5th January 2025
ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ
ಶ್ರೀ ಪ್ರಭಾತ್ ಕುಮಾರ್ ಸಿಂಗ್, ದಾಲ್ಮಿಯ ಸಿಮೆಂಟ್ ಕಾರ್ಖಾನೆ ಬೆಳಗಾವಿ ವಿಭಾಗದ ಮುಖ್ಯಸ್ಥರು ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಾದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ, ಬುದ್ನಿ, ತೊಂಡಿಕಟ್ಟಿ ಮತ್ತು ಕುನ್ನಾಳ ಗ್ರಾಮದ 70 ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಇದರೊಟ್ಟಿಗೆ ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಆರ್ಥಿಕ ನೆರವಿಗಾಗಿ ಗ್ರಾಮ ಪರಿವರ್ತನಾ ಸ್ವ ಸಹಾಯ ಸಂಘಗಳ ಒಕ್ಕೂಟ ಕಾಮನಕಟ್ಟೆಗೆ 4.00 ಲಕ್ಷ ರೂಪಾಯಿಗಳ ಧನಸಹಾಯವನ್ನು ಸಿ ಎಸ್ ಆರ್ ಅಡಿಯಲ್ಲಿ ಚೆಕ್ ನೀಡುವುದರ ಮೂಲಕ ಮಾಡಿದರು.
ದಾಲ್ಮಿಯ ಕಾರ್ಖಾನೆಯ ಬೆಳಗಾವಿ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರಭಾತ್ ಕುಮಾರ್ ಸಿಂಗ್ ರವರು ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮದ ಜನರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಸಿ. ಎಸ್. ಆರ್ ಅಡಿಯಲ್ಲಿ ರೈತರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಹಾಗೂ ಇನ್ನು ಮುಂದೆಯೂ ಕಾರ್ಯಕ್ರಮಗಳನ್ನು ನಡೆಸುತ್ತದೆಂದು ತಿಳಿಸಿದರು.
ಸ್ಪೂರ್ತಿ ಲೇಡಿಸ್ ಕ್ಲಬ್ ಬೆಳಗಾವಿಯ ಅಧ್ಯಕ್ಷರಾದ ಶ್ರೀಮತಿ ವಂದನಾಸಿಂಗ್ ರವರು ಮಹಿಳೆಯರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಸಿ. ಎಸ್. ಆರ್ ಅಡಿಯಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಸ್ವಉದ್ಯೋಗಕ್ಕೆ ಸ್ವ ಸಹಾಯ ಸಂಘಗಳ ಮೂಲಕ ಸಹಾಯ ಹಾಗೂ ಸ್ವಂತ ಉದ್ಯೋಗ ಮಾಡಲು ಸಹಾಯ ಮಾಡಲಾಗುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ವಿನಂತಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ ಮನೀಶ್ ಕುಮಾರ್ ಮಹೇಶ್ವರಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರಾದ ಶ್ರೀ ಅವದೆಶ್ ಕುಮಾರ್, ಶ್ರೀ ಜಯಶಂಕರ್ ತಿವಾರಿ, ಶ್ರೀ ಅರವಿಂದ್ ಕುಮಾರ್ ಸಿಂಗ್, ಶ್ರೀ ಗೋಲಪನಾಥ್, ಶ್ರೀ ಸಮೀರ್ ಕುಮಾರ್ ಅಗರ್ವಾಲ್, ಹಾಗೂ ಕಾರ್ಖಾನೆಯ ಅಧಿಕಾರಿಗಳಾದ ಕಾಚಿ ರಾಮ್ ದಯಾಲ್, ಶ್ರೀ ಅಜಿತ್ ಸಿಂಗ್ ರಾಯ್, ಶ್ರೀ ವಿಜಯ್ ಕುಮಾರ್ ತಿವಾರಿ, ಶ್ರೀ ಈರಸಂಗಯ್ಯ ಬಾಗೋಜಿಮಠ, ಶ್ರೀ ಶಶಿಕಾಂತ್ ಹಿರೇಕೊಡಿ, ಶ್ರೀ ಲೋಕಣ್ಣ ನಂದಗಾವ್ ಹಾಗೂ ಸ್ಪೂರ್ತಿ ಲೇಡಿಸ್ ಕ್ಲಬ್ ನ ಸದಸ್ಯರು ಸಿ.ಎಸ್.ಆರ್ ವಿಭಾಗದ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮದ ನಾಗರಿಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾಕ್ಟರ್ ನೀಲಕಂಠಗೌಡ ಅವರು ನಡೆಸಿಕೊಟ್ಟರು.
22nd November 2024
ಬೆಳಗಾವಿ-೨೨: ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ದಿನಾಂಕ ೨೨ ಶುಕ್ರವಾರದಂದು ಭೂಮಿ ಡಿಜಿಟಲ್ ಅಗ್ರಿ ಪ್ಲಾಟಫಾರ್ಮದವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಟಿ. ಎನ್. ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ರೈತರ ಬೆಳೆಗಳಿಗೆ ಉತ್ತಮ ಆದಾಯ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ, 'ಭೂಮಿ' ಸಂಸ್ಥೆ, ಇದೀಗ ಇನ್ನೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ ಎಂದು ಅವರು ಹೇಳಿದರು. ಭೂಮಿ ಸಂಸ್ಥೆಯು ಡಿಸೆಂಬರ್ ೨೨ ರಂದು ವಿಶ್ವ ರೈತರ ದಿನಾಚರಣೆ ಈ ಸಂದರ್ಭದಲ್ಲಿ ಪ್ರಥಮ ಬಾರಿಗೆ ರಾಜ್ಯದ ೨೫ ಜಿಲ್ಲೆಗಳಿಂದ ಆಯ್ಕೆ ಮಾಡಿ ಮುನ್ನೂರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರಿನ ಪ್ರೆಸ್ ಕ್ಲಬ್ಆವರಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವ ರೈತರಿಗೆ ಉಚಿತ ಪ್ರಯಾಣ, ವಸತಿ ಮತ್ತು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ರಘುನಂದನ್ ಹೇಳಿದರು.
ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು 'ಐ ಸಪೂರ್ಟ ಫಾರ್ಮರ್' ಎಂಬ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರೈತರಿಗೆ ಆನ್ಸೆಂÊನ್ ಮೂಲಕ ಪ್ರೋತ್ಸಾಹ ಧನ ನೀಡಲಾಗುವುದು ಹಾಗೂ ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಸಣ್ಣ ಮತ್ತು ಅತಿಸಣ್ಣ ರೈತು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಪ್ರಾರಂಭಿಸಲಾಗಿದೆ ಎಂದು ರಘುನಂದನ್ ವಿವರಿಸಿದರು.ರೈತರಿಗೆ ಮಾರ್ಗದರ್ಶನ, ಉತ್ತಮ ಮಾರುಕಟ್ಟೆ ಹಾಗೂ ಅವರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.
'ಭೂಮಿ' ಸಂಸ್ಥೆಯ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಉದ್ಯೋಗ ಅವಕಾಶಗಳಿದ್ದು, ಈ ಕ್ಷೇತ್ರದತ್ತ ಯುವ ಜನಾಂಗ ಆಕರ್ಷಿಸುವ ಉದ್ದೇಶದಿಂದ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ದೇಶ ಕಾಯುವ ಯೋಧನಿಗೆ ಸಿಗುವ ಗೌರವ ಪ್ರಾಶಸ್ತದಷ್ಟೇ ದೇಶಕ್ಕೆ ಅನ್ನ ನೀಡುವ ರೈತನಿಗೂ ಎನ್ನುವುದ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. – ಪತ್ರಿಕಾ ಗೋಷ್ಠಿಯಲ್ಲಿ ಭೂಮಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಟಿ. ಎನ್. ಮತ್ತು ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಹಾಜರಿದ್ದರು.
15th November 2024
ಸಾಹಿತ್ಯ, ರಂಗಭೂಮಿಗೆ ಬಾಳಾಚಾರ್ ಅವರ ಕೊಡುಗೆ ಅಪಾರ
ಧಾರವಾಡ ನವೆಂಬರ 15: ನಿನ್ನೆ (ನ.14) ರಂಗಾಯಣದ ಪಂ. ಬಸವರಾಜ ರಾಜುಗುರು ಬಯಲು ರಂಗಮಂದಿರದಲ್ಲಿ ಧಾರವಾಡ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದೊಂದಿಗೆ ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ 3 ದಿನಗಳ ನಾಟಕೋತ್ಸವವನ್ನು ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ನ ಅಧ್ಯಕ್ಷ ಬಾಬುರಾವ್ ಸಕ್ಕರಿ ಅವರು ಉದ್ಘಾಟಿಸಿ, ಸಕ್ಕರಿ ಬಾಳಾಚಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು.
ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದನ್ನು ಕಂಡು ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಿ. ನಾಟಕ ಕಂಪನಿಯನ್ನು ಕಟ್ಟುವಲ್ಲಿ ಸಕ್ಕರಿ ಬಾಳಾಚಾರ್ಯರು ಮೊದಲಿಗರು. ಕನ್ನಡದಲ್ಲಿ ಹಲವಾರು ಕಾವ್ಯಗಳನ್ನು, ಅನುವಾದ ಹಾಗೂ ಇತರೆ ಕೃತಿಗಳನ್ನು ರಚಿಸಿದರು. ಕೀರ್ತನೆಗಳನ್ನು ರಚಿಸಿ ತಾವೇ ಹಾಡುತ್ತಿದ್ದರು. ಕನ್ನಡದಲ್ಲಿ ಉಷಾಹರಣ ಎಂಬ ಸ್ವತಂತ್ರ ನಾಟಕವನ್ನು ಪ್ರಥಮ ಬಾರಿಗೆ ರಚಿಸಿದ ಕೀರ್ತಿ ಅವರದು. ಯಾವುದೇ ರೀತಿ ಗುರುತಿಸಿಕೊಳ್ಳದೇ 65 ಕ್ಕಿಂತ ಹೆಚ್ಚು ಪುಸ್ತಕಗಳನ್ನು ರಚಿಸುವ ಮೂಲಕ ಆಧುನಿಕ ಕನ್ನಡ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸಾಹಿತ್ಯ, ಕೃತಿ ನುಡಿಗಳು ರಂಗಭೂಮಿಗೆ ಪೂರಕವಾಗಿವೆ. 1918 ರಲ್ಲಿ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಬಾಳಾಚಾರ್ಯ ಅವರ ಸಹಕಾರ ಪ್ರಮುಖವಾಗಿದೆ ಎಂದು ಶಾಂತಕವಿಗಳ ಬದುಕು ಬರಹ ಕುರಿತು ಉಪನ್ಯಾಸ ನೀಡಿದ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಗುರುನಾಥ ಬಡಿಗೇರ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರಾಜು ತಾಳಿಕೋಟೆ ಅವರು ರಂಗಾಯಣವು ಸಕ್ಕರಿ ಬಾಳಾಚಾರ್ ಅವರ ಹೆಸರಿನಲ್ಲಿ ಮೂರು ದಿನದ ನಾಟಕೋತ್ಸವ ಆಯೋಜಿಸುವ ಮೂಲಕ ರಂಗಾಸಕ್ತರಿಗೆ ಮನರಂಜನೆಯನ್ನು ಉಣ ಬಡಿಸುತ್ತದೆ. ಆದ್ದರಿಂದ ಎಲ್ಲ ಸಾಹಿತಿಗಳು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಭೂಮಿ ಬೆಳವಣಿಗೆ ಸಹಕಾರ ನೀಡಬೇಕು ಎಂದರು.
ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ವೀ ಹುಡೇದ, ಸ್ವಾಗತಿಸಿದರು. ಅನಿಲ ಮೇತ್ರಿ, ಅನುರಾಗ ಸಾಂಸ್ಕøತಿಕ ಬಳಗ ತಂಡದವರು ರಂಗ ಸಂಗೀತವನ್ನು ಪ್ರಸ್ತುತ ಪಡಿಸಿದರು. ಧಾರವಾಡ ಗೊಂಬೆ ಮನೆ ಹಾಗೂ ಆಟ ಮಾಟತಂಡ ಸಹಕಾರ ನೀಡಿದರು. ಆರತಿ ದೇವಶಿಕಾಮಣಿ ಅವರು ನಿರೂಪಿಸಿದರು. ನಂತರ ಜೋಗಿ ರಚಿಸಿ, ಡಾ.ಪ್ರಕಾಶ ಗರುಡ ನಿರ್ದೇಶಿಸಿದ ವಿಶ್ವಾಮಿತ್ರ ಮೇನಕೆ ಡಾನ್ಸ ಮಾಡೋದು ಏನಕೆ ನಾಟಕವನ್ನು ಗೊಂಬೆ ಮನೆ ತಂಡ ಪ್ರಸ್ತುತ ಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಾಯತ್ರಿ ಮಹಾದೇವ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಸಕ್ಕರಿ ಬಾಳಾಚಾರ್(ಶಾಂತಕವಿ) ಟ್ರಸ್ಟ್ನ ಕಾರ್ಯದರ್ಶಿ ಹನುಮೇಶ ಸಕ್ಕರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
**
12th November 2024
, ಓಂ ನಗರ, ಖಾಸಬಾಗ್, ಬೆಳಗಾವಿ.
ಎಸ್.ಜಿ.ಐ.ಎಸ್ ಬೆಳಗಾವಿ-ವಿಶ್ವವಿದ್ಯಾಲಯ ಮೇಳ 2824, ನವೆಂಬರ್ 23 ರಂದು ಸಂಜಯ್ ಘೋಡವಾತ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆಯೋಜನ
ಬೆಳಗಾವಿ, [ಇಂದಿನ ದಿನಾಂಕ) - ಬೆಳಗಾವಿಯ ಸಂಜಯ್ ಘೋಡವಾತ್ ಅಂತಾರಾಷ್ಟ್ರೀಯ ಶಾಲೆ ನವೆಂಬರ್ 23 (ಶನಿವಾರ) ರಂದು ವಿಶ್ವವಿದ್ಯಾಲಯ ಮೇಳವನ್ನು ಆಯೋಜಿಸುತ್ತಿದೆ, ಇದರಲ್ಲಿ ಹತ್ತಕ್ಕೂ ಹೆಚ್ಚು ಖ್ಯಾತ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಬೆಳಿಗೆ 900ರಿಂದ ಸಂಜೆ 5:00ರವರೆಗೆ ನಡೆಯುವ ಈ ಕಾರ್ಯಕ್ರಮವು, ಭಾರತ ಮತ್ತು ವಿದೇಶಗಳಲ್ಲಿ ಲಭ್ಯವಿರುವ ಉನ್ನತ ಶಿಕ್ಷಣ ಆಯೆ,ಗಳ ಸಮಗ್ರ ನೋಟವನ್ನು
ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶವನ್ನು ಹೊಂದಿದೆ.
ವಿಭಿನ್ನ ಅಧ್ಯಯನ ಕ್ಷೇತ್ರಗಳಲ್ಲಿ ಹರಡಿರುವ ವಿಶ್ವವಿದ್ಯಾಲಯಗಳೊಂದಿಗೆ, ಈ ಮೇಳವು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ಕೋರ್ಸ್ಗಳನ್ನು ಅನ್ವೇಷಿಸಲು, ಪ್ರವೇಶ ವಿಧಾನಗಳನ್ನು ತಿಳಿದುಕೊಳ್ಳಲು ಮತ್ತು ವಿದ್ಯಾರ್ಥಿವೇತನ ಅವಕಾಶಗಳನ್ನು ಅರಿಯಲು ಉತ್ತಮ ಅವಕಾಶವಾಗಿದೆ. ಪ್ರತಿ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಹಾಜರಿರುತ್ತಾರೆ, ಅವರು ವೈಯಕ್ತಿಕ ಮಾರ್ಗದರ್ಶನ ನೀಡಲು ಮತ್ತು ಕ್ಯಾಂಪಸ್ ಜೀವನ, ಡಿಗ್ರಿ ಪ್ರೋಗ್ರಾಮ್ಗಳು ಮತ್ತು ವೃತ್ತಿಪಥಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿದ್ದಾರೆ. "ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ತಂದಿದ್ದೇವೆಂಬುದು ನಮಗೆ ಸಂತೋಷಕರ, ಇದರಿಂದಾಗಿ ಅವರಿಗೆ
ವಿಶ್ವವಿದ್ಯಾಲಯ ಪ್ರತಿನಿಧಿಗಳೊಂದಿಗೆ ನೇರವಾಗಿದ್ದೇವೆಂಬುದು ಸುವ ಅವಕಾಶ ಸಿಗುತ್ತದೆ' ಎಂದು ಸಂಜಯ್ ನೋಡವಾತ್ ಅಂತಾರಾಷ್ಟ್ರೀಯ ಶಾಲೆಯ ಪ್ರಾಚಾರ್ಯರಾದ ಶ್ರೀ ಸ್ಯಾಮ್ಯನ್ ಗೋನಾಲೈಸ್ ಹೇಳಿದರು. "ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯದ ಕುರಿತು ಮಾಹಿತಿ ಪಡೆದು ತೀರ್ಮಾನ ತೆಗೆದುಕೊಳ್ಳಲು ಇದು ಅಮೂಲ್ಯ ಅನುಭವವಾಗಿದೆ."
ಈ ಮೇಳದಲ್ಲಿ ಕಾಲೇಜು ಅರ್ಜಿಗಳ ಪ್ರಕ್ರಿಯೆಯನ್ನು ನಾವಿಗೇಟ್ ಮಾಡುವುದು, ಆರ್ಥಿಕ ಸಹಾಯ ಆಯ್ಕೆಗಳು, ಮತ್ತು ಸರಿಯಾದ ಕೋರ್ಸ್ ಮತ್ತು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡುವ ಬಗ್ಗೆ, ಕಾರ್ಯಾಗಾರಗಳೂ ಇರಲಿನ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳೊಂದಿಗೆ ಹಾಗೂವ ನಚರ್ಚೆಗಳಲ್ಲಿ ಸಹಾಯ ಮಾಡಲು ಸಂಬಂಧಿಸಿದ ಶೈಕ್ಷಣಿಕ ದಾಖಲೆಗಳನ್ನು ತರಲು ಪ್ರೋತ್ಸಾಹಿಸಲಾಗುತ್ತದೆ. ಈ ಕಾರ್ಯಕ್ರಮವು ಪ್ರದೇಶದ ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತೆರೆಯಲಾಗಿದೆ. ನಿಮ್ಮ ಭವಿಷ್ಯವನ್ನು
ಯೋಜಿಸಲು ಈ ವಿಶಿಷ್ಟ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ರಿ-ರಿಜಿಸ್ಟ್ರೇಶನ್ಗಾಗಿ +919112259796 ಅಥವಾ +918867424101 ಗೆ ಸಂಪರ್ಕಿಸಿ. ಸ್ಥಳ: ಸಂಜಯ್ ಘೋಡವಾತ್ ಅಂತಾರಾಷ್ಟ್ರೀಯ ಶಾಲೆ, ಓಂ ನಗರ, ಖಾಸಾಬಾಗ್, ಬೆಳಗಾವಿ.
11th November 2024
ಪುಸ್ತಕಗಳು ಎಂದೆಂದೂ ಚಿರಾಯು.
ಡಾ. ಅಮರಸಿದ್ಧೇಶ್ವರ ಮಹಾಸ್ವಾಮಿಗಳು
ಅಂಕಲಗಿ. ೧೦- ಬದುಕಿನಿಂದ ದೂರ ಸರಿಯುವ ನಾವು ಚಿರಾಯು ವಾಗುವಂಥ ಸತ್ಕಾರ್ಯ ನಮ್ಮಿಂದಾಗಬೇಕು. ಜನ್ಮ ಸಾರ್ಥಕಕ್ಕೆ ಮುಂದಾಗಬೇಕು ಎಂದು ಅಂಕಲಗಿ ಅಡವಿಸಿದ್ದೇಶ್ವರ ಮಠದ ಮಠಾಧ್ಯಕ್ಷರಾದ ಡಾ ಅಮರಸಿದ್ಧೇಶ್ವರ ಶ್ರೀಗಳು ಹೇಳಿದರು. ಅವರು ಶನಿವಾರ ಸಂಜೆ ಅಂಕಲಗಿ ಮಠದಲ್ಲಿ ಶೈಲಾ ಎಸ್ ಗುಂಡಣ್ಣವರ ರಿಂದ ರಚಿತ ಗುರುವಂದನಾ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಳನ ಪುಸ್ತಕ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಇಂದಿನ ಆಧುನಿಕತೆ ಭರಾಟೆಯಲ್ಲಿ ಸಂಭಂದಗಳು, ಆತ್ಮೀಯತೆಗಳು ಕಾಣದಾಗಿದ್ದು, ಹಳೇ ವಿದ್ಯಾರ್ಥಿಗಳ ಈ ಸಮ್ಮಿಲನ ಅತ್ಯಂತ ಖುಷಿ ತರಿಸುವ ಸುದಿನವಾಗಿದೆ. ಶೈಲಾ ರ ಈ ಪುಸ್ತಕ ಸ್ನೇಹಿತರ ಮತ್ತು ಗುರು ಶಿಷ್ಯರ ಸಂಭಂದಗಳನ್ನು ನೆನಪಿಸುವ
ಮೌಲ್ಯಯುತ ಪುಸ್ತಕ ಇದಾಗಿದೆ ಎಂದರಲ್ಲದೆ ಶೈಲಾರನ್ನು ಸನ್ಮಾನಿಸಿ ಗೌರವಿಸಿದರು.
ಶೈಲಾ ಮಾತನಾಡಿ, ನನ್ನಲ್ಲಿರುವ ಇಲ್ಲಿಯ ಕಲಿತ ಮತ್ತು ಅನುಭವಿಸಿದ ಸಂದರ್ಭಗಳನ್ನು ಹೊಸೆದು ಈ ಪುಸ್ತಕ ರೂಪಿಸಿದ್ದು , ನನಗೆ ಸಂತಸ ತಂದಿದೆ ಎಂದರಲ್ಲದೆ, ಸೇರಿದ ಎಲ್ಲ ಹಳೇ ಸ್ನೇಹಿತರಿಗೆ ಧನ್ಯವಾದ ಹೇಳಿದರು.
ವೇದಿಕೆಯಲ್ಲಿದ್ದ ಡಾ ಅಮರಸಿದ್ಧೇಶ್ವರ ಶ್ರೀಗಳು, ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜೇಂದ್ರ ಗೌಡಪ್ಪಗೋಳ, ಶೈಲಜಾ ಗುಂಡಣ್ಣವರ, ಮಂಗಳಾ ಪಾಶ್ಚಾಪುರೆ, ಸುನಿಲ್ ಖತಗಲ್ಲಿ, ಮಂಗಳಾ ಕಾಪ್ಸೆ ,ಅಡವೇಶ ಮುನವಳ್ಳಿ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಾಹಿರ ಅಬ್ಬಾಸ ಖೋತವಾಲ್, ಜ್ಯೋತಿ ಪಾಶ್ಚಾಪುರೆ, ಬಸಲಿಂಗವ್ವಾ ಕೊಳವಿ, ಗಂಗಪ್ಪಾ ಅಂಗಡಿ, ಬಸಲಿಂಗಪ್ಪಾ ಗುಡದವರ, ಗಣಪತಿ ಬಡಿಗೇರ, ಸಿದ್ರಾಮ ಕುಂಬಾರ, ಎಸ್ ಎ ಪಿ ಯು ಕಾಲೇಜಿನ ೯೧ ಸಾಲಿನ ಹಳೆಯ ವಿದ್ಯಾರ್ಥಿಗಳು ಉಪಸ್ತಿತರಿದ್ದರು.
ಜ್ಯೋತಿ ಪಾಶ್ಚಾಪುರೆ ಪ್ರಾರ್ಥಿಸಿದರು. ದುರ್ಗಾಪ್ರಸಾದ ಬಂಡಿವಡ್ಡರ ನಿರೂಪಿಸಿದರು
ರಾಜೇಂದ್ರ ಗೌಡಪ್ಪಗೋಳ ವಂದಿಸಿದರು.
, ಸುರೇಶ ಉರಬಿನಹಟ್ಟಿ
8th November 2024
*ಬೆಳಗಾವಿಯಲ್ಲಿ ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸಿದ ದಾಲ್ಮಿಯಾ ಭಾರತ್ ಫೌಂಡೇಶನ್*
ಬೆಳಗಾವಿ, ನವೆಂಬರ್ 6, 2024: ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ (ಡಿಸಿಬಿಎಲ್) ಸಂಸ್ಥೆಯ ಸಿಎಸ್ಆರ್ ಅಂಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ಗ್ರಾಮೀಣ ಭಾಗದ ಜನರಿಗೆ ನೆರವು ನೀಡುವ ಉದ್ದೇಶದ ಭಾಗವಾಗಿ ಬೆಳಗಾವಿಯ ಯಾದವಾಡದಲ್ಲಿರುವ ಸ್ವ-ಸಹಾಯ ಗುಂಪುಗಳ (ಎಸ್ಎಚ್ಜಿ) ಒಕ್ಕೂಟವಾದ ಉನ್ನತಿ ಗ್ರಾಮಾಭಿವೃದ್ಧಿ ಸಂಘಕ್ಕೆ ರೂ.4 ಲಕ್ಷಗಳ ಆರ್ಥಿಕ ಸಹಾಯವನ್ನು ಮಾಡಿದೆ. 10 ಸ್ವಸಹಾಯ ಸಂಘಗಳ 116 ಸದಸ್ಯರು ಈ ಆರ್ಥಿಕ ಸಹಾಯದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಅವರು ಈ ನೆರವು ಪಡೆದುಕೊಳ್ಳುವ ಮೂಲಕ ಹೊಸ ಉದ್ಯಮ ಸ್ಥಾಪನೆ, ವ್ಯಾಪಾರ ವಿಸ್ತರಣೆ, ಜಾನುವಾರು ಖರೀದಿ, ಕೃಷಿ ಬಲವರ್ಧನೆ ಇತ್ಯಾದಿ ಮಾಡಿಕೊಳ್ಳಬಹುದಾಗಿದೆ.
ಈ ನಿಧಿಯನ್ನು ಆವರ್ತನ ಸಾಲವಾಗಿ ಬಳಸಲಾಗುತ್ತಿದ್ದು, ತಿಂಗಳಿಗೆ ಕನಿಷ್ಠ ದರ ಶೇ.1ರಷ್ಟು ನಾಮಮಾತ್ರ ಬಡ್ಡಿದರ ವಿಧಿಸಲಾಗುತ್ತದೆ. ಈ ಸಾಲದ ಮೂಲಕ ಸದಸ್ಯರು ಆದಾಯ ಗಳಿಕೆಯ ಕಾರ್ಯಗಳನ್ನು ಆರಂಭಿಸಿ ಸುಸ್ಥಿರ ಜೀವನ ಸಾಗಿಸಬಹುದಾಗಿದೆ. ಈ ಯೋಜನೆಯು ಸ್ವಸಹಾಯ ಸಂಘಗಳಿಗೆ ಬಲ ತುಂಬಲಿದ್ದು, ಗ್ರಾಮೀಣ ಭಾಗದ ಮಹಿಳೆಯರ ಯಶಸ್ಸಿಗೆ ಮತ್ತು ಅವರು ಸ್ವತಂತ್ರವಾಗಿರುವುದಕ್ಕೆ ನೆರವಾಗಲಿದೆ.
ಈ ಯೋಜನೆ ಕುರಿತು ಡಿಸಿಬಿಎಲ್ ಬೆಳಗಾವಿಯ ಘಟಕದ ಮುಖ್ಯಸ್ಥರಾದ ಶ್ರೀ ಪ್ರಭಾತ್ ಕುಮಾರ್ ಸಿಂಗ್ ಅವರು, "ನಾವು ಕಾರ್ಯಾಚರಿಸುವ ಪ್ರದೇಶದಲ್ಲಿರುವ ಗ್ರಾಮೀಣ ಜನರ ಬದುಕಿನಲ್ಲಿ ಅರ್ಥಪೂರ್ಣ ಶಾಶ್ವತ ಬದಲಾವಣೆ ಉಂಟು ಮಾಡಬೇಕು ಅನ್ನುವುದು ದಾಲ್ಮಿಯಾ ಭಾರತ್ ಸಂಸ್ಥೆಯ ನಿಲುವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರು ಯಶಸ್ಸು ಸಾಧಿಸಲು ಮತ್ತು ಅವರು ಸ್ವತಂತ್ರವಾಗಿರಲು ಪ್ರೋತ್ಸಾಹ ನೀಡುತ್ತಿದ್ದೇವೆ. ಈ ಯೋಜನೆಯು ಈ ಪ್ರದೇಶದ ಕುಟುಂಬಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಅವರು ಬೆಳವಣಿಗೆ ಸಾಧಿಸಲು ನೆರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ" ಎಂದು ಹೇಳಿದರು.
ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಬೆಳಗಾವಿಯ ಸ್ಫೂರ್ತಿ ಲೇಡಿಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ವಂದನಾ ಸಿಂಗ್, ಯಾದವಾಡ ಗ್ರಾ.ಪಂ.ಅಧ್ಯಕ್ಷ ಶ್ರೀ ಬಸವರಾಜ ಭೂತಾಳಿ, ಬೆಳಗಾವಿ ಡಿಸಿಬಿಎಲ್ ನ ಹೆಚ್ಆರ್ ವಿಭಾಗದ ಮುಖ್ಯಸ್ಥ ಶ್ರೀ ಅವಧೇಶ್ ಕುಮಾರ್ ಮತ್ತು ಬೆಳಗಾವಿಯ ಸ್ಫೂರ್ತಿ ಲೇಡಿಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
4th November 2024
ನೂತನವಾಗಿ ಪ್ರಕಟಗೊಂಡಿರುವ "ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ" ನನ್ನ ಕೈಸೇರಿದೆ. ಸುಮಾರು 580 ಪುಟಗಳನ್ನು ಒಳಗೊಂಡು 700 ರೂ ಬೆಲೆಯಾಗಿದೆ.ಬೈಲಹೊಂಗಲ ಸಮಗ್ರ ಐತಿಹಾಸಿಕ, ಸ್ವಾತಂತ್ರ್ಯ ಹೋರಾಟಗಾರರ, ಸಾಮಾಜಿಕ, ಸಾಹಿತ್ಯಿಕ, ರಾಜಕೀಯ ಇತ್ಯಾದಿ ವಿಷಯಗಳನ್ನು ಕೃತಿ ಒಳಗೊಂಡಿದೆ. ಓದುಗರು ಎಂದಿನಂತೆ ಬೆಂಬಲಿಸಲು ಸವಿನಯ ಪ್ರಾರ್ಥನೆ.
ಮೊಬೈಲ್ ನಂ.8050168504
4th November 2024
*ನಮ್ಮ ರಾಷ್ಟ್ರೀಯ ಹಬ್ಬಗಳು*
ಪ್ರತಿ ತಿಂಗಳು ಬರುವ ರಾಷ್ಟ್ರೀಯ, ರಾಜ್ಯ, ಹಬ್ಬಗಳು ಹಾಗೂ ವಿವಿಧ ಮಹಾತ್ಮರ ಜಯಂತಿಗಳ ಮಾಹಿತಿಯ ಒಳಗೊಂಡ ಈ ಪುಸ್ತಕವು ಸಂಗ್ರಹಯೋಗ್ಶ ಪುಸ್ತಕ ವಾಗಿದೆ.
ಒಟ್ಟು ಪುಟಗಳ ಸಂಖ್ಯೆ: 144
ಬೆಲೆ : ರೂ.200 - 150
ರವಾನೆ ವೆಚ್ಚ: ರೂ. 30
ಒಟ್ಟು ಮೊತ್ತ: ರೂ. 180.
(ಆಸಕ್ತರು ತಮ್ಮ ವಿಳಾಸವನ್ನು 9742192615ಗೆ ವಾಟ್ಸಾಪ್ ಮಾಡಲು ಕೋರುತ್ತೇವೆ. GPay: 8660947041
ರಿಜಿಸ್ಟರ್ಡ್ ಅಂಚೆ ಮೂಲಕ ಕಳಿಸಲಾಗುವುದು)
1st November 2024
ಬೆಳಗಾವಿ: ಲಘು ಉದ್ಯೋಗ ಭಾರತಿ ಬೆಳಗಾವಿ ಮಹಿಳಾ ಶಾಖೆಯ ಪ್ರಥಮ ವಾರ್ಷಿಕೋತ್ಸವ ನಗರದ ನ್ಯೂ ಉದಯ ಭವನದಲ್ಲಿ ಮಂಗಳವಾರ ಯಶಸ್ವಿಯಾಗಿ ಜರುಗಿತು.
ಸ್ಮರಣ
ಸಂಚಿಕೆ
ಮುಖ್ಯ ಅತಿಥಿಯಾಗಿ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕಿ ಪ್ರವಾಸೊದ್ಯಮ ಇಲಾಖೆಯ ನಿರ್ದೇಶಕಿ ಸೌಮ್ಯ ಬಾಪಟ್ ಮಾತನಾಡಿ, ಮಹಿಳೆಯರಿಗೆ ಸ್ವಉದ್ಯೋಗ ಹಾಗೂ ಸಣ್ಣ ಸಣ್ಣ ಕೈಗಾರಿಕೆಗಳನ್ನು ಉಳಿಸಿ ಬೆಳೆಸುವ ಈ ನಿಟ್ಟಿನಲ್ಲಿ ಈ ಶಾಖೆಯು ಕಾರ್ಯೋಮ್ಮಖ ವಾಗಿದೆ ಎಂದರು.
ಇದೇ
ವೇಳೆ
ಬಿಡುಗಡೆಗೊಳಿಸಲಾಯಿತು.
ಎಲ್ಯುಬಿ ರಾಜ್ಯ ಕಾರ್ಯದರ್ಶಿ ಡಾ. ಪ್ರಿಯಾ ಪುರಾಣಿಕ ಅಧ್ಯಕ್ಷತೆ ವಹಿಸಿಮಾತನಾಡಿ, ಹೆಚ್ಚಿನ ಸದಸ್ಯ ಔದ್ಯೋಗಿಕ ರಂಗದಲ್ಲಿ ಮಹಿಳಾ ಸದಸ್ಯರು ಭಾಗವಹಿಸಿ ಇನ್ನೂ ಹೆಚ್ಚಿನ ಉದ್ಯೋಗ ಪಡೆಯುವಂತಾಗಬೇಕೆಂದರು. ಎಲ್ ಯು ಬಿ ಮುಖ್ಯಸ್ಥರಾದ ನಳಿನಿ ವೇಮುಲ್ಕರ, ಕಾರ್ಯದರ್ಶಿ ಲತಾ ಹೂಲಿ ಸತ್ಕರಿಸಲಾಯಿತು. ಪಾಲಿಕೆ ಸದಸ್ಯೆ ವಾಣಿ ಜೋಶಿ, ಡಾ.ಅಚೇಕರ ಸೇರಿದ್ದಂತೆ ಇತರರು ಪಾಲ್ಗೊಂಡಿದ್ದರು.
23rd October 2024
ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ
ಐ.ಕ್ಯೂ.ಎ.ಸಿ (ಆಂತರಿಕ ಗುಣಮಟ್ಟ ಭರವಸೆ ಕೋಶ) ಹಾಗೂ 'ಕನ್ನಡ ಸಂಸ್ಕೃತಿ ಸೇವಾ ಭಾರತಿ' ಸಹಯೋಗದಲ್ಲಿ ಕನ್ನಡ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಓಂಕಾರಪ್ರಿಯ ಬಾಗೇಪಲ್ಲಿ ಸಂಸ್ಥಾಪಕ ಅಧ್ಯಕ್ಷರು, ಕನ್ನಡ ಸಂಸ್ಕೃತಿ ಸೇವಾ ಭಾರತಿ, ಇವರು "ಕನ್ನಡ ಪದಸಂಪತ್ತು" ವಿಷಯ ಕುರಿತು ಮಾತನಾಡಿ. ಕನ್ನಡ ಭಾಷೆ ಶ್ರೀಮಂತವಾದ ಭಾಷೆ, ಸ್ಪಷ್ಟ ಉಚ್ಚಾರಣೆ, ಓದುವ ಶೈಲಿ, ಇತ್ಯಾದಿ ಕುರಿತು
ವಿದ್ಯಾರ್ಥಿನಿಯರಿಗೆ, ಮನಮುಟ್ಟುವಂತೆ ತಿಳಿಸಿದರು.
ಪ್ರಾಂಶುಪಾಲರಾದ ಡಾ.ಆರ್ ಎಸ್. ಮಾಂಗಳೇಕರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕನ್ನಡ ಭಾಷೆಯ ಮಹತ್ವ ಕುರಿತು ತಿಳಿಸುತ್ತಾ ಕನ್ನಡವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಂದು ಅರುಹಿದರು.ಸ್ವಾಗತ & ನಿರೂಪಣೆಯನ್ನು ಕನ್ನಡ ಉಪನ್ಯಾಸಕರಾದ ಶ್ರೀ ಪ್ರಕಾಶ ಮಬನೂರ ಮಾಡಿದರು. ಅತಿಥಿಗಳ ಪರಿಚಯ ಮತ್ತು ಪ್ರಾಸ್ತಾವಿಕ ನುಡಿಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಮತಿ : ಬಿ.ಎಸ್.ಗಂಗನಳ್ಳಿ ಇವರು ಹೇಳಿದರು. ಪ್ರಾರ್ಥನೆ ಮತ್ತು ಕನ್ನಡ ಗೀತೆಯನ್ನು ಸುಶ್ರಾವ್ಯವಾಗಿ ಪ್ರೊ.ಎಸ್. ಬಿ ತಟಗಾರ ದೈಹಿಕ ಶಿಕ್ಷಣ ನಿರ್ದೇಶಕರು ಹಾಡಿದರು. ವಂದನಾರ್ಪಣೆಯನ್ನು ಶ್ರೀ ಪ್ರಕಾಶ ಅವರು ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಚಾಲಕರಾದ ಡಾ. ಪ್ರವೀಣ್ ಕೋರ್ಬು, ಡಾ. ಪಿ. ಎಂ ಘಂಟಿ, ಡಾ . ವಿ. ಬಿ ನಾಯಕ, ಶಂಸುದ್ದೀನ ನದಾಫ, ಡಾ. ಡಾ. ಪ್ರಮೋದ ಹಳೆಮನಿ, ಡಾ. ಹಣಮಂತ ಚುಳುಕಿ, ಡಾ. ನಾಗೇಶ, ಡಾ. ಜಾಧವ್,ಪ್ರೊ. ಸವಿತಾ ಚೌಗಲಾ, ಇನ್ನುಳಿದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.