
23rd October 2024
ಬಳ್ಳಾರಿ, ಅ.23: ಇದೇ ತಿಂಗಳು ಅ.25 ರಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆ ಸತೀಶ ರೆಡ್ಡಿ ನೇತೃತ್ವದ ಶಾಸಕರ ಅಭಿಮಾನಿಗಳ ಬಳಗದ ಸದಸ್ಯರು (ಎನ್'ಬಿಆರ್ ಟೀಮ್) ಅತ್ಯಂತ ವಿಜೃಂಭಣೆಯಿಂದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.
ಜನ್ಮ ದಿನದ ಅಂಗವಾಗಿ ನಗರದ ಗವಿಯಪ್ಪ (ಮೋತಿ ಸರ್ಕಲ್) ವೃತ್ತದ ಬಳಿ 135 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 135 ಅಡಿ ಎತ್ತರ ಕಬ್ಬಿಣದ ಕಂಬಿಗಳನ್ನು ಜೋಡಿಸಲಾಗಿದ್ದು, ಬುಧವಾರ ನಸುಕಿನ ಜಾವ ಶಾಸಕ ನಾರಾ ಭರತ್ ರೆಡ್ಡಿ ಅವರ ಕಟೌಟ್ ಕಟ್ಟುವ ಮುನ್ನ ಪೂಜೆ ಸಲ್ಲಿಸಲಾಯಿತು.
ಬೆಂಗಳೂರು ಮೂಲದ ಎಸ್.ಎಸ್. ಈವೆಂಟ್ಸ್ ಸಂಸ್ಥೆಯು ಈ ಕಟೌಟ್ ನಿರ್ಮಾಣ ಮಾಡಿದೆ. ಇಡೀ ರಾಜ್ಯದಲ್ಲಿ ರಾಜಕೀಯ ಕ್ಷೇತ್ರದ ಗಣ್ಯರ ಪೈಕಿ ಇದೇ ಮೊದಲ ಬಾರಿಗೆ ಇಂತಹ ಅತಿ ಎತ್ತರದ ಕಟೌಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಎನ್'ಬಿಆರ್ ಟೀಮ್ ಸಂಘಟಕರು ತಿಳಿಸಿದ್ದಾರೆ.
ಬುಧವಾರ ನಸುಕಿನ ಜಾವ ಪೂಜೆ ಸಲ್ಲಿಸಿದ ವೇಳೆ ಎನ್'ಬಿಆರ್ ಟೀಮಿನ ಸದಸ್ಯರಾದ ಮೋಕ ನಾಗರಾಜ, ಟಿ.ಹೆಚ್.ಶ್ರೀನಿವಾಸ, ಟಿ.ಹೆಚ್.ಚರಣರಾಜ್, ಹುಸೇನ ನಗರ ರಘು, ಜಗದೀಶ (ಜಗ್ಗ), ರಾಜಶೇಖರ ರೆಡ್ಡಿ ಮೊದಲಾದವರು ಹಾಜರಿದ್ದರು.
22nd October 2024
ಬಳ್ಳಾರಿ,ಅ.22:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪ ಚುನಾವಣೆ ನಡೆಯಲಿದೆ. ಇನ್ನುಬಿಜೆಪಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ.ಸಂಡೂರು ಕ್ಷೇತ್ರಕ್ಕೆ ಬಂಗಾರು ಹನುಮಂತು ಅವರಿಗೆಟಿಕೆಟ್ ನೀಡಿದೆ.ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಭಾರೀ ಸಿದ್ಧತೆ ನಡೆಯುತ್ತಿದೆ. ಪ್ರಚಾರಕಾರ್ಯಕ್ರಮ ಬಿರುಸಿನಿಂದ ನಡೆಯುತ್ತಿದೆ. ಈ ಸಂಬಂಧ ಏಳುಬೆಂಚಿ ಗ್ರಾಮದ ಪ್ರಚಾರದಲ್ಲಿ ಮಾಜಿ ಸಚಿವಜನಾರ್ಧನರೆಡ್ಡಿ ಮಾತನಾಡಿದ್ದಾರೆ. ಈ ವೇಳೆ ಅವರು ನೀಡಿದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ವಿನಾ ಕಾರಣ ಆರೋಪ
ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ ಅವರು,ನನ್ನನ್ನು ವಿನಾಕಾರಣ ಕಾಂಗ್ರೆಸ್ ನಾಯಕರು 4 ವರ್ಷಜೈಲಿಗೆ ಕಳುಹಿಸಿದರು.ಆದರೆ ನನಗೆ ಸಿಎಂ ಸಿದ್ದರಾಮಯ್ಯ ಬಗ್ಗೆ ಯಾವುದೇ ಸಿಟ್ಟು ಇಲ್ಲ.ಕೆಲ ಕಾಂಗ್ರೆಸ್ ನಾಯಕರುಸೋನಿಯಾಗಾಂಧಿಗೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರು.ಈಗ ನಾನು 14 ವರ್ಷ ವನವಾಸ ಅನುಭವಿಸಿಬಂದಿದ್ದೇನೆ.ಆದರೆ ನಾನು ಮಾಡಿದ ಕರ್ಮವನ್ನು ನಾಣು ಅನುಭವಿಸಿದ್ದೇನೆ ಬಿಡಿ.ಇನ್ನು ಮುಂದಿನ ದಿನಗಳಲ್ಲಿ ಅವರುಮಾಡಿದ ಕರ್ಮವನ್ನು ಅವರೇ ಅನುಭವಿಸುತ್ತಾರೆ ಎಂದು ಅವರು ಗುಡುಗಿದ್ದಾರೆ.
ಸೋನಿಯಾಗಾಂಧಿ ಹೆಸರು ಪ್ರಸ್ತಾಪಿಸಿದ ರೆಡ್ಡಿ
ಸೋನಿಯಾ ಗಾಂಧಿ ಬಳ್ಳಾರಿಗೆ ನನ್ನನ್ನು ಹುಡುಕಿಕೊಂಡು ಬಂದಿದ್ದರು.ನಂತರ ಸೋನಿಯಾಗಾಂಧಿ ಗೆದ್ದ ಬಳಿಕರಾಜೀನಾಮೆ ಕೊಟ್ಟು ಹೋದರು.ಚುನಾವಣೆಯಲ್ಲಿ ಸೋತರೂ ಕೂಡ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು. ಇನ್ನುಸೋತ ಸಂಡೂರು ಕ್ಷೇತ್ರದಲ್ಲಿ ನಾವು ಕಾಂಗ್ರೆಸ್ಗೆ ಠೇವಣಿ ಇಲ್ಲದಂತೆ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ರೆಡ್ಡಿಕಿಡಿಕಾರಿದರು.
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಅಸಮಾಧಾನ
ಕಾಂಗ್ರೆಸ್ನಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಗ್ಯಾರೆಂಟಿಗಳಿಂದ ಜನರನ್ನ ಸೋಮಾರಿಗಳನ್ನಾಗಿ ಮಾಡಿದ್ದಾರೆ.ವಾಲ್ಮೀಕಿನಿಗಮದ ಹಣದಿಂದ ಈ ತುಕಾರಾಂ ಸಂಸದರಾಗಿದ್ದಾರೆ.ಇನ್ನು ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಜೈಲಿಗೆ ಹೋಗಿಬಂದಿದ್ದಾರೆ.ಈ ಪ್ರಕರಣದಲ್ಲಿ ತುಕಾರಾಂ ಜೈಲಿಗೆ ಹೋಗ್ತಾರೆ ಮತ್ತು ಸಂಸದ ಸ್ಥಾನ ಕಳೆದುಕೊಳ್ಳುವುದುಖಚಿತವಾಗಿದೆ.ನಿಮ್ಮ ಜನಾರ್ಧನರೆಡ್ಡಿ ಕೊಟ್ಟ ಮಾತು ಯಾವತ್ತೂ ಮರೆಯಲ್ಲ ನನ್ನ ಪ್ರಾಣ ಬಿಡ್ತೇನೆ ಹೊರತು ಮಾತುತಪ್ಪಲ್ಲ ಎಂದು ರೆಡ್ಡಿ ಭಾಷಣದಲ್ಲಿ ಹೇಳಿದ್ದಾರೆ.
ಸಂಡೂರು ವಿಧಾನಸಭೆಯಲ್ಲಿ 2 ಲಕ್ಷ ಮತದಾರರು
ಸಂಡೂರು ವಿಧಾನಸಭೆ ಉಪಚುನಾವಣೆಗೆ ಹೊರಡಿಸಿರುವ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಲು ಅ.25 ರಶುಕ್ರವಾರ ಕೊನೆಯ ದಿನವಾಗಿದ್ದು,ಅ.28ರ ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಅ.30 ಬುಧವಾರನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು,ನ.13 ರ ಬುಧವಾರ ಮತದಾನ,ನ.23 ರ ಶನಿವಾರ ಮತಎಣಿಕೆ ಕಾರ್ಯ ನಡೆಯಲಿದ್ದು, ನ.25 ರ ಸೋಮವಾರದಂದು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಇನ್ನುಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರಿದ್ದಾರೆ.ಅದರಲ್ಲಿ 1,17,789 ಪುರುಷಮತದಾರರು,1,18,282 ಮಹಿಳ ಮತದಾರರು ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ. ಒಟ್ಟು 253 ಮತಗಟ್ಟೆ ಮತಕೇಂದ್ರಗಳಿವೆ.
18th August 2024
ಬಳ್ಳಾರಿ:ಮುಖ್ಯಮಂತ್ರಿರವರ ಪತ್ನಿ ಭೂಮಿ ಕಿತ್ತುಕೊಂಡಿದ್ದು ಬಿಜೆಪಿ ಸರ್ಕಾರ, ಅದನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದು ಬಿಜೆಪಿ ಸರ್ಕಾರ, ಪರ್ಯಾಯ ನಿವೇಶನ ಕೊಟ್ಟಿದ್ದು ಬಿಜೆಪಿ ಸರ್ಕಾರ, ಕಿತಾಪತಿ ಮಾಡಿದ್ದೆಲ್ಲಾ ಬಿಜೆಪಿ, ಆದರೆ, ಹೊಣೆ ಹೊರಿಸುವುದು ಇಂದಿನ ಮುಖ್ಯಮಂತ್ರಿ ಮೇಲೆ! ಇದೆಂತಹ ವಿಪರ್ಯಾಸ ಅಲ್ಲವೇ. ಇದು ಸದ್ಯ ರಾಜ್ಯದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ. ಹರಿಯಾಣ, ಜಮ್ಮು ಕಾಶ್ಮೀರ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆ ನಿನ್ನೆಯಷ್ಟೇ ಘೋಷಣೆ ಆಗಿದೆ.
ಇದರ ಬೆನ್ನಲ್ಲೇ ಇಂದು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಅನುಮತಿ ನೀಡಿರುವುದು ಬಿಜೆಪಿಯ ಹೀನ ರಾಜಕೀಯ ಪಟ್ಟುಗಳನ್ನು ತೋರುತ್ತದೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ವೆಂಕಟೇಶ್ ಹೆಗಡೆ ಬಳ್ಳಾರಿ ಆಗ್ರಹಿಸಿದರು. ಸಮಾಜವಾದದ ಮೂಲಕ ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ ಬಡವರ ಪರ ಎಂಬುದನ್ನು ತೋರಿದ್ದಾರೆ. ಭ್ರಷ್ಟ ಮುಕ್ತ ಆಡಳಿತ ನೀಡಿದ್ದಾರೆ. ಇದೆ ಮುಖ್ಯಮಂತ್ರಿಯ ಸಾಧನೆ ಮುಂದಿನ ನಾಲ್ಕು ರಾಜ್ಯಗಳ ಚುನಾವಣೆ ವಿಷಯ ವಸ್ತು ಆಗಲಿದೆ ಎಂದರು.
ಮಾದರಿ ಕರ್ನಾಟಕ ಸರ್ಕಾರದ ಉದಾಹರಣೆ ಕೊಟ್ಟು ಚುನಾವಣೆ ಎದುರಿಸಿದ್ದೆ ಅದಲ್ಲಿ ನಮ್ಮ ಸೋಲು ಖಚಿತ ಎಂದು ಅರಿತ ಕುಯುಕ್ತಿ ಬಿಜೆಪಿ ನಾಯಕರು ಇಂದು ರಾಜ್ಯಪಾಲರ ಮೂಲಕ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸೇಡಿನ ರಾಜಕಾರಣ ಅಲ್ಲದೆ ಬೇರೆ ಏನೂ ಅಲ್ಲ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿ ಆಗಿದ್ದಾರೆ. ದೆಹಲಿಯಲ್ಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರು. ಇದೀಗ 40 ವರ್ಷ ರಾಜಕಾರಣದಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜರಕಾರಣ ಮಾಡಿ ಕೊಂಡು ಬಂದ ಒಬ್ಬ ದಕ್ಷ, ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವರು.
18th August 2024
ಬಳ್ಳಾರಿ,ಆ.19:ರಾಜ್ಯದ ಜೀವನಾಡಿ,ಕರ್ನಾಟಕ,ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೀವನದಿ ಆಗಿರುವ ತುಂಗಭದ್ರಾ ಜಲಾಶಯದ ಹಾನಿಗೀಡಾಗಿದ್ದ 19ನೇ ಕ್ರಸ್ಟ್ ಗೇಟಿಗೆ ಸ್ಟಾಪ್ ವಾಲ್ ಗೇಟ್ ಅನ್ನು ಯಶಸ್ವಿಯಾಗಿ ಕೂರಿಸಿದ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪ್ರತಿ ಒಬ್ಬರಿಗೂ ಅಭಿನಂದನೆ ಸಲ್ಲಿಸುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದ ಎಂಜಿನಿಯರ್ ಕನ್ಹಯ್ಯ ನಾಯ್ಡು ಅವರನ್ನು ನಾನು ವಿಶೇಷವಾಗಿ ಅಭಿನಂದಿಸುವೆ ಎಂದು ಅಭಿಪ್ರಾಯ ಪಟ್ಟಿರುವ ಅವರು, ನೀರು ಹರಿಯುವಾಗಲೇ ಜಲಾಶಯದ ಕ್ರಸ್ಟ್ ಗೇಟಿಗೆ ಸ್ಟಾಪ್ ವಾಲ್ ಗೇಟ್ ಅಳವಡಿಸಿರುವುದು ಇಡೀ ದೇಶದಲ್ಲೇ ಮೊದಲು, ಇದೊಂದು ವಿಸ್ಮಯಕಾರಿ ಕಾರ್ಯಾಚರಣೆ ಎಂದು ವ್ಯಾಖ್ಯಾನಿಸಿದ್ದಾರೆ.
ಕಾರ್ಯಾಚರಣೆ ತಂಡದ ಹಗಲಿರುಳು ಶ್ರಮದ ಫಲವಾಗಿ ಜಲಾಶಯದಲ್ಲಿ 72 ಟಿಎಂಸಿ ನೀರು ಉಳಿದಿದೆ.ಹೀಗಾಗಿ ರೈತರು,ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.
ಕ್ರಸ್ಟಗೇಟ್ ಹಾನಿಗೀಡಾದ 24 ಗಂಟೆಗಳ ಒಳಗೇ ತಕ್ಷಣ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ,ಸ್ಟಾಪ್ ವಾಲ್ ಗೇಟ್ ಅಳವಡಿಕೆಗೆ ಸೂಕ್ತ ಸೂಚನೆ ಹಾಗೂ ಆದೇಶ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ, ನಾಡಿನ ಜನರಿಗೆ ಭರವಸೆ ನೀಡಿ,ಅಗತ್ಯ ಕ್ರಮ ಕ್ರಮ ಕೈಗೊಂಡ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ,ಕಾರ್ಯಾಚರಣೆ ತಂಡದ ಸದಸ್ಯರಿಗೆ ಪ್ರೋತ್ಸಾಹ ತುಂಬಿದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಅವರಿಗೆ,ಹಗಲಿರುಳು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಸಹಕರಿಸಿದ ಕೊಪ್ಪಳದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹಾಗೂ ನಾಲ್ಕೂ ಜಿಲ್ಲೆಗಳ ಶಾಸಕರು,ಸಚಿವರು,ಜನಪ್ರತಿನಿಧಿಗಳು,ರೈತ ಸಂಘಗಳ ಮುಖಂಡರಿಗೆ,ತುಂಗಭದ್ರಾ ಮಂಡಳಿಗೆ, ಕಾಡಾ ಅಧ್ಯಕ್ಷರಿಗೆ ಹಾಗೂ ರೈತರು,ಸಾರ್ವಜನಿಕರಿಗೆ ಶಾಸಕ ನಾರಾ ಭರತ್ ರೆಡ್ಡಿ ಧನ್ಯವಾದ ತಿಳಿಸಿದ್ದಾರೆ.