
18th February 2025
ಯಾದಗಿರಿ
ಮುಂದೆ ನಿಂತು ಶಾಲಾ ಮಕ್ಕಳಿಂದ
ಕೆಲಸ ಮಾಡಿಸಿದ ಮುಖ್ಯ
ಗುರು ಕ್ಯಾತನಾಳ ಸರ್ಕಾರಿ
ಶಾಲೆ ಆವರಣದಲ್ಲಿ ಘಟನೆ ಕ್ರಮಕ್ಕೆ
ಟಿ.ಎನ್.ಭೀಮುನಾಯಕ ಆಗ್ರಹ
ಯಾದಗಿರಿ: ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ
ಮುಂದೆ ಬಂದು ಪಾಲಕರಿಗೆ ಕೀರ್ತಿ ತರಲಿ ಎನ್ನುವ ಮಹದಾಸೆಯಿಂದ ಮಕ್ಕಳನ್ನು ಶಾಲೆಗೆ ಕಳಿಸುವ ಪಾಲಕರಿಗೆ ಈ ಘಟನೆ ದಿಗ್ಧಮೆ ಗೊಳಿಸುವಂತಿದೆ.
ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಿರುವ ದೇಗುಲದಲ್ಲಿ ಇಂತಹ ಘಟನೆ ನಡೆದಿದ್ದು, ರ್ಸಾವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಡಮಗೇರಾ.(ಬಿ) ಪಂಚಾಯಿತಿಯ ವ್ಯಾಪ್ತಿಯ ಕ್ಯಾತನಾಳ ಗ್ರಾಮದಲ್ಲಿ ಸರಕಾರಿ ಶಾಲೆಯಲ್ಲಿ ಘಟನೆ ನಡೆದಿರುವ ಕುರಿತು ಸ್ಥಳೀಯರು ಮುಖ್ಯ ಗುರುಗಳನ್ನು ಪ್ರಶ್ನೆ ಮಾಡಿದ್ದಾರೆ.
ಮುಖ್ಯಗುರು ಶರಣಪ್ಪ ಬಾಗ್ಲಿ ಶಾ ಲೆ ಮಕ್ಕಳಿಂದ ಚರಂಡಿ ಸ್ವಚ್ಛತೆ ಯನ್ನು ಸ್ವತ ಮುಂದೆ ನಿಂತು ಕೊಂಡು ಮಾಡಿಸುತ್ತಿದ್ದ ವ್ಯವಸ್ಥೆ ಯನ್ನು ಖಂಡಿಸಿದ್ದಾರೆ.
ಸಂಬಂಧಿಸಿದ ಗ್ರಾಮ ಪಂಚಾಯತಿ ಅವರಿಗೆ ತಿಳಿಸಿ, ಶುಚಿಗೊಳಿಸ ಬಹುದಿತ್ತು, ಆದರೇ ಮುಖ್ಯ ಗುರು ಏಕೆ ಹೀಗೆ ಮಾಡಿಸಿದರು ಎನ್ನುವ ಪ್ರಶ್ನೆ ಮೂಡಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.