22nd February 2025
ಚಡಚಣ : ಚಡಚಣ ಪ.ಪಂ.ನ ೧೬ ವಾರ್ಡಗಳಿಗೆ ಚುನಾವಣೆ ನಡೆದು ವರ್ಷ ಕಳೆದ ನಂತರ ಕಳೆದ ಆಗಷ್ಟ ತಿಂಗಳಲ್ಲಿ ಮೀಸಲಾತಿ ಪ್ರಕಟವಾಗಿದ್ದು, ಇದೇ ೨೧ರಂದು ಪ.ಪಂ.ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ.
ಪ.ಪಂ.ನ ೧೬ ಸದಸ್ಯರ ಪೈಕಿ ಬಿ.ಜೆ.ಪಿ. ೮ ಸದಸ್ಯರು, ಕಾಂಗ್ರೆಸ್ ೪ ಹಾಗೂ ಪಕ್ಷೇತರರು ೪ ಸದಸ್ಯರು ಹಾಗೂ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ, ವಿಧಾನಸಭಾ ಸದಸ್ಯ ವಿಠ್ಠಲ ಕಟಕಧೋಂಡ ಅವರುಗಳ ಮತ ಸೇರಿ ಒಟ್ಟಾರೆ ೧೮ ಮತಗಳ ಬಲಾಬಲ ಹೊಂದಿದ್ದ ಪ.ಪಂ.ನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿ.ಜೆಪಿ.ಯ ಮಲ್ಲಿಕಾರ್ಜುನ ಧೋತ್ರೆ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಇಲಾಯಿ ನದಾಫ, ಬಿ.ಜೆ.ಪಿ.ಯ ಶ್ರೀಕಾಂತ ಗಂಟಗಲ್ಲ ಹಾಗೂ ಪಕ್ಷೇತರ ಚೈತನ್ಯಕುಮಾರ ನಿರಾಳೆ ಸ್ಫರ್ಧಿಸಿದ್ದು, ಕೊನೆ ಘಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿ ಚೈತನ್ಯಕುಮಾರ ನಿರಾಳೆ ತಮ್ಮ ನಾಮಪತ್ರವನ್ನು ಹಿಂಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯ ಶ್ರೀಕಾಂತ ಗಂಟಗಲ್ಲ ಹಾಗೂ ಕಾಂಗ್ರೆಸ್ನ ಇಲಾಯಿ ನದಾಫ ಇಬ್ಬರು ಕಣದಲ್ಲಿ ಉಳಿದಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಉಪಾಧ್ಯಕ್ಷ ಚುನಾವಣೆಯಲ್ಲಿ ಬಿ.ಜೆಪಿ.ಯ ಅಭ್ಯರ್ಥಿ ಶ್ರೀಕಾಂತ ಗಂಟಗಲ್ಲ ೭ ಮತ ಪಡೆದರೆ, ಕಾಂಗ್ರೆಸ್ನ ಅಭ್ಯರ್ಥಿ ಇಲಾಯಿ ನದಾಫ ೧೧ ಮತ ಪಡೆದು ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಜೆ.ಪಿ. ೮ ಸದಸ್ಯರು ಹಾಗೂ ಒಂದು ಲೋಕಸಭಾ ಸದಸ್ಯರ ಮತ ಸೇರಿ ಒಟ್ಟು ೯ ಬಲಾಬಲ ಹೊಂದಿದ್ದರೂ ಕೂಡ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ವಿಫಲವಾಯಿತು.
ಚಡಚಣ ಗ್ರಾ.ಪಂ. ಪ.ಪಂ.ಗೆ ಮೇಲ್ದರ್ಜೆಗೆರಿ ೮ವರ್ಷಗಳ ನಂತರ ಪ್ರಥಮ ಬಾರಿಗೆ ಪ.ಪಂ.ನ ಅಧ್ಯಕ್ಷ ಸ್ಥಾನ ಬಿ.ಜೆ.ಪಿ. ತನ್ನ ಮುಡಿಗೇರಿಸಿಕೊಂಡಿದೆ.
14th January 2025
ಚಡಚಣ:ಚಡಚಣ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕಿನ ಅಧೀಕಾರಿಗಳಿಂದ ೨೦೨೪-೨೫ ನೇ ಸಾಲೀನ ತ್ರೆಮಾಸಿಕ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಶಾಸಕ ವಿಠ್ಠಲ ಕಟಕಧೋಂಡ ಅವರು ಕಾರ್ಯಕ್ರಮದ ಮೋದಲು ಚಡಚಣ ಏತ ನಿರಾವರಿ ಸುಮಾರು ಒಟ್ಟು ೫೦೦ ಕೋಟಿ ರೂ ಯೋಜನೆ ಇದ್ದು ಇದನ್ನು ಪ್ರಾಯೋಗಿಕವಾಗಿ ಇದನ್ನು ಚಡಚಣ ಏತ ನಿರಾವರಿಯ ಸೌಲಭ್ಯವನ್ನು ಮೋದಲನೆ ಹಂತದಲ್ಲಿ ಸುಮಾರು ೬೨೦ ಔಟಲೆಟ್ ಗಳಿದ್ದು ಅದರ ೨ ಔಟಲೆಟ್ ಗಳ ಪೈಕಿ ೮ ಎಂಟು ಹಳ್ಳಿಗಳ ಸುಮಾರು ೯೨೧೫ ಹೆಕ್ಟೇರ್ ಪೂರ್ಣ ಗೊಂಡಿದ್ದು ಪ್ರಾಯೋಗಿಕವಾಗಿ ಚಾಲನೆ ಮಾಡುತ್ತಿದ್ದು ದಿನಾಂಕ ೧೬ ರಂದು ಲೋಕಾರ್ಪಣೆ ಮಾಡುವದರಿಂದ ಚಡಚಣ,ಗೋಡಿಹಾಳ,ಹಾವಿನಾಳ,ಹಾಲಳ್ಳಿ,ಬರಡೋಲ ಟಕ್ಕೆ ಶಿರಾಡೋಣ,ರೇವತಗಾಂವ,ಉಮರಜ .ಎಲ್ಲ ಗ್ರಾಮದ ರೈತರಿಗೆ ತಿಳಿ ಹೇಳುವಂತೆ ನೀರಿನ ರಭಸದಿಂದ ಸೋರಿಕೆ ಆಗದಂತೆ ಮತ್ತು ರಾಶಿ ಮಾಡದೆ ಕೂಡಿಟ್ಟ ರೈತರಿಗೆ ನೀರು ಹರಿಸುವದರಿಂದ ಹಾನಿ ಆಗದಂತೆ ಡಂಗುರ ಸಾರಿ ದಿ ೧೬ ರಂದು ಬೆಳೆ ಹಾನಿ ಆಗದಂತೆ ಎಚ್ಚರವಹಿಸುವಂತೆ ತಿಳಿಹೆಳುವ ಜವಾಬ್ದಾರಿಯನ್ನು ಆಯಾ ಗ್ರಾಮದ (ತಲಾಠಿ)ಗ್ರಾಮಸೇವಕರು ಹಾಗೂ ಪಿಡಿಓ ಹಾಗೂ ಗ್ರಾ.ಪಂ.ಅಧ್ಯಕ್ಷರನ್ನು ಕರೆಸಿ ಹೇಳಿದರು.
ಮುಂಬರುವ ದಿನಗಳಲ್ಲಿ ಆದಷ್ಟು ಬೇಗನೆ ಉಳಿದ ಕಾಮಗಾರಿ ಪೂರ್ಣ ಮಾಡಿ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಎಲ್ಲ ಉಧ್ಘಾಟನೆಯನ್ನು ಮಾಡಿಸುತ್ತೆವೆ ಎಂದು ಹೇಳಿದರು.
ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರು ಇದ್ದು ಶಾಸಕರು ಗರಂ ಆದ ಸನ್ನಿವೇಷ ಎದುರಾಯಿತು.ಮಾಹಿತಿ ಇಲ್ಲದೆ ಇನ್ನೊಮ್ಮೆ ಬರಬೇಡರಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಅಬಕಾರಿ ಇಲಾಖೆಗೆ ಸಂಭAಧಿಸಿದAತೆ ಅಕ್ರಮ ಮದ್ಯ ಮಾರಾಟದಿಂದ ಕೆಲವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದಾರೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೋಳ್ಳುವಂತೆ ಹೇಳಿದರು ಅದಕ್ಕೆ ಉತ್ತರಿಸಿದ ಅಧಿಕಾರಿ ನಮಗೆ ಮಾಹಿತಿ ಬಂದಿಲ್ಲ ಮಾಹಿತಿ ಬಂದರೆ ಕ್ರಮ ಕೈಗೋಳ್ಳುವದಾಗಿ ಹೇಳಿದರು.
ಜಾನುವಾರಗಳು ಡಾಕ್ಟರ್ಗಳ ನಿರ್ಲಕ್ಷದಿಂದ ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು ಜಾನುವಾರ ಡಾಕ್ಟರ್ ಗಳು ಸ್ಪಂಧಿಸದೆ ಇರುವದು ಇದಕ್ಕೆ ಮುಖ್ಯ ಕಾರಣ ಎಂದು ಆರೋಪಿಸಲಾಯಿತು ನಮ್ಮ ಗಮನಕ್ಕೆ ಬಂದರೆ ನಾವು ಅದಕ್ಕೆ ಚಿಕಿತ್ಸೆ ಕೊಡುವದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಾ ಗ್ಯಾರಂಟಿ ಸಮೀತಿಗಳ ಅಧ್ಯಕ್ಷ ಡಾ//ರವಿ ಜಾಧವ, ಪ.ಪಂ.ಯ ಸದಸ್ಯರು,ತಹಶೀಲ್ದಾರ ಸಂಜಯ ಇಂಗಳೆ,ಕಾರ್ಯನಿರ್ವಾಹಕ ಅಧಿಕಾರಿಗಳು ಸಂಜಯ ಖಡಗೇಕರ,ಚಡಚಣ ಪ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಪೂಜಾರಿ, ಸುತ್ತಲಿನ ಗ್ರಾಮದ ಅಧ್ಯಕ್ಷರು, ಆಡಳಿತಾಧಿಕಾರಿಗಳು,ಗ್ರಾಮ ಲೆಕ್ಕಿಗರು,ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.