1st October 2024
ರಾಯಚೂರು. ಹಿರಿಯ ಮಾರ್ಗದಲ್ಲಿ ಕುಟುಂಬಗಳು ನಡೆಯುತ್ತಿದ್ದು ಇಂದು ಹಿರಿಯರನ್ನು ಕಡೆಗಣಿಸಿ ವೃದ್ಧಾಶ್ರದಲ್ಲಿ ಬಿಡುತ್ತಿದ್ದು, ಇದರಿಂದಾಗಿ ಕೌಟುಂಬಿಕ ಕಲಹಗಳು ಹೆಚ್ಚಾಗಲಿಕ್ಕೆ ಕಾರಣವಾಗಿದೆ, ಹಿರಿಯರನ್ನು ಕಡೆಗಣಿಸದೇ ಮನೆಯಲ್ಲಿಯೇ ಅವರ ಆರೋಗ್ಯ ಕ್ಷೇಮವನ್ನು ನೋಡಿಕೊ ಳ್ಳಬೇಕಿದೆ, ಅವರನ್ನು ನೋಡಿಕೊಳ್ಳದಿದ್ದರೆ ಹಿರಿಯ ನಾಗರೀಕರ ಸಹಾಯವಾಣಿ ನೆರವು ನೀಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರುಪಣಾಧಿಕಾರಿ ಶರಣಮ್ಮ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಹಿಂದಿನ ಕಾಲದಲ್ಲಿ ಒಂದೇ ಕುಟುಂಬದಲ್ಲಿ ಎಲ್ಲರೂ ಸೇರಿ ಜೀವನ ನಡೆಸುತ್ತಿದ್ದರು, ಹಿರಿಯರ ಮಾರ್ಗದಲ್ಲಿ ಕುಟುಂಬ ನಡೆಯುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ ತಾಯಿಯರನ್ನು ಕಡೆಗಣಿಸಿ ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ, ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದೆ, ಹಿರಿಯ ಮಾರ್ಗದ ರ್ಶನ ಇಲ್ಲದ ಕುಟುಂಬದಲ್ಲಿ ಹೊಡೆದು ಬೇರೆಯಾಗಿವೆ ಎಂದರು.