KALABURGI VEGA VAHINI
News

*ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ವಜಾ ಮಾಡಲು ಆಗ್ರಹಿಸಿ ಬಹುಜನ ಸಮಾಜ ಪಕ್ಷ ವತಿಯಿಂದ ಪ್ರತಿಭಟನೆ*

24th December 2024


ವಿಷಯ : ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ವಜಾ ಮಾಡಲು ಆಗ್ರಹಿಸಿ


ಸಂಸತ್ ಅಧಿವೇಶನದಲ್ಲಿ ಭಾರತ ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಪದೇ ಪದೇ ಉಚ್ಛರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳೇಳು ಜನ್ಮಗಳ ಸ್ವರ್ಗ ದೊರೆಯುತ್ತಿತ್ತು ಎಂದು ಮಾತನಾಡಿದ್ದಾರೆ. ಇದು ಪರಮಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಮೇಲಿರುವ ಅಸಹನೆಯ ಪ್ರತೀಕವಾಗಿದೆ.

ಸಾವಿರಾರು ವರ್ಷಗಳಿಂದ ಜಾತಿ ಆಧಾರದ ಮೇಲೆ ಈ ದೇಶದ ಬಹು ಸಂಖ್ಯಾತರಾದ ಎಸ್ಸಿ,ಎಸ್ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿದ್ಯೆ, ಅಸ್ತಿ, ಅಧಿಕಾರಗಳನ್ನು ನಿರಾಕರಿಸಿಕೊಂಡು ಬಂದ ಮನುವಾದಿ ಮೇಲ್ದಾತಿಗೆ ಸೇರಿದ ಅಮಿತ್ ಷಾ ಮತ್ತು ಅವರ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರಿಗೆ ಸ್ವಾತಂತ್ರ್ಯ ಸಮಾನತೆಯ ಆಶಯಗಳನ್ನು ಎಂದೂ ಕೂಡ ಒಪ್ಪಿಕೊಳ್ಳಲು ಹಾಗೂ ಸಹಿಸಿಕೊಳ್ಳಲು ಆಗುವುದಿಲ್ಲ.


ಆ ಕಾರಣಕ್ಕಾಗಿ ಅವಕಾಶ ಸಿಕ್ಕಿದಾಗಲೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್, ಸಂವಿಧಾನ, ಮೀಸಲಾತಿಯನ್ನೂ ಕುರಿತು ಕೇವಲವಾಗಿ, ಅವಹೇಳನಕಾರಿಯಾಗಿ ಮಾತನಾಡುವುದು ರೂಢಿಗತವಾಗಿ ಬಂದಿದೆ.

ಇಂಥ ಮನುವಾದಿ ಮತ್ತು ಜಾತಿವಾದಿ ವ್ಯಕ್ತಿಗಳು ಸಂವಿಧಾನದ ಆಧಾರದ ಮೇಲೆ ರಚನೆಯಾಗಿರುವ ಸರ್ಕಾರದಲ್ಲಿ ಮಂತ್ರಿಯಾಗಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಆದ್ದರಿಂದ ಬಾಬಾ ಸಾಹೇಬ್‌ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿ ಇರುವ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ತಕ್ಷಣ ವಜಾ ಗೊಳಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಆನಂದ್ ಮಸ್ಕಿ ಹಾಗೂ ಎಲ್ ಆರ್ ಭೋಸ್ಲೆ , ಹುಚ್ಚಪ್ಪ ವ‌‌ಠಾರ , ಮೈಲಾರಿ ಶೆಳ್ಳಗಿ , ಅನಿಲ್ ಟೇಂಗಳಿ , ಗೌತಮ ಬೋಮ್ನಳ್ಳಿ ,ಜೈ ಭೀಮ್ ಶಿಂದೆ , ಇತರರು ಇದ್ದರು