
24th March 2025
ಇಂದು ಬೆಂಗಳೂರಿನಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟ ಬೀದರ ಜಿಲ್ಲೆ ವತಿಯಿಂದ ಭೇಟಿ ಮಾಡಿ ರಾಜ್ಯದ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಇದನ್ನು ನೂತನ ಜನಗಣತಿ ಮಾಡಿ ಅದರ ಅದರ ಮೇಲೆ ಒಳ ಮೀಸಲಾತಿ ಜಾರಿ ಮಾಡಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವುದನ್ನು ತಡೀಬೇಕು ಎಂದು ಒತ್ತಾಯಿಸಿದೆವು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟದ ಬೀದರ ಅಧ್ಯಕ್ಷರಾದ ಶ್ರೀ ಅನೀಲಕುಮಾರ ಬೆಲ್ದಾರ, ರಮೇಶ ಡಾಕುಳಗಿ, ಶಿವಕುಮಾರ ನೀಲೀಕಟ್ಟಿ, ಸಂದೀಪ ಕಾಂಟೆ, ಪ್ರದೀಪ ನಾಟೀಕರ, ಸಾಯಿ ಸಿಂಧೆ, ಗೌತಮ ಪ್ರಸಾದ, ರಮೇಶ ಮಂದಕನಳ್ಳಿ, ಮಹೇಂದ್ರ ಕುಮಾರ ಹೊಸಮನಿ, ಸಂಗಮೇಶ ಭಾವಿದೊಡ್ಡಿ, ಶಿವರಾಜ ಸಾಗರ, ರಾಜಕುಮಾರ ಕಾಟೆ, ಅಮರನಾಥ ಹುಡುಗೆ, ಲಕ್ಷ್ಮಣ ಹೊನ್ನಡಿ ಸೇರಿದಂತೆ ಇತರರು ಹಾಜರಿದ್ದರು.
22nd March 2025
ಕಾಂತರಾಜ ವರದಿ ಜಾರಿಯಾಗಲಿ, ಹೊಸ ಜಾತಿ ಜನಗಣತಿ ಮಾಡಿ: ವೈಜಿನಾಥ ಸೂರ್ಯವಂಶಿ
ಬೀದರ್: ರಾಜ್ಯ ಸರ್ಕಾರಕ್ಕೆ ದಮ್ ಇದ್ದರೆ ಕೂಡಲೇ ಕಾಂತರಾಜ ವರದಿ ಜಾರಿ ಮಾಡಿ, ಹೊಸ ಜಾತಿ ಜನಗಣತಿ ಮಾಡಿಸಿ ಒಳ ಮೀಸಲಾತಿ ಜಾರಿ ಮಾಡದೇ ಮೀಸಲಾತಿ ಮುಂದುವರೆಯಲಿ ಎಂದು ಒಳ ಮೀಸಲಾತಿ ವಿರೂದ್ಧ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ವೈಜಿನಾಥ ಸೂರ್ಯವಂಶಿ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ೧೯೩೨ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಸಹ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿತ್ತು. ನಂತರ ದೇಶ ಸ್ವತಂತ್ರವಾದ ಬಳಿಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆ ಜವಾಬ್ದಾರಿ ನೀಡಲಾಯಿತು. ಸಂವಿಧಾನದ ಆರ್ಟಿಕಲ್ ನಂ ೩೪೦ರ ಪ್ರಕಾರ ಹಿಂದುಳಿದ ವರ್ಗಗಳಿಗೆ, ೩೪೧ರ ಪ್ರಕಾರ ಪರಿಶಿಷ್ಟರಿಗೆ, ೩೪೨ರ ಅನ್ವಯ ಬುಡಕಟ್ಟು ಪಂಗಡಗಳಿಗೆ ಮೀಸಲಾತಿ ನೀಡಬೇಕೆಂದು ಅಂಬೇಡ್ಕರ್ ಅವರು ತನ್ನ ಮಡದಿ ಹಾಗೂ ಮಕ್ಕಳ ಸಾವು ಸಹ ಲೆಕ್ಕಿಸದೇ ದೇಶದ ಹಿತಕ್ಕಾಗಿ ಸಂವಿಧಾನ ಬರೆದರು. ಸಾವಿರಾರು ವರ್ಷಗಳು ತುಳಿತಕ್ಕೊಳಗಾದ ನಮ್ಮವರಿಗೆ ಮಾತ್ರ ಸಂವಿಧಾನ ರಚಿಸಿಲ್ಲ, ಬದಲಿಗೆ ಈ ದೇಶದಲ್ಲಿ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಯತ್ನಿಸಿದರು. ಆದರೆ ಆಳುವ ಸರ್ಕಾರಗಳು ಪರಿಶಿಷ್ಟ ಯಾದಿಯಲ್ಲಿ ೬ ಜಾತಿಗಳಿದ್ದುದು ೧೦೧ಕ್ಕೆ ತಂದು ನಿಲ್ಲಿಸಿದವು. ಅದರಲ್ಲಿ ೯೫ ಜಾತಿಗಳು ಯಾವುದೇ ಅರ್ಜಿ ಹಾಕದೇ ಮೀಸಲಾತಿ ಪಡೆದಿರುವುದು, ಅದನ್ನು ಜಾರಿಗೆ ತಂದ ಸರ್ಕಾರಗಳು ಸಂವಿಧಾನ ವಿರೋಧಿ ಕ್ರಮ ಅನುಸರಿಸಿವೆ ಎಂದು ಹರಿಹೈದರು.
ಈ ಹಿಂದೆ ಇಂದಿರಾ ಸಾಹಾನಿ ತೀರ್ಪಿನ ಪ್ರಕಾರ ೫೦ ಪ್ರತಿಶತ ಮೀಸಲಾತಿ ದಾಟಬಾರದೆಂದು ಸರ್ವೋಚ್ಛ ನ್ಯಾಯಾಲಯ ಹೇಳಿತ್ತು. ಆದರೆ ಇಂದು ಅದೇ ಸರ್ವೋಚ್ಛ ನ್ಯಾಯಾಲಯ ಒಳ ಮೀಸಲಾತಿ ಜಾರಿ ಅಧಿಕಾರ ರಾಜ್ಯಗಳಿಗೆ ನೀಡಿ ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿದೆ. ಇತ್ತಿಚೀನ ತೀರ್ಪುಗಳು ಸಂವಿಧಾನದ ಆಶೆಯದ ವಿರೂದ್ಧವಾಗಿ ಬರುತ್ತಿರುವುದು ಹಾಗೂ ಆಳುವ ಸರ್ಕಾರಗಳು ಕೆಲವರ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಾಗಿದೆ ಎಂದು ಗುಡುಗಿದರು.
ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿ ರುಚಿ ಉಂಡ ಕೆಲವರು ವಿನಾಕಾರಣ ಜಗಳಕ್ಕಿಳಿದು ಸಮಾಜದಲ್ಲಿ ಗೊಂದಲ ಹುಟ್ಟು ಹಾಕುವ ಕಾರ್ಯ ಮಾಡುತ್ತಿರುವರು. ಸದಾಶಿವ ಆಯೋಗ ಜಾರಿ ಮಾಡದೇ ಸರ್ಕಾರ ಈಗ ನೇಮಕ ಮಾಡಿರುವ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರಿಗೆ ಇನ್ನು ಆರು ತಿಂಗಳು ಕಾಲಾವಕಾಶ ನೀಡಿ ಪ್ರತಿಯೊಂದು ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ಓಣಿಗಳಿಗೆ ತೆರಳಿ ದತ್ತಾಂಶ ಸಂಗ್ರಹಣೆ ಮಾಡಿ ವರದಿ ಜಾರಿ ಮಾಡಲಿ ಅದರ ಜೊತೆಗೆ ಯಾರ ಒತ್ತಡಕ್ಕೆ ಮಣಿಯದೇ ರಾಜ್ಯ ಸರ್ಕಾರ ಕೂಡಲೇ ಕಾಂತರಾಜ ವರದಿ ಜಾರಿಗೊಳಿಸಲಿ ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ ಮಾತನಾಡಿ, ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಅವರು ಮೀಸಲಾತಿ ಬಗ್ಗೆ ಉಲ್ಲೆಖಿಸಿರುವರೆ ಹೊರತು ಒಳ ಮೀಸಲಾತಿ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಪರಿಶಿಷ್ಟರು, ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಸಬಲರಾಗುವ ವರೆಗೆ ಮೀಸಲಾತಿ ನೀಡಬೇಕು, ಸಮಾಜದ ಮುಖ್ಯ ವಾಹಿನಿಗೆ ತಲುಪಿದ ನಂತರ ಮೀಸಲಾತಿ ನೀಲ್ಲಿಸಿದರೆ ನಮ್ಮದೇನು ತಕರಾರಿಲ್ಲ ಎಂದರು.
ಸಮಿತಿಯ ಪದಾಧಿಕಾರಿಗಳಾದ ಚಂದ್ರಕಾAತ ನಿರಾಟೆ, ರಾಜಕುಮಾರ ಮೂಲಭಾರತಿ, ಅಂಬ್ರೀಶ ಕುದುರೆ, ಸಂಜುಕುಮಾರ ಜಂಜೀರೆ, ಸಂಜುಕುಮಾರ ಮೇತ್ರೆ, ರಾಘವೇಂದ್ರ ಮೀನಕೇರಾ, ರಾಮು ದೊಡಬಾವಿ, ದಯಾನಂದ ನೌಲೆ, ರಾಜಕುಮಾರ ಗುನ್ನಳ್ಳಿ, ಜಗನ್ನಾಥ ಹೊನ್ನಾ, ರವಿ ಭೂಸಂಡೆ, ರಾಜಕುಮಾರ ಡೋಂಗ್ರೆ, ಗೌತಮ ಚೌಹಾಣ, ರವಿ ಮೋರೆ, ಹರ್ಷಿತ ದಾಂಡೇಕರ್ ಪತ್ರಿಕಾಗೋಷ್ಟಿಯಲ್ಲಿದ್ದರು.