
2nd March 2025
ಬೀದರ. ಮಾ. 01 :- ರಾಜ್ಯ ದ ಮುಖ್ಯಮಂತ್ರಿಯಾದ ಸಿದ್ರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಿಂದ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಅವ್ಯವಯದಲ್ಲಿ ಮೀಸಲಿಟ್ಟ ಹಣವನ್ನು ದುರ್ಬಳಿಕೆ ಮಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯ ಮಾಡಲಾಗಿದೆ ಇದರ ವಿರುದ್ಧ ಜಿಲ್ಲಾ ಭಾರತೀಯ ಜನತಾ ಪಾರ್ಟಿಯಿಂದ ಮಾ.೪ ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ೫ ಸಾವಿರ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ರಾಜ್ಯ ಬಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ ಹಾಗೂ ಬೀದರ ದಕ್ಷೀಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆಯವರು ಇಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪ್ರತಿಭಟನೆಯ ಪೂರ್ವ ಭಾವಿ ಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಕಾಂಗ್ರೇಸ್ ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಯನ್ನು ಕಾಂಗ್ರೇಸ್ ಪಕ್ಷದ ಮಾತ್ರ ಸಾಧ್ಯ ಎಂದು ಚುನಾವಣೆಯ ಸಮಯದಲ್ಲಿ ಜನರಿಗೆ ಹೇಳಿ ಅಧಿಕಾರದ ಚುಕ್ಕಾಣಿ ಹಿಡಿಯಿತು ಆದರೆ ಅಹಿಂದ ನಾಯಕರು ಎಂದು ಅನುಕೊಳ್ಳುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸದರಿ ಸಮಾಜದ ಅಭಿವೃದ್ಧಿಗಾಗಿ ಮೀಸಲಟ್ಟ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೊಜನೆಗಳಿಗಾಗಿ ಉಪಯೋಗಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ.
ಇದನ್ನು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಇದರಂತೆ ಬೀದರನಲ್ಲಿಯೂ ಕೂಡಾ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಈ ಪ್ರತಿಭಟನೆಯಲ್ಲಿ ಸಾಂಸದರು ಹಾಗೂ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ್ ಕಾರಜೋಳ, ಶಾಸಕರಾದ ಸಿಮೆಂಟ್ ಮಂಜು, ಕೃಷ್ಣ ನಾಯಕ ಹಡಗಲಿ, ರಾಜ್ಯ ಮುಖ್ಯ ವಕ್ತರರಾದ ಅಶ್ವತ್ ನಾರಾಯಣ, ಮಾಜಿ ಶಾಸಕರುಗಳಾದ ಎಸ್.ಡಿ. ರಾಮಚಂದ್ರ, ಸೋಮಲಿಂಗಪ್ಪ್, ರಾಷ್ಟಿçÃಯ ಎಸ್ಸಿ ಮೋರ್ಚಾದ ಕಾರ್ಯದರ್ಶಿಗಳಾದ ಜೈಕುಮಾರ ಕಾಂಗೆ, ಪ್ರಮುಖರಾದ ಫರ್ನಾಂಡಿಸ್ ಹಿಪ್ಪಳಗಾಂವ, ಕು.ಲಲಿತಾ ಅನಾಪುರ ಹಾಗೂ ಅಂಬರಾಯ ಅಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು , ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಗಳು ಪಾಲ್ಗೊಳ್ಳಲಿದ್ದಾರೆ ಈ ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾದ ಸೋಮನಾಥ ಪಾಟೀಲ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಳ್ಳಬೇಕದರು. ಈ ಪೂರ್ವಭಾವಿ ಸಬೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷರಾದ ರವಿ ನಿಜಾಂಪೂರೆ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಗುಂಡಪ್ಪ ಬುಧೆರಾ, ಜಿಲ್ಲಾ ವಕ್ತಾರರಾದ ಸುಧೀರ ಕಾಡೋದೆ, ಮಾಧ್ಯಮ ಪ್ರಮುಖರಾದ ಶ್ರೀನಿವಾಸ ಚೌದರಿ, ಸಹ ಪ್ರಮುಖರಾದ ಸಂಗಮೇಶ ನಾಸಿಗಾರ , ಬೀದರ ನಗರ ಗಟಕದ ಅಧ್ಯಕ್ಷರಾದ ಶಶಿ ಹೊಸಳ್ಳಿ, ಬೀದರ ಗ್ರಾಮಾಂತರ ಘಟಕದ ಅಧ್ಯಕ್ಷರಾದ ದೀಪಕ ಗಾದಗೆ, ರಾಜಶೇಖರ ನಾಗಮೂರ್ತಿ ಸೇರಿದಂತೆ ಪಕ್ಷದ ಇತರ ನಾಯಕರು ಉಪಸ್ಥಿತರಿದ್ದರು.
1st March 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ತಾಲೂಕು, ಜಿಲ್ಲೆ ಸೇರಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವರ ಗೃಹ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ್ ಸೇರಿದಂತೆ ಹೊನ್ನಳ್ಳಿ ಗ್ರಾಮದ ಹಿರಿಯರು, ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಬಸವಣ್ಣನವರ ತತ್ವ ಸಿದ್ಧಾಂತದ ಮೇಲೆ ನಡೆಯುತ್ತಿದೆ. ರಾಜ್ಯದಲ್ಲಿ ನುಡಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್. ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಲೇ ಈಡೇರಿಸಿದೆ. ಅಭಿವೃದ್ಧಿ ಕಾರ್ಯಗಳ ಜತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರು, ದುರ್ಬಲ ವರ್ಗದವರು, ಬಡವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸ ಮಾಡಲಾಗುತ್ತಿದೆ.
ಕಾಂಗ್ರೆಸ್ ಪಕ್ಷ ದಶಕಗಳ ಇತಿಹಾಸ ಹೊಂದಿದೆ. ದೇಶದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ದೊಡ್ಡದಿದೆ. ಇಂತಹ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವರನ್ನು ಕಾಂಗ್ರೆಸ್ ಪಕ್ಷ ಸದಾ ಸ್ವಾಗತಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಣಮಂತರಾವ ಚವ್ಹಾಣ, ರಾಜು ಬಿರಾದಾರ್, ಉಮಾಕಾಂತ ಬಿರಾದಾರ್, ಡಾ.ಸೋಮಶೇಖರ ಮೈನಾಳೆ ಇದ್ದರು.
ಸೇರ್ಪಡೆಯಾದವರ ವಿವರ : ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಬಿರಾದಾರ್, ಆನಂದ ಸ್ವಾಮಿ, ಬಂಡೆಪ್ಪ ಬಿರಾದಾರ್, ದಿಲೀಪ ಮೈನಾಳೆ, ಕಮಲಾಕರ ಬಿರಾದಾರ್, ಸುಧಾಕರ ದೇಗಲವಾಡೆ, ಸುಧಾಕರ ಬಿರಾದಾರ್, ಸುನಿಲ ಧುಮ್ಮನಸೂರೆ, ಬಲರಾಜ ಬಿರಾದಾರ್, ಪ್ರಭು ಬಿರಾದಾರ್, ಕಲ್ಲಪ್ಪ ಮೇತ್ರೆ, ಸತೀಶ ಮೂಲಗೆ, ಸಹಾದೇವ ಮೇತ್ರೆ, ಬಸವರಾಜ ಏಲ್ಲೂರೆ, ಸಹಾದೇವ ಏಲ್ಲೂರೆ, ವೀರಶೆಟ್ಟಿ ಬಿರಾದಾರ್, ಅನಿಲ ಮೇತ್ರೆ, ಮಲ್ಲಿಕಾರ್ಜುನ ಬಿರಾದಾರ್, ಬಾಬು ಮೈನಾಳೆ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೋಟ್ 01
ತಾಲೂಕಿನ ಹೊನ್ನಳ್ಳಿ ಗ್ರಾಮದ ನೂರಾರು ಹಿರಿಯರು, ಯುವಕರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವುದು ಸಂತಸ ತರಿಸಿದೆ. ಎಲ್ಲ ಹಿರಿಯರು, ಮುಖಂಡರು ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ಮನುವರಿಕೆ ಮಾಡಿಕೊಟ್ಟು ಗ್ರಾಮೀಣ ಭಾಗದಲ್ಲಿ ಪಕ್ಷ ಬಲಪಡಿಸಬೇಕು.
-ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರು ಬೀದರ್
ಕೋಟ್ 02
ಗಡಿ ಜಿಲ್ಲೆ ಬೀದರ್ ಸೇರಿ ರಾಜ್ಯದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಈಶ್ವರ ಖಂಡ್ರೆ ಅವರು ಶಾಸಕ, ಸಚಿವರಾಗಿ ಜನರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಸಚಿವ ಈಶ್ವರ ಖಂಡ್ರೆ ಅಭಿವೃದ್ಧಿ ಕಾಳಜಿ ಮೆಚ್ಚಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದೇನೆ.
-ಸುರೇಶ ಬಿರಾದಾರ್ ವಕೀಲರು ಭಾಲ್ಕಿ
23rd February 2025
ಯಾದಗಿರಿ:ರೈತರುಮಣ್ಣು,ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದ್ದು,ಮನೆಗೊಂದು ಗಿಡನೆಡುವ ಮೂಲಕ ಪರಿಸರ
ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಪಾಲದಾರರಾಗಬೇಕು ಎಂದು ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದ ಕಿರಿಯ ಸ್ವಾಮಿಗಳಾದ ಶಿವಶೇಖರ ಸ್ವಾಮಿ ಹೇಳಿದರು ತಾಲೂಕಿನ ಅಬ್ಬೆತುಮಕೂರ ಗ್ರಾಮದ ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದಲ್ಲಿ ಜಿಲ್ಲಾ
ಪಂಚಾಯತ ಯಾದಗಿರಿ, ಕೃಷಿ ಇಲಾಖೆ ಯಾದಗಿರಿ ವತಿಯಿಂದ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ, ಜಲಾನಯನ ಯಾತ್ರೆಪ್ರಯುಕ್ತ ಪಾನಿ ಪಾಠಶಾಲಾ ನೀರಿನ್ನು ಮಿತವಾಗಿ ಬಳಸಬೇಕು. ಮಾನವ ಹಾಗೂ ಪ್ರಾಣಿ-ಪಕ್ಷಿ ಎಂದರು.
ಸಂಕುಲಆಹಾರವಿಲ್ಲದೆಹಲವಾರು ದಿನಗಳು ಬದುಕಬಹುದು. ಆದರೆ ಕುಡಿಯುವ ನೀರಿಲ್ಲದೆ ಒಂದು ದಿನಬದುಕುವುದೂ ಅತೀ ಕಷ್ಟ ಎಂದರು. ಮಳೆ ಪ್ರಮಾಣ ರ್ಷದಿಂದ ರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ನೀರನ್ನು ಪೋಲು ಮಾಡದೆ ಎಚ್ಚರಿಕೆಯಿಂದ ಬಳಸಬೇಕು ಎಂದರು. ಕೃಷಿ ಇಲಾಖೆ ಸಹಾಯಕ ನರ್ದೇಶಕ ಸುರೇಶ ಮಾತನಾಡಿ, ನೀರನ್ನು ಮಿತವಾಗಿ ಬಳಸಬೇಕು. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ. ನಾವೆಲ್ಲರೂ ಸಂಶೋಧನೆಗಳಿಂದ ಎಷ್ಟೆ
ಕರ್ಯಕ್ರಮ ಉದ್ಘಾಟಿಸಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮಾತನಾಡಿದರು.
ಮುಂದುವರಿದರೂ,ನಮ್ಮಿಂದ ಬೇಸಿಗೆ ಆರಂಭವಾಗಿದ್ದು, ನೀರನ್ನು ಸೃಷ್ಟಿಸಲುಸಾಧ್ಯವಿಲ್ಲ ನೀರು ದೇವರು ಕೊಟ್ಟ ಕಾಣಿಕೆ. ಅದನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕೆಂದರೆ ನೀರನ್ನು ಸಂರಕ್ಷಿಸಬೇಕು ಎಂದರು. ಈಸಂರ್ಭದಲ್ಲಿ ಸಹಾಯಕ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದಯಾಮರೆಡ್ಡಿ, ರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಬಸವರಾಜ ಬೊಮ್ಮನ,ಟಾಟಾ ಟ್ರಸ್ಟ್ ಕರ್ಯಕ್ರಮ ಸಂಯೋಜಕ ಮಂಜುನಾಥ, ಅಬ್ಬೆತುಕೂರಿನ ಪಶು ವೈದ್ಯಾಧಿಕಾರಿ ಡಾ. ಶಿವಮಂಗಲಾ ತೋಟಗಾರಿ- ಕೆ ವಿಸ್ತಾರಣ ಮುಂದಾಳು
ರಾಜಕುಮಾರ, ಸಹಾಯಕ ಕೃಷಿ ನರ್ದೇಶಕರು ವಿಷಯ ತಜ್ಞರಾದ ರಾಜಕುಮಾರ, ಅಬ್ಬೆಮಕೂರಿನ ಬಿಎಡ್ ವಿದ್ಯರ್ಥಿಗಳು, ಹಾಗೂ ಗ್ರಾಮಸ್ಥರು ಇದ್ದರು.
23rd February 2025
ಬಸವಕಲ್ಯಾಣ ಫೆ. ೨೨.ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಶ್ರೀ ಉರಲಿಂಗಪೆದ್ದಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ ಪ್ರಥಮ ಸಾಹಿತ್ಯ ರ್ವೋದಯ ಸಮ್ಮೇಳನದ ರ್ವಾಧ್ಯಕ್ಷರಾದ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚರ್ಯರಿಗೆ
ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆಯ ಜಿಲ್ಲಾ ಮಹಿಳಾ ಬಿದ್ದ ಬದಿಯ ವ್ಯಾಪಾರಿಗಳ ವಿಭಾಗಿಯ ಅಧ್ಯಕ್ಷೆರಾಜೇಶ್ವರಿ
ರಾಜಕುಮಾರ ಮೋರೆ ಹಿರೇಮಠ ಮಲ್ಲಿನಾಥ ಹಾರಕೂಡ. ಅಪ್ಪಣ್ಣ ಜನವಾಡ, ಸುರೇಶ ಉದ್ಘಾಟಿಸಿದರು. ಇಲ್ಲಿನ ಚಿಲ್ಲಾಬಟೆ. ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯಭವನದದಿಂದ ಪ್ರಮುಖ ರಸ್ತೆಗಳ ಮೂಲಕ ಉರಿಲಿಂಗಪೆದ್ದಿ ಶ್ರೀ ಮಠದ
ವರೆಗೆ ತೆರಳಿದ ನಂತರ ಅಲ್ಲಿಂದ ವೇದಿಕೆಯ ವರಿಗೆ ಮೆರವಣಿಗೆ ಜರುಗಿತು. ಈ ಸಂರ್ಭದಲ್ಲಿ ಬೇಲೂರು ಉರಿಲಿಂಗಪೆದ್ದಿ ಸಂಸ್ಥಾನ ಮಠದ ಪಿಠಾಧಿಪತಿಗಳಾದ ಪೂಜ್ಯ ಶ್ರೀ. ಪಂಚಾಕ್ಷರಿ ಮಹಾಸ್ವಾಮಿಜಿ. ಹಾಗೂ ಮಹಾಲಿಂಗ ದೇವರು. ಸಾಹಿತಿಗಳಾದ ಡಾ.ಗವಿಸಿದ್ದಪ್ಪ
ಪಾಟೀಲ. ಗ್ರಾಮದ ಪ್ರಮುಖರಾದ ಜಗನ್ನಾಥ ಕಾನೇಕರ, ಸಂಜಯ ಜಾದವ್. ಡಾ.ರಾಜಕುಮಾರ ಮಾಳಗೆ. ಡಾ. ಸಿದ್ದಪ್ಪ ಹೊಸಮನಿ. ಶರಣ ಬಸಪ್ಪ ಬಿರಾದಾರ. ಸೇರಿದಂತೆ ಅನೇಕ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಸಂತರು ಶರಣರು ಮಹಾತ್ಮರ ಸಂದೇಶ ಹೂತ್ತ ಭಾವಚಿತ್ರದೊಂದಿಗೆ ಅಲ್ಲದೆ ನಾಡಿನ ವಿವಿಧ ಕಲಾತಂಡಗಳು ಭಾಗವಹಿಸಿ, ಕಲೆ ಪ್ರರ್ಶನ ಮಾಡಿರುವ ದೃಶ್ಯ ಕಾಣಬಹುದು.
23rd February 2025
ಹುಮನಾಬಾದ್.ನಗರದಲ್ಲಿ ಯಾವುದೇ ರೀತಿಯಿಂದ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕೆಂದು
ಮಾಜಿ ಸಚಿವ ರಾಜಶೇಖರ
ಪಾಟೀಲರವರು ಪುರಸಭೆಯ ಮುಖ್ಯಾಧಿಕಾರಿ ಫಿರೋಜ್ ರವರಿಗೆ ಸೂಚಿ ಸಿದರು.
ತಮ್ಮ ಸ್ವಗ್ರಹದಲ್ಲಿ ಸರ್ವಜನಿಕ ರು ತಮ್ಮ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಬಂದಿದ್ದರು.
ತಕ್ಷಣ ಕುಡಿಯುವ ನೀರಿನ ಸಮಸ್ಯೆ ಹಾಗೂ ಬಿ.ಖಾತಾ ಬಗ್ಗೆ ಜನರಲ್ಲಿ ಜಾಗೃತಿ
ಮೊಡಿಸಬೇಕು ಎಂದರು.
23rd February 2025
ತಾಳಿಕೋಟಿ: ನಿಮ್ಮನ್ನು ತಿದ್ದಿ ಸಂಸ್ಕಾರವಂತರನ್ನಾಗಿ ಮಾಡಿ ಜ್ಞಾನದ ಬೆಳಕಿನಿಂದ ಬದುಕಿನ ಉದ್ದೇಶವನ್ನು ತಿಳಿಸಿಕೊಟ್ಟ ನಿಮ್ಮ ಗುರುಗಳನ್ನು ಎಂದೂ ಮರೆಯಬೇಡಿ ಅವರಿಗೆ ಕೃತಜ್ಞರಾಗಿರಿ ಎಂದು ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಎಸ್ ಕೆ ಪ್ರೌಢ ಶಾಲಾ ಆವರಣದಲ್ಲಿ 1993-94ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ರವಿವಾರ ಹಮ್ಮಿಕೊಂಡ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಜೀವನ ಕ್ಷಣಿಕವಾದದ್ದು ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ ಆದರೆ ಬದುಕಿರುವಷ್ಟು ದಿನ ಸಂತೋಷದಿಂದ ಇದ್ದು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿ, ನೀವು ಕಲಿತ ಸಂಸ್ಥೆಯಲ್ಲಿ ಕಳೆದ ವಿದ್ಯಾರ್ಥಿ ಜೀವನವನ್ನು ಸ್ಮರಿಸಲು 30 ವರ್ಷಗಳ ನಂತರ ಒಂದಾಗಿದ್ದೀರಿ ಈ ಕ್ಷಣವನ್ನು ಸುಂದರವಾಗಿಸಿಕೊಳ್ಳಿ ಶ್ರೀ ಖಾಸ್ಗತರ ಕೃಪಾಶೀರ್ವಾದ ನಿಮ್ಮ ಮೇಲಿರಲಿ ಎಂದರು. ವಿವಿ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಸಾರ್ಥಕ ಕಾರ್ಯಕ್ರಮ ನಿಮಗೆ ವಿದ್ಯೆ ನೀಡಿದ ಗುರುವನ್ನು ಗೌರವಿಸುವ ಕಾರ್ಯವನ್ನು ಮಾಡಿದ್ದೀರಿ, ಇದೇ ರೀತಿ ನಿಮ್ಮ ಮುಂದಿನ ಬದುಕಿನಲ್ಲೂ ಎಲ್ಲರೂ ಒಂದಾಗಿ ಪ್ರೀತಿಯಿಂದ ಇರಲು ಪ್ರಯತ್ನಿಸಿ ಎಂದರು. ಶಿಕ್ಷಕರಾದ ಪಿ.ಬಿ.ಬಂಟನೂರ,ಡಾ. ಅನೀಲಕುಮಾರ್ ಇರಾಜ್, ಶ್ರೀಮತಿ ಬಿ.ಆರ್.ಬಿರಾದಾರ ಮಾತನಾಡಿದರು. ಅದ್ಭುತ ಮತ್ತು 1993-94 ನೇ ಸಾಲಿನ ವಿದ್ಯಾರ್ಥಿಗಳಾದ ಶ್ರೀಮತಿ ಶಕುಂತಲಾ ಹಾದಿಮನಿ,ರಾಜು ವಿಜಾಪುರ, ಪ್ರಕಾಶ್ ಕಟ್ಟಿಮನಿ, ಸುಧಾ ಮಹೀಂದ್ರಕರ, ನಾಗರತ್ನ ದರ್ಜಿ ಹಾಗೂ ಕೇಶವ ಹಜೇರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗುರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕಲಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಮಿತ್ರರಿಗೆ ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ನ್ಯಾಯಾಧೀಶ ಎಸ್ ಎಮ್ ಜಾಲವಾದಿ, ನಿವೃತ್ತ ಶಿಕ್ಷಕರಾದ ಬಿ.ಬಿ. ಕೊಂಗಂಡಿ, ಆರ್ ಆರ್ ಬಡಿಗೇರ, ಡಿವಿ ಬಡಿಗೇರ, ಜೀವಿ ಕುಲಕರ್ಣಿ, ಎಂ.ಎಸ್. ಬಿರಾದಾರ, ಎಸ್ ಸಿ ಉಪ್ಪಾರ,ಎಸ್ ಬಿ ಹೇಳವಾರ, ಸಿ.ವಿ. ಮೆಣಸಿನಕಾಯಿ, ಶ್ರೀಮತಿ ಆರ್ ಕೆ ಭುಸಾರೆ, ಎಂಎ ಬಾಗೇವಾಡಿ,ಆರ್ ಬಿ ದಾನಿ,ಎಸ್.ವಿ. ಬೆನಕಟ್ಟಿ,ವಾಯ್.ಎಸ್.ನಾದ, ಮುಖ್ಯ ಶಿಕ್ಷಕಿ ಶ್ರೀಮತಿ ಬಿಟಿ ಸಜ್ಜನ, ದೈಹಿಕ ಶಿಕ್ಷಕಿ ಶ್ರೀಮತಿ ಎಂ ಆರ್ ಕುಲಕರ್ಣಿ, ಶಿಕ್ಷಕ ಎ. ಎಚ್.ಹೂಗಾರ, ಹಾಗೂ ಬೋಧಕೇತರ ಸಿಬ್ಬಂದಿಗಳು, 1993-94 ನೇ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ನಿಡಗುಂದಿ ಯಾವ ಸಂಗಡಿಗರು ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್ ಎಸ್ ವಾಲಿಕಾರ ನಿರೂಪಿಸಿ ವಂದಿಸಿದರು.
23rd February 2025
ಬೀದರ್: ಬೀದರ್ನ ಪ್ರತಿಷ್ಟಿತ ಮನೆತನವಾದ ನಾಗಮಾರಪಳ್ಳಿ ಕುಟುಂಬದ ಮುತ್ಸದ್ದಿ ನಾಯಕರಾದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಹಾಲಿ ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ ಅವರ ಮೇಲೆ ಎಫ್.ಐ.ಆರ್ ದಾಖಲಿಸಲು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಅವರು ಪ್ರಚೋದನೆ ನೀಡಿ ಕ್ಷÄಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಡಿ.ಕೆ ಸಿದ್ರಾಮ ಆರೋಪಿಸಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಇತ್ತಿಚೀಗೆ ಔರಾದ್ ಪಟ್ಟಣದಲ್ಲಿ ತಾಲೂಕು ವಕ್ಕಲುತನ ಹುಟ್ಟುವಳಿ ಒಕ್ಕೂಟದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾದ ಬಸವರಾಜ ಹೆಬ್ಬಾಳೆ ಅವರ ನಾಮಪತ್ರ ತಿರಸ್ಕೃತಗೊಳಿಸಲು ಡಿ.ಸಿ.ಸಿ ಬ್ಯಾಂಕ್ನ ಅಧ್ಯಕ್ಷರು ಹುನ್ನಾರ ನಡೆಸಿದಾಗ ಸ್ಥಳದಲ್ಲಿದ್ದ ಉಮಾಕಾಂತ ನಾಗಮಾರಪಳ್ಳಿ ಅವರು ಕಾರಣ ಕೇಳಲಾಗಿ ಉಮಾಕಾಂತ ನಾಗಮಾರಪಳ್ಳಿ ಅವರು ಕುತ್ತಿಗೆ ಹಿಡಿದು ತನ್ನನ್ನು ದೂಡಿದ್ದಾರೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರ ಆಪ್ತ ಸಹಾಯಕ ರಮೇಶ ಚಿದ್ರಿ ಹಾಗೂ ಬ್ಯಾಂಕ್ ಸಿಬ್ಬಂದಿ ಚಂದ್ರಕಾAತ ಸೆಡೊಳೆ ಸುಳ್ಳು ದೂರು ದಾಖಲಿಸಿ ರಾಜಕೀಯ ಪ್ರಭಾವ ಬೆಳೆಸಿ ಲೋಕಸಭೆ ಚುನಾವಣೆಯಲ್ಲಿ ಉಮಾಕಾಂತ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಎಫ್.ಐ.ಆರ್ ದಾಖಲಿಸಿ ಚಿಲ್ಲರೆ ರಾಜಕೀಯಕ್ಕೆ ಅಮರ ಖಂಡ್ರೆ ಇಳಿದಿದ್ದಾರೆ ಎಂದು ದೂರಿದರು.
ರಮೇಶ ಚಿದ್ರಿ ಮೂಲತಃ ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ. ಹಾಗೇ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರ ಆಪ್ತ ಸಹಾಯಕ. ಆದರೆ ಇವರ ಕೆಲಸ ಔರಾದ್ನಲ್ಲೇಕೆ? ಆ ಚುನಾವಣೆಗೂ ಇವರಿಗೂ ಯಾವುದೇ ಸಂಬAಧ ಇಲ್ಲ. ನಿಮಗೆ ನೈತಿಕತೆ ಇದ್ದರೆ ಕೂಡಲೇ ಚಂದ್ರಕಾAತ ಶೆಡೊಳೆ ಹಾಗೂ ರಮೇಶ ಚಿದ್ರಿ ಅವರನ್ನು ಅಮರ ಖಂಡ್ರೆ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
23rd February 2025
ಭಾಲ್ಕಿ:ಕಲ್ಬುರ್ಗಿಯಲ್ಲಿ ಇಂದು ಬೆಳಗಾವಿಯಲ್ಲಿ ಕಂಡೆಕ್ಟರ್ ಮೇಲೆ ಹಲ್ಲೆ ನಡೆದಿರುವುದು ದುರಾದೃಷ್ಟವಶಾತ್,
ನಾವೆಲ್ಲಾ ಭಾರತೀಯರು ಎಂದು ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.
ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಬೆಳಗಾವಿ ಮಹಾರಾಷ್ಟ್ರದ ಗಡಿ ವಿಚಾರ ಸಾಕಷ್ಟು ಚರ್ಚೆಯಾಗಿದೆ.
ಅಂತಿಮವಾಗಿ ನಮಗೆ ಅವರಿಗೆ ಸೇರಬೇಕಾದ ಹಳ್ಳಿಗಳು ಸೇರಿವೆ.
ಅದಾದ ಮೇಲೆ ಈ ರೀತಿಯಾಗಿ ಕ್ಯಾತೆ ತೆಗೆಯುವವರಿಗೆ ಕಾನೂನು ರೀತಿಗಲ್ಲಿ ಕ್ರಮ ತೆಗೆದುಕೊಳ್ಳತ್ತೆವೆ ಎಂದರು
ದಲಿತರು ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಇದ್ದಾರೆ ಎಚ್. ಸಿ ಮಹಾದೇವಪ್ಪ ಹೇಳಿಕೆ ......
ಕರ್ನಾಟಕ ರಾಜ್ಯದಲ್ಲಿ ಸಿ. ಎಂ ಬದಲಾವಣೆ ಹಾಗೂ ಕರ್ನಾಟಕ ರಾಜ್ಯದಲ್ಲಿ ದಲಿತ ಸಿಎಂ ವಿಚಾರಕ್ಕೆ ಸಮಾಜ ಕಲ್ಯಾಣ ಸಚಿವ ಎಚ್. ಸಿ ಮಹಾದೇವಪ್ಪ ಹೇಳಿಕೆ..
ದಲಿತರು ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಇದ್ದಾರೆ ಜನರ ಆಶೀರ್ವಾದ ಯಾವಾಗ ಸಿಗುತ್ತೆ ಅವಾಗ ಅಧಿಕಾರ ಮಾಡ್ತಾರೆ ಎಂದು ಸಚಿವ ಎಚ್. ಸಿ ಮಹಾದೇವಪ್ಪ ತಿಳಿಸಿದ್ದರು.
ಪಕ್ಷಕ್ಕೆ ಮುಜುಗರ ಆಗುವಂತೆ ಮಾತನಾಡದಂತೆ ಸೂಚನೆ
ಸಂವಿಧಾನದಲ್ಲಿ ಮಾತನಾಡಲು ಎಲ್ಲರಿಗೂ ಅವಕಾಶ ಇದೆ,
ಆದ್ರೆ ಪಕ್ಷಕ್ಕೆ ಮುಜುಗರ ಆಗುವಂತೆ ಮಾತನಾಡದಂತೆ ಸೂಚನೆ ಕೊಟ್ಟಿದ್ದಾರೆ ಎಐಸಿಸಿ ಅಧ್ಯಕ್ಷರ ಆದೇಶ ಎಲ್ಲರೂ ಪಾಲಿಸಬೇಕು
ಎಂದು ಸಚಿವ ಎಚ್. ಸಿ ಮಹಾದೇವಪ್ಪ ಹೇಳಿದ್ದಾರೆ.
ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ತಕರಾರು ಇಲ್ಲ ಆದರೆ ಅದರಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ತಿಳಿಸಿದ್ದರು.....
23rd February 2025
(ವೀರಯ್ಯ ವಿ ಹಿರೇಮಠ)
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಕುಕನೂರ ಪಟ್ಟಣ 2ನೇ ವಾರ್ಡಿನಲ್ಲಿರುವ ಬಸವೇಶ್ವರನಗರ ಬಡಾವಣೆಯ ಉದ್ಯಾನವನ ಅತಿಕ್ರಮಣ ನಿರ್ಮಿಸಿದ ಮನೆ ಹಾಗೂ ಡಬ್ಬಿ ಅಂಗಡಿಗಳ ತೆರವಿಗೆ ಕುಕನೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನೋಟಿಸ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದ್ದು ಮುಖ್ಯ ಅಧಿಕಾರಿಗಳು ಸರ್ವಾಧಿಕಾರ ಧೋರಣೆ ಸಾರ್ವಜನಿಕ ವಲಯದಲ್ಲಿ ಗ್ರಾಸವಾಗಿ ಕಾಡತೊಡಗಿದೆ.
ಪಟ್ಟಣದಲ್ಲಿ ಅತಿಕ್ರಮಣ ಮನೆಗಳ ಹಾಗೂ ಪೆಟ್ಟಿಗೆ ಅಂಗಡಿಗಳ ತೆರವುಗಳ ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿರುವುದು ಸಂತಸದ ವಿಷಯವಾಗಿದ್ದು ಅನುಮಾನ ಹುಟ್ಟಿಕೊಳ್ಳಲು ಕಾರಣವೇನು ಎಂಬ ಅನುಮಾನ ಎಲ್ಲರಲ್ಲೂ ಮೂಡುವುದು ಸಹಜ ಆದರೆ ಕುಕನೂರು ಪಟ್ಟಣ 19 ವಾರ್ಡುಗಳನ್ನು ಹೊಂದಿದ್ದು ಇದರಲ್ಲಿ 19ನೇ ವಾರ್ಡ್ (ಪೂರ್ವ ಕುಕನೂರು ಗ್ರಾಮ) ಹೊರತುಪಡಿಸಿದರೆ ಉಳಿದೆಲ್ಲಕಡೆ ಅಭಿವೃದ್ಧಿ ಗೊಂಡಿರುವ ಬಡಾವಣೆಗಳಿದ್ದು ಅವುಗಳಲ್ಲಿ ಹಲವಾರು ಜನ ಅತಿಕ್ರಮಣ ಮಾಡಿಕೊಂಡು ಮನೆ ಸೇರಿದಂತೆ ಇತರ ಕಟ್ಟಡಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಎಲ್ಲಾ ಬಡಾವಣೆಗಳನ್ನು ಹೊರತುಪಡಿಸಿ ವಾರ್ಡ್ ನಂಬರ್ 2 ರ ಬಸವೇಶ್ವರನಗರ ಬಡಾವಣೆಯ ಮೇಲೆ ಮಾತ್ರ ಮುಖ್ಯ ಅಧಿಕಾರಿಯ ಕಣ್ಣು ಬಿದ್ದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ಬಾರಿಯ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿರುವ ಎಲ್ಲಾ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸುವಂತೆ 19 ವಾರ್ಡಗಳ ಸದಸ್ಯರು ಒಪ್ಪಿಕೊಂಡ ಠರಾವ ಮಾಡಿರುವುದು ಜೊತೆಗೆ ತೆರವಿಗೆ ನೋಟಿಸ್ ಕೊಡಬೇಕಾದ ಸಂದರ್ಭದಲ್ಲಿ ಸ್ಥಳೀಯ ಸದಸ್ಯರ ಸಲಹೆ ಸೂಚನೆಗಳನ್ನು ಪಡೆಯುವುದು ಅವರ ಸಮ್ಮುಖದಲ್ಲಿ ನೋಟಿಸ್ ನೀಡಬೇಕೆಂದು ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪಟ್ಟಣ ಪಂಚಾಯಿತಿಯ ಯಾವೊಬ್ಬ ಸದಸ್ಯರ ಗಮನಕ್ಕೂ ಈ ವಿಷಯ ತರದೆ ಕೇವಲ ಒಂದೇ ಬಡಾವಣೆಯ ನಾಗರಿಕರಿಗೆ ನೋಟಿಸ್ ನೀಡಿರುವುದು ಸರ್ವಾಧಿಕಾರಿ ಧೋರಣೆ ತೋರಿರುವ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿಗಳು ಎಂಬ ಚರ್ಚೆಗಳು ಪಟ್ಟಣದ ತುಂಬಾ ಪ್ರಾರಂಭಗೊಂಡಿದೆ.
ಸಾರ್ವಜನಿಕರ ಹೇಳಿಕೆಯ ಪ್ರಕಾರ ಮುಖ್ಯ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಒಳಗಾಗಿದ್ದು ಕೇವಲ ಒಂದು ಬಡಾವಣೆಯ ಅತಿಕ್ರಮಣಕಾರರಿಗೆ ನೋಟಿಸ್ ನೀಡಿದ್ದಾರೆ ಇದರ ಹಿಂದಿರುವ ಕೈಗಳು ಯಾವವು ಎಂಬ ಕುತೂಹಲ ಮೂಡಿರುವುದು.
7th January 2025
ಬೀದರ. ಜ. 06 :- ಸಚಿವ ಪ್ರಿಯಾಂಕ್ ಖರ್ಗೆ ಅವರ ನಾಯಕತ್ವ ಬೆಳವಣಿಗೆ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ದಲಿತ ಸಚಿವರುಗಳೇ ಬಿಜೆಪಿಯವರಿಗೆ ಟಾರ್ಗೆಟ್ ಆಗಿದ್ದಾರೆ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಬೀದರ್ ದಕ್ಷಿಣ ಘಟಕದ ವಕ್ತಾರ ಲೋಕೇಶ ಮಂಗಲಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ಎಐಸಿಸಿ ಮತ್ತು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಧರ್ಮ ಸೇನರವರ ಆದೇಶದ ಮೇರೆಗೆ,
ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ
#We Stand with ಪ್ರಿಯಾಂಕ ಖರ್ಗೆ.
ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರುಗಳು, ಪರಿಶಿಷ್ಟ ಜಾತಿ ವಿಭಾಗದ ಎಲ್ಲಾ ಜಿಲ್ಲಾ ಮಾಧ್ಯಮ ವಕ್ತಾರರು, ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿಗಳು ನಮ್ಮ ಸಮುದಾಯದ ನಾಯಕರಾದ ಪ್ರಿಯಾಂಕ ಖರ್ಗೆ ಅವರ ಪರ ನಿಲ್ಲಬೇಕಾಗಿದೆ.
ಪ್ರತಿಯೊಬ್ಬರು ಮೂರು ನಿಮಿಷದ ವಿಡಿಯೋ ಮಾಡಿ 9019201612 ನಂಬರ್ ಗೆ ಕಳಿಸಿಕೊಡಿ .
ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಬೇಕಾದ ವಿಚಾರಗಳು.
ಪ್ರಿಯಾಂಕ ಖರ್ಗೆ ರಂತಹ ನಾಯಕರುಗಳ ಮೇಲೆ ಸುಖ ಸುಮ್ಮನೆ ಆರೋಪ ಮಾಡುವುದು ಒಂದು ರೀತಿ ಬಿಜೆಪಿ ನಾಯಕರಿಗೆ ಚಾಳಿಯಾಗಿದೆ.
ದಲಿತ ನಾಯಕನನ್ನು ತೇಜೋವದೆ ಮಾಡುವುದೇ ಬಿಜೆಪಿ ಅಜೆಂಡ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಿಯಾಂಕ ಖರ್ಗೆ ಕಾರಣ ಇಂದು ಸುಳ್ಳು ಆರೋಪಗಳನ್ನು ಮಾಡುತ್ತಾ ಅವರನ್ನು ರಾಜೀನಾಮೆ ನೀಡುವುದು ಎಷ್ಟು ಸರಿ? ಇವರ ಬಳಿಯಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಯಾವುದೇ ಆಧಾರಗಳಿಲ್ಲ, ಬೇಜವಾಬ್ದಾರಿಯಿಂದ ಸುಖ ಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಇವರು ಉದ್ದೇಶ ರಾಜ್ಯದಲ್ಲಿ ದಲಿತ ನಾಯಕರು ಬೆಳೆಯುವುದು, ದಲಿತ ನಾಯಕರ ನಾಯಕತ್ವ ಮುನ್ನೆಲೆ ಬರುವುದು, ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ನಾಯಕರುಗಳು ರುಜು ಮಾಡಿಕೊಳ್ಳುತ್ತಿದ್ದಾರೆ, ಇತ್ತೀಚಿನ ಬೆಳವಣಿಗೆಯನ್ನು ನೋಡುತ್ತಿದ್ದಾಗ, ರಾಜ್ಯದಲ್ಲಿ ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರಗಳನ್ನು, ಮತ್ತು ಆರ್ ಎಸ್ ಎಸ್ ಅಜೆಂಡಗಳನ್ನು, ದಲಿತ ನಾಯಕರಾದ ಪ್ರಿಯಾಂಕ ಖರ್ಗೆ ಅವರು ಪ್ರತಿನಿತ್ಯ ಪ್ರಶ್ನಿಸುತ್ತಿದ್ದಾರೆ,
ಇದನ್ನು ಸಹಿಸಿಕೊಳ್ಳುವ ಸಾಧ್ಯವಾಗದಿದ್ದಾಗ ಇವರನ್ನು ತೇಜವದೆ ಮಾಡಲು ಈ ರೀತಿಯಾಗಿ ಕುತಂತ್ರ ಮಾರ್ಗಗಳು ಮಾಡಿ ದಲಿತ ನಾಯಕರುಗಳನ್ನು ಮುಗಿಸುವ ಪ್ರಯತ್ನ ಬಿಜೆಪಿ ನಾಯಕರುಗಳು ಪ್ರಯತ್ನ ಮಾಡುವುದೇ ಬಿಜೆಪಿ ಮತ್ತು ಆರ್ ಎಸ್ ಎಸ್ ಅಜೆಂಡವಾಗಿದೆ. ಇಂದು ದಲಿತ ಸಮುದಾಯವು ಬಿಜೆಪಿ ನಾಯಕರುಗಳಿಗೆ ಎಚ್ಚರಿಕೆಯನ್ನು ಕೊಡುತ್ತೇವೆ ಇಂತಹ ಗೋಡ್ದು ಆರೋಪಗಳಿಗೆ ಮತ್ತು ರಾಜೀನಾಮೆ ಕೇಳಿದರೆ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರುಗಳು ಬೆದರುವುದಿಲ್ಲ, ರಾಜಕೀಯ ಬಿಟ್ಟು ಹೋಗುವುದಿಲ್ಲ ಎಂಬ ಸಂದೇಶವನ್ನು ದಲಿತ ಸಮುದಾಯವು ಎಚ್ಚರಿಕೆಯಿಂದ ನೀಡುತ್ತೇವೆ. ದಲಿತ ಸಮುದಾಯವನ್ನು ಎದುರಾಕೊಂಡ್ರೆ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ. ಬಿಜೆಪಿ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷದ ನಾಯಕ ಗಳ ಮೇಲೆ ಸುಖ ಸುಮ್ಮನೆ ಆರೋಪ ಮಾಡುವುದು ಮತ್ತು ರಾಜೀನಾಮೆ ಕೇಳುವುದು ಚಾಳಿಯಾಗಿಬಿಟ್ಟಿದೆ.