
28th February 2025
ಯಾದಗಿರಿ..
ದೈಹಿಕ ಶಿಕ್ಷಕ. ಅಮಾನತು ಮಾಡಿದ್ದೂ ರದ್ದು ಪಡಿಸಿ ಮರು ಮುಂದುವರಿಸಿ.ದೇವನೂರು ಗ್ರಾಮಸ್ಥರು, ಹಾಗೂ 250ಕ್ಕೂ ಹೆಚ್ಚು. ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸೇಡಂ ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ದೇವೇಂದ್ರಪ್ಪ. ಮುಸ್ಟೂರು.ಕರ ಅವರನ್ನು. 13/02/2025 ರಂದು ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಅಮಾನತು
ಆಗಿರ್ತಾರೆ. ಕಾರಣ. ಸ್ಥಳೀಯ ಎಸ್ ಡಿ ಎಂ ಸಿ ಅಧ್ಯಕ್ಷ. ಸುಳ್ಳಿನ ಆರೋಪಗಳಿಂದ.
ದಿನನಿತ್ಯ. ಶಾಲೆಯಿಂದ ಹಾಲಿನ ಪ್ಯಾಕೆಟ್ ಇನ್ನಿತರ ಸಾಮಗ್ರಿಗಳಿಂದ ಕೊಡದೆ ಇದ್ದ ಪಕ್ಷದಲ್ಲಿ.
ಕೆಲವು ಸಾಮಗ್ರಿಗಳನ್ನು. ಪ್ರತಿ ತಿಂಗಳು. ಕೊಡಬೇಕೆಂದು ಬೇಡಿಕೆಗಳು ಇಟ್ಟಿದ್ದರಂತೆ ಎಸ್ ಡಿ ಎಂ ಸಿ. ಅಧ್ಯಕ್ಷರು.
ಇವರ ಮೇಲೆ ಇಲ್ಲದ ಆರೋಪಗಳನ್ನು ಸೃಷ್ಟಿ ಮಾಡಿ. ಶಾಲೆಗೆ ಸರಿಯಾದ ಸಮಯಕ್ಕೆ ಬರುವುದಿಲ್ಲವೆಂದು.
ಅಲ್ಲಿಪೂರ್ ಗ್ರಾಮದಿಂದ ದಿನ ನಿತ್ಯ. ಸರಿಸುಮಾರು 20 ವರ್ಷಗಳಿಂದ
ಸೇಡಂ ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ.
ದಿನಾಲು ಇವ್ರು. Up and down. ಮಾಡ್ತಾ ಇದ್ದಿದ್ದು ಸ್ಥಳೀಯ.ಡಿಡಿಎಂಸಿ ಅಧ್ಯಕ್ಷರಿಗೆ ಹಾಗೂ ಸ್ಥಳೀಯ ಗ್ರಾಮಸ್ಥರು ಕೂಡ.ಗೊತ್ತಿರುವಂತ ವಿಷಯ. ಇದಾಗಿದೆ.
ಇನ್ನು ಇದರಲ್ಲಿ ಸ್ಥಳೀಯವಾಗಿ ಯಾವುದೇ ರೀತಿಯಾಗಿ ತಪ್ಪು ಮಾಡಿಲ್ಲ ಸರಿಯಾದ ಸಮಯಕ್ಕೆ ಹೋಗದೆ ಇರುವ ಕಾರಣಕ್ಕೆ ಈ ರೀತಿಯಾದಂತಹ ಒದಂತಿಗಳು ಸೃಷ್ಟಿ ಮಾಡಿದಾರೆ ಅವರ್ ಮೇಲೆ ಯಾವುದೇ ರೀತಿಯಾಗಿ. ಪ್ರಕರಣಗಳು ದಾಖಲಾಗಿಲ್ಲ
ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸಿದ್ದು
ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು ಅಲ್ಲದೇ ಮಕ್ಕಳಿಗೆ ಶುದ್ಧ
ಕುಡಿಯುವ ನೀರು ಪೂರೈಕೆ ಧರ್ಮಸ್ಥಳ ಕ್ಷೇತ್ರ ಅವರ ಅನುದಾನದಲ್ಲಿ.
ಬಿಡುಗಡೆಗೊಳಿಸಿದ್ದು ಇರುತ್ತದೆ.
ಪ್ರತ್ಯೇಕ. ಮಕ್ಕಳಿಗೆ ಗ್ರಾಮ ಪಂಚಾಯತ್ ಅನುದಾನದಿಂದ. ಶೌಚಲಯ. ಕಾಮಗಾರಿ ನಿರ್ಮಾಣ.ಮಾಡಿರುತ್ತಾರೆ.
ಪ್ರತಿ ವರ್ಷ. ಆಟೋಟ ಸ್ಪರ್ಧೆಗಳನ್ನು ಕ್ರೀಡಾ ಕೂಟ ಮಕ್ಕಳಿಗೆ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದಾರೆ.
ಮತ್ತು ಶಾಲಾ ಸುತ್ತಮುತ್ತಲಿನ ಗಿಡ ಗಂಟೆಗಳನ್ನು ಸ್ವತಹ ತಾವೇ ಮುಂದೆ ನಿಂತುಕೊಂಡು. ಸ್ವಚ್ಛತೆಗೊಳಿಸಿದರು. ಇವರು
2016.2017.ಸಾಲಿನಿಂದ.20/21 ಸಾಲಿನವರೆಗೂ ಕಾರ್ಯನಿರ್ವಹಿಸುತ್ತಾರೆ.
ಇದನ್ನು ಗುರುತಿಸಿ ಶಾಲಾ ಶಿಕ್ಷಣ. ಸಂಸ್ಥೆ ವತಿಯಿಂದ ಅತ್ಯುತ್ತಮ ತಾಲೂಕು ಶಿಕ್ಷಕ ಎಂದು ಇವರಿಗೆ ಪ್ರಶಸ್ತಿ ಕೂಡ ಕೊಟ್ಟಿರುತ್ತಾರೆ.
20 21ನೇ ಸಾಲಿನ. ನಂತರ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಸ್ಥ ಇದ್ದರು.
ಏನೋ ಸುಖ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಒಂದು ವಿಡಿಯೋಗಳನ್ನು ಫೋಟೋಸ್ಗಳನ್ನು ಅರಿಬಿಟ್ಟಿದ್ದಾರೆ ಅನ್ನುವ ನೆಪವಾಗಿಸಿಕೊಂಡು.
ಇವರನ್ನು ದಿನಾಂಕ 13/02/2025 ರಂದು. ಅವನತ್ತು ಮಾಡಿರುತ್ತಾರೆ.
25th February 2025
ಯಾದಗಿರಿ..
ವರದಿ ಸುಧೀರ್ ಕೋಟೆ ಎಸ್ ಕೆ.
ಸೈದಾಪುರ್ ಚಿತ್ರದ..ನಾಯಕ ನಟ ಭಾನುಪ್ರಕಾಶ್ ಅವರ ಎರಡನೇ ಚಿತ್ರ.ಅಂತಿಮ ಯಾತ್ರೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ
ಹೌದು ಯಾದಗಿರಿ ಜಿಲ್ಲೆಯ. ಸಣ್ಣಸಂಬ್ರಾ ಗ್ರಾಮದ. ಬಡ ಕಲಾವಿದ. ಭಾನುಪ್ರಕಾಶ್ ಅವರ ಕನ್ನಡ ಚಿತ್ರ ಅಂತಿಮ ಯಾತ್ರೆ ರಾಷ್ಟ್ರೀಯ ಮಟ್ಟದಲ್ಲಿ. ಸ್ಪರ್ಧೆಗೆ ಆಯ್ಕೆ.
ಕೆಲ ಉತ್ತರ ಕರ್ನಾಟಕದ ಪ್ರಾಮಾಣಿಕ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ಸಿನಿಮಾ ಕ್ಷೇತ್ರದ ವಿವಿಧ ಭಾಗದ ಕೆಲಸಗಾರರು, ಬಹಳ ಶ್ರಮ ಪಟ್ಟು ಸಾಲ ಶೂಲ ಮಾಡಿಕೊಂಡು ತಮ್ಮ ಅಮೂಲ್ಯವಾದ ಜೀವನದ ಸಮಯ ಸಿನಿಮಾಕ್ಕಾಗಿ ಮೀಸಲಿರಿಸಿ ಅರ ಸಾಹಸ ಮಾಡಿ ಸಿನಿಮಾ ನಿರ್ಮಾಣ ಮಾಡಿರುತ್ತಾರೆ
ಆ ಸಿನಿಮಾವನ್ನು ಬಿಡುಗಡೆ ಮಾಡಲು ಹೊರಟರೆ ಅವರಿಗೆ ಬಂದೊದಗುವ ಗಂಡಾಂತರವೇ ಜಾಸ್ತಿ
ಚಿತ್ರಮಂದಿರಗಳು ಸಿಗದೇ ಒದ್ದಾಡೋ ತೊಳಲಾಟ, ಇನ್ನೊಂದು ಕಡೆ ವಿತರಕರ ನಿರ್ಲಕ್ಷ್ಯ, ಮತ್ತೊಂದು ಕಡೆ ಜಾಹೀರಾತುಗಳ ಕೊರತೆ, ಇದರ ಮಧ್ಯ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದು, ಇನ್ನು ಹಲವಾರು ತರದ ಸಮಸ್ಯೆಗಳು ಬರುತ್ತದೆ
ಅವುಗಳನ್ನು ಎದುರಿಸಿ ಮುಂದೆ ಬರುವಷ್ಟರಲ್ಲಿ ಜೀವನ ಜಿಗುಪ್ಸೆ ಬಂದುಬಿಡುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರು ಬಂಧುಗಳು ಮನೆಯವರೆಲ್ಲ... ನೋಡಿದ ತಕ್ಷಣ ಅಸಹ್ಯ ಮಾಡಿಕೊಳ್ಳೋ ಸ್ಥಿತಿಗೆ ಬರುವುದು, ಆಸು ಪಾಸಿನ ಜನರು ಇಲ್ಲಸಲ್ಲದ ಮಾತುಗಳಾಡುವುದು, ಈ ರೀತಿಯಾಗಿ ಮುಂದುವರೆಯುತ್ತದೆ.
ಮುಂದೆ ಜೀವನ ಶೂನ್ಯ ಅನಿಸಿಬಿಡಬಹುದು.
ಇಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ನಿರ್ದೇಶಕರಿಗೆ ಇನ್ನಿತರ ಕೆಲಸಗಾರರಿಗೆ ಬೆಲೆ ಸಿಗದ...ಸಿನಿಮಾ ಕ್ಷೇತ್ರದ ನಂಟು ಹೊಂದಿರುವ
ಯಾದಗಿರಿ ಗಿರಿ ನಾಡಿನ ಬಡ ಕಲಾವಿದ.ಭಾನುಪ್ರಕಾಶ್ ಅವರ. ಎರಡನೇ ಚಿತ್ರವು ಯಶಸ್ವಿ ಕಾಣೋದಕ್ಕಿಂತ ಮುಂಚೆ ಪ್ರದರ್ಶನವಾಗಿ. ರಾಷ್ಟ್ರಮಟ್ಟದಲ್ಲಿ.
ಅಂತಿಮಾ ಯಾತ್ರೆ ಕನ್ನಡ ಚಿತ್ರ.ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ. ಚಲನಚಿತ್ರೋತ್ಸವ. ಸ್ಪರ್ಧೆಯಲ್ಲಿ ಆಯ್ಕೆ ಆದ ಯಾದಗಿರಿ ಗಿರಿನಾಡಿನ.ಬಡ
ಕಲಾವಿದ ಸೈದಾಪುರ್ ಚಿತ್ರದ. ನಾಯಕ ನಟ ಎರಡನೇ ಚಿತ್ರಕ್ಕೆ ಒಲಿದು.ಬಂದ ಭಾಗ್ಯ. ಮೊದಲನೇ. ಸೈದಾಪುರ್ ಅನ್ನುವ ಚಿತ್ರದಲ್ಲಿ. ನಾಯಕ ನಟನಾಗಿ ನಟಿಸಿ.
ಯಶಸ್ವಿ ಕಂಡು. ಇನ್ನು ಎರಡನೇ ಚಿತ್ರಕ್ಕೆ. ಕಾಲಿಟ್ಟಿರುವ ಭಾನುಪ್ರಕಾಶ್ ಅವರ ಅಂತಿಮ ಯಾತ್ರೆ. ಕನ್ನಡ ಚಿತ್ರವು. ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಲನಚಿತ್ರ ಸ್ಪರ್ಧಿಯಲ್ಲಿ ಆಯ್ಕೆಯಾದ. ಯಾದಗಿರಿ ಜಿಲ್ಲೆಯ. ನಾಯಕ ನಟ ಭಾನುಪ್ರಕಾಶ್ ಅವರ ಎರಡನೇ ಚಿತ್ರ ಇದಾಗಿದೆ.
ಕನ್ನಡ ವಿಭಾಗದಲ್ಲಿ ಆಯ್ಕೆಯಾದ ಚಿತ್ರಗಳಿವು
ಕನ್ನಡ ವಿಭಾಗದಲ್ಲಿ 'ಮಿಕ್ಕ ಬಣ್ಣದ ಹಕ್ಕಿಗಳು", 'ಪರಜ್ಯ', 'ಕೆರೆಬೇಟೆ', 'ಬೇಲಿ ಹೂ', 'ದಡ ಸೇರದ ದೋಣೆ', 'ಅಂತಿಮ ಯಾತ್ರೆ', ತುಳು ಸಿನಿಮಾ 'ದಸ್ಕತ್', 'ಮರ್ಯಾದ ಪ್ರಶ್ನೆ' ಸೇರಿದಂತೆ 14 ಚಿತ್ರಗಳು ಸ್ಪರ್ಧೆಯಲ್ಲಿವೆ. ಅಂತಾರಾಷ್ಟ್ರೀಯ ಚಿತ್ರೋತ್ಸವದ ವಿವಿಧಸ್ಪರ್ಧಾ ವಿಭಾಗಗಳಿಗೆ ಆಯ್ಕೆಯಾಗಿವೆ. ಮಾ.1ರಿಂದ ಆರಂಭವಾಗಲಿದೆ.
20th February 2025
ಶೈಕ್ಷಣಿಕ ಕ್ಷೇತ್ರದಲ್ಲಿ ಹೆಡಗಿಮದ್ರಾ ಶ್ರೀಮಠದ ಸಾಧನೆ ಅದ್ಭುತ
ಯಾದಗಿರಿ : ಶೈಕ್ಷಣಿಕ ಕ್ಷೇತ್ರದಲ್ಲಿ ಹೆಡಗಿಮದ್ರಾ ಶ್ರೀಮಠದ ಸಾಧನೆ ಅದ್ಭುತವಾಗಿದ್ದು, ಶ್ರೀಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳ ಕಾರ್ಯದ ಜೊತೆಗೆ ಈ ನಾಡಿನಲ್ಲಿ ಅನೇಕ ಮಠಾಧೀಶರು ವಿದ್ಯಾರ್ಜನೆಗಾಗಿ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಭಗವತ್ಪಾದರು ಹೇಳಿದರು.
ತಾಲೂಕಿನ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠದ ಆವರಣದಲ್ಲಿ ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಧರ್ಮ ಸಂಸ್ಕೃತಿಯ ಕಾರ್ಯದ ಜೊತೆಗೆ ದೊಡ್ಡ ದೊಡ್ಡ ಪೀಠಗಳು ಶೈಕ್ಷಣಿಕ ಕಾರ್ಯಮಾಡುತ್ತಿದ್ದಾರೆ, ಆದರೆ ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಶಾಖಾಮಠಗಳು ಗ್ರಾಮೀಣ ಜನರ ಶೈಕ್ಷಣಿಕ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಮಠಾಧೀಶರ ಕಾರ್ಯ ಅತಿದೊಡ್ಡದು ಎಂದು ಹೇಳಿದರು.
ಭೌತಿಕ ಸಂಪತ್ತನ್ನು ಯಾರು ಬೇಕಾದರೂ ತಮ್ಮದನ್ನಾಗಿಸಿಕೊಳ್ಳಬಹುದು. ಆದರೆ, ಜ್ಞಾನ ಎಂಬುದು ಸಾಧಕನ ಸ್ವತ್ತು. ಗುರುಮುಖೇನ ವಿದ್ಯಾ ಸಂಪತ್ತು ಗಳಿಸಲು ಶ್ರದ್ದೆ ಬಹು ಮುಖ್ಯ ಎಂದು ಹೇಳಿದರು.
ಭೌತಿಕ ಸಂಪತ್ತಿಗಿAತ ವಿದ್ಯಾಸಂಪತ್ತು ಬಹು ದೊಡ್ಡ ಆಸ್ತಿ. ಹಾಗಾಗಿ ಜೀವನದಲ್ಲಿ ವಿದ್ಯೆ ಸಂಪಾದನೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಸಲಹೆ ನೀಡಿದರು.
ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿಗಳು ಹಾಗೂ ಎಸ್.ಎಸ್.ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವುದನ್ನು ಕಲಿಸುವ ಜತೆಗೆ ಬದುಕುವ ಕಲೆ, ಸಂಸ್ಕಾರ ಹಾಗೂ ಗುಣವಂತಿಕೆಯನ್ನು ಬೆಳೆಸುತ್ತಿದೆ ಎಂದರು.
ಇಂದಿನ ಮಕ್ಕಳು ನಾಳೆ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಪ್ರತಿನಿಧಿಗಳಾಗಿ ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ ಮಾತನಾಡಿ, ವಿದ್ಯಾರ್ಥಿಗಳು, ಜೀವನದಲ್ಲಿ ಗುರಿ ಮತ್ತು ಛಲ ಬೆಳೆಸಿಕೊಳ್ಳುವುದರ ಜತೆಗೆ ಕಠಿಣ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಬದುಕಿನಲ್ಲಿ ಬರುವ ಕಷ್ಟ ಮತ್ತು ಸಾಧಿಸಬೇಕೆಂಬ ಛಲದಿಂದ ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಆಗ ಯಶಸ್ಸು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ನೂರಾರು ವಿದ್ಯಾರ್ಥಿಗಳಿಗೆ ಶ್ರೀಗಳು ವಿದ್ಯಾದಾನ ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಜೀವನ ಬೆಳಕಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಪಡಬೇಕು ಎಂದರು.
ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹಂಪ್ಪಣ್ಣ ಸಜ್ಜನ್, ನಾಗರತ್ನ ಕುಪ್ಪಿ, ಸಂಜಿವರಡ್ಡಿ ದರ್ಶನಪುರ, ಮಹಂತಯ್ಯ ಸ್ವಾಮಿ ಹೆಡಗಿಮದ್ರಾ, ಡಾ.ಸಿ.ಎಮ್ ಪಾಟೀಲ್, ಬಸವರಾಜ ಪಾಟೀಲ ಬಿಳ್ಹಾರ, ಸುಧಾಕರ ರಡ್ಡಿ ಅನಪುರ, ಬಸವರಾಜ ಎಲ್ಹೇರಿ, ಬಸ್ಸುಗೌಡ ಬಿಳಾರ, ರಾಯಪ್ಪಗೌಡ ಹುಡೆದ, ಸೇರಿದಂತೆ ಶಾಲಾ ಮಕ್ಕಳು ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಗಂಗಮ್ಮ ಮಲ್ಕಾರ ವಂದಿಸಿದರು.
18th February 2025
ಯಾದಗಿರಿ
ಮುಂದೆ ನಿಂತು ಶಾಲಾ ಮಕ್ಕಳಿಂದ
ಕೆಲಸ ಮಾಡಿಸಿದ ಮುಖ್ಯ
ಗುರು ಕ್ಯಾತನಾಳ ಸರ್ಕಾರಿ
ಶಾಲೆ ಆವರಣದಲ್ಲಿ ಘಟನೆ ಕ್ರಮಕ್ಕೆ
ಟಿ.ಎನ್.ಭೀಮುನಾಯಕ ಆಗ್ರಹ
ಯಾದಗಿರಿ: ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ
ಮುಂದೆ ಬಂದು ಪಾಲಕರಿಗೆ ಕೀರ್ತಿ ತರಲಿ ಎನ್ನುವ ಮಹದಾಸೆಯಿಂದ ಮಕ್ಕಳನ್ನು ಶಾಲೆಗೆ ಕಳಿಸುವ ಪಾಲಕರಿಗೆ ಈ ಘಟನೆ ದಿಗ್ಧಮೆ ಗೊಳಿಸುವಂತಿದೆ.
ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಿರುವ ದೇಗುಲದಲ್ಲಿ ಇಂತಹ ಘಟನೆ ನಡೆದಿದ್ದು, ರ್ಸಾವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಡಮಗೇರಾ.(ಬಿ) ಪಂಚಾಯಿತಿಯ ವ್ಯಾಪ್ತಿಯ ಕ್ಯಾತನಾಳ ಗ್ರಾಮದಲ್ಲಿ ಸರಕಾರಿ ಶಾಲೆಯಲ್ಲಿ ಘಟನೆ ನಡೆದಿರುವ ಕುರಿತು ಸ್ಥಳೀಯರು ಮುಖ್ಯ ಗುರುಗಳನ್ನು ಪ್ರಶ್ನೆ ಮಾಡಿದ್ದಾರೆ.
13th February 2025
ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ
13th February 2025
ಯಾದಗಿರಿ.
ವಿದ್ಯುತ್ ಗ್ರಾಹಕರ ಸಂವಾದ, ಎಸ್ಒಪಿ ಸಭೆ ಆಯೋಜಿಸಲಾಗಿದೆ ಎಂದು ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು (ವಿ) ರಾಘವೇಂದ್ರ ಅವರು ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಕಾರ್ಯ ಮತ್ತು ಪಾಲನಾ ಯಾದಗಿರಿ ಹಾಗೂ ಗುರುಮಠಕಲ್ ಉಪ ವಿಭಾಗಗಳಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ, ಎಸ್ಒಪಿಯನ್ನು ಏರ್ಪಡಿಸಲಾಗಿದೆ. ಯಾದಗಿರಿ ವಿಭಾಗದಿಂದ ಯಾದಗಿರಿ, ಗುರುಮಠಕಲ್ ಉಪ ವಿಭಾಗದಲ್ಲಿ ಇದೇ 2025ರ ಫೆಬ್ರವರಿ 15 ರಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಅಧೀಕ್ಷಕ ಅಭಿಯಂತರರು (ವಿ) ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಸಕ್ತರು ಈ ಸಭೆಗೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಈ ಮೂಲಕ ವಿನಂತಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
13th February 2025
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಇದೇ ಫೆಬ್ರವರಿ 13 ಹಾಗೂ 14 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಈ ಕೆಳಕಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆಗೆ ಶಹಾಪೂರ ಗೆ ಆಗಮಿಸಿ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಸಂಜೆ 5:00 ಗಂಟೆಗೆ ಕಲ್ಬುರ್ಗಿಗೆ ಪ್ರಯಾಣ ಬೆಳೆಸಿ ಕಲ್ಬುರ್ಗಿಯಲ್ಲಿ ವಾಸ್ತವ್ಯ ಮಾಡುವರು.
ಸಚಿವರು ಫೆಬ್ರವರಿ 14 ರಂದು ಬೆಳಿಗ್ಗೆ 10:30 ಗಂಟೆಗೆ ಕೆಂಭಾವಿಗೆ ಆಗಮಿಸಿ, ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ನಂತರ ಸಂಜೆ 4:00 ಗಂಟೆಗೆ ಕಲ್ಬುರ್ಗಿಗೆ ಪ್ರಯಾಣ ಬೆಳೆಸುವರು
13th February 2025
ರಾಜ್ಯದಲ್ಲಿ250 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ ಕರ್ನಾಟಕ ಭೀಮ್ ಸೇನೆ ಒತ್ತಾಯ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮಾದರಿಯಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬೃಹತ್ ಪ್ರತಿಮೆಯನ್ನು ನಿರ್ಮಿಸುವಂತೆ ಕರ್ನಾಟಕ ಭೀಮ್ ಸೇನೆ ಸಂಘಟನೆ ವತಿಯಿಂದ ಇಂದಿನ ದಿನ ರಾಜ್ಯವ್ಯಾಪ್ತಿ ಏಕಕಾಲಕ, ಪತ್ರಿಕಾಗೋಷ್ಠಿ ಮಾಡುತ್ತಿರುವೆವು ಎಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್ ಗೌಡೂರು ಹೇಳಿದರು.
ಗುರುವಾರ, ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಈ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮರಿಲಿಂಗಪ್ಪ ಚಟ್ನಳ್ಳಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಖಾನಾಪುರ, ಗೌರವ ಅಧ್ಯಕ್ಷ ವಾಸುದೇವ,ರಾಜು ಚಟ್ನಳ್ಳಿ, ಮೌನೇಶ್ , ಸಾಬಣ್ಣ ಹೊಸಮನಿ, ಹೊನ್ನಪ್ಪ ಖಾನಾಪುರ, ಇದ್ದರು.
12th February 2025
ಯಾದಗಿರಿ..
ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಅಬಕಾರಿ ಇಲಾಖೆಯ superdent of police ಅಧಿಕಾರಿಯಾದ ಶ್ರೀರಾಮ್ ರಾಠೋಡ
ಮತ್ತು ಆಸ್ಕರ್ ಫೌಂಡೇಶನ್ ನಿರ್ದೇಶಕರಾದ ಅಶೋಕ್ ಚಿನ್ನಾ ರಾಠೋಡ್, ಈ ಸಂಸ್ಥೆಯ ಉಸ್ತುವಾರಿಯಾದ ಗೋವಿಂದ ರಾಠೋಡ ಸಮಾಜ ಸೇವಕ ಅವಿನಾಶ್ ಚೀನ್ನಾ ರಾಠೋಡ, ಜೀಲ್ಲಾ ಎಂಗ್ ಲಿಡರಗಳಾದ ಆಕಾಸ ಪವಾರ್, ಕರಣ ಚವ್ಹಾಣ್ ಮತ್ತು ಇದೆ ತರ ಫುಟ್ಬಾಲ್ ಎಂಗ್ ಲಿಡರಗಳಾದ ಅನಿಲ,ಲಾಲು ಪವಾರ್, ಗೋವಿಂದ ಚಿನ್ನಾ ರಾಠೋಡ ಮತ್ತು ಇನ್ನಿತರರು ಉಪಸ್ಥಿತರಿದ್ದರು
12th February 2025
ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಿ ಮುದ್ನಾಳ್ ಸಲಹೆ.
ಯಾದಗಿರಿ. ದೇಶದ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸದಾ ಕ್ರಿಯಾಶೀಲತೆಯಿಂದ ಹಾಗೂ ಜನಪರ ಏಳ್ಗೆಗೆ ಮುಂಚೂಣಿಯಲ್ಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಿದ್ದಾರೆ.
ಅಂತಹ ಮಹಾನ್ ವ್ಯಕ್ತಿ ಹಾಗೂ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಗೌಡ ಮುದ್ನಾಳ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿ. ಜೆ. ಪಿ. ಯ ಹಿರಿಯ ಮುಖಂಡ ಶ್ರೀ ಭೀಮರಾಯ ಕೊಂಡಿ ಆರ್. ಹೊಸಳ್ಳಿ, ಮಾರಪ್ಪ ವರ್ಕನಳ್ಳಿ, ಹಣಮಂತ ಹಾಕಿನೂರು,ಗ್ರಾಪo ಸದಸ್ಯ ಸಿದ್ರಾಮಪ್ಪ,ನಗರಸಭೆ ಸದಸ್ಯ ಸ್ವಾಮಿದೇವ್ ದಾಸನಕೇರಿ, ಮಾಜಿ ನಗರಾಭಿವೃದ್ಧಿ ಸದಸ್ಯ ಸುಭಾಸ್ ಮಾಳಿಕೇರಿ, ರಾಜು ಪೂಜಾರಿ,ದುರ್ಗಪ್ಪ ಹೆಚ್. ಪೂಜಾರಿ ಇತರರು ಇದ್ದರು.