
12th December 2024
ಕ್ಷೇತ್ರದಿಂದ ವಾತ್ಸಲ್ಯ ಕಿಟ್ ವಿತರಣೆ-ಜಿಲ್ಲಾ ನಿರ್ದೇಶಕರು ರೋಹಿತಾಕ್ಷ*
*ಕ್ಷೇತ್ರದಿಂದ ವಾತ್ಸಲ್ಯ ಕಿಟ್ ವಿತರಣೆ-ಜಿಲ್ಲಾ ನಿರ್ದೇಶಕರು ರೋಹಿತಾಕ್ಷ*
ಬಳ್ಳಾರಿ ಡಿ 12. ತಾಯಿ ಮಮತೆಯ ವಾತ್ಸಲ್ಯ ಹೃದಯದ ಮಾತೃಶ್ರೀ
ಡಾ//ಹೇಮಾವತಿ ವಿ ಹೆಗ್ಗಡೆಯವರು ಮಾಶಾಸನ ಪಡೆಯುವ ನಿರ್ಗತಿಕರು ಹಾಗೂ ಕಡು ಬಡವರಿಗೆ ವಾತ್ಸಲ್ಯ ಕಿಟ್ ನೀಡಲು ಅನುಮತಿ ನೀಡಿರುತ್ತಾರೆ
ಅದರ ಪ್ರಯುಕ್ತ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮೋಕಾ ವಲಯದ ಸಿರವಾರ ಕಾರ್ಯಕ್ಷೇತ್ರದ ಮಾಶಾಸನ ಪಡೆಯುವ ಫಲಾನುಭವಿಯಾದ
ಶ್ರೀಮತಿ ಮಾರೇಮ್ಮ
ಯವರಿಗೆ ಬಳ್ಳಾರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಮಾನ್ಯ ಶ್ರೀ ರೋಹಿತಾಕ್ಷ ರವರು ವಾತ್ಸಲ್ಯ ಕಿಟ್ ವಿತರಣೆ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ
ರಾಜ್ಯಾದ್ಯಂತ ಸಾವಿರಾರು ದುರ್ಬಲ ವರ್ಗದ ಅಶಕ್ತ ನಿರ್ಗತಿಕ ಕಡು ಬಡವರ ಕುಟುಂಬಗಳಿಗೆ ಪ್ರತಿ ತಿಂಗಳು 1000 ಸಾವಿರ ರೂ ಮೊತ್ತವನ್ನು ಮಾಶಾಸನವನ್ನು ನೀಡಲಾಗುತ್ತಿದೆ.
ಯೋಜನೆಯ ಕಾರ್ಯಕರ್ತರ ಮೂಲಕ ಗ್ರಾಮಗಳಲ್ಲಿ ಸರ್ವೆ ನಡೆಸಿ ಕಡು ಬಡವರು ದುಡಿಯಲು ಅಶಕ್ತರಾಗಿರುವ ಅನಾರೋಗ್ಯದಿಂದ ಬಳಲುತ್ತಿರುವವರ ಸಂಬಂಧಿಕರು ಇಲ್ಲದೆ ಅನಾತರಾಗಿರುವ ನಿರ್ಗತಿಕರನ್ನು ಗುರುತಿಸಿ ಯೋಜನೆಯಿಂದ ಅವರ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು ₹1000 ರೂ ಮೊತ್ತವನ್ನು ಯೋಜನೆಯಿಂದ ಅವರ ಮನೆಯ ಬಾಗಿಲಿಗೆ ಯೋಜನೆಯ ಕಾರ್ಯಕರ್ತರ ಮೂಲಕ ನೀಡಲಾಗುತ್ತದೆ.
ಪ್ರಸ್ತುತ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ 180 ಜನ ಮಾಶಾಸನ ಪಡೆಯುತ್ತಿರುವ ಸದಸ್ಯರಿಗೆ 181000/- ಪ್ರತಿ ತಿಂಗಳು ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಂಜೂರಾತಿ ನೀಡಿರುತ್ತಾರೆ.
ಅದರಂತೆ
ಬಳ್ಳಾರಿ-1 ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 28 ಜನ ಸದಸ್ಯರಿಗೆ 28000/- ರೂ ಮೊತ್ತವನ್ನು ಪ್ರತಿ ತಿಂಗಳು ನಿರ್ಗತಿಕರಿಗೆ ಮಾಶಾಸನವನ್ನು ವಿತರಣೆ ಮಾಡಲಾಗುತ್ತಿದೆ.
ಅಷ್ಟೇ ಅಲ್ಲದೆ ಪ್ರತಿ ವರ್ಷ ಮಾಶಾಸನ ಪಡೆಯುವ ಸದಸ್ಯರಿಗೆ ಯೋಜನೆಯಿಂದ
ಚಾಪೆ, ದಿಂಬು, ಹೊದಿಕೆ,ಚಮಚ,ಸೀರೆ, ಬಟ್ಟೆ, ಸೋಪ್,ಪ್ಲೇಟ್,ಚಂಬು.
ಲೋಟ, ಕೊಡಪಾನ,ಬೇಡ್ ಶಿಟ್, ಟವಲ್, ಪೌಷ್ಟಿಕ ಆಹಾರದ ವಾತ್ಸಲ್ಯ ಕಿಟ್ ಹೀಗೆ ಒಂದು ಕುಟುಂಬದ ನಿರ್ವಹಣೆಗೆ ಅತಿ ಅವಶ್ಯಕವಾಗಿ ಬೇಕಾಗಿರುವ ವಸ್ತುಗಳನ್ನು ಹಾಗೂ ಮನೆ ಇಲ್ಲದೆ ಇರುವಂತಹ ಫಲಾನುಭವಿಗಳಿಗೆ ವಾತ್ಸಲ್ಯ ಮನೆ ನಿರ್ಮಾಣವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಡಲಾಗುತ್ತಿದೆ ಎಂದು ಮಾನ್ಯ ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ಶ್ರೀ ರೋಹಿತಾಕ್ಷ ರವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿಗಳು ವೆಂಕಟೇಶ ಪಟಗಾರ್.
ಮೋಕಾ ವಲಯದ ಮೇಲ್ವಿಚಾರಕರು ವೀರಭದ್ರಗೌಡ್ರು.
ಮಹಿಳಾ ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಆಶಾ.
ಗ್ರಾಮ ಪಂಚಾಯತಿ ಸದಸ್ಯರು ಶ್ರೀಮತಿ ಮಲ್ಲಮ್ಮ .
ಒಕ್ಕೂಟ ಅಧ್ಯಕ್ಷರು
ಶ್ರೀಮತಿ ಸಿದ್ದಮ್ಮ ಹಾಗೂ ಉಪಾಧ್ಯಕ್ಷರು ರೋಪಾ ಊರಿನ ಗಣ್ಯರು, ಮತ್ತು ಸಂಘದ ಸದಸ್ಯರು,ಸ್ಥಳೀಯ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು