23rd October 2024
ಬೆಳಗಾವಿ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಪಂಕಜಾ ರೆವನ್ನಕರ ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್‌ಶಿಪ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಇಚ್ಛಿತ್ತಿಗೆ ಬೆಂಗಳೂರಿನಲ್ಲಿ ನಡೆದ ಫಡೆರೇಷನ ಆಫ್ ಪ್ಯಾರಾ ಸ್ವಿಮ್ಮಿಂಗ್ ಇಂಡಿಯಾ ಅಡಿಯಲ್ಲಿ ಕರ್ನಾಟಕ ಪ್ಯಾರಾ ಸ್ವಿಮ್ಮಿಂಗ್ ಅಸೋಸಿಯಷನ್ ಆಯೋಜಿಸಿದ ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್‌ಶಿಪ್ ನಲ್ಲಿ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನುಪಡೆದುಕೊಳ್ಳುವುದರ ಜೋತೆಗೆ ರಾಷ್ಟ್ರೀಯ ಮಟ್ಟದ ಈಜು ಸ್ಫರ್ಧೇಗೆ ಆಯ್ಕೆಯಾಗುವುದರ ಮೂಲಕ ವಿದ್ಯಾರ್ಥಿ ಸಂಸ್ಥೆಗೆ ಕಿರ್ತಿಯನ್ನು ತಂದಿರುತ್ತಾರೆ.
ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಳ್ಳುವ ಮೂಲಕ ತನ್ನ ವಿಶೇಷಾದ ಸಾಮಥ್ಯವನ್ನು ಪ್ರದರ್ಶಿಸುವಲ್ಲಿ ವಿದ್ಯಾರ್ಥಿಯ ಆತ್ಮವಿಶ್ವಾಸ ಎಲ್ಲಿಗೂ ಪ್ರೇರಣಾದಾಯಕವಾಗಿದೆ ಮತ್ತು ಸಂಸ್ಥೆಗೆ ಕೀರ್ತೀ ತರುವ ವಿಷಯವಾಗಿದೆ.
ಬೆಳಗಾವಿ ಬಿಮ್ಸ್ ನ ಗೌರವಾನ್ವಿತ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಮತ್ತು ಬಿಮ್ಸ್ ನ ಮುಖ್ಯ ಆಡಳಿತ ಅಧಿಕಾರಿ ಸಿದ್ದು ಹುಲ್ಲೋಳಿ ಎಲ್ಲ ವಿಭಾಗದ ಮುಖ್ಯಸ್ಥರು ಅಭಿನಂದಿಸಿದರು ಹಾಗೂ ಬಿಮ್ಸ್ ಬೆಳಗಾವಿಯ ಎಲ್ಲ ಭೋದಕ ಹಾಗೂ ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಯ ಸಾಧನೆಯ ಬಗ್ಗೆ ಅತ್ಯಂತ ಹೆಮ್ಮೆಪಡುವುದರ ಮೂಲಕ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.