1st October 2024
ರಾಯಚೂರು ಈಗಿನ ಕಾಲದಲ್ಲಿ ಯಾರೂ ಯಾರನ್ನೂ ನಂಬಲಾರದಂತಹ ಸ್ಥಿತಿ ಎಲ್ಲೆಡೆ ಸೃಷ್ಟಿಯಾಗುತ್ತಿದೆ. ಈ ಮಾತು ಕೇವಲ ಹೇಳಿಕೆಗಲ್ಲ.. ಬದಲಿಗೆ ರಾಯಚೂರು ನಗರದಲ್ಲಿ ಆಗಿರುವ ಭಯಾನಕ ಘಟನೆಯೇ ಇದಕ್ಕೆ ಸಾಕ್ಷಿ. ಹೌದು... ಮನೆ ಖಾಲಿ ಮಾಡು ಎಂದಿದ್ದ ಮನೆ ಒಡತಿಯನ್ನ ಬಾಡಿಗೆದಾರನೇ ಅಮಾನುಷವಾಗಿ ಹತ್ಯೆಗೈದಿದ್ದು, ರಾಯಚೂರು ನಗರ ಬೆಚ್ಚಿ ಬಿದ್ದಿದೆ.
'ಅತಿಯಾಸೆ ಗತಿಗೆಡಿಸಿತು' ಎಂಬ ಗಾದೆಯಂತೆ ರಾಯಚೂರು ನಗರದ ಉದಯ ನಗರ ಎಂಬಲ್ಲಿ ಮನೆ ಬಾಡಿಗೆದಾರನೇ ಮನೆಯೊಡತಿಯನ್ನ ಉಸಿರುಗಟ್ಟಿಸಿ ಹತ್ಯೆಗೈದ ಘಟನೆ ನಡೆದಿದೆ. ಮೂಲತಃ ರಾಯಚೂರು ನಗರದವರೇ ಆಗಿರುವ ಶೋಭಾ ಪಾಟೀಲ್ ಬೆಂಗಳೂರಿನಲ್ಲಿ ವಾಸವಿದ್ದರು. ಆದ್ರೆ ರಾಯಚೂರಿಗೆ ಬಂದ ಎರಡು ದಿನದಲ್ಲಿ ಕೊಲೆಯಾಗಿದ್ದು, ಇಡೀ ಉದಯನಗರ ಬೆಚ್ಚಿ ಬಿದ್ದಿದೆ.
ರಾಯಚೂರಿನವರೇ ಆಗಿರುವ ಶೋಭಾ ಪಾಟೀಲ್ ಸಾಕಷ್ಟು ದಿನಗಳಿಂದ ಬೆಂಗಳೂರಿನಲ್ಲಿ ವಾಸವಾಗಿರ್ತಾರೆ. ಇಲ್ಲಿರುವ ಮನೆಯ ಮೇಲ್ಮಹಡಿಯ ಕೊಠಡಿಯನ್ನ ಶಿವು ಬಂಡಯ್ಯಸ್ವಾಮಿ ಎಂಬುವವನಿಗೆ ಕಡಿಮೆ ಹಣಕ್ಕೆ ಬಾಡಿಗೆ ನೀಡಿರ್ತಾರೆ. ಪರಿಚಯಸ್ಥರ ಕಡೆಯಿಂದ ಶೋಭಾ ಪಾಟೀಲ್ ರ ಮನೆ ಬಾಡಿಗೆಗೆ ಪಡೆದಿದ್ದ ಶಿವು ಬಂಡಯ್ಯಸ್ವಾಮಿ ಮೂಲತಃ ಅರ್ಚಕನಾಗಿ ಕೆಲಸ ಮಾಡ್ತಿದ್ದ. ಬೆಂಗಳೂರಿನಿಂದ ಆಗಾಗ ರಾಯಚೂರಿಗೆ ಬರುವ ಶೋಭಾ ಅವರು ಕೇವಲ ಎರಡ್ಮೂರು ದಿನದ ಮಟ್ಟಿಗೆ ಇಲ್ಲಿಯೇ ಇರುತ್ತಾರೆ ಎಂದು ಹೇಳಲಾಗಿದೆ. ಆ ಎರಡ್ಮೂರು ದಿನದ ಮಟ್ಟಿಗೆ ಶಿವು ಮಾತ್ರ ಬೇರೆಡೆ ವಾಸ ಇರ್ತಿದ್ದ ಎನ್ನಲಾಗಿದೆ.
ಮನೆ ಓವರ್ ಶೋಭಾ ಪಾಟೀಲ್ ಬೆಂಗಳೂರಿನಿಂದ ಇದೇ ೨೧ ರಂದು ರಾಯಚೂರಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಇನ್ಮುಂದೆ ಇಲ್ಲಿಯೇ ವಾಸ ಇರ್ತೇನೆ ಮನೆ ಖಾಲಿ ಮಾಡು ಎಂದು ಬಾಡಿಗೆದಾರ ಆರೋಪಿಗೆ ಹೇಳಿದ್ದಾರೆ. ಸರಿ ಮನೆ ಖಾಲಿ ಮಾಡುತ್ತೇನೆ ಎಂದು ಮನೆ ಮಾಲೀಕಳ ಮುಂದೆ ತಲೆ ಅಳ್ಳಾಡಿಸಿದ್ದ ಹಂತಕ ಶಿವು ಬಂಡಯ್ಯಸ್ವಾಮಿ ಒಳಗೊಳಗೆ ಬೇರೆಯೇ ಸ್ಕೆಚ್ ಹಾಕಿದ್ದ.