
17th October 2024
ನೂರಜಹಾನ್ ಅಬ್ದುಲ್ ಖಾಧಿರ್ ಫೀರಜಾಧೆ (೫೬) ನಿಧನ.
ಅಂಕಲಗಿ. ೧೭- ಅಂಕಲಗಿ ಪಟ್ಟಣದ ನಿವಾಸಿ ನೂರಜಹಾನ್ ಅಬ್ದುಲ್ ಖಾಧಿರ್ ಫೀರಜಾಧೆ(೫೬) ಗುರುವಾರ ನಿಧನರಾದರು. ಮೃತರು
ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ. ಮೃತರು ಅಂಕಲಗಿ ಎಸ್ ಎ ಪಿ ಯು ಕಾಲೇಜಿನ ಸುಪೆರಿಟೆಂಡೆಂಟ್ ಶಫೀಅಹ್ಮೆದ್ ಹುಕ್ಕೇರಿ ಅವರ ಸಹೋದರಿಯಾಗಿದ್ದಾರೆ.
ಸುರೇಶ ಉರಬಿನಹಟ್ಟಿ
9th October 2024
ಬೆಳಗಾವಿ : ಆಗಸ್ಟ ಒಂದರಂದು ಅಪೇಕ್ಷೆ ಕೋರ್ಟ ಪೀಠವು ಎಸ್.ಸಿ ಮೀಸಲಾತಿಯಲ್ಲಿ ಒಳಮೀಸಲಾತಿ ಉಪವರ್ಗಿಕರಿಸಲು ಆಯಾ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ. ಎಂಬುದನ್ನು ಏಳು ನ್ಯಾಯಾಧೀಶರ ಸಂವಿಧಾನಿಕರ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗಾಗಿ ಚರ್ಚಿಸದೆ ಜಾತಿ ಜನಗಣತಿ ವರದಿ ಬಿಡುಗಡೆಯ ನೆಪವೊಡ್ಡಿ ಸುಪ್ರೀಮ್ ಕೋರ್ಟ ನೀಡಿದ ಒಳಮೀಸಲಾತಿ ಜಾರಿಗೆ ಕ್ರಮವಹಿಸದೆ ನ್ವಯಾಂಗನಿಂದನೆಗೆ ಮುಂದಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಇವರ ಸಾಮಾಜಿಕ ನ್ಯಾಯದ ದ್ರೋಹದ ನಡೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತ ಪಡಿಸಿದೆ.
ಕರ್ನಾಟಕ ಸರ್ಕಾರದ ಪ್ರಸ್ತುತ ಕಾಂಗ್ರೆಸ್ ಪಕ್ಷ 2023 ರ ಚುನಾವಚಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಗೋಳಿಸುದಾಗಿ ತನ್ನ 06 ನೇ ಗ್ಯಾರಂಟಿ ಘೋಷಿಶಿಕೊಂಡಂತೆ ಸುಪ್ರೀಮ್ ಕೋರ್ಟ ತಿರ್ಪು ಆದರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಾಗಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ವರ್ಗಿಕರಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಮೂರು ದಶಕಗಳ ಮಿಕ್ಕ ಹೋರಾಟಗಳು ನಡೆದಿವೆ. ನ್ಯಾಯ ಮೂರ್ತಿ ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿಕೊಂಡು 2011 ರ ಜನ ಗಣತಿಯ ಸಂಖ್ಯಾದಾರಗಳು ಮತ್ತು ನ್ಯಾಯ ಮೂರ್ತಿ ನಾಗಮೋಹನ ದಾಸ ಆಯೋಗದ ವರದಿಯಂತೆ ವಿಸ್ತರಿಸಲಾದ ಶೇ 17 ರ ಮೀಸಲಾತಿಯನ್ನು ಬಳಸಿಕೊಂಡು ಉಪವರ್ಗಿಕರಣದ ಸೂತ್ರ ರೂಪಸಿಲಾಗಿದೆ. 2011 ರ ಜನಗಣತಿಯ ವರದಿಯಂತ ಕರ್ನಾಟಕದಲ್ಲಿ ಎಸ್ ಸಿ ಜನಸಂಖ್ಯೆ : 1,04,74,992 ಈಗಿರುವ ಶೇ 17 ರ ಮೀಸಲಾತಿಯನ್ನು ವರ್ಗಿಕರಿಸಿದರೆ ತಲಾ ಆರು ಲಕ್ಷ ಜನಸಂಖ್ಯೆಗೆ ಶೇ 01 ರಷ್ಟು ಮೀಸಲಾತಿ ದೊರಕತ್ತದೆ. ಕರ್ನಾಟಕದಲ್ಲಿ ಎಸ್ ಸಿ/ ಎಸ್ ಟಿ ಮೀಸಲಾತಿಯನ್ನು ಏರಿಕೆ ಮಾಡಿದ್ದು ಜನಸಂಖ್ಯೆಗೆ ಅನುಗುಣವಾಗಿ ಹಾಗೆಯೇ ಉಪವರ್ಗಿಕರಣವನ್ನು ಜನಸಂಖ್ಯೆಗೆ ಅಣುಗುಣವಾಗಿಯೇ ಬೊಮ್ಮಾಯಿ ಸರ್ಕಾರವು ಸಿಪಾರ ಮಾಡಿದೆ. ಈವೆಲ್ಲದರ ಮಾಹಿತಿಯು ಸರ್ಕಾರದ ಬಳಿ ಇದೆ.నా యని NORS ఆయాగగల వరది మత్తు 2011 జనగణతీయ ಸಂಖ್ಯಾಧಾರಗಳೊಂದಿಗೆ ಮನರ್ ಪರಿಶೀಲಿಸಿ ವರದಿ ಕೋಡಲು ರಚಿಸಿದ ಸಚಿವ ಸಂಪು: ಉಪ ಅಂಗಾರ, ಡಾ ಸುಧಾಕರ ರವರನ್ನೊಳಗೊಂಡ ಸಮಿತಿಯು ಅತ್ಯಂತ ವೈಜ್ಞಾನಿಕವಾಗಿ ನ್ಯಾಯಬದ್ದವಾಗಿ ಕಾನೂನು ರೀತಿಯಲ್ಲಿ ವರದಿ ಕೊಟ್ಟಿರುವುದನ್ನು ಪ್ರಸ್ತುತ ಸರ್ಕಾರವು ಮಾನ್ಯ
ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಬಾರದು, ಎಂಬ ಒತ್ತಾಯದ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲವೆ? ಜಾತಿ ಗೀತೆ ಜೋರ ತಂದು ಎಸ್ ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು. ಅನೇಶ್ವ ಕೋರ್ಟ ತಿರ್ಪು ಉಲ್ಲಂಘಣೆಯ ಒಳಹುನ್ನಾರವನ್ನು ಮುಂದುವರೆಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರ್ಕಾರವು ಎದುರಿಸಬೇಕಾಗುತ್ತದೆ.
ಸುಪ್ರಿಂ ಕೋರ್ಟ ತೀರ್ಪನ್ನು ಕೂಡಲೆ ರಾಜ್ಯ ಸರ್ಕಾರವು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳ ಕಚೇರಿ ముందే దినాంశ : 16/10/2024 రెండు ప్రతిభటనయ మూలక మాన్య జిల్లాధికారిగళ ಮುಖಾಂತರ ಮುಖ್ಯ ಮಂತ್ರಿಗಳಿಗೆ ಹಾಗೂ ರಾಜ್ಯ ಪಾಲರುಗಳಿಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮೀತಿ ಕರ್ನಾಟಕ ಜಿಲ್ಲಾ ಸಮೀತಿ ಬೆಳಗಾವಿ ವತಿಯಿಂದ ಮನವಿ ಸಲ್ಲಿಸಲಾಗುತ್ತಿದ್ದು, ಸಮುದಾಯದ ಬಾಂದವರು ಅಂದಿನ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಪತ್ರಿಕಾ ಘೋಷ್ಠಿಯಲ್ಲಿ ರಾಜೇಂದ್ರ ಐಹೊಳೆ, ಚಂದ್ರಕಾಂತ ಕಾದ್ರೋಳಿ, ಆರುಣ ಐಹೋಳೆ. ಬಸವರಾಜ ಸನದಿ, ಮಹಾವೀರ ಐಹೋಳೆ, ಎನ್ ಪ್ರಶಾಂತರಾವ, ಬಾಸ್ಕರ್ ಚನ್ನಮೇತ್ರಿ, ರಮೇಶ ಮಾದರ, ಸತ್ಯಪ್ಪ ಕರವಡೆ, ಬಸವರಾಜ ಕಾಡಾಪೂರೆ, ಯಲ್ಲಪ್ಪ ಕಾಳಪ್ಪನ್ನವರ, ರಾಜು ಜಾಂಗಟೆ, ಯಲ್ಲಪ್ಪ ಒಕ್ಕುಂದ, ಅಜಿತ ಮಾದರ, ಶಂಕರ ದೊಡಮನಿ, ಬಾಬು ಪೂಜೆರಿ, ಸಿದ್ದು ಮೇತ್ರಿ ನಾಗಮ್ಮ ಕರೇಮ್ಮನ್ನವರ, ಸುನಿತಾ ಐಹೊಳೆ, ಕಲ್ಲಪ್ಪ ಈರಗಾರ, ಬಾಬಾಸಾಬ ಕೆಂಚನ್ನವರ, ಜಗಧೀಶ ಹೆಗಡೆ, ಶಿವಾಜಿ ಬೋರೆ, ಕರೇಪ್ಪ ಗುಡೆನ್ನವರ, ಶ್ರವಣಕುಮಾರ ಬೆವಿನಗಿಡದ. ಹಣಮಂತ ಅರ್ದಾವುರ, ಕುಮಾರ ಗಸ್ತಿ, ಸದಾಶಿವ ದೊಡಮನಿ, ಯಶವಂತ ಮೇಲಗಡೆ, ಹಣಮಂತ ನರೆರ, ನಾಗಪ್ಪ ಪಡೆಪ್ಪಗೋಳ, ಪ್ರಕಾಶ ಕೆಳಗೇರಿ, ರಾಜಶೇಖರ ಹಿಡಕಲಕರ, ಮುರುಗೇಶ ಕಂಬನ್ನವರ, ಮಹೇಶ ಕರಮಡಿ, ವಿನಯನಿಧಿ ಕಮಾಲ ವಕೀಲರು, ಉದಯ ರೆಡ್ಡಿ, ರವಿ ದೇವರಮನಿ, ಬಸವರಾಜ ಅರವಳ್ಳಿ, ಮುಂತಾದವರು ಹಾಜರಿದ್ದರು.
5th October 2024
ಬೆಳಗಾವಿ ಪಾಲಿಕೆಗೆ ಒಂದು ವಾರದ ಗಡುವು ನೀಡಿದ ಕರವೇ..
ಬೆಳಗಾವಿಯ ರಾಜಕೀಯ ನಾಯಕರೇ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ..
ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು..
ದೀಪಕ್ ಗುಡಗನಟ್ಟಿ, ಕರವೇ ಜಿಲ್ಲಾಧ್ಯಕ್ಷರು ಬೆಳಗಾವಿ..
ಬೆಳಗಾವಿ : ಜಿಲ್ಲೆಯಾದ್ಯಂತ ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು, ಇಲ್ಲವಾದರೆ ಸರ್ಕಾರದ “ಕನ್ನಡ ಕಡ್ಡಾಯ ಬಳಕೆಯ ಆದೇಶವನ್ನು” ಕರವೇ ಕಾರ್ಯಕರ್ತರೇ ಬೀದಿಗಿಳಿದು ಪಾಲಿಸಬೇಕಾಗುತ್ತದೆ ಎಂದು ಬೆಳಗಾವಿಯ ಕರವೇ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಅವರು ಗುಡುಗಿದ್ದಾರೆ..
ರಂದು, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ಮುಂದಾಳತ್ವದಲ್ಲಿ ನೂರಾರು ಕರವೇ ಕಾರ್ಯಕರ್ತರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಗುವದರ ಮೂಲಕ ಕನ್ನಡ ಭಾಷೆಯನ್ನು ಕಡ್ಡಾಯ ಗೊಳಿಸಬೇಕು ಎಂಬ ಮನವಿ ಮಾಡಿದ್ದಾರೆ, ರಾಜ್ಯ ಸರ್ಕಾರ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶ ಹೊರಡಿಸಿದ್ದರೂ ಪಾಲಿಕೆ ವ್ಯಾಪ್ತಿಯಲ್ಲಿ ಆದೇಶ ಪಾಲನೆ ಆಗುತ್ತಿಲ್ಲವಾದ್ದರಿಂದ ಇಂದು ಕರವೇ ಕಿಡಿ ಕಾರತೊಡಗಿತ್ತು..
ಈ ವೇಳೆ ಜಿಲ್ಲಾಧ್ಯಕ್ಷರು ಮಾತನಾಡಿ, ಬೆಳಗಾವಿ ಮಹಾನಗರದಲ್ಲಿ ರಾಜಕೀಯ ನಾಯಕರು ಅನ್ಯಭಾಷೆಗಳಲ್ಲಿ ಶುಭಾಶಯ ಕೋರಿದ ಬ್ಯಾನರ್ ಹಚ್ಚುತ್ತಿದ್ದು, ರಾಜಕಾರಣಿಗಳೇ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದಾರೆ, ಅಧಿಕಾರಿಗಳು ರಾಜಕೀಯ ನಾಯಕರ ಪ್ರಭಾವಕ್ಕೆ ಒಳಗಾಗದೇ ಮುಲಾಜಿಲ್ಲದೇ ಅನ್ಯ ಭಾಷಿಯ ನಾಮಫಲಕಗಳನ್ನು ತೆಗೆದುಹಾಕಬೇಕು ಎಂದರು.
ಈ ವಿಷಯದಲ್ಲಿ ಪಾಲಿಕೆ ನಿರ್ಲಕ್ಷ್ಯ ತೋರಿದರೆ, ಕರವೇ ಕಾರ್ಯಕರ್ತರು ಅನ್ಯಭಾಷೆಯ ಫಲಕಗಳನ್ನು ಕಿತ್ತೆಸೆಯುವ ಆಂದೋಲನ ಮಾಡುತ್ತೇವೆ, ಸರ್ಕಾರದ ಆದೇಶ ಎಲ್ಲರೂ ಪಾಲಿಸಬೇಕು, ಕಾನೂನು ಎಲ್ಲರಿಗೂ ಒಂದೇ, ಕನ್ನಡ ಕಡ್ಡಾಯದ ವಿಚಾರದಲ್ಲಿ ಬೆಳಗಾವಿ ಪಾಲಿಕೆ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ಆದೇಶ ಪಾಲಿಸುವ ಸಲುವಾಗಿ ಕರವೇ ಕಾರ್ಯಕರ್ತರು ಬೀದಿಗಿಳಿದು ಅನ್ಯಭಾಷೆಯ ನಾಮಫಲಕಗಳನ್ನು ಕಿತ್ತೆಸೆಯ ಬೇಕಾಗುತ್ತದೆ ಎಂದು ನಮ್ಮ ಮನವಿಯಲ್ಲಿ ತಿಳಿಸಿದ್ದೇವೆ ಎಂದಿದ್ದಾರೆ..
5th October 2024
ಅಸ್ಪೃಶ್ಯತೆ ನಿವಾರಣೆಗೆ ಗಾಂಧೀ ಮಾದರಿ
ಡಾ. ರೋಹಿಣಾಕ್ಷ ಶಿರ್ಲಾಲು
ಮಹಾತ್ಮ ಗಾಂಧೀಜಿ ಹೆಸರು ನೆನಪಾದಾಗಲೆಲ್ಲಾ ಓರ್ವ ಸ್ವಾತಂತ್ರ್ಯ ಹೋರಾಟಗಾರನ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ. ಆದರೆ ಗಾಂಧಿ ಮುಂಚೂಣೀಯ ಸಮಾಜ ಸುಧಾರಕರೂ ಹೌದು. ಸ್ವಾತಂತ್ರ್ಯ ಹೋರಾಟದ ನಡುವೆಯೂ ಅವರು ಸಾವಿರಾರು ಜನರನ್ನು ಸಾಮಾಜಿಕ ಸುಧಾರಣೆಯ ಕಾರ್ಯಕ್ಕೂ ಪ್ರೇರೆಪಿಸಿದ್ದರು ಎನ್ನುವುದೂ ಅಷ್ಟೇ ನಿಜ. ಅಸ್ಪೃಶ್ಯತೆಯ ನಿವಾರಣೆಯು ಗಾಂಧೀಜಿಯವರ ಜೀವನದ ಕನಸುಗಳಲ್ಲಿ ಒಂದಾಗಿತ್ತು. ಅವರು ಹಿಂದೂ ಧರ್ಮಕ್ಕೆ ಅಂಟಿದ್ದ ಅಸ್ಪೃಶ್ಯತೆಯ ಕಳಂಕವನ್ನು ತೊಡೆದುಹಾಕಲು ತ್ರಿಕರಣಪೂರ್ವಕವಾಗಿ ದುಡಿದರು. ಸೃಶ್ಯ ಹಿಂದೂಗಳ ಮನಪರಿವರ್ತನೆಯ ಮೂಲಕ ಮಾತ್ರ ಅಸ್ಪೃಶ್ಯತೆಯನ್ನು ನಿವಾರಿಸಬಹುದೆಂದು ನಂಬಿದ್ದ ಗಾಂಧಿ ಅದಕ್ಕಾಗಿ ದೇಶಾದ್ಯಂತ ಆಂದೋಲನವನ್ನೇ ರೂಪಿಸಿದರು. ಅಸ್ಪೃಶ್ಯತೆಯ ಸಮಸ್ಯೆ ಅಸ್ಪೃಶ್ಯರದ್ದಲ್ಲ, ಅದು ಸವರ್ಣಿಯ ಹಿಂದೂಗಳದ್ದು ಎನ್ನುವ ಭಾವನೆಯನ್ನು ಜನ ಸಮೂಹದಲ್ಲಿ ಮೂಡಿಸುವಲ್ಲಿ ಅವರು ಯಶಸ್ವಿಯಾದರು. ಅಸ್ಪೃಶ್ಯತೆಯ ಆಚರಣೆಗಾಗಿ ಮೇಲ್ಜಾತಿಯ ಹಿಂದೂಗಳಲ್ಲಿ ಪಾಪಪ್ರಜ್ಞೆ ಮೂಡುವಂತೆ ಮಾಡಿದರು. ಸ್ವತಃ ಆತ್ಮಶುದ್ಧೀಕರಣಕ್ಕಾಗಿ ಉಪವಾಸ ಸತ್ಯಾಗ್ರಹವನ್ನೂ ಮಾಡಿದರು. ತಾನು ಬೇಟಿ ನೀಡಿದ ಊರುಗಳಲ್ಲಿ ಸಾರ್ವಜನಿಕ ಕೆರೆ ಬಾವಿಗಳ ನೀರನ್ನು ಅಸ್ಪೃಶ್ಯರಿಗೂ ಮುಕ್ತವಾಗಿ ಒದಗಿಸಿಕೊಡುವಂತೆ, ದೇವಾಲಯಗಳಲ್ಲಿ ಪ್ರವೇಶ ನೀಡುವಂತೆ ಸವರ್ಣಿಯರ ಮನಪರಿವರ್ತನೆ ಮಾಡಿದರು. ಅಸ್ಪೃಶ್ಯರಿಗೆ ಪ್ರವೇಶ ನೀಡದ ದೇವಾಲಯಗಳ ಪ್ರವೇಶದಿಂದ ತಾವೂ ದೂರ ಉಳಿದರು. ಗಾಂಧಿ ತಮ್ಮ ಪ್ರಯತ್ನದಲ್ಲಿ ಸಂಪೂರ್ಣವಾಗಿ ಯಶಸ್ಸನ್ನು ಸಂಪಾದಿಸಲಾಗಲಿಲ್ಲ. ಆದರೆ ಪರಿವರ್ತನೆಯ ಗಾಳಿ ಬೀಸಲಾರಂಭಿಸಿತ್ತು. ಅವರು ತೋರಿದ ಮನಪರಿವರ್ತನೆಯ ಮಾರ್ಗವೊಂದೇ ಈ ಸಮಸ್ಯೆಯ ಪರಿಹಾರಕ್ಕಿರುವ ಏಕಮಾತ್ರ ದಾರಿ ಎನ್ನುವುದನ್ನು ಇಂದು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ.
ಗಾಂಧೀಜಿಯವರು ಅಸೃಶ್ಯತೆಯನ್ನು ಹಿಂದೂ ಧರ್ಮಕ್ಕೆ ಅಂಟಿಕೊಂಡಿರುವ ಮಹಾ ಕಳಂಕ ಎಂದೇ ಹೇಳುತ್ತಿದ್ದರು. ಹಿಂದೂ ಧರ್ಮವು ಪರಮಾತ್ಮನನ್ನು ಪತಿತಪಾವನ ಎನ್ನುತ್ತದೆ. ಹೀಗಿರುವಾಗ ತಮ್ಮದೇ ಧರ್ಮದಲ್ಲಿ ಹುಟ್ಟಿದ ವ್ಯಕ್ತಿಯನ್ನು ಅಸ್ಪೃಶ್ಯರೆಂದು ಕರೆಯುವುದು ಪಾಪ ಮಾತ್ರವಲ್ಲ, ರಾಕ್ಷಸಿ ಮನೋವೃತ್ತಿ ಎಂದೇ ಪರಿಗಣಿಸಿದ್ದರು. “ಅಸ್ಪೃಶ್ಯೋದ್ದಾರದ ಕೆಲಸ ಪೂರ್ಣವಾಗುವಷ್ಟರಲ್ಲಿಯೇ ನಾನು ಮರಣ ಹೊಂದಿದರೆ, ನನ್ನ ಹಿಂದೂ ಧರ್ಮ ಆದರ್ಶವನ್ನು ಸಾಧಿಸದಿದ್ದರೆ, ನಾನು ಅಸ್ಪೃಶ್ಯರಲ್ಲಿ ಒಬ್ಬನಾಗಿ ಹುಟ್ಟಬೇಕು ಮತ್ತು ಹೀಂದೂ ಧರ್ಮದಲ್ಲಿರುವ ಅಸ್ಪೃಶ್ಯತೆಯ ಕಳಂಕವನ್ನು ನಿವಾರಿಸಿ ಅದನ್ನು ಪರಿಪೂರ್ಣವಾಗಿಸಬೇಕು” ಎಂದು ಪ್ರಾರ್ಥಿಸಿಕೊಂದಿದ್ದರು. ಗಾಂಧಿಯ ಮಾರ್ಗ ಸಂಘರ್ಷದ್ದಲ್ಲ, ಪಶ್ಚಾತಾಪದ್ದು. ಅವರು ಹೇಳುವಂತೆ ಅಸ್ಪೃಶ್ಯರನ್ನು ಹಿಂದೂಗಳು ಹತ್ತಿಕ್ಕಿದ್ದಾರೆ. ಇದು ಬ್ರಿಟಿಷರು ಭಾರತೀಯರನ್ನು ಹತ್ತಿಕ್ಕಿದ್ದಷ್ಟೇ ರಾಕ್ಷಸೀ ಪ್ರವೃತ್ತಿಯದ್ದಾಗಿದೆ. ಇಂತಹ ಸ್ಥಿತಿಯಿಂದ ಕಾಪಾಡಬೇಕಾದರೆ, ನಾವು ಅವರಿಗಿಂತ ಮೇಲು ಎಂಬ ಭಾವನೆಯನ್ನು ತೊರೆಯುವುದು ಮಾತ್ರವಲ್ಲ, ನಾವು ಅವರನ್ನು ಒಡ ಹುಟ್ಟಿದವರೆಂದು ಬಗೆಯಬೇಕು ಎನ್ನುವುದು ಗಾಂಧಿಯ ದಾರಿಯಾಗಿತ್ತು. ಅಸ್ಪೃಶ್ಯರೆಂದು ಕರೆಯಲ್ಪಡುವ ಜನರ ಶುದ್ಧೀಕರಣ ಈಗ ಆಗಬೇಕಾಗಿಲ್ಲ, ಆದರೆ ಸವರ್ಣ ಹಿಂದೂಗಳೆಂದು ಕರೆದುಕೊಳ್ಳುವ ಜನರ ಶುದ್ಧೀಕರಣ ಈಗ ಅವಶ್ಯವಾಗಿದೆ ಎಂದಿದ್ದರು.
ಅಂಬೇಡ್ಕರ್ ಅಸ್ಪೃಶ್ಯತೆಯ ನೋವಿನ ಕಾರಣಕ್ಕಾಗಿ ತನಗೆ ತಾಯ್ನೆಲವೇ ಇಲ್ಲ ಎಂದಿದ್ದರು ಮತ್ತು ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯರ ಸ್ಥಾನ ಏನು ಎನ್ನುವುದು ಸ್ಪಷ್ಟವಾಗಬೇಕು ಎಂದು ಬಯಸಿದ್ದರು. ಗಾಂಧಿ ಕೂಡ ಅಸ್ಪೃಶ್ಯರನ್ನು ಬಿಟ್ಟು ಸ್ವರಾಜ್ಯ ಸಂಪಾದಿಸಲು ಹೇಗೆ ಸಾಧ್ಯ ಎಂದು ಕೇಳುತ್ತಾ, ಎಲ್ಲಿಯವರೆಗೆ ಹಿಂದೂಗಳು ಉದ್ದೇಶಪೂರ್ವಕವಾಗಿ ಅಸ್ಪೃಶ್ಯತೆಯನ್ನು ತಮ್ಮ ಧರ್ಮದ ಅಂಗವೆAದು ಭಾವಿಸುವರೋ, ಎಲ್ಲಿಯವರೆಗೆ ಹಿಂದೂಗಳು ತಮ್ಮ ಬಂಧುವರ್ಗದ ಒಂದು ಭಾಗವನ್ನು ಮುಟ್ಟುವುದು ಪಾಪವೆಂದು ತಿಳಿಯುವರೋ ಅಲ್ಲಿಯವರೆಗೆ ಸ್ವರಾಜ್ಯವನ್ನು ಪಡೆಯುವುದು ಅಸಾಧ್ಯ ಎಂದೇ ಹೇಳಿದ್ದರು. ಮೊದಲು ಸ್ವರಾಜ್ಯ ಪಡೆದುಕೊಳ್ಳೋಣ, ಆಮೇಲೆ ಅಸ್ಪೃಶ್ಯತೆಯ ಸಮಸ್ಯೆ ನಿವಾರಿಸಿಕೊಳ್ಳಬಹುದು ಎನ್ನುವ ವಾದವೇ ಬಹಳ ಜನಪ್ರಿಯವಾಗಿದ್ದ ಕಾಲಕ್ಕೆ ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರ ಮಾತಿನ ತಾತ್ಪರ್ಯವೂ ಅಸ್ಪೃಶ್ಯತೆಯನ್ನು ಉಳಿಸಿಕೊಂಡು ಸ್ವರಾಜ್ಯವನ್ನು ಪಡೆದುಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವುದೇ ಆಗಿತ್ತು. ಸ್ವರಾಜ್ಯವು ಸ್ಪೃಶ್ಯರಿಗೆ ಎಷ್ಟು ಅವಶ್ಯಕವಾಗಿದೆಯೋ ಅಸ್ಪೃಶ್ಯರಿಗೂ ಅಷ್ಟೇ ಅವಶ್ಯಕವಾಗಿದೆ. ನಮ್ಮ ಒಬ್ಬ ಸೋದರನನ್ನು ಕೇವಲ ಆತನ ಜನ್ಮದ ಮೂಲಕ ಅಸ್ಪೃಶ್ಯರೆಂದು ಕಡೆಗಣಿಸುವವರೆಗೆ ಪರಮಾತ್ಮನು ನಮಗೆ ಸ್ವರಾಜ್ಯವನ್ನು ಅನುಗ್ರಹಿಸುವುದಿಲ್ಲ. ನಾವು ಸ್ವಾತಂತ್ರ್ಯವನ್ನು ಪಡೆಯುವುದಕ್ಕಿಂತಲೂ ಪೂರ್ವದಲ್ಲಿ ಅಸ್ಪೃಶ್ಯತೆಯನ್ನು ನಿವಾರಿಸಬೇಕು. ನಮ್ಮ ಬಂಧುಗಳನ್ನೇ ದಾಸ್ಯದಲ್ಲಿಟ್ಟ ನಾವು ಮೊದಲು ಅವರ ವಿಮೋಚನೆ ಮಾಡದಿದ್ದಲ್ಲಿ ಸ್ವಾತಂತ್ರ್ಯ ಬೇಕು ಎಂದು ಕೇಳುವ ಹಕ್ಕು ನಮಗೆ ಹೇಗೆ ಬಂದೀತು? ಹಿಂದೂಗಳು ಅಸ್ಪೃಶ್ಯತೆಯ ಕಳಂಕವನ್ನು ಮೊದಲು ತೆಗೆದುಹಾಕಲು ಸಿದ್ಧರಾಗದಿದ್ದರೆ ಅವರು ಸ್ವಾತಂತ್ರ್ಯಕ್ಕೆ ಅನರ್ಹರು ಎಂದೇ ನನ್ನ ನಂಬಿಕೆಯಾಗಿದೆ ಎಂದಿದ್ದರು ಗಾಂಧಿ.
ಗಾಂಧಿಗೆ ಅಸ್ಪೃಶ್ಯತೆಯ ನಿವಾರಣೆಯ ಪ್ರಶ್ನೆ ಸ್ವರಾಜ್ಯಕ್ಕಿಂತಲೂ ದೊಡ್ಡ ಪ್ರಶ್ನೆಯಾಗಿತ್ತು. ದೇಗುಲಗಳು, ಶಾಲೆಗಳಿಂದ ಹಿಡಿದು ಯಾವುದೇ ಉಚ್ಛ ಅಧಿಕಾರ ಸ್ಥಾನಕ್ಕೆ ಏರುವವರೆಗಿನ ಎಲ್ಲ ಅರ್ಹತೆಗಳು ಇರಲೇಬೇಕು ಎಂದು ವಾದವನ್ನು ಮಂಡಿಸುತ್ತಿದ್ದ ಗಾಂಧಿ, ಅವರನ್ನು ಸಮಾನರೆಂದು ಸ್ವೀಕರಿಸಿ ದೇವಾಲಯ, ಶಾಲೆಗಳಿಗೆ ಕರೆದೊಯ್ಯುವ ಹೊಣೆಗಾರಿಕೆಯನ್ನು ಸವರ್ಣಿಯ ಹಿಂದೂಗಳಿಗೆ ನೀಡಿದ್ದರು. ಹೃದಯ ಪರಿವರ್ತನೆ, ಆತ್ಮಸಂಯಮದ ಹಾದಿಯಲ್ಲಿ ನಂಬಿಕೆ ಇರಿಸಿದ್ದ ಗಾಂಧಿ ಇದನ್ನು ಧಾರ್ಮಿಕ ಸುಧಾರಣೆ ಎಂದೇ ಒಪ್ಪಿದ್ದರು. ಹಿಂದೂ ಧರ್ಮವನ್ನು ಪರಿಶುದ್ಧಗೊಳಿಸುವ ಆಂದೋಲನ ಎಂದೇ ನಂಬಿದ್ದ ಗಾಂಧಿ ಅದನ್ನೊಂದು ರಾಜಕೀಯ ಚಳವಳಿಯಾಗಿಸಲಿಲ್ಲ. ಅಸ್ಪೃಶ್ಯ ಸಮುದಾಯದವರಿಗಾಗಿ ದೇವಾಲಯ ಪ್ರವೇಶಕ್ಕಾಗಿ ಆಗ್ರಹಿಸುವುದು ತನ್ನ ಜನಪ್ರಿಯತೆಯನ್ನು ಹಾಳುಮಾಡಿಕೊಳ್ಳುವ ಸಾಧ್ಯತೆ ಇದ್ದ ಸನ್ನಿವೇಶದಲ್ಲೂ ಗಾಂಧಿ ಹಿಂಜರಿಯಲಿಲ್ಲ. ಅಸ್ಪೃಶ್ಯರ ದೇವಾಲಯ ಪ್ರವೇಶವನ್ನು ಕಾನೂನಿನಡಿಯಲ್ಲಿ ಅಪರಾಧವೆಂದು ಘೋಷಿಸಿ ಶಿಕ್ಷಿಸಲು ಮಸೂದೆಯನ್ನು ತಂದಿದ್ದ ಕಾಲಕ್ಕೆ, ಅವರ ದೇವಾಲಯ ಪ್ರವೇಶದಿಂದ ಹಿಂದೂ ಧರ್ಮಕ್ಕೆ ಗಂಡಾತರ ಬಂದಿದೆ ಎಂಬ ಕೂಗು ಹುಟ್ಟಿದ್ದ ಕಾಲಕ್ಕೆ ಗಾಂಧಿಯ ಈ ಪ್ರಯತ್ನ ಸಣ್ಣದೇನೂ ಅಲ್ಲ. ದೇವಾಲಯ ಪ್ರವೇಶವನ್ನು ಒಂದು ಆಧ್ಯಾತ್ಮಿಕ ಕ್ರಿಯೆ ಎಂದೇ ಭಾವಿಸಿದ್ದ ಗಾಂಧಿ ಸವರ್ಣಿಯರಿಗೆ ನೀಡಿದ ಕರೆ ಎಂದರೆ “ನೀವು ದೇವಾಲಯಕ್ಕೆ ಹೋಗುವಾಗ ನಿಮ್ಮೊಡನೆ ಅಸ್ಪೃಶ್ಯ ಸಮುದಾಯಕ್ಕೆ ಸೇರಿದವರನ್ನು ಕರೆದುಕೊಂಡು ಹೋಗಿ. ನಿಮ್ಮ ಜತೆಗೆ ಅಸ್ಪೃಶ್ಯನೊಬ್ಬ ಇರುವ ಕಾರಣಕ್ಕಾಗಿ ನಿಮ್ಮನ್ನು ದೇವಾಲಯದ ಒಳಗೆ ಬಿಡಲಿಲ್ಲವಾದರೆ, ಆ ದೇವಾಲಯದಿಂದ ನೀವು ದೂರವಿರಲು ಪ್ರಯತ್ನಿಸಿ. ಆ ದೇವಾಲಯದಲ್ಲಿ ದೇವರಿಲ್ಲ ಎಂದೇ ಭಾವಿಸಿರಿ. ಎಲ್ಲಿಯವರೆಗೆ ದೇವಾಲಯದ ದ್ವಾರಗಳು ಅಸ್ಪೃಶ್ಯರಿಗಾಗಿ ಮುಚ್ಚಲ್ಪಟ್ಟಿರುತ್ತದೆಯೋ ಅಲ್ಲಿಯವರೆಗೆ ಆ ದೇವಾಲಯದಲ್ಲಿ ದೇವರು ನೆಲೆಸಿರುವುದಿಲ್ಲ. ಅಲ್ಲಿಯವರೆಗೆ ಆ ದೇವಾಲಯವು ಪವಿತ್ರವೆಂದು ಅದನ್ನು ಪ್ರವೇಶಿಸಲಾರೆ ಅಥವಾ ಅಲ್ಲಿ ಹೋಗಿ ಪೂಜೆ ಮಾಡಿದರೆ ನನ್ನ ಪಾಪಗಳು ನಾಶವಾಗುವವೆಂದು ನಾನು ನಂಬಲಾರೆ. ಅಸ್ಪೃಶ್ಯರ ಪ್ರವೇಶಕ್ಕೆ ತನ್ನ ದ್ವಾರಗಳನ್ನು ಮುಚ್ಚುವ ಭಾರತದ ಎಲ್ಲ ದೇವಾಲಯಗಳಿಗೂ ಅನ್ವಯವಾಗುತ್ತದೆ” ಎಂದಿದ್ದರು. ಗಾಂಧಿಯ ಕರೆಯು ಸಮಾಜದಲ್ಲಿ ಬಹುದೊಡ್ಡ ಪರಿಣಾಮವನ್ನು ಉಂಟುಮಾಡಿತ್ತು. ದೇಶಾದ್ಯಂತ ಸಾವಿರಾರು ದೇವಾಲಯಗಳು, ಶಾಲೆಗಳು, ಕೆರೆ ಬಾವಿಗಳು ಅಸ್ಪೃಶ್ಯರಿಗಾಗಿ ಮುಕ್ತವಾಗಿ ತೆರಯಲ್ಪಟ್ಟವು. ಧರ್ಮಕ್ಕಂಟಿದ್ದ ಕಳಂಕವನ್ನು ನಿವಾರಿಸಲು ಗಾಂಧಿ ನೀಡಿದ್ದ ಕರೆ ಅಗಾಧವಾದ ಪರಿಣಾಮವನ್ನು ಉಂಟುಮಾಡಿತ್ತು. ಸಮಸ್ಯೆಯಿನ್ನೂ ಉಳಿದ ಈ ಕಾಲಕ್ಕೆ ಅಂತಹ ಮತ್ತೊಬ್ಬ ಗಾಂಧಿ ಹುಟ್ಟಿಬರುವರೇ?
ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ,
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
5th October 2024
ಮೃತರು ಹುದಲಿ ಗ್ರಾಮದ ಖ್ಯಾತ ಗರದಿ ಗಮ್ಮತ್ ಸಾಮಾಜಿಕ ಜಾಲ ತಾಣದ ಪ್ರಧಾನ ಸಂಪಾದಕ ಬಾಪುಗೌಡಾ ಪಾಟೀಲ ಅವರ ಪತ್ನಿಯಾಗಿದ್ದು, ಮ್ರತರ ಪತಿ ಬಾಪುಗೌಡಾ ಪಾಟೀಲ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಮಹಾಂತೇಶ ಕವಟಗಿಮಠ ಸೇರಿದಂತೆ ಅಸಂಖ್ಯಾತ ಗಣ್ಯರು ಸಾಂತ್ವನ ಹೇಳಿದರಲ್ಲದೆ, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರು ಪತಿ, ಓರ್ವ ಪುತ್ರ , ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ.
5th October 2024
ಆಧುನಿಕ ಸಂವಿಧಾನಗಳಿಗೆ ಶರಣರ ವಚನ ಸಂವಿಧಾನವೇ ಮೂಲ - ಬಿರಾದಾರ
ಬೆಳಗಾವಿ: ಜಗತ್ತು ಸಂವಿಧಾನದ ಬಗ್ಗೆ ಯೋಚಿಸುವ ಮೊದಲೇ ಸಂಸದೀಯ ವ್ಯವಸ್ಥೆಯನ್ನು ಅಕ್ಷರಶಃ ಜಾರಿಗೊಳಿಸಿದ್ದ ಬಸವಾದಿ ಶರಣರ ವಚನ ಸಂವಿಧಾನವು ಆಧುನಿಕ ಸಂವಿಧಾನಗಳಿಗೆ ಮೂಲವಾಗಿದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ಲಿಂಗಾಯತ ಸಂಘಟನೆಯು ಆಯೋಜಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ 'ಶರಣರ ವಚನ ಸಂವಿಧಾನ' ಎಂಬ ವಿಷಯದ ಕುರಿತು ಅನುಭಾವ ನೀಡಿದ ಅವರು, ಶರಣರ ವಚನ ಸಂವಿಧಾನವು ಬರೆದ ಸಂವಿಧಾನವಾಗಿರದೆ ಬದುಕಿದ ಸಂವಿಧಾನವಾಗಿದೆ. ಸಮಾನತೆ, ಭಾತೃತ್ವ, ಪರೋಪಕಾರ, ಕಾಯಕ, ಪ್ರಸಾದ, ದಾಸೋಹ, ಸ್ತ್ರೀ ಸಬಲೀಕರಣ, ವೈಚಾರಿಕ-ವೈಜ್ಞಾನಿಕ ಮನೋಭಾವಗಳು ಶರಣ ವಚನ ಸಂವಿಧಾನದ ಪ್ರಮುಖ ಆಶಯಗಳಾಗಿವೆ ಎಂದು ಪ್ರತಿಪಾದಿಸಿದರು.
ಶರಣ ಸಂಗಮೇಶ ಅರಳಿಯವರು ಅಧ್ಯಕ್ಷತೆ ವಹಿಸಿದ್ದರು. ಶರಣೆ ಮಹಾದೇವಿ ಅರಳಿಯವರು ಪ್ರಾರ್ಥಿಸಿದರು. ಬಿ.ಪಿ. ಜವಣಿ ವಿ.ಕೆ. ಪಾಟೀಲ ಸುವರ್ಣಾ ಗುಡಸ ವಚನಗಳನ್ನು ಹಾಡಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ವೈ. ಮೆಣಸಿನಕಾಯಿಯವರು ಅತಿಥಿ ಪರಿಚಯ ಮಾಡಿದರು. ಶರಣೆ ವಿದ್ಯಾ ಅಜಗುಣಕರ ದಾಸೋಹಸೇವೆ ಸಲ್ಲಿಸಿದರು.
ಸುರೇಶ ನರಗುಂದ ವಂದಿಸಿದರು. ಆನಂದ ಕರಕಿ ಸುನಿಲಸಾಣಿಕೊಪ್ಪ, ಬಸವರಾಜ ಬಿಜರಗಿ, ವಿರೂಪಾಕ್ಷಿ ದೊಡಮನಿ, ಶಿವಾನಂದ ತಲ್ಲೂರ, ಸದಾಶಿವ ದೇವರಮನಿ, ಶಶಿಭೂಷಣಪಾಟೀಲ, ಬಸವರಾಜ ಕರಡಿಮಠ, ಬಿಬಿ ಮಠಪತಿ, ಶ್ರೀದೇವಿನರಗುಂದ, ಉಪಸ್ಥಿತರಿದ್ದರು ವರದಿಗಾರ.ನಂದೀಶ ಮೆಣಸಿನಕಾಯಿ ಬೆಳಗಾವಿ
5th October 2024
ಅ. 4 ರಿಂದ 7ರವರೆಗೆ ಬೆಳಗಾವಿಯ ಯುಕೆ27 ದಿ ಫೆನ್೯ನಲ್ಲಿ ವಿಶೇಷ ಆಭರಣ ಪ್ರದರ್ಶನ.
ಬೆಳಗಾವಿ : ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಬೆಳಗಾವಿಯಲ್ಲಿರುವ ಗ್ರಾಹಕರಿಗಾಗಿ ಮೂರು ದಿನಗಳ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಬೆಳಗಾವಿಯ ಮಾಜಿ ಸಂಸದೆ ಶ್ರೀಮತಿ ಮಂಗಳಾ ಸುರೇಶ್ ಅಂಗಡಿ ಮೇಳಕ್ಕೆ ಚಾಲನೆ ನೀಡಿದರು. ಅ.04 ರಿಂದ 07 ರವರೆಗೆ ಬೆಳಗಾವಿಯ ಯುಕೆ27 ದಿ ಫೆರ್ನ್ನಲ್ಲಿ ವಿಶೇಷ ಆಭರಣ ಪ್ರದರ್ಶನ ನಡೆಯಲಿದೆ. ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ವಿಶಿಷ್ಟ ಶ್ರೇಣಿಯೊಂದಿಗೆ ಪ್ರದರ್ಶಿಸಲಿದೆ.
ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಆಭರಣ ಸಂಗ್ರಹಗಳು ವೈಡೂರ್ಯ, ಸಿಟ್ರಿನ್, ಮುತ್ತುಗಳು, ನೀಲ, ಮಾಣಿಕ್ಯಗಳಂತಹ ಅಪರೂಪದ ವಜ್ರಗಳ ಸೂಕ್ಷ್ಮ ವಿನ್ಯಾಸಗಳೊಂದಿಗೆ ಸೊಬಗು ಮತ್ತು ಕ್ಲಾಸಿಕ್ ಶೈಲಿಯ ಸಮ್ಮಿಲನವಾಗಿವೆ. ನಿಮ್ಮ ವ್ಯಕ್ತಿತ್ವದತ್ತ ಗಮನ ಸೆಳೆಯಲು ಮತ್ತು ಅಬ್ಬರದ ಚಿಕ್ ಆಭರಣಗಳೊಂದಿಗೆ ನಿಮ್ಮ ವಸ್ತ್ರವಿನ್ಯಾಸಕ್ಕೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಕೈಗೆಟುಕುವ ಬೆಳ್ಳಿ ಆಭರಣಗಳೊಂದಿಗೆ ಫ್ಯಾಷನ್ ಮತ್ತು ಉದ್ದೇಶವನ್ನು ಈಡೇರಿಸುತ್ತದೆ, ಬೆಲೆಗಳು ರೂ. 599 ಮೇಲ್ಪಟ್ಟು!
ಸಿಕೆಸಿ ಯ crash.club, ಬೆಳ್ಳಿ ಆಭರಣ ಬ್ರ್ಯಾಂಡ್ ಆಗಿದ್ದು, 6 ನೇ ತಲೆಮಾರಿನ ಚೈತನ್ಯ ವಿ ಕೋಥಾ ನೇತೃತ್ವದಲ್ಲಿ ಮತ್ತು ಕಲ್ಪನೆಯೊಂದಿಗೆ ಫ್ಯಾಶನ್ ಅನ್ನು ಉದ್ದೇಶದೊಂದಿಗೆ ಸಂಯೋಜಿಸುವ, ಕೈಗೆಟುಕುವ ಮತ್ತು ಸೊಗಸಾದ ಬೆಳ್ಳಿ ಆಭರಣಗಳನ್ನು 599/ ರೂ.ನಿಂದ ಪ್ರಾರಂಭವಾಗುವ ಬೆಲೆಗಳೊಂದಿಗೆ ಒದಗಿಸುವ ತನ್ನ ಅದ್ಭುತ ಉಪಕ್ರಮವನ್ನು ಘೋಷಿಸಲು ರೋಮಾಂಚನಗೊಂಡಿದೆ. ಶೈಲಿ ಮತ್ತು ಕಾರಣ ಎರಡರಲ್ಲಿಯೂ ಅಚಲವಾದ ಬದ್ಧತೆಯೊಂದಿಗೆ, ಅಏಅ ಮೂಲಕ crash.club ಘೇಂಡಾಮೃಗವನ್ನು ರಕ್ಷಿಸುವ ಚಳುವಳಿಯಲ್ಲಿ ಸೇರಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ಸಿಕೆಸಿ ಮೂಲಕ ಒಂದು ಉದ್ದೇಶದೊಂದಿಗೆ ಫ್ಯಾಷನ್ ಕ್ರಾಂತಿಯಲ್ಲಿ crash.club, ಗೆ ಸೇರಿ ಮತ್ತು ಉತ್ತಮ ಕಾರ್ಯವೊಂದರಲ್ಲಿ ಭಾಗಿಯಾಗಿ. ಕೈಗೆಟುಕುವ ಬೆಲೆಯ ಬೆಳ್ಳಿ ಆಭರಣಗಳ ಆಕರ್ಷಣೆಯನ್ನು ಅನುಭವಿಸಿ, ಬೆಲೆಗಳು ರೂ. 599/- ರಿಂದ ಪ್ರಾರಂಭ. ಸಿಕೆಸಿ ಯ ಹಾಲ್ಮಾರ್ಕ್ ಹೊಂದಿರುವ 925 ಶುದ್ಧ ಬೆಳ್ಳಿಯ ಆಭರಣಗಳನ್ನು crash.club, ನಲ್ಲಿ 52 ಅಂಕಗಳ ಗುಣಮಟ್ಟದ ಪರಿಶೀಲನೆಯೊಂದಿಗೆ ಮತ್ತು 155 ವರ್ಷಗಳ ಸಾಬೀತಾದ ಪರಂಪರೆಯೊಂದಿಗೆ ನೀಡುತ್ತಿದೆ. ಈ ಬಗ್ಗೆ ಹೆಚ್ಚು ತಿಳಿಯಲು www.crash.club ಗೆ ಭೇಟಿ ನೀಡಿ.ಸಿಕೆಸಿಯಿಂದ crash.club, ಲ್ಯಾಬ್ ಗ್ರೋನ್ ಡೈಮಂಡ್ಸ್ ಅನ್ನು ಪರಿಚಯಿಸಲಾಗುತ್ತಿದೆ- ಕೈಗೆಟುಕುವ ಐಷಾರಾಮಿ ಹೊಸ ಯುಗ ನಮ್ಮ ಲ್ಯಾಬ್ ಗ್ರೋನ್ ಡೈಮಂಡ್ಸ್ನೊಂದಿಗೆ ಈ ಪ್ರಯಾಣವನ್ನು ಪ್ರಾರಂಭಿಸಿ, ಕಾಸ್ಮೊಸ್ನ ನಿರಂತರ ಆಕರ್ಷಣೆಗೆ ಸಾಕ್ಷಿಯಾಗಿದೆ. https://crash.club/pages/lab-grown-diamonds-listing ಲಾಗಿನ್ ಆಗಿ ಮತ್ತು ಶಾಂಪಿಂಗ್ ಪ್ರಾರಂಭಿಸಿ.
ಸಾಂಪ್ರಾದಾಯಿಕ ಸಂಗ್ರಹ
ದಕ್ಷಿಣ ಭಾರತದ ಸಾಂಪ್ರದಾಯಿಕ ಸಂಗ್ರಹ ವಜ್ರಗಳೊಂದಿಗೆ 22 kt ಅಥವಾ 18 kt ಹಳದಿ ಚಿನ್ನದ ಸೆಟ್ನಲ್ಲಿ ಮುಚ್ಚಿದ-ಬ್ಯಾಕ್ ಸೆಟ್ಟಿಂಗ್ಗಳೊಂದಿಗೆ ಕಾಣಿಸಿಕೊಂಡಿದೆ. ಚಿನಮ್ಮ ಸಾಂಪ್ರದಾಯಿಕ ಸಂಗ್ರಹವು ನವರಾತ್ರಿ, ದಸರಾ ಮತ್ತು ದೀಪಾವಳಿಯಂತಹ ಹಬ್ಬದ ಆಚರಣೆಗಳಿಗೆ ಹಾಗೂ ಆಧುನಿಕ ಮಾದರಿಯ ತುಣುಕುಗಳನ್ನು ಬಯಸುವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಪ್ರತಿ ಸಂದರ್ಭಕ್ಕೂ ಪರಿಪೂರ್ಣವಾದ ಸಂಪ್ರದಾಯ ಮತ್ತು ಆಧುನಿಕ ಕರಕುಶಲತೆಯ ಅತ್ಯಾಧುನಿಕ ಸಮ್ಮಿಳನದ ಈ ಆಭರಣಗಳೊಂದಿಗೆ ಹಬ್ಬಗಳ ಋತುವನ್ನು ಸಂಗ್ರಹಿಸಿ. https://www.ckcjewellers.com/ckc/search/traditional ನಲ್ಲಿ ಪೂರ್ಣ ಸಂಗ್ರಹವನ್ನು ವೀಕ್ಷಿಸಿ.
ಬೆಳಗಾವಿ ಗ್ರಾಹಕರೊಂದಿಗೆ ಆಡಂಬರ ಮತ್ತು ಉಲ್ಲಾಸದಿಂದ ಹಬ್ಬದ ಋತುವನ್ನು ಆಚರಿಸಲು - ಸಿ. ಕೃಷ್ಣಯ್ಯ ಚೆಟ್ಟಿ ಜ್ಯೂವೆಲರ್ಸ್ ವಿಶೇಷ ಕೊಡುಗೆಯೊಂದಿಗೆ ಬಂದಿದೆ - 2,4,6,9 ಅಲ್ಲಿ ನೀವು ಬೆಳ್ಳಿಯ ಮೇಲೆ 2%, ಚಿನ್ನದ ಮೇಲೆ 4%, ಡೈಮಂಡ್ ಮೇಲೆ 6% ಮತ್ತು 18.69 ಲಕ್ಷ ಮೌಲ್ಯದ ವಜ್ರದ ಮೇಲೆ 9% ರಿಯಾಯಿತಿಯನ್ನು ಪಡೆಯುತ್ತೀರಿ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಆಫರ್ 04.10.2024 ರಂದು ಪ್ರಾರಂಭವಾಗುತ್ತದೆ ಮತ್ತು 7.10.2024 ರಂದು ಕೊನೆಗೊಳ್ಳುತ್ತದೆ.
ಹೆಚ್ಚಿನ ಮಾಹಿತಿಗೆ : Mr. Nishanth: +91 99001 16983 & Mr. Santhosh: +91 96861 01869. ವರದಿಗಾರ ನಂದೀಶ ಮೆಣಸಿನ ಕಾಯಿ ಬೆಳಗಾವಿ
5th October 2024
ಅರ್ಥಶಾಸ್ತ್ರ ಉಪನ್ಯಾಸಕರ ಅಧ್ಯಯನ ಕಾರ್ಯಗಾರ
ಬೆಳಗಾವಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಬಿ.ಎ ಬಿ.ಕಾಂ ವಿಭಾಗದ ಪಠ್ಯಕ್ರಮ ಪರಿಷ್ಕರಣೆ ಹಾಗೂ ಚರ್ಚಾ ಕಾರ್ಯಗಾರ ಸ್ಥಳೀಯ ಮರಾಠ ಮಂಡಲ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಣಿ ಚೆನ್ನಮ್ಮ ವಿವಿ ಕಲಾ ನಿಕಾಯದ ಡೀನ್ ಆದ ಡಾ. ಡಿ ಎನ್ ಪಾಟೀಲ್ ಅವರ ಮಾತನಾಡಿ, ಪಠ್ಯ ಪರಿಸ್ಕರಣೆಯನ್ನು ಹೊಸ ಶಿಕ್ಷಣ ನೀತಿ ಅನ್ವಯ ಸ್ಪರ್ಧಾತ್ಮಕವಾಗಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿ ಮಾಡುವುದಲ್ಲದೆ ಜಾಗತೀಕರಣದ ಯುಗದಲ್ಲಿ ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳು ಕಲಿಯುವಂತೆ ಭೋದಿಸಬೇಕು. ಅರ್ಥಶಾಸ್ತ್ರವು ಸಾಮಾಜಿಕ ವಿಜ್ಞಾನಗಳ ಪ್ರಮುಖವಾದ ಶಾಸ್ತ್ರವಾಗಿದ್ದು. ಅರ್ಥಶಾಸ್ತ್ರ ಕಲಿತವರು ಹಲವು ಸಾಮಾಜಿಕ ಸಮಸ್ಯೆಗಳಿಗೆ ವೈದ್ಯರಂತೆ ಕೆಲಸ ಮಾಡುತ್ತಾರೆ. ವಿಷಯದ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಯನ ಮಂಡಳಿ ಸದಸ್ಯರಾದ ಬಿ ಎಸ್ ಕಾಂಬಳೆ, ಎನ್. ಪಿ ಬಿರಾದಾರ ಆರ್ ಎಂ ತೇಲಿ ಜೆ. ಬಿ ಮುರಗೋಡ ಅರ್ಜುನ್ ಜಂಬಗಿ, ಶಿವಕುಮಾರ್ ಪರಾಂಡೆ ವೇದಿಕೆಯಲ್ಲಿ ಇದ್ದರು. ಸಭೆಯಲ್ಲಿ ನೂತನವಾಗಿ ವೇದಿಕೆಯ ಅಧ್ಯಕ್ಷರನ್ನಾಗಿ ಮದಕರಿ ನಾಯಕ ಅವರನ್ನು ಆರಿಸಲಾಯಿತು. ಅಶೋಕ ರಾಥೋಡ್ ದಿಲೀಪ್ ರಾಥೋಡ್ ಶ್ರೀಕಾಂತ್ ಮರಿಯಪ್ಪನವರ ಉಪಾಧ್ಯಕ್ಷರಾಗಿ. ಗಣಪತಿ ಸಂಗೋಟಿ ಪ್ರಧಾನ ಕಾರ್ಯದರ್ಶಿ. ರಾಜು ಕಪಾಲಿ ಖಜಾಂಚಿ ಆಗಿ ಆಯ್ಕೆಯಾದರು. ರುದ್ರಪ್ಪ ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಂದಪ್ಪನವರ ವಂದಿಸಿದರು ವರದಿಗಾರ.ನ.ಮ.ಮೆಣಸಿನಕಾಯಿ ಬೆಳಗಾವಿ
5th October 2024