13th October 2024
ಭಟ್ಕಳ | ಅರಬ್ಬಿ ಸಮುದ್ರದಲ್ಲಿ ಮೂರು ದಿನ ವಿಮಾನದಲ್ಲಿ ಫೈರಿಂಗ್ : ಮೀನುಗಾರರಿಗೆ ನಿರ್ಬಂಧ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾ ಪಡೆಯು ಸಮರಭ್ಯಾಸ ನಡೆಯಲಿದ್ದು ನೇತ್ರಾಣಿ ನಡುಗಡ್ಡೆಯಿಂದ ಹತ್ತು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರರಿಗೆ ಮೂರು ದಿನ ನಿಷೇಧ ಹೇರಲಾಗಿದೆ.ಭಟ್ಕಳ ಅರಬ್ಬಿ ಸಮುದ್ರದಲ್ಲಿ ಯುದ್ದ ವಿಮಾನದಿಂದ ಫೈರಿಂಗ್ – ಮೂರು ದಿನ ಮೀನುಗಾರರಿಗೆ ನಿರ್ಬಂಧ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾ ಪಡೆಯು ಸಮರಭ್ಯಾಸ ನಡೆಯಲಿದ್ದು ನೇತ್ರಾಣಿ ನಡುಗಡ್ಡೆಯಿಂದ ಹತ್ತು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರರಿಗೆ ಮೂರು ದಿನ ನಿಷೇಧ ಹೇರಲಾಗಿದೆ.ಅಕ್ಟೋಬರ್ 14 ರಿಂದ 16 ರವರೆಗೆ ಬೆಳಿಗ್ಗೆ 07- 00 ಗಂಟೆಯಿಂದ 18-00 ಗಂಟೆಯವರೆಗೆ ನೇತ್ರಾಣಿ ನಡುಗಡ್ಡೆಯಲ್ಲಿ ಫೈಟರ್ ಜಟ್ ಗಳು ಪೈರಿಂಗ್ ನಡೆಸುತ್ತಿರುವ ಹಿನ್ನಲೆಯಲ್ಲಿ ನೌಕಾದಳವು ಮೀನುಗಾರಿಕಾ ಇಲಾಖೆ ಮೂಲಕ ಮೀನುಗಾರರರಿಗೆ ಎಚ್ಚರಿಕೆ ನೀಡಿದೆ.ಮೂರು ದಿನ ಭಾರತೀಯ ನೌಕಾ (Indian navy) ಪಡೆ ಯುದ್ದ ವಿಮಾನದಿಂದ ಪೈರಿಂಗ್ ಹಮ್ಮಿಕೊಂಡಿದ್ದು, ಆ ಸಮಯದಲ್ಲಿ ನೇತ್ರಾಣಿ ನಡುಗಡ್ಡೆಯ 10 ನಾಟಿಕಲ್ ಮೈಲು ವ್ಯಾಪ್ತಿಯ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಭಟ್ಕಳ ತಾಲೂಕಿನ ಪಾತಿ
ದೋಣಿಯವರಿಗೆ, ಗಿಲ್ ನೆಟ್ ದೋಣಿಯವರಿಗೆ
ಫಿಶಿಂಗ್ ಬೋಟ್, ಪರ್ಶಿಯನ್ ಬೋಟ್
ಸೇರಿದಂತೆ ಆಳ ಸಮುದ್ರ ಮೀನುಗಾರಿಕಾ
ಬೋಟ್ ಗಳಿಗೆ ಸೂಚನೆ ನೀಡಲಾಗಿದೆ.
ಇದಲ್ಲದೇ ನೇತ್ರಾಣಿ ದ್ವೀಪದ ಬಳಿ ಪ್ರವಾಸಿಗರು ಹಾಗೂ ಸ್ಕೂಬಾ ಡೈವಿಂಗ್ ಮಾಡುವವರಿಗೂ ನಿರ್ಬಂಧಿಸಲಾಗಿದೆ.
13th October 2024
*ಬೆಳಗಾವಿಯ ಸಮಸ್ತ ಮಾಜಿ ಸೈನಿಕ ಬಂಧುಗಳಿಗೆ ವೀರ ನಾರಿಯರಿಗೆ ಸೈನಿಕ ಪರಿವಾರದ ಸಮಸ್ತರಿಗೂ ನಮಸ್ಕಾರ*
*ಇವತ್ತು ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಸಂಘ(ಮಹಾಒಕ್ಕೂಟ) ಕಾರ್ಯಾಲಯದ ಉದ್ಘಾಟನೆ ಹಾಗೂ ಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಸುಮಾರು ಎರಡು ವರ್ಷಗಳ ಸತತ ಪ್ರಯತ್ನಗಳ ಫಲವಾಗಿ ಜಿಲ್ಲೆಯ ಹತ್ತಾರು ಸಂಘಟನೆಗಳ ಹಿರಿಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ, ಸಂಘಟನಾತ್ಮಕವಾಗಿ ಪ್ರೋತ್ಸಾಹ ನೀಡಿದ ಸಾಕಷ್ಟು ಮಾಜಿ ಸೈನಿಕರ ಬೆಂಬಲದಿಂದಾಗಿ, ಹಿರಿಯರ ಆಶೀರ್ವಾದದಿಂದ ಇವತ್ತು ಬೆಳಗಾವಿಯ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪಕ್ಕದಲ್ಲಿ ಮಹಾಒಕ್ಕೂಟದ ಕಾರ್ಯಾಲಯ ಪ್ರಾರಂಭವಾಗಿದೆ. ಈ ಕಾರ್ಯಾಲಯದಲ್ಲಿ ಸೈನಿಕ ಸಮುದಾಯಕ್ಕೆ ಅವಶ್ಯಕತೆ ಇರುವ ಎಲ್ಲ ಕಾಗದ ಪತ್ರಗಳನ್ನು ಮಾಡಲಾಗುವುದು.ಸೈನಿಕರ ಸಮುದಾಯಕ್ಕೆ ಯಾವುದೇ ರೀತಿಯಾದಂತಹ ಹೊರೆಯಾಗದಂತಹ ಅತ್ಯುತ್ತಮ ಸೇವೆಯನ್ನ ನಮ್ಮ ಕಾರ್ಯಾಲಯದಿಂದ ನೀಡಲಾಗುವುದು ಜಿಲ್ಲೆಯ ಸಮಸ್ತ ಮಾಜಿ ಸೈನಿಕರು ಈ ಕಾರ್ಯಾಲಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.*
*ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಬೆಳಗಾವಿ ಜಿಲ್ಲೆಯ ಮಾಜಿಸೈನಿಕರ ಸಂಘಟನೆಗಳ ಮಹಾಒಕ್ಕೂಟ ಬೆಳಗಾವಿ*
13th October 2024
ಬದಲಾವಣೆ ಜಗದ ನಿಯಮ....
ಹೌದು ನಿಜ, ಆದರೆ ಅದರ ದಿಕ್ಕು ಪ್ರಗತಿಪರವಾದ ನಿಟ್ಟಿನಲ್ಲಿ ಸಾಗುವುದನ್ನು ನಾವು ಪ್ರಜ್ಞಾಪೂರ್ವಕವಾಗೀ ನಿರ್ದೇಶಿಸಬೇಕು. ಆಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯ ದಿಕ್ಕಿನಲ್ಲಿ ಇದೆ ಎಂದು ಅರ್ಥ. ಆ ಹಿನ್ನೆಲೆಯಲ್ಲಿ ಈಗಿನ ಕೆಲವು ಬದಲಾವಣೆಗಳನ್ನು ಗಮನಿಸಿ.......
ವಿಶಿಷ್ಟ ಕಾಲಘಟ್ಟದಲ್ಲಿ ನಾವು ನೀವು........
ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಅನ್ನದ ಋಣ ಎಂದು ತಿನ್ನಲು ಕೊಟ್ಟವರಿಗೆ ವಂದಿಸುತ್ತಾ, ತಪ್ಪು ಮಾಡಿದರೆ ಅನ್ನವೇ ಸಿಗುವುದಿಲ್ಲ ಎನ್ನುವಷ್ಟು ಭಯ ಭಕ್ತಿ ತೋರಿಸುತ್ತಾ, ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ ಎನ್ನುವ ಗಾಢ ಭಾವನಾತ್ಮಕ ನಂಬಿಕೆ ಸೃಷ್ಟಿಸುತ್ತಾ ಇದ್ದ ವಾತಾವರಣ ಮಾಯವಾಗಿ, ಆಹಾರವನ್ನು ವ್ಯರ್ಥ ಮಾಡಬೇಡಿ, ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ ಎಂಬ ಘೋಷವಾಕ್ಯಗಳನ್ನು ಪ್ರಚಾರ ಮಾಡಬೇಕಾದ ಬದಲಾವಣೆಗೆ ನಾವು ಬಂದಿದ್ದೇವೆ.......
ವರ್ಷದ ಒಂದು ಹಬ್ಬಕ್ಕೆ ಒಂದು ಹೊಸ ಬಟ್ಟೆ ಕೊಳ್ಳಲು ಸಾಲ ಮಾಡಬೇಕಾದ ಪರಿಸ್ಥಿತಿಯಿಂದ ಫ್ಯಾಷನ್ ಡಿಸೈನರ್, ಫ್ಯಾಷನ್ ಟೆಕ್ನಾಲಜಿ ಎಂಬ ಶಿಕ್ಷಣ ಮತ್ತು ಬೃಹತ್ ಉದ್ಯಮಗಳು ತಲೆ ಎತ್ತಿ ಆರ್ಥಿಕತೆಯ ಒಂದು ಭಾಗವಾಗಿರುವ ಹಂತದಲ್ಲಿ ನಾವಿದ್ದೇವೆ.......
ಕಿತ್ತುಹೋದ, ಹಳ್ಳ ಬಿದ್ದ ಕಲ್ಲು ಮಣ್ಣಿನ ನರಕ ಸದೃಶವಾದ ರಸ್ತೆಗಳು, ಆಗಾಗ ಕಾರಣವಿಲ್ಲದೇ ನಿಂತು ಹಠ ಮಾಡಿ ತಳ್ಳಿಸಿಕೊಂಡು ಮುನ್ನಡೆಯುವ ವಾಹನಗಳು ಕೆಲವೇ ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ಟಾರು, ಸಿಮೆಂಟ್, ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಾಡು ಹೊಂದಿ ಅತ್ಯುತ್ತಮ ಜೀವ ಉಳಿಸುವ ಏರ್ ಬ್ಯಾಗ್ ಹೊಂದಿದ ವಾಹನಗಳು, ಸಾಕಷ್ಟು ತಂತ್ರಜ್ಞಾನದ ಸಹಾಯದಿಂದ ವೇಗ ನಿಯಂತ್ರಣ ಸಾಧಿಸುವ ವಾಹನಗಳು ಈಗ ನಮ್ಮ ಮುಂದೆ ಆಯ್ಕೆಗಳಾಗಿವೆ...
ಊರ ಹೊರಗೆ ದೂರದಲ್ಲಿ ಒಂದು ಪಾಳುಬಿದ್ದ ಮನೆ ಅಥವಾ ಗುಡಿಸಲುಗಳಲ್ಲಿ ಹೆಂಡ ಸಾರಾಯಿ ಮಾರಾಟ ಮಾಡಲಾಗುತ್ತಿತ್ತು. ಕುಡಿಯುವವರು ರಾತ್ರಿ ಕತ್ತಲಿನಲ್ಲಿ ಯಾರಿಗೂ ಕಾಣದಂತೆ ಕುಡಿದು ಕಳ್ಳರಂತೆ ಬಚ್ಚಿಟ್ಟುಕೊಂಡು ಮನೆ ಸೇರುತ್ತಿದ್ದರು. ಈಗ ಗಾಂಧಿ ರಸ್ತೆ, ಬಸವ ಮಾರ್ಗ, ಅಂಬೇಡ್ಕರ್ ಬೀದಿ, ವಿವೇಕಾನಂದ ಕಾಲೋನಿಗಳೆಂಬ ಹೆಸರಗಳುಳ್ಳ ಜಾಗದಲ್ಲಿ ಲಕ್ಷ್ಮೀ ಬಾರ್, ವೆಂಕಟೇಶ್ವರ ವೈನ್ನ್, ತಿರುಮಲ ಮದ್ಯದ ಅಂಗಡಿ ಮುಂತಾದ ಹೆಸರು ಇಟ್ಟುಕೊಂಡು ಊರ ಮಧ್ಯೆ ಮಿಣ ಮಿಣ ದೀಪಾಲಂಕಾರ ಮಾಡಿಕೊಂಡು ಬಹಿರಂಗವಾಗಿ ಹೆಂಗಸರು ಗಂಡಸರು ಒಟ್ಟಿಗೆ ಕುಡಿಯುವುದು ಒಂದು ಫ್ಯಾಶನ್ ಎನ್ನುವಲ್ಲಿಗೆ ಬಂದಿದೆ....
ಮೊದಲೆಲ್ಲಾ ಕೇವಲ ವ್ಯಾಪಾರಿಗಳು, ಅಧಿಕಾರಿಗಳು, ರಾಜಕಾರಣಿಗಳು, ಕಾರ್ಮಿಕರು, ವೃತ್ತಿ ನಿರತರು ಮುಂತಾದ ಕೆಲವೇ ಜನ ಬ್ಯುಸಿ ಎಂದು ಹೇಳುತ್ತಿದ್ದರು. ಈಗ ಬಹುತೇಕ ಮನುಷ್ಯರು ಎನಿಸಿಕೊಳ್ಳುವ ಗಂಡು ಹೆಣ್ಣು ಎಲ್ಲರೂ ಸೇರಿ ಪ್ರತಿಯೊಬ್ಬರೂ ಬ್ಯುಸಿಯಾಗಿದ್ದಾರೆ.....
ಹಿಂದೆ ಪೋಲೀಸು, ಜೈಲು, ಕೋರ್ಟ್ ಎಂದರೆ ಜನಕ್ಕೆ ಭಯ ಮತ್ತು ಆತಂಕದ ಜೊತೆಗೆ ಅದು ಕೇವಲ ಕಳ್ಳರು ಸುಳ್ಳುರು, ಮೋಸಗಾರರಿಗೆ ಮಾತ್ರ ಎಂಬ ಅಭಿಪ್ರಾಯವಿತ್ತು. ಈಗ ಅದು ಒಂದು ಪ್ರತಿಷ್ಠೆಯ ವಿಷಯವಾಗಿದೆ.....
ಶಿಕ್ಷಕರು, ವೈದ್ಯರು, ಪತ್ರಕರ್ತರು, ಸ್ವಾಮೀಜಿಗಳು ಏನೇ ಹೇಳಿದರು ಭಯ ಭಕ್ತಿಯಿಂದ ಕೇಳಿಸಿಕೊಂಡು ಅವರು ಹೇಳುವುದೆಲ್ಲಾ ಸತ್ಯ ಎನ್ನುವ ಮನೋಭಾವದಿಂದ ಈಗ ಅವರುಗಳು ಸತ್ಯವನ್ನೇ ಹೇಳಿದರೂ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ....
ಹೀಗೆ ಇನ್ನೂ ಅನೇಕ ವಿಷಯಗಳಲ್ಲಿ ನಿರಂತರ ಬದಲಾವಣೆಗಳನ್ನು ಕಾಣುತ್ತಾ ಸಾಗುತ್ತಿದ್ದೇವೆ. ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆ ಒಳ್ಳೆಯ - ಪ್ರಗತಿಪರ - ಮಾನವೀಯ ಮೌಲ್ಯಗಳ ಅಳವಡಿಕೆಯ ನಿಟ್ಟಿನಲ್ಲಿ ಇದ್ದರೆ ಸಮಾಜ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಆ ನಿಟ್ಟಿನಲ್ಲಿ ನಾವು - ನೀವು ಪ್ರಯತ್ನಿಸಬೇಕಾಗಿದೆ............
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068......
ದಯವಿಟ್ಟು ಸಮಯಾವಕಾಶ ಮಾಡಿಕೊಂಡು ಭಾಗವಹಿಸಿ......
ಅಕ್ಟೋಬರ್ 16 - ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ.....
ಹಸಿವಿನಿಂದ ಪ್ರತಿ ದಿನ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ಕಳೆದ ವರ್ಷ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿದ್ದ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ.....
ಅಕ್ಟೋಬರ್ 16 " ವಿಶ್ವ ಆಹಾರ ದಿನ ".....
1945 ರಲ್ಲಿ ವಿಶ್ವಸಂಸ್ಥೆಯ " Food and agriculture organization ( FAO ) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಲಕ್ಷಾಂತರ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ.
ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ ಕುಸಿದಿದೆ. 16% ಮಕ್ಕಳಲ್ಲಿ ಅಪೌಷ್ಟಿಕತೆ, 3% ಐದು ವರ್ಷದ ಮಕ್ಕಳ ಮರಣ ಪ್ರಮಾಣ, 58% ಯುವತಿಯರಲ್ಲಿ ರಕ್ತ ಹೀನತೆ ಇದೆ.....
ಭಾರತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟದ ಎಲೆಗಳಲ್ಲಿ ವ್ಯರ್ಥವಾಗುವ ಆಹಾರ ಪ್ರಮಾಣ ಸುಮಾರು ಶೇಕಡಾ 25%..
ಈಗ ಬಹುಶಃ ನಿಜವಾದ ಸಮಸ್ಯೆ ಅರ್ಥವಾಗಿರಬಹುದು.
ಇದಕ್ಕೆ ವಿವಿಧ ಆಯಾಮಗಳು ಇವೆ....
ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದು,
ಅಥವಾ
ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು,
ಅಥವಾ
ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿರುವುದು,
ಅಥವಾ
ಭೂ ಪ್ರದೇಶಗಳ ಅಸಮಾನತೆ,
ಅಥವಾ
ಉಳಿತಾಯ ಮತ್ತು ಹಂಚಿಕೆಯ ಲೋಪದೋಷಗಳು,
ಅಥವಾ
ಆಹಾರದ ದುರುಪಯೋಗ....
ಇವುಗಳಲ್ಲಿ ಯಾವುದು ಹೆಚ್ಚು ಕಾರಣ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಜನಸಂಖ್ಯೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ, ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಫಲವತ್ತತೆ ಕಾಪಾಡುವುದು, ಉಳಿತಾಯ ಮತ್ತು ಹಂಚಿಕೆ ಎಲ್ಲವೂ ಆಯಾ ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಆದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವ ಕರ್ತವ್ಯ, ಜವಾಬ್ದಾರಿ ಮತ್ತು ಮಾನವೀಯತೆ ನಮ್ಮಂತ ಪ್ರತಿ ನಾಗರಿಕರಿಗು ಸಾಧ್ಯವಿದೆ. ಆ ನಿಟ್ಟಿನಲ್ಲಿ ಯೋಚಿಸಿದಾಗ.....
ಭಾರತ ದೇಶದ ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ....
ಉತ್ತರ ಕರ್ನಾಟಕದ ಭಾಗದಲ್ಲಿ ಆಹಾರ ವ್ಯರ್ಥವಾಗುವುದು ಸ್ವಲ್ಪ ಕಡಿಮೆ. ಕಾರಣ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ಆಹಾರವನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಳ್ಳದೆ ಬಡಿಸಿದ ಸಂಪೂರ್ಣ ಆಹಾರ ತಿನ್ನುವ ಪ್ರಯತ್ನ ಮಾಡುವುದನ್ನು ಪಾದಯಾತ್ರೆಯ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದಕ್ಕೆ ಕಾರಣ ಏನೇ ಇರಲಿ ಆ ಮನೋಭಾವ ಮಾತ್ರ ಸ್ವಾಗತಾರ್ಹ.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತರ ಕರ್ನಾಟಕದಷ್ಟು ಅಲ್ಲದಿದ್ದರೂ ಆಹಾರವನ್ನು ಸ್ವಲ್ಪ ಮಟ್ಟಿಗೆ ಗೌರವಿಸಿ ಹೆಚ್ಚು ವ್ಯರ್ಥ ಮಾಡುವುದಿಲ್ಲ.
ಮುಖ್ಯವಾಗಿ ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಯಥೇಚ್ಛವಾಗಿ ವ್ಯರ್ಥವಾಗುವುದು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಅತಿಹೆಚ್ಚು ಆಹಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸ್ವತಃ ಅನುಭವದಿಂದ ಗಮನಿಸಿದ್ದೇನೆ.
ಒಂದು ಕಾಲಕ್ಕೆ ಆಹಾರ ಅತ್ಯಮೂಲ್ಯವಾಗಿತ್ತು. ಆದರೆ ಜನರ ಹಣದ ಶಕ್ತಿ ಹೆಚ್ಚಾದಂತೆ ಆಹಾರದ ಪೋಲಾಗುವುದು ಹೆಚ್ಚಾಯಿತು. ಕೆಲವೊಮ್ಮೆ ನಿರ್ಲಕ್ಷ್ಯ ಮತ್ತೆ ಹಲವು ಕಡೆ ದುರಹಂಕಾರ ಇದಕ್ಕೆ ಕಾರಣ ಇರಬಹುದು.
ರೈತರು ಬಿತ್ತನೆ ಮಾಡಿ, ಅದು ಬೆಳೆದು ಫಸಲಾಗಿ ಕಟಾವು ಮಾಡಿ, ಸಂಗ್ರಹಿಸಿ ಸಾಗಾಣಿಕೆ ಮಾಡಿ, ಮಾರಾಟ ಮಾಡಿ ಅದು ಮನೆ ಮನೆಗೆ ಸೇರಿ ಆಹಾರವಾಗಿ ನಮ್ಮ ಎಲೆ ಅಥವಾ ತಟ್ಟೆಗೆ ಸೇರುವ ವೇಳೆಗೆ ಸಾಕಷ್ಟು ಸಹಜವಾಗಿ ಮತ್ತು ಅನಿವಾರ್ಯವಾಗಿ ನಷ್ಟವಾಗಿರುತ್ತದೆ. ಮತ್ತೆ ಆಹಾರವನ್ನು ನಾವು ಬಡಿಸಿಕೊಂಡು ತಟ್ಟೆಯಲ್ಲಿ ಶೇಕಡಾ 25% ವ್ಯರ್ಥ ಮಾಡಿದರೆ ಒಟ್ಟು ಆಹಾರ ಬೆಳೆಗಳ ದುರುಪಯೋಗ ಎಷ್ಟಾಗಬಹುದು ಊಹಿಸಿ.
ಭಾರತದಲ್ಲಿ 25% ವ್ಯರ್ಥ ಎಂದರೆ ಸುಮಾರು 35 ಕೋಟಿ ಜನಸಂಖ್ಯೆಯ ಆಹಾರವನ್ನು ನಾವು ಕಬಳಿಸಿದಂತೆ ಆಗುತ್ತದೆ ಮತ್ತು ಆಹಾರ ಬೆಳೆಯಲು ಉಪಯೋಗಿಸಿದ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸಾಯದ ಮೇಲೆ ಅನಾವಶ್ಯಕವಾಗಿ ಒತ್ತಡ ಹೇರಿದಂತೆ ಹಾಗು ನಮ್ಮ ರೈತರ ಶ್ರಮಕ್ಕೆ ಅಗೌರವ ತೋರಿಸಿದಂತೆ ಆಗುತ್ತದೆ.
ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಠ ಈಗಲಾದರೂ ನಾವೆಲ್ಲರೂ ಜಾಗೃತರಾಗಿ ಈ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ - ವೈಯಕ್ತಿಕ ಆಸಕ್ತಿಯಿಂದ ಸಾಧ್ಯವಾದಷ್ಟು ಆಹಾರದ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸೋಣ. ಇದು ಅತ್ಯಂತ ಸರಳ ಮತ್ತು ಆತ್ಮ ತೃಪ್ತಿಯ ಕೆಲಸ......
ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ - ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ.......
ನಿರಂತರ ಸಂಘರ್ಷಮಯ ರಾಜಕೀಯ ವಾತಾವರಣದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದ ಆಹಾರದ ಸದುಪಯೋಗದ ಬಗ್ಗೆ ಸಮಾಜ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.
ಧರ್ಮಗಳ ಆಧ್ಯಾತ್ಮಿಕ ಗುರುಗಳು ವಕ್ಫ್ ಆಸ್ತಿ ಬೆಳೆಸುವಲ್ಲಿ, ಚರ್ಚ್‌ಗಳನ್ನು ನಿರ್ಮಿಸುವಲ್ಲಿ, ಶಿವ - ನಾಗ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಆಹಾರವನ್ನು ಮರೆತಿದ್ದಾರೆ. ಕೃಷಿಯನ್ನು, ರೈತರನ್ನು ನಿರ್ಲಕ್ಷಿಸಿದ್ದಾರೆ. ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮೈ ಮರೆತಿದ್ದಾರೆ.....
ಯುವ ಪೀಳಿಗೆಗೆ ಆಹಾರದ ಮಹತ್ವವೇ ಅರ್ಥವಾಗುತ್ತಿಲ್ಲ. ಸ್ವಿಗ್ಗಿ, ಜೊಮೊಟೊಗಳೆಂಬ ಮೊಬೈಲ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಪೇಟಿಎಮ್, ಫೋನ್‌ಪೇ, ಗೂಗಲ್ ಪೇ ಮುಂತಾದ ಬ್ಯಾಂಕಿಂಗ್ ತಂತ್ರಜ್ಞಾನದ ಮುಖಾಂತರ ಹಣ ವರ್ಗಾಯಿಸಿ ಮನೆಯ ಬಾಗಿಲಿಗೆ ಇಷ್ಟ ಪಟ್ಟ ಊಟ ತಿಂಡಿಗಳನ್ನು ಸುಲಭವಾಗಿ ತರಿಸಿಕೊಂಡು ತಿಂದು ಆಹಾರದ ಪಾವಿತ್ರ್ಯವನ್ನೇ ಮರೆತಿದ್ದಾರೆ.
ಅದರ ಉತ್ಪಾದನೆ, ಹಂಚಿಕೆ, ಸಂಗ್ರಹ, ಭವಿಷ್ಯದ ಬಗ್ಗೆ ಅವರಿಗೆ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಅದಕ್ಕೆ ಸಂಬಂಧಿಸಿದ ಇತರರು ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಒಮ್ಮೆ ಆಹಾರದ ಕೊರತೆ ಉಂಟಾದರೆ ಇಡೀ ದೇಶದಲ್ಲೇ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು......
ಆಹಾರ ಪೋಲು - ರಾಷ್ಟ್ರೀಯ ನಷ್ಟ,
ತಿನ್ನುವ ಹಕ್ಕಿದೆ - ಬಿಸಾಡುವ ಹಕ್ಕಿಲ್ಲ,
ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಜಾಗೃತಿಗಾಗಿ ಪ್ರಬುದ್ಧ ಮನಸ್ಸುಗಳ ಒಂದು ಸ್ಪಂದನೆ....
ಆಹಾರದ ಉಳಿತಾಯ ಎಷ್ಟು ಅವಶ್ಯಕ ಎಂದು ನಿಮಗೆ ಹೇಳುವ ಅಗತ್ಯವಿಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಕರ್ನಾಟಕದಲ್ಲಿ ಆಹಾರ ನೀತಿ ಸಂಹಿತೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ವಿಷಯಗಳನ್ನು ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ......
ಅದಕ್ಕಾಗಿ.........
ಆಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನ
ಕೊಡಗು - ಬೆಂಗಳೂರು
ಮತ್ತು
ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ, ಬೆಂಗಳೂರು ಅವರಿಂದ,
ವಿಶ್ವ ಆಹಾರ ದಿನಾಚರಣೆ
ಅಕ್ಟೋಬರ್ 16 , 2024 ಬುಧವಾರ
ಆಹಾರ ಪೋಲು - ರಾಷ್ಟ್ರೀಯ ನಷ್ಟ
ತಿನ್ನುವ ಹಕ್ಕಿದೆ - ಬಿಸಾಡುವ ಹಕ್ಕು ನಮಗಿಲ್ಲ
ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಸಮಾಜಮುಖಿ ಚಿಂತನೆಯ ಆಸಕ್ತ ಗೆಳೆಯರಿಂದ ಜಾಗೃತಿ ಅಭಿಯಾನ
ಆಹಾರದ ಉಳಿತಾಯ ಎಷ್ಟು ಅವಶ್ಯಕ ಎಂದು ನಿಮಗೆ ಹೇಳುವ ಅಗತ್ಯವಿಲ್ಲ . ಅದು ನಮ್ಮೆಲ್ಲರ ಜವಾಬ್ದಾರಿ .
ದಯವಿಟ್ಟು ಸಮಯಾವಕಾಶ ಮಾಡಿಕೊಂಡು ನಿಮ್ಮವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಸ್ಥಳ : ಪುರಭವನದ ಮುಂಭಾಗ (ಟೌನಹಾಲ್) ಬೆಂಗಳೂರು
ಸಮಯ: ಸಂಜೆ 5:30ಕ್ಕೆ
ಕಾರ್ಯಕ್ರಮದ ನಂತರ ಲಘು ಉಪಹಾರ ಏರ್ಪಡಿಸಲಾಗಿದೆ.
RIGHT TO EAT - NOT TO WASTE
ಹೆಚ್ಚಿನ ಮಾಹಿತಿಗಾಗಿ,
ಎನ್.ಕೆ. ಮೋಹನ್ ಕುಮಾರ್
9449909000
ಎಂ.ಯುವರಾಜ್
8050802019
ಟಿ.ನರಸಿಂಹಮೂರ್ತಿ
9980627609
ಉಮೇಶ್. ಎಚ್. ಸಿ.
9844057149
ದೀಪಕ್. ಎಚ್.
99020 80312
ವಿವೇಕಾನಂದ. ಎಚ್.ಕೆ.
9844013068
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068..........[12/10, 12:35 pm] Vivekananda H K Vivek: ಬದಲಾವಣೆ ಜಗದ ನಿಯಮ....

9844013068..........
13th October 2024
13th October 2024
ಇಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ್ ಅವರ ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ಹತ್ತಿರವಿರುವ ಕಾಡಾ ಕಚೇರಿಯ 1ನೇ ಮಹಡಿಯಲ್ಲಿ ನೂತನ "ಸಂಸದರ ಕಚೇರಿ" ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
13th October 2024
🌻 *ದಿನಕ್ಕೊಂದು ಕಥೆ* 🌻
*ಬೇರೆಯವರೊಂದಿಗೆ, ನಮ್ಮನ್ನು ಹೋಲಿಸಿಕೊಳ್ಳುವುದರಿಂದ ಕೀಳರಿಮೆ ಉಂಟಾಗುತ್ತದೆ.*
ಯಾವಾಗಲೂ ಬೇರೆಯವರೊಂದಿಗೆ ಹೋಲಿಸಿ ಕೊಳ್ಳುವುದು ಮನುಷ್ಯನ ಸ್ವಭಾವ . ಅದು ಹಣಕಾಸಿನ ವಿಷಯದಲ್ಲಿ ಅಥವಾ ನಮ್ಮ ಜೀವನಮಟ್ಟ ವಿಷಯದಲ್ಲಿ ಅಥವಾ ರೂಪದ ವಿಷಯದಲ್ಲೊ ಹೀಗೆ ಇನ್ಯಾವುದೋ, ಒಂದಲ್ಲಾ ಒಂದು ವಿಷಯದಲ್ಲಿ, ಬೇರೆಯವರಲ್ಲಿರುವುದು ನಮ್ಮಲ್ಲಿ ಇಲ್ಲವೆಂದು , ಅನಾವಶ್ಯಕವಾಗಿ ಹೋಲಿಸಿಕೊಳ್ಳುತ್ತಲೇ
ಇರುತ್ತೇವೆ. ಇದರಿಂದ ನಾವು ಅವರಿಗಿಂತ ಕೆಳಮಟ್ಟದಲ್ಲಿ ಇದ್ದೇವೆ ಎಂದು ಭಾವ, ನಮ್ಮಲ್ಲಿ ಕೀಳರಿಮೆ ಉಂಟುಮಾಡುತ್ತದೆ ಇದರಿಂದಲೇ ಮನುಷ್ಯ ಸದಾ ದುಃಖಿಯಾಗಿರುವುದು. ಹೀಗಾದಾಗ ನಾವು ಶಾಂತಿಯಿಂದ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಇಂತಹ ಮನಸ್ಥಿತಿಯಿಂದ ಹೊರಬರುವುದು ಸ್ವಲ್ಪ ಕಷ್ಟವೇ.
ಮೊದಲು ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಇನ್ನೊಬ್ಬರಲ್ಲಿ ಇರುವುದು ನನಗೂ ಬೇಕು, ಎಂಬ ಭಾವವನ್ನುಬಿಟ್ಟು ,ನಮ್ಮಲ್ಲಿರುವುದರಲ್ಲಿ ತೃಪ್ತಿಯನ್ನು ಕಂಡುಕೊಳ್ಳಬೇಕು. ನಾವು ಹೇಗಿದ್ದೆವೊ ಹಾಗೆಯೇ ಸಂತೋಷವಾಗಿದ್ದೇವೆ ಎಂಬ ಭಾವ ನಮ್ಮಲ್ಲಿರಬೇಕು. ನಾವು ಯಾವತ್ತೂ ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೇ ಹೊರತು, ಮನಸ್ಸಿನ ಹಿಡಿತದಲ್ಲಿ ನಾವು ಸಿಕ್ಕಿಹಾಕಿಕೊಳ್ಳಬಾರದು.
ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾದರೆ, ಆಗ ಯಾವುದೇ ಕ್ಷೋಭೆ ಅಥವಾ ದುಃಖ ನಮ್ಮ ಹತ್ತಿರವೂ ಸುಳಿಯುವುದಿಲ್ಲ. ಮನುಷ್ಯನ ದುಃಖಕ್ಕೆ ಮೂಲ ಕಾರಣ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವುದೇ ಆಗಿದೆ.ನಮ್ಮ ಮನಸ್ಸು ಪ್ರಫುಲ್ಲವಾಗಿ ಸಮಸ್ಥಿತಿಯಲ್ಲಿದ್ದರೆ ಆಗ ಇನ್ನಷ್ಟು ಕೆಲಸಗಳನ್ನು ಮಾಡುವುದಕ್ಕೆ ಏನಾದರೂ ಸಾಧನೆ ಮಾಡಲು ನಮ್ಮ ಮನಸ್ಸು ತಾನೇ ಪ್ರೇರೇಪಿಸುತ್ತದೆ. ಆದ್ದರಿಂದ ಮನಸ್ಸನ್ನು ಅನಾವಶ್ಯಕವಾಗಿ ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು, ದುಃಖಿಸುತ್ತಾ ,ಕ್ಷೋಭೆಗೊಳ್ಳಗಾಗುವುದಕ್ಕೆ ಬಿಡಬಾರದು.
ಮನಸ್ಸು ನಮ್ಮ ಹಿಡಿತದಲ್ಲಿ ಇರಬೇಕೆಂದರೆ, ನಾವು ಬೇಡದುದರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಬೇಕು. ಬೇಡದ್ದನ್ನು ಯೋಚಿಸುವುದನ್ನುಬಿಟ್ಟು, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ತೃಪ್ತಿಯಿಂದ ಇದ್ದರೆ, ಮನಸ್ಸು ತನಗೆ ತಾನೇ ಶಾಂತವಾಗಿರುವುದಕ್ಕೆ ಸಾಧ್ಯ. ನಮ್ಮಲ್ಲಿ ಶಾಂತತೆ, ಮೌನ, ಗಾಂಭೀರ್ಯಗಳು ತುಂಬಿದಾಗ ಜೀವನವನ್ನು ಅದು ಹೇಗಿದೆಯೋ ಹಾಗೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ.
*ಭಗವಂತ ಸೃಷ್ಟಿಮಾಡುವಾಗ ಎಲ್ಲರಲ್ಲೂ ಒಂದೊಂದು ವಿಶೇಷ ಗುಣವನ್ನು ಇಟ್ಟೇ ಸೃಷ್ಟಿ ಮಾಡಿರುತ್ತಾನೆ. ನಮ್ಮಲ್ಲಿರುವ ಆ ವಿಶೇಷತೆಯನ್ನು ನಾವು ಗುರುತಿಸಿಕೊಂಡಾಗ, ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಂಡು ಅತೃಪ್ತರಾಗಲು ಸಾಧ್ಯವಿಲ್ಲ.*
ವಂದನೆಗಳೊಂದಿಗೆ,
✍️ *ಸುವರ್ಣಾ ಮೂರ್ತಿ*
*ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ ತಾ. ಜೇವರ್ಗಿ*
9th October 2024
ಬೆಳಗಾವಿ : ಆಗಸ್ಟ ಒಂದರಂದು ಅಪೇಕ್ಷೆ ಕೋರ್ಟ ಪೀಠವು ಎಸ್.ಸಿ ಮೀಸಲಾತಿಯಲ್ಲಿ ಒಳಮೀಸಲಾತಿ ಉಪವರ್ಗಿಕರಿಸಲು ಆಯಾ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ. ಎಂಬುದನ್ನು ಏಳು ನ್ಯಾಯಾಧೀಶರ ಸಂವಿಧಾನಿಕರ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗಾಗಿ ಚರ್ಚಿಸದೆ ಜಾತಿ ಜನಗಣತಿ ವರದಿ ಬಿಡುಗಡೆಯ ನೆಪವೊಡ್ಡಿ ಸುಪ್ರೀಮ್ ಕೋರ್ಟ ನೀಡಿದ ಒಳಮೀಸಲಾತಿ ಜಾರಿಗೆ ಕ್ರಮವಹಿಸದೆ ನ್ವಯಾಂಗನಿಂದನೆಗೆ ಮುಂದಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಇವರ ಸಾಮಾಜಿಕ ನ್ಯಾಯದ ದ್ರೋಹದ ನಡೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತ ಪಡಿಸಿದೆ.
ಕರ್ನಾಟಕ ಸರ್ಕಾರದ ಪ್ರಸ್ತುತ ಕಾಂಗ್ರೆಸ್ ಪಕ್ಷ 2023 ರ ಚುನಾವಚಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಗೋಳಿಸುದಾಗಿ ತನ್ನ 06 ನೇ ಗ್ಯಾರಂಟಿ ಘೋಷಿಶಿಕೊಂಡಂತೆ ಸುಪ್ರೀಮ್ ಕೋರ್ಟ ತಿರ್ಪು ಆದರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಾಗಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ವರ್ಗಿಕರಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಮೂರು ದಶಕಗಳ ಮಿಕ್ಕ ಹೋರಾಟಗಳು ನಡೆದಿವೆ. ನ್ಯಾಯ ಮೂರ್ತಿ ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿಕೊಂಡು 2011 ರ ಜನ ಗಣತಿಯ ಸಂಖ್ಯಾದಾರಗಳು ಮತ್ತು ನ್ಯಾಯ ಮೂರ್ತಿ ನಾಗಮೋಹನ ದಾಸ ಆಯೋಗದ ವರದಿಯಂತೆ ವಿಸ್ತರಿಸಲಾದ ಶೇ 17 ರ ಮೀಸಲಾತಿಯನ್ನು ಬಳಸಿಕೊಂಡು ಉಪವರ್ಗಿಕರಣದ ಸೂತ್ರ ರೂಪಸಿಲಾಗಿದೆ. 2011 ರ ಜನಗಣತಿಯ ವರದಿಯಂತ ಕರ್ನಾಟಕದಲ್ಲಿ ಎಸ್ ಸಿ ಜನಸಂಖ್ಯೆ : 1,04,74,992 ಈಗಿರುವ ಶೇ 17 ರ ಮೀಸಲಾತಿಯನ್ನು ವರ್ಗಿಕರಿಸಿದರೆ ತಲಾ ಆರು ಲಕ್ಷ ಜನಸಂಖ್ಯೆಗೆ ಶೇ 01 ರಷ್ಟು ಮೀಸಲಾತಿ ದೊರಕತ್ತದೆ. ಕರ್ನಾಟಕದಲ್ಲಿ ಎಸ್ ಸಿ/ ಎಸ್ ಟಿ ಮೀಸಲಾತಿಯನ್ನು ಏರಿಕೆ ಮಾಡಿದ್ದು ಜನಸಂಖ್ಯೆಗೆ ಅನುಗುಣವಾಗಿ ಹಾಗೆಯೇ ಉಪವರ್ಗಿಕರಣವನ್ನು ಜನಸಂಖ್ಯೆಗೆ ಅಣುಗುಣವಾಗಿಯೇ ಬೊಮ್ಮಾಯಿ ಸರ್ಕಾರವು ಸಿಪಾರ ಮಾಡಿದೆ. ಈವೆಲ್ಲದರ ಮಾಹಿತಿಯು ಸರ್ಕಾರದ ಬಳಿ ಇದೆ.నా యని NORS ఆయాగగల వరది మత్తు 2011 జనగణతీయ ಸಂಖ್ಯಾಧಾರಗಳೊಂದಿಗೆ ಮನರ್ ಪರಿಶೀಲಿಸಿ ವರದಿ ಕೋಡಲು ರಚಿಸಿದ ಸಚಿವ ಸಂಪು: ಉಪ ಅಂಗಾರ, ಡಾ ಸುಧಾಕರ ರವರನ್ನೊಳಗೊಂಡ ಸಮಿತಿಯು ಅತ್ಯಂತ ವೈಜ್ಞಾನಿಕವಾಗಿ ನ್ಯಾಯಬದ್ದವಾಗಿ ಕಾನೂನು ರೀತಿಯಲ್ಲಿ ವರದಿ ಕೊಟ್ಟಿರುವುದನ್ನು ಪ್ರಸ್ತುತ ಸರ್ಕಾರವು ಮಾನ್ಯ
ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಬಾರದು, ಎಂಬ ಒತ್ತಾಯದ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲವೆ? ಜಾತಿ ಗೀತೆ ಜೋರ ತಂದು ಎಸ್ ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು. ಅನೇಶ್ವ ಕೋರ್ಟ ತಿರ್ಪು ಉಲ್ಲಂಘಣೆಯ ಒಳಹುನ್ನಾರವನ್ನು ಮುಂದುವರೆಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರ್ಕಾರವು ಎದುರಿಸಬೇಕಾಗುತ್ತದೆ.
ಸುಪ್ರಿಂ ಕೋರ್ಟ ತೀರ್ಪನ್ನು ಕೂಡಲೆ ರಾಜ್ಯ ಸರ್ಕಾರವು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳ ಕಚೇರಿ ముందే దినాంశ : 16/10/2024 రెండు ప్రతిభటనయ మూలక మాన్య జిల్లాధికారిగళ ಮುಖಾಂತರ ಮುಖ್ಯ ಮಂತ್ರಿಗಳಿಗೆ ಹಾಗೂ ರಾಜ್ಯ ಪಾಲರುಗಳಿಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮೀತಿ ಕರ್ನಾಟಕ ಜಿಲ್ಲಾ ಸಮೀತಿ ಬೆಳಗಾವಿ ವತಿಯಿಂದ ಮನವಿ ಸಲ್ಲಿಸಲಾಗುತ್ತಿದ್ದು, ಸಮುದಾಯದ ಬಾಂದವರು ಅಂದಿನ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಪತ್ರಿಕಾ ಘೋಷ್ಠಿಯಲ್ಲಿ ರಾಜೇಂದ್ರ ಐಹೊಳೆ, ಚಂದ್ರಕಾಂತ ಕಾದ್ರೋಳಿ, ಆರುಣ ಐಹೋಳೆ. ಬಸವರಾಜ ಸನದಿ, ಮಹಾವೀರ ಐಹೋಳೆ, ಎನ್ ಪ್ರಶಾಂತರಾವ, ಬಾಸ್ಕರ್ ಚನ್ನಮೇತ್ರಿ, ರಮೇಶ ಮಾದರ, ಸತ್ಯಪ್ಪ ಕರವಡೆ, ಬಸವರಾಜ ಕಾಡಾಪೂರೆ, ಯಲ್ಲಪ್ಪ ಕಾಳಪ್ಪನ್ನವರ, ರಾಜು ಜಾಂಗಟೆ, ಯಲ್ಲಪ್ಪ ಒಕ್ಕುಂದ, ಅಜಿತ ಮಾದರ, ಶಂಕರ ದೊಡಮನಿ, ಬಾಬು ಪೂಜೆರಿ, ಸಿದ್ದು ಮೇತ್ರಿ ನಾಗಮ್ಮ ಕರೇಮ್ಮನ್ನವರ, ಸುನಿತಾ ಐಹೊಳೆ, ಕಲ್ಲಪ್ಪ ಈರಗಾರ, ಬಾಬಾಸಾಬ ಕೆಂಚನ್ನವರ, ಜಗಧೀಶ ಹೆಗಡೆ, ಶಿವಾಜಿ ಬೋರೆ, ಕರೇಪ್ಪ ಗುಡೆನ್ನವರ, ಶ್ರವಣಕುಮಾರ ಬೆವಿನಗಿಡದ. ಹಣಮಂತ ಅರ್ದಾವುರ, ಕುಮಾರ ಗಸ್ತಿ, ಸದಾಶಿವ ದೊಡಮನಿ, ಯಶವಂತ ಮೇಲಗಡೆ, ಹಣಮಂತ ನರೆರ, ನಾಗಪ್ಪ ಪಡೆಪ್ಪಗೋಳ, ಪ್ರಕಾಶ ಕೆಳಗೇರಿ, ರಾಜಶೇಖರ ಹಿಡಕಲಕರ, ಮುರುಗೇಶ ಕಂಬನ್ನವರ, ಮಹೇಶ ಕರಮಡಿ, ವಿನಯನಿಧಿ ಕಮಾಲ ವಕೀಲರು, ಉದಯ ರೆಡ್ಡಿ, ರವಿ ದೇವರಮನಿ, ಬಸವರಾಜ ಅರವಳ್ಳಿ, ಮುಂತಾದವರು ಹಾಜರಿದ್ದರು.
9th October 2024
🕉️ ಓಂ ಶ್ರೀ ಗುರುಭ್ಯೋ ನಮಃ 🕉️
🔱🪷 *ಜೈ ಶ್ರೀಮಾತ*. 🪷🔱
🥀 *ದಸರಾ ಹಬ್ಬದ ದುರ್ಗಾ ದೇವಿಯ*
*ನವರಾತ್ರಿ ನಾಳೆ ಏಳನೇ ದಿನ ಆಗಿರುತ್ತದೆ* 🥀
🌻. *ನವರಾತ್ರಿ ಏಳನೇ ದಿನ ಕಾಳರಾತ್ರಿ*
*ಸರಸ್ವತಿ ಪೂಜೆ ಆವಾಹನೆ ಪೂಜೆ ಶುಭ ಮುಹೂರ್ತ, ಪೂಜೆ ವಿಧಾನ* 🌻
ನವರಾತ್ರಿ ಮಹೋತ್ಸವದಲ್ಲಿ ಸಪ್ತಮಿ ದಿನದಂದು ಸರಸ್ವತಿ ಪೂಜೆಯನ್ನು ನಡೆಸಲಾಗುತ್ತದೆ.
ಅಕ್ಟೋಬರ್ 09,ನೇ, ತಾ" ರಂದು ಸರಸ್ವತಿ ಪೂಜೆ ಮತ್ತು ಅಕ್ಟೋಬರ್ 10 ರಂದು ಸರಸ್ವತಿ ವಿಸರ್ಜನೆ ನಡೆಯಲಿದೆ. ಮುಖ್ಯವಾಗಿ ಈ ಪೂಜೆಯನ್ನು ಭಾರತದ ದಕ್ಷಿಣ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಸರಸ್ವತಿಯನ್ನು ಪೂಜಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬುದು ನಂಬಿಕೆಯಾಗಿದೆ. ಸರಸ್ವತಿ ಪೂಜೆಯ ದಿನಾಂಕ, ಶುಭ ಮುಹೂರ್ತ ಮತ್ತು ಮಹತ್ವದ ಬಗ್ಗೆ ತಿಳಿಯೋಣ.
*ನವರಾತ್ರಿ ಸರಸ್ವತಿ ಆವಾಹನೆ, ಪೂಜೆ ಮುಹೂರ್ತ ಮತ್ತು ವಿಸರ್ಜನೆ ಮುಹೂರ್ತ ಹೀಗಿದೆ:*
ಸರಸ್ವತಿ ಪೂಜೆಯನ್ನು ಸಪ್ತಮೀ ತಿಥಿ ಅಥವಾ ಮೂಲ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಈ ವರ್ಷ ನಾಳೆ ಷಷ್ಠೀ ತಿಥಿ ಇದ್ದರೂ ಮೂಲ ನಕ್ಷತ್ರ ಇರುವುದರಿಂದ ನಾಳೆಯೇ ಸರಸ್ವತೀ ಆವಾಹನೆ ಮಾಡಲಾಗುತ್ತದೆ.
🌸 *ಸರಸ್ವತಿ ಆವಾಹನೆಯ ಮಹತ್ವ* 🌸
ಸರಸ್ವತಿ ಆವಾಹನೆ ಎಂದರೆ ದೇವಿಯನ್ನು ಪೂಜೆಗೆ ಆಹ್ವಾನಿಸುವುದಾಗಿದೆ. ಈ ಪವಿತ್ರ ದಿನದಂದು, 'ಸರಸ್ವತಿ ದೇವಿಯನ್ನು' ಭಕ್ತರು, ಕಲಿಯಲು ಮತ್ತು ಜ್ಞಾನವನ್ನು ಪಡೆಯಲು ಆಹ್ವಾನಿಸುತ್ತಾರೆ. ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ವಿಪುಲ ಜ್ಞಾನ ಲಭಿಸುತ್ತದೆ ಎಂದು ನಂಬಲಾಗಿದೆ. ಸರಸ್ವತಿ ಪೂಜೆಯ ದಿನದಂದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸರಸ್ವತಿ ಪೂಜೆಯನ್ನು ಸಹ ನಡೆಸಲಾಗುತ್ತದೆ. ಏಕೆಂದರೆ ಈ ದಿನವು ಶಿಕ್ಷಣ ಮತ್ತು ಕಲಿಕೆಗೆ ಬಹಳ ಮಂಗಳಕರವಾದ ದಿನವಾಗಿದೆ. ಈ ಸಂದರ್ಭದಲ್ಲಿ ಭಕ್ತರು ಸರಸ್ವತಿ ದೇವಿಯ ವಿಗ್ರಹವನ್ನು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನಗಳಲ್ಲಿ ಸರಸ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಪ್ರಗತಿಯ ಹಾದಿ ತೆರೆಯುತ್ತದೆ ಎನ್ನುವುದು ನಂಬಿಕೆ.
🥀 *ಸರಸ್ವತಿ ದೇವಿಯ ಮಂತ್ರ:* 🥀
ಸರಸ್ವತಿ ಪೂಜೆಯ ದಿನ, 'ಓಂ ಐಂ ಸರಸ್ವತ್ಯೈ ಏಂ ನಮಃ' ಈ ಮಂತ್ರವನ್ನು ಪಠಿಸಿ. ಇದರಿಂದಾಗಿ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಮತ್ತು ನೀವು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ.
🌹. *ಸರಸ್ವತಿ ಪೂಜೆ ವಿಧಾನ:* 🌹
ಸರಸ್ವತಿ ಪೂಜೆಯ ದಿನದಂದು, ಹಿಂದೂಗಳು ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಆಶೀರ್ವಾದವನ್ನು ಪಡೆಯಲು ದೇವಿಗೆ ವಿವಿಧ ರೀತಿಯ ಅರ್ಪಣೆ ಮಾಡುತ್ತಾರೆ. ಈ ದಿನ ಪ್ರೀತಿಯ ಅಧಿಪತಿಯಾದ ಕಾಮದೇವನನ್ನು ಸಹ ಪೂಜಿಸಲಾಗುತ್ತದೆ ಮತ್ತು ಸಂಪ್ರದಾಯಗಳ ಭಾಗವಾಗಿ ಬ್ರಾಹ್ಮಣರಿಗೆ ಆಹಾರವನ್ನು ನೀಡಲಾಗುತ್ತದೆ. ಪಿತೃ ತರ್ಪಣ, ಪೂರ್ವಜರನ್ನು ಪೂಜಿಸುವ ವಿಧಾನವೂ ಈ ದಿನ ನಡೆಯುತ್ತದೆ. ಸರಸ್ವತಿ ಪೂಜೆಯ ಶುಭ ದಿನದಂದು ಮಕ್ಕಳಿಗೆ ವಿದ್ಯಾರಂಭವನ್ನು ಕೂಡ ಮಾಡಿಸಲಾಗುತ್ತದೆ. ಜ್ಞಾನದೇವತೆಯನ್ನು ಮೆಚ್ಚಿಸಲು ಪುಷ್ಪಾಂಜಲಿಯನ್ನು ಅರ್ಪಿಸಲಾಗುತ್ತದೆ.
ಈ ದಿನದಂದು ಸರಸ್ವತೀ ದೇವಿಗೆ ಪ್ರಿಯವಾದ ಹಳದಿ ಬಣ್ಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಜನರು ಸಾಮಾನ್ಯವಾಗಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಅದೇ ಬಣ್ಣದ ಸಿಹಿತಿಂಡಿಗಳನ್ನು ಮಾಡುತ್ತಾರೆ. ದೇವಿಗೂ ಈ ದಿನ ಹಳದಿ ಬಣ್ಣದ ವಸ್ತ್ರಗಳನ್ನು ಅರ್ಪಿಸಲಾಗುತ್ತದೆ. ಸಿಹಿತಿಂಡಿಗಳು, ಹಣ್ಣುಗಳು, ಕುಂಕುಮ, ಮೌಳಿ ದಾರ ಮತ್ತು ಹಳದಿ ಬಣ್ಣದ ಹೂವುಗಳನ್ನು ಅರ್ಪಿಸುವ ಮೂಲಕ ಸರಸ್ವತಿಯನ್ನು ಪೂಜಿಸುತ್ತಾರೆ.
🕉️ ಓಂ ಶ್ರೀ ಗುರುಭ್ಯೋ ನಮಃ 🕉️
🪷 *ಶ್ರೀ ಸರಸ್ವತೀ ದೇವಿ ಅಷ್ಟೋತ್ತರಶತನಾಮಾವಳಿಃ*. 🪷
ಓಂ ಸರಸ್ವತ್ಯೈ ನಮಃ |
ಓಂ ಮಹಾಭದ್ರಾಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ವರಪ್ರದಾಯೈ ನಮಃ |
ಓಂ ಶ್ರೀಪ್ರದಾಯೈ ನಮಃ |
ಓಂ ಪದ್ಮನಿಲಯಾಯೈ ನಮಃ |
ಓಂ ಪದ್ಮಾಕ್ಷ್ಯೈ ನಮಃ |
ಓಂ ಪದ್ಮವಕ್ತ್ರಾಯೈ ನಮಃ |
ಓಂ ಶಿವಾನುಜಾಯೈ ನಮಃ | ೯
ಓಂ ಪುಸ್ತಕಭೃತೇ ನಮಃ |
ಓಂ ಜ್ಞಾನಮುದ್ರಾಯೈ ನಮಃ |
ಓಂ ರಮಾಯೈ ನಮಃ |
ಓಂ ಪರಾಯೈ ನಮಃ |
ಓಂ ಕಾಮರೂಪಾಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಮಹಾಪಾತಕನಾಶಿನ್ಯೈ ನಮಃ |
ಓಂ ಮಹಾಶ್ರಯಾಯೈ ನಮಃ |
ಓಂ ಮಾಲಿನ್ಯೈ ನಮಃ | ೧೮
ಓಂ ಮಹಾಭೋಗಾಯೈ ನಮಃ |
ಓಂ ಮಹಾಭುಜಾಯೈ ನಮಃ |
ಓಂ ಮಹಾಭಾಗಾಯೈ ನಮಃ |
ಓಂ ಮಹೋತ್ಸಾಹಾಯೈ ನಮಃ |
ಓಂ ದಿವ್ಯಾಂಗಾಯೈ ನಮಃ |
ಓಂ ಸುರವಂದಿತಾಯೈ ನಮಃ |
ಓಂ ಮಹಾಕಾಳ್ಯೈ ನಮಃ |
ಓಂ ಮಹಾಪಾಶಾಯೈ ನಮಃ |
ಓಂ ಮಹಾಕಾರಾಯೈ ನಮಃ | ೨೭
ಓಂ ಮಹಾಂಕುಶಾಯೈ ನಮಃ |
ಓಂ ಪೀತಾಯೈ ನಮಃ |
ಓಂ ವಿಮಲಾಯೈ ನಮಃ |
ಓಂ ವಿಶ್ವಾಯೈ ನಮಃ |
ಓಂ ವಿದ್ಯುನ್ಮಾಲಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ಚಂದ್ರಿಕಾಯೈ ನಮಃ |
ಓಂ ಚಂದ್ರವದನಾಯೈ ನಮಃ |
ಓಂ ಚಂದ್ರಲೇಖಾವಿಭೂಷಿತಾಯೈ ನಮಃ | ೩೬
ಓಂ ಸಾವಿತ್ರ್ಯೈ ನಮಃ |
ಓಂ ಸುರಸಾಯೈ ನಮಃ |
ಓಂ ದೇವ್ಯೈ ನಮಃ |
ಓಂ ದಿವ್ಯಾಲಂಕಾರಭೂಷಿತಾಯೈ ನಮಃ |
ಓಂ ವಾಗ್ದೇವ್ಯೈ ನಮಃ |
ಓಂ ವಸುಧಾಯೈ ನಮಃ |
ಓಂ ತೀವ್ರಾಯೈ ನಮಃ |
ಓಂ ಮಹಾಭದ್ರಾಯೈ ನಮಃ |
ಓಂ ಮಹಾಬಲಾಯೈ ನಮಃ | ೪೫
ಓಂ ಭೋಗದಾಯೈ ನಮಃ |
ಓಂ ಭಾರತ್ಯೈ ನಮಃ |
ಓಂ ಭಾಮಾಯೈ ನಮಃ |
ಓಂ ಗೋವಿಂದಾಯೈ ನಮಃ |
ಓಂ ಗೋಮತ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಜಟಿಲಾಯೈ ನಮಃ |
ಓಂ ವಿಂಧ್ಯವಾಸಾಯೈ ನಮಃ |
ಓಂ ವಿಂಧ್ಯಾಚಲವಿರಾಜಿತಾಯೈ ನಮಃ | ೫೪
ಓಂ ಚಂಡಿಕಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಬ್ರಹ್ಮಜ್ಞಾನೈಕಸಾಧನಾಯೈ ನಮಃ |
ಓಂ ಸೌದಾಮಿನ್ಯೈ ನಮಃ |
ಓಂ ಸುಧಾಮೂರ್ತ್ಯೈ ನಮಃ |
ಓಂ ಸುಭದ್ರಾಯೈ ನಮಃ |
ಓಂ ಸುರಪೂಜಿತಾಯೈ ನಮಃ |
ಓಂ ಸುವಾಸಿನ್ಯೈ ನಮಃ | ೬೩
ಓಂ ಸುನಾಸಾಯೈ ನಮಃ |
ಓಂ ವಿನಿದ್ರಾಯೈ ನಮಃ |
ಓಂ ಪದ್ಮಲೋಚನಾಯೈ ನಮಃ |
ಓಂ ವಿದ್ಯಾರೂಪಾಯೈ ನಮಃ |
ಓಂ ವಿಶಾಲಾಕ್ಷ್ಯೈ ನಮಃ |
ಓಂ ಬ್ರಹ್ಮಜಾಯಾಯೈ ನಮಃ |
ಓಂ ಮಹಾಫಲಾಯೈ ನಮಃ |
ಓಂ ತ್ರಯೀಮೂರ್ತ್ಯೈ ನಮಃ |
ಓಂ ತ್ರಿಕಾಲಜ್ಞಾಯೈ ನಮಃ | ೭೨
ಓಂ ತ್ರಿಗುಣಾಯೈ ನಮಃ |
ಓಂ ಶಾಸ್ತ್ರರೂಪಿಣ್ಯೈ ನಮಃ |
ಓಂ ಶುಂಭಾಸುರಪ್ರಮಥಿನ್ಯೈ ನಮಃ |
ಓಂ ಶುಭದಾಯೈ ನಮಃ |
ಓಂ ಸ್ವರಾತ್ಮಿಕಾಯೈ ನಮಃ |
ಓಂ ರಕ್ತಬೀಜನಿಹಂತ್ರ್ಯೈ ನಮಃ |
ಓಂ ಚಾಮುಂಡಾಯೈ ನಮಃ |
ಓಂ ಅಂಬಿಕಾಯೈ ನಮಃ |
ಓಂ ಮುಂಡಕಾಯಪ್ರಹರಣಾಯೈ ನಮಃ | ೮೧
ಓಂ ಧೂಮ್ರಲೋಚನಮರ್ದನಾಯೈ ನಮಃ |
ಓಂ ಸರ್ವದೇವಸ್ತುತಾಯೈ ನಮಃ |
ಓಂ ಸೌಮ್ಯಾಯೈ ನಮಃ |
ಓಂ ಸುರಾಸುರನಮಸ್ಕೃತಾಯೈ ನಮಃ |
ಓಂ ಕಾಳರಾತ್ರ್ಯೈ ನಮಃ |
ಓಂ ಕಳಾಧಾರಾಯೈ ನಮಃ |
ಓಂ ರೂಪಸೌಭಾಗ್ಯದಾಯಿನ್ಯೈ ನಮಃ |
ಓಂ ವಾಗ್ದೇವ್ಯೈ ನಮಃ |
ಓಂ ವರಾರೋಹಾಯೈ ನಮಃ | ೯೦
ಓಂ ವಾರಾಹ್ಯೈ ನಮಃ |
ಓಂ ವಾರಿಜಾಸನಾಯೈ ನಮಃ |
ಓಂ ಚಿತ್ರಾಂಬರಾಯೈ ನಮಃ |
ಓಂ ಚಿತ್ರಗಂಧಾಯೈ ನಮಃ |
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ |
ಓಂ ಕಾಂತಾಯೈ ನಮಃ |
ಓಂ ಕಾಮಪ್ರದಾಯೈ ನಮಃ |
ಓಂ ವಂದ್ಯಾಯೈ ನಮಃ |
ಓಂ ವಿದ್ಯಾಧರಸುಪೂಜಿತಾಯೈ ನಮಃ | ೯೯
ಓಂ ಶ್ವೇತಾನನಾಯೈ ನಮಃ |
ಓಂ ನೀಲಭುಜಾಯೈ ನಮಃ |
ಓಂ ಚತುರ್ವರ್ಗಫಲಪ್ರದಾಯೈ ನಮಃ |
ಓಂ ಚತುರಾನನಸಾಮ್ರಾಜ್ಯಾಯೈ ನಮಃ |
ಓಂ ರಕ್ತಮಧ್ಯಾಯೈ ನಮಃ |
ಓಂ ನಿರಂಜನಾಯೈ ನಮಃ |
ಓಂ ಹಂಸಾಸನಾಯೈ ನಮಃ |
ಓಂ ನೀಲಜಂಘಾಯೈ ನಮಃ |
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ | ೧೦೮ ||ಇತಿ ಶ್ರೀ ಸರಸ್ವತೀ ದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್||
ಶುಭವಾಗಲಿ.
▬▬▬ஜ۩۞۩ஜ▬▬▬
🪷 *ಸರ್ವಂ ಶ್ರೀ*
*ಜಗದಂಬಾರ್ಪಣಮಸ್ತು* . 🪷
*ಶ್ರೀಮತಿ ಶಶಿಕಲಾ ಯೋಗಾನಂದ್*
*ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಜ್ಞರು*
*ಬಳ್ಳಾರಿ* 🙏🕉️
ಮೋ ನಂ. -
9916122516
9535461566
▬▬▬ஜ۩۞۩ஜ▬▬▬🕉️ ಓಂ ಶ್ರೀ ಗುರುಭ್ಯೋ ನಮಃ 🕉️

8th October 2024
ದೇವಸ್ಥಾನಗಳು ಬಾಂಧವ್ಯ ಗಟ್ಟಿಗೊಳಿಸುವ ಕೆಂದ್ರಗಳು.-
ರಾಮತೀರ್ಥನಗರದ ದಾಂಡಿಯಾದಲ್ಲಿ ಪತ್ರಕರ್ತ ಶ್ರೀಶೈಲ ಮಠದ ಅಭಿಮತ.
ಅಂಕಲಗಿ. - ಬದುಕಿಗೆ ಸಂಸ್ಕಾರ ಬೇಕು. ನಮ್ಮತನವನ್ನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳುವ ಮೂಲಕ ಮುಂದಿನ ಜನಾಂಗೀಯ ಸುಂದರತನಕ್ಕೆ ಸಂಸ್ಕಾರ ಹಂಚಿದಂತಾಗುವದು. ದೇವಸ್ಥಾನಗಳು ,ಮಠ ಮಂದಿರಗಳು, ಸಂಸ್ಕಾರ ಕೊಡಬಲ್ಲ ಗಟ್ಟಿ ಕೆಂದ್ರಗಳು ಹೌದು ಎಂದು ಬೆಳಗಾವಿ ಕನ್ನಡಪ್ರಭ ದಿನಪತ್ರಿಕೆಯ ಮುಖ್ಯ ವರದಿಗಾರ, ಹಿರಿಯ ಪತ್ರಕರ್ತ, ಶ್ರೀಶೈಲ ಮಠದ ಹೇಳಿದರು. ಅವರು ಮಂಗಳವಾರ ಬೆಳಗಾವಿ ರಾಮತೀರ್ಥನಗರದ ಸ್ನೇಹ ಸಮಾಜ ಸೇವಾ ಸಂಘದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ದ ಆವರಣದಲ್ಲಿ ಜರುಗಿದ ೫ ನೇ ದಿನದ ಮಹಿಳೆಯರ ಮತ್ತು ಮಕ್ಕಳ ದಾಂಡಿಯಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ತಪ್ಪಿನಿಂದಾಗಿ ಮಕ್ಕಳು ದಾರಿ ತಪ್ಪುತ್ತಿದ್ದು, ಇದರ ಅರಿವು ನಮಗಾಗಬೇಕು. ಮಕ್ಕಳಿಂದ ಮೊಬೈಲ್ ಕಸಿದು, ಕೈಗೆ ಪುಸ್ತಕ ಕೊಡುವದಾಗಬೇಕು. ಪುಸ್ತಕಗಳು ನಮ್ಮ ಪೀಳಿಗೆಯ ಬಹು ದೊಡ್ಡ ಆಸ್ತಿ. ಎಂದರಲ್ಲದೆ, ಇಂಥಹ ಕಾರ್ಯಕ್ರಮಗಳು ಪರಸ್ಪರರ ನಡುವಿನ ಸ್ನೇಹ, ಪ್ರೀತಿ,ವಿಶ್ವಾಸಗಳನ್ನು ಬೆಸೆದು ಅಂತರದ ಹೃದಯಗಳನ್ನು ಒಂದಾಗಿಸಬಲ್ಲ ಹೃದಯ ಸ್ಪರ್ಶಿ ತಾಣಗಳು ಎಂದರಲ್ಲದೆ, ಸನ್ಮಾನ ಕೊಟ್ಟದ್ದಕ್ಕೆ ಧನ್ಯವಾದ ಹೇಳಿದರು.
ಸಂಘದ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿದರಲ್ಲದೆ, ಮಾತನಾಡಿ ಗಟ್ಟಿ ಮನಸ್ಸಿನಿಂದ ಕಸವನ್ನು ರಸವನ್ನಾಗಿಸಬಹುದಾಗಿದ್ದು, ಇದಕ್ಕೆ ಇಲ್ಲಿಯ ಗ್ರಂಥಾಲಯ ಮತ್ತು ದೇವಸ್ಥಾನಗಳೇ ಸಾಕ್ಷಿ ಎಂದರಲ್ಲದೆ, ದೇವಸ್ಥಾನದ ಕಟ್ಟಡಕ್ಕೆ ಮುಕ್ತ ದೇಣಿಗೆ ಸಲ್ಲಿಸುವಂತೆ ಕೋರಿದರು.
ವೇದಿಕೆಯಲ್ಲಿ ದಾಂಡಿಯಾ ಕಾರ್ಯಕ್ರಮದ ಮುಖ್ಯ ಸಂಯೋಜಕ ಮಹಾದೇವ ಟೊಣ್ಣೆ, ಜಿಲ್ಲಾ ಪಂಚಾಯತಿ ಅಭಿಯಂತರರಾದ ಮಂಜುನಾಥ ಪಾಟೀಲ, ಎಲ್.ಎಸ್.ಸನದಿ, ಆಸೀನರಾಗಿದ್ದರು.
ಸಂಘದ ಸದಸ್ಯರಾದ ಬಸವರಾಜ ಗೌಡಪ್ಪಗೋಳ, ಮನೋಹರ ಕಾಜಗಾರ, ಕ್ರಷ್ಣಾ ಪಾಟೀಲ, ಡಿ ಎಮ್ ಟೊಣ್ಣೆ, ಜಿ.ಐ.ದಳವಾಯಿ, ಮಲ್ಲಪ್ಪ ದಂಡಿನವರ ಬಸವರಾಜ ಹಿರೇಮಠ, ಎಸ್.ಸಿ.ಕಮತ್, ರಾಜೇಂದ್ರ ರತನ್, ಜಿ.ಜಿ.ಹುನ್ನೂರ,
ಸೇರಿದಂತೆ, ಮಹಿಳೆ ಯರಾದ ನಿರ್ಮಲಾ ಉರಬಿನಹಟ್ಟಿ, ಕಾವ್ಯಾ ಚಿಟಗಿ, ಲತಾ ಕಾಜಗಾರ, ಸುನೀತಾ ಕೆರೂರ, ವಿದ್ಯಾ ಮೆಳವಂಕಿ, ಪಲ್ಲವಿ ಪಾಟೀಲ, ಸುಜಾತಾ ಜುಟ್ಟನವರ, ಮಹಾದೇವಿ ಉಳ್ಳೇಗಡ್ಡಿ, ಪ್ರೇಮಾ ಬಾಗೇವಾಡಿ ಮಹಾನಂದಾ ಹಿರೇಮಠ ಪ್ರತೀಕ್ಷಾ ಟೊಣ್ಣೆ ಸೇರಿದಂತೆ ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.ಸುರೇಶ ಉರಬಿನಹಟ್ಟಿ
8th October 2024
*🌻ದಿನಕ್ಕೊಂದು ಕಥೆ🌻 ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು!*
ಗಂಡ ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು. ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು.
ಗಂಡ ಕಿಟಕಿಯಿಂದ ಹೊರಗೆ ಬಾನಿನತ್ತ ನೋಡುತ್ತಾ ಅವನನ್ನು ಮಹಾ ತುಂಟನನ್ನಾಗಿ ಬೆಳೆಸುತ್ತೇನೆ. ಅವನು ಚೆನ್ನಾಗಿ ಈಜಬೇಕು. ಸೈಕಲ್ ಹೊಡೆಯ ಬೇಕು. ಮರ ಹತ್ತಬೇಕು. ಕ್ರಿಕೆಟ್ ಆಡಬೇಕು. ಕರಾಟೆ ಕಲಿಯಬೇಕು. ಬೆಟ್ಟಗುಡ್ಡ ಹತ್ತಬೇಕು. ಬೈಕ್ ಓಡಿಸಬೇಕು. ನಕ್ಷತ್ರ ವೀಕ್ಷಣೆಯನ್ನು ಮಾಡಿಸ ಬೇಕು. ಲೆಕ್ಕವನ್ನು ಚೆನ್ನಾಗಿ ಕಲಿಸಬೇಕು. ಗಿಟಾರ್ ನುಡಿಸೋಕೆ ಬರಬೇಕು. ಹಾಡೋಕ್ ಕಲಿತ್ರೆ ಇನ್ನೂ ಚೆನ್ನಾಗಿರುತ್ತೆ ಎಂದ.
ಗಂಡ ಇನ್ನೂ ಮಗನಿಗೆ ಕಲಿಸಬೇಕಾದ ಪಟ್ಟಿಯನ್ನು ಮುಂದುವರೆಸುತ್ತಿದ್ದನೋ ಏನೋ?. ಹೆಂಡತಿಯು ಮಧ್ಯೆ ತಲೆಹಾಕಿದಳು. ಸರಿ, ಹೆಣ್ಣು ಮಗು ಹುಟ್ಟಿದರೆ ಅವಳಿಗೇನು ಕಲಿಸುತ್ತೀರಿ? ಕುತೂಹಲದಿಂದ ಕೇಳಿದಳು. ಹೆಣ್ಣು ಮಗಳೆ? ಹೆಣ್ಣು ಮಗಳು ಹುಟ್ಟಿದರೆ ಅವಳಿಗೆ ನಾನ್ಯಾಕೆ ಕಲಿಸಬೇಕು? ಎಂದ ಗಂಡ. ಆಘಾತವಾಯಿತು ಹೆಂಡತಿಗೆ. ಅವಳಿಗರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಉಕ್ಕಿತು. ಯಾಕ್ರಿ ನಮಗೆ ಗಂಡು ಮಗು ಹೆಣ್ಣು ಮಗು ಎರಡೂ ಒಂದೇ ಅಲ್ವ. ಹೆಣ್ಣು ಮಗುವಿಗೆ ಯಾಕೆ ಏನನ್ನೂ ಕಲಿಸಲ್ಲ! ಎಂದಳು.
ಗಂಡನು ನಗುತ್ತಾ, ಅಯ್ಯೋ.. ಹೆಣ್ಣು ಮಕ್ಕಳಿಗೆ ನಾವು ಏನೂ ಕಲಿಸಬೇಕಾಗಿಲ್ಲ ಕಣೆ. ಅವರಿಗೆ ಅದು ದೈವದತ್ತವಾಗಿ ಬಂದಿರು ತ್ತದೆ ಎಂದನು. ಅರ್ಥವಾಗಲಿಲ್ಲ. ಬಿಡಿಸಿ ಹೇಳಿ ಎಂದಳು ಹೆಂಡತಿ. ಹೆಣ್ಣು ಮಗಳಿಗೆ ನಾವು ಕಲಿಸಬೇಕಾಗಿಲ್ಲ. ಅವಳು ನಮಗೆ ಎಲ್ಲವನ್ನೂ ಕಲಿಸುತ್ತಾಳೆ. ನಾನು ಹೇಗೆ ಬಟ್ಟೆ ಹಾಕ್ಕೋಬೇಕು, ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಏನನ್ನು ಮಾತಾಡಬೇಕು, ಏನನ್ನು ಮಾತನಾಡಬಾರದು, ಎಲ್ಲಿಗೆ ಹೋಗಬೇಕು, ಎಷ್ಟು ಹೊತ್ತಿಗೆಲ್ಲ ಮನೆಗೆ ಬರಬೇಕು. ಒಟ್ಟಿನಲ್ಲಿ ಹೇಳುವುದಾದರೆ ಅವಳು ನನಗೆ ಎರಡನೆಯ ಅಮ್ಮನಾಗಿಬಿಡುತ್ತಾಳೆ. ಮಗಳಿಗೆ ತಂದೆಯೇ ಹೀರೋ!. ನಾನು ಬದುಕಿನಲ್ಲಿ ಏನನ್ನೂ ಸಾಧಿಸದಿದ್ದರೂ ಅವಳ ಪಾಲಿಗೆ ನಾನೇ ಹೀರೊ. ಅವಳಿಗೆ ಏನನ್ನಾದರೂ ಕೊಡಿಸಲಾಗದಿದ್ದರೆ, ಅವಳೇ ನನಗೆ ಸಮಾಧಾನ ಹೇಳಿ ಮುಂದಿನ ತಿಂಗಳು ಕೊಡಿಸುವಿಯಂತೆ ಬಿಡಪ್ಪ ಎನ್ನುತ್ತಾಳೆ.
ಅವಳ ಮನಸ್ಸಿನಲ್ಲಿ ತನ್ನ ಅಪ್ಪನಂತಹ ಗಂಡ ಸಿಗಬೇಕು ಎನ್ನುವ ಆಸೆ ಸುಪ್ತವಾಗಿ ಬೆಳೆಯುತ್ತಿರುತ್ತದೆ. ಅವಳಿಗೆ ಮಕ್ಕಳು ಮೊಮ್ಮೊಕ್ಕಳಾದರೂ, ನಾನು ಮಾತ್ರ ಅವಳನ್ನು ಮುದ್ದು ಪುಟಾಣಿಯಂತೆ ಮಾತನಾಡಿಸಬೇಕು, ನೋಡಿಕೊಳ್ಳಬೇಕು, ಮುದ್ದು ಮಾಡಬೇಕು. ಅವಳು ಬೆಳೆಯುವುದೇ ಇಲ್ಲ. ಅಪ್ಪನ ಮನಸ್ಸನ್ನು ನೋಯಿಸುವವರನ್ನು ಅವಳು ಯಾವ ಕಾರಣಕ್ಕೂ ಕ್ಷಮಿಸಲ್ಲ.
ಓ ಮಗಳು ಮಾತ್ರ ನಿಮ್ಮನ್ನು ನೋಡ್ಕೋತಾಳ? ಮಗ ನೋಡ್ಕಳ್ಳಲ್ಲ ಅಂತ ನಿಮ್ಮ ಅಭಿಪ್ರಾಯಾನ? ಇಲ್ಲ ಇಲ್ಲ. ಗಂಡು ಮಕ್ಕಳೂ ನೋಡ್ಕೋತಾರೆ. ಆದರೆ ಅವರಿಗೆ ನಾವೇ ಎಲ್ಲವನ್ನೂ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಯಾರೂ ಕಲಿಸಬೇಕಾಗಿಲ್ಲ. ಎಲ್ಲ ಹುಟ್ಟಿನೊಡನೆಯೇ ಬಂದಿರುತ್ತದೆ ಎಂದನು ಗಂಡ. ಇರಬಹುದು ರೀ, ಆದರೆ ಅವಳು ಒಂದಲ್ಲ ಒಂದು ದಿನ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋಗಲೇಬೇಕಲ್ಲವೆ? ವಿಷಾದದಿಂದ ನುಡಿದಳು ಹೆಂಡತಿ. ಹೂಂ, ಹೋಗಲೇಬೇಕು. ಆದರೆ, ನಾವು ಸದಾ ಅವಳ ಹೃದಯದಲ್ಲಿ ಬೆಚ್ಚಗೆ ಇರುತ್ತೇವೆ. ಸದಾ ಕಾಲಕ್ಕೂ! ಎಂದನು. ಗಂಡನ ಕಣ್ಣಂಚು ತುಸು ತೇವವಾಗಿತ್ತು.
ಕೃಪೆ:ಡಾ:ನಾ.ಸೋಮೇಶ್ವರ.
ಸಂಗ್ರಹ: ವೀರೇಶ್ ಅರಸಿಕೆರೆ.