
13th March 2025
ಮಲ್ಲಮ್ಮ ನುಡಿ ವಾರ್ತೆ
ಕಮಲನಗರ: ತಾಲೂಕಿನ ತೋರಣಾ-ಕಮಲನಗರ ಮುಖ್ಯ ರಸ್ತೆ ಆರು ವಾರಗಳಲ್ಲಿ ದುರುಸ್ತಿಗಾಗಿ ಸೂಕ್ತ ಕ್ರಮ ಕೈಗೊಳ್ಳಲು ದಿನಾಂಕ: ೨೮-೦೧-೨೦೨೫ ರಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಬೆಂಗಳೂರಿನಿಂದ ನಿರ್ದೇಶನವಾಗಿರುತ್ತದೆ.
ಸಮಾಜ ಸೇವಕ ಗುರುನಾಥ ವಡ್ಡೆಯವರು ಕಮಲನಗರ ತಾಲೂಕಿನ ತೋರಣಾ ಗ್ರಾಮದಿಂದ ಕಮಲನಗರಕ್ಕೆ ಹೋಗುವ ಮುಖ್ಯ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ಗುಂಡಿಗಳು ತುಂಬಿಕೊಂಡಿವೆ, ಇದರಿಂದ ಸದರಿ ರಸ್ತೆಯನ್ನು ದುರುಸ್ತಿ ಮಾಡಿ, ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕೆಂದು ಕೋರಿ, ದಿನಾಂಕ: ೧೨-೧೦-೨೦೨೩ ಹಾಗೂ ೨೩-೧೦-೨೦೨೪ ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸದರಿ ಮನವಿಗೆ ಸ್ಪಂದಿಸದಿದ್ದಾಗ ಗುರುನಾಥ ವಡ್ಡೆಯವರು
ದಿನಾಂಕ: ೨೦-೦೧-೨೦೨೫ ರಂದು ಮಾನ್ಯ ಉಚ್ಛ ನ್ಯಾಯಾಲಯ, ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ನಡೆದು, ಹೈಕೋರ್ಟ್ನಿಂದ ದಿನಾಂಕ: ೨೮-೦೧-೨೦೨೫ ರಂದು ಆದೇಶವಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಲೋಕೋಪಯೋಗಿ ಇಲಾಖೆ ಬೆಂಗಳೂರು, ಮುಖ್ಯ ಅಭಿಯಂತರರು ಲೋಕೋಪಯೋಗಿ ಇಲಾಖೆ ಕಲಬುರಗಿ, ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕಲಬುರಗಿ, ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಬೀದರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಸಂತಪೂರ ಇವರು ಪ್ರತಿವಾದಿಯಾಗಿರುತ್ತಾರೆ. ಅರ್ಜಿದಾರರಾದ ಗುರುನಾಥ ವಡ್ಡೆಯವರ ಪರವಾಗಿ ನ್ಯಾಯವಾದಿ ಜೆ.ಆರ್. ಮೋಹನ ಅವರು ವಾದ ಮಂಡಿಸಿರುತ್ತಾರೆ
13th March 2025
ಬೀದರ. ಮಾ. 12 :- ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಪ್ರಯುಕ್ತ ಶಾಂತೀಶ್ವರಿ ಸಂಸ್ಥೆಗಳ ಸಮೂಹದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ಉಪ್ಪಿಟ್ಟು, ಶಿರಾ, ಮಜ್ಜಿಗೆ ಹಾಗೂ ಬಾಳೆಹಣ್ಣು ವಿತರಿಸಲಾಯಿತು.
ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ನೌಬಾದ್ನ ಜ್ಞಾನಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯ, ಶಾಂತೀಶ್ವರಿ ಸಮೂಹದ ಮುಖ್ಯಸ್ಥರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಜಯಂತಿ ಯುಗಮಾನೋತ್ಸವ ಆಚರಣೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಮುಖಂಡರಾದ ರವೀಂದ್ರ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ವರದಯ್ಯ ಸ್ವಾಮಿ, ಪ್ರವೀಣ್ ಸ್ವಾಮಿ, ನಾಗರಾಜ ಮಠ, ಮಹೇಶ್ ಪಾಟೀಲ, ವಿಘ್ನೇಶ್ ಸ್ವಾಮಿ, ಮಹಾರುದ್ರ ಡಾಕುಳಗಿ, ರಾಕೇಶ್ ಮಠಪತಿ, ನಾಗಯ್ಯ ಸ್ವಾಮಿ, ರೇಣಸಿದ್ದಯ್ಯ ಮಠಪತಿ, ಶಿವಶಂಕರ ಬೆಳಮಗಿ ಮತ್ತಿತರರು ಇದ್ದರು.
13th March 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.12-ಮಾನವೀಯ ಮೌಲ್ಯಗಳನ್ನು, ಆಚಾರ ವಿಚಾರಗಳನ್ನು ಜಗತ್ತಿಗೆ ಸಾರಿದ ಮಹಾತ್ಮರ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೇಣುಕಾಚಾರ್ಯರಂತ ಮಹಾತ್ಮರ ಧನಾತ್ಮಕ ಚಿಂತನೆಯಿAದ ವೀರಶೈವ ಧರ್ಮ ಸಂಸ್ಥಾಪನೆಗೊAಡಿದ್ದು, ಒಬ್ಬ ಮಹಾತ್ಮನಿಂದ ಸಮಾಜಕ್ಕೆ, ದೇಶಕ್ಕೆ ಹಾಗೂ ನಾಡಿಗೆ ಒಳ್ಳೆಯದಾಗಿದ್ದರೆ ಅಂತಹ ಮಹಾತ್ಮರ ಜಯಂತಿ ಆದರ್ಶಪ್ರಾಯವಾಗಿರುತ್ತದೆ ಎಂದರು.
ರೇಣುಕಾಚಾರ್ಯರು ತಮ್ಮ ಜೀವನವನ್ನೇ ಸಮಾಜ ಸುಧಾರಣೆಗಾಗಿ ಸವಿಸಿದ್ದು, ಇಂದು ಭೌತಿಕವಾಗಿ ನಮ್ಮ ಬಳಿ ಅವರು ಇರದಿದ್ದರೂ ಅವರು ಹಾಕಿದ ಮಾರ್ಗ ಇಂದು ನಾವೆಲ್ಲ ಅನುಸರಿಸುತ್ತಿದ್ದೇವೆ. ರೇಣುಕಾಚಾರ್ಯರಿಂದ ಐದು ಪೀಠಗಳು ಸ್ಥಾಪನೆಗೊಂಡಿದ್ದು, ಅವು ಇಂದು ಪಂಚಾಚಾರ್ಯರ ಪೀಠಗಳಾಗಿದ್ದು, ಪಂಚ ತತ್ವದಿಂದ ಕೂಡಿದ ಮಠಗಳು ಇಂದು ಅಲ್ಲಲ್ಲಿ ಧರ್ಮ ಸಂಸ್ಥಾಪನಾ ಕಾರ್ಯ ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ತೆಲಂಗಾಣದ ಕೊಲ್ಲಿಪಾಕಿಯಲ್ಲಿ ಸ್ವಯಂಭೂ ಸೋಮೇಶ್ವರ ಮಹಾಲಿಂಗದಿAದ ಉದ್ಭವಿಸಿದ ರೇಣಕಾಚಾರ್ಯರು ಕೃತಾಯುಗದಲ್ಲಿ ಏಕಾಕ್ಷರಿಯಾಗಿ, ತೇತ್ರಾಯುಗದಲ್ಲಿ ಏಕ ವಕ್ಕರಾಗಿ, ದ್ವಾಪರದಲ್ಲಿ ರೇಣುಕರಾಗಿ, ಕಲಿಯುಗದಲ್ಲಿ ರೇವಣಸಿದ್ದರಾಗಿ ಅವತರಿಸಿ ಅನಿಮಾದಿ ಅಷ್ಟ ಸಿದ್ದಿಗಳನ್ನು ಮಾಡಿಕೊಂಡ ಮಹಾತ್ಮರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ನಮ್ಮ ಸನಾತನ ಹಿಂದು ಧರ್ಮದಲ್ಲಿ ಪ್ರತಿಯೊಂದಕ್ಕೂ ಅರ್ಥವಿದ್ದು, ಆಚರಣೆಯಲ್ಲಿ ವಿವಿಧತೆ ಇದೆ. ಪ್ರತಿಯೊಬ್ಬರ ಮನೆಯಲ್ಲಿ ಜಗುಲಿ ಇದ್ದು, ಜಂಗಮ, ಗುರು, ಲಿಂಗ ಎಂಬುದು ಅದರ ಅರ್ಥವಾಗಿದ್ದು, ಇಂತಹ ಸತ್ಯವನ್ನು ನಾಡಿಗೆ ತಿಳಿಸಿದವರು ರೇಣುಕಾಚಾರ್ಯರು ಎಂದರು. ಗುಳೇದಗುಡ್ಡ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಸಂಗಯ್ಯ ಗಣಾಚಾರಿ ರೇಣುಕಾಚಾರ್ಯರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯದ ಮುಖಂಡರಾದ ವೀರಯ್ಯ ಚೌಕಿಮಠ, ಕುಮಾರ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿAಗ ದೇಸಾಯಿ ನಿರೂಪಿಸಿದರು.
13th March 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.12-ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಹತ್ಯೆ ಖಂಡಿಸಿ ಬಾಗಲಕೋಟೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಕುರಿಗಾರರು ಮತ್ತು ಪಶುಪಾಲಕರ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಶರಣಪ್ಪನನ್ನು ಹತ್ಯೆ ಮಾಡಿರುವ ಕುರಿಗಳ್ಳ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರಲ್ಲದೇ, ಕುರಿಗಾಹಿಗಳ ಮೇಲಾಗುವ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24 ರ ಬಜೆಟ್ನಲ್ಲಿ ಕುರಿಗಾಹಿಗಳ ರಕ್ಷಣೆಗೆ ಕಾಯ್ದೆ ಜಾರಿಗೆ ತರುವುದಾಗಿ ಹೇಳಿದ್ದರೂ ಈತನಕ ಅದು ಸಾಧ್ಯವಾಗಿಲ್ಲ. ಈಗಲಾದರೂ ಸಿದ್ದರಾಮಯ್ಯನವರು ಕಾಯ್ದೆ ಜಾರಿಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕೊಲೆಗೀಡಾದ ಶರಣಪ್ಪ ಜಮ್ಮನಕಟ್ಟಿ ಕುಟುಂಬಕ್ಕೆ ಸರಕಾರ ಆರ್ಥಿಕ ನೆರವು ನೀಡಬೇಕು ಎಂದರು.
ನಂತರ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ನೀಡಿದರು. ಪ್ರತಿಭಟನೆಯಲ್ಲಿ ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಡಿ.ಬಿ.ಸಿದ್ದಾಪೂರ, ಮುತ್ತಪ್ಪ ಕೋಮಾರ, ವೀರಣ್ಣ ಹಳೇಗೌಡರ, ಮಲ್ಲು ವಡವಡಗಿ, ಶ್ರೀನಿವಾಸ ಬಳ್ಳಾರಿ, ರಾಮು ರಾಕುಂಪಿ, ಯಲ್ಲಪ್ಪ ಹೆಗಡೆ, ರಾಘು ಯಾದಗಿರಿ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದರು.
13th March 2025
ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ಕಛೇರಿಯಲ್ಲಿ ಆದಿ ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತ್ತು. ಪೂಜಾ ಕಾರ್ಯವನ್ನು ಒಕ್ಕೂಟ ಅಧ್ಯಕ್ಷರಾದ ಗುರುನಾಥ ಜ್ಯಾಂತಿಕರ್ ನೆರವೆರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ್, ಬಾಬು ವಾಲಿ, ಬಾಬುರಾವ ಕಾರಬಾರಿ, ನಾಗಶಟ್ಟಿ ಪಾಟೀಲ್ ಸುಂಕನಾಳ, ವಿಜಯಕುಮಾರ ಗಾಜರೆ, ರಾಜಕುಮಾರ ನೆಮತಾಬಾದ, ವೀರು ದಿಗವಾಲ್, ವೀರಶಟ್ಟಿ ಕಾಮಣ್ಣಾ, ಅಮೃತ ಹೊಸಮನಿ, ರಾಹುಲ್ ಇತರರು ಉಪಸ್ಥಿತರಿದ್ದರು.
13th March 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಸಂಘಟನೆಯ ಪದಾಧಿಕಾರಿಗಳು ಕೇವಲ ತೋರಿಕೆಗೆ ಸೀಮಿತ ಆಗಿರದೇ ಅನ್ಯಾಯದ ವಿರುದ್ಧ ಸದಾ ಧ್ವನಿಯೆತ್ತುವ ಕೆಲಸ ಮಾಡಬೇಕು ಎಂದು ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ ಶೇರಿಕಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಮತ್ತು ನೊಂದವರ ಪರವಾಗಿ ನೂತನ ಪದಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಶಿವರಾಜ ಪಟ್ನೆ ಮಾತನಾಡಿ, ನೂತನ ಪದಾಧಿಕಾರಿಗಳು ಸಂಘಟನೆ ಬಲವರ್ಧನೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಪರಣ್ಣ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಿರಣ ಬಿರಾದಾರ್, ತಾಲೂಕು ಘಟಕದ ಅಧ್ಯಕ್ಷ ಪ್ರದೀಪ ಚವ್ಹಾಣ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿನಯ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಅಭಿಷೇಕ, ತಾಲೂಕು ಕಾರ್ಯಾಧ್ಯಕ್ಷ ರಾಜಕುಮಾರ ದುರ್ವೆ, ಕಾರ್ಮಿಕ ಘಟಕ ಉಪಾಧ್ಯಕ್ಷ ಸಂತೋಷ ಧುಲೆ, ಆಟೋ ಚಾಲಕರ ಘಟಕದ ಪದಾಧಿಕಾರಿಗಳಾದ ಶಾಂತಕುಮಾರ ಮಾದಪ್ಪ, ಆನಂದ ತಲವದೆ, ವಸಂತ ಭಟರೆ ಸೇರಿದಂತೆ ಹಲವರು ಇದ್ದರು.
ಪದಾಧಿಕಾರಿಗಳ ನೇಮಕ :
ವಿನೋದ ಶೇರಿಕಾರ(ಜಿಲ್ಲಾ ಕಾರ್ಯದರ್ಶಿ), ಆಟೋ ಚಾಲಕರ ಘಟಕದ ಗೌರವ ಅಧ್ಯಕ್ಷರಾಗಿ ಚಂದ್ರಶೇಖರ, ಅಧ್ಯಕ್ಷರಾಗಿ ಡೇವಿಡ್ ಬಾಬುರಾವ ಮತ್ತು ಭಾತಂಬ್ರಾ ಗ್ರಾಮ ಕಾರ್ಮಿಕ ಘಟಕದ ಪದಾಧಿಕಾರಿಗಳಾಗಿ ರಾಜಕುಮಾರ ಕೊರಳೆ, ರಾಮ ಧೂಳೆ, ಶಿವಪ್ಪ ಸಾಗಾಂವೆ, ನಾಮದೇವ, ಮನೋಜ ದೂಳೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಶೇರಿಕಾರ ತಿಳಿಸಿದ್ದಾರೆ.
13th March 2025
ತಾಳಿಕೋಟಿ: ಮನುಕುಲವನ್ನು ಧರ್ಮದ ದಾರಿಯಲ್ಲಿ ನಡೆಸುವಂತಹ ಪ್ರಜ್ಞಾವಂತಿಕೆಯನ್ನು ಹೊಂದಿದ ಜಂಗಮ ಸಮಾಜ ಕೇವಲ ಬೇಡುವ ಸಮಾಜವಾಗದೆ ಜಗಕ್ಕೆ ಕೊಡುಗೆಯನ್ನು ಕೊಡುವಂತಹ ಸಮಾಜವಾಗಿದೆ ಎಂದು ಮಾಜಿ ಶಾಸಕ,ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಹೇಳಿದರು. ಬುಧವಾರ ಪಟ್ಟಣದ ಜಂಗಮ ಸಮಾಜ ಬಾಂಧವರು ಎಪಿಎಂಸಿ ವರ್ತಕರ ಸಭಾ ಭವನದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಧರ್ಮ ಪ್ರಾಚೀನ ಧರ್ಮವಾಗಿದ್ದು ಶ್ರೇಷ್ಠ ಸಂಸ್ಕೃತಿ ಪರಂಪರೆ ಹಾಗೂ ಸಂಸ್ಕಾರಗಳನ್ನು ಹೊಂದಿರುವ ಧರ್ಮವಾಗಿದೆ ಈ ಶ್ರೇಷ್ಠ ಧರ್ಮದಲ್ಲಿ ಗುರುವಿನ ಸ್ಥಾನದಲ್ಲಿರುವ ನಾವು ಜಯಂತಿಯ ಈ ಸಂದರ್ಭದಲ್ಲಿ ನಮ್ಮ ಕುರಿತು ಆತ್ಮವತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ, ಗುರುವಿನ ಸ್ಥಾನದಲ್ಲಿದ್ದರೂ ನಾವು ಇತರ ಸಮುದಾಯಗಳಿಗಿಂತ ಆರ್ಥಿಕವಾಗಿ ಅತಿ ಹಿಂದುಳಿದ ಸಮಾಜವಾಗಿದ್ದೇವೆ ನಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಅಗತ್ಯವಿದೆ ಶಿಕ್ಷಣದಿಂದಲೇ ಸಮಾಜಗಳ ಸರ್ವಾಂಗೀಣ ಪ್ರಗತಿ ಸಾಧ್ಯ, ನಾವು ಜೋಳಿಗೆ ಹಿಡಿದು ನಮ್ಮ ಮಕ್ಕಳಿಗೂ ಜೋಳಿಗೆಯನ್ನೆ ಕೊಟ್ಟು ಹೋಗುವುದು ಬೇಡ, ಅವರ ಜೋಳಿಗೆಯಿಂದ ಇತರರಿಗೂ ಸಹಾಯ ಆಗುವಂತೆ ಮಾಡಿ ಹೋಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು. ಕೊಡೆಕಲ್ ದುರದುಂಡೇಶ್ವರ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಸೈದ್ಧಾಂತಿಕ ತಳಹದಿ ಮೇಲೆ ನಿಂತ ಧರ್ಮವಾಗಿದೆ. ಇಡೀ ಮನುಕುಲದ ಲೇಸನ್ನು ಬಯಸುವ ಧರ್ಮ ಇದಾಗಿದ್ದು, ಈ ಧರ್ಮದ ಮೂಲ ಪ್ರಕೃತಿಯಾಗಿದೆ. ಇಂತಹ ಶ್ರೇಷ್ಠ ಧರ್ಮದ ಅನುಯಾಯಿಗಳಾದ ನಾವು ಆರ್ಥಿಕವಾಗಿ ದುರ್ಬಲ ರಾಗಿದ್ದರೂ ಗುರುವಿನ ಸ್ಥಾನದಲ್ಲಿದ್ದು ಎಲ್ಲ ಸಮಾಜಗಳಿಂದ ಗೌರವಿಸಲ್ಪಡುವವರಾಗಿದ್ದೇವೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ನಾವು ಧರ್ಮ ಸಂಸ್ಕಾರಗಳನ್ನು ಬೆಳೆಸಿಕೊಂಡು ಬದುಕಲು ಪ್ರಯತ್ನಿಸಬೇಕಾಗಿದೆ ಎಂದರು.ಪಡೇಕನೂರ ದಾಸೋಹ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಪೂಜ್ಯ ರಾಮಲಿಂಗಯ್ಯ ಶ್ರೀಗಳು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.ವೇದಿಕೆ ಕಾರ್ಯಕ್ರಮ ಮುನ್ನ ಖಾಸ್ಗತೇಶ್ವರ ಮಠದಿಂದ ಆರಂಭಗೊಂಡ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಮೆರವಣಿಗೆ ಸಕಲ ವಾಧ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆಗೆ ತಲುಪಿತು.ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಾಸನೂರ- ತುಂಬಗಿ ಹಿರೇಮಠದ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ನೇತೃತ್ವವನ್ನು ನಾವದಗಿಯ ಪೂಜ್ಯ ಶ್ರೀ ಷ.ಬ್ರ. 108 ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ದೇವರ ಹಿಪ್ಪರಗಿಯ ಪೂಜ್ಯಶ್ರೀ ಜಡಿ ಸಿದ್ದೇಶ್ವರ ಶಿವಾಚಾರ್ಯರು, ಕಲಕೇರಿ ಸಿದ್ದರಾಮ ಶಿವಾಚಾರ್ಯರು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು,ವಡವಡಗಿಯ ಪೂಜ್ಯ ಶ್ರೀ ವೀರಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಈ ವೇಳೆ ಕಾಶಿಬಾಯಿ ಅಮ್ಮನವರು,ಸರೋಜಿನಿ ಅಮ್ಮನವರು, ಶರಣಯ್ಯ ಹಿರೇಮಠ, ಶಿವಶಂಕರ ಹಿರೇಮಠ, ಮುತ್ತುರಾಜ್ ಜಾಗೀರದಾರ,ದಯಾನಂದ ಮೂಗಡ್ಲಿಮಠ, ಈರಯ್ಯ ಹಿರೇಮಠ, ಜ್ಯೋತಿ ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ರಾಮಗಿರಿಮಠ ಹಾಗೂ ಬೇಡ ಜಂಗಮ ಸಮಾಜದ ಸರ್ವ ಬಾಂಧವರು ಇದ್ದರು. ಅಜಯ್ ಡೋಣೂರಮಠ ಪ್ರಾರ್ಥಿಸಿದರು. ಶಿವಶಂಕರ್ ಹಿರೇಮಠ ಸ್ವಾಗತಿಸಿದರು.ಆರ್.ಬಿ. ಧಮ್ಮೂರಮಠ ದಂಪತಿಗಳು ಹಾಗೂ ಶಿಕ್ಷಕ ಆರ್.ಎಫ್.ಹಿರೇಮಠ ನಿರೂಪಿಸಿ ವಂದಿಸಿದರು.
13th March 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ವೀರಶೈವ ಲಿಂಗಾಯತರು ಸೇರಿದಂತೆ ಪ್ರತಿಯೊಬ್ಬರು ಲಿಂಗಧಾರಣೆ ಮಾಡುವುದರೊಂದಿಗೆ ಸಂಸ್ಕೃತರಾಗಿ ಜೀವನ ನಡೆಸಲು ಸಾಧ್ಯ ಆದ್ದರಿಂದ ಲಿಂಗಧಾರಣೆ ಮಾಡಿಕೊಂಡು ಆಚಾರವಂತರಾಗಿ ಎಂದು ಶ್ರೀ ಅನ್ನದಾನೇಶ್ವರ ಶಾಕಾಮಠದ ಪೂಜ್ಯರಾದ ಶ್ರೀ ಮಹಾದೇವ ಮಹಾಸ್ವಾಮಿಗಳು ಹೇಳಿದರು.
ಜಿಲ್ಲೆಯ ಕುಕನೂರು ತಾಲೂಕಿನ ವಿವಿಧತೆಗಳಲ್ಲಿ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ವೇಳೆಯಲ್ಲಿ ತಾಲೂಕಿನ ಹರಿ ಶಂಕರ ಬಂಡಿ ಗ್ರಾಮದಲ್ಲಿ ಅನ್ನದಾನೇಶ್ವರ ಶಾಖಾಮಠ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಲಿಂಗಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ವೇಳೆ ಶ್ರೀಗಳು ಮಾತನಾಡುತ್ತಾ
ಮಾತಿಗಿಂತ ಕಾಯ ಲೇಸು ಎಂಬ ನಾ ನುಡಿಯನ್ನು ಪ್ರತಿಯೊಬ್ಬರು ಕೇಳಿರುತ್ತೀರಿ ಅದರಂತೆ ಬರಿ ಮಾತನಾಡುವುದು ಬಿಟ್ಟು ಕಾರ್ಯವನ್ನು ಅನುಷ್ಠಾನ ಗೊಳಿಸುವಲ್ಲಿ ಮುಂದಾದಾಗ ಧರ್ಮ ಉಳಿಯಲು ಸಾಧ್ಯ ಹಾಗೂ ವೀರಶೈವ ಲಿಂಗಾಯತರು ಲಿಂಗಧಾರಣೆ ಮಾಡಿಕೊಂಡು ಜೀವನ ನಡೆಸಿದಾಗ ಸುಸಂಸ್ಕೃತರಾಗಲು ಸಾಧ್ಯ ಎಂದು ಹೇಳಿದರು. ಈ ವೇಳೆಯಲ್ಲಿ 51ಕ್ಕೂ ಹೆಚ್ಚು ಜನ ಲಿಂಗಧಾರಣೆ ಮಾಡಿಕೊಂಡರು.
ಪಟ್ಟಣದ ತಹಸಿಲ್ದಾರರ ಕಾರ್ಯಾಲಯದಲ್ಲೂ ಸಹ ಜಯಂತಿ ಆಚರಣೆ ಮಾಡಲಾಗಿದ್ದು ಈ ವೇಳೆ ಗ್ರೇಡ್ 2 ತಹಸಿಲ್ದಾರರಾದ ಮುರಳಿದಾರರ ಕುಲಕರ್ಣಿ ಮಾತನಾಡಿ ಜಗದ್ಗುರುಗಳು ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಸವಿಸಿದರು. ನಾವೆಲ್ಲರೂ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ವೃತ್ತದಲ್ಲಿ ಜರುಗಿದ ಜಯಂತಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಯಂತಿ ಆಚರಣೆ ಮಾಡಲಾಯಿತು.
ಪ್ರಮುಖಾರಾದ ಶಿವಕುಮಾರ ನಾಗಲಾಪೂರಮಠ, ಈಶಯ್ಯ ಶಿರೂರಮಠ, ವೀರಯ್ಯ ದೇವಗಣಮಠ, ಸಿದ್ದಯ್ಯ ಉಳ್ಳಾಗಡ್ಡಿಮಠ, ಮಹೇಶ ಕಲ್ಮಠ, ಕರಬಸಯ್ಯ ಬಿನ್ನಾಳ, ಅನಿಲ್ ಆಚಾರ್, ಕಳಕಪ್ಪ ಕಂಬಳಿ, ಸಿದ್ದಲಿಂಗಯ್ಯ ಬಂಡಿ, ಮಂಜುನಾಥ ನಾಡಗೌಡರ, ಮಂಜುನಾಥ ಗುನ್ನಳ್ಳಿ ಹಿರೇಮಠ ಹಾಗೂ ಇತರರಿದ್ದರು.
13th March 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬವನ್ನು ಕೊಪ್ಪಳ ಜಿಲ್ಲೆಯಲ್ಲಿ ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಅವರು ಬುಧವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಹೋಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹಬ್ಬಗಳನ್ನು ನಾವು ಸಂಭ್ರಮಿಸುವದಕ್ಕಾಗಿ ಮಾಡುತ್ತೆವೆ. ನಮ್ಮ ಸಂಭ್ರಮಾಚರಣೆ ಇನ್ನೊಬ್ಬರಿಗೆ ತೊಂದರೆಯಾಗುವಂತೆ ಇರಬಾರದು. ಹೋಳಿ ಹಬ್ಬದ ಇದೇ ಸಂದರ್ಭದಲ್ಲಿ ಮುಸ್ಲಿಂ ಭಾಂದವರು ರಂಜಾನ್ ಹಬ್ಬದ ಆಚರಣೆ ಮಾಡುತ್ತಿದ್ದಾರೆ ಹಾಗೂ ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಡಿ.ಜೆ. ಹಚ್ಚಿ ಹೆಚ್ಚು ಶಬ್ದವನ್ನು ಉಂಟುಮಾಡಿ ಇತರರಿಗೆ ತೊಂದರೆ ಮಾಡುವದಾಗಲಿ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಪೋಸ್ಟ್ಗಳನ್ನು ಹಾಕುವದಾಗಲಿ ಮಾಡಬಾರದು ಎಂದರು.
ನಮ್ಮ ಸಂಪ್ರದಾಯ ಪರಂಪರೆ ಈ ಹಿಂದೆ ಹೇಗೆ ನಡೆಯುತ್ತಾ ಬರುತ್ತಿದೆ ಅದನ್ನೆ ನಾವೆಲ್ಲರೂ ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ ಮಾರ್ಚ್ 13 ಹಾಗೂ 15 ರವರೆಗೆ ಹೋಳಿ ಹಬ್ಬ ಆಚರಣೆ ಜಿಲ್ಲೆಯ ವಿವಿಧ ಕಡೆ ಮಾಡುತ್ತಿರುವುದರಿಂದ ಶಾಂತಿಯುತವಾಗಿ ಆಚರಿಸಬೇಕು. ಆಯಾ ಸಮಾಜದ ಹಿರಿಯರು ತಮ್ಮ ಯುವಕರಿಗೆ ಈ ಕುರಿತು ತಿಳಿಹೇಳಬೇಕು. ತಮಗೆಲ್ಲರಿಗೂ ಮುಂಚಿತವಾಗಿ ಹೋಳಿ ಹಬ್ಬದ ಶುಭಾಶಯಗಳು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, ಹೋಳಿ ಹಬ್ಬ ಶುಕ್ರವಾರ ಬಂದಿರುವುದರಿಂದ ರಂಜಾನ್ ಪ್ರಾರ್ಥನೆ ಇರುತ್ತದೆ. ಹಾಗಾಗಿ ಎಲ್ಲರೂ ಸೌಹಾರ್ದತೆಯಿಂದ ಹೋಳಿ ಹಬ್ಬದ ಆಚರಣೆ ಮಾಡಬೇಕು. ಇತರರ ಭಾವನೆಗಳಿಗೆ ಧಕ್ಕೆ ತರದಂತೆ ಹಬ್ಬದ ಆಚರಣೆ ಯಾಗಬೇಕು. ಡಿ.ಜೆ ಗಳಿಗೆ ಅನುಮತಿ ಇಲ್ಲ. ತಾವು ಹಾಗೇನಾದರೂ ಬೇಕಾದರೆ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಇಲ್ಲದವುಗಳನ್ನು ಸೀಜ್ ಮಾಡಲಾಗುತ್ತದೆ ಎಂದರು.
ಕಾಮದಹನ ರಸ್ತೆಯ ಮಧ್ಯದಲ್ಲಿ ಮಾಡಿದರೆ ಟ್ರಾಫಿಕ್ ಸಮಸ್ಯೆಗಳಾಗುತ್ತದೆ. ಹಾಗಾಗಿ ಒಂದು ಕಡೆ ಪಕ್ಕದಲ್ಲಿ ಕಾಮದಹನಕ್ಕೆ ವ್ಯವಸ್ಥೆಮಾಡಿ. ಎಲ್ಲಾ ಕಡೆ ನಮ್ಮ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಹೋಳಿ ಹಬ್ಬವನ್ನು ಆಚರಿಸಿ. ಕೆಮಿಕಲ್ ಮಿಶ್ರಿತ ಬಣ್ಣವನ್ನು ಉಪಯೋಗಿಸಿದಲ್ಲಿ ಅದು ನಮ್ಮ ದೇಹದ ಮೇಲೆ ಚರ್ಮ ಸಮಸ್ಯೆ ಸೇರಿದಂತೆ ಇತರೆ ಪರಿಣಾಮಗಳಾಗುತ್ತವೆ ಎಂದು ಹೇಳಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಪೀರಾಹುಸೇನ ಹೊಸಳ್ಳಿ ಅವರು ಮಾತನಾಡಿ, ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಹಿಂದು ಹಾಗೂ ಮುಸ್ಲಿಮರು ಸೌಹಾರ್ದಯುತವಾಗಿ ಜಿಲ್ಲೆಯಲ್ಲಿ ಆಚರಿಸುತ್ತಾ ಬರುತ್ತಿದ್ದೆವೆ. ಇವುಗಳು ಎಲ್ಲಾ ಜನರ ಅಭಿವೃದ್ಧಿಗಾಗಿ ಮಾಡುವ ಹಬ್ಬಗಳು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಯನ್ನು ಮಾಡುತ್ತಿದ್ದಾರೆ. ಈ ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಸ್ನೇಹ ಭಾಂದವ್ಯದಿಂದ ಹಬ್ಬಗಳ ಆಚರಣೆ ಮಾಡುತ್ತೆವೆ ಎಂದು ಹೇಳಿದರು. ವಿವಿಧ ಸಮುದಾಯಗಳ ಮುಖಂಡರು ಈ ಹಬ್ಬಗಳ ಆಚರಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ರೇಷ್ಮಾ ಹಾನಗಲ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ವಿವಿಧ ಸಮಾಜದ ಮುಖಂಡರಾದ ಮುತ್ತೂರ ಸ್ವಾಮಿ ನರೇಗಲ್, ಉಮೇಶ ಕುರುಡೇಕರ್, ಮಾನ್ವಿ ಪಾಷಾ, ಎಸ್ಬಿ ಖಾದ್ರಿಸಾಬ ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
13th March 2025
ಯಾದಗಿರಿ | ಮಾ :9 : ನಿಮ್ಮ ಸಮಸ್ಯೆಗಳಿಗೆ ಹಂತ, ಹಂತವಾಗಿ ಪರಿಹಾರ ನೀಡಲಾಗುವವುದು. ಸರ್ಕಾರ ಅನುದಾನ ಸೇರಿದಂತೆಯೇ ವಿವಿಧ ಯೋಜನೆಗಳು ಜಾರಿ ಮಾಡಿದೆ. ಅವುಗನ್ನು ಪಡೆದು ಆರ್ಥಿಕವಾಗಿ ಮುಂದೆ ಬನ್ನಿ, ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ ಎಂದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಪಲ್ಲವಿ ಜಿ. ಹೇಳಿದರು.
ಭಾನುವಾರ ಇಲ್ಲಿನ ವಾರ್ಡ ನಂ. 5ರ ಬೋಳಿವಾಡದ ಮೇದಾರ ಬಡಾವಣೆಗೆ ಭೇಟಿ ನೀಡಿದ ವೇಳೆ ಅಲ್ಲಿ ಸೇರಿದ್ದ ಮೇದಾರ ಸಮುದಾಯದ ಜನರನ್ನು ಉದ್ದೇಶಿಸಿ, ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಿದಂತೆಯೇ ಪಲ್ಲವಿ ಅವರು ಸುರ್ಧಿಘ ಮಾತುಗಳಿಂದ ಅನೇಕ ವಿಷಯಗಳು ತಿಳಿಸಿದರು.
ಅಕ್ಕಪಕ್ಕದ ಬಡಾವಣೆಗಳು ನೋಡಿ , ಅಲ್ಲಿ ಎಷ್ಟು ಸ್ವಚ್ಛತೆ ಇದೆ. ಮೂಲಭೂತ ಸೌಲಭ್ಯಗಳು ಇವೆ. ಅವರ ಮಕ್ಕಳು ಶಾಲೆ ತೊರೆದಿಲ್ಲ, ಆದರೇ ನೀವು ಯಾವುದೇ ಸೌಲಭ್ಯಗಳಿಲ್ಲದೆ ಅದು ಹೇಗೆ ಜೀವನನಢಸುತ್ತಿದ್ದಿರಿ? ಮಕ್ಕಳನ್ನು ಶಾಲೆ ಬಿಡಿಸಿ ನಿಮ್ಮ ಕುಲಕಸುಬಿ ಹಚ್ಚಿದ್ದಿರಿ. ಏಕೆ ಹೀಗೆ ಮಾಡಿದ್ದಿರಿ. ಈ ಸಂಬಂಧ ಇಲಾಖೆಗೆ ಹೋಗಿ ಅಲ್ಲಿ ಅಧಿಕಾರಿಗಳಿಗೆ ಭೇಟಿ ನೀಡಿದರೇ ನಿಮ್ಮ ಸೌಲಭ್ಯಗಳು ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ.ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಇಂದು ನಮ್ಮ ಜೊತೆ ನಿಮ್ಮಬಳಿಗೆ ಬಂದಿದ್ದಾರೆ.ಅವರಿಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಹೇಳಿ ಮಾಡಿಕೊಡುತ್ತಾರೆ. ಅವರು ನಾನು ಅಭಿವೃದ್ಧಿವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.