
22nd March 2025
ಧರ್ಮ ಕಾರ್ಯಕ್ಕೆ ಬೀದರ ಜಿಲ್ಲೆ ಸದಾ ಎತ್ತಿದ ಕೈ: ರಂಭಾಪುರಿ ಜಗದ್ಗುರುಗಳು
ಬೀದರ್: ಬೀದರ್ ಜಿಲ್ಲೆ ಯಾವತ್ತೂ ಧರ್ಮ ಕಾರ್ಯಗಳಲ್ಲಿ ಸದಾ ಎತ್ತಿದ ಕೈ ಎಂದು ಪರಮಪೂಜ್ಯ ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಶುಕ್ರವಾರ ನಗರದ ಕೆ.ಇ.ಬಿ ಹತ್ತಿರದಲ್ಲಿರುವ ಉದ್ಯಮಿ ಪಂಚಯ್ಯ ಸ್ವಾಮಿ ಅವರ ನೂತನ ಉದ್ಯಮಕ್ಕೆ ಚಾಲನೆ ನೀಡಿ ನಂತರ ಧರ್ಮಸಭೆ ಉದ್ದೇಶಿಸಿ ಮಾತನಾಡಿದರು.
ಅಲ್ಲಿ ನೆರೆದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ ಮಹಾನಗರದಲ್ಲಿ ಭವ್ಯವಾಗಿ ಸುಂದರವಾಗಿ ನಿರ್ಮಾಣಗೊಂಡಿರುವ ಪಂಚಯ್ಯ ಸ್ವಾಮಿಯವರ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಜಗದ್ಗುರುಗಳು ಪಾಲ್ಗೊಂಡಿರುವುದು ಸಂತಸ ತಂದಿದೆ. ಬೀದರ್ ನಗರಕ್ಕೆ ಹತ್ತಿರವಾಗಿರುವಂತಹ ಕೋಳಾರ ಪರಿಸರದಲ್ಲಿ ಸುಂದರವಾಗಿ ಅಲ್ಲಿ ನಿರ್ಮಾಣಗೊಂಡಿರುವಂತಹ ಮಂದಿರ ತಾವೆಲ್ಲ ನೋಡಿರಬಹುದು. ಜಗದ್ಗುರು ರೇಣುಕಾಚಾರ್ಯರ ಕ್ಷೇತ್ರದ ವೀರಭದ್ರ ಸ್ವಾಮಿ ಭದ್ರಕಾಳಿ ಈ ಮೂರು ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪನೆಯನ್ನು ಮಾಡಿ ಎಷ್ಟೋ ದಿನ ಮಹಾಪೂಜೆ, ನೆರವೇರಿಸಿ ಆಶೀರ್ವಾದ ಮಾಡಲಾಗಿದೆ. ಆ ಪರಿಸರದಲ್ಲಿ ಜಗದ್ಗುರುಗಳು ಬಂದಾಗ ಅಲ್ಲಿ ವಾಸ್ತವ ಮಾಡಲಿಕ್ಕೆ ಅನುಕೂಲ ಆಗಬೇಕೆಂದು ಷಣ್ಮುಖಯ್ಯಾ ಸ್ವಾಮಿಯವರ ಪರಿಶ್ರಮದ ಫಲದಿಂದ ನಿರ್ಮಾಣವಾಗಿದೆ. ಆ ಕಟ್ಟಡ ಕೊನೆ ಹಂತದಲ್ಲಿ ಕೆಲಸ ನಡಿತಾ ಇದೆ. ಹೀಗಾಗಿ ಈ ವರ್ಷ ಮಹಾಪೂಜೆ ಮಾಡುವುದರೊಳಗಾಗಿ ಕಟ್ಟುತ್ತಿರುವ ಮಂದಿರಕ್ಕೆ ಎಲ್ಲರ ಸಹಕಾರ ಹೆಚ್ಚು ದೊರಕಿ ಆದಷ್ಟು ಬೇಗನೆ ಉದ್ಘಾಟನೆ ಆಗಬೇಕೆಂಬ