4th January 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ ತಾಲೂಕ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ನಾಳೆ ದಿನಾಂಕ 05-01-2025 ಭಾನುವಾರದಂದು ಕುಷ್ಟಗಿ ನಗರದ ವಿದ್ಯಾನಗರದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು ಗೋಪಾಲರಾವ್ ರಾಮರಾವ್ ಕುಲಕರ್ಣಿ ಸಾ:- ಬಿಜಕಲ್ ಇವರು 08 ಬಿಜಕಲ್ ಮತಕ್ಷೇತ್ರ ಸಾಲಗಾರರ ಸದಸ್ಯರ ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿರುತ್ತಾರೆ. ಇವರ ಅನುಕ್ರಮ ನಂಬರ್ 2 ಟೆಲಿಫೋನ್ ಗುರುತಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ರೈತರ ಶ್ರೇಯೋಭಿವೃದ್ಧಿಗಾಗಿ ಹಾಗೂ ರೈತರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಅನುಕ್ರಮ ಸಂಖ್ಯೆ 2 ಟೆಲಿಫೋನ್ ಗುರುತಿಗೆ ತಮ್ಮ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿದ್ದಾರೆ.
ನಾಳೆ ದಿನಾಂಕ 05-01-2025 ಭಾನುವಾರದಂದು ಕುಷ್ಟಗಿ ನಗರದ ವಿದ್ಯಾನಗರದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು ತಾವುಗಳು ತಮ್ಮ ಅತ್ಯಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 2 ಟೆಲಿಫೋನ್ ಗುರ್ತಿಗೆ ನೀಡಿ ಮುಂದಿನ ಐದು ವರ್ಷಗಳ ಕಾಲ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಅಭ್ಯರ್ಥಿ ಗೋಪಾಲರಾವ್ ರಾಮರಾವ್ ಕುಲಕರ್ಣಿ ಸಾಕಿನ್ ಬಿಜಿಕಲ್ ಇವರು ವಿನಂತಿಸಿಕೊಂಡಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
25th December 2024
ಕುಷ್ಟಗಿ : ತಾಲೂಕಾ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅಧ್ಯಕ್ಷರಾದ ಶ್ರೀ ಶ್ಯಾಮರಾವ್ ಕುಲಕರ್ಣಿ ಅವರಿಗೆ ಮತ್ತು ಜಿಲ್ಲಾ ಪ್ರತಿನಿಧಿಗಳಾದ ಶ್ರೀ ಶೇಖರಗೌಡ ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಶ್ ಪಾಟೀಲ್, ಹಾಗೂ ಆರ್.ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ಶಿವಶಂಕರಗೌಡ ಪಾಟೀಲ್ ಅವರನ್ನು
ಮಾಜಿ ಸಚಿವರಾದ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಅಮರೇಗೌಡ ಪಾಟೀಲ್ ಅವರ ಕಾರ್ಯಾಲಯದಲ್ಲಿ ಅಭಿಮಾನಿಗಳು ಗೌರವಿಸಿ ಸನ್ಮಾನಿಸಿದರು.
ಇದೇ ವೇಳೆ ಲಾಡ್ಲೇ ಮಷಾಕ್ ದೋಟಿಹಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
13th December 2024
ಜಿಎಂ ನ್ಯೂಜ್ ಕುಷ್ಟಗಿ
ಕುಷ್ಟಗಿ : ನಾಳೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಕುಷ್ಟಗಿ ತಾಲೂಕ ಕ.ಸಾ.ಪ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ನಾಳೆ ದಿನಾಂಕ ೧೩-೧೨-೨೦೨೪ ಶುಕ್ರವಾರ ಮಧ್ಯಾಹ್ನ : ೪-೩೦ ಕ್ಕೆ ಕುಷ್ಟಗಿ ನಗರದ ಬಸವ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ.108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶರಣೇಗೌಡ ಪೋ.ಪಾಟೀಲ್ ಜಿಲ್ಲಾ ಅಧ್ಯಕ್ಷರು ಕ.ಸಾ.ಪ ಕೊಪ್ಪಳ ವಹಿಸಲಿದ್ದಾರೆ.
ದೊಡ್ಡನಗೌಡ ಹೆಚ್. ಪಾಟೀಲ್ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು ಕುಷ್ಟಗಿ, ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾಜಿ ಸಚಿವರು, ಹಸನಸಾಬ ದೋಟಿಹಾಳ ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ತುಂಗಭದ್ರ ಯೋಜನೆ ಮುನಿರಾಬಾದ, ಕೆ.ಶರಣಪ್ಪ ವಕೀಲರು ಮಾಜಿ ಶಾಸಕರು ಇವರುಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು
ಶೇಖರಗೌಡ ಮಾಲಿ ಪಾಟೀಲ್, ಕೇಂದ್ರ ಕ.ಸಾ.ಪ.ಸಂ.ಸಂ. ಮಾಜಿ ಪ್ರತಿನಿಧಿ ಹಾಗೂ ಮಾಜಿ ಜಿಲ್ಲಾಧ್ಯಕ್ಷರು ಕ.ಸಾ.ಪ ಕೊಪ್ಪಳ ಮಾಡಲಿದ್ದಾರೆ.
ರವಿಂದ್ರ ಬಾಕಳೆ ನಿಕಟ ಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ಆಶಯ ನುಡಿಗಳನ್ನಾಡಲಿದ್ದಾರೆ.
ಕುಷ್ಟಗಿ ತಾಲೂಕಾ ಕಸಾಪ ಅಧ್ಯಕ್ಷರಾಗಿದ್ದ ವಿರೇಶ ಬಂಗಾರ ಶೆಟ್ಟರ ಅವರಿಂದ ನೂತನ ಅಧ್ಯಕ್ಷರಾಗಲಿರುವ ಲೆಂಕಪ್ಪ ವಾಲಿಕಾರ ರವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ,
ನಬಿಸಾಬ ಕುಷ್ಟಗಿ ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ಕ.ಸಾ.ಪ. ಬೆಂಗಳೂರು, ಚನ್ನಬಸಪ್ಪ ಕಡ್ಡಿಪುಡಿ ಗೌರವ ಕಾರ್ಯದರ್ಶಿ ಕ.ಸಾ.ಪ. ಕೊಪ್ಪಳ, ಶೇಖರಗೌಡ ಪೋ.ಪಾಟೀಲ್ ಗೌರವ ಕಾರ್ಯದರ್ಶಿ ಕ.ಸಾ.ಪ. ಕೊಪ್ಪಳ, ರಮೇಶ ಕುಲಕರ್ಣಿ ಗೌರವ ಕೋಶಾಧ್ಯಕ್ಷರು ಕ.ಸಾ.ಪ. ಕೊಪ್ಪಳ, ಪ್ರಸನ್ನಕುಮಾರ ದೇಸಾಯಿ ಸಹಕಾರ್ಯದರ್ಶಿಗಳು ಕ.ಸಾ.ಪ ಕೊಪ್ಪಳ, ಮಹೇಶ ಸಿಂಗನಾಳ ಸಹ ಕಾರ್ಯದರ್ಶಿಗಳು ಕ.ಸಾ.ಪ ಕೊಪ್ಪಳ, ಎಸ್.ಜಿ. ಕಡೇಮನಿ ಪ.ಜಾ. ಪ್ರತಿನಿಧಿ ಕ.ಸಾ.ಪ. ಕೊಪ್ಪಳ, ಶ್ರೀಮತಿ ವಿದ್ಯಾ ಕಂಪಾಪೂರಮಠ ಮಹಿಳಾ ಪ್ರತಿನಿಧಿ ಕ.ಸಾ.ಪ. ಕೊಪ್ಪಳ ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಅಶೋಕ ವಿ. ಶಿಗ್ಗಾಂವಿ ಕೆ.ಎ.ಎಸ್. ತಹಶೀಲ್ದಾರರು, ಕುಷ್ಟಗಿ,
ಪಂಪಾಪತಿ ಹಿರೇಮಠ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಕುಷ್ಟಗಿ,
ಯಶವಂತ ಎಚ್. ಬಿಸನಹಳ್ಳಿ ಆರಕ್ಷಕ ವೃತ್ತ ನಿರೀಕ್ಷಕರು ಕುಷ್ಟಗಿ, ಸುರೇಂದ್ರ ಕಾಂಬ್ಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ, ಜಗದೀಶಪ್ಪ ಎಮ್. ಕ್ಷೇತ್ರ ಸಮನ್ವಯಾಧಿಕಾರಿಗಳು ಕುಷ್ಟಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ಶ್ರೀನಿವಾಸ ನಾಯಕ್ ತಾಲೂಕಾಧ್ಯಕ್ಷರು ಕ.ರಾ.ಸ.ನೌ.ಸಂ. ಕುಷ್ಟಗಿ, ಡಾ. ಜೀವನಸಾಬ ಬಿನ್ನಾಳ ರಾಜ್ಯ ಜಾನಪದ ಅಕಾಡೆಮಿ ಸದಸ್ಯರು ಬೆಂಗಳೂರ, ಕಿಶನರಾವ್ ಕುಲಕರ್ಣಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರು ಬೆಂಗಳೂರ, ಜಿ.ಕೆ. ಹಿರೇಮಠ ಪುರಸಭೆ ಮಾಜಿ ಅಧ್ಯಕ್ಷರು ಕುಷ್ಟಗಿ, ಶರಣಪ್ಪ ವಡಿಗೇರ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಹನುಮೇಶ ಗುಮಗೇರಿ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಶ್ರೀನಿವಾಸ ಜಹಗೀರದಾರ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ರವೀಂದ್ರ ಬಾಕಳೆ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಚಂದಪ್ಪ ಹಕ್ಕಿ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ನಟರಾಜ ಸೋನಾರ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಉಮೇಶ ಹಿರೇಮಠ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಡಾ. ಎಸ್.ಬಿ. ಡಾಣಿ ಪ್ರಾಚಾರ್ಯರು ಪ್ರಥಮ ದರ್ಜೆ ಕಾಲೇಜ್ ಕುಷ್ಟಗಿ, ಫಕೀರಪ್ಪ ಚಳಗೇರ ಹಿರಿಯ ನ್ಯಾಯವಾದಿಗಳು ಕುಷ್ಟಗಿ, ಮಹ್ಮದ ಅಬ್ದುಲ್ ಕರೀಮ್ ವಂಟೆಳಿ,
ರಾಜ್ಯ ಉಪಾಧ್ಯಕ್ಷರು ಜಂಪ್ ರೋಪ್ ಸಂಸ್ಥೆ (ರಿ) ಹನಮಸಾಗರ, ಮಲ್ಲಯ್ಯ ಕೋಮಾರಿ ಅಧ್ಯಕ್ಷರು ನಿಸರ್ಗ ಸಂಗೀತ ಶಾಲೆ, ಹನಮಸಾಗರ,
ಮಲ್ಲಣ್ಣ ಪಲ್ಲೇದ ಮುಖಂಡರು ಕುಷ್ಟಗಿ, ಬಸವರಾಜ ಹಳ್ಳೂರ ಮುಖಂಡರು ಕುಷ್ಟಗಿ,
ಮಹಾಂತೇಶ ಅಗಸಿಮುಂದಿನ ಮುಖಂಡರು ಕುಷ್ಟಗಿ, ರಜಾಕ ಟೇಲರ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಜಂಪರೋಪ್ ಸಂಸ್ಥೆ, ಮಂಜುನಾಥ ಗುಳೇದಗುಡ್ಡ ಹೋಬಳಿ ಅಧ್ಯಕ್ಷರು ಹನಮಸಾಗರ, ರವೀಂದ್ರ ಕಾಟವಾ ಹೋಬಳಿ ಅಧ್ಯಕ್ಷರು ಹನಮನಾಳ, ವೀರಬಸಯ್ಯ ಕಾಡಗಿಮಠ ಹೋಬಳಿ ಅಧ್ಯಕ್ಷರು ಹಿರೇಮನ್ನಾಪೂರ, ರವೀಂದ್ರ ಬಳಗಾರ ಹೋಬಳಿ ಅಧ್ಯಕ್ಷರು ತಾವರಗೇರಾ,
ನಿಂಗಪ್ಪ ಸಜ್ಜನ ಹೋಬಳಿ ಅಧ್ಯಕ್ಷರು ದೋಟಿಹಾಳ,
ಎಂ.ಎಂ. ಗೊಣ್ಣಾಗರಅಧ್ಯಕ್ಷರು ತಾಲೂಕ ಶಿಕ್ಷಣಾಧಿಕಾರಿಗಳ ಸಂಘ ಕುಷ್ಟಗಿ, ಶಿವಯ್ಯ ಗುರುಸ್ಥಳಮಠ ಅಧ್ಯಕ್ಷರು ತಾ.ಪ.ಪೂ. ಉಪನ್ಯಾಸಕರ ಸಂಘ ಕುಷ್ಟಗಿ, ನೀಲನಗೌಡ ಹೊಸಗೌಡ್ರ ತಾಲೂಕಾಧ್ಯಕ್ಷರು ಪ್ರೌ.ಶಾ.ಶಿ.ಸಂಘ ಕುಷ್ಟಗಿ, ಮಲ್ಲಪ್ಪ ಕುದರಿ ತಾಲೂಕಾಧ್ಯಕ್ಷರು ಪ್ರಾ.ಶಾ.ಶಿ.ಸಂಘ ಕುಷ್ಟಗಿ, ಚಂದಪ್ಪ ಗುಡಿಮನಿ
ಅಧ್ಯಕ್ಷರು ಪಂಚಾಯತ ಅಭಿವೃದ್ಧಿ ಅಧಿಕಾರಗಳ ಕ್ಷೇಮಾಭಿವೃದ್ಧಿ ಸಂಘ ಕುಷ್ಟಗಿ, ಸೋಮಲಿಂಗಪ್ಪ ಗುರಿಕಾರ ಅಧ್ಯಕ್ಷರು ಬಿ.ಆರ್.ಪಿ, ಬಿ.ಐ.ಇ.ಆರ್.ಟಿ, ಸಿ.ಆರ್.ಪಿ ಸಂಘ ಕುಷ್ಟಗಿ, ಶಿವಸಂಗಪ್ಪ ಬೆಲ್ಲದ ಅಧ್ಯಕ್ಷರು ಬಸವ ಸಮಿತಿ ಕುಷ್ಟಗಿ, ಟಿ. ಬಸವರಾಜ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ, ಬಸವರಾಜ ಉಪ್ಪಲದಿನ್ನಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕುಷ್ಟಗಿ, ಶೇಖರಗೌಡರು ಸರನಾಡಗೌಡರ ಸಾಹಿತಿಗಳು ತಾವರಗೇರಾ,
ಕೆ.ವಾಯ್ ಕಂದಕೂರ ಸಾಹಿತಿಗಳು ದೋಟಿಹಾಳ,
ಹೆಚ್. ವಾಯ್, ಈಟಿಯವರು ಸಾಹಿತಿಗಳು ಕುಷ್ಟಗಿ,
ತಾಜುದ್ದೀನ್ ದಳಪತಿ ಸಾಹಿತಿಗಳು ಕುಷ್ಟಗಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ..
ನಿರೂಪಣೆಯನ್ನು ಶರಣಪ್ಪ ತೆಮ್ಮಿನಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಇಲಾಖೆ ಕುಷ್ಟಗಿ ಇವರು ಮಾಡಲಿದ್ದಾರೆ. ಮಹೇಶ ಹಡಪದ ಗೌರವ ಕಾರ್ಯದರ್ಶಿಗಳ ಕ.ಸಾ.ಪ ಕುಷ್ಟಗಿ ಇವರು ಸ್ವಾಗತ ಮಾಡಲಿದ್ದಾರೆ.ವಂದನಾರ್ಪಣೆಯನ್ನು ಶರಣಪ್ಪ ಲೈನದ ಪ.ಜಾ. ಪ್ರತಿನಿಧಿ ಕ.ಸಾ.ಪ ಕುಷ್ಟಗಿ ನೆರವೇರಿಸಲಿದ್ದಾರೆ.ನಾಡಗೀತೆ ಮತ್ತು ರೈತ ಗೀತೆಯನ್ನು ಜುಮ್ಮನಗೌಡ ಪಾಟೀಲ್ ಸಂಗೀತ ಶಿಕ್ಷಕರು ಮೊರಾರ್ಜಿ ವಸತಿ ಶಾಲೆ, ಕಾಟಾಪೂರ ಮಾಡಲಿದ್ದಾರೆ.ಹಾಗೂ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಆಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಸ್ಥಳೀಯ ಸಂಘ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನೂತನ ಕಸಾಪ ಅಧ್ಯಕ್ಷ ಲೆಂಕಪ್ಪ ವಾಲೀಕರ ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.
10th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಮ್ ಕೃಷ್ಣ ಅವರ ಕೊಡುಗೆಯು ಅಪಾರವಾಗಿದ್ದು ಅವರ ಹೆಸರಿನಲ್ಲಿ ಇಂದು ನೂರಾರು ಕುಟುಂಬಗಳು ಜೀವನವನ್ನು ಮಾಡುತ್ತಿದ್ದು ಅವರ ಸಾವು ನಮಗೆ ಅತೀವ ನೋವು ತಂದಿದೆ ಎಂದು ಗ್ರಾಪಂ ಅಧ್ಯಕ್ಷರಾದ ಮಹೇಶ ಕಾಳಗಿ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಎಚ್ ಜಿ ರಾಮುಲು ಕಾಲೋನಿಯಲ್ಲಿ ಮಾಜಿ ಸಿಎಂ ಎಸ್ ಎಮ್ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿ ಮಾತನಾಡಿದ ಅವರು 2001-02ನೇ ಸಾಲಿನಲ್ಲಿ ನಮ್ಮ ಗ್ರಾಮದಲ್ಲಿ ನೂರಾರು ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಉತ್ತಮವಾದ ಆಡಳಿತವನ್ನು ನಡೆಸಿದ್ದಾರೆ ಹಾಗೂ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ದಿಯ ಹರಿಕಾರರಾಗಿದ್ದಾರೆ ಎಂದರು.
ಶೇಖಪ್ಪ ದೊಡ್ಡಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಜಮೀರಸಾಬ ಯಲಬುರ್ಗಿ, ಲಾಡಸಾಬ ಯಲಬುರ್ಗಿ, ಪಂಪಾಪತಿ ಅರಳಿಕಟ್ಟಿ, ಚನ್ನಬಸವ ಚೌರಿ, ಶಂಕ್ರಪ್ಪ ವಡ್ಡರ, ಭಾಷಾ ಗೋನಾಳ, ಖಾಜೇಸಾಬ ಗಚ್ಚಿನಮನಿ, ಮಂಜೂರುಅಲಿ ಬನ್ನು, ಲಾಲಸಾಬ ಮೂಗನೂರು, ಬಂದೆನವಾಜ ಬಿಜಕತ್ತಿ, ಹಾಗೂ ಎಚ್ ಜಿ ರಾಮುಲು ಕಾಲೋನಿ ನಿವಾಸಿಗಳು ಇದ್ದರು.
10th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಕರ್ನಾಟಕ ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಅವರು ಇಂದು ನಿಧನರಾಗಿದ್ದಕ್ಕೆ, ಕುಷ್ಟಗಿ ಮತಕ್ಷೇತ್ರದ ಮಾಜಿ ಶಾಸಕರು, ಹಾಗೂ ಮಾಜಿ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪುರ ಅವರು ದುಃಖ ವ್ಯಕ್ತಪಡಿಸಿರುತ್ತಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಅಲ್ಲದೇ ರಾಜ್ಯ ಮತ್ತು ದೇಶದ
ರಾಜಕಾರಣದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಿದ ಧೀಮಂತ ನಾಯಕ ಎಸ್.ಎಂ. ಕೃಷ್ಣರವರ ನಿಧನವು ದುಃಖ ತಂದಿದೆ. ಶಾಲಾ ಮಕ್ಕಳಿಗೆ ಬಿಸಿಯೂಟ, ರಾಜ್ಯದಲ್ಲಿ ಮೋಡ ಬಿತ್ತನೆ, ವಿದ್ಯುತ್ ಕ್ರಾಂತಿ, ಬೆಂಗಳೂರು ಐಟಿ ಸಿಟಿ, ಆಧುನಿಕ ದೂರದೃಷ್ಟಿಯ ನಾಯಕರಾದ ಇವರು ಸೌಮ್ಯವಾದಿ ನೇರ ನಿಷ್ಠುರ ಉತ್ತಮ ಆಡಳಿತ ನೀಡಿದ ಧೀಮಂತರಾದ ಇವರು ನಾನು ಈ ಮೊದಲು ಲಿಂಗಸುಗೂರು ಶಾಸಕನಾಗಿದ್ದಾಗ ಕೃಷ್ಣ ಬಲದಂಡೆ ಉದ್ಘಾಟನೆ ಮತ್ತು ವಿವಿಧ ಸಮಾರಂಭಕ್ಕೆ ಆಗಮಿಸಿ ಅಭಿವೃದ್ಧಿ ಚಿಂತನೆಯ ಅವರ ಮಾತುಗಳು
ಇಂದಿಗೂ ಹಸಿರಾಗಿವೆ ಎಂದಿದ್ದಾರೆ.
ಇಂದಿನ ಯುವ ಪೀಳಿಗೆಯ ಒಳತಿಗಾಗಿ ಅನೇಕ
ಯೋಜನೆಗಳನ್ನು ಜಾಲಿಗೊಳಿಸಿದ, ನಾಡಿಗೆ ಅಪಾರ ಕೊಡುಗೆ ನೀಡಿದ ಧೀಮಂತ ನಾಯಕರ ಅಗಲಿಕೆ ಅಪಾರ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದ್ದು, ಇವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ದಯಪಾಲಿಸಲೆಂದು ಪ್ರಾರ್ಥಿಸುತ್ತಾ ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ
ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವರಾದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪುರ ಅವರು ದುಃಖ ವ್ಯಕ್ತಪಡಿಸಿರುತ್ತಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಅವರು ಇಂದು ನಿಧನರಾಗಿದ್ದಕ್ಕೆ, ಕುಷ್ಟಗಿ ಮತಕ್ಷೇತ್ರದ ಮಾಜಿ ಶಾಸಕರು, ಹಾಗೂ ಮಾಜಿ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪುರ ಅವರು ದುಃಖ ವ್ಯಕ್ತಪಡಿಸಿರುತ್ತಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಅಲ್ಲದೇ ರಾಜ್ಯ ಮತ್ತು ದೇಶದ
ರಾಜಕಾರಣದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಿದ ಧೀಮಂತ ನಾಯಕ ಎಸ್.ಎಂ. ಕೃಷ್ಣರವರ ನಿಧನವು ದುಃಖ ತಂದಿದೆ. ಶಾಲಾ ಮಕ್ಕಳಿಗೆ ಬಿಸಿಯೂಟ, ರಾಜ್ಯದಲ್ಲಿ ಮೋಡ ಬಿತ್ತನೆ, ವಿದ್ಯುತ್ ಕ್ರಾಂತಿ, ಬೆಂಗಳೂರು ಐಟಿ ಸಿಟಿ, ಆಧುನಿಕ ದೂರದೃಷ್ಟಿಯ ನಾಯಕರಾದ ಇವರು ಸೌಮ್ಯವಾದಿ ನೇರ ನಿಷ್ಠುರ ಉತ್ತಮ ಆಡಳಿತ ನೀಡಿದ ಧೀಮಂತರಾದ ಇವರು ನಾನು ಈ ಮೊದಲು ಲಿಂಗಸುಗೂರು ಶಾಸಕನಾಗಿದ್ದಾಗ ಕೃಷ್ಣ ಬಲದಂಡೆ ಉದ್ಘಾಟನೆ ಮತ್ತು ವಿವಿಧ ಸಮಾರಂಭಕ್ಕೆ ಆಗಮಿಸಿ ಅಭಿವೃದ್ಧಿ ಚಿಂತನೆಯ ಅವರ ಮಾತುಗಳು
ಇಂದಿಗೂ ಹಸಿರಾಗಿವೆ ಎಂದಿದ್ದಾರೆ.
ಇಂದಿನ ಯುವ ಪೀಳಿಗೆಯ ಒಳತಿಗಾಗಿ ಅನೇಕ
ಯೋಜನೆಗಳನ್ನು ಜಾಲಿಗೊಳಿಸಿದ, ನಾಡಿಗೆ ಅಪಾರ ಕೊಡುಗೆ ನೀಡಿದ ಧೀಮಂತ ನಾಯಕರ ಅಗಲಿಕೆ ಅಪಾರ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದ್ದು, ಇವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ದಯಪಾಲಿಸಲೆಂದು ಪ್ರಾರ್ಥಿಸುತ್ತಾ ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ
ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವರಾದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪುರ ಅವರು ದುಃಖ ವ್ಯಕ್ತಪಡಿಸಿರುತ್ತಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.
7th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಕೊಪ್ಪಳ ಜಿಲ್ಲಾ ಖೋ ಖೋ ಅಸೋಷಿಯೇಷನ್ ತಾವರಗೇರಾ ಮತ್ತು ಶ್ರೀ ಗವಿಶ್ರೀ ಸ್ಪೋರ್ಟ್ಸ್ ಕ್ಲಬ್ ಹಾಗೂ ವಿನಾಯಕ ಗೆಳೆಯರ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಆಹ್ವಾನಿತ ಖೋ ಖೋ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಉದ್ಘಾಟಿಸಿದರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆ.ಮಹೇಶ್, ರವಿಕುಮಾರ್ ಹಿರೇಮಠ್, ಅಸೋಷಿಯೇಷನ್ ಗೌರವ ಅಧ್ಯಕ್ಷರಾದ ವೀರನಗೌಡ ಪಾಟೀಲ್, ದೊಡ್ಡಬಸವನಗೌಡ ಬಯ್ಯಾಪುರ, ಸಾಗರ್ ಬೇರಿ, ಮಂಜುನಾಥ್ ಜೂಲುಕುಂಟಿ ಹಾಗೂ ಪ್ರಮುಖರು ಹಾಗೂ ಹಿರಿಯರು ಮುಖಂಡರು ಕಾರ್ಯಕರ್ತರು ಯುವಕರು ಕ್ರೀಡಾ ಪ್ರೇಮಿಗಳು ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.
7th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ ಮತ್ತು ಹನಮಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂತನ ಸಂಸದರಾದ ರಾಜಶೇಖರ ಹಿಟ್ನಾಳ ಅವರಿಗೆ, ಚಿಕ್ಕೋಡಿ ಲೋಕಸಭಾ ಸದಸ್ಯೆಯಾಗಿರುವ ಕುಮಾರಿ ಪ್ರಿಯಾಂಕ ಎಸ್ ಜಾರಕಿಹೊಳಿ ಅವರಿಗೆ, ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಡಾ. ಜಿ ಚಂದ್ರಶೇಖರ ಪಾಟೀಲ ಅವರಿಗೆ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ನಾಳೆ ದಿನಾಂಕ 08-12-2024 ಭಾನುವಾರದಂದು ಮುಂಜಾನೆ 11 ಗಂಟೆಗೆ ತಮ್ಮ ನಿವಾಸದ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಮಾಜಿ ಸಚಿವರಾದ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಹೇಳಿದರು.
ಕುಷ್ಟಗಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ನಾಳೆ ನಡೆಯುವ ಈ ಅಭಿನಂದನಾ ಸಮಾರಂಭವನ್ನು ಅದ್ದೂರಿಯಾಗಿ ಮಾಡಬೇಕೆಂದು ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕುಷ್ಟಗಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಿರಿಯರು ಯುವಕರು ಮತ್ತು ಮಹಿಳೆಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಇದೇ ವೇಳೆ ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಮಾಲತಿ ನಾಯಕ್, ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ಮೈನುದ್ದೀನ್ ಮುಲ್ಲಾ, ಸೇರಿದಂತೆ ಇತರರಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.
7th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ - ಹನಮಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂತನ ಸಂಸದರಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನಾಳೆ ದಿನಾಂಕ 08-12-2024 ಭಾನುವಾರದಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿರುವ ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ನಿವಾಸದ ಆವರಣದಲ್ಲಿ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ನಿವಾಸದ ಆವರಣದಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವತಿಯಿಂದ ನಾಳೆ ಮುಂಜಾನೆ 11:00 ಗಂಟೆಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಮತ್ತು ನೂತನ ಸಂಸದರಾದ ರಾಜಶೇಖರ ಹಿಟ್ನಾಳ ಅವರಿಗೆ ಹಾಗೂ ಕುಮಾರಿ ಪ್ರಿಯಾಂಕ ಎಸ್ ಜಾರಕಿಹೊಳಿ ಅವರಿಗೆ ಮತ್ತು ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಡಾ. ಜಿ ಚಂದ್ರಶೇಖರ ಪಾಟೀಲ ಅವರು ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರು ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.
6th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಕರ್ನಾಟಕ ಪ್ರದೇಶದ ಕೃಷಿಕ ಸಮಾಜದ ಚುನಾವಣೆಯನ್ನು ತಡೆ ಹಿಡಿಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ್ ಮೂಲಿಮನಿ ಅವರು ಇಂದು ಶುಕ್ರವಾರದಂದು ಸಹಾಯಕ ಕೃಷಿ ನಿರ್ದೇಶಕರು, ಕುಷ್ಟಗಿ ಇವರ ಮುಖಾಂತರ ಜಂಟಿ ಕೃಷಿ ನಿರ್ದೇಶಕರು,
ಕೃಷಿ ಇಲಾಖೆ ಕೊಪ್ಪಳ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಕೃಷಿಕ ಸಮಾಜಕ್ಕೆ ಚುನಾವಣೆಯೇ ಆಗಿರಲಿಲ್ಲ. ಆದರೆ ಈಗ ಏಕಾ
ಏಕೀಯಾಗಿ ಮತದಾರರ ಯಾದಿ ಪರಿಷ್ಕರಣೆ ಮಾಡದೇ ಸುಮಾರು ವರ್ಷದ ಹಳೆಯ ಮತದಾರರ ಯಾದಿಯಲ್ಲಿ ಚುನಾವಣೆಯನ್ನು ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ಪ್ರತಿ ತಾಲೂಕಿನಲ್ಲಿ ಸುಮಾರು 40-50 ಸಾವಿರ ಕೃಷಿಕರು ಇದ್ದಾರೆ. ಆದರೆ ಕೃಷಿಕ ಸಮಾಜದಲ್ಲಿ ಕೇವಲ 400-500 ರವರೆಗೆ ಮಾತ್ರ ಮತದಾರ ರೈತರಿದ್ದಾರೆ. ಇದರಲ್ಲಿಯೂ ಸುಮಾರು 40-50 ರೈತರು ತೀರಿಕೊಂಡಿದ್ದಾರೆ.
ಪಟ್ಟಭದ್ರ ಹಿತಾಸಕ್ತಿಗಳು, ರಾಜಕಾರಣಿಗಳು ಕೇವಲ ಪಹಣಿಯ ಹೆಸರಿನ ರೈತರು ಉಮೇದುವಾರಿಕೆ ಸಲ್ಲಿಸುತ್ತಿದ್ದು, ಉಮೇದುವಾರರು 15ರ ಸಂಖ್ಯೆ ದಾಟಿದರೆ ಚುನಾವಣೆಯಾಗುತ್ತದೆ. ಆದರೆ ಈ ಪಟ್ಟಭದ್ರರು 15ರ ಅಂಕಿ ದಾಟದಂತೆ
ಉಮೇದುವಾರಿಕೆಗೆ ತಡೆಹಿಡಿದು ಅವಿರೋಧ ಆಯ್ಕೆ ನಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದು ಇಡೀ ರಾಜ್ಯಾದ್ಯಂತೆ ಹರಡಿರುತ್ತದೆ.
ಈಗ ನಡೆಸುತ್ತಿರುವ ಚುನಾವಣೆಗಳನ್ನು ತಡೆ ಹಿಡಿದು ಹೊಸ ಸದಸ್ಯತ್ವಕ್ಕೆ ಸಮಯ ನೀಡಿ ಹೊಸ ಸದಸ್ಯರ ಪಟ್ಟಿಯಂತೆ ಚುನಾವಣೆ ನಡೆದರೆ ರೈತರ ಹಿತಾಸಕ್ತಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ಕೇವಲ ರೈತರಲ್ಲದವರು ಪಹಣಿ ಹೊಂದಿದ ಮಾತ್ರಕ್ಕೆ ಬೆವರು ಸುರಿಸಿ ದುಡಿಯುವ ರೈತವರ್ಗಕ್ಕೆ ಇವರಿಂದ ಅವರ ಸಮಸ್ಯೆಗಳನ್ನು ಇತ್ಯಾರ್ಥಪಡಿಸಲು ಹಾಗೂ ಸರಕಾರದ ಗಮನ ಸೆಳೆಯುವದಾಗಲಿ ಇವರಿಂದ ಸಾಧ್ಯವಾಗುವುದಿಲ
ಆದ್ದರಿಂದ ಸದರಿ ನಡೆಯುವ ಚುನಾವಣೆಯನ್ನು ತಡೆಹಿಡಿಯಲು ಆಗ್ರಹಿಸಲಾಗಿದೆಯೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಸಮಿತಿಯ ರಾಜ್ಯ ಪಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ್ ಮೂಲಿಮನಿ ಅವರು ತಿಳಿಸಿದ್ದಾರೆ.
ಇದೇ ವೇಳೆ ಆರ್.ಕೆ. ದೇಸಾಯಿ ವಕೀಲರು ಹಾಗೂ ಇತರರಿದ್ದರು.