರ ಉಸ್ಥವ ಮೂರ್ತಿಯನ್ನು ತೊಟ್ಟಿಲದೊಳಗಿಟ್ಟು ತೂಗಿದ ನಂತರ ಪ್ರತಿಯೊಬ್ಬ ಭಕ್ತರಿಗೂ ಕೋಸಂಬರಿ, ಪಾನಕ ವಿತರಿಸಲಾಯಿತು.
ದೇವಸ್ಥಾನದ ಅರ್ಚಕರಾದ ಶೇಷಾಚಾರ್ ಅವರಿಂದ ಶ್ರೀ ಸೀತಾ ರಾಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾಗೂ ಶ್ರೀ ರಾಮನ ಭಕ್ತ ಶ್ರೀ ಅಡವಿರಾಯ ದೇವಸ್ಥಾನದಲ್ಲಿ ವಾದಿರಾಜಾಚಾರ್ ಅವರಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ವಿಪ್ರ ಸಮಾಜದರೆಲ್ಲರೂ ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
19th February 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಪರಮಪೂಜ್ಯ ವಿರೇಂದ್ರಹೆಗಡೆ ಹಾಗೂ ಹೇಮಾವತಿ ಹೆಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶೇಖರನಾಯ್ಕ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಷ್ಟಗಿ ಶಾಖೆ ಹಾಗೂ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಇಲ್ಲಿಯ ಶ್ರೀ ಬುತ್ತಿಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೆರೆ ಅಭಿವೃದ್ಧಿ, ಬಡಜನರಿಗೆ ವಾತ್ಸಲ ಯೋಜನೆಯಡಿಯಲ್ಲಿ ಉಚಿತವಾಗಿ ಮನೆ ನಿರ್ಮಾಣ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಾಯಧನ, ನಿರ್ಗತಿಕ ಹಿರಿಯ ನಾಗರಿಕರಿಗೆ ಮಾಶಾಸನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬಡಜನರಿಗೆ ಸಹಾಯ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ನೀಡುವ ಸಂಸ್ಥೆಯಲ್ಲ ವಿವಿಧ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಸದಸ್ಯರ ಉಳಿತಾಯ ಖಾತೆ ತೆರೆದು ಸಾಲ ಸೌಲಭ್ಯ ಒದಗಿಸಿ ಉದ್ಯಮಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದಾರೆ ಎಂದು ಹೇಳಿದರು.
ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಆರೋಗ್ಯ ಕಾರ್ಡ್ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ, ವಕೀಲ ಚಂದ್ರಶೇಖರ ಉಪ್ಪಿನ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪ್ರಕಾಶರಾವ್, ಒಕ್ಕೂಟದ ಅಧ್ಯಕ್ಷರಾದ ಹಂಪಮ್ಮ ಕೋಳೂರು, ಶಿಲ್ಪಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳೇರಿಮಠ ಹಾಗೂ ಕಾರ್ಯದರ್ಶಿ ಪ್ರಭು ಜಾಗೀರದಾರ, ನೇತ್ರಾಧಿಕಾರಿ ಮನೋಹರ ಪತ್ತಾರ, ಕಾವೇರಿ, ಬಸಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಮಂಜುಳಾ, ಟಿ.ಎನ್.ಓ ರಾಘವೇಂದ್ರ, ಸೇವಾ ಪ್ರತಿನಿಧಿಗಳಾದ ಕಳಕಮ್ಮ, ಶಿವಶರಣಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಜ್ಞಾನ ವಿಕಾಸ ಹಾಗೂ ಎಲ್ಲಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶರಣಪ್ಪ ಲೈನದ್ ಸ್ವಾಗತಿಸಿದರು.
ಶಿವಲೀಲಾ ಬೆಳ್ಳೇರಿಮಠ ವಂದಿಸಿದರು.
ಶಿಬಿರದಲ್ಲಿ ಸುಮಾರು 112 ಜನರು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿದರು.
20 ಜನರು ಕಣ್ಣಿನ ಪೊರೆ ಹೊಂದಿರುವ ಫಲಾನುಭವಿಗಳು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
4th January 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ನಾಳೆ ದಿನಾಂಕ:-05-01-2025 ಭಾನುವಾರ ದಂದು ಸಾಯಂಕಾಲ 4: 00 ಘಂಟೆಗೆ ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಜೀಶಾನ್ ಪ್ರಕಾಶನ ಬಿನ್ನಾಳ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಹಾಗೂ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಡಾ.ಜೀವನಸಾಬ್ ವಾಲಿಕಾರ್ ಬಿನ್ನಾಳ ಅವರ ಕೃತಿ *ಜಾನಪದ ಮತ್ತು ಸಮಷ್ಟಿಪ್ರಜ್ಞೆ* ಎಂಬ ಪುಸ್ತಕದ ಲೋಕಾರ್ಪಣೆ ಹಾಗೂ *ಜಾನಪದ ಸಂಭ್ರಮ* ಸಮಾರಂಭ ಜರುಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರು ಮಾಡಲಿದ್ದು, ,
ಪುಸ್ತಕ ಲೋಕಾರ್ಪಣೆಯನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಸಚಿವರು ನೇರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಸನಸಾಬ ದೋಟಿಹಾಳ ಅಧ್ಯಕ್ಷರು ಕಾಡಾ ಮುನಿರಾಬಾದ್ ಇವರು ವಹಿಸಲಿದ್ದು, ಪುಸ್ತಕದ ಕುರಿತು ಡಾ. ಜಾಜಿ ದೇವೇಂದ್ರಪ್ಪ ಸದಸ್ಯರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಮಾತನಾಡಲಿದ್ದು,
ಮುಖ್ಯ ಅತಿಥಿಗಳಾಗಿ ಕೆ ಶರಣಪ್ಪ ಮಾಜಿ ಶಾಸಕರು,
ಪ್ರೊ. ಅಲ್ಲಮಪ್ರಭು ಬೆಟ್ಟದೂರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಡಾ. ಸತೀಶ್ ಪಾಟೀಲ್ ಸಹಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೂವಿನಹಡಗಲಿ, ಡಾ. ಬಿ ಕೆ ಎಸ್ ವರ್ಧನ್ ನಿರ್ದೇಶಕರು ಸಿಸ್ಲೇಪ್ ಧಾರವಾಡ,
ಬಿ ಎಚ್ ಗೋನಾಳ ನಿವೃತ್ತ ಜಂಟಿ ನಿರ್ದೇಶಕರು ಶಿಕ್ಷಣ ಇಲಾಖೆ, ಶ್ರೀಶೈಲ ಬಿರಾದಾರ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ,
ದೊಡ್ಡಬಸಪ್ಪ ನಿರಲಕೇರಿ ಪ್ರಾಂಶುಪಾಲರು ಡಯಟ್ ಮುನಿರಾಬಾದ್, ಸುರೇಂದ್ರ ಕಾಂಬಳೆ ಕ್ಷೇತ್ರ
ಶಿಕ್ಷಣಾಧಿಕಾರಿಗಳು, ಚನ್ನಬಸಪ್ಪ ಎಮ್ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಪೇಟೆ, ಸೋಮರೆಡ್ಡಿ ಅಳವಂಡಿ ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ,
ದೇವಿಂದ್ರಪ್ಪ ಬಳೂಟಗಿ ಪ್ರಗತಿಪರ ರೈತರು, ಹಾಗೂ ಮುಖಂಡರಾದ ಶೇಖರಗೌಡ ಮಾಲಿಪಾಟೀಲ್,
ಬಸವರಾಜ ಹಳ್ಳೂರು, ಜಗದೀಶಪ್ಪ ಎಮ್ ಕ್ಷೇತ್ರ ಸಮನ್ವಯಾಧಿಕಾರಿಗಳು, ಕಲ್ಲೇಶ್ ತಾಳದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಪುರಸಭೆ ಕುಷ್ಟಗಿ, ಸೈಯದ್ ಮೈನುದ್ದೀನ್ ಮುಲ್ಲಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಪುರಸಭೆ ಕುಷ್ಟಗಿ, ಕಳಕಪ್ಪ ಕಂಬಳಿ ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಯಲಬುರ್ಗಾ, ನಾಗರಾಜ ಜುಮ್ಮಣ್ಣನವರ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು,
ಶರಣಬಸವನಗೌಡ ಪಾಟೀಲ್ ಅಧ್ಯಕ್ಷರು ಕ ರಾ ಪ್ರಾ ಶಾಲಾ ಸಹ ಶಿಕ್ಷಕರ ಸಂಘ ಕೊಪ್ಪಳ, ಶ್ರೀನಿವಾಸ ನಾಯಕ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಕುಷ್ಟಗಿ,
ರುದ್ರೇಶ್ ಬೂದಿಹಾಳ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಕುಷ್ಟಗಿ,
ನೀಲನಗೌಡ ಹೊಸಗೌಡ್ರು ಅಧ್ಯಕ್ಷರು ಕ ರಾ ಪ್ರೌಢಶಾಲಾ ಶಿಕ್ಷಕರ ಸಂಘ ಕುಷ್ಟಗಿ,
ಲಂಕೇಶ್ ವಾಲಿಕಾರ್ ಅಧ್ಯಕ್ಷರು ಕನ್ನಡ ಸಾಹಿತ್ಪರಿಷತ್ ತಾಲೂಕು ಘಟಕ ಕುಷ್ಟಗಿ, ಎಮ್ ಎಮ್ ಗೊಣ್ಣಾಗರ ಅಧ್ಯಕ್ಷರು ಶಿಕ್ಷಣಾಧಿಕಾರಿಗಳ ಸಂಘ ತಾಲೂಕು ಘಟಕ ಕುಷ್ಟಗಿ, ಸೋಮಲಿಂಗಪ್ಪ ಗುರಿಕಾರ್ ಅಧ್ಯಕ್ಷರು ಸಿ ಆರ್ ಪಿ,ಬಿ ಆರ್ ಪಿ ಸಂಘ ಕುಷ್ಟಗಿ ಇವರುಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತವನ್ನು
ಡಾ. ಜೀವನಸಾಬ್ ವಾಲಿಕಾರ್ ಬಿನ್ನಾಳ ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರು ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.