22nd February 2025
ಚಡಚಣ: ಚಡಚಣ ಪಟ್ಟಣದ ಮರಡಿ (ಬೋರಿ ಹಳ್ಳದ) ಹಾವಿನಾಳ ರಸ್ತೆಗೆ ಹೊಂದಿಕೊAಡಿರುವ ಸೋಲಾರ್ ಸ್ಥಾವರದ ಕೆಲಸ ಇರುವದರಿಂದ ಚಡಚಣ ದಿಂದ ಹೋಗುವ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜು ಆಗುವ ಚಡಚಣ ಪಟ್ಟಣದ ಎಪ್-೫ ಪೀಡರ್ (ಮರಡಿ ಮೇಲೆ), ದೇವರನಿಂಬರಗಿ ಕ್ರಾಸ್, ಹತ್ತಳ್ಳಿ ರಸ್ತೆ, ಗೋಡಿಹಾಳ ರಸ್ತೆ ಮತ್ತು ಇಂದಿರಾ ನಗರ ಈ ಎಲ್ಲಾ ಏರಿಯಾದಲ್ಲಿ ಬರುವ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಮತ್ತು ಹಾಲಹಳ್ಳಿ ಐ.ಪಿ. ಎಪ್-೬ ಪೀಡರ್ ದಿನಾಂಕ ೨೨.೦೨.೨೦೨೫ ಶನಿವಾರ ಮತ್ತು ದಿನಾಂಕ ೨೩.೦೨.೨೦೨೫ ಭಾನುವಾರ ಮುಂಜಾನೆ ೧೦.೦೦ ಘಂಟೆಯಿAದ ಸಂಜೆ ೦೬.೦೦ ಘಂಟೆಯವರೆಗೆ ವಿದ್ಯುತ್ ಅಡಚಣೆ ಉಂಟಾಗುವುದು. ಆದ್ದರಿಂದ ಈ ಪೀಡರಗಳ ಮೇಲೆ ಬರುವ ಗ್ರಾಹಕರು ಸಹಕರಿಸಬೇಕಾಗಿ ಕೋರಲಾಗಿದೆ.
ಚಡಚಣ ಉಪವಿಭಾಗದಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ವಿಜಯಕುಮಾರ ಹವಾಲ್ದಾರ್ ಹೆಸ್ಕಾಂ ಚಡಚಣ ರವರು ತಿಳಿಸಿರುತ್ತಾರೆ.
6th February 2025
ಚಡಚಣ: ಚಡಚಣ ಪಟ್ಟಣ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದು ಮಾದರಿ ಮತಕ್ಷೇತ್ರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಪಟ್ಟಣದಲ್ಲಿ ಸುಮಾರು ೯ ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಚಡಚಣ ಭಾಗದ ಜನರ ಬಹು ದಿನದ ಬೇಡಿಕೆಯಾದ ಚಡಚಣದಿಂದ ಮಹರಾಷ್ಟçದ ಉಮದಿ (ಬಾರ್ಡರ್)ಸರಹದ್ದ ವರೆಗಿನ ರಸ್ತೆ ದುರಸ್ತಿ ಕಾರ್ಯವನ್ನು ಸುಮಾರು ರೂ ೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣವಾಗುತ್ತದೆ ಎಂದರು.
ಹಾಗೂ ಸುಮಾರು ರೂ ೪ ಕೋಟಿ ವೆಚ್ಚದಲ್ಲಿ ಚಡಚಣ-ಶಿರಾಡೋಣ ರಸ್ತೆ ಸುಧಾರಣಾ ಕಾಮಗಾರಿ ಕೈಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ೧೬ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದ ಅವರು, ಸುಮಾರು ೧೦ ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಬಸ್ ಡಿಪೋ ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ರೈತರ ಕನಸಾದ ಚಡಚಣ ಏತ ನೀರಾವರಿ ಯೋಜನೆ ಆರಂಭವಾಗಿದ್ದು ಕೆಲವು ರೈತರ ಹೊಲಗಳಿಗೆ ನೀರು ಹರಿಯುತ್ತಿದೆ. ಇದು ಪ್ರಾಯೋಗಿಕ ಹಂತವಾಗಿದ್ದು ಮುಂಬರುವ ದಿನಗಳಲ್ಲಿ ವ್ಯವಸ್ಥಿತವಾಗಿ ಎಲ್ಲ ರೈತರ ಹೊಲಗಳಿಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪಂಢರಪುರ-ಗಾಣಗಾಪುರ ರಾಷ್ಟ್ರೀಯ ಹೆದ್ದಾರಿ ಯೋಜನೆ ನೀತಿ ಆಯೋಗದಲ್ಲಿ ಪೆಂಡಿAಗ್ ಇದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಚಡಚಣ ಮಂಡಲ ಅಧ್ಯಕ್ಷ ಆರ್.ಡಿ.ಹಕ್ಕೆ,ಗ್ಯಾರಂಟಿಅಧ್ಯಕ್ಷ ರವಿದಾಸ ಜಾಧವ, ಪರಮಾನಂದ ಕೋಳಿ,ದೇವಪ್ಪಗೌಡ ಪಾಟೀಲ, ಸಂಗಪ್ಪ ಭಂಡರಕವಟೆ, ಸೈದು ಕೊಡಹೊನ್ನ,ಡಾ.ವಿ.ಎಸ್.ಪತ್ತಾರ, ಲೋಕೊಪಯೋಗಿ ಎಇಇ ದಯಾನಂದ ಮಠ, ಎಸ್.ಎಂ. ಪಾಟೀಲ, ಪಪಂ ಮುಖ್ಯಾಧಿಕಾರಿ ಪೂಜಾರಿ, ಸತೀಶ ಉಟಗಿ ರಫೀಕ ಮಕಾನದಾರ, ಜೆ.ಇ.ಪಾಟೀಲ, ಮಹಾದೇವ ಬನಸೋಡೆ, ದಶರಥ ಬನಸೋಡೆ ,ಸದಸ್ಯ ಪ್ರಕಾಶಗೌಡ ಪಾಟೀಲ,ಪಟ್ಟಣ ಪಂಚಾಯ್ತಿ ಸದಸ್ಯರು, ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರ,ನೂರಾರು ಕಾರ್ಯಕರ್ತರು ಹಾಜರಿದ್ದರು.
2nd February 2025
ಚಡಚಣ : ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ. ೨೯ ರಿಂದ ಅದ್ದೂರಿಯಾಗಿ ಆರಂಭಗೊAಡಿದ್ದು, ಜಾತ್ರೆಯ ೩ನೇ ದಿನವಾದ ಶುಕ್ರವಾರ ಜಾತ್ರೆ ಅಂಗವಾಗಿ ಶುಕ್ರವಾರ ಜರುಗಿದ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತಿತ್ತು.
ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಕುಸ್ತಿ ಪಟುಗಳು ಭಾಗವಹಿಸಿ ಪಂದ್ಯಾವಳಿಗೆ ಮೆರಗು ತಂದಿದ್ದರು.
ದೇಹದಾರ್ಡ್ಯ ಕಟ್ಟುಮಸ್ತು ಹೊಂದಿದ್ದ ಪೈಲ್ವಾನರು ಎದುರಾಳಿಗಳನ್ನು ಸೆಣಸುತ್ತಿರುವುದನ್ನು ನೋಡುತ್ತಿದ್ದ ಕುಸ್ತಿ ಪ್ರಿಯರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರುದುಂಬಿಸಿದರು. ಕುಸ್ತಿ ಪಟುಗಳು ಎದುರಾಳಿಗಳೊಂದಿಗೆ ಸೆಣಸಾಡುವಾಗ ಹಾಕುತ್ತಿದ್ದ ತಂತ್ರ-ಪ್ರತಿ ತಂತ್ರಗಳು, ಅವರು ಹಾಕುತ್ತಿದ್ದ ಬಿಗಿ ಪಟ್ಟಿಗೆ ನೋಡುಗರನ್ನು ಮನರಂಜಿಸಿದವು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ಕುಸ್ತಿ ಪಟುಗಳಿಗೆ ರೂ೫೦೦ ರಿಂದ ರೂ೫೧ ಸಾವಿರದವರೆಗೆ ಬಹುಮಾನ ನೀಡಲಾಯಿತು.
ಕುಸ್ತಿ ಪಟು ಹಾಗೂ ಕುಸ್ತಿ ಪ್ರೀಯ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಕಾಂತ ಗಂಟಗಲ್ಲಿ ತಮ್ಮ ಸ್ವಂತ ರೂ ೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕುಸ್ತಿ ಮೈದಾನ ಎಲ್ಲರ ಗಮನ ಸೆಳೆಯಿತು.
ಕುಸ್ತಿ ಪಂದ್ಯಾವಳಿಗೆ ಮುಖಂಡ ಉದಯ ಕಾರಜೋಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ರಾಮ ಅವಟಿ, ರೈತರು,ಯುವಕರು,ಶ್ರೀಸಂಗಮೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಪಾವಲೆ ಹಾಗೂ ಎಲ್ಲ ಸದಸ್ಯರು ಇದ್ದರು.
30th January 2025
ಚಡಚಣ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಿಗದಿಯಂತೆ ಜ.೨೯ ಬುಧವಾರ ದಂದು ಬೆಳಗ್ಗೆ ೭.೦೦ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಸಂಗಮೇಶ್ವರ ಮಂದಿರದವರೆಗೆ ಶ್ರೀ ವೀರಭದ್ರೇಶ್ವರ ಅಡ್ಡಪಲ್ಲಕ್ಕಿ ಹಾಗೂ ಮಹಾರಾಷ್ಟç ರಾಜ್ಯದ ಉಟಗಿ ಗ್ರಾಮದ ಶ್ರೀ ಬ್ರಹ್ಮದೇವರ ಅಡ್ಡಪಲ್ಲಕ್ಕಿ (ಪ್ರತಿ ವರ್ಷದಂತೆ ಒಂದು ದಿನ ಮುಂಚಿತವಾಗಿಯೆ ಶ್ರೀ ವೀರಭದ್ರೇ್ರಶ್ವರ ದೇವಸ್ಥಾನದಲ್ಲಿ ಉಟಗಿ ಶ್ರೀ ಬ್ರಹ್ಮದೇವರ ಅಡ್ಡಪಲ್ಲಕ್ಕಿ ವಾಸ್ಥವ್ಯ ಮಾಡುವ ಪದ್ಧತಿ)ಹಾಗೂ ನುಡಿ ಹೇಳುವ ಗೂಳಿ(ದೇವರು)ಯ ಜೋತೆಗೆ ನಂದಿಧ್ವಜದ ಮೇರವಣಿಗೆಯು ಅತಿ ವಿಜ್ರಂಭಣೆಯಿAದ ನಡೆಯಿತು.
ಶ್ರೀ ಸಂಗಮೇಶ್ವರ ದೇವಾಲಯಕ್ಕೆ ೮.೦೦ ಗಂಟೆಗೆ ಬಂದ ನಂತರ ವೇದಮೂರ್ತಿ ಶ್ರೀ ಸಂಗಯ್ಯ ಡೋಣಜಮಠ ಇವರ ನುಡಿ ಕೇಳಲು ನೂರಾರು ರೈತರು ,ನಾಗರಿಕರು ಹಾಗೂ,ಶಾಲಾ ಮಕ್ಕಳು, ಗ್ರಾಮದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕಾದು ಕುಳಿತಿದ್ದರು.
ನಂತರ ಶಾಸ್ತೊçÃಕ್ತವಾಗಿ ಶ್ರೀಸಂಗಮನಾಥನಿಗೆ ಪೂಜೆ ಸಲ್ಲಿಸಿದ ನಂತರ ೯.೦೦ ಗಂಟೆಗೆ ನುಡಿ ಕಾರ್ಯಕ್ರಮಗಳು ಜರುಗಿದವು ಶ್ರೀಗಳು ಹೇಳಿದಂತೆ ಈವರ್ಷ ಹಿಂಗಾರಿ ಮಳೆ ಚನ್ನಾಗಿ ಬರಲಿದ್ದು ,ಮುಂಗಾರಿನ ಮಳೆ ಕಡಿಮೆ ಆಗಲಿದೆ ಮಳಿರಾಜ ಮುನಿಸಿ ಕೊಂಡಿದ್ದಾನೆ ಸತ್ಯ ಧರ್ಮವನ್ನು ಪಾಲಿಸಿರಿ, ಧರ್ಮದ ಹಾದಿ ಹಿಡಿದು ನಡೆದುಕೊಂಡು ಹೋಗಿರಿ ಎಂದರು,ಈ ವರ್ಷ ಜನಪೀಡಾ ಐತಿ ರೋಗ ರುಜಿನಗಳು ಹೆಚ್ಚಾಗಲಿದ್ದು ಹುಶಾರ ದಿಂದ ಇರಬೇಕೆಂದು ಹೇಳಿದರು, ರೈತರು ಬಸವಣ್ಣನನ್ನ (ಜಾನುವಾರಗಳಿಗೆ) ಜೋಪಾನ ಮಾಡಿಕೊಂಡು ಹೋಗಿರಿ.ಈವರ್ಷ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ,ರಾಜಕಾರಣದಲ್ಲಿಯು ಬದಲಾವಣೆಯಾಗಲಿದೆ ಎಂದು ಸನ್ಹೆ ಮುಖಾಂತರ ತಿಳಿಸಿದ್ದು ಸಾರ್ವಜನಿಕರಲ್ಲಿ ಕೂತುಹಲ ಮತ್ತು ಆಶ್ಚರ್ಯ ಮೂಡಿಸಿದೆ.
ಎಚ್ಚರ ಎಚ್ಚರ ಎನ್ನುವ ಮುಖಾಂತರ ಜನರಿಗೆ ಎಚ್ಚರದಿಂದ ಇರಲುಹೇಳಿ ಸರ್ವೆಜನ: ಸುಖಿನೊಭವಂತು ಎಂದು ಹೇಳುವದರೊಂದಿಗೆ ನುಡಿ ಕಾರ್ಯಕ್ರಮ ಸಂಪನ್ನವಾಯಿತು.
ನುಡಿ ಕಾರ್ಯಕ್ರಮ ಸುರಳಿತವಾಗಿ ನಡೆಯಲು ಸಹಕರಿಸಿದ ಗೂಳಿ (ನುಡಿ ಹೇಳುವ ಶ್ರೀಗಳ) ಸಹಾಯಕರಾದ ಗುರುಬಾಳ ಗಿಡವೀರ,ರಾಜಶೇಖರ ಸರಸಂಬಿ,ಶೇಖರ ಯರಗಲ್,ಈರಪ್ಪ ಕಂಬಾರ(ಬಡಿಗೇರ),ವಿಶ್ವನಾಥ ಕೇಶಟ್ಟಿ,ಗೌಡಪ್ಪ ಮಾಳಕೋಟಗಿ,ಚನ್ನಪ್ಪ ಕೇಶಟ್ಟಿ ಅವರ ಸಹಕಾರ ಪ್ರತಿ ವರ್ಷದಂತೆ ಈ ವರ್ಷವು ಸಹಕಾರ ಲಭಿಸಿತು.
ಎಲ್ಲ ದಾನಗಳಲ್ಲಿ ಅನ್ನದಾನವೇ ಶ್ರೇಷ್ಠ ಎಂಬ ನಾನ್ನೂಡಿಯಂತೆ ಕಳೆದ ೪ ವರ್ಷಗಳಿಂದ ಈ ವರ್ಷವು ಕೂಡಾ ಚಡಚಣದ ಶ್ರೀ ಚೌಡೇಶ್ವರಿ ಡ್ರೆಸೆಸ್ ಜವಳಿ ಉದ್ಯಮಿಯಾದ ವಿವೇಕಾನಂದ ಚನ್ನಮಲ್ಲಪ್ಪ ಹಿಟ್ನಳ್ಳಿ ಅವರು ಅನ್ನಸಂತರ್ಪಣೆಯನ್ನು ಬಂದ ಭಕ್ತಾದಿಗಳಿಗೆ ವ್ಯವಸ್ಥೆ ಮಾಡಿಸಿದ್ದು ಸತತ ನಾಲ್ಕು ದಿನಗಳವರೆಗೆ ಅನ್ನಸಂತರ್ಪಣೆ ನಡೆಯಲಿದ್ದು ಜಾತ್ರೆಗೆ ಬಂದ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿಯವರು ತೀಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚಡಚಣ ಪ.ಪಂ.ಯ ಎಲ್ಲ ಸದಸ್ಯರು, ಚಡಚಣ ಹಾಗೂ ಸುತ್ತಲಿನ ಗ್ರಾಮದ ರೈತರು,ಚಡಚಣ ವ್ಯಪಾರಸ್ಥರು,ಶಾಲಾ ಮಕ್ಕಳು ಇದ್ದರು.
29th January 2025
ಚಡಚಣ: ಚಡಚಣದಲ್ಲಿ ಸಂಗಮೇಶ್ವರ ದೇವರ ಜಾನುವಾರ ಜಾತ್ರೆ ಅವರಾತ್ರಿ ಅಮವಾಸ್ಯೆಯ ದಿನದಿಂದ ಜ.29ರಿಂದ ಫೆ.2ರ ವರೆಗೆ ದಿನನಿತ್ಯ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಅವರಾತ್ರಿ ಅಮವಾಸ್ಯೆಯದಿನ ಜ.29 ಸಂಗಮೇಶ್ವರ ದೇವರ ವರ್ಷದ ಆಗು ಹೋಗುಗಳ ಕುರಿತು ಭವಿಷ್ಯದ ನುಡಿಗಳು (ಮಳೆ ಬೆಳೆ, ರಾಜಕೀಯ ಇನ್ನಿತರ)ಜರುಗಿದ ನಂತರ ಜಾತ್ರೆಯು ಆರಂಭಗೊಳ್ಳುತ್ತದೆ. ಬುಧವಾರ ಜ.29ರಿಂದ ಭಾನುವಾರ ಫೆ.2ರ ವರೆಗೆ 5 ದಿನಗಳ ಕಾಲ ಲಕ್ಷಾಂತರ ಸಂಖ್ಯೆಯ ವಿವಿಧ ತಳಿಯ ಜಾನುವಾರಗಳಿಂದ ಜಾತ್ರೆ ಜರುಗಲಿದೆ.
ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದು, ಸಾವಿರಾರು ದನಕರುಗಳ ಖರೀದಿಯು ನಡೆಯುತ್ತದೆ. ಜಾನುವಾರುಗಳ ಜಾತ್ರೆ ಅಂಗವಾಗಿ ಜಾತ್ರಾರ್ಥಿಗಳಿಗೆ ಮತ್ತು ಜಾನುವಾರುಗಳಿಗೆ ಆರೋಗ್ಯ ರಕ್ಷಣೆಯ ವ್ಯವಸ್ಥೆ, ನೀರು ಮತ್ತು ಬೆಳಕಿನ ಸೌಲಭ್ಯ, ಕಾನೂನು ಹಾಗೂ ರಕ್ಷಣೆಯ ವ್ಯವಸ್ಥೆ, ವಿವಿಧ ವಸ್ತು ಹಾಗೂ ಉತ್ತಮ ಬೆಳೆಗಳ ಪ್ರದರ್ಶನ ವ್ಯವಸ್ಥೆ ಮತ್ತು ಜಾತ್ರೆಯಲ್ಲಿ ವಿಷೇಶವಾಗಿ ಒಂದು ಗಂಟೆಗೂ ಅಧಿಕ ಸಮಯ ಚಿತ್ರ-ವಿಚಿತ್ರವಾಗಿ ಮದ್ದು ಸುಡುವ ಕಾರ್ಯಕ್ರಮ ಸಡಗರದಿಂದ ನಡೆಯುವುದು.
ಜಾತ್ರೆಗೆ ಕರ್ನಾಟಕ, ಮಹಾ ರಾಷ್ಟ್ರ, ಕೇರಳ, ಆಂದ್ರ ಪ್ರದೇಶ, ಗುಜರಾತ ರಾಜ್ಯಗಳ ಖಿಲಾರಿ ತಳಿ ಸೇರಿದಂತೆ ವಿವಿಧ ತಳಿಯ ಲಕ್ಷಾಂತರ ರಾಸುಗಳು ಆಗಮಿಸಿ, ಭಾರಿ ಪ್ರಮಾಣದಲ್ಲಿ ವ್ಯಾಪಾರ ವೈವಾಟು ಮಾಡಿಕೊಳ್ಳುತ್ತಾರೆ.
ಈ ವರ್ಷ ಸಂಗಮೇಶ್ವರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಹಾಗೂ ಪಪಂ ಚಡಚಣ ಇವರ ಸಹಯೋಗದಲ್ಲಿ ಜಾತ್ರೆ ನಡೆಯಲಿದೆ
28th January 2025
ಚಡಚಣ: ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಜನವರಿ ೨೬ ರಂದು ನಡೆದ ನಾಡ ಹಬ್ಬ ೭೬ ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಶಾಸಕ ವಿಠ್ಠಲ ಕಟಕಧೊಂಡ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ವಿಠ್ಠಲ ಕಟಕಧೊಂಡ ಅವರು ಭಾರತದಲ್ಲಿ ಸ್ವಾತಂತ್ರö್ಯ ಸಿಕ್ಕ ನಂತರ ಭಾರತದಲ್ಲಿ ಅನೇಕ ಪ್ರಾಂತಗಳು ರಾಜರ ಒಡೆತನದಲ್ಲಿದ್ದವು ಮೈಸೂರು,ಹೈದ್ರಾಬಾದ ಅವೆಲ್ಲ ಪ್ರಾಂತಗಳನ್ನು ಒಗ್ಗೂಡಿಸಿ ಅಖಂಡ ಭಾರತ ವಾದ ದಿನವೆ ೨೬ ಜನೇವರಿ ಹಾಗಾಗಿ ಈ ನಾಡ ಹಬ್ಬವನ್ನು ಅಂದಿನಿAದ ಇಂದಿನವರೆಗೆ ಆಚರಿಸುತ್ತ ಬಂದಿದ್ದೆವೆ ಮುಂದಿನ ದಿನಗಳಲ್ಲಿಯೂ ಇದಕ್ಕಿಂತ ಅಧ್ಧೂರಿಯಾಗಿ ಆಚರಿಸುತ್ತ ಹೋಗೋಣ ಎಂದರು.
ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಮಾತನಾಡಿದರು.
ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸಂಜಯ ಖಡಗೆಕರ್ ಇವರ ನೇತೃತ್ವದಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯತಿ ಎಲ್ಲ ಸದಸ್ಯರು ಮತ್ತು ಬಿಜೆಪಿಯ ಮುಖಂಡರಾದ ಕಾಂತುಗೌಡ ಪಾಟೀಲ್ ಮತ್ತು ಮಹೇಶ್ ಶಿಂದೆ ಮತ್ತು ಕಾಂಗ್ರೆಸ್ ಮುಖಂಡರಾದ ದೇವಪ್ಪಗೌಡ ಪಾಟೀಲ್ ಮತ್ತು ವಾಸಿಮ್ ಮುಲ್ಲಾ ವiಹಾದೇವ ಬನಸೋಡೆ ಮತ್ತು ಹಲವು ಎಲ್ಲ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
7th January 2025
ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆೆಯಲ್ಲಿ ಕಲಹ: ಜ.೨೯ ರಿಂದ ಜಾತ್ರೆ ಆರಂಭ.
ಚಡಚಣ: ನಿಗದಿಯಂತೆ ಜ.೨೯ ಅವರಾತ್ರಿ ಅಮವಾಸ್ಯೆಯಿಂದ ಸತತ ೫ ದಿನಗಳಕಾಲ ಜಾನುವಾರ ಜಾತ್ರೆ ಜರಗುವದು ಎಂದು ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಜೆ.ಡಿ.ಪಾವಲೆ ಅವರು ತಿಳಿಸಿದರು.
ಕಳೆದ ೪ ವರ್ಷಗಳಿಂದ ಈ ವರ್ಷವು ಕೂಡಾ ಚಡಚಣದ ಜವಳಿ ಉದ್ಯಮಿಯಾದ ವಿವೇಕಾನಂದ ಚನ್ನಮಲ್ಲಪ್ಪ ಹಿಟ್ನಳ್ಳಿ ಅವರು ಅನ್ನಸಂತರ್ಪಣೆಯನ್ನು ಬಂದ ಭಕ್ತಾದಿಗಳಿಗೆ ವ್ಯವಸ್ಥೆ ಮಾಡಿಸಿದ್ದು ಜಾತ್ರೆಗೆ ಬಂದ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಕಳೆದ ವರ್ಷದ ಜಮೆ ಖರ್ಚು ದಾಖಲಾತಿ ತಂದು ಓದುತ್ತಿರುವಾಗ ಕೆಲವೊಂದು ಲೋಪಗಳನ್ನು ಶ್ರೀಶೈಲ ಭಮಶೆಟ್ಟಿ ಹಾಗೂ ಪ.ಪಂ.ಸದಸ್ಯ ಗಂಟಗಲಿ ಸರಿಯಾಗಿ ತಿಳಿಸಿ ಹೇಳುವಂತೆ ಕೇಳಿದರು ತಡಪಡಿಸಿದ ಖಜಾಂಚಿ ಜೀರಂಕಲಗಿ ಬ್ಯಾಂಕಿನಲ್ಲಿ ಕೇವಲ ೧೦ ಲಕ್ಷ ರೂಪಾಯಿ ಮಾತ್ರ ಡಿಪೋಜಿಟ್ ಇವೆ ಎಂದು ಸುಳ್ಳು ಹೇಳಿದರು ತಕ್ಷಣ ಸಾವರಿಸಿಕೊಂಡ ಸದಸ್ಯ ಮಲ್ಲಿಕಾರ್ಜುನ ಹಿಟ್ನಳ್ಳಿ ಡಿಪೋಜಿಟ್ ೨೫ ಲಕ್ಷ ರೂಪಾಯಿಗಳಿವೆ ಎಂದು ಹೇಳಿದರು ಇದರಿಂದ ಸಾರ್ವಜನಿಕರಿಗೆ ಅನುಮಾನಗಳು ಬಂದವು ಮುಜುರಾಯಿ ಇಲಾಖೆಯಿಂದ ಬಂದ ಹಣದ ಲೆಕ್ಕ ತೋರಿಸಲಿಲ್ಲ.
ಸಾದಿಲವಾರ ಹೆಸರಲ್ಲಿ ಸುಮಾರು ೮೦ಸಾವಿರ ರೂ ಖರ್ಚಾಗಿದೆ ಎಂದಾಗ ಲೆಕ್ಕಪತ್ರ ಇಡದೆ ಇಷ್ಟೊಂದು ಸಾವಿರ ಖರ್ಚಾಗಿದ್ದು ಸುಳ್ಳು ಹಾಗಾಗಿ ಶ್ರೀಸಂಗಮೇಶ್ವರ ದೇವಸ್ಥಾನದ ಕಮೀಟಿಯವರನ್ನು ಕೂಡಲೆ ತೆಗೆದುಹಾಕಬೇಕೆಂದು ಮತ್ತು ಎಲ್ಲ ಸಮೂದಾಯದ ಜನರನ್ನು ಒಬ್ಬರಂತೆ ಸೇರಿಸಿ ನೂತನ ಕಮೀಟಿಯನ್ನು ರಚಿಸುವಂತೆ ಕಾಂತುಗೌಡ ಪಾಟೀಲ,ರಾಜು ಕೋಳಿ,ಶಾಂತುಗೌಡ ,ಮಹೇಶ ಶಿಂಧೆ,ಸಿದ್ದು ಭಮಶೆಟ್ಟಿ ಹಾಗೂ ಸಾರ್ವಜನಿಕರೆಲ್ಲರು ಒಗ್ಗೋರಿಲಿನಿಂದ ಕಮೀಟಿಗೆ ಹೇಳಿದರು.ಅದರಂತೆ ಕಮೀಟಿ ಅಧ್ಯಕ್ಷ ಜೆ.ಡಿ.ಪಾವಲೆ ಹಾಗೂ ಹಿರಿಯ ಜೀವಿ ಬಾಬುಗೌಡ ಪಾಟೀಲ ಅವರು ಜಾತ್ರೆ ಮುಗಿದ ನಂತರ ಹೊಸ ಕಮೀಟಿಯವರನ್ನು ನೇಮಿಸಲಾಗುವದು ಎಂದು ಭರವಸೆ ಕೊಟ್ಟರು.
ಶ್ರೀ ಸಂಗಮೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷ ಹಾಗೂ ಸದಸ್ಯರು ಕೆಲವು ದಿನಗಳ ಹಿಂದೆ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿರುದ್ಧ ಮಾಧ್ಯಮದಲ್ಲಿ ಬರುವಹಾಗೆ ಇಲ್ಲ ಸಲ್ಲದ ಆರೋಪ ಮಾಡಿದ್ದರು ಅದರ ವಿಷಯ ಬಂದಾಗ ಇನ್ನುಮುಂದೆ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿರುದ್ಧ ಎನು ಮಾತನಾಡುವದಿಲ್ಲ ಎಂದು ಕ್ಷಮೆಕೇಳಿದರು.
ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿರುದ್ಧ ಆರೋಪ ಮಾಡಿರುವ ಅಧ್ಯಕ್ಷ ಜೆ.ಡಿ.ಪಾವಲೆಅವರು ಒತ್ತಡ ಹೇರಿ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಸಂಬAಧಿ ಗಳಿಗೆ ನೋಕರಿ ಪಡೆದಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ಒಲಯದಲ್ಲಿ ಕೇಳಿಬಂದವು.
ಈ ಕಾರ್ಯಕ್ರಮದಲ್ಲಿ ಚಡಚಣ ಪ.ಪಂ.ಯ ಸದಸ್ಯರು, ಸುತ್ತಲಿನ ಗ್ರಾಮದ ರೈತರು,ಚಡಚಣ ವ್ಯಪಾರಸ್ಥರು ಇದ್ದರು.
8th December 2024
ಚಡಚಣ: ಶ್ರೀಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶ್ರೀಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ವಿಶಿಷ್ಟಚೇತನರ ದಿನಾಚರಣೆ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಅವರು ವಿಶಿಷ್ಟಚೇತನರಲ್ಲಿರುವ ವಿಶೇಷ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹ ಹಾಗೂ ಸಹಕಾರ ನೀಡಲಾಗುವುದು.ಅವರಿಗೆ ಅನುಕಂಪಕ್ಕಿAತ ಅವಕಾಶಗಳು ಮುಖ್ಯ ಎಂದು ಹೇಳಿದರು.
ವಿಕಲಚೇತನರು ತಮ್ಮಲ್ಲಿರುವ ಕೀಳರಿಮೆ ತೊರೆದು, ಎಲ್ಲರಂತೆ ನಾವೂ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ವಿಕಲಚೇತನರು ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಎಸ್ ಎಸ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶಿಷ್ಟಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಸೋಮನಿಂಗ ಬೋರಗಿ ಸ್ವಾಗತಿಸಿದರು. ಭೀಮಾಶಂಕರ ವಾಘಮೋರೆ ನಿರೂಪಿಸಿದರು. ಅಮೋಗಿ ಮೆಟಗಾರ ವಂದಿಸಿದರು.
ತಾಲೂಕಾ ವಿಕಲ ಚೇತನ ನೌಕರ ಸಂಘದ ಅಧ್ಯಕ್ಷ ಮಹಾಂತೇಶ ಉಮರಾಣಿ, ಸಂಗಮೇಶ್ವರ ಪ್ರೌಢ ಶಾಲೆ ಮುಖ್ಯ ಗುರುಗಳಾದ ಎಚ್ ಆರ್ ಬಗಲಿ,ಕಟಗೇರಿ ಸರ್, ಪ್ರಾಥಮಿಕ ಶಾಲಾ ಮುಖ್ಯ ಗುರುಮಾತೆ ಕಲ್ಪನಾ ಪಾಂಡ್ರೆ,ಶಿಕ್ಷಕ ರಾಜಶೇಖರ ಬಂಡಿ,ಶಿಕ್ಷಣ ಸಂಯೋಜಕ ಎನ್ ಎಸ್ ಸಿನಖೇಡ,ವಿಕಲ ಚೇತನ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಮಕ್ಕಳ ಹಾಗೂ ಪಾಲಕರ ಕ್ರೀಡಾ ಚಟುವಟಿಕೆಗಳು ಎಸ್ ಎಸ್ ಮುಚ್ಚಂಡಿ,ಅಮೋಗಿ ಮೆಟಗಾರ ನಡೆಸಿಕೊಟ್ಟರು.
7th December 2024
ಚಡಚಣ:ಸಮೀಪದ ಹಾವಿನಾಳ ಗ್ರಾಮದ ಶ್ರೀದತ್ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಮರಾಠಿ ಭಾಷೆಯನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಕೂಡಲೆ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಗುರುವಾರ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ದಾಶ್ಯಾಳ, ಕನ್ನಡ ನೆಲದಲ್ಲಿ ಕನ್ನಡವೇ ಸಾರ್ವಭೌಮ,ಕನ್ನಡವೇ ನಮ್ಮ ಉಸಿರು,ನಮ್ಮ ಕನ್ನಡದ ನೆಲ,ಜಲ,ವಿದ್ಯುತ್ ಸೇರಿದಂತೆ ನಮ್ಮ ಕನ್ನಡದ ರೈತರ ಕಬ್ಬು ಪಡೆದು ಕಾರ್ಖಾನೆಯನ್ನು ನಡೆಸುತ್ತಿರುವ ಚಡಚಣ ತಾಲೂಕಿನ ಸಮೀಪ ಇರುವ ಹಾವಿನಾಳ ಗ್ರಾಮದ ಶ್ರೀದತ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಆಡಳಿತ ನಡೆಸುವದರೊಂದಿಗೆ ಶೇ.೯೯ ರಷ್ಟು ಕಾರ್ಮಿಕರು ಮರಾಠಿಗರನ್ನೆ ನೇಮಿಸಿಕೊಂಡಿದೆ.ಮತ್ತು ಸಂಬಳದಲ್ಲಿಯೂ ಕೂಡಾ ತಾರತಮ್ಯ ಮಾಡುತ್ತಿದ್ದು ಕೂಡಲೇ ಇದನ್ನು ತಡೆಯಬೇಕು ಎಂದರು.ಕನ್ನಡ ಕಾರ್ಮಿಕರಿಗು ಕೂಡಾ ಸಂಬಳದಲ್ಲಿ ತಾರತಮ್ಯ ಮಾಡಕೂಡದು ಎಂದರು.
ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿ ಶಿಂಧೆ ಮಾತನಾಡಿ, ಶ್ರೀದತ್ ಸಕ್ಕರೆ ಕಾರ್ಖಾನೆಯ ಸಮಗ್ರ ವಹಿವಾಟು,ಪತ್ರ ವ್ಯವಹಾರ,ರೈತರೊಂದಿಗೆ ಸಭೆಯನ್ನು ಕೂಡಾ ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂದು ಆಗ್ರಹಿಸಿದ ಅವರು,ಒಂದು ತಿಂಗಳಿನಲ್ಲಿ ಕಾರ್ಖಾನೆಯ ವ್ಯವಹಾರ ಹಾಗೂ ನಾಮ ಫಲಕಗಳು ಕನ್ನಡಮಯವಾಗಿ ಪರಿವರ್ತನೆಯಾಗದೇ ಇದ್ದಲ್ಲಿ ಕಾರ್ಖಾನೆಯ ಎದಿರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವದು ಅನಿವಾರ್ಯವಾಗುತ್ತದೆ ಎಂದರು.
ನAತರ ಕಾರ್ಖಾನೆಗೆ ತೆರಳಿದ ಕಾರ್ಯಕರ್ತರು ಕಾರ್ಖಾನೆಯ ಆಡಳಿತ ವ್ಯವಸ್ಥಾಪಕರಿಗೆ ಮನವಿ ನೀಡಿ,೧೫ ದಿನಗಳೊಳಗೆ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚೇತನ ಮಠ,ರವಿ ಶಿಂಧೆ, ಚಿದಾನಂದ ಶಿಂಧೆ, ಓಂಕಾರ ಮಠ,ದತ್ತು ಶಿಂಧೆ, ವಿಕಾಸ ಮಲ್ಲಾಡಿ, ದಯಾನಂದ ಶಿಂಧೆ, ಅರ್ಜುನ ಕ್ಷತ್ರಿ,ಸುನೀಲ ಕ್ಷತ್ರಿ, ಸುನೀಲ ಧೋತ್ರೆ,ಸಚಿನ ಕಟ್ಟಿಮನಿ, ಪ್ರದೀಪ ನಾವಿ,ರಘುವೀರ ಮೋರೆ ಇದ್ದರು.