

ರಾಮಸಮುದ್ರದಲ್ಲಿ 688 ಲಕ್ಷ ರೂ.ವೆಚ್ಚದ ಮೂರು ಕಾಮಗಾರಿ ಉದ್ಘಾಟನೆ.ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು
14th February 2025
ಯಾದಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲಗುರಿ: ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು.
ಯಾದಗಿರಿ : ನಗರ ಸೇರಿದಂತೆಯೇ ಮತಕ್ಷೇತ್ರದ ಪ್ರತಿ ಹಳ್ಳಿಗಳ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶವಾಗಿದ್ದು, ಇನ್ನೂ ಮೂರು ವರ್ಷಗಳಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಮೂಲಕ ಮತದಾರರ ಋಣ ತೀರಿಸುವ ಕೆಲಸ ಮಾಡುವೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಭರವಸೆ ನೀಡಿದರು.
ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಏರ್ಪಡಿಸಿದ್ದ ಕೆಕೆಆರ್ ಡಿಬಿ 2023-24ನೇ ಸಾಲಿನ ಕೆಕೆಆರ್ ಡಿಬಿ ಮೈಕ್ರೋ ಅನುದಾನದ ಅಡಿಯಲ್ಲಿ ಒಟ್ಟು 688.01ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಬರುವ ದಿನಗಳಲ್ಲಿ ಕೆಕೆಆರ್ ಡಿಬಿ, ರಾಜ್ಯ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಹೇಳಿದ ಶಾಸಕರು, ಸಿಎಂ ಸಿದ್ದರಾಮಯ್ಯ ನೇತ್ವತೃದ ಸರ್ಕಾರ ಅನೇಕ ಹೊಸ,ಹೊಸ ಯೋಜೆನಗಳನ್ನು ಜಾರಿ ಮಾಡಿದೆ. ಪಂಚ ಗ್ಯಾರಂಟಿಗಳು ಹಳ್ಳಿಗರ ಮನಸ್ಸು ಮುಟ್ಟಿವೆ. ಜನಪರ ಸರ್ಕಾರದಿಂದ ಅಭಿವೃದ್ಧಿಯ ಹೊಳೆ ಹರಿಯಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಧರ್ ಮಾತನಾಡಿ, ಕಾಲಮಿತಿ ಒಳಗೆ ಗುಣ್ಣಮಟ್ಟದ ಕಾಮಗಾರಿ ಕೈಗೊಳಲು ಶಾಸಕರು ಸೂಚನೆ ನೀಡಿದ್ದಾರೆ. ಕಾಮಗಾರಿ ಗುಣಮಟ್ಟದಿಂದ ಮಾಡಲಾಗುವುದು ಎಂದರು.
ಗ್ರಾಮದ ಮುಖಂಡ ಬಸವರಾಜ ಬಾಗ್ಲಿ ಮಾತನಾಡಿ, ಸರ್ಕಾರ ಬಡ ಜನರಿಗಾಗಿ ಅನೇಕ ಜನಪರ ಯೋಜನೆ ಜಾರಿಗೆ ತರುವ ಮೂಲಕ ಬಡವರ ಪಾಲಿಗೆ ವರದಾನವಾಗಿದೆ ಎಂದರು.
ಈ ವೇಳೆ ಶಾಸಕರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಹಂತ,ಹಂತವಾಗಿ ಬಗೆ ಹರಿಸುವುದಾಗಿ ಹೇಳಿದರು.
ರಾಮಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷೆ ಆನಂದಮ್ಮ, ಕಾಂಗ್ರೆಸ್ ಹಿರಿಯ ಮುಖಂಡರೂ ಆದ ಗುತ್ತೀಗೆದಾರ ಚಿದಾನಂದ ಕಾಳೆಬೆಳಗುಂದಿ, ಸುದರ್ಶನ ನಾಯಕ, ಉಮೇಶ ಮುದ್ನಾಳ, ಲಚಮರೆಡ್ಡಿ, ಪಿಡಿಓ ರೇಣುಕಾ, ಮಲ್ಲಿಕಾರ್ಜುನ ಈಟೆ, ಮರಿಲಿಂಗಪ್ಪ, ಶಿವಲಿಂಗಪ್ಪ, ಸಿದ್ದಲಿಂಗಪ್ಪ ಗುನಕಿ, ಮಲ್ಲಿಕಾರ್ಜುನ ರಾಮಸಮುದ್ರ, ಕೇಶವ ಪವಾರ್ ಸೇರಿದಂತೆಯೇ ಇತರರಿದ್ದರು.
------
ಬಾಕ್ಸ
ಮೂರು ಕಾಮಗಾರಿ, 688 ಲಕ್ಷ ರೂ.ವೆಚ್ಚ.
ಈ ವೇಳೆ ತಾಲೂಕಿನ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ರಸ್ತೆ 4.15 ಕೋಟಿ ರೂ.ವೆಚ್ಚದಲ್ಲಿ ಮರು ಡಾಂಬರೀಕರಣ, 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಮೈಕ್ರೋ 180 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಮುಂಡರಗಿ-ಅಚ್ಚೋಲ ರಸ್ತೆ ಸೇತುವೆ ನಿರ್ಮಾಣ ಹಾಗೂ 93.01ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಅರಿಕೇರಾ (ಕೆ) ದಿಂದ ಮೋಟಳ್ಳಿ (ಜಿ.ಮು.ರ) ರಸ್ತೆ ಸುಧಾರಣೆ ಕಾಮಗಾರಿ ಉದ್ಘಾಟಿಸಿದರು.
------
ಹೋರಾಟಕ್ಕೆ ಸ್ಪಂದಿಸಿ ಸಿಂದಗಿ ಮತ್ತು ಕೊಡಂಗಲ್ ರಾಜ್ಯ ಹೆದ್ದಾರಿಗೆ 1 ಕೋಟಿ 40 ಲಕ್ಷ ಅನುದಾನ ನೀಡಿ ಕಾಮಗಾರಿ ಆರಂಭಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರಿಗೆ ಹೋರಾಟಗಾರ ಉಮೇಶ ಮುದ್ನಾಳ ವಿಶೇಷ ಸನ್ಮಾನ ಮಾಡಿದರು.
-----

ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಅಮಿತ್ ಷಾ ರನ್ನು ಕೆಂದ್ರ ಸಚಿವ ಸಂಪುಟದಿಂದ ವಜಾ ಮಾಡಿ ನಾಗರತ್ನ ಪಾಟೀಲ್ ಆಗ್ರಹ
31st December 2024
ಯಾದಗಿರಿ.
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಅಮಿತ್ ಷಾ ರನ್ನು ಕೆಂದ್ರ ಸಚಿವ ಸಂಪುಟದಿಂದ ವಜಾ ಮಾಡಿ ನಾಗರತ್ನ ಪಾಟೀಲ್ ಆಗ್ರಹ
ವರದಿ : ಸುಧೀರ್ ಕೋಟಿ ಎಸ್. ಕೆ.
ವಡಗೇರ. ತಾಲೂಕಿನ ರೈತ ಸಂಘ ಹಾಗೂ ದಲಿತ ಪರ ಒಕ್ಕೂಟ ಸಂಘದಿಂದ ಸಂವಿಧಾನ ಶಿಲ್ಪಿ ಡಾ ಬಿ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿದ ಕೆಂದ್ರ ಗೃಹ ಸಚಿವ ಅಮಿತ್ ಷಾ ರನ್ನು ಕೂಡಲೇ ಕೆಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ವಡಗೇರ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ನಾಗರತ್ನ ವಿ ಪಾಟೀಲ್ ಅಮಿತ್ ಷಾ ಅವರು ಡಾ,, ಅಂಬೇಡ್ಕರ್ ಬಗ್ಗೆ ಗೌರವ ಇಲ್ಲದೆ ಅಗೌರವದಿಂದ ಮಾತನಾಡಿದ ಇವರನ್ನ ಕೂಡಲೇ ಕೆಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಈ ದೇಶದ ಜನರಿಗೆ ಕ್ಷಮೆ ಕೇಳಬೇಕು ಈ ದೇಶದ ಎಲ್ಲ ನಾಗರಿಕರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಮತ್ತು ಹಕ್ಕುಗಳು ಕೊಟ್ಟಿದ್ದು ಅಂಬೇಡ್ಕರ್ ನಾವೆಲ್ಲರೂ ಪ್ರತಿ ದಿನ ಅಂಬೇಡ್ಕರ್ ಅವರನ್ನ ಸ್ಮರಿಸಿಕೊಳ್ಳಬೇಕು ಎಂದರು ನಂತರ ಮಾತನಾಡಿದ ಸಾಹಿತಿ ಸಿದ್ದಣ್ಣ ಪೂಜಾರಿ ಡಾ,, ಅಂಬೇಡ್ಕರ್ ಅವರು ಇದ್ದಾಗ ಕಾಂಗ್ರೆಸ್ ನವರೂ ಅವಮಾನಿಸಿದರು ಅಂಬೇಡ್ಕರ್ ಅವರು ನಮ್ಮನ್ನ ಅಗಲಿದ ನಂತರ ಭಾರತಿಯ ಜನತಾ ಪಕ್ಷದವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ ಇವರಿಗೆಲ್ಲ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದೆ ಫ್ಯಾಷನ್ ಆಗಿದೆ ಡಾ,, ಅಂಬೇಡ್ಕರ್ ಅವರನ್ನ ವಿಶ್ವವೇ ಕೊಂಡಾಡುತ್ತಿದೆ ಆದರೆ ನಮ್ಮ ದೇಶದಲ್ಲಿ ಅಂಬೇಡ್ಕರ್ ಅವರನ್ನ ಒಪ್ಪಿಕೊಳ್ಳದೆ ಇ ಷಾ ಅಂತ ಮನಸ್ತಿತಿಯವರೂ ಅವಮಾನ ಮಾಡುತ್ತಿದ್ದಾರೆ ಇಂತ ಜನಪ್ರತಿನಿಧಿಗಳು ಶೋಷಿತ ವರ್ಗಗಳಿಗೆ ರೈತರಿಗೆ ಕೂಲಿಕಾರರಿಗೆ ಏನು ಕೊಡುಗೆ ನೀಡಲು ಸಾಧ್ಯ ದೇಶದ ಮಹಿಳೆಯರಿಗೆ ಯಾವ ರಕ್ಷಣೆ ನೀಡಲು ಸಾಧ್ಯ ಅಂಬೇಡ್ಕರ್ ಅವರಿಗೆ ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಹೋರಾಟಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪ್ರಧಾನಿಯ ನಡೆ ಖಂಡನಿಯ ತಕ್ಷಣ ಕೆಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಡಾ,,ಗಾಳೆಪ ಪೂಜಾರಿ ರಂಗನಾಥ ಬಾಗ್ಲಿ ನಿಂಗಣ್ಣ ಕರಡಿ ಮಲ್ಲಣ್ಣ ನೀಲಹಳ್ಳಿ ಶರಣು ವಡಗೇರ ಸಿದ್ದಣ್ಣ ಹುಬ್ಬಳ್ಳಿ ಬಾಲಪ್ಪ ಪೂಜಾರಿ ದಲಿತ ಹಾಗೂ ರೈತ ಪರ ಹೋರಾಟಗಾರರು ಮಹಿಳೆಯರು ಇದ್ದರು

ಕಾಂಗ್ರೆಸ್ ಸರ್ಕಾರದಲ್ಲಿ ಸರಣಿ ಹಗರಣಗಳು; ಸಚಿವರುಗಳ ಬೆದರಿಕೆಯಿಂದಾಗಿ ಆತ್ಮಹತ್ಯೆಗಳು ನಡೆಯುತ್ತಿವೆ: ಹಣಮಂತ ಇಟಗಿ
31st December 2024
ಕೈ ಸರ್ಕಾರದಿಂದ ಆತ್ಮಹತ್ಯೆ, ಕೊಲೆಗಳ ಭಾಗ್ಯ : ಜಿಲ್ಲಾ ಬಿಜೆಪಿ ಆರೋಪ
ವರದಿ : ಸುಧೀರ್ ಕೋಟಿ ಎಸ್. ಕೆ.
ಕಾಂಗ್ರೆಸ್ ಸರ್ಕಾರದಲ್ಲಿ ಸರಣಿ ಹಗರಣಗಳು; ಸಚಿವರುಗಳ ಬೆದರಿಕೆಯಿಂದಾಗಿ ಆತ್ಮಹತ್ಯೆಗಳು ನಡೆಯುತ್ತಿವೆ: ಹಣಮಂತ ಇಟಗಿ
ಯಾದಗಿರಿ: ರಾಜ್ಯದಲ್ಲಿ ಹಾಲಿ ಸರ್ಕಾರದ ಆಡಳಿತ ಬಂದಾಗಿನಿAದ ಸರಕಾರದಲ್ಲಿರುವವರ ಬೆದರಿಕೆಯ ಕಾರಣಕ್ಕೆ ಸರಣಿ ಆತ್ಮಹತ್ಯೆ ಪ್ರಕರಣಗಳು, ಸರಣಿ ಹಗರಣಗಳು ನಡೆಯುತ್ತಿದ್ದು, ಕಾಂಗ್ರೆಸ್ ರಾಜ್ಯದ ಜನತೆಗೆ ಆತ್ಮಹತ್ಯೆಗಳ ಭಾಗ್ಯ ನೀಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರು ಆತ್ಮಹತ್ಯೆ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತ, ರಾಜು ಕಪನೂರನಿಂದ ಕಿರುಕುಳದ ಉಲ್ಲೇಖವಿದೆ.
ಹೀಗಾಗಿ ಸಚಿನ್ ಪಾಂಚಾಳ್ ಆತ್ಮಹತ್ಯೆ ಸಚಿವ ಪ್ರಿಯಾಂಕ್ ಖರ್ಗೆ ಕೃಪಾಪೋಷಿತ ರೌಡಿ, ಅನೇಕರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಗಳನ್ನು ಎದುರಿಸುತ್ತಿರುವ ರಾಜು ಕಪನೂರನ ನೆರೆ ಬೆದರಿಕೆಯಿಂದ ಆಗಿದೆ ಎಂಬುದು ಡೆತ್ ನೋಟ್ ನಿಂದ ದೃಢವಾಗಿದೆ ಎಂದು ಅವರು ಹೇಳಿದರು.
ಮುಡಾ, ವಾಲ್ಮೀಕಿ, ಭೋವಿ ಸೇರಿದಂತೆ ಸಾಲು ಸಾಲು ಹಗರಣಗಳು ಈ ಹಗರಣಗಳಿಗೆ ಅಮಾಯಕರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿ ಆವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಒಂದರ ಮೇಲೆ ಒಂದರAತೆ ಆಗುತ್ತಿವೆ.
ವಾಲ್ಮೀಕಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ ಆತ್ಮಹತ್ಯೆ, ಲಕ್ಷಿö್ಮÃ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ, ದಾವಣಗೆರೆಯಲ್ಲಿ ಗುತ್ತಿಗೆದಾರೊಬ್ಬರ ಆತ್ಮಹತ್ಯೆ, ಮಾಗಡಿಯಲ್ಲಿ ಲಾರಿ ಮಾಲಿಕರೊಬ್ಬರು ಲಂಚ ಕೊಡಲಾಗದೆ ಆತ್ಮಹತ್ಯೆ, ಯಾದಗಿರಿ ಶಾಸಕ ಪರಶುರಾಮ್ ಆತ್ಮಹತ್ಯೆ ಆಗಿವೆ ಈದೀಗ ಸಚಿನ್ ಪಾಂಚಾಳ ಆತ್ಮಹತ್ಯೆಯಾಗಿದೆ ಎಂದು ಅವರು ದೂರಿದರು.
ಈದೀಗ ಈ ಆತ್ಮಹತ್ಯೆ ಡೆತ್ ನೋಟ್ ನಲ್ಲಿ ಕಲ್ಬುರ್ಗಿ ಜಿಲ್ಲೆಯ ಹಿಂದು ಸಮಾಜದ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಬಿಜೆಪಿ ನಾಯಕರಾದ ಶಾಸಕ ಬಸವರಾಜ ಮತ್ತಿಮೂಡ, ಚಂದುಪಾಟೀಲ್ ಚಿತ್ತಾಪೂರದ ಮಣಿಕಂಠ ರಾಠೋಡ ಅವರ ಕೊಲೆಗೆ ಮಹಾರಾಷ್ಟçದ ರೌಡಿಗಳಿಗೆ ಸೂಪಾರಿ ಕೊಟ್ಟಿರುವ ಸಂಗತಿ ಬಯಲಾಗಿದೆ. ಈ ಮೂಲಕ ಸರ್ಕಾರ ಆತ್ಮಹತ್ಯೆಗಳನ್ನು ಮಾಡಿಸಲು ಕಾರಣವಾಗಿದ್ದಲ್ಲದೇ ಈದೀಗ ರಾಜಕೀಯ ಪ್ರೇರಿತ ಕೊಲೆಗಳು ಮಾಡಿಸಲು ಮುಂದಾಗಿರುವುದು ಅತ್ಯಂತ ನೀಚ ಸ್ಥರಕ್ಕೆ ಇಳಿಯುತ್ತಿದೆ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಒಟ್ಟಾರೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಈ ಸರ್ಕಾರ ಆತ್ಮಹತ್ಯೆಗಳನ್ನು, ಕೊಲೆಗಳನ್ನು ಮಾಡಿಸಲೆಂದೇ ಕುಳಿತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕಲ್ಬುರ್ಗಿ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದಿವೆ. ಅವನ್ನು ಮುಚ್ಚಿ ಹಾಕಿದ ಷಡ್ಯಂತ್ರ ಹಿಂದೆ ನಡೆದಿವೆ. ನಡೆಯುತ್ತಲೇ ಇವೆ. ಈದೀಗ ಕಾಂಗ್ರೆಸ್ಸಿನವರು ಸಚಿನ್ ಪಾಂಚಾಳರ ಕುಟುಂಬದವರನ್ನು ಬೆಳಗಿನ ಜಾವ 3 ಗಂಟೆಗೆ ಭೇಟಿ ಕೊಟ್ಟುದ್ದು ಅವರನ್ನು ಓಲೈಕೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ ಮತ್ತೆ ಅವರ ಕುಟುಂಬದಲ್ಲಿರುವ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುತ್ತಾರೆ. ಗುಲ್ಬರ್ಗದ ಪೊಲೀಸ್ ಇಲಾಖೆ ಖರ್ಗೆ ಮತ್ತು ಕುಟುಂಬದ ಕಪಿಮುಷ್ಟಿಯೊಳಗಿದೆ ಎಂದು ಆರೋಪಿಸಿದರು.
ಹಿಂದೆ, ಇದೇ ಸರಕಾರದ ಸಚಿವ ನಾಗೇಂದ್ರ ಅವರೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಕ್ಷಣವೂ ತಡ ಮಾಡದೆ. ಪ್ರಿಯಾಂಕ ಖರ್ಗೆಯವರ ರಾಜೀನಾಮೆ ಪಡೆದುಕೊಳ್ಳಲಿ. ಯಾವುದೋ ನೆಪ ಮಾಡಿ, ರಕ್ಷಿಸುವ ದುಸ್ಸಾಹಸ ಬೇಡ ಎಂದು ಅವರು ಹೇಳಿದರು.
ರಾಜ್ಯಾದ್ಯಕ್ಷರಿಂದ ಸಂತ್ರಸ್ತರ ಮನೆಗೆ ಭೇಟಿ, ಕಾಂಗ್ರೆಸ್ ನಿಂದ ಮದ್ಯರಾತ್ರಿ ಭೇಟಿ ಧಮಕಿ:
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ವಿಪಕ್ಷ ನಾಯಕ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರು, ಸ್ಥಳೀಯ ಶಾಸಕರು, ಪಕ್ಷದ ಜಿಲ್ಲಾ ಅಧ್ಯಕ್ಷರು, ಭಾಲ್ಕಿ ತಾಲ್ಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‌ಗೆ 5 ಜನರು ಸಹೋದರಿಯರಿದ್ದಾರೆ. ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡಬೇಕು ಮತ್ತು ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಏಕೆಂದರೆ ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾಗ ಅವರ ಇಬ್ಬರು ಸಹೋದರಿಯರಾದ ಸವಿತಾ, ಸುನೀತಾ ಮಧ್ಯಾಹ್ನವೇ 2.15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿದ್ದರು. ಗೋಗರೆದು ಪ್ರಾಣ ಉಳಿಸಲು ಕೋರಿದರೆ, ಅವರ ಮನವಿಯನ್ನು ಕಿಂಚಿತ್ತೂ ಲೆಕ್ಕಿಸದೆ, ಪಿಎಸ್‌ಐ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ದೂರಿನ ಸಂಬAಧ ಅವರನ್ನು ಪೊಲೀಸ್ ಸ್ಟೇಷನ್ ಗಳಿಗೆ ತಿರುಗಾಡಿಸಿದ್ದರು.
ಕೊಟ್ಟ ದೂರು ಸ್ವೀಕರಿಸಿಲ್ಲ: ಸಚಿನ್ ಹುಡುಕುವ ಕೆಲಸವನ್ನೂ ಮಾಡಿಲ್ಲ:
ಸಚಿನ್ ಆತ್ಮಹತ್ಯೆ ಪೋಸ್ಟ್ ಮಾಡಿದ ನಂತರ ಕುಟುಂಬದವರು ದೂರು ನೀಡಲು ಹೋದರೂ ಅಮಾನವೀಯವಾಗಿ ವರ್ತಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ತನೆಯು ಮೃಗೀಯವಾಗಿದೆ ಎಂದು ದೂರಿದರು.
ಬಿಜೆಪಿ ಮುಖಂಡರ ಕೊಲೆಗೆ ಸಂಚು:
ಹಿAದೂ ಸಮಾಜದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲಬುರ್ಗಿಯ ಬಿಜೆಪಿ ನಾಯಕರಾದ ಚಂದುಪಾಟೀಲ, ಮಣಿಕಂಠ ರಾಠೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ದಲಿಂಗ ಸ್ವಾಮೀಜಿ ಅವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್‌ಗಳನ್ನು ಬಳಸುವ ವಿಚಾರವೂ ಡೆತ್ ನೋಟಿನಲ್ಲಿದೆ. ಎಲ್ಲ ರೀತಿಯಿಂದಲೂ ರಾಜ್ಯದ ಅತ್ಯಂತ ಶಕ್ತಿಶಾಲಿ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದರ ಸಿಬಿಐ ತನಿಖೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೇಸೂರ ಇದ್ದರು....