
19th November 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ: ಪಟ್ಟಣದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ್ ಇಲಾಖೆಯಲ್ಲಿನ ಗ್ರೂಪ್ 'ಸಿ' ಹೈದ್ರಾಬಾದ ಕರ್ನಾಟಕ ವೃಂದದ ಸ್ಪರ್ಧಾತ್ಮಕ ಪರೀಕ್ಷೆಯಾದ ಕನ್ನಡ ಭಾಷಾ ವಿಷಯದ ಕುರಿತು ಪರೀಕ್ಷೆಯು ಶನಿವಾರದಂದು ಒಟ್ಟು ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.
ಕನ್ನಡ ಭಾಷಾ ವಿಷಯದ ಕುರಿತು ಪರೀಕ್ಷೆಗೆ, ಕುಷ್ಟಗಿ ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 384 ಜನರು ನೊಂದಾಯಿಸಿಕೊಂಡಿದ್ದರು. ಈ ಪೈಕಿ 132 ಜನರು ಹಾಜರಾಗಿದ್ದು 252 ಜನ ಗೈರು ಹಾಜರಾಗಿದ್ದಾರೆ. ಹಾಗೂ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 198 ಜನರು ನೊಂದಾಯಿಸಿಕೊಂಡಿದ್ದು ಈ ಪೈಕಿ ಕೇವಲ 78 ಜನರು ಹಾಜರಾಗಿದ್ದು 120 ಜನರು ಗೈರು ಹಾಜರಾಗಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 360 ಜನರು ನೊಂದಾಯಿಸಿಕೊಂಡಿದ್ದು ಈ ಪೈಕಿ 152 ಜನರು ಹಾಜರಾಗಿದ್ದು 208 ಜನ ಗೈರು ಹಾಜರಾಗಿದ್ದಾರೆ ಎಂದು ಕಂದಾಯ ಇಲಾಖೆಯವರು ತಿಳಿಸಿದ್ದಾರೆ.