5th October 2024
ಸಿಂಧನೂರು: ಹೈದರಾಬಾದ್ ಕರ್ನಾಟಕ್ಕೆ ಒಂದು ಸಚಿವಾಲಯ ಮಾಡಲಾಗುವುದು. ಆದರೆ, ಸಿಂಧನೂರು ಜಿಲ್ಲೆ ರಚಿಸಲು ಈಗ ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಂದರ್ಭದಲ್ಲೇ ಕಲ್ಯಾಣ ಕರ್ನಾಟಕ್ಕೆ ಒಂದು ಸಚಿವಾಲಯ ರಚಿಸುವ ಬಗ್ಗೆ ಹೇಳಿರುವೆ. ಹೊಸ ಜಿಲ್ಲೆ ಮಾಡುವುದು ಅಷ್ಟು ಸುಲಭವಲ್ಲ. ಸಿಂಧನೂರಲ್ಲಿ ಇರುವ ಕೆಲವು ಲೋಪಗಳನ್ನು ಸರಿಪಡಿಸಲಾಗುವುದು. ಸಿಂಧನೂರು ಜಿಲ್ಲೆ ರಚಿಸಲು ಸಾಧ್ಯವಾಗದು. ಆದರೂ ಮೊದಲು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು' ಎಂದು ತಿಳಿಸಿದರು.
4th October 2024
ಮಾನವಿ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ರಹೀಮ್ ಖಾನ್, ಶರಣಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರು, ಭಾಗಿಯಾಗಲಿದ್ದಾರೆ.
೧೬೭ ಮಿಟ್ಟಿ ಮಲ್ಕಾಪುರ, ಬೈಪಾಸ್ ಶಕ್ತಿನಗರದ ತಲುಪಲಿದೆ. ಹುನಗುಂದ, ೬ ತಿಂಗಳಲ್ಲಿ ರಾಯಚೂರು ಸುತ್ತಲು ಆರಂಭವಾಗಲಿದೆ. ರಾಯಚೂರಿನಿಂದ ೭ ಮೇಲ್ ವರೆಗೆ ರಸ್ತೆ ನಿರ್ಮಾಣವಾಗಲಿದೆ. ೩೫ ಕೋಟಿ ವೆಚ್ಚ.
ಏರ್ಪೋರ್ಟ್, ಆಡಳಿತಾತ್ಮಕವಾಗಿ ಅನುಕೂಲವಾಗಿದೆ. ಬೊಮ್ಮನದೊಡ್ಡಿ ಏತ ನೀರಾವರಿ ಯೋಜನೆ ಆಂದಾಜು ೪೦೦ ಕೋಟಿ ವೆಚ್ಚ ರೆಡಿಯಾಗಿದೆ. ೨೮ ಹಳ್ಳಿಗಳು ಅನುಕೂಲ ವಾಗಲಿದೆ.
ರಾಜಕೀಯ
ಬಿಜೆಪಿಯವರಿಗೆ ಕೆಲಸವಿಲ್ಲ. ಜನಾರ್ಶಿವಾದ ಪಡೆದ ಸರ್ಕಾರವನ್ನು ಅಭ್ರದಗೊಳಿಸಲು ಕೆಲಸ ಬಿಟ್ಟು ಬೇರೆ ಇನ್ನು ಇಲ್ಲ.
ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ೧೪ ಶಾಸಕರು ಸಂಪರ್ಕಿಸಿ ನೂರಾರು ಕೋಟಿ ನೀಡುವುದಾಗಿ ಮಾಡುವುದು. ಇಡಿ, ಸಿಬಿಐ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಎಂ ಮೇಲೆ ಅದೆ ರೀತಿ ಮಾಡಿದ್ರು, ಸ್ವತ ಬಲದಿಂದ ದಕ್ಷಿಕೊಂಡಿದ್ದಾರೆ.
4th October 2024
ರಾಯಚೂರು, ಅ.02: ರಾಯಚೂರಿನಲ್ಲಿ ಸಹಕಾರ ಇಲಾಖೆಯ ಆರ್ಡಿಸಿಸಿ ಬ್ಯಾಂಕ್(Rdcc Bank)ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿರುವುದು ಬೆಳಕಿಗೆ ಬಂದಿದೆ. ಆರ್ಡಿಸಿಸಿಯ ರಾಯಚೂರು(Raichur) ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದ್ಗಲ್ ಪಟ್ಟಣದ ಶಾಖೆಯಲ್ಲಿ ಒಟ್ಟು 22 ಗ್ರಾಹಕರಿಗೆ 2.20 ಕೋಟಿ ರೂಪಾಯಿ ಆಕ್ರಮ ವರ್ಗಾವಣೆ ಆಗಿರುವ ಆರೋಪ ಕೇಳಿ ಬಂದಿತ್ತು. ಇಷ್ಟು ದೊಡ್ಡ ಭ್ರಷ್ಟಾಚಾರದ ಕುರಿತು ತನಿಖೆ ಮಾಡಿದಾಗ ಮುದಗಲ್ ಶಾಖೆಯ ಮ್ಯಾನೇಜರ್ ಶಿವಪುತ್ರಪ್ಪನೇ ಕಿಂಗ್ ಪಿನ್ ಎನ್ನುವುದು ಇಲಾಖಾ ತನಿಖೆಯಲ್ಲಿ ಬಯಲಾಗಿದೆ. ನಿಯಮಗಳನ್ನ ಉಲ್ಲಂಘಿಸಿ ನೇರವಾಗಿ ಆರ್ಡಿಸಿಸಿ ಬ್ಯಾಂಕ್ನಿಂದ ಹಣ ಪಾವತಿಸಿರುವುದು ತಿಳಿದುಬಂದಿದೆ.
ಹೌದು, ಮುದಗಲ್ ಶಾಖೆಯ ಮ್ಯಾನೇಜರ್ ಶಿವಪುತ್ರಪ್ಪ ಈ ಹಣ ಗುಳುಂ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ಬ್ಯಾಂಕ್ನ 11 ಜನ ಸಿಬ್ಬಂದಿಯ ಐಡಿ ಬಳಸಿ, ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆಯಾಗಿದ್ದು ಇಲಾಖಾ ತನಿಖೆಯಲ್ಲಿ ಗೊತ್ತಾಗಿದೆ. 2017 ಜೂನ್ನಿಂದ ಸೆಪ್ಟೆಂಬರ್ 2020 ರವರೆಗೂ ಹಂತ ಹಂತವಾಗಿ ಹಣ ಅಬೇಸ್ ಮಾಡಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶವಾದ ಬೆನ್ನಲ್ಲೇ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು ವಿಚಾರಣೆ ನಡೆಸಿದರು. ಈ ಇಲಾಖಾ ತನಿಖೆ ವೇಳೆ ಒಟ್ಟು 2 ಕೋಟಿ 20 ಲಕ್ಷ ಹಣ ದುರ್ಬಳಕೆ ಪತ್ತೆಯಾಗಿದೆ. ಈ ಬಗ್ಗೆ ಕೊಪ್ಪಳ-ರಾಯಚೂರು ಆರ್ಡಿಸಿಸಿ ಬ್ಯಾಂಕ್ನ ಚೇರ್ಮನ್ ವಿಶ್ವನಾಥ್ ಪಾಟೀಲ್ ಹಗರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕ್ರಮ ಕೈಗೊಳ್ಳೋ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಕೋಟ್ಯಂತರ ರೂ. ಅವ್ಯವಹಾರ ಆರೋಪ; ಭೋವಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳ ದಾಳಿ
ಇತ್ತ ಹಗರಣ ಬೆಳಕಿಗೆ ಬಂದ ಹಿನ್ನೆಲೆ ಮುದಗಲ್ ಶಾಖೆ ಮ್ಯಾನೇಜರ್ ಶಿವಪುತ್ರಪ್ಪರನ್ನ ಅಮಾನತ್ತು ಮಾಡಿ ಆದೇಶಿಸಿಲಾಗಿದೆ. ಅಲ್ಲದೇ ಅವ್ಯವಹಾರವಾಗಿರುವ ಕೋಟಿ ಕೋಟಿ ಹಣವನ್ನ ಆಡಳಿತ ವರ್ಗ ಹೇಗೆ ರಿಕವರಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ