Mallamma Nudi
News

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರತಿಷ್ಠಿತ ಮಾಲ್‍ಗಳಲ್ಲಿ ‘ಆಹಾರ ಪದಾರ್ಥಗಳ ಕಲಬೆರಕೆ' ಪತ್ತೆಗೆ ಪರೀಕ್ಷಾ ಕೇಂದ್ರ ಸ್ಥಾಪನೆ

25th October 2024


ಬೆಂಗಳೂರು ಅಕ್ಟೋಬರ್ 24 :ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವತಿಯಿಂದ ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ನಿಯಮ ಮತ್ತು ನಿಬಂಧನೆಗಳನ್ನು ಅನುμÁ್ಠನಗೊಳಿಸಲು ಕ್ರಮವಹಿಸಲಾಗಿರುತ್ತದೆ.

ಆಹಾರ ಪದಾರ್ಥಗಳ ಕಚ್ಚಾ ಸಾಮಾಗ್ರಿಗಳು/ ತಯಾರಾದ ಆಹಾರ ಪದಾರ್ಥಗಳು ಸೇವಿಸಲು ಸುರಕ್ಷಿತವಾಗಿದೆಯೇ ಎಂಬುದನ್ನು ಅವುಗಳನ್ನು ಸ್ಥಳದಲ್ಲಿಯೇ ಖಾತ್ರಿ ಪಡಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಎಫ್‍ಎಸ್‍ಎಸ್‍ಎಐ ರವರು ಅನುಮೋದಿಸಿರುವ ಮ್ಯಾಜಿಕ್ ಬಾಕ್ಸ್ ಮತ್ತು ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಬಳಸಿ ಕೆಲವು ಸುಲಭ ತ್ವರಿತ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ಬೆಂಗಳೂರಿನ ಕೆಲವು ಪ್ರತಿಷ್ಠಿತ ಮಾಲ್‍ಗಳಲ್ಲಿ ಅಕ್ಟೋಬರ್ 25 ರಿಂದ ಪ್ರಾರಂಭಿಸಲು ತೀರ್ಮಾನಿಸಿದೆ.