28th December 2024
ಬೆಂಗಳೂರು: ಗುತ್ತಿಗೆದಾರ ಸಚಿನ್ ಸಾವಿನ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ತಿಳಿಸಿರುವ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು, ಪ್ರಿಯಾಂಕ ಖರ್ಗೆಯವರು ಮೊದಲು ರಾಜೀನಾಮೆ ಕೊಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಮಕ್ಕಳ ದುರ್ಬಳಕೆಯ ಸಂಚು ಸೇರಿದಂತೆ ಅನೇಕ ವಿಷಯಗಳು ಸಚಿನ್ ಡೆತ್ ನೋಟಿನಲ್ಲಿವೆ ಎಂದು ವಿವರಿಸಿದರು. ತನಿಖೆ ನಡೆಯಲೆಂದು ಮುಂಚಿತವಾಗಿ ತಿಳಿಸಿದರೆ ಬಚಾವ್ ಆಗಬಹುದೆಂದು ಪ್ರಿಯಾಂಕ್ ಅವರು ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈಶ್ವರಪ್ಪನವರ ರಾಜೀನಾಮೆ ಪಡೆದ ದಾರಿಯಲ್ಲೇ ರಾಜೀನಾಮೆ ಕೊಡಬೇಕು; ನಿಮ್ಮ ಪಾತ್ರ ಏನೂ ಇಲ್ಲ ಎಂದು ಗೊತ್ತಾದರೆ ನೀವು ಮುಖ್ಯಮಂತ್ರಿಯಾದರೂ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು. ನಾವು ಸುಲಭವಾಗಿ ಬಿಡುವುದಿಲ್ಲ; ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರು ಪ್ರಕಟಿಸಿದರು.
ವಿಪಕ್ಷ ನಾಯಕರು, ನಮ್ಮ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್ಐಆರ್ ಆಗುತ್ತಿದೆ. ಆದರೆ, ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ, ಎಫ್ಐಆರ್ ಆಗುತ್ತಿಲ್ಲ. ಯಾಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿ.ಟಿ.ರವಿಯವರು ಕೊಟ್ಟ ದೂರಿನ ಎಫ್ಐಆರ್ ಮಾಡಿಲ್ಲ; ಎಫ್ಐಆರ್ ಮಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಗುಲ್ಬರ್ಗದಲ್ಲಿ ಕೂಡ ಎಫ್ಐಆರ್ ಮಾಡಿಲ್ಲ; ಕೋರ್ಟ್ ನಿರ್ದೇಶನ ನೀಡಬೇಕಾಯಿತು ಎಂದು ಗಮನ ಸೆಳೆದರು.
ಸತ್ಯಶೋಧನಾ ಸಮಿತಿಗೆ ರಾಜ್ಯಾಧ್ಯಕ್ಷರ ನೇತೃತ್ವ..
ನಾಳೆಯೇ ಬಿಜೆಪಿ ಸತ್ಯಶೋಧನಾ ಸಮಿತಿಯು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ತೂಗಾಂವ್ ಕಟ್ಟೆಗೆ ಭೇಟಿ ಕೊಡಲಿದೆ ಎಂದು ರವಿಕುಮಾರ್ ವಿವರ ನೀಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾನು (ರವಿಕುಮಾರ್), ನಮ್ಮ ಗುಲ್ಬರ್ಗದ ಶಾಸಕ ಬಸವರಾಜ ಮತ್ತಿಮೂಡ, ಬೀದರ್ ಶಾಸಕ ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣದ ಶಾಸಕ ಶರಣು ಸಲಗಾರ್, ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್, ಬೀದರ್ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಗುಲ್ಬರ್ಗ ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ್, ಶಿವರಾಜ್ ಪಾಟೀಲ್ ಅವರು ಈ ಸಮಿತಿಯಲ್ಲಿ ಇರುತ್ತಾರೆ ಎಂದು ವಿವರಿಸಿದರು.
ನಮ್ಮ ಈ ನಿಯೋಗವು ಭಾಲ್ಕಿ ತಾಲ್ಲೂಕಿನ ತೂಗಾಂವ್ ಕಟ್ಟೆಗೆ ನಾಳೆ ಸಂಜೆ ಭೇಟಿ ಕೊಡುತ್ತದೆ. ಸಚಿನ್ ಮನೆಗೆ ತೆರಳಿ ವಿವರ ಪಡೆಯುತ್ತೇವೆ. ಬೆಂಗಳೂರಿನಲ್ಲಿ ಪ್ರತಿಭಟನೆ ಕುರಿತು ನಂತರ ತಿಳಿಸುವುದಾಗಿ ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ. ಸಿದ್ದರಾಮಯ್ಯನವರು ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಹೇಳುತ್ತಿದ್ದು, ಅದೆಲ್ಲ ಬೋಗಸ್, ಬೂಸಾ ಎಂದು ಟೀಕಿಸಿದರು. ಸಚಿನ್ ಬರೆದ ಪತ್ರದ ಮಾಹಿತಿಯ ಇಂಚಿಂಚನ್ನೂ ರಾಜ್ಯದಲ್ಲಿ ನಾವು ಪ್ರಚಾರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಈ ಸರಕಾರಕ್ಕೆ ಮಾನ, ಮರ್ಯಾದೆ ಇದೆಯೇ? ಎಷ್ಟು ಅಧಿಕಾರಿಗಳು ಸಾಯುತ್ತಿದ್ದಾರೆ? ಇನ್ನೂ ಎಷ್ಟು ಜನ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ? ಎಂದ ಅವರು, ಆಸ್ಪತ್ರೆಗಳು, ಶಾಲೆ, ಕಾಲೇಜುಗಳು ಗಬ್ಬುನಾರುತ್ತಿವೆ. ಹೇಳೋರಿಲ್ಲ; ಕೇಳೋರಿಲ್ಲ ಎಂಬಂತಾಗಿದೆ. ರಸ್ತೆ ಗುಂಡಿಗಳು ಹಾಳು ಬಿದ್ದು ಹೋಗಿದೆ. ಸರಕಾರ ದುಡ್ಡಿಲ್ಲದೆ ಪಾಪರ್ ಆಗಿದೆ. ಸುಮ್ಮನೆ ಭಾಷಣ ಬಿಗಿಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ಸರಕಾರದ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು. ಪಕ್ಷದ ಮುಖಂಡ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
28th December 2024
ಶುಭೋದಯ ವಾರ್ತೆ ಚೀಟಗುಪ್ಪ :ಔರಾದ್ ತಾಲ್ಲೂಕಿನ ಬೆಳಕುಣಿ(ಚೌ)-ಮುಂಗನಾಳ ಮಾರ್ಗವಾಗಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಔರಾದ್ ಪೊಲೀಸರು ಬಂಧಿಸಿದ್ದಾರೆ ಚೀಲದಲ್ಲಿ ಗಾಂಜಾ ತುಂಬಿಕೊಂಡು ಬೈಕ್ ಮೇಲೆ ತೆರಳುತ್ತಿರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಸೂಮಾರು 5 ಲಕ್ಷ ರೂ.ಮೌಲ್ಯದ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಇಬ್ಬರು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಪಿಎಸ್ಐ ವಸೀಮ್ ಪಟೇಲ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಘಟನೆಗೆ ಸಂಬಂಧಿಸಿದಂತೆ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ವರದಿ ನೂರಅಲಿ
28th December 2024
ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಮೂರು ಮಕ್ಕಳಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ತಡವಲಗಾ ಗ್ರಾಮದಲ್ಲಿ ನಡೆದಿದೆ.ಗಾಯಗೊಂಡಿರು ಮಕ್ಕಳಾದ ಮಹ್ಮದ್ ಇಬ್ರಾಹಿಂ ಕಲಬುರ್ಗಿ ( 8) ಅಫ್ಘಾನ್ ಕಸ್ಸಾಬ ( 12),ಅಜಾನ್ ಕಸ್ಸಾಬ (5) ಸೇರಿದಂತೆ ಹತ್ತು ಜನರಿಗೂ ಕ್ಕಿಂತ ಹೆಚ್ಚು ಜನರಿಗೂ ಕಚ್ಚಿದೆ.ಗಾಯಗೊಂಡ ಮಕ್ಕಳನ್ನು ತಡವಲಗಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.ಚಿಕಿತ್ಸೆ ನೀಡಿ ನಂತರ ಮಾತನಾಡಿದ ಇಂಡಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಹಾಗೂ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿವೈದ್ಯಾಧಿಕಾರಿ ಡಾಕ್ಟರ್ ಕೆ ಎಸ್ ಜಾಧವ ಅವರು ಹುಚ್ಚು ನಾಯಿ ಕಚ್ಚಿ ತಕ್ಷಣ 24 ಗಂಟೆ ಒಳಗಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನುಡಿಯಬೇಕು ತಾವು ಯಾವುದೇ ರೀತಿಯ ಮುಡಿ ನಂಬಿಕೆಗಳಿಗೆ ಒಳಗಾಗಿದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು, ವೈದ್ಯರು ಹೇಳಿದ ಹಾಗೆ ನಾಲ್ಕು ಬಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು.ಇತ್ತಿಚೀನ ದಿನಗಳಲ್ಲಿ ಬೀದಿ ನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಕ್ಕಳ ಬಗ್ಗೆ ನಿಗಾವಹಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಚ್ಚಿತಾ ಆಕಾಶ್ ಡಾ.ಗುರುರಾಜ ಜಾಗೀರದಾರ ಡಾ.ಫಾರೂಕ್ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.
28th December 2024
ಕೆ.ಆರ್.ಪೇಟೆ,ಡಿ.೨೮: ಪಟ್ಟಣದ ಜೆ.ಎಂ.ಎಫ್.ಸಿ ಅಪರ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಸುರೇಂದ್ರ ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಉತ್ಪಮ ಸಾಧನೆ ಮಾಡಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯ ಊದವಾರಿಪಲ್ಲಿ ಗ್ರಾಮದ ಕೂಲಿ ಮಾಡಿ ಜೀವನ ಸಾಗಿಸುವ ಗಂಗುಲಯ್ಯ ಹಾಗೂ ಕಮಲಮ್ಮ ದಂಪತಿಗಳ ಪುತ್ರರಾದ ಜಿ.ಸುರೇಂದ್ರ ಅವರು ಒಂದರಿAದ ೭ನೇ ತರಗತಿಯವರೆಗೆ ಹೇರೋಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದಾರರ. ನಂತರ ಪೋಷಕರ ಸಹಕಾರದಿಂದ ಬೆಂಗಳೂರಿನ ವಿಜಯನಗರದ ಉದಯ ವಿದ್ಯಾಸಂಸ್ಥೆಯಲ್ಲಿ ೮ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲದಲ್ಲಿ ಬಿಎ ಪದವಿ ಪಡೆದು ಅಲ್ಲಿಯೇ ಇರುವ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ೨೦೧೪ರಂದು ವಕೀಲ ವೃತ್ತಿಗೆ ಪಾದಾರ್ಪಣೆ ಮಾಡಿ ಬೆಂಗಳೂರಿನ ಖ್ಯಾತ ವಕೀಲರಾದ ಹೆಚ್.ಎಸ್.ರಾಘವೇಂದ್ರ ಅವರ ಬಳಿ ಕಿರಿಯ ವಕೀಲರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ೨೦೨೨ರಲ್ಲಿ ಸರ್ಕಾರಿ ಅಭಿಯೋಜಕರ ಹುದ್ದೆಗೆ ಕರೆದಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೨೦೨೩ರಲ್ಲಿ ಕೆ.ಆರ್.ಪೇಟೆಯ ಪಟ್ಟಣದ ಅಪರ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಳೆದ ಒಂದು ವರ್ಷದಿಂದ ಕೆ.ಆರ್.ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಬಡ ತಂದೆ-ತಾಯಿಗಳಿಗೆ ಕೀರ್ತಿ ತಂದಿದ್ದಾರೆ.
ತಮ್ಮ ಕನಸನ್ನು ಸಾಕಾರ ಮಾಡಿಕೊಂಡಿರುವ ಜಿ.ಸುರೇಂದ್ರ ೨೦೨೩ರಲ್ಲಿ ಎಪಿಪಿ/ಎಜಿಪಿ ಆಗಿ ಕೆ.ಆರ್.ಪೇಟೆಯ ಅಪರ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಳೆದ ಒಂದು ವರ್ಷದಿಂದ ಕೆ.ಆರ್.ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಟ್ಟಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡಿರುವ ಸುರೇಂದ್ರ ಅವರ ನ್ಯಾಯಾಲಯಕ್ಕೆ ನ್ಯಾಯವನ್ನು ಅರಸಿ ಬರುವ ನೊಂದ ಜನರ ಧನಿಯಾಗಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಕಾನೂನು ಅರಿವು-ನೆರವು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಗ್ರಾಮೀಣ ಪ್ರದೇಶದ ಬಡಜನರು ಹಾಗೂ ನೊಂದವರು ಉಚಿತವಾಗಿ ಕಾನೂನು ನೆರವನ್ನು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಲು ಕಾರಣರಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಕೀಲರ ಸಂಘದ ಮಾಜಿಅಧ್ಯಕ್ಷ ಹಾಗೂ ನೋಟರಿಗಳಾದ ಎನ್.ಆರ್.ರವಿಶಂಕರ್ ಹಾಗೂ ವಕೀಲ ನಯಾಜ್ಪಾಷಾ ಅವರು ನೂತನ ಜಡ್ಜ್ ಜಿ.ಸುರೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
28th December 2024
ಬಳ್ಳಾರಿ ಡಿ 28.ಬಳ್ಳಾರಿಯ ಖಙಒಇಅ ಇಂಜಿನಿಯರಿAಗ್ ಕಾಲೇಜಿನಲ್ಲಿ ಂIಆSಔ 70ನೇ ಸಂಸ್ಥಾಪನಾ ದಿನದ
ಅಂಗವಾಗಿ ಧ್ಯೇಯದ್ದೇಶ ಕುರಿತು ಚರ್ಚೆ ಹಾಗೂ ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್' ಸಿನಿಮಾ
ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು
ಮುಖ್ಯ ಅತಿಥಿಗಳಾಗಿ ಂIಆSಔ ರಾಜ್ಯ ಉಪಾಧ್ಯಕ್ಷರುಗಳಲ್ಲಿ ಒಬ್ಬರಾದ ಅಪೂರ್ವ ಸಿ.ಎಂ ರವರು
ಮಾತನಾಡುತ್ತಾ.... &quoಣ;ಶಿಕ್ಷಣ-ಮಾನವತೆ-ಸಂಸ್ಕೃತಿ&quoಣ; ಉಳಿಸಲು ಹಾಗೂ ಸಾರ್ವಜನಿಕ ಶಿಕ್ಷಣ ಬಲಪಡಿಸಲು
ಮಹಾನ್ ವಿಚಾರಧಾರೆಯ ಆಧಾರದ ಮೇಲೆ ತಳಮಟ್ಟದ ಹೋರಾಟ ಬೆಳೆಸಲು 70ನೇ ಂIಆSಔ
ಸAಸ್ಥಾಪನಾ ದಿನವನ್ನು ಯೋಗ್ಯ ರೀತಿಯಲ್ಲಿ ಆಚರಿಸಿ!&quoಣ; ಎಂದು ಕರೆ ನೀಡಿದರು.
ಮುಂದುವರಿದು ಮಾತನಾಡಿ.... ದೇಶದ ನವೋದಯ ಚಿಂತಕರ, ಮಹಾನ್ ಕ್ರಾಂತಿಕಾರಿಗಳ
ಕನಸಿನ ಭಾರತ ನಿರ್ಮಿಸಲು, ಸ್ವಾತಂತ್ರ ಸಂಗ್ರಾಮದ ರಾಜಿ ರಹಿತ ಕ್ರಾಂತಿಕಾರಿ ಹೋರಾಟಗಾರರು
ಮತ್ತು ನಮ್ಮ ನಾಯಕರು ಹಾಗೂ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್ ರವರ
ಚಿಂತನೆಗಳ ಆಧಾರದ ಮೇಲೆ ಬಂಗಾಳದಲ್ಲಿ ಬಹುಪಾಲು ಪ್ರೌಢ ಶಾಲಾ ವಿದ್ಯಾರ್ಥಿಗಳು ಡಿಸೆಂಬರ್ 28,
1954 ನಮ್ಮ ಂIಆSಔ ಆರಂಭಿಸಿದರು.
ಇAದು, ದೇಶದಾದ್ಯಂತ 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಂIಆSಔ ಕಾರ್ಯ ನಿರ್ವಹಿಸುತ್ತಾ ದೇಶದ
ಬಹು ದೊಡ್ಡ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ವಿದ್ಯಾರ್ಥಿಗಳು
ಎದುರಿಸುತ್ತಿರುವ ಎಲ್ಲ ಮೂಲಭೂತ ಸಮಸ್ಯೆಗಳ ವಿರುದ್ಧ ಹೋರಾಡಲು, ಮಹಾನ್
ವಿಚಾರಧಾರೆಯ ಆಧಾರದ ಮೇಲೆ ಶಿಕ್ಷಣ-ಮಾನವತೆ-ಸಂಸ್ಕೃತಿಯನ್ನು ಉಳಿಸುವ
ಚಳುವಳಿಯನ್ನು ನಾವು ತಳ ಮಟ್ಟದಿಂದ ಆರಂಭಿಸಬೇಕಿದೆ. ದೇಶಾದ್ಯಂತ ಓಇP2020
ಪ್ರತಿರೋಧಿಸಲು, ಸಾರ್ವಜನಿಕ ಶಿಕ್ಷಣ ಉಳಿಸಲು ನಾವೆಲ್ಲರೂ ಸಜ್ಜಾಗಬೇಕಿದೆ. ಈ ದೇಶದ
ಪ್ರತಿಯೊಬ್ಬ ಮಗುವಿಗೂ, ಉನ್ನತ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ದೊರಕಬೇಕೆಂದು ಹೋರಾಡಿದ
ಭಗತ್ ಸಿಂಗ್, ಸುಭಾಸ್ಚಂದ್ರ ಬೋಸ್ ರವರ ಕನಸು ಕನಸಾಗಿಯೇ ಉಳಿದಿದೆ. ಅವರು ತಮ್ಮ
ಕನಸನ್ನು ನನಸು ಮಾಡುತ್ತಾರೆ ಎಂಬ ಭರವಸೆ ಇರಿಸಿದ್ದು ನಮ್ಮ ಮೇಲೆ! ಈ ನೆಲದ ವಿದ್ಯಾರ್ಥಿ
ಸಮುದಾಯದ ಮೇಲೆ! ಆ ಭರವಸೆ ಈಡೇರಿಸುವ ಐತಿಹಾಸಿಕ ಜವಾಬ್ದಾರಿ ನಮ್ಮ ಮೇಲಿದೆ.
ಈ ಜವಾಬ್ದಾರಿಯನ್ನು ಮತ್ತಷ್ಟು ತೀಕ್ಷ÷್ಣಗೊಳಿಸಲು ಈ ಸಂಸ್ಥಾಪನಾ ದಿನದಂದು ನಾವೆಲ್ಲರೂ
ಪ್ರತಿಜ್ಞೆ ತೆಗೆದುಕೊಳ್ಳೋಣ! ಈ ಹಿನ್ನಲೆಯಲ್ಲಿ ಸಂಸ್ಥಾಪನಾ ದಿನದ ಸಂದೇಶವನ್ನು ನಿಮ್ಮ ಎಲ್ಲಾ
ಸ್ನೇಹಿತರಿಗೆ, ಂIಆSಔ ಸಮಿತಿಗಳ ಎಲ್ಲ ಸದಸ್ಯರಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸೋಣ! ನಮ್ಮ
ಜಿಲ್ಲೆಯಲ್ಲಿಯೂ ಬಲಿಷ್ಠ ಸಂಘಟನೆ ಕಟ್ಟುವ ಕಾರ್ಯಕ್ಕೆ ಮುಂದಾಗೋಣ!&quoಣ;ಎAದರು.
AIಆSಔ ಜಿಲ್ಲಾ ಕಾರ್ಯದರ್ಶಿಗಳಾದ ಕಂಬಳಿ ಮಂಜುನಾಥ್ ರವರು ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಂIಆSಔ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ,
ಉಪಾಧ್ಯಕ್ಷರು ಎಂ.ಶಾAತಿ, ಉಮಾ ಮತ್ತು ಕಛೇರಿ ಕಾರ್ಯದರ್ಶಿ ನಿಹಾರಿಕ ಮತ್ತು ನೂರಾರು
ವಿದ್ಯಾರ್ಥಿಗಳು ಭಾಗವಹಿಸಿದ್ದರು.
28th December 2024
ಬಳ್ಳಾರಿ ಡಿ ೨೮.ಬಳ್ಲಾರಿ ನಗರದ ಶ್ರೀ ಮಂಗಳ ಗೌರಿ ಮಹಿಳಾ ಸಂಘ ಬಳ್ಳಾರಿ ಜಿಲ್ಲಾ ಆಸ್ಪತ್ರೆ
ಸಹಕಾರದಿಂದ ಇಲ್ಲಿನ ರೇಣುಕಾಚಾರ್ಯ ನಗರದ ಕಿಡ್ಸ್ ವಿಲಿನೆಯಂ ಶಾಲೆಯಲ್ಲಿ ”ಉಚಿತ
ಆರೋಗ್ಯ ತಪಾಸಣೆ ಶಿಬಿರವನ್ನು” ಡಿ.೨೫ ರಂದು ಹಮ್ಮಿಕೊಂಡಿತ್ತು.
ಶಿಬಿರದಲ್ಲಿ ೧೮೦ಕ್ಕೂ ಹೆಚ್ಚು ಜನತೆ ತಪಾಸಣೆಗೆ ಒಳಗಾದರು. ಇವರಲ್ಲಿ ಎಂಟು ಜನರಿಗೆ
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರೆಫರ್ ಮಾಡಲಾಗಿದೆ. ೬೦ಕ್ಕೂ ಹೆಚ್ಚು ಜನರಿಗೆ
ಕಣ್ಣಿನ ತೊಂದರೆ ಇದ್ದರಿಂದ ಅವರಿಗೆ ಉಚಿತವಾಗಿ ಆಪರೇಷನ್ ಮಾಡಿ ಕನ್ನಡಕ ನೀಡಲು
ನಿರ್ಧರಿಸಿದೆ ಎಂದು ಶ್ರೀ ಶಿವಗೌರಿ ಮಂಗಳ ಮಹಿಳಾ ಸಂಘದ ಅಧ್ಯಕ್ಷೆ
ಜೆ.ಬಿ.ಸುಮಂಗಳಮ್ಮ ತಿಳಿಸಿದ್ದಾರೆ.ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿಯ
ಮುಖಂಡ ಕೆ.ಎ.ರಾಮಲಿಂಗಪ್ಪ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ನಗರಸಭೆ
ಮಾಜಿ ಸದಸ್ಯ ಗುರುಸಿದ್ದಪ್ಪ ಮೊದಲಾದವರು ಪಾಲ್ಗೊಂಡಿದ್ದರು.
28th December 2024
ಬಳ್ಲಾರಿ ಡಿ 28. ಬಳ್ಳಾರಿ ನಗರದ ಆರ್ಯ ವೈಶ್ಯ ಅಸೋಸಿಯೇಷನ್, ಬಳ್ಳಾರಿ ವತಿಯಿಂದ ಇತ್ತೀಗೆ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಬಳ್ಳಾರಿ ನಗರದಲ್ಲಿ ಸುಮಾರು ಆರು ದಶಕಗಳ ಕಾಲ ಸುದೀರ್ಘ ಸಾಮಾಜಿಕ ಸೇವೆಯ ಮೂಲಕ ಸಂಸ್ಥೆ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಪತ್ತಿ ಗೋಪಾಲಕೃಷ್ಣ ರವರು ಪ್ರೊಸಿಡಿಂಗ್ ಅಧಿಕಾರಿಗಳಾಗಿದ್ದರು, ಸಂಸ್ಥೆಯ ಕಾರ್ಯದರ್ಶಿಗಳಾದ ಸೊಂತ ಗಿರಿಧರ್ರವರು ಸಭೆಯ ವಾರ್ಷಿಕ ವರದಿಯನ್ನು ವಿವರಿಸಿದರು. ಸಭೆಯಲ್ಲಿ ಅಡಿಟ್ ವರದಿ, ಆರ್ಯ ವೈಶ್ಯ ಸಂಸ್ಥೆಯ ಸಾಮಾಜಿಕ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಮುಂದುವರೆದು ಸಾಮಾನ್ಯ ಸಭೆಯಲ್ಲಿ 2024 ರಿಂದ 2027ನೇ ಸಾಲಿನ ಹೊಸ ಆಡಳಿತ ಮಂಡಳಿಗಾಗಿ ಚುನಾವಣೆಯನ್ನು ನಡೆಸಲಾಯಿತು.
ಆಡಳಿತ ಮಂಡಳಿಯ ಒಟ್ಟು 24 ಸ್ಥಾನಗಳಿಗೆ ಚುನಾಚಣೆಯನ್ನು ನಡೆಸಲಾಯಿತಿ. ಚುನಾವಣೆಯಲ್ಲಿ ಒಟ್ಟು 24 ಆಡಳಿತ ಮಂಡಳಿಯ ಸದಸ್ಯರ ಹುದ್ದೆಗಳಿಗೆ ಪ್ರಾರಂಭದಲ್ಲಿ 65 ನಾಮ ನಿರ್ದೇಶನ ಅರ್ಜಿಗಳು ಸ್ವೀಕೃತಗೊಂಡಿದ್ದವು, ಅದರಲ್ಲಿ ಕೆಲವರು ಅರ್ಜಿಗಳನ್ನು ಹಿಂಪಡೆದು ಅಂತಿಮವಾಗಿ 36 ಅರ್ಜಿದಾರರು ಚುನಾವಣೆಯ ಕಣದಲ್ಲಿ ಉಳಿದರು. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಆರ್ಯ ವೈಶ್ಯ ಅಸೋಸಿಯೇಷನ್, ಬಳ್ಳಾರಿ ಸಂಸ್ಥೆಯ ನಿಯಮಾನುಸಾರದಂತೆ ವಿವಿಧ ಪದಾಧಿಕಾರಿಗಳ ಹುದ್ದೆಯ ಜವಾಬ್ದಾರಿಯನ್ನು ನೀಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷರು ಮಾಹಿತಿ ನೀಡಿದರು.
2021-2024ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಡಿ.ಎಲ್.ರಮೇಶ್ ಗೋಪಾಲ್ , ಉಪಾಧ್ಯಕ್ಷರಾದ ನಾಮ ನಾಗರಾಜ್, ಕೋಶಾಧಿಕಾರಗಳಾದ ವಿಠ ವೆಂಕಟೇಶ್, ಕಾರ್ಯದರ್ಶಿ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿ ಜೆಸಿ ಶ್ರೀಧರ್ ಮತ್ತು ರಾಮಕೃಷ್ಣ ರೇಣಿಗುಂಟ್ಲ ಹಾಗೂ ಸಂಸ್ಥೆಯ ಹಿರಿಯರು ಮತ್ತು ಸಮುದಾಯದ ಅಸಂಖ್ಯಾತ ಜನರು ಸಭೆಯಲ್ಲಿ ಭಾಗವಹಿಸಿದ್ದರು.
28th December 2024
ಬಳ್ಳಾರಿ ಡಿ 28. ಕರ್ನಾಟಕ ರಾಜ್ಯದ ಗಡಿನಾಡಿನಲ್ಲಿ ಸತತವಾಗಿ ನಾಲಕ್ಕು ದಶಕಗಳಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿತ್ತಿರುವ, ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ (ಪೂರ್ವದಲ್ಲಿ ವಿಜಯನಗರ ತಾಂತ್ರಿಕ ಮಹಾವಿದ್ಯಾಲಯ), ಬಳ್ಳಾರಿ ಕಾಲೇಜಿನ ಆವರಣದಲ್ಲಿ “ಅಪೂರ್ವ ಮಿಲನ-2024 ” ಅದ್ದೂರಿ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮವು ಕಾಲೇಜಿನ ಹಳೇ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ, ಅವರೊಂದಿಗೆ ಕೆಲ ಸಮಯ ಕಳೆದು, ಸದ್ಯದ ತಾಂತ್ರಿಕ ಯುಗದಲ್ಲಿ, ಒಬ್ಬ ತಾಂತ್ರಿಕ ವಿದ್ಯಾರ್ಥಿಗೆ ಬೇಕಾಗಿರುವ ಪ್ರವೀಣತೆ, ನೈಪುಣ್ಯತೆಯನ್ನು ಕುರಿತು ಚರ್ಚಿಸಿದರು. ಈ ಕಾಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಗೌರವನ್ವಿತ ಅಥಿತಿಗಗಳು ಹಾಗೂ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳು ಕೂನ ರವಿಕುಮಾರ (ಎಂ.ಎಲ್.ಎ), ಕಂದುಲ ನಾರಾಯಣ ರೆಡ್ಡಿ ( ಎಂ.ಎಲ್.ಎ), ಮುಲ್ಲಂಗಿ ನಂದೀಶ್(ಬಳ್ಳಾರಿ ನಗರದ ಮೇಯರ್) ಡಾ.ಎಸ್.ಪಿ.ಮಲ್ಲೂರ್,ಸೂರ ಶೇಖರ ರೆಡ್ಡಿ , ತಿರುಪತಿ ನಾಯ್ಡು, ಸುರೇಶ್ ಬಾಬು, ಸಂಜೀವ ಪ್ರಸಾದ್, ಕೊರ್ಲಗುಂದಿ ಬಸವನಗೌಡ, ಈ ಮಹಾನ್ ಸಂಸ್ಥೆಯ ನಿವೃತ್ತ ಪ್ರೋಫೆಸರುಗಳು ಭೂಪಾಲ ರೆಡ್ಡಿ , ಮಂಟಿಗೇರಿ, ಡಾ. ಕೆ.ವೀರೇಶ್ ಡಾ.ಸಿ.ಬಿ.ಶ್ರೀನಿವಾಸರೆಡ್ಡಿ, ಎಂ.ಆರ್.ವಿಜಯಕುಮಾರ್ ಹಾಗೂ ಇತರ ಗಣ್ಯರು ವೀ.ವಿ.ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರು ದರೂರು ಶಾಂತನಗೌಡ, ಕಾತ್ಯಾಯನಿ ಶ್ರೀಮತಿ ಮರಿದೇವಯ್ಯ, ಇನ್ನಿತರರು ಭಾಗವಹಿಸಿ, ಮಾತನಾಡುತ್ತ “ವೀರಶೈವ ವಿಧ್ಯಾವರ್ಧಕ ಸಂಘದ ಹಲವಾರು ವಿದ್ಯಾ ಸಂಸ್ಥೆಗಳು ಕರ್ನಾಟಕ ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ವಿದ್ಯಾಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ, ಈ ಕಾಲೇಜಿನ ಪಧವಿಧರರಾದ ವಿಧ್ಯಾಥಿಗಳು ಹೆಸರಾಂತ ಕಂಪನಿಗಳಲ್ಲಿ ಉನ್ನತ ಸ್ಥಾನಗಳಲ್ಲಿರುವುದು” ನೆನಪಿಸಿಕೊಂಡರು. ಕಾಲೇಜಿನ ಬೆಳವಣಿಗೆ ವಿಷಯವಾಗಿ ಕೆ¯ವೊಂದು ಸಲಹೆಗಳನ್ನು ನೀಡಿದರು. ಹ¯ವಾರು ಹಳೇ ವಿದ್ಯಾರ್ಥಿಗಳು ಈ ವೇದಿಕೆಯಲ್ಲಿ ಹಲವಾರು ವಿಷಯಗಳನ್ನು ಹಂಚಿಕೊAಡರು.
ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳು ಕೂನ ರವಿಕುಮಾರ (ಎಂ.ಎಲ್.ಎ, ಶ್ರೀಕಾಕುಳಂ, ಆಂಧ್ರಪ್ರದೇಶ ), ಕಂದುಲ ನಾರಾಯಣ ರೆಡ್ಡಿ (ಎಂ.ಎಲ್.ಎ, ಮರ್ಕಾಪುರಂ, ಆಂಧ್ರಪ್ರದೇಶ), ಮುಲ್ಲಂಗಿ ನಂದೀಶ್(ಬಳ್ಳಾರಿ ನಗರದ ಮೇಯರ್) ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ “ಈ ಮಹಾನ್ ಸಂಸ್ಥೆ ಹಿಂದೆ ವಿಜಯನಗರ ಎಂಜಿನಿಯರಿAಗ್ ಕಾಲೇಜು, ಈಗ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ (ಆರ್.ವೈ.ಎಂ.ಇ.ಸಿ) ಎಂದು ಮರುನಾಮಕರಣಗೊಂಡಿದೆ ಮತ್ತು ಈ ಸ್ಥಳದ ಮಣ್ಣುನಲ್ಲಿ ತಂತ್ರಜ್ಞಾನದಲ್ಲಿ ಉನ್ನತ ಮಟ್ಟದ ಬುದ್ಧಿಜೀವಿ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಮತ್ತು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ದಶಕಗಳಲ್ಲಿ ಮತ್ತು ಇಂದಿಗೂ ಸಹ ನಾಯಕತ್ವದ ಗುಣಗಳನ್ನು ಸೃಷ್ಟಿಸುವ ಮತ್ತು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ನಾವು ಸಮಾಜದ ಈ ಉನ್ನತ ಸ್ಥಾನಗಳಲ್ಲಿದ್ದೇವೆ, ನಮಗೆ ಒದಗಿಸಲಾದ ಶಿಕ್ಷಣವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ನಾವು ನಮ್ಮ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಜೀವಮಾನವಿಡೀ ಕೃತಜ್ಞರಾಗಿರುತ್ತೇವೆ. ದಶಕಗಳ ನಂತರ ನಾವು ನಮ್ಮ ಹಿಂದಿನ ವಿದ್ಯಾರ್ಥಿ ಜೀವನವನ್ನು ಸ್ಮರಿಸಲು ಇಲ್ಲಿ ಒಟ್ಟುಗೂಡಿರುವುದು ಸಂತೋಷದ ಸಂದರ್ಭ, ನಮ್ಮ ಸ್ನೇಹ ದೀರ್ಘಕಾಲ ಬದುಕಲಿ.” ಎನ್ನುತ್ತಾ ಹಲವಾರು ವಿಷಯಗಳನ್ನು ಹಂಚಿಕೊAಡರು ಮಹಾವಿದ್ಯಾಲಯಕ್ಕೆ ಸಮಾಜದ ಸವಾಲಿನ ಸನ್ನಿವೇಶಗಳಿಗೆ, ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ, ಅವರು ಅಮೂಲ್ಯವಾದ ಸಲಹೆಗಳನ್ನು ಸೇರಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಫ್ರೊಫೆಸರುಗಳು ಪಿ.ಭೂಪಾಲರೆಡ್ಡಿ, ಹಳೇ ವಿದ್ಯಾರ್ಥಿಗಳು ಉದ್ದೇಶಿಸಿ ಮಾತನಾಡುತ್ತ “ಒಂದು ಉತ್ತಮ ಶಿಕ್ಷಣ ಸಂಸ್ಥೆಯ ಒಳಗೊಳ್ಳುವಿಕೆಯಿಂದ, ಶ್ರೇಷ್ಠ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ, ಮತ್ತು ಪ್ರತಿಯಾಗಿ ಶ್ರೇಷ್ಠ ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ರೂಪಿಸುತ್ತಾರೆ, ಜೀವನದುದ್ದಕ್ಕೂ ಇತ್ತೀಚಿನ ಬೆಳವಣಿಗೆಗಳೊಂದಿಗೆ ಕಲಿಯುವುದು ಮತ್ತು ನವೀಕರಿಸುವುದು ನಿಮ್ಮ ಕರ್ತವ್ಯವಾಗಿದೆ, ಅವಕಾಶಗಳು ಸಾಕಷ್ಟು ಇವೆ, 80ರ ವಯಸ್ಸಿನಲ್ಲೂ ನಾವು ಇಂದಿನ ಆಧುನಿಕ ಸಮಾಜದಲ್ಲಿ ನಮ್ಮನ್ನು ನಾವು ನವೀಕರಿಸುತ್ತಿದ್ದೇವೆ, ಇಲ್ಲಿರುವ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಆನ್ಲೈನ್ ಮೋಡ್ನಲ್ಲಿ ಸಂಪರ್ಕ ಹೊಂದಿದವರಿಗೆ ಇದು ನಮ್ಮ ಪ್ರಾಮಾಣಿಕ ಸಲಹೆ ಮತ್ತು ಸಂದೇಶವಾಗಿದೆ, ಜಗತ್ತಿನ ಅಭಿವೃದ್ಧಿಯಲ್ಲಿ ಯಾವುದೇ ಹೊಸ ಸವಾಲನ್ನು ಎದುರಿಸಲು ಯಾವಗಲು ಸುಸಜ್ಜಿತವಾಗಿರಬೇಕು, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುಳಿಯುವುದು ಅತ್ಯುತ್ತಮ ಜೀವಿ ಮಾತ್ರವಾಗಿದೆ ಎಂಬುವುದು ನೆನಪಿನಲ್ಲಿರಲಿ” ಎನ್ನುತ್ತಾ ಹಲವಾರು ಸೂಚನೆಗಳನ್ನು ನೀಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಇವರು ಮಾತನಾಡುತ್ತ “ಇದೊಂದು ಶುಭದಿನ, ನಮ್ಮ ಮಹಾವಿದ್ಯಾಲಯದಿಂದ ಉತ್ತೀರ್ಣರಾಗಿ, ಹೆಸರಾಂತ ಉದ್ಯಮಿಗಳಾಗಿ, ಸಮಾಜಕ್ಕೆ ಸೇವೆಸಲ್ಲಿಸುತ್ತಿರುವ ನಮ್ಮ ಹಳೇ ವಿದ್ಯಾಥಿಗಳನ್ನು ನೋಡಿ ತುಂಬಾ ಸಂತೋಷವಾಗುತ್ತದೆ ಮತ್ತು ಇನ್ನೂ ಸಂಸ್ಥೆಯ ಅಭಿವೃದ್ದಿ ಪಡಿಸುವದಕ್ಕೆ ನೀಡಿರುವ ಸೊಚನೆ ಮತ್ತು ಸಲಹೆಗಳ ಬಗ್ಗೆ ಗಮನಹರಿಸುತ್ತೇವೆ ವೀ.ವಿ.ಸಂಘದ ಅದ್ಯಕ್ಷತೆಯಲ್ಲಿ 40 ವಿದ್ಯಾಸಂಸ್ಥೆಗಳು ನಮ್ಮ ಬಳ್ಳಾರಿ ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಪಾರ ಸೇವೆ ಸಲ್ಲಿಸಿತ್ತುವುದಕ್ಕೆ ಆ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಹಕಾರ, ಸೂಚನೆ ಸಲಹೆಗಳು ಕಾರಣವಾಗಿವೆ ಮತ್ತು ವಿದ್ಯಾಸಂಸ್ಥೆಗಳ ಅಭಿವೃದ್ದಿಗೆ ಆಡಳಿತಮಂಡಳಿಯು ಯಾವಗಲು ಪ್ರೋತ್ಸಹ ನೀಡುತ್ತದೆಂದು”ಹೇಳಿದರು.ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಅಸೋಸಿಯೆಶನ್ ಪದಾದಕಾರಿಗಳಾದ ಉಪಾಧ್ಯಕ್ಷರು ಡಾ. ಚಿತ್ರಿಕಿ ತೋಟಪ್ಪ, ರವರು ಅಸೋಸಿಯೆಶನ್ನಿನ ಚಟುವಟಿಕೆಗಳನ್ನು ಸಭೆಯಲ್ಲಿ ಮಾತನಾಡಿದರು.
ಆರಂಭದಲ್ಲಿ ಟಿ. ಹನುಮಂತರೆಡ್ಡಿ ಎಲ್ಲರನ್ನೂ ಸ್ವಾಗತಿಸಿದರು, ಶ್ರೀಮತಿ ವಾಣಿ ಹಿರೇಗೌಡರು, ಸೌಮ್ಯ ನಿರೂಪಿಸಿದರು ಡಾ|| ಸವಿತಾ ಸೋನೋಳಿ ವಂದಿಸಿದರು, ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಸೂಮಾರು 500 ಹಳೇ ವದ್ಯಾರ್ಥಿಗಳನ್ನು ಆಡಳಿತಮಂಡಳಿ ತುಂಬು ಹೃದಯದಿಂದ ಸ್ವಾಗತಿಸಿದರು ಹಾಗೂ ಅವರನ್ನು ಗೌರವಿಸಿ, ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು ಹಾಗೂ ಅನೇಕ ಮನರಂಜನೆ ಕಾರ್ಯಕ್ರಮಗಳನ್ನು ಎರ್ಪಟಿಸಿದ್ದರು. ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು-ಅಧ್ಯಕ್ಷ ಡಾ.ಟಿ.ಹನುಮಂತ ರೆಡ್ಡಿ, ಉಪಾಧ್ಯಕ್ಷರು ಡಾ. ಚಿತ್ರಿಕಿ ತೋಟಪ್ಪ, ಡಾ.ಯಡವಳ್ಳಿ ಬಸವರಾಜ, ಕೆ.ಬಿ ಸಂಜೀವ್ ಪ್ರಸಾದ್,ಶಿವಪ್ರಕಾಶ ವಸ್ತ್ರದ್, ಕಾರ್ಯದರ್ಶಿ ಡಾ.ಶಿವ ಪ್ರಸಾದ್ ಕೆ.ಎಂ, ಸಹಾಯಕ ಕಾರ್ಯದರ್ಶಿ ಪವನ್ ಕುಮಾರ್.ಎಂ,ಖಜಾAಚಿ ಶರಣ ಬಸವರಾಜ.ಬಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಮಹಾವಿದ್ಯಾಲಯದಶಿಕ್ಷಕವೃಂದದವರು, ವಿದ್ಯಾರ್ಥಿವೃಂದದವರು ಭಾಗವಹಿಸಿದ್ದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳು ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಬೈಲುವದ್ದಿಗೇರಿರ್ರಿಸ್ವಾಮಿ, ಆಡಳಿತ ಮಂಡಳಿಯ ಸದಸ್ಯರು ಬಾಡದ ಪ್ರಕಾಶ್, ಪ್ರÀಭು ಸ್ವಾಮಿ ಎಸ್.ಎಂ ಶುಭಹಾರೈಸಿದರು.