21st October 2024
ಕರ್ನಾಟಕದ ಶ್ರೇಷ್ಠ ಇಲಿಜಾರೋ ತಜ್ಞ; ಡಾ. ಸತೀಶ್ ನೇಸರಿ
ಇಲಿಜಾರೋ (ILIZAROV) ಶಸ್ತ್ರಚಿಕಿತ್ಸೆ ರಷ್ಯಾ ದೇಶದ ತಂತ್ರಜ್ಞಾನ. ಹುಟ್ಟಿನಿಂದ ಅಂಗವಿಕಲತೆ ಹೊಂದಿರುವ ಮಕ್ಕಳ ಕೈ ಮತ್ತು ಕಾಲುಗಳ ಮೂಳೆ ಹಾಗೂ ಮಾಂಸಖಂಡಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಸರಿಪಡಿಸುವ ಆಧುನಿಕ ತಂತ್ರಜ್ಞಾನವೇ ಇಲಿಜಾರೋ ಶಸ್ತ್ರಚಿಕಿತ್ಸೆ. ಈ ತಂತ್ರಜ್ಞಾನವನ್ನು ಹೊಂದಿರುವ ಕರ್ನಾಟಕದ ಏಕೈಕ ಶ್ರೇಷ್ಠ ತಜ್ಞರೆಂದರೆ ಡಾ. ಸತೀಶ ನೇಸರಿ. ಇವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿಯ ಎಲುಬು ಮತ್ತು ಕೀಲು ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಸುತ್ತಿದ್ದಾರೆ.
ಬಿಮ್ಸ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗ ಈ ಆಸ್ಪತ್ರೆಯಲ್ಲಿ ಎಲುಬಿಗೆ ಕೀವು ಆಗಿರುವ ಪ್ರಕರಣಗಳು, ಮೂಳೆ ಮುರಿದಾಗ ಶಸ್ತ್ರಚಿಕಿತ್ಸೆ ಮಾಡಿದ ನಂತರವೂ ಆ ಮೂಳೆಗಳು ಸರಿಯಾಗಿ ಕೂಡದೇ ಇರುವ ಪ್ರಕರಣಗಳು, ಶಸ್ತ್ರಚಿಕಿತ್ಸೆ ಮಾಡಿದ ನಂತರ ಮೂಳೆ ಡೊಂಕಾಗಿ ಕುಳಿತಿರುವ ಪ್ರಕರಣಗಳು, ಶಸ್ತ್ರಚಿಕಿತ್ಸೆ ಮಾಡಿದ ನಂತರ ಕಾಲು ಕಿರಿದಾಗಿರುವ ಪ್ರಕರಣಗಳು, ಮೊನಕಾಲು ಚಿಪ್ಪು ಬದಲಾವಣೆ ಮಾಡಿದ ನಂತರ ಸರಿ ಹೊಂದದೇ ಇರುವ ಪ್ರಕರಣಗಳು ಇವರ ಗಮನಕ್ಕೆ ಬರುತ್ತಿದ್ದವು. ಈ ಎಲ್ಲ ಪ್ರಕರಣಗಳಿಗೆ ಯಾವ ರೀತಿಯಾಗಿ ರೋಗಿಗೆ ಚಿಕಿತ್ಸೆ ನೀಡಬೇಕು. ಅವರನ್ನು ಹೇಗೆ ಗುಣಮುಖರನ್ನಾಗಿ ಮಾಡಬೇಕು, ಅವರೂ ಸಹ ನಮ್ಮಂತೆಯೇ ಹೇಗೆ ಬದುಕಬೇಕು ಎಂಬ ಪ್ರಶ್ನೆಗಳು ಈ ರೋಗಿಗಳನ್ನು ನೋಡಿದಾಗ ಡಾ. ಸತೀಶ ನೇಸರಿ ಅವರ ಮನದಲ್ಲಿ ಮನೆ ಮಾಡುತ್ತಿದ್ದವು. ಈ ಸಮಯದಲ್ಲಿ ಅವರಿಗೆ ಹೊಳೆದದ್ದೇ ನೂತನ ಇಲಿಜಾರೋ ಸರ್ಜರಿ ತಂತ್ರಜ್ಞಾನ. ಈ ತಂತ್ರಜ್ಞಾನದ ಬಗ್ಗೆ 2008 ರಲ್ಲಿ ಹೆಚ್ಚು ಆಸಕ್ತರಾಗಿ ಈ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಮನೋಭಿಲಾಸೆ ಉಂಟಾಯಿತು.
ಭಾರತ ದೇಶದಲ್ಲಿ ಇಲಿಜಾರೋ ಶಸ್ತ್ರಚಿಕಿತ್ಸೆ ಮಾಡುವ ಏಕೈಕ ಪ್ರಸಿದ್ಧ ತಜ್ಞರೆಂದರೆ ಡಾ. ಮಿಲಿಂದ ಚೌಧರಿ. ರಷ್ಯಾ ದೇಶದಿಂದ ಭಾರತ ದೇಶಕ್ಕೆ ಈ ತಂತ್ರಜ್ಞಾನವನ್ನು ತಂದ ಕೀರ್ತಿ ಈ ಮಹಾನ್ ವೈದ್ಯರಿಗೆ ಸಲ್ಲುತ್ತದೆ. ಈ ತಂತ್ರಜ್ಞಾನವನ್ನು ಎಲ್ಲಿಂದ ಕಲಿಯಬೇಕು ಎನ್ನುವ ವಿಷಯವನ್ನು ಅರಸುತ್ತ ಹೋದಾಗ, ಡಾ ಸತೀಶ ನೇಸರಿ ಅವರಿಗೆ ದೊರೆತ ಅದ್ಭುತ ವೈದ್ಯರೆಂದರೆ ಡಾ. ಮಿಲಿಂದ ಚೌಧರಿ. ಇವರಿಂದ ವಿಷಯಾಸಕ್ತರಾಗಿ ಈ ತಂತ್ರಜ್ಞಾನವನ್ನು ಕಲಿಯಬೇಕೆಂಬ ಮಹದಾಸೆಯಿಂದ ಡಾ. ಮಿಲಿಂದ ಚೌಧರಿ ಆಸ್ಪತ್ರೆ ಅಕೋಲಾ ಮಹಾರಾಷ್ಟ್ರ ರಾಜ್ಯದಲ್ಲಿ 6 ತಿಂಗಳುಗಳ ಫೆಲ್ಲೋಶಿಪ್ ಪದವಿಯನ್ನು 2010 ರಲ್ಲಿ ಪಡೆದರು. ಇಲಿಜಾರೋ ಶಸ್ತ್ರಚಿಕಿತ್ಸೆಯಲ್ಲಿ ಇನ್ನು ಹೆಚ್ಚಿನ ವ್ಯಾಸಂಗ ಮಾಡಬೇಕು, ಪರಿಪೂರ್ಣವಾಗಿ ಅರ್ಥೈಸಿಕೊಳ್ಳಬೇಕೆಂಬ ಇಚ್ಚೆ ಅವರದು. ಅದಕ್ಕಾಗಿ 2014 ರಲ್ಲಿ DEFORMITY CORRECTION ಶಸ್ತ್ರಚಿಕಿತ್ಸೆ ಅಧ್ಯಯನವನ್ನು ಚೀನಾ ದೇಶದಲ್ಲಿ ಪೂರ್ಣಗೊಳಿಸಿದರು. ಇಲಿಜಾರೋ ತಂತ್ರಜ್ಞಾನವನ್ನು ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಬಿಮ್ಸ್ ಸಂಸ್ಥೆಗೆ ತಂದ ಶ್ರೇಯಸ್ಸು ಡಾ. ಸತೀಶ ನೇಸರಿ ಅವರಿಗೆ ಸಲ್ಲುತ್ತದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ.
-2-
ಡಾ. ಸತೀಶ ನೇಸರಿ ಪ್ರಸಿದ್ಧ ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸಕ. ವೈದ್ಯರು ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸೆಗಳನ್ನು ಮಾಡಿದಾಗ ಗುಣಮುಖರಾಗದೆ ಇರುವ ರೋಗಿಗಳ ಮೇಲೆ ಈ ನೂತನ ಆಧುನಿಕ ಶಸ್ತ್ರಚಿಕಿತ್ಸೆಯನ್ನು ಪ್ರಯೋಗಿಸಲು ಆರಂಭಿಸಿದರು. ಅಬಾಲರಿಂದ ವೃದ್ಧರವರೆಗೆ ಎಂತಹ ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಾಮರ್ಥ್ಯ ಇವರಿಗಿದೆ. ಎಂಥಹ ಕಷ್ಟಕರ ಎಲುಬು ಶಸ್ತ್ರಚಿಕಿತ್ಸೆ ಇದ್ದರೂ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಮನಸ್ಥಿತಿ ಇವರಿಗಿದೆ. ರೈಫಲ್ ಶೂಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಮುಡಿಗೇರಿಕೊಂಡ ಡಾ. ಸತೀಶ ನೇಸರಿ, ರೋಗಿಯ ದೇಹದಲ್ಲಿ ಕೊಳೆತ ಎಲುಬುಗಳನ್ನು ಬಹುಬೇಗನೆ ಶೂಟ್ ಮಾಡುತ್ತಾರೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಪೂರಕ ವಿಶಿಷ್ಟ ಮೂಳೆ ಜೋಡಿಸುವ ( BONE TRANSPORT SURGERY) ಶಸ್ತ್ರಚಿಕಿತ್ಸೆಯಲ್ಲಿ ಅಗಾಧ ಪರಿಣಿತಿ ಹೊಂದಿರುವ ಡಾ. ಸತೀಶ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ವಿಷಯಾಧಾರಿತ ಸಮ್ಮೇಳನದಲ್ಲಿ ಬಂಗಾರದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಪೇಪರ ಪ್ರಜಂಟೇಶನಗಳನ್ನು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾ ಮಾಡುತ್ತಾ ರೋಗಿಗಳು ಗುಣಮುಖರಾಗುತ್ತಾ ಇಂದು ಕರ್ನಾಟಕ ರಾಜ್ಯದಲ್ಲಿಯೇ ಇಲಿಜಾರೋ ತಂತ್ರಜ್ಞಾನದಲ್ಲಿ ಅಂತ್ಯಂತ ಪರಿಣಿತಿ ಹೊಂದಿ ಶ್ರೇಷ್ಠ ಶಸ್ತ್ರಚಿಕಿತ್ಸಕ ತಜ್ಞರಾಗಿ ಹೊರಹೊಮ್ಮಿದ್ದಾರೆ. ಎಷ್ಟೋ ಮಕ್ಕಳು ಹುಟ್ಟಿನಿಂದ ಅಂಗವಿಕಲರಾಗಿರುತ್ತಾರೆ. ಕೈ, ಕಾಲು ಸಾಮಾನ್ಯರಂತೆ ಇರುವುದಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದಂತಹ ವ್ಯಕ್ತಿಗಳಿಗೆ ಎಲುಬಿನಲ್ಲಿ ಕೀವು ತುಂಬಿ ಜೀವಕ್ಕೆ ಆಪತ್ತು ಉಂಟಾಗುವ ಸಂಭವ ಇರುತ್ತದೆ. ಮೂಳೆ ಮುರಿದ ನಂತರ ಶಸ್ತ್ರಚಿಕಿತ್ಸೆ ಮಾಡಿದ ನಂತರವೂ ಆ ಮೂಳೆ ಸರಿಯಾಗಿ ಕೂಡದೇ ನಿತ್ಯ ಕರ್ಮಗಳನ್ನು ಮಾಡುವುದು ತುಂಬಾ ತೊಂದರೆಯಾಗುತ್ತಿರುತ್ತದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ಮೂಳೆ ಡೊಂಕಾಗಿ ಕುಳಿತು ಜೀವನ ಸಾಗಿಸುವುದು ಪ್ರಯಾಸದಾಯಕವಾಗಿರುತ್ತದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ಕಾಲು ಕಿರಿದಾಗಿ ನಡೆಯಲು ಬರುತ್ತಿರುವುದಿಲ್ಲ. ಮೊನಕಾಲು ಚಿಪ್ಪು ಬದಲಾವಣೆ ಮಾಡಿದ ನಂತರ ಕಾಲು ಮೊದಲಿನಂತೆ ಸರಿ ಆಗಿರುವುದಿಲ್ಲ. ಇಂತಹ ಎಲ್ಲ ರೋಗಿಗಳಿಗೆ ಡಾ. ಸತೀಶ ನೇಸರಿ ಜೀವ ಸಂಜೀವಿನಿಯಾಗಿದ್ದಾರೆ.
ಡಾ. ಸತೀಶ ನೇಸರಿ ವೃತ್ತಿಯಿಂದ ಎಲುಬು ಮತ್ತು ಕೀಲು ತಜ್ಞರು. ಆದರೆ ಪ್ರವೃತ್ತಿಯಿಂದ ರೋಗಿಗಳ ಆರಾಧಕ. ಇಂತಹ ಎಲ್ಲ ರೋಗಿಗಳನ್ನು ಗುಣಮುಖರನ್ನಾಗಿ ಮಾಡಬೇಕು, ಅವರೂ ಸಹ ನಮ್ಮಂತೆಯೇ ಸುಂದರ ಜೀವನ ನಡೆಸಬೇಕು, ಅವರ ಬಾಳು ಸಹ ನಮ್ಮಂತೆ ಬಂಗಾರವಾಗಬೇಕೆಂಬ ಮನದಾಸೆ ಉಳ್ಳವರು, ಮನಸಿನಲ್ಲಿ ಕನಸು ಕಂಡವರು. ಕನಸು ಕಂಡು ನನಸು ಮಾಡಿದವರು. ವೈದ್ಯಕೀಯ ವೃತ್ತಿಯಲ್ಲಿ ರೋಗಿಗಳನ್ನು ಮುಟ್ಟದೆ ಚಿಕಿತ್ಸೆ ನೀಡುತ್ತಿರುವುದು ಹೊಸದೇನಲ್ಲ. ಇಂತಹ ಸಂದರ್ಭಗಳಲ್ಲಿ ಬಡರೋಗಿಗಳನ್ನು ಇವರೇ ಸ್ವ ಇಚ್ಚೆಯಿಂದ ಆಯ್ಕೆ ಮಾಡಿಕೊಂಡು ಬೆಳಗಾವಿಯ ಬಿಮ್ಸ್ ಸಂಸ್ಥೆಯಲ್ಲಿ ಕರೆ ತಂದು ಚಿಕಿತ್ಸೆ ನೀಡುತ್ತಿರುವ ಅಪರೂಪದ ವೈದ್ಯರು. ಯಾರಾದರು ಇಂತಹ ರೋಗಿಗಳು ಬಂದರೆ ಆ ರೋಗಿಗೆ ಚಿಕಿತ್ಸೆ ನೀಡಿ ಶಸ್ತ್ರಚಿಕಿತ್ಸೆ ಸಫಲವಾಗುವವರೆಗೂ ವಿರಮಿಸುವವರಲ್ಲ. ರೋಗಿಗಳ ಖುಷಿಯಲ್ಲಿ ಖುಷಿ, ರೋಗಿಗಳ ಸಂತೋಷದಲ್ಲಿ ಸಂತೋಷ, ರೋಗಿಗಳ ಆನಂದದಲ್ಲಿ ಸಂತಸ ಪಡುವ ಆನಂದದ ಖಣಿ.
-3-
ಹುಟ್ಟುವಾಗ ದೇವರು ಅಂಗವಿಕಲನಾಗಿ ಹುಟ್ಟಿಸಿದ್ದಾನೆ ಎಂದು ದೇವರಿಗೆ ಶಾಪ ಹಾಕುವವರೇ ಬಹಳಷ್ಟು ಜನ. ಇಂತಹ ಎಲ್ಲ ಮಕ್ಕಳಿಗೆ ಆನಂದದ ಕೂಪವಾದವರೇ ಡಾ. ಸತೀಶ ನೇಸರಿ. ಅವರು ಇಂತಹ ಎಲ್ಲ ಮಕ್ಕಳನ್ನು ಗಮನಿಸಿ ಅವರಿಗೆ ಇಲಿಜಾರೋ ತಂತ್ರಜ್ಞಾನದ ಕುರಿತು ತಿಳುವಳಿಕೆ ಹೇಳಿ ಅವರನ್ನು ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಈ ತಂತ್ರಜ್ಞಾನದ ಮೂಲಕ ಸರ್ಜರಿ ಮಾಡಿ ಅವರಿಗೆ ಹೊಸ ಬಾಳು ಕೊಡುವ ಭಾಗ್ಯದಾತ. ಸಾಮಾನ್ಯವಾಗಿ ವೈದ್ಯರು ಚಿಕಿತ್ಸೆ ನೀಡಿದ ನಂತರ ವೈದ್ಯರಿಗೂ ರೋಗಿಗಳಿಗೂ ಸಂಬಂಧ ಮುಕ್ತಾಯವಾಗುತ್ತದೆ. ಆದರೆ ಈ ತಂತ್ರಜ್ಞಾನದಲ್ಲಿ ನನ್ನ ಸಂಬಂಧ ಶಸ್ತ್ರಚಿಕಿತ್ಸೆ ಮಾಡಿದ ನಂತರ ಮುಕ್ತಾಯವಾಗುವುದಿಲ್ಲ ಬದಲಾಗಿ ಆರಂಭವಾಗುತ್ತದೆ. ಮುಂದೆ ಅವಿನಾಭಾವ ಸಂಬಂಧವಾಗಿ ಮಾರ್ಪಡುತ್ತದೆ. ಇಂತಹ ರೋಗಿಗಳನ್ನು ನೆನೆಸಿಕೊಂಡು ಒಂದು ಕ್ಷಣ ಭಾವುಕರಾಗುತ್ತಾರೆ ಡಾ. ಸತೀಶ ನೇಸರಿಯವರು.
ಮೊದಮೊದಲು ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರ ನನ್ನ ಕರ್ತವ್ಯ ಎಂದು ಭಾವಿಸಿಕೊಂಡಿದ್ದ ಡಾ. ಸತೀಶ ನೇಸರಿ ಇಲಿಜಾರೋ ತಂತ್ರಜ್ಞಾನದಿಂದ ಚಿಕಿತ್ಸೆ ಹೊರತುಪಡಿಸಿಯೂ ರೋಗಿಗಳೊಂದಿಗೆ ಇನ್ನೊಂದು ಸುಂದರ ಪ್ರಪಂಚವಿದೆ ಅದುವೇ ರೋಗಿಗಳಿಗೂ ಹಾಗೂ ವೈದ್ಯರಿಗೂ ಇರುವ ಅವಿನಾಭಾವ ಸಂಬಂಧ ಎಂದು ಅರಿವಾದದ್ದೇ ನನ್ನ ಗುರುಗಳಾದ ಡಾ. ಮಿಲಿಂದ ಚೌಧರಿ ಹಾಗೂ ಚೀನಾ ದೇಶದ ಡಾ. ಚಿನ್ ಸಿಹಿ ಎಂಬ ಶ್ರೇಷ್ಠ ವೈದ್ಯರಿಂದ ಎಂದು ಹೇಳುವಾಗ ಗುರುಗಳನ್ನು ಮನದಲ್ಲಿ ನೆನಪಿಸಿಕೊಂಡು ಮತ್ತೊಂದು ಕ್ಷಣ ಭಾವುಕರಾಗುತ್ತಾರೆ. ಇದು ಅವರು ಗುರುಗಳ ಬಗ್ಗೆ ಹೊಂದಿರುವ ಅಪಾರ ಗೌರವವನ್ನು ಸೂಚಿಸುತ್ತದೆ.
ಕಳೆದ 15 ವರ್ಷಗಳಿಂದ ಈ ತಂತ್ರಜ್ಞಾನದಲ್ಲಿ ಸೇವೆ ಸಲ್ಲಿಸುತ್ತಿರುವ ಈ ವೈದ್ಯರು ಇಂತಹ 4000 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸುಮಾರು ಜನರಿಗೆ ಚಿಕಿತ್ಸೆ ನೀಡಿದ ನಂತರ ಅವರು ತಮ್ಮ ಜೀವನ ಹೇಗೆ ಕಟ್ಟಿಕೊಂಡಿದ್ದಾರೆ ಎನ್ನುವುದನ್ನೂ ಸಹ ಅಧ್ಯಯನ ಮಾಡಿದ್ದೇನೆ. ಅವರು ಕಟ್ಟಿಕೊಂಡ ಸುಂದರ ಜೀವನ ನೋಡಿದಾಕ್ಷಣ ನನ್ನ ವೃತ್ತಿ ಸಾರ್ಥಕವಾಯಿತು ಎಂಬ ಭಾವ ನನ್ನಲ್ಲಿ ನಿರ್ಮಾಣವಾಗುತ್ತದೆ. ಅದುವೇ ನನ್ನ ಜೀವನದ ಆನಂದದ ಕ್ಷಣವಾಗಿ ಮಾರ್ಪಡುತ್ತದೆ. ವೃತ್ತಿಯ ಸಾರ್ಥಕತೆಯೆಂದರೆ ಏನು ಎನ್ನುವುದನ್ನು ಈ ಇಲಿಜಾರೋ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಕಂಡುಕೊಂಡಿದ್ದೇನೆ ಎಂದು ತುಂಬಾ ಹೆಮ್ಮೆಯಿಂದ ಮಾತನಾಡುತ್ತಾರೆ. ಬಹಳಷ್ಟು ರೋಗಿಗಳು ಗುಣಮುಖರಾದ ನಂತರ ಅವರು ಮಾಡುವ ಉದ್ಯೋಗದ ಮೊದಲ ಲಾಭವನ್ನು ನನಗೆ ಕೊಟ್ಟು ಸಂತೋಷ ಪಡುತ್ತಾರೆ.
ಜಗತ್ತಿನಲ್ಲಿ ಬಹಳಷ್ಟು ವೃತ್ತಿಗಳು ಇವೆ. ಯಾವ ವೃತ್ತಿಯಲ್ಲಿಯೂ ತೃಪ್ತಿ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ವೃತ್ತಿಯಲ್ಲಿ ತೃಪ್ತಿ ಬೇಕು. ತೃಪ್ತಿ ಇಲ್ಲದ ವೃತ್ತಿ ಅದು ವೃತ್ತಿ ಅಲ್ಲ ಅದು ಕೇವಲ ವ್ಯವಹಾರ ಮಾತ್ರ. ಡಾ. ಸತೀಶ ನೇಸರಿ ತಮ್ಮ ವೃತ್ತಿಯನ್ನು ವ್ಯವಹಾರವನ್ನಾಗಿ ಪರಿವರ್ತಿಸಬೇಕಾಗಿದ್ದರೆ ಅವರಿಗೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವೆಲ್ಲವುಗಳನ್ನು ಕೈಚೆಲ್ಲಿ ತೃಪ್ತಿಯ ಈ ವೃತ್ತಿಯಲ್ಲಿ ಇಲಿಜಾರೋ ತಂತ್ರಜ್ಞಾನದೊಂದಿಗೆ ತುಂಬಾ ಆನಂದವಾದ ಜೀವನವನ್ನು ಸಾಗಿಸುತ್ತಿದ್ದಾರೆ. ಇಂದು ವೈದ್ಯಕೀಯ ವೃತ್ತಿ ಮಾರಾಟಕ್ಕಿದೆ. ಇಂತಹ ಸಂದಂರ್ಭದಲ್ಲಿಯೂ ಸಹ ವೈದ್ಯಕೀಯ ವೃತ್ತಿಯನ್ನು ಪ್ರೀತಿಸುವಂತಹ ಸಹೃದಯಿ ಡಾ. ಸತೀಶ ನೇಸರಿಯಂತಹ ವೈದ್ಯರಿದ್ದಾರೆ ಎನ್ನುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಇಂತಹ ವೈದ್ಯರಿಂದ ವೈದ್ಯಕೀಯ ವೃತ್ತಿಗೆ ಶ್ರೇಷ್ಠತೆ ಲಭಿಸುತ್ತದೆ. ಘನತೆ ಗೌರವಗಳು ಹೆಚ್ಚಾಗುತ್ತವೆ. “ವೈದ್ಯೋ ನಾರಾಯಣೋ ಹರೀ” ಎನ್ನುವ ನಾಣ್ಣುಡಿಗೆ ನಿಜವಾದ ಅರ್ಥ ಬರುತ್ತದೆ.
-4-
ರೋಗಿಗಳಿಗೆ ಚಿಕಿತ್ಸೆ ನೀಡಿದ ನಂತರ ಅವರು ಸಾಮಾನ್ಯರಂತೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ತದನಂತರ ಅವರ ಜೀವನದಲ್ಲಿ ಮಾಡುವ ಎಲ್ಲ ಕೆಲಸಗಳನ್ನು ನನಗೆ ಹೇಳಿ ಮಾಡುತ್ತಾರೆ. ಅಮವಾಸ್ಯೆ, ಹಬ್ಬ ಹರಿದಿನಗಳಲ್ಲಿ ಭೋಜನವನ್ನು ತಯಾರಿಸಿ ಮೊದಲು ದೇವರಿಗೆ ಹೇಗೆ ಮೀಸಲಿಡುತ್ತಾರೋ ಹಾಗೆ ಮೊದಲು ನನಗೆ ತಂದು ಕೊಟ್ಟು ತದನಂತರ ಅವರು ತೆಗೆದುಕೊಳ್ಳತ್ತಾರೆ ಎಂದು ಹೇಳುವಾಗ ವೈದ್ಯರಲ್ಲಿ ಧನ್ಯತಾ ಭಾವ ಮನೆ ಮಾಡುತ್ತದೆ. ಈ ಎಲ್ಲ ವಿಚಾರಗಳನ್ನು ಜೀವನದ ಸ್ಪೂರ್ತಿ ಸೆಲೆಯಾದ ಧರ್ಮಪತ್ನಿ ವಿನುತಾ ಹಾಗೂ ಏಕೈಕ ಮಗಳು ಖುಷಿಯೊಂದಿಗೆ ಹಂಚಿಕೊಳ್ಳುವಾಗ ಸಂತಸದ ಭಾವ ಆವಿರ್ಭವಿಸುತ್ತದೆ. ಜೀವನದ ಸಾರ್ಥಕ ಭಾವ ನನ್ನಲ್ಲಿ ಮೂಡುತ್ತದೆ. ವೃತ್ತಿಯ ಬಗ್ಗೆ ನನಗೆ ಗೌರವ ಹೆಚ್ಚಾಗುತ್ತದೆ. ಇನ್ನಷ್ಟು ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂಬ ಉತ್ಸಾಹ ಉಂಟಾಗುತ್ತದೆ. ಮುಂದೆ ಬರುವ ರೋಗಿಗಳಿಗೆ ಇನ್ನಷ್ಟು ಆತ್ಮಿಯತೆಯಿಂದ ಚಿಕಿತ್ಸೆ ನೀಡುವ ಮನೋಭಾವ ನಿರ್ಮಾಣವಾಗುತ್ತದೆ ಎಂದು ಅತೀ ಹೆಮ್ಮೆಯಿಂದ ಈ ವಿಚಾರಗಳನ್ನು ಡಾ. ಸತೀಶ ನೇಸರಿಯವರು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಬಡರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿಯೇ ಪರಮಾನಂದವಿದೆ ಎಂದು ನನ್ನ ಅಜ್ಜಿ ನನಗೆ ಪದೇ ಪದೇ ಹೇಳುತ್ತಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ವೈದ್ಯ ವೃತ್ತಿಯನ್ನು ಅರಸಿಕೊಂಡೆ. ಅವರ ಇಚ್ಚೆಯಂತೆ ಬಡರೋಗಿಗಳಿಗೆ ಅಂತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ದೊಡ್ಡ ದೊಡ್ಡ ಆಸ್ಪತ್ರೆಗಳ ಆಹ್ವಾನವಿದ್ದರೂ ಬಡರೋಗಿಗಳೊಂದಿಗೆ ಬಿಮ್ಸ್ ನಲ್ಲಿಯೇ ಇರಬೇಕೆಂಬ ಛಲ ಡಾ. ಸತೀಶ ನೇಸರಿ ಅವರದು. ಅಜ್ಜಿಯ ಮಹದಾಸೆಯೊಂದಿಗೆ ಆನಂದದ ಸಾಗರವನ್ನೇ ಬಿಮ್ಸ್ ಸಂಸ್ಥೆಯಲ್ಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಯನ್ನು ಬಿಮ್ಸ್ ಸಂಸ್ಥೆಯ ಹೆಮ್ಮೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಅವರು ಮನ ತುಂಬಿ ಶ್ಲಾಘಿಸುತ್ತಾರೆ. ಈ ವೈದ್ಯರಿಂದ ನಮ್ಮ ಬಿಮ್ಸ್ ಸಂಸ್ಥೆಗೆ ಮತ್ತೊಂದು ಗರಿ ಮೂಡಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಎಲುಬು ಮತ್ತು ಕೀಲು ವಿಭಾಗದ ನೆಚ್ಚಿನ ವೈದ್ಯರೆಂದರೆ ಡಾ. ಸತೀಶ ನೇಸರಿ ಎಂದು ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ವಾಲಿ ಬಣ್ಣಿಸುತ್ತಾರೆ. ಡಾ. ಸತೀಶ ನೇಸರಿ ನಾ ಕಂಡ ಬಿಮ್ಸ್ ಸಂಸ್ಥೆಯ ಅದ್ಬುತ ವೈದ್ಯರು. ರೋಗಿಗಳೊಂದಿಗೆ ಹಗಲಿರುಳು ಶ್ರಮಿಸುವ ದನಿವರಿಯದ ಶ್ರಮಿಕ. ಅವರ ಸೇವೆ ಹೀಗೆ ಮುಂದುವರೆಯಲಿ. ಇನ್ನಷ್ಟು ಬಡ ರೋಗಿಗಳಿಗೆ ಚಿಕಿತ್ಸೆ ಸಿಗಲಿ. ವೈದ್ಯರ ಶ್ರಮ ಸಾರ್ಥಕವಾಗಲಿ. ರೋಗಿಗಳ ಬಾಳು ಬಂಗಾರವಾಗಲಿ. ರೋಗಿಗಳ ಬಾಳನ್ನು ಬಂಗಾರವಾಗಿಸಿದ ಡಾ. ಸತೀಶ ನೇಸರಿ ಅವರ ಬಾಳು ಬಂಗಾರವಾಗಲಿ.
ಡಾ. ಸಿದ್ಧುಹುಲ್ಲೋಳಿ ಕೆ.ಎ.ಎಸ್
ಮುಖ್ಯಆಡಳಿತಾಧಿಕಾರಿಗಳು
ಬಿಮ್ಸ್ ಬೆಳಗಾವಿ
13th October 2024
🕉🙏 *ಸುಪ್ರಭಾತ* 🙏🕉
▬▬▬ஜ۩۞۩ஜ▬▬▬
🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
☘️☘️☘️☘️☘️☘️☘️☘️☘️☘️
*ವಯಸ್ಸಾದ ಮರ ಹಣ್ಣು ಕೊಡಲಾಗದಿದ್ದರೂ ನೆರಳನ್ನಾದರೂ ನೀಡುತ್ತದೆ.*
*ಹಾಗೆಯೇ ಹಿರಿಯರೂ ಕೂಡ ದುಡಿಯಲಾಗದಿದ್ದರೂ ಜೀವನದ ಪಯಣಕ್ಕೆ ಮಾರ್ಗದರ್ಶಕರಾಗಿರುತ್ತಾರೆ.*
*ಹಿರಿಯರನ್ನು ಗೌರವಿಸಿ.*
☘️☘️☘️☘️☘️☘️☘️☘️☘️☘️
----------------~--------------
*ಧರ್ಮೋ ರಕ್ಷತಿ ರಕ್ಷಿತಃ*
*🍵ಶುಭ ರವಿವಾರ ☕*
*ನೆರಳಿಗಾಗಿ ಗಿಡ ನೆಡಿ*
*॥ಸರ್ವೆಜನಃ ಸುಖಿನೋಭವಂತು॥*
▬▬▬▬▬ஜ۩۞۩ஜ▬▬▬▬▬
*ಓಂ ಶ್ರೀ ಗುರು ಬಸವಲಿಂಗಾಯ ನಮಃ*
*📚ದಿನಕ್ಕೊಂದು ವಚನ*
*ಲಜ್ಜೆಗೆಟ್ಟೆನು, ನಾಣುಗೆಟ್ಟೆನು;*
*ಕುಲಗೆಟ್ಟೆನು, ಛಲಗೆಟ್ಟೆನು:*
*ಸಂಗಾ, ನಿನ್ನ ಪೂಜಿಸಿ ಭವಗೆಟ್ಟೆನು ನಾನಯ್ಯಾ!*
*ಕೂಡಲಸಂಗಮದೇವಯ್ಯಾ*
*ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನು!!*
*✍🏻✍🏻ಕ್ರಾಂತಿಯೋಗಿ ಬಸವಣ್ಣನವರು.*
*ವಚನದ ಸಂಕ್ಷಿಪ್ತ ಭಾವಾರ್ಥ*
*ನಾಚಿಕೆ, ನಾಡು, ಕುಲ, ಛಲ ಬಿಟ್ಟೆ. ಸಂಗಮೇಶಾ, ನಿನ್ನನ್ನು ಪೂಜಿಸಿ ನಾನು ಜಗದ ಜಂಜಾಟಕ್ಕೂ ದೂರಾದೆ, ನಿಮಗೆ ಅನುದಿನ ಸ್ಪರ್ಶಿಸಿ ಹುಟ್ಟು ಸಾವಿಗೂ ಹೊರತಾದೆ.*
*ಶರಣು ಶರಣಾರ್ಥಿಗಳು.*
🌷 ಶ್ರೀಮನ್ಮಹಾಭಾರತ 🌷*
*🔔 ॐ ಸಂಚಿಕೆ – 2507 ॐ 🔔*
*🌹🌹 ಉದ್ಯೋಗಪರ್ವ 🌹🌹*
*🔯ಭಗವದ್ಯಾನ ಉಪಪರ್ವ🔯*
******************
*🌷ಅಧ್ಯಾಯ – 130🌷*
*ದುರ್ಯೋಧನನ ಷಡ್ಯಂತ್ರವನ್ನು ಸಾತ್ಯಕಿಯು ಭೇದಿಸಿದುದು.*
*🌷ಭಾಗ – 3.🌷*
******************
*ॐ ನಮೋ ಭಗವತೇ ವಾಸುದೇವಾಯಃ ||*
*ನಾರಾಯಣಂ ನಮಸ್ಕ್ರತ್ಯ ನರಂ ಚೈವ ನರೋತ್ತಮಮ್ |*
*ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||*
****************
ಶ್ರೀಕೃಷ್ಣನ ಮಾತುಗಳನ್ನು ಕೇಳಿದೊಡನೆಯೇ ಭ್ರಾಂತನಾದ ಧೃತರಾಷ್ಟ್ರನು, “ರಾಜ್ಯಲುಬ್ಧನಾದ, ಪಾಪಿಷ್ಠನಾದ ದುರ್ಯೋಧನನನ್ನು ಶೀಘ್ರಾತಿಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬಾ; ಅವನನ್ನು ಅನುಸರಿಸಿ ಹೋಗಿರುವ ರಾಜರೂ ಬರಲಿ” – ಎಂದು ವಿದುರನನ್ನು ಕುರಿತು ಪುನಃ ಹೇಳಿದನು.
ಅದರಂತೆ ದುರ್ಯೋಧನನಿಗೆ ಸಭಾಭವನಕ್ಕೆ ಬರುವ ಇಚ್ಛೆ ಇಲ್ಲದಿದ್ದರೂ ವಿದುರನು ಬಲಾತ್ಕಾರ ಪೂರ್ವಕವಾಗಿ ಪುನಃ ಸಭಾಮಂಟಪಕ್ಕೆ ಅವನನ್ನು ಕರೆತಂದನು.
ರಾಜನ ಆಜ್ಞೆಯಂತೆ ಅವನೊಡನೆ ಅವನ ಮಿತ್ರಾಮಾತ್ಯ-ಸೋದರರೂ ಮತ್ತು ರಾಜರೂ ಸಭಾಮಂದಿರವನ್ನು ಪ್ರವೇಶಿಸಿದರು.
ಕರ್ಣ, ದುಃಶಾಸನರಿಂದ ಪರಿವೃತನಾಗಿದ್ದ ದುರ್ಯೋಧನನನ್ನು ಕುರಿತು ಧೃತರಾಷ್ಟ್ರರಾಜನು ಹೇಳಿದನು:-
“ನಿನ್ನಂತಹ ಮೂಢನಾದವನು ಮತ್ತು ಕುಲಕಳಂಕನೂ ಸಿದ್ಧಮಾಡಿರುವ ಕೃಷ್ಣಬಂಧನದ ಯೋಜನೆಯು ಸಾಧಿಸಲಶಕ್ಯವಾದುದು.
ಇಂತಹ ಕುತ್ಸಿತಕಾರ್ಯಕ್ಕೆ ಪ್ರಯತ್ನಿಸುವುದೂ ಅಯಶಸ್ಕರವಾದುದು ಮತ್ತು ಈ ಕಾರ್ಯವು ಸತ್ಪುರುಷರ ನಿಂದೆಗೂ ಪಾತ್ರವಾದುದು.
ಮಹಾವೀರರಿಂದ ಎದುರಿಸಲು ಸಾಧ್ಯವಾಗದ, ಹತ್ತಿರ ಹೋಗಲೂ ಕಷ್ಟಸಾಧ್ಯನಾದ ಈ ಪುಂಡರೀಕಾಕ್ಷನನ್ನು ಪಾಪಿಷ್ಠರ ಸಹಾಯದಿಂದ ಬಲಾತ್ಕಾರವಾಗಿ ಬಂಧಿಸಲೂ ಇಚ್ಛಿಸಿರುವೆಯಲ್ಲವೇ?
ಮೂರ್ಖ! ಇಂದ್ರಪ್ರಮುಖರಾದ ದೇವತೆಗಳಿಗೂ ಯಾವನನ್ನು ಬಲಾತ್ಕಾರ ಪೂರ್ವಕವಾಗಿ ಬಂಧಿಸಲು ಸಾಧ್ಯವಿಲ್ಲವೋ ಅಂತಹ ಮಹಾಪುರುಷನನ್ನು ನೀನು – ಬಾಲಕನೊಬ್ಬನು ಅಂತರಿಕ್ಷದಲ್ಲಿ ಕಾಣುವ ಚಂದ್ರನನ್ನು ಹಿಡಿದುಕೊಳ್ಳಲು ಕೈಚಾಚುವಂತೆ – ಬಂಧಿಸಲು ಇಚ್ಛಿಸಿರುವೆ.
ಮೂಢ! ನಿನಗೆ ಶ್ರೀಕೇಶವನ ಮಹಿಮೆ ಏನೆಂಬುದು ಸ್ವಲ್ಪವೂ ತಿಳಿಯದು.
ಇವನ ಪರಾಕ್ರಮ ಎಷ್ಟೆಂಬುದನ್ನು ನೀನರಿಯೆ.
ದೇವ-ಮನುಷ್ಯ-ಗಂಧರ್ವ-ಅಸುರ-ಸರ್ಪ ಗಳಿಂದಲೂ ಇವನನ್ನು ಯುದ್ಧದಲ್ಲಿ ಎದುರಿಸಿ ನಿಲ್ಲಲು ಸಾಧ್ಯವಾಗುವುದಿಲ್ಲ, ತಿಳಿಯಿತೇ?
ಗಾಳಿಯನ್ನು ಕೈಯಿಂದ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ.
ಶೀತಾಂಶುವಾದ ಚಂದ್ರನನ್ನು ಕೈಯಿಂದ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ.
ಪೃಥ್ವಿಯನ್ನು ತಲೆಯಿಂದ ಹೊರಲು (ಧರಿಸಲು) ಸಾಧ್ಯವಾಗುವುದಿಲ್ಲ.
ಹಾಗೆಯೇ ಶ್ರೀಕೃಷ್ಣನನ್ನೂ ಬಲಾತ್ಕಾರದಿಂದ ಬಂಧಿಸಲೂ ಸಾಧ್ಯವಾಗುವುದಿಲ್ಲ.”
ಧೃತರಾಷ್ಟ್ರನು ಹೀಗೆಂದು ಹೇಳಿದ ನಂತರ ವಿದುರನು ಕೋಪಾಭಿಭೂತನಾಗಿದ್ದ ದುರ್ಯೋಧನನನ್ನು ಒಮ್ಮೆ ವೀಕ್ಷಿಸಿ ಹೇಳಿದನು:-
“ದುರ್ಯೋಧನ! ಈಗ ನಾನು ಹೇಳಲಿರುವ ಮಾತನ್ನು ಮನಸ್ಸಿಟ್ಟು ಕೇಳು.
ಅನಂತರ ನಿನಗೆ ತೋರಿದಂತೆ ಮಾಡು.
ದ್ವಿವಿಧನೆಂಬ ದಾನವೇಂದ್ರನು ಸೌಭನೆಂಬ ಪಟ್ಟಣದ ಮಹಾದ್ವಾರದಲ್ಲಿ ಮಹತ್ತರವಾದ ಕಲ್ಲಿನ ಮಳೆಯಿಂದ ಶ್ರೀಕೇಶವನನ್ನು ಮುಚ್ಚಿಬಿಟ್ಟನು.
ಪರಾಕ್ರಮದ ಮೂಲಕವಾಗಿ ಶ್ರೀಕೃಷ್ಣನನ್ನು ಹಿಡಿಯುವ ಇಚ್ಛೆಯಿಂದ ದಾನವನು ಸರ್ವಪ್ರಯತ್ನಗಳನ್ನೂ ಮಾಡಿದನು.
ಆದರೂ ಇವನನ್ನು ಬಂಧಿಸಲು ದ್ವಿವಿಧನಿಗೆ ಸಾಧ್ಯವಾಗಲಿಲ್ಲ.
ಅಂತಹವನನ್ನು ನೀನು ಬಲಾತ್ಕಾರದಿಂದ ನಿನ್ನ ವಶಮಾಡಿಕೊಳ್ಳಲು ಇಚ್ಛಿಸಿರುವೆ.
ನರಕಾಸುರನ ಪ್ರಾಗ್ಜ್ಯೋತಿಷವೆಂಬ ಪಟ್ಟಣಕ್ಕೆ ಶೌರಿಯೊಮ್ಮೆ ಹೋಗಿದ್ದಾಗ ನರಕಾಸುರನು ಸಕಲ ದಾನವರ ಸಹಾಯವನ್ನೂ ಪಡೆದು ಶ್ರೀಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿ ವಿಫಲನಾದನು.
ಅಂತಹವನನ್ನು ನೀನಿಂದು ಬಲಾತ್ಕಾರ ಪೂರ್ವಕವಾಗಿ ಬಂಧಿಸಲು ಇಚ್ಛಿಸಿರುವೆ.
ಅನೇಕ ಸಹಸ್ರಯುಗಗಳ ಆಯುಷ್ಯವನ್ನು ಪಡೆದಿದ್ದ ನರಕಾಸುರನನ್ನು ಶ್ರೀಕೃಷ್ಣನು ಯುದ್ಧದಲ್ಲಿ ಸಂಹರಿಸಿ ಅವನ ಕಾರಾಗೃಹದಲ್ಲಿದ್ದ ಸಾವಿರಾರು ಕನ್ಯೆಯರನ್ನು ಬಿಡಿಸಿಕೊಂಡು ಬಂದು ಯಥಾವಿಧಿಯಾಗಿ ಅವರನ್ನು ವಿವಾಹ ಮಾಡಿಕೊಂಡನು.
ಅಂತಹ ಪರಾಕ್ರಮಿಯಾದ ಶೌರಿಯನ್ನು ನೀನು ಬಂಧಿಸಲು ಇಚ್ಛಿಸಿರುವೆ.
ನಿರ್ಮೋಚನವೆಂಬ ಪಟ್ಟಣದಲ್ಲಿ ಆರುಸಾವಿರ ಮಹಾಸುರರೂ ಶ್ರೀಕೃಷ್ಣನನ್ನು ಬಂಧನದಲ್ಲಿ ಇಡಲು ಸಮರ್ಥರಾಗಲಿಲ್ಲ.
ಅವರೇ ಶ್ರೀಕೃಷ್ಣನಿಂದ ಪಾಶಗಳ ಮೂಲಕವಾಗಿ ಬಂಧಿಸಲ್ಪಟ್ಟರು.
ಅಂತಹಾ ಶೌರಿಯನ್ನು ನೀನು ಬಲಾತ್ಕಾರದಿಂದ ವಶಪಡಿಸಿಕೊಳ್ಳಲು ಯತ್ನಿಸಿರುವೆ.
ಇವನು ಬಾಲಕನಾಗಿದ್ದಾಗಲೇ ಪೂತನಾ ಎಂಬ ರಾಕ್ಷಸಿಯನ್ನೂ, - ಕಂಸನ ಪರಿವಾರದಲ್ಲಿ ಪಕ್ಷಿಯ ರೂಪದಲ್ಲಿದ್ದ ಬಕನೆಂಬ ರಾಕ್ಷಸನನ್ನೂ ಸಂಹರಿಸಿದನು.
ಇಂದ್ರನೊಮ್ಮೆ ಕುಪಿತನಾಗಿ ಪ್ರಪಂಚವೇ ಕೊಚ್ಚಿಹೋಗುವಂತೆ ಮಳೆಗರೆದಾಗ ಗೋವುಗಳ ಸಲುವಾಗಿ ಗೋವರ್ಧನ ಪರ್ವತವನ್ನೇ ತನ್ನ ಕೈಯಿಂದ ಮೇಲೆತ್ತಿ ಗೋವುಗಳನ್ನೂ ಗೋಪಾಲಕರನ್ನೂ ಸಂರಕ್ಷಿಸಿದನು.
*(ಮುಂದುವರಿಯುವುದು)*
***************
*|| ಶ್ರೀಕೃಷ್ಣಾರ್ಪಣಮಸ್ತು ||*
*|| ನಾಹಂ ಕರ್ತಾ ಹರಿಃ ಕರ್ತಾಃ ||*
****************
ಸಂಗ್ರಹ:-
“ಭಾರತ ಧರ್ಶನ" ಪ್ರಕಾಶನದವರ “ಶ್ರೀಮನ್ಮಹಾಭಾರತ” ಗ್ರಂಥದಿಂದ ಆಯ್ದ ಭಾಗ.
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
****************
*13-10-2024.*
****************
🌹🔔🕉🔔🌹
ನುಡಿ ಮುತ್ತು* 📖
*ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ,*
*ಭಯಾನಕ ಹೋರಾಟದ ಫಲವೇ ಹೊರತು ಸುಲಭವಾಗಿ ಸಿಕ್ಕುವಂತಹದ್ದಲ್ಲ.*
🙏 *ಶುಭೋದಯ* 🙏 ಶಕ್ತಿ ಮೀರ್ದ ಪರೀಕ್ಷೆ ವಿಧಿ ನಿಯಮಿಸಿರೆ |
ಯುಕ್ತಿ ಮೀರ್ದ ಪ್ರಶ್ನೆಗಳನು ಕೇಳುತಿರೆ ॥
ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ |
ಸತ್ವದಚ್ಛಿನ್ನ ಝರಿ - ಮಂಕುತಿಮ್ಮ ॥ ॥೫೫೬॥
ವಿಧಿಯು ನಿನಗೆ ಶಕ್ತಿಗೆ ಮೀರಿದ ಪರೀಕ್ಷೆಗಳನ್ನು ಹಲವು ಸಲ ನಿಯಮಿಸುತ್ತದೆ. "ಈ ಕೆಲಸ ನನ್ನಿಂದ ಸಾಧ್ಯವೇ ಇಲ್ಲ, ಆಗೊಲ್ಲಪ್ಪ,ನನ್ನ ಕೈಲಿ ಆಗೋದಿಲ್ಲ" ಅನ್ನುವಂತಹ ಪರೀಕ್ಷೆಗಳಿವು. ಇನ್ನು ಅದು(ವಿಧಿ) ಕೇಳುವ ಪ್ರಶ್ನೆಗಳೋ, ನಮ್ಮ ಉಪಾಯಕ್ಕೆ ನಿಲುಕದ ಪ್ರಶ್ನೆಗಳವು. ಅಂತಹ ಸಮಯದಲ್ಲಿ ನಾವೇನು ಮಾಡಬೇಕು? ಇದು ನಮ್ಮ ಪ್ರಶ್ನೆ. ಸಂದಿಗ್ಧ ಸ್ಥಿತಿ! ಹೇ ಮನುಷ್ಯ, ಆವಾಗ ನೀನು ನಿನ್ನ ಮನಸ್ಸನ್ನು ನಿನ್ನ ಒಳಗಡೆ ತಿರುಗಿಸಿ ನೋಡು. ನೋಡು, ನೋಡಲ್ಲಿ ಅಲ್ಲಿ ನಿನ್ನ ಒಳಗಡೆ ಅವಿರತವಾಗಿ(ಅಚ್ಛಿನ್ನ) ಹರಿಯುತ್ತಿರುವ ಸತ್ವದ ಝರಿ ಕಾಣಿಸುತ್ತದೆ. ಆ ಬತ್ತದ, ಸತ್ವದ ಝರಿಯನ್ನು ನೀನು ಬೇಕಾದ ಹಾಗೆ ಉಪಯೋಗಿಸಿಕೋ - ಮಂಕುತಿಮ್ಮ ॥೫೫೬॥
The Destiny will make you to face thousands of tests which is beyond your power or control. It will ask you such questions that you think it is not possible to solve it. It may be beyond your ideas and imagination. What should do you in such circumstances? Then please turn your mind to your inner side! You will find the purest of pure source of essence(rivulets)inside yourself. This Satva or essence will never go dry and you can make use of this as you wish. ॥ 556||
🌹🔔🕉🔔🌹
*|| ಶ್ರೀಮದ್ಭಗವದ್ಗೀತೆ ||*
🌹🔔🕉🔔🌹
*ಓಂ ದೇವಂ ನಾರಾಯಣಂ ನತ್ವಾ ಸರ್ವದೋಷವಿವರ್ಜಿತಂ|*
*ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ||*
*🌺|| ಅಧ್ಯಾಯ – 18 ||🌺*
*🌺|| ಮೋಕ್ಷಸಂನ್ಯಾಸ ಯೋಗ ||🌺*
*🌺|| ಶ್ಲೋಕ – 42 (664) ||🌺*
*🌺|| ಸಂಚಿಕೆ – 2098 ||🌺*
******************
*|| ಶ್ರೀಭಗವಾನುವಾಚ ||*
*ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ|*
*ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಂ||18-42||*
******************
*ಅನುವಾದ:-*
ಶಮಃ = ಶ್ರೀ ಭಗವಂತನಲ್ಲಿ ಆಸಕ್ತವಾದ ಬುದ್ಧಿಯು, ದಮಃ = ಇಂದ್ರಿಯನಿಗ್ರಹವು, ತಪಃ = ಬ್ರಹ್ಮಚರ್ಯ ಮೊದಲಾದ ಕಾಯಿಕ ವಾಚಿಕ ಮಾನಸಿಕ ತಪಸ್ಸು, ಶೌಚಂ = ಬಾಹ್ಯಶುದ್ಧಿಯು, ಆಭ್ಯಂತರ ಶುದ್ಧಿಯು, ಕ್ಷಾಂತಿಃ = ಕೋಪ ಹುಟ್ಟದಿರುವುದು, ಚ = ಮತ್ತು, ಆರ್ಜವಂ = ಮನಸ್ಸು ವಚನ ದೇಹ ಕರ್ಮ ಇವುಗಳಲ್ಲಿ ವ್ಯತ್ಯಾಸವಿಲ್ಲದೆ ಒಂದೇ ರೀತಿಯಾಗಿ ಇರುವಿಕೆ, ಜ್ಞಾನಂ = ಸಾಮಾನ್ಯ ಜ್ಞಾನವು, ವಿಜ್ಞಾನಂ = ವಿಶೇಷ ಜ್ಞಾನವು, ಆಸ್ತಿಕ್ಯಮೇವ ಚ = ಧರ್ಮಾದಿಗಳನ್ನು ಅನುಷ್ಠಾನ ಮಾಡಿದರೆ ಪರಮಾತ್ಮನಿಗೆ ಪ್ರೀತಿಯಾಗಿ ಪರಲೋಕದಲ್ಲಿ ಸುಖಾದಿರೂಪವಾದ ಪ್ರಯೋಜನವಿದೆ ಎಂಬೀ ಭಾವನೆಯೂ, ಇದು ಮೊದಲಾದ ಕರ್ಮಸಮುದಾಯವು, ಸ್ವಭಾವಜಂ = ಸಹಜವಾದ, ಬ್ರಾಹ್ಮಂ ಕರ್ಮ = ಬ್ರಾಹ್ಮಣರ ಸಂಬಂಧಿಯಾದ ಕರ್ಮವು.
******************
*ಭಾವಾರ್ಥ:-*
*ಗೀತಾ-ತತ್ತ್ವವಿವೇಚನೀ:-*
ಶ್ಲೋಕ 41 ರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ನಿಯತಕರ್ಮಗಳನ್ನು ಹೇಳುವ ಪ್ರಸ್ತಾವನೆ ಮಾಡಿರುತ್ತಾನೆ ಶ್ರೀಕೃಷ್ಣ.
ಹೀಗೆ ಮಾಡಲಾದ ಪ್ರಸ್ತಾವನೆಗನುಸಾರ ಮೊದಲು ಬ್ರಾಹ್ಮಣನ ಸ್ವಾಭಾವಿಕ ಕರ್ಮಗಳನ್ನು ಶ್ಲೋಕ 42 ರಲ್ಲಿ ವಿವರಿಸಿ ಹೇಳುತ್ತಾನೆ ಭಗವಂತ:-
“ಅಂತಃಕರಣವನ್ನು ನಿಗ್ರಹಿಸುವುದು; ಇಂದ್ರಿಯಗಳ ದಮನ ಮಾಡುವುದು; ಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು; ಹೊರಗೊಳಗಿಂದ ಶುದ್ಧನಾಗಿರುವುದು; ಬೇರೆಯವರ ಅಪರಾಧಗಳನ್ನು ಕ್ಷಮಿಸುವುದು; ಮನಸ್ಸು ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿರಿಸುವುದು; ವೇದ, ಶಾಸ್ತ್ರ, ದೇವರು ಮತ್ತು ಪರಲೋಕಾದಿಗಳಲ್ಲಿ ಶ್ರದ್ಧೆಯನ್ನಿಡುವುದು; ವೇದಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನ ಮಾಡುವುದು; ಪರಮಾತ್ಮ ತತ್ತ್ವದ ಅನುಭವ ಪಡೆಯುವುದು – ಇವೆಲ್ಲವೂ ಬ್ರಾಹ್ಮಣನ ಸ್ವಾಭಾವಿಕವಾದ ಕರ್ಮಗಳಾಗಿವೆ”.
*ಪ್ರಶ್ನೆ:-*
“ಆರ್ಜವಮ್” ಎಂದರೇನು?
*ಉತ್ತರ:-*
ಮನಸ್ಸು, ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿ ಇಡುವುದು ಅರ್ಥಾತ್ – ಮನಸ್ಸಿನಲ್ಲಿ ಯಾವುದೇ ಪ್ರಕಾರದ ದುರಾಗ್ರಹ ಮತ್ತು ವಕ್ರತೆ ಇಲ್ಲದಿರುವುದು; ಹೇಗೆ ಮನಸ್ಸಿನ ಭಾವವಿದೆಯೋ ಹಾಗೆಯೇ ಇಂದ್ರಿಯಗಳ ಮೂಲಕ ಪ್ರಕಟಮಾಡುವುದು; ಇದಲ್ಲದೆ ಶರೀರದಲ್ಲಿಯೂ ಕೂಡ ಯಾವುದೇ ಪ್ರಕಾರದ ವಕ್ರತೆ ಇರಿಸದಿರುವುದು ಇವೆಲ್ಲವೂ “ಆರ್ಜವ”ದ ಅಂತರ್ಗತವಾಗಿದೆ.
*ಪ್ರಶ್ನೆ:-*
“ಆಸ್ತಿಕ್ಯಮ್” ಪದದ ಅರ್ಥವೇನು?
*ಉತ್ತರ:-*
“ಆಸ್ತಿಕ್ಯಮ್” ಪದವು ಆಸ್ತಿಕತೆಯ ವಾಚಕವಾಗಿದೆ.
ವೇದ, ಶಾಸ್ತ್ರ, ದೇವರು ಮತ್ತು ಪರಲೋಕ ಇವೆಲ್ಲದರ ಅಸ್ತಿತ್ವದಲ್ಲಿ ಪೂರ್ಣ ವಿಶ್ವಾಸ ಇಡುವುದು; ವೇದ-ಶಾಸ್ತ್ರಗಳ ಮತ್ತು ಮಹಾತ್ಮರ ವಚನಗಳನ್ನು ಯಥಾರ್ಥವಾಗಿ ಒಪ್ಪುವುದು ಮತ್ತು ಧರ್ಮಪಾಲನೆಯಲ್ಲಿ ದೃಢ ವಿಶ್ವಾಸ ಇಡುವುದು – ಇವೆಲ್ಲವೂ ಆಸ್ತಿಕತೆಯ ಲಕ್ಷಣವಾಗಿದೆ.
*ಪ್ರಶ್ನೆ:-*
ಯಾವುದನ್ನು “ಜ್ಞಾನ” ಎಂದು ಹೇಳುತ್ತಾರೆ?
*ಉತ್ತರ:-*
ವೇದಶಾಸ್ತ್ರಗಳನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ-ಅಧ್ಯಾಪನ ಮಾಡುವುದರ ಮತ್ತು ಅವುಗಳಲ್ಲಿ ವರ್ಣಿತ ಉಪದೇಶವನ್ನು ಚೆನ್ನಾಗಿ ತಿಳಿಯುವುದರ ಹೆಸರು ಇಲ್ಲಿ “ಜ್ಞಾನ” ವಾಗಿದೆ.
*ಪ್ರಶ್ನೆ:-*
“ವಿಜ್ಞಾನಮ್” ಪದವು ಯಾವುದರ ವಾಚಕವಾಗಿದೆ?
*ಉತ್ತರ:-*
ವೇದಶಾಸ್ತ್ರಗಳಲ್ಲಿ ಹೇಳಿರುವ ಮತ್ತು ಮಹಾಪುರುಷರಿಂದ ಕೇಳಿರುವ ಸಾಧನೆಗಳ ಮೂಲಕ ಪರಮಾತ್ಮನ ಸ್ವರೂಪದ ಸಾಕ್ಷಾತ್ಕಾರ ಮಾಡಿಕೊಳ್ಳುವುದರ ಹೆಸರು “ವಿಜ್ಞಾನ” ವಾಗಿದೆ.
*|| ಓಂ ತತ್ಸತ್ ||*
*********************
ಕೃಪೆ:-
ಗೀತಾ ಪ್ರೆಸ್, ಗೋರಕಪುರ್ ರವರ ’ಶ್ರೀಮದ್ಭಗವದ್ಗೀತೆ” ಗ್ರಂಥದಿಂದ ಆಯ್ದ ಭಾಗ.
******************
*|| ಕನ್ನಡ ಶ್ಲೋಕ ರೂಪ ||*
(ರಚನೆ: ಶ್ರೀ ವಿಜಯನಾಥ ಭಟ್ಟ. “ಕೌಂಡಿನ್ಯ”.)
*ಭಗವಂತನುಲಿದ*
*ಮನದ ಸಂತುಲನ, ಇಂದ್ರಿಯಗಳ ಹತೋಟಿ, ಜಪ ತಪಸು ನೈರ್ಮಲ್ಯ ಸೈರಣೆ ಹಾವಭಾವ|*
*ನೇರ ಶಾಸ್ತ್ರಗಳರಿವು, ಸಂಶೋಧನೆಯ ದೃಷ್ಟಿ ಭಗವಂತನಲಿ ಆಸ್ಥೆ, ಬ್ರಹ್ಮ ಸ್ವಭಾವ||18-42||”.*
***************
*|| ಕೊಂಕಣಿ ಶ್ಲೋಕ ರೂಪ ||*
(ರಚನೆ: ಶ್ರೀ ಅಶೋಕ ಶ್ರೀಧರ ಭಟ್, ಅಂಕೋಲ.)
*ಶ್ರೀಕೃಷ್ಣಾನ ಮಳ್ಹೆ:-*
*ಶಾಂತಿ ಸಂಯಮ ವಿನಯ ತಪ ಶುಚಿ ಸತ್ಯ ಕ್ಷಮಾ|*
*ಜ್ಞಾನ ವಿಜ್ಞಾನ ಆಸ್ತಿಕ್ಯ ದ್ವಿಜ ಸ್ವಾಭಾವಿಕ ಕರ್ಮಾ||18-42||.*
******************
*ಜಿಜ್ಞಾಸಾ - 593*
*ಪುರುಷೋತ್ತಮ ಯೋಗಾಧ್ಯಾಯದಲ್ಲಿ ಪುರುಷೋತ್ತಮತ್ವ – 10.*
*ಪ್ರಶ್ನೆ:-*
ಕ್ಷರಾಕ್ಷರ ಪುರುಷರಿಗಿಂತ ಬೇರೆ ಆಗಿದ್ದು ಉತ್ತಮನಾಗಿರುವ ಭಗವಂತನು ಪರಮಾತ್ಮಾ ಎಂದು ಶಾಸ್ತ್ರದಲ್ಲಿ ಹೇಳಲ್ಪಟ್ಟಿರುವನೆಂದು ತಿಳಿಸಿದ ಗೀತಾಚಾರ್ಯ ಮುಂದೆ ಯಾರು ಲೋಕತ್ರಯವನ್ನೂ ಪ್ರವೇಶಿಸಿ, ನಿರ್ವಿಕಾರನಾಗಿ ಲೋಕತ್ರಯದ ಧಾರಣೆ-ಪೋಷಣೆಗಳನ್ನು ನಡೆಸಲು ಸಮರ್ಥನಾಗಿರುವನೋ ಅಂತಹವನೆಂದು ಪರಿಚಯಿಸಿಕೊಟ್ಟಿರುವ ಸ್ವಾರಸ್ಯ ಏನು?
*ಉತ್ತರ:-*
ಕ್ಷರಾಕ್ಷರಪುರುಷರಿಗಿಂತ ಅನ್ಯ ಹಾಗೂ ಉತ್ತಮನಾಗಿದ್ದು “ಪರಮಾತ್ಮಾ” ಎಂಬುದಾಗಿ ಶಾಸ್ತ್ರದಲ್ಲಿ ಹೇಳಲ್ಪಟ್ಟಿರುವನೆಂದು ಉದಾಹರಿಸಲಾದ ಶಾಸ್ತ್ರಾರ್ಥಕ್ಕೆ ಅನುಭವದ ಸಂವಾದವನ್ನು ತೋರಿಸುವುದಕ್ಕಾಗಿ, ಲೋಕತ್ರಯವನ್ನು ಪ್ರವೇಶಿಸಿ ಧಾರಣೆ-ಪೋಷಣೆಗಳನ್ನು ನಡೆಸುವ ಪ್ರಮೇಯವನ್ನು ತಿಳಿಸಲಾಗಿದೆ.
ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನವರ ಧಾರಣೆ-ಪೋಷಣೆ ನಮ್ಮಿಂದಲೇ, ಆಯಾ ವ್ಯಕ್ತಿಗಳಿಂದಲೇ ನಡೆಯದೆ, ಕಾಣದ ವ್ಯಕ್ತಿಯೊಬ್ಬನ ಪ್ರಭಾವ ಧಾರಣೆ-ಪೋಷಣೆಗಳ ಮೇಲೆ ಇದೆ ಎಂಬುದು ಎಲ್ಲರಿಗೆ ಅನುಭವಸಿದ್ಧವಾದುದು.
ಕಾಣದ ವ್ಯಕ್ತಿ ಮತ್ತಾರೂ ಅಲ್ಲ; ಪರಮಾತ್ಮನೇ.
ಎಲ್ಲರ ಒಳಹೊಕ್ಕು ಅಂತರ್ಯಾಮಿಯಾಗಿದ್ದು ಯಾರಿಗೂ ಕಾಣಿಸಿಕೊಳ್ಳದಂತೆ ಅವನು ಧಾರಣೆ-ಪೋಷಣೆ ನಡೆಸುವನು.
ಹಾಗೆ ನಡೆಸಲು ಬೇಕಾದ ಸಾಮರ್ಥ್ಯ ಅವನಲ್ಲಿದೆ.
ನಾಶವೇ ಮುಂತಾದ ವಿಕಾರಗಳಿಗೆ ಒಳಗಾಗುವ ಲೋಕತ್ರಯದೊಳಗೆ ಹೊಕ್ಕೂ ತಾನು ಯಾವುದೇ ವಿಕಾರಕ್ಕೆ ಒಳಗಾಗದೆಯೇ ಅದರ ಧಾರಣೆ-ಪೋಷಣೆ ನಡೆಸುವ ಸಾಮರ್ಥ್ಯ ಅವನಲ್ಲಿದೆ – ಎಂದು ಭಗವಂತ ಸಾರಿರುವನು.
ಹೀಗೆ ಹಿಂದೆ ಉದಾಹೃತವಾದ ಶಾಸ್ತ್ರ ಸಂದೇಶಕ್ಕೆ ಅನುಭವದ ಮೆರುಗನ್ನು ಹಚ್ಚುವ ಪ್ರಕ್ರಿಯೆ ಇದಾಗಿದೆ.
*|| ಓಂ ತತ್ಸತ್ ||*
***************
ಕೃಪೆ:-
ತತ್ವ ಸಂಶೋಧನ ಸಂಸತ್: ಶ್ರೀ ಪಲಿಮಾರು ಮಠ: ಉಡುಪಿ – ಇವರಿಂದ ಪ್ರಕಾಶಿಸಲ್ಪಟ್ಟ *“ಗೀತೆಗೊಂದು ಕಡೆಗೋಲು”* ಗ್ರಂಥದಿಂದ ಆಯ್ದ ಭಾಗ.
***************
ಸಂಗ್ರಹ:-
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
***************
*13-10-2024.*
***************
*|| ನಾಹಂ ಕರ್ತಾ ಹರಿಃ ಕರ್ತಾಃ ||*
🌹🔔🕉🔔🌹
9th October 2024
ಬೆಳಗಾವಿ : ಆಗಸ್ಟ ಒಂದರಂದು ಅಪೇಕ್ಷೆ ಕೋರ್ಟ ಪೀಠವು ಎಸ್.ಸಿ ಮೀಸಲಾತಿಯಲ್ಲಿ ಒಳಮೀಸಲಾತಿ ಉಪವರ್ಗಿಕರಿಸಲು ಆಯಾ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ. ಎಂಬುದನ್ನು ಏಳು ನ್ಯಾಯಾಧೀಶರ ಸಂವಿಧಾನಿಕರ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗಾಗಿ ಚರ್ಚಿಸದೆ ಜಾತಿ ಜನಗಣತಿ ವರದಿ ಬಿಡುಗಡೆಯ ನೆಪವೊಡ್ಡಿ ಸುಪ್ರೀಮ್ ಕೋರ್ಟ ನೀಡಿದ ಒಳಮೀಸಲಾತಿ ಜಾರಿಗೆ ಕ್ರಮವಹಿಸದೆ ನ್ವಯಾಂಗನಿಂದನೆಗೆ ಮುಂದಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಇವರ ಸಾಮಾಜಿಕ ನ್ಯಾಯದ ದ್ರೋಹದ ನಡೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತ ಪಡಿಸಿದೆ.
ಕರ್ನಾಟಕ ಸರ್ಕಾರದ ಪ್ರಸ್ತುತ ಕಾಂಗ್ರೆಸ್ ಪಕ್ಷ 2023 ರ ಚುನಾವಚಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಗೋಳಿಸುದಾಗಿ ತನ್ನ 06 ನೇ ಗ್ಯಾರಂಟಿ ಘೋಷಿಶಿಕೊಂಡಂತೆ ಸುಪ್ರೀಮ್ ಕೋರ್ಟ ತಿರ್ಪು ಆದರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಾಗಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ವರ್ಗಿಕರಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಮೂರು ದಶಕಗಳ ಮಿಕ್ಕ ಹೋರಾಟಗಳು ನಡೆದಿವೆ. ನ್ಯಾಯ ಮೂರ್ತಿ ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿಕೊಂಡು 2011 ರ ಜನ ಗಣತಿಯ ಸಂಖ್ಯಾದಾರಗಳು ಮತ್ತು ನ್ಯಾಯ ಮೂರ್ತಿ ನಾಗಮೋಹನ ದಾಸ ಆಯೋಗದ ವರದಿಯಂತೆ ವಿಸ್ತರಿಸಲಾದ ಶೇ 17 ರ ಮೀಸಲಾತಿಯನ್ನು ಬಳಸಿಕೊಂಡು ಉಪವರ್ಗಿಕರಣದ ಸೂತ್ರ ರೂಪಸಿಲಾಗಿದೆ. 2011 ರ ಜನಗಣತಿಯ ವರದಿಯಂತ ಕರ್ನಾಟಕದಲ್ಲಿ ಎಸ್ ಸಿ ಜನಸಂಖ್ಯೆ : 1,04,74,992 ಈಗಿರುವ ಶೇ 17 ರ ಮೀಸಲಾತಿಯನ್ನು ವರ್ಗಿಕರಿಸಿದರೆ ತಲಾ ಆರು ಲಕ್ಷ ಜನಸಂಖ್ಯೆಗೆ ಶೇ 01 ರಷ್ಟು ಮೀಸಲಾತಿ ದೊರಕತ್ತದೆ. ಕರ್ನಾಟಕದಲ್ಲಿ ಎಸ್ ಸಿ/ ಎಸ್ ಟಿ ಮೀಸಲಾತಿಯನ್ನು ಏರಿಕೆ ಮಾಡಿದ್ದು ಜನಸಂಖ್ಯೆಗೆ ಅನುಗುಣವಾಗಿ ಹಾಗೆಯೇ ಉಪವರ್ಗಿಕರಣವನ್ನು ಜನಸಂಖ್ಯೆಗೆ ಅಣುಗುಣವಾಗಿಯೇ ಬೊಮ್ಮಾಯಿ ಸರ್ಕಾರವು ಸಿಪಾರ ಮಾಡಿದೆ. ಈವೆಲ್ಲದರ ಮಾಹಿತಿಯು ಸರ್ಕಾರದ ಬಳಿ ಇದೆ.నా యని NORS ఆయాగగల వరది మత్తు 2011 జనగణతీయ ಸಂಖ್ಯಾಧಾರಗಳೊಂದಿಗೆ ಮನರ್ ಪರಿಶೀಲಿಸಿ ವರದಿ ಕೋಡಲು ರಚಿಸಿದ ಸಚಿವ ಸಂಪು: ಉಪ ಅಂಗಾರ, ಡಾ ಸುಧಾಕರ ರವರನ್ನೊಳಗೊಂಡ ಸಮಿತಿಯು ಅತ್ಯಂತ ವೈಜ್ಞಾನಿಕವಾಗಿ ನ್ಯಾಯಬದ್ದವಾಗಿ ಕಾನೂನು ರೀತಿಯಲ್ಲಿ ವರದಿ ಕೊಟ್ಟಿರುವುದನ್ನು ಪ್ರಸ್ತುತ ಸರ್ಕಾರವು ಮಾನ್ಯ
ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಬಾರದು, ಎಂಬ ಒತ್ತಾಯದ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲವೆ? ಜಾತಿ ಗೀತೆ ಜೋರ ತಂದು ಎಸ್ ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು. ಅನೇಶ್ವ ಕೋರ್ಟ ತಿರ್ಪು ಉಲ್ಲಂಘಣೆಯ ಒಳಹುನ್ನಾರವನ್ನು ಮುಂದುವರೆಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರ್ಕಾರವು ಎದುರಿಸಬೇಕಾಗುತ್ತದೆ.
ಸುಪ್ರಿಂ ಕೋರ್ಟ ತೀರ್ಪನ್ನು ಕೂಡಲೆ ರಾಜ್ಯ ಸರ್ಕಾರವು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳ ಕಚೇರಿ ముందే దినాంశ : 16/10/2024 రెండు ప్రతిభటనయ మూలక మాన్య జిల్లాధికారిగళ ಮುಖಾಂತರ ಮುಖ್ಯ ಮಂತ್ರಿಗಳಿಗೆ ಹಾಗೂ ರಾಜ್ಯ ಪಾಲರುಗಳಿಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮೀತಿ ಕರ್ನಾಟಕ ಜಿಲ್ಲಾ ಸಮೀತಿ ಬೆಳಗಾವಿ ವತಿಯಿಂದ ಮನವಿ ಸಲ್ಲಿಸಲಾಗುತ್ತಿದ್ದು, ಸಮುದಾಯದ ಬಾಂದವರು ಅಂದಿನ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಪತ್ರಿಕಾ ಘೋಷ್ಠಿಯಲ್ಲಿ ರಾಜೇಂದ್ರ ಐಹೊಳೆ, ಚಂದ್ರಕಾಂತ ಕಾದ್ರೋಳಿ, ಆರುಣ ಐಹೋಳೆ. ಬಸವರಾಜ ಸನದಿ, ಮಹಾವೀರ ಐಹೋಳೆ, ಎನ್ ಪ್ರಶಾಂತರಾವ, ಬಾಸ್ಕರ್ ಚನ್ನಮೇತ್ರಿ, ರಮೇಶ ಮಾದರ, ಸತ್ಯಪ್ಪ ಕರವಡೆ, ಬಸವರಾಜ ಕಾಡಾಪೂರೆ, ಯಲ್ಲಪ್ಪ ಕಾಳಪ್ಪನ್ನವರ, ರಾಜು ಜಾಂಗಟೆ, ಯಲ್ಲಪ್ಪ ಒಕ್ಕುಂದ, ಅಜಿತ ಮಾದರ, ಶಂಕರ ದೊಡಮನಿ, ಬಾಬು ಪೂಜೆರಿ, ಸಿದ್ದು ಮೇತ್ರಿ ನಾಗಮ್ಮ ಕರೇಮ್ಮನ್ನವರ, ಸುನಿತಾ ಐಹೊಳೆ, ಕಲ್ಲಪ್ಪ ಈರಗಾರ, ಬಾಬಾಸಾಬ ಕೆಂಚನ್ನವರ, ಜಗಧೀಶ ಹೆಗಡೆ, ಶಿವಾಜಿ ಬೋರೆ, ಕರೇಪ್ಪ ಗುಡೆನ್ನವರ, ಶ್ರವಣಕುಮಾರ ಬೆವಿನಗಿಡದ. ಹಣಮಂತ ಅರ್ದಾವುರ, ಕುಮಾರ ಗಸ್ತಿ, ಸದಾಶಿವ ದೊಡಮನಿ, ಯಶವಂತ ಮೇಲಗಡೆ, ಹಣಮಂತ ನರೆರ, ನಾಗಪ್ಪ ಪಡೆಪ್ಪಗೋಳ, ಪ್ರಕಾಶ ಕೆಳಗೇರಿ, ರಾಜಶೇಖರ ಹಿಡಕಲಕರ, ಮುರುಗೇಶ ಕಂಬನ್ನವರ, ಮಹೇಶ ಕರಮಡಿ, ವಿನಯನಿಧಿ ಕಮಾಲ ವಕೀಲರು, ಉದಯ ರೆಡ್ಡಿ, ರವಿ ದೇವರಮನಿ, ಬಸವರಾಜ ಅರವಳ್ಳಿ, ಮುಂತಾದವರು ಹಾಜರಿದ್ದರು.
7th October 2024
🚩🕉️ ಓಂ ಶ್ರೀ ಗುರುಭ್ಯೋ ನಮಃ 🕉️🚩 ll *ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ* ll
ಓಂ ಸ್ಕಂದಮಾತಾಯೈ ನಮಃ
ಓಂ ಸಮಯಾಯೈ ನಮಃ
ಓಂ ಸಮಯಾಚಾರಾಯೈ ನಮಃ
ಓಂ ಸದಸದ್ಗ್ರನ್ಥಿಭೇದಿನ್ಯೈ ನಮಃ
ಓಂ ಸಪ್ತಕೋಟಿಮಹಾಮನ್ತ್ರಮಾತ್ರ್ಯೈ ನಮಃ
ಓಂ ಸರ್ವಪ್ರದಾಯಿನ್ಯೈ ನಮಃ
ಓಂ ಸಗುಣಾಯೈ ನಮಃ
ಓಂ ಸಂಭ್ರಮಾಯೈ ನಮಃ
ಓಂ ಸಾಕ್ಷಿಣ್ಯೈ ನಮಃ
ಓಂ ಸರ್ವಚೈತನ್ಯರೂಪಿಣ್ಯೈ ನಮಃ 10
ಓಂ ಸಾತ್ವಿಕಾಯೈ ನಮಃ
ಓಂ ಸೌಖ್ಯಾಯೈ ನಮಃ
ಓಂ ಸರ್ವಕಿಲ್ಬಿಷಹನ್ತ್ರ್ಯೈ ನಮಃ
ಓಂ ಸೂಕ್ಷ್ಮಾಯೈ ನಮಃ
ಓಂ ಸೂಮಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸುಧಾಜಲಾಯೈ ನಮಃ
ಓಂ ಸಮುದ್ರರೂಪಿಣ್ಯೈ ನಮಃ
ಓಂ ಸ್ವರ್ಗ್ಯಾಯೈ ನಮಃ ನಮಃ 20
ಓಂ ಸರ್ವಪಾತಕವೈರಿಣ್ಯೈ ನಮಃ
ಓಂ ಸರ್ವಯಾಗಫಲಪ್ರದಾಯೈ ನಮಃ ಓಂ ಸಕಲಾಯೈ ನಮಃ
ಓಂ ಸತ್ಯಸಂಕಲ್ಪಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ಸತ್ಯಪ್ರದಾಯಿನ್ಯೈ ನಮಃ
ಓಂ ಸನ್ತೋಷಜನನ್ಯೈ ನಮಃ
ಓಂ ಸಾರಾಯೈ ನಮಃ
ಓಂ ಸತ್ಯಲೋಕನಿವಾಸಿನ್ಯೈ ನಮಃ
ಓಂ ಸಮುದ್ರತನಯಾರಾಧ್ಯಾಯೈ ನಮಃ 30
ಓಂ ಸಾಮಗಾನಪ್ರಿಯಾಯೈ ನಮಃ
ಓಂ ಸರ್ವಮನ್ತ್ರಮಯ್ಯೈ ನಮಃ
ಓಂ ಸುದತ್ಯೈ ನಮಃ
ಓಂ ಸತ್ಯಸಂಗಾಯೈ ನಮಃ
ಓಂ ಸತ್ಯಸಂಕೇತವಾಸಿನ್ಯೈ ನಮಃ
ಓಂ ಸತ್ಯದೇಹಾಯೈ ನಮಃ
ಓಂ ಸತ್ಯಹಾರಾಯೈ ನಮಃ
ಓಂ ಸತ್ಯವಾದಿನಿವಾಸಿನ್ಯೈ ನಮಃ
ಓಂ ಸತ್ಯಾಲಯಾಯೈ ನಮಃ
ಓಂ ಸ್ಮೃತಾಘಹಾರಿಣ್ಯೈ ನಮಃ 40
ಓಂ ಸಂಸಾರಾಬ್ಧಿತರಂಡಿಕಾಯೈ ನಮಃ
ಓಂ ಸೌಭಾಗ್ಯಸುನ್ದರ್ಯೈ ನಮಃ
ಓಂ ಸನ್ಧ್ಯಾಯೈ ನಮಃ
ಓಂ ಸರ್ವಸಾರಸಮನ್ವಿತಾಯೈ ನಮಃ
ಓಂ ಸಕಾರರೂಪಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವರೂಪಾಯೈ ನಮಃ
ಓಂ ಸನಾತನ್ಯೈ ನಮಃ
ಓಂ ಸಂಸಾರದುಃಖಶಮನ್ಯೈ ನಮಃ
ಓಂ ಸುಷುಮ್ನಾಯೈ ನಮಃ 50
ಓಂ ಸ್ವರಭಾಸಿನ್ಯೈ ನಮಃ
ಓಂ ಸಹಸ್ರದಲಮಧ್ಯಸ್ಥಾಯೈ ನಮಃ
ಓಂ ಸಹಸ್ರದಲವರ್ತಿನ್ಯೈ ನಮಃ
ಓಂ ಸರ್ವೇಶ್ವರ್ಯೈ ನಮಃ
ಓಂ ಸರ್ವದಾತ್ರ್ಯೈ ನಮಃ
ಓಂ ಸರ್ವಮಾತ್ರ್ಯೈ ನಮಃ
ಓಂ ಸರ್ವಸಿದ್ಧಿಪ್ರವರ್ತಿನ್ಯೈ ನಮಃ
ಓಂ ಸರ್ವಾಧಾರಮಯ್ಯೈ ನಮಃ
ಓಂ ಸರ್ವಸಮ್ಪತ್ಪ್ರದಾಯೈ ನಮಃ
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ 60
ಓಂ ಸರ್ವದುಷ್ಟಪ್ರಶಮನ್ಯೈ ನಮಃ
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ
ಓಂ ಸರ್ವಸಿದ್ಧೇಶ್ವರಾರಾಧ್ಯಾಯೈ ನಮಃ ಓಂ ಸರಿದ್ವರಾಯೈ ನಮಃ
ಓಂ ಸರ್ವಮಂಗಲಮಂಗಲಾಯೈ ನಮಃ
ಓಂ ಸುರಸಾಯೈ ನಮಃ
ಓಂ ಸುಪ್ರಭಾಯೈ ನಮಃ
ಓಂ ಸರ್ವದುಃಖಘ್ನ್ಯೈ ನಮಃ
ಓಂ ಸಾಧ್ವ್ಯೈ ನಮಃ
ಓಂ ಸಚ್ಚಿದಾನನ್ದಸ್ವರೂಪಿಣ್ಯೈ ನಮಃ 70
ಓಂ ಸಂಕಲ್ಪರೂಪಿಣ್ಯೈ ನಮಃ
ಓಂ ಸನ್ಧ್ಯಾಯೈ ನಮಃ
ಓಂ ಸಾಲಗ್ರಾಮನಿವಾಸಿನ್ಯೈ ನಮಃ
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ
ಓಂ ಸರ್ವಾರ್ಥಸಾಧನಕರ್ಯೈ ನಮಃ
ಓಂ ಸರ್ವಸಿದ್ಧಿ ಸ್ವರೂಪಿಣ್ಯೈ ನಮಃ
ಓಂ ಸರ್ವಕ್ಷೋಭಣಶಕ್ತ್ಯೈ ನಮಃ
ಓಂ ಸರ್ವವಿದ್ರಾವಿಣ್ಯೈ ನಮಃ
ಓಂ ಸುಕುಲ್ಲಕಾಯೈ ನಮಃ
ಓಂ ಸಮಾನ್ಯೈ ನಮಃ 80
ಓಂ ಸಾಮದೇವ್ಯೈ ನಮಃ
ಓಂ ಸಮಸ್ತಸುರಸೇವಿತಾಯೈ ನಮಃ
ಓಂ ಸರ್ವಸಮ್ಪತ್ತಿಜನನ್ಯೈ ನಮಃ
ಓಂ ಸದ್ಗುಣಾಯೈ ನಮಃ
ಓಂ ಸಕಲೇಷ್ಟದಾಯೈ ನಮಃ
ಓಂ ಸನಕಾದಿಮುನಿಧ್ಯೇಯಾಯೈ ನಮಃ ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಾಧ್ಯಾಯೈ ನಮಃ
ಓಂ ಸರ್ವವ್ಯಾಧಿಮಹೌಷಧಾಯೈ ನಮಃ
ಓಂ ಸೇವ್ಯಾಯೈ ನಮಃ 90
ಓಂ ಸತ್ಯೈ ನಮಃ
ಓಂ ಸೂಕ್ತಯೈ ನಮಃ
ಓಂ ಸ್ಕನ್ದಸುವ್ಯೈ ನಮಃ
ಓಂ ಸಮ್ಪತ್ತರಂಗಿಣ್ಯೈ ನಮಃ
ಓಂ ಸ್ತುತ್ಯಾಯೈ ನಮಃ
ಓಂ ಸ್ಥಾಣುಮೌಲಿಕೃತಾಲಯಾಯೈ ನಮಃ
ಓಂ ಸ್ಥೈರ್ಯದಾಯೈ ನಮಃ
ಓಂ ಸುಭಗಾಯೈ ನಮಃ
ಓಂ ಸುಧಾವಾಸಾಯೈ ನಮಃ
ಓಂ ಸಾಧ್ಯಪ್ರದಾಯಿನ್ಯೈ ನಮಃ 100
ಓಂ ಸದ್ಯುಗಾರಾಧ್ಯನಿಲಯಾಯೈ ನಮಃ ಓಂ ಸಮುತ್ತಿರ್ಣಾಯೈ ನಮಃ
ಓಂ ಸದಾಶಿವಾಯೈ ನಮಃ
ಓಂ ಸರ್ವವೇದಾನ್ತನಿಲಯಾಯೈ ನಮಃ
ಓಂ ಸರ್ವಶಾಸ್ತ್ರರ್ಥಗೋಚರಾಯೈ ನಮಃ ಓಂ ಸಹಸ್ರದಲಪದ್ಮಸ್ಥಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವತೋಮುಖ್ಯೈ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ವಿರಚಿತ ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
5th October 2024
ಸಮೃದ್ಧ ಅಂಗವಿಕಲರ ಸಂಸ್ಥೆಯ ವತಿಯಿಂದ ತಮ್ಮೆಲ್ಲರಿಗೂ ಆದರದ ಸ್ವಾಗತ🙏🏻🙏🏻
Heartly welcome to all💐💐
Organisation Name: Samruddha Foundation for the Disabled
President: Shivanagowda Patil 8792139345
Secretary: Prashant potdar 7760716234
Location: Hindalga road, Jay Nagar, Hanuman nagar, Belgaum - 591108
For more information visit
Samruddhafoundation.org
5th October 2024
ಕಳುವಾದ ಚಿನ್ನಾಭರಣಗಳ ಪತ್ತೆ.
ಮಾಳಮಾರುತಿ ಪೋಲೀಸರ ಸಾಹಸಕ್ಕೆ ಸಾರ್ವಜನಿಕರಿಂದ ಶ್ಲ್ಯಾಘನೆ.
ಅಂಕಲಗಿ ೦೧, ಮಹಾಂತೇಶನಗರದ ನಿವಾಸಿಗಳಾದ ವೈದ್ಯ ದಂಪತಿಗಳ ಮನೆಯಲ್ಲಿ ಕಳ್ಳತನ ಮಾಡಿ ದೋಚಿದ್ದ ಸುಮಾರು ೪ ಲಕ್ಷಕ್ಕೂ ಹೆಚ್ವು ಮೌಲ್ಯದ ಚಿನ್ನಾಭರಣ ಸೇರಿದಂತೆ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳರಿಂದ ವಶಪಡಿಸಿಕೊಂಡು ವೈದ್ಯರಿಗೆ ಮರಳಿಸಿದ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಕಳೆದ ಜುಲೈ ೨೭ ರಂದು ಮನೆ ಬಾಗಿಲಿಗೆ ಕೀಲಿ ಹಾಕಿ ವೈದ್ಯರೀರ್ವರು ಹುಟ್ಟೂರಿಗೆ ತೆರಳಿದ್ದನ್ನು ಗಮನಿಸಿದ್ದ ಚಾಲಾಕಿ ಕಳ್ಳರು ಬೆಳಗಿನ ಜಾವ ಮನೆಯ ಕೀಲಿ ಮುರಿದು ಮನೆಯಲ್ಲಿಟ್ಟಿದ್ದ ಸುಮಾರು ೪ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಹತ್ತಿರದ ಮನೆಯವರಿಂದ ಸುದ್ದಿ ತಿಳಿದ ಮನೆಯ ವೈದ್ಯ ದಂಪತಿಗಳಾದ ಡಾ ವೀಣಾ ಮತ್ತು ಡಾ ವಿಜಯಮಹಾಂತೇಶ ನಿಡಗುಂದಿ ಮಾಳಮಾರುತಿ ಪೊಲೀಸ ಠಾಣೆಗೆ ಕಳ್ಳತನದ ಪ್ರಕರಣ ದಾಖಲಿಸಿದ್ದರು. ಮನೆಯಲ್ಲಿದ್ದ ಸಿ ಸಿ ಕ್ಯಾಮರಾ ದ ಆಧಾರದ ಮೇಲೆ ಪೊಲೀಸರು ಕಳ್ಳರ ಜಾಡು ಹಿಡಿದು ಬೆನ್ನು ಹತ್ತಿ ಯಶಸ್ವಿಯಾಗಿ ಪ್ರಕರಣ ಭೇಧಿಸಿ ಕಳ್ಳರನ್ನು ಹಿಡಿದಿದ್ದಲ್ಲದೆ, ಪ್ರಕರಣ ದಾಖಲಿಸಿ ಅವರಿಂದ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಸೋಮವಾರ ವೈದ್ಯ ದಂಪತಿಗಳಿಗೆ ಮರಳಿಸಿದ್ದಾರೆ. ಕಳುವಾದ ವಸ್ತುಗಳನ್ನು ಮರಳಿಸಿದ ಸಿ ಪಿಐ ಜೆ.ಎಂ ಕಾಲಿಮಿರ್ಚಿ, ಎಸ್ ಐ. ಶ್ರೀಶೈಲ ಹುಳಗೇರಿ ಮತ್ತು ಸಿಬ್ಬಂದಿ ಅವರನ್ನು ವೈದ್ಯರಾದ ಡಾ ವೀಣಾ ಮತ್ತು ಡಾ ವಿಜಯಮಹಾಂತೇಶ ನಿಡಗುಂದಿ ಅಭಿನಂದಿಸಿದ್ದಲ್ಲದೆ, ಧನ್ಯವಾದ ಹೇಳಿದ್ದಾರೆ. ಮಾಳಮಾರುತಿ ಪೊಲೀಸ ಠಾಣಾಧಿಕಾರಿ ಗಳು ಮತ್ತು ಸಿಬ್ಬಂದಿ ಈ ಸಾಹಸಕ್ಕೆ ಮಹಾಂತೇಶ ನಗರ, ಆಂಜನೇಯ ನಗರ ಸೇರಿದಂತೆ ಇತರ ಬಡಾವಣೆಗಳ ಎಲ್ಲೆಡೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪೊಲೀಸ ಠಾಣೆಯ ಸಿಪಿಐ ಜೆ.ಎಮ್. ಕಾಲಿಮಿರ್ಚಿ, ಎಸ್.ಐ. ಶ್ರೀಶೈಲ ಹುಳಗೇರಿ ಸೇರಿದಂತೆ, ಡಾ ವೀಣಾ ರ ತಂದೆ ಕ್ಯಾಪ್ಟನ್ ಬಿಎಲ್ ಪರಗನ್ನವರ ಸೇರಿದಂತೆ ಪೊಲೀಸ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ, ಸುರೇಶ ಉರಬಿನಹಟ್ಟಿ.