
23rd February 2025
ಶಹಾಪುರ, ದಲಿತಪರ ಸಂಘಟನೆಗಳ, ಪ್ರಗತಿಪರ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದ್ದ. ಶಹಾಪುರ ಹಳೆ ಬಸ್ ನಿಲ್ದಾಣದಲ್ಲಿನ ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರವರ ಪ್ರತಿಮೆ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಚರ್ಚಿಸಿದ ಒಪ್ಪಿಗೆ ನಿಡಲು ಕಾರಣಿಬೂತರಾದ ಸಜ್ಜನ ರಾಜಕರಾಣಿ ಶೋಷಿತ ವರ್ಗಗಳ ದ್ವನಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಮಂAತ್ರಿ, ಡಾ, ಎಚ್,ಸಿ, ಮಾಹಾದೇವಪ್ಪನವರಿಗೆ ಶಹಾಪುರ ದಲಿತಪರ ಸಂಘಟನೆಗಳ ಮುಖಂಡರು, ದಲಿತ ಹಿರಿಯ ನಾಯಕರು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಹೃದಯಸ್ಪರ್ಶಿ ಗೌರವಿಸಿ ಸನ್ಮಾನಿಸಿದರು,ಈ ಸಮಯದಲ್ಲಿ ಶೋಷಿತ ಸಮಾಜದ ಜಿವಾಳವಾದ ಡಾ, ಡಿ,ಜಿ, ಸಾಗರ, ಶಹಾಪುರ ದಲಿತ ಮುಖಂಡರಾದ ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ನಾಗಣ್ಣ ಬಡಿಗೇರ, ಅಂಭ್ರೆಶ ವಿಬೂತಿಹಳ್ಳಿ, ಮಾಪ್ಪಣ್ಣ ಮದ್ದರ್ಕಿ,ಪಿಎಲ್,ಡಿ, ಬ್ಯಾಂಕ್ ಅಧ್ಯಕ್ಷರಾದ ಗುರುನಾಥ ದೊಡ್ಡಮನಿ, ಶಿವಪುತ್ರ ಜವಳಿ, ಶಂಕರ ಸಿಂಘೆ, ಬಾಬುರಾವ್ ಬೂತಾಳೆ, ಡಾ,ರವಿಂದ್ರನಾಥ ಹೊಸಮನಿ,ಮಹಾದೇವ ದಿಗ್ಗಿ, ಶುಭಾಶ ತಳವಾರ, ದವಲಪ್ಪ ಸಜ್ಜನ, ಮರೆಪ್ಪ ಜಾಲಿಮೆಂಚಿ, ರಾಯಪ್ಪ ಸಾಲಿಮನಿ, ಚಂದ್ರಶೇಶಖರ ಗುತ್ತೆದಾರ, ಮಲ್ಲಪ್ಪ ಬೀರನೂರ, ಮೋನಪ್ಪ ಹೋಮಸನಿ, ಮಾನಪ್ಪ ಗಡ್ಡದ, ಭೀಮರಾಯ ಜುನ್ನಾ, ಪರಶುರಾಮ ರೋಜಾ, ರಾಮಣ್ಣ ಸಾಧ್ಯಾಪುರ, ರವಿ ಬೀರನೂರ, ವೀರೇಶ ಕೊಳೂರ, ಸೇರಿದಂತೆ ನೂರಾರು ಜನ ಅಭಿಮಾನಿಗಳು ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದು ಅಪಾರ ಅಭಿಮಾನದ ಹೂಮಾಲೆಗಳನ್ನು ಹಾಕಿ ಗೌರವಿಸಿದರು,
23rd February 2025
ಭಾಲ್ಕಿ:ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಂಸ್ಕೃತಿಕ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಹಾಗೂ ಅಪ್ಪಾಜಿ ಗುರು ಸೇವಾ ಭಾಗ್ಯ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರುಗಿತು .
ಕಲ್ಬರ‍್ಗಿ,,ಈ ಕರ‍್ಯಕ್ರಮವನ್ನು ಜ್ಯೋತಿ ಬೆಳಗಿಸುವ ರೊಂದಿಗೆ ಜಿಡಗಾ ಮುಗುಳ್ಕೊಡದ ಪಿತಾಧಿಪತಿ ಪರಮಪೂಜ್ಯ ಡಾ. ಮರುಗರಾಜೇಂದ್ರ ಮಹಾಸ್ವಾಮಿಗಳು ಹಾಗೂ ದಕ್ಷಿಣ ಕ್ಷೇತ್ರದ ಮಾನ್ಯ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು
ಸಂಸ್ಕೃತಿಕ ಕರ‍್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಅಡೂರು ಶ್ರೀನಿವಾಸಲು ಅವರು ಚಾಲನೆ ನೀಡಿದರು
ಈ ಸಂರ‍್ಭದಲ್ಲಿ ಸಾಧನೆಗೈದ ಸಾಧಕರಾದ ಜಗನ್ನಾಥ್ ಶೇಖಜಿ ಹಾಗೂ ಹಿರಿಯ ಪತ್ರರ‍್ತ ದೇವಯ್ಯ ಗುತ್ತೇದರವರಿಗೆ ಆತ್ಮೀಯವಾಗಿ ಸನ್ಮಾನಿಸಯಿತು
ಇದೇ ಸಂರ‍್ಭದಲ್ಲಿ. ಬಸವಣ್ಣಪ್ಪ ದೇವರು ಸೊಂಟನೂರ್. ವಿಟ್ಟಪ್ಪ.. ಮುಗಳಕೋಡ ಮಹಾರಾಷ್ಟ್ರಮೈಂದ್ರಗಿಯ ಭಾಗೀರಥಿ, ಆನಂದಪ್ಪ. ಭೂತೇ..ನಾಗಮ್ಮ ಗುರುನಾಥ್ ಕಿವುಡಿ ಬೀದರ್ ಅಪ್ಪಾಜಿ ಗುರು ಸೇವಾ ಭಾಗ್ಯ ಪ್ರಶಸ್ತಿ ಪ್ರಧಾನ ಪೂಜರು ನಡೆಸಿಕೊಟ್ಟರು.
ಪೂಜ್ಯಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು. ಅಲ್ಲಮಪ್ರಭು ಪಾಟೀಲ್ ಅವರು ಹಾಗೂ ಅಡೂರು ಶ್ರೀನಿವಾಸ್ ಅವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸರ‍್ಯಕಾಂತ್ ಮದಾನೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಕರ‍್ಯಕ್ರಮದ ಸ್ವಾಗತ ಮತ್ತು ಪ್ರಾಸ್ತವಿಕವಾಗಿ ಸಂಸ್ಥೆಯ ಕರ‍್ಯರ‍್ಶಿ ರಾಜಕುಮಾರ್ ಉದನೂರ್ ಅವರು ಮಾತನಾಡಿದರು
ಇದೇ ಸಂರ‍್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ‍್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು
ಕರ‍್ಯಕ್ರಮದ ನಿರೂಪಣೆಯನ್ನು ಕುಮಾರಿ ವೈಷ್ಣವಿ. ಹಾಗೂ ಸುರೇಶ್ ಬಡಿಗೇರವರು ನಡೆಸಿಕೊಟ್ಟರು .
14th December 2024
(ಮಲ್ಲಮ್ಮ ನುಡಿ ವಾರ್ತೆ)
(ರಾಜಕುಮಾರ ಆರ್. ಹಡಪದ)
ಚಿಟಗುಪ್ಪ: ತಾಲೂಕಿನ ದೇವಗಿರಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ ಶ್ರೀಶ್ರೀಶ್ರೀ ದುರ್ಗಮ್ಮ ದೇವಿಯ 117ನೇ ವರ್ಷದ ಜಾತ್ರಾ ಮಹೋತ್ಸವ ಇಂದಿನಿಂದ ಡಿಸೆಂಬರ್ 16ರ ವರೆಗೆ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂದು ಶ್ರೀಶ್ರೀಶ್ರೀ ದುರ್ಗಮ್ಮ ದೇವಿ, ಭೂಲಕ್ಷ್ಮಿ ಶ್ರೀ ವೀರಭದ್ರೇಶ್ವರ,ಜೈ ಹನುಮಾನ್, ಬಂಗಾರ ಮೈಸಮ್ಮ, ಅಭಿಷೇಕ ಪೂಜೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ಹಾಗೂ ಮಹೇಬೂಬ್ ಸುಬಾನಿ ಪೂಜೆ ಜರುಗಲಿದೆ.
8th October 2024
ಮಲ್ಲಮ್ಮ ನುಡಿ ವಾರ್ತೆ
ಹುಮನಾಬಾದ್. ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು ಸೇರಿಕೊಂಡು ಹುಮನಾಬಾದ್ ನಗರವನ್ನು ಅಭಿವೃದ್ಧಿ ಮಾಡಬೇಕು.ನಗರದ ಜನರ ಹಿತ ಕಾಯಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ರವರು ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ನೀತಿ ಪಾಠವನ್ನು ಸೊಮುವಾರ ಬೊಧಿಸಿದರು. ಪುರಸಭೆ ಯ ಅಧ್ಯಕ್ಷ, ಉಪಾಧ್ಯಕ್ಷ, ಕೊಠಡಿಗಳನ್ನು ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಗರದ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಸಾರ್ವಜನಿಕ ಕರ ಕೆಲಸಗಳನ್ನು ಮಾಡುವುದರ ಮೂಲಕ ಪಕ್ಷಕ್ಕೆ ಒಳ್ಳೆಯ ಹೇಸರು ತರಬೇಕೆಂದು ಕರೆ ನೀಡಿದರು.
ಕ್ರಿಯಾ ಯೋಜನೆ ತೈಯಾರು ಮಾಡುವ ಅಧಿಕಾರ ನಿಮಗೆ ಇರುತ್ತದೆ. ಶಾದಕರು ಕೂಡ ಒಬ್ಬ ಸಾಮಾನ್ಯ ಸದಸ್ಯರಂತೆ ಇರುತ್ತಾರೆ ಹಾಗಾಗಿ. ನಿಮ್ಮ ವಾರ್ಡ್ ಗಳ ಅಭಿವೃದ್ಧಿ ಗೆ ಪ್ರಥಮ ಅದ್ಯತೆ ನೀಡಬೇಕು. ಪುರಸಭೆ ಗೆ ನಿವೇ ಸುಪ್ರೀಮ್ ಯಾರಿಗೂ ಹೇದರುವ ಬಗ್ಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು,
4th October 2024
ಮಲ್ಲಮ್ಮ ನುಡಿ ವಾರ್ತೆ
ಬೀದರ. ಅ. 03 :- ನವರಾತ್ರಿಯಲ್ಲಿ ಆದಿ ಶಕ್ತಿಯನ್ನು ನವವಿಧಗಳಲ್ಲಿ ಪೂಜಿಸುವ ಮತ್ತು ಸಮೃದ್ಧಿ ಸಂಕೇತವಾಗಿ ಘಟ (ಕಲಶ) ಸ್ಥಾಪನೆಯ ಹಿನ್ನಲೆ ನಗರದ ಮೋಹನ ಮಾರ್ಕೆಟ ಮೈಲುರ ಕ್ರಾಸ್. ಗುಂಪಾ ಸೇರಿದಂತೆ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ. ಬೀದರ ನಗರ ಸರಿದಂತೆ ಜಿಲ್ಲೆಯಲ್ಲಿ ದೇವಿ ಮತ್ತು ದುರ್ಗಾ ಮಾತೆ ದೇವಾಲಯ ಸೇರಿದಂತೆ ನಗರದ ಸರಿದಂತೆ ಜಿಲ್ಲೆಯಾದ್ಯಂತ ಮನೆಯಲ್ಲಿ ಘಟಕ ಸ್ಥಾಪನೆ..
ನವರಾತ್ರಿ ಆಚರಣೆ ಸಿದ್ಧತೆಗಳು ನಡೆದಿದ್ದು, ಇಂದು ಘಟ ಸ್ಥಾಪನೆಯೊಂದಿಗೆ ದೇವಿ ಉಪಾಸನೆ ಆರಂಭಗೊಳ್ಳಲಿದೆ. ಈ ನಿಮಿತ್ತ ಪೂಜೆ ಮತ್ತು ಅಲಂಕಾರಕ್ಕೆ ಬೇಕಾದ ಹೂವು, ಹಣ್ಣು, ಕಬ್ಬು, ಬಾಳೆಗೊನೆ, ವೀಳ್ಯದೆಲೆ . ಮದನಾ ಜೋಳದ ತೆನೆ. ಸೇರಿದಂತೆ ವಿವಿಧ ಪೂಜೆ ಸಾಮಗ್ರಿಗಳು ಖರೀದಿ ಭರಾಟೆ..ಶುದ್ಧ ಮಣ್ಣಿನ ಪದರಗಳನ್ನು ಹಾಕಿ, ಏಳು ಬಗೆಯ ಧಾನ್ಯಗಳನ್ನು ಬಿತ್ತಿ, ವೀಳ್ಯದೆಲೆ, ನಾಣ್ಯ, ಮಾವಿನ ಎಲೆ, ತೆಂಗಿನಕಾಯಿ ಇಟ್ಟು ಕಲಶ ಸ್ಥಾಪನೆ ಮಾಡಲಾಗುತ್ತದೆ.
ಕಳೆದ ವಾರ ಅಡುಗೆ ಎಣ್ಣೆ ದರ ₹90 ಪ್ರತಿ ಲೀಟರ್ ಇತ್ತು. ಈ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ ₹125ರಂತೆ ಮಾರಾಟವಾಗುತ್ತಿದೆ.. ಸಾಮಾನ್ಯವಾಗಿ ₹100ಕ್ಕೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಸೇಬು ಪ್ರತಿ ಕೆ.ಜಿಗೆ ₹150, ಪಚ್ಚ ಬಾಳೆಣು ₹70 ಡಜನ್, ಸೀತಾಫಲ ₹10ಕ್ಕೆ ಒಂದರಂತೆ, ದಾಳಿಂಬೆ ಕೆ.ಜಿಗೆ ₹240ರಂತೆ ಮಾರಾಟವಾದವು..
4th October 2024
ಮಲ್ಲಮ್ಮ ನುಡಿ ವಾರ್ತೆ
ಬೀದರ. ಅ. 03 : 2024-25 ನೇ ಸಾಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಕೊರ್ಟ ಆದೇಶದ ಪ್ರಕಾರ ಕಾಲೇಜು ಶಿಕ್ಷಣ ಇಲಾಖೆ ಯು,.ಜಿ.ಸಿ ನಿಯಮಾವಳಿಗಳನ್ನು ಅತಿಥಿ ಉಪನ್ಯಾಸಕರ ನೇಮಕಾತಿಗಳಲ್ಲಿ ಅನುಸರಿಸಿದ್ದರೆ ಸುಮಾರು 5000 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳಿದುಕೊಂಡು ಬೀದಿಗೆ ಬರಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಈ ನಿಯಮ ಅತಿಥಿ ಉಪನ್ಯಾಸಕರಿಗೆ ಅನುಸರಿಸದಿರಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಕಾoತ ನಾರಾಯಣಪುರ ಅವರು, ವರದಿ ಕರ್ನಾಟಕ ರಾಜ್ಯದಲ್ಲಿ ಸುಮಾರು ೪೩೦ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು ಸುಮಾರು 11000 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು 15- 20 ವರ್ಷದಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತಾರೆ ಅದರಲ್ಲಿ ಶೇ ೫೦% ರಷ್ಟು ಆತಥಿ ಉಪನ್ಯಾಸಕರು ನೀಟ್, ಸೆಟ್, ಎಂಫಿಲ್, ಪಿ.ಹೆಚ್.ಡಿ ಪದವಿಗಳನ್ನು ಯು.ಜಿ.ಸಿ ಅನಿಯಮನುಸಾರ ಅರ್ಹತೆ ಹೊಂದಿದವರಾಗಿದ್ದಾರೆ. ಆದರೆ ದಿಢಿರನೆ ಸರ್ಕಾರ ಯು.ಜಿ.ಸಿ ಅನಿಯಮದ ಪ್ರಕಾರ ಅತಿಥಿ ಉಪನ್ಯಾಸಕರ ನೇಮಕಾತಿ ಸರ್ಕಾರ ಮಾಡಿಕೊಳ್ಳಲು ಮುಂದಾದರೆ ಶೆ ೫೫% ರಷ್ಟು ಅಂದರೆ 5800 ಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬರುತ್ತವೆ. ಸಾಕಷ್ಟು ಸಂಕಷ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕೋರ್ಟ ಆದೇಶದ ಅನ್ವಯ, ಕಾಲೇಜು ಶಿಕ್ಷಣ ಇಲಾಖೆ ಯು.ಜಿ.ಸಿ ನಿಯಮಾವಳಿ ಕಟ್ಟು ನಿಟ್ಟಾಗಿ ಪಾಲಿಸಿದರೆ, ಸಾಕಷ್ಟು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಸರಕಾರ ಕೊಡುವ ಕಡಿಮೆ ಸಂಭಾವನೆಯಲ್ಲಿ ಕೆಲಸ ಮಾಡುತ್ತಾ ಬಂದಿರುವ ಉಪನ್ಯಾಸಕರ ಸ್ಥಿತಿ ಶೋಚನಿಯವಾಗಲಿದೆ. ಸಾಕಷ್ಟು ಜನರ ಅತಿಥಿ ಉಪನ್ಯಾಸಕರ ವಯಾಮಿತಿ ೫೦-೫೫ ವರ್ಷಗಳು ದಾಟಿವೆ. ಇನ್ನು ಹಲವು ಅತಿಥಿ ಉಪನ್ಯಾಸಕರುಗಳು ಸರಕಾರದ ಯಾವುದೆ ಹುದ್ದೆಗಳನ್ನು ಕರೆದರು ಅರ್ಜಿ ಸಲ್ಲಿಸಲು ವಯಾಮಿತಿ ಮಿರಿದೆ, ಇದರಿಂದ ಸುಮಾರು ೫೮೦೦ ಕ್ಕಿಂತ ಹೆಚ್ಚು ಕುಟುಂಬಗಳ/ಅತಿಥಿ ಉಪನ್ಯಾಸಕ ವೃತ್ತಿಯನ್ನು ಅವಲಂಬಿಸಿರುವ ಕುಟುಂಬಗಳು ಬೀದಿಗೆ ಬೀಳುತ್ತವೆ. ಈ ವೃತ್ತಿ ಬಿಟ್ಟು ಬೇರೆ ವೃತ್ತಿಗಳಲ್ಲಿ ತೊಡಗಲು ಸಾದ್ಯವೆ ಇಲ್ಲ ಎಂದರು.
ಕಳೆದ ಇದೆ ವರ್ಷದ ಆಗಸ್ಟ ೬ ರಂದು ಸರಕಾರ ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಗೊಳಿಸಿದೆ, 10 ತಿಂಗಳ ವರೆಗೆ ಪ್ರತಿ ವರ್ಷ ನೇಮಾಕಾತಿ ಮಾಡಿಕೊಳ್ಳುವ ಅತಿಥಿ ಉಪನ್ಯಾಸಕರಿಗೆ ಸರಕಾರ ವೇತನ ಹೆಚ್ಚಿಸಿ ಹಲವಾರು ಬೇಡಿಕೆಗಳನ್ನು ಈಡೆರಿಸಲು ಮುಂದಾಗಿದೆ ಆದರೆ ಹಲವಾರು ಕನಸುಗಳನ್ನು ಕಟ್ಟಿಕೊಂಡು ಅತಿಥಿ ಉಪನ್ಯಾಸಕರು ಹಲವಾರು ವರ್ಷದ ಸೇವಾನುಭವ ಇದೆ ಆದರೆ ಯು.ಜಿ.ಸಿ ಅರ್ಹತೆ ಹೊಂದಿರುವುದಿಲ್ಲ ಎಂಬ ಕಾರಣಕ್ಕಾಗಿ ಇವರನ್ನು ಕೈ ಬಿಟ್ಟರೆ ಸಾಕಷ್ಟು ಜನರ ಬದಕು ಆತಂತ್ರ ಸಂಕಷ್ಟಗಳಿಗೆ ಸಿಲುಕಬೇಕಾಗುತ್ತದೆ ಎಂದರು.
ಕೊರ್ಟ ಆದೇಶ ಪಾಲಿಸುವ ಸರಕಾರಗಳು ಈ ಹಿಂದೆ ಕೊರ್ಟ ಆದೇಶ ಮಾಡಿದ. 10 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಸೇವಾನುಭವ ಆಧಾರದ ಮೇಲೆ ಖಾಯಂ ಮಾಡಿ ಎಂದು ಹೇಳಿದೆ, ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಲು ಹೇಳಿದೆ. ರಾಷ್ಟ್ರದಲ್ಲಿ ಯು.ಜಿ.ಸಿ ನಿಯಮ ಒಂದೆ ಇವೆ ಆದರೆ ಕೆಲವು ರಾಜ್ಯಗಳಲ್ಲಿಯು ಯು.ಜಿ.ಸಿ ಅರ್ಹತೆ ಹೊಂದಿರುವವರು ಹಾಗು ಯು.ಜಿ.ಸಿ ಅನರ್ಹತೆ ಹೊಂದಿದ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸಲು ಪಂಜಾಬ, ಹರಿಯಾಣ, ದೇಹಲಿ, ಇತ್ಯಾದಿ ಕಡೆಗಳಲ್ಲಿ ಒಂದೇ ನಿಯಮ ಇರುವಾಗ ನಮ್ಮ ರಾಜ್ಯದಲ್ಲಿ ಬೇರೆ ನಿಯಮ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಯು.ಜಿ.ಸಿ ನಿಯಮ ಬದಿಗಿರಿಸಿ, ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕೆಂದು ನಾರಾಯಣಪುರ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕರ ಹೊರಾಟ ಸಮಿತಿ ಪದಾಧಿಕಾರಿಗಳಾದ ಡಾ.ಏಕನಾಥ ಹಲಸೆ, ಜಾವಿಧ, ಡಾ.ಚೇತನ, ಶಾಮಸುಂದರ, ವನಿತಾಬಾಂಗೆ, ಬಂಡೆಪ್ಪ ಬಾಲಕಂದೆ ಸಂದೀಪ ಕುಲಕರ್ಣಿ ಮಲ್ಲಿಕಾರ್ಜುನ ಹಾಗೂ ಇತರರು ಉಪಸ್ಥಿತರಿದ್ದರು.
3rd October 2024
3rd October 2024
ಮಲ್ಲಮ್ಮ ನುಡಿ ವಾರ್ತೆ
ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಆ್ ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಪುರಸ್ಕೃತರಿಗೆ ಚಹಾಕೂಟ ಮತ್ತು ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಉದ್ಘಾಟಿಸಲಿದ್ದು, ಇಸ್ರೋ ಮಾಜಿ ಮುಖ್ಯಸ್ಥರಾದ ಎ.ಎಸ್.ಕಿರಣ್ ಕುಮಾರ್ ಅಭಿನಂದಿಸಿ ಮಾತನಾಡಲಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟೆ, ಕೆಯುಡಬ್ಲೂೃಜೆ ಪ್ರಧಾನ ಕಾರ್ಯದರ್ಶಿ ಜಿ.ವಿ.ಲೋಕೇಶ ಭಾಗವಹಿಸಲಿದ್ದಾರೆ.
ಆ.3 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿವಾಜಿ ಎಸ್. ಗಣೇಶನ್, ಶ್ರೀಕಾಂತಾಚಾರ್ಯ.ಆರ್.ಮಣೂರ, ಡಾ.ಆರ್.ಪೂರ್ಣಿಮಾ, ಪದ್ಮರಾಜ ದಂಡಾವತಿ, ಡಾ.ಸರಜೂ ಕಾಟ್ಕರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ರಾಜೀವ್ ಕಿದಿಯೂರ, ಇಂದೂಧರ ಹೊನ್ನಾಪುರ, ಎನ್.ಮಂಜುನಾಥ, ಚಂದ್ರಶೇಖರ್ ಪಾಲೆತ್ತಾಡಿ, ಶಿವಲಿಂಗಪ್ಪ ದೊಡ್ಡಮನಿ ಅವರನ್ನು ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
2nd October 2024
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,1-ನಗರದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಕುಮಾರೇಶ್ವರ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕ್ಲಿನಿಕ್ ಪ್ರಾರಂಭಿಸಲಾಗಿದೆ.
ಕಾಲೇಜಿನ ಪ್ರಾಚರ‍್ಯೆ ಡಾ.ಭುವನೇಶ್ವರಿ ಯಳಮೇಲಿ, ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರಿಗೆ ಕ್ಲಿನಿಕ್ ಆರಂಭಿಸುವುದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ಕನಸಾಗಿತ್ತು. ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಅವರ ಮಾರ್ಗದರ್ಶನದಲ್ಲಿ ಇಂದು ಅದು ಸಾಕಾರಗೊಂಡಿದೆ ಎಂದರು.
ಈ ಕ್ಲಿನಿಕ್ ಪ್ರತಿ ತಿಂಗಳು ಮೊದಲನೇ ಬುಧವಾರ ಹಿರಿಯ ನಾಗರಿಕರಿಗೆ ದೇಹದ ಎಲ್ಲಾ ತರಹದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಡಾ.ಕಾಡಪ್ಪ ಜಾಲಿಗಿಡದ ಮತ್ತು ಡಾ.ಸಚಿನ್ ದೇಸಾಯಿ ಅವರ ಮೇಲ್ವಿಚಾರಣೆಯೊಂದಿಗೆ ಈ ಕ್ಲಿನಿಕ್ ಕಾರ್ಯ ಮಾಡಲಿದೆ. ಜೊತೆಗೆ ನುರಿತ ವೈದ್ಯರ ತಂಡ ವೃದ್ಧರ ಸೇವೆಗೆ ನಿಲ್ಲಲಿದೆ ಎಂದು ಡಾ.ಭುವನೇಶ್ವರಿ ಯಳಮಲಿ ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಡಾ.ಎ.ಬಿ.ಚೌಧರಿ, ಡಾ.ಶಿವಾಜಿರಾವ್ ಬ್ರಿಡ್, ಜಯಣ್ಣ ಮತ್ತು ತಿಪ್ಪವ್ವ ಅವರನ್ನು ಸನ್ಮಾನಿಸಲಾಯಿತು.
ಕುಮಾರೇಶ್ವರ ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಗೋಪಾಲ ಬಜಾಜ, ಡಾ.ನವೀನ ಚರಂತಿಮಠ, ಡಾ.ಅಶೋಕ ಡೋರ್ಲೆ, ಡಾ.ನಾರಾಯಣ ಮುತಾಲಿಕ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.
29th September 2024
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,೨೮-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಸಮೀಕ್ಷಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಗರದ ಕಾಲೇಜ್ ಆಫ್ ನರ್ಸಿಂಗ್‌ನ ಸಭಾಭವನದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರೇಬೀಸ್ ಮಾರಣಾಂತಿಕವಾಗಿದ್ದು ನಿರ್ಲಕ್ಷ ವಹಿಸಬಾರದು. ಮೂರು ಹೆಜ್ಜೆಗಳನ್ನು ಅನುಸರಿಸಬೇಕು. ಈ ವರ್ಷದ ಘೋಷಣೆ ರೇಬೀಸ್ ಗಡಿಗಳನ್ನು ಮೀರಿ ಮುಂದುವರಿಯೋಣ ಎಂದರು.
ಜಿಲ್ಲಾ ಸಮೀಕ್ಷಾಧಿಕಾರಿ ಡಾ.ದಯಾನಂದ ಕರೆಣ್ಣವರ ಮಾತನಾಡಿ, ಫ್ರೆಂಚ್ ವೈದ್ಯ ವಿಜ್ಞಾನಿ ಲೂಯಿ ಪ್ಯಾಶ್ಚರ್ ರವರು ರೇಬೀಸ್ ಕಾಯಿಲೆಗೆ ಲಸಿಕೆ ಕಂಡು ಹಿಡಿದ್ದಾರೆ. ಅವರು ೨೮ ಸೆಪ್ಟಂಬರ ೧೮೯೫ ರಂದು ಮರಣ ಹೊಂದಿದರು. ಅವರ ಸ್ಮರಣೆಗಾಗಿ ಪ್ರತಿ ವರ್ಷ ಸೆಪ್ಟಂಬರ ೨೮ ರಂದು ಜಗತ್ತಿನಾದ್ಯಂತ ಶಾಲೆ ಕಾಲೇಜುಗಳಲ್ಲಿ ಮತ್ತು ಸಮುದಾಯದಲ್ಲಿ ರೇಬೀಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ೨೦೩೦ಕ್ಕೆ ರೇಬೀಸ್ ರೋಗವನ್ನು ಶೂನ್ಯಗೊಳಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ ಸಂಕ್ರಿ ಮಾತನಾಡಿ, ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ರೇಬೀಸ್ ಲಕ್ಷಣಗಳ ಬಗ್ಗೆ ಮತ್ತು ನಿಯಂತ್ರಣ ಕ್ರಮ ಚಿಕಿತ್ಸೆ ಬಗ್ಗೆ ತಿಳಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರರ(ಪರಿಸರ) ಸತೀಶ ಖಜ್ಜಿಡೋಣಿ ಮಾತನಾಡಿ ನಗರ ಪ್ರದೇಶದಲ್ಲಿ ಬೀದಿ ನಾಯಿ ಮತ್ತು ಸಾಕು ನಾಯಿಗಳ ಬಗ್ಗೆ ನಗರ ಪರಿಸರ ಸ್ವಚ್ಛತೆ ಬಗ್ಗೆ ತಿಳಿಸಿದರು.
ಜಿಲ್ಲಾ ಸೋಂಕು ಶಾಸ್ತçಜ್ಞರಾದ ಡಾ.ಸೀಮಾ ಹುದ್ದಾರ ಅವರು ರೇಬೀಸ್ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸರಸ್ವತಿ ಮಾಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಶಿನ್ನೂರು, ಕಾಲೇಜ್ ಆಫ್ ನರ್ಸಿಂಗ್ ಪ್ರಾಚಾರ್ಯ ಡಾ.ಉತ್ತಲಭಾಷಾ ಧಂದರಗಿ, ಡಾ.ಸುರೇಶಗೌಡ ಪಾಟೀಲ ಸೇರಿದಂತೆ ಆಶಾ ಕಾರ್ಯಕರ್ತರು, ಕಾಲೇಜಿನ ಉಪನ್ಯಾಸಕರು, ಎಲ್ಲ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಪಿ.ನಾಯ್ಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.