SUDINA
News

ಹಿರೇ ಬಾಗೇವಾಡಿ: ನೈಜವಾದ ಇತಿಹಾಸವನ್ನು ಹೊರ ತರಬೇಕಾದರೆ ಪೂರ್ವ ತಯಾರಿ

7th February 2025

ಹಿರೇ ಬಾಗೇವಾಡಿ: ನೈಜವಾದ ಇತಿಹಾಸವನ್ನು ಹೊರ ತರಬೇಕಾದರೆ ಪೂರ್ವ ತಯಾರಿ ಹಾಗೂ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳ ಅವಶ್ಯಕತೆ ಇದೆ ಅಂದಾಗ ಮಾತ್ರ ಆ ಇತಿಹಾಸದ ಬೇರುಗಳು ಆಳವಾಗಿ ಬೇರೂರಲು ಸಾಧ್ಯವಿದೆ ಎಂದು ಹಿರಿಯ ಲೇಖಕ ಹಾಗೂ ಸಾಹಿತಿ -ಸ .ರಾ. ಸುಳಕೂಡೆ ಅಭಿಪ್ರಾಯ ಪಟ್ಟರು

ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿವೀರ ರಾಣಿ ಕಿತ್ತೂರು ಚೆನ್ನಮ್ಮಾಜಿಯ ಅಭಿಮಾನಿ ಬಳಗ ಹಾಗೂ ಹಿರಿಯ ನಾಗರಿಕರ ವೇದಿಕೆ ಇವರಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ 196ನೇ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡಿದರು ಇಡೀ ಭರತ ಖಂಡದಲ್ಲಿ ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಯನ್ನು ಊದಿದ ಮೊಟ್ಟಮೊದಲ ವಿರಾಗ್ರಣಿ ಕಿತ್ತೂರು ಚನ್ನಮ್ಮಾಜಿಯ ಕಿತ್ತೂರು ಸಂಸ್ಥಾನದ ಜನರಲ್ಲಿ ಆಂಗ್ಲರ ದಾಶತ್ಯದ ಸಂಕೋಲೆಯ ಬಗ್ಗೆ ಜನಜಾಗೃತಿ ಮೂಡಿಸಿ ಅವರಲ್ಲಿ ಸ್ವಾಭಿಮಾನದ ಕಿಚ್ಚನ್ನು ಬಡಿದೆಬ್ಬಿಸಿದ ಧೀರ ಮಹಿಳೆಯ ಇತಿಹಾಸವು ಮುಂದಿನ ಪೀಳಿಗೆಗೂ ತಲುಪಬೇಕಾದರೆ ಪ್ರತಿ ಗ್ರಾಮದ ಮನೆ ಮನೆಗಳಲ್ಲೂ ಹಾಗೂ ಮನಮನಗಳಲ್ಲು ಕಿತ್ತೂರಿನ ಜ್ಯೋತಿ ಬೆಳಗಬೇಕು ಎಂದರು ಖಾನಾಪುರದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಡಾ.ಅ.ಬ. ಇಟಗಿ ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ಕಿತ್ತೂರಿನ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಕಿತ್ತೂರಿನ ಇತಿಹಾಸವು ರಾಣಿ ಚೆನ್ನಮ್ಮಾಜಿ ಅವರಿಂದ ಪ್ರಾರಂಭವಾಗಿ ರಾಯಣ್ಣನ ವರೆಗೆ ಮುಗಿದು ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು ಕಿತ್ತೂರಿನಲ್ಲಿ ಸ್ವಾತಂತ್ರ್ಯದ ಕಹಳೆಯನ್ನು ಓದಿದ ವೀರಕೇಸರಿ ಅಮಟೂರು ಬಾಳಪ್ಪ ಸಿಡಿಗುಂಡು ಸರದಾರ ಗುರುಸಿದ್ದಪ್ಪ ಬಿಚ್ಚ ಕತ್ತಿಯ ಚೆನ್ನಬಸಪ್ಪ ವಡ್ಡರ ಯಲ್ಲಣ್ಣ ಗಜ ವೀರ ಸೇರಿದಂತೆ ಇನ್ನೂ ಹಲವಾರು ಸೇನಾನಿಗಳು ಅಮರರಾಗಿದ್ದಾರೆ ಆದರೆ ಅವರ ತ್ಯಾಗ ಬಲಿದಾನಗಳ ಬಗ್ಗೆ ಸರ್ಕಾರ ಹಾಗೂ ಸಾರ್ವಜನಿಕರು ಚಿಂತಕರು ಹೆಚ್ಚು ಒತ್ತು ಕೊಡದಿರುವುದು ವಿಷಾದನೀಯ ಎಂದರು ಕಿತ್ತೂರು ಚೆನ್ನಮ್ಮಾಜಿ ಅವರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿರುವ ಹಿರೇಬಾಗೇವಾಡಿ ಈ ಭಾಗದ ಪ್ರಜ್ಞಾವಂತರು ತಮ್ಮಯ ನಿರಂತರ ಪ್ರಯತ್ನದಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಇಲ್ಲಿಗೆ ತರುವಂತ ಮಹಾನ ಕಾರ್ಯವನ್ನು ಮಾಡಿದ್ದಾರೆ ಅಲ್ಲದೆ ರಾಣಿ ಚನ್ನಮ್ಮಾಜಿ ಅವರ ವಿಜಯೋತ್ಸವ ಕಾರ್ಯ ಕ್ರಮವನ್ನು ಬೆಳಗಾವಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದವಿ ಮಹಾವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕೆಂಬ ಸುತ್ತೋಲೆಯನ್ನು ಕುಲ ಸಚಿವರಿಂದ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಶ್ರೇಯಸ್ಸು ಆರ್ ಸಿ ಯು ಹೋರಾಟ ಸಮಿತಿಗೆ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು ಉಪನ್ಯಾಸಕ ಬಸವರಾಜ ಮಠಪತಿ, ಶಿವಪಾದಯ್ಯ ಕಲ್ಲೋಳಿಮಠ ಬಾಪು ನಾವಲಗಟ್ಟಿ ಉಪ್ಪಿನ ಸರ್ ಮಾತನಾಡಿದರು ಆರ್ ಸಿ ಯು ಹೋರಾಟ ಸಮಿತಿಯ ಸಂಚಾಲಕ ಹಾಗೂ ಸಂಘಟಕ ಮಂಜುನಾಥ ವಸ್ತ್ರದ ಪ್ರಸ್ತಾವಿಕ ನುಡಿಗಳನ್ನು ಆಡಿದರು ಬಾಬು ಗೌಡ ಪಾಟೀಲ ಶಿಕ್ಷಕರಾದ ಶಂಕರ ದೇಸಾಯಿ ವಿದ್ಯಾರ್ಥಿನಿ ಶಾರದಾ ದೇಸಾಯಿ ತಮ್ಮ ಸ್ವರಚಿತ ರಾಣಿ ಚನ್ನಮ್ಮಾಜಿಯವರ ಕುರಿತು ಕವನ ವಾಚನ ಮಾಡಿದರು ರವಿ ಹಲಸಿಗಿ ಪಾಟೀಲ ಗುರುಗಳು ಜಗದೀಶ ಧಾರ್ವಾಡ್ಕರ ಸಂಜಯ ದೇಸಾಯಿ ಮುಂತಾದ ಹಿರಿಯರು ಉಪಸ್ಥಿತರಿದ್ದರು ಬಸವಣ್ಣಪ್ಪ ಗಾಣಗಿ ಅಧ್ಯಕ್ಷತೆ ವಹಿಸಿದ್ದರು ಶಂಕರ ದೇಸಾಯಿ ಸ್ವಾಗತಿಸಿ ವಂದಿಸಿದರು


ಫೋಟೊ ಶೀರ್ಷಿಕೆ

ಹಿರೇಬಾಗೇವಾಡಿ ರಾಣಿ ಚನ್ನಮ್ಮಾಜಿ ಅವರ 196ನೇ ಸಂಸ್ಮರಣಾ ಕಾರ್ಯಕ್ರಮಕ್ಕೆ ಚನ್ನಮಾಜಿಯವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವ ಮೂಲಕ ಗಣ್ಯರು ಚಾಲನೆ ನೀಡಿದರು

News

೧೨ನೆಯ ಶತಮಾನದ ಬಸವಾದಿ ಶರಣರ ವಚನಗಳು ಮನುಷ್ಯರಿಗೆ

21st January 2025

೧೨ನೆಯ ಶತಮಾನದ ಬಸವಾದಿ ಶರಣರ ವಚನಗಳು ಮನುಷ್ಯರಿಗೆ ದಾರಿದೀಪಗಳಾಗಿವೆ. ವ್ಯಕ್ತಿಯ ಯಾವುದೇ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರ ಸಿಗುತ್ತದೆ.ಟಿ ವಿ ಮೊಬೈಲಗಳಿಂದ ಮಕ್ಕಳಲ್ಲಿ ಮೌಲಿಕ ಶಿಕ್ಷಣ ಕಡಿಮೆ ಆಗತ್ತಿರುವ ಈ ಸಂದರ್ಭದಲ್ಲಿ ವಚನಗಳ ಅಧ್ಯಯನದಿಂದ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಶ್ರೀ ಸಿ ಎಂ ಬೂದಿಹಾಳ ಅವರು ಹೇಳಿದರು.

ಅವರು ಜಾಗತಿಕ ಲಿಂಗಾಯತ ಮಹಾಸಭಾ ನಗರ ಘಟಕದಿಂದ ಬೆಳಗಾವಿ ರಾಮತೀರ್ಥ ನಗರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಿ ಮಾತನಾಡಿದರು.

ಪ್ರಾರಂಭದಲ್ಲಿ ಶ್ರೀ ಮೋಹನ ಗುಂಡ್ಲೂರ ವಚನ ಪ್ರಾರ್ಥನೆ ಮಾಡಿದರು. ಮುಖ್ಯ ಗುರುಮಾತೆ ಶ್ರೀಮತಿ ಎಸ್ ಆರ್ ಮೆಳವಂಕಿ ಸ್ವಾಗತಿಸಿದರು. ಶಿಕ್ಷಕ ಶ್ರೀ ಮಹಾಂತೇಶ ವಾಲಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಎಫ್ ಆರ್ ಪಾಟೀಲ ಮಕ್ಕಳ ವಚನ ಕಂಠಪಾಠ ಸ್ಪರ್ಧೆ ನಡೆಸಿದರು. ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಜಗಜಂಪಿ, ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ ಖನಗಣ್ಣಿ ಶ್ರೀಮತಿ ಎಸ್ ಎಸ್ ಸತ್ತೀಗೇರಿ, ಶ್ರೀಮತಿ ಎಸ್ ಪಿ ಅಣ್ಣಿಗೇರಿ ಉಪಸ್ಥಿತರಿದ್ದರು.

News

ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಹೆಚ್ಚಳದಲ್ಲಿ  ಸಂಶೋಧನೆ, ಸಿ.ಎಸ್.ಆರ್ ನಿಧಿ ಬಳಕೆ ಆಗಲಿ; ಉಪರಾಷ್ಟ್ರಪತಿ ಜಗದೀಪ ಧನಕರ್

16th January 2025

ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಹೆಚ್ಚಳದಲ್ಲಿ 

ಸಂಶೋಧನೆ, ಸಿ.ಎಸ್.ಆರ್ ನಿಧಿ ಬಳಕೆ ಆಗಲಿ; ಉಪರಾಷ್ಟ್ರಪತಿ ಜಗದೀಪ ಧನಕರ್


ಧಾರವಾಡ ಜನವರಿ 16: ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದು, ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಹೆಚ್ಚಳಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳಾಗಬೇಕು ಮತ್ತು ಸಿ.ಎಸ್.ಆರ್, ಐ.ಸಿ.ಎ.ಆರ್ ನಿಧಿಗಳ ಬಳಕೆಗೆ ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಆದ್ಯತೆ ನೀಡಬೇಕೆಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಹೇಳಿದರು. 


 ಅವರು ಇಂದು ಬೆಳಿಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 


 ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲಬು, ರೈತರ ತಲಾ ಆದಾಯವನ್ನೂ ಇನ್ನು ಎಂಟುಪಟ್ಟು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಕೃಷಿಯಲ್ಲಿ ಸಾಂಪ್ರದಾಯಿಕತೆ ಉಳಿಸಿಕೊಂಡು ಆಧುನಿಕತೆ ಅಳವಡಿಸಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಉಪರಾಷ್ಟ್ರಪತಿಗಳು ತಿಳಿಸಿದರು. 


 ಕೃಷಿಗೆ ಭಾರತ ಸರಕಾರ ಮೊದಲಿನಿಂದಲೂ ಆದ್ಯತೆ ನೀಡಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಜೊತೆಗೆ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಅನುಸಂದಾನ ಸೇರಿಸಿ, ಮಹತ್ವಪೂರ್ಣಗೊಳಿಸಿದ್ದಾರೆ. ರೈತರ ಹೊಲಗಳು ಸಮೃದ್ಧ ಬೆಳೆಗಳಿಂದ ಬೆಳೆದಾಗ ಮಾತ್ರ ದೇಶವು ಹೊಳೆಯುತ್ತದೆ. ಎಲ್ಲ ಸಂಶೋಧನೆಗಳು ಪ್ರಯೋಗಾಲಯದಿಂದ ನೇರವಾಗಿ ರೈತರ ತೋಟಗಳಿಗೆ ತಲುಪಬೇಕು. ತಜ್ಞರು, ಸಂಶೋಧಕರ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಅಂದಾಗ ಕೃಷಿ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯಗಳ ಸೇವೆ ಸಾರ್ಥಕವಾಗುತ್ತದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು.  


 ಧಾರವಾಡ ಕೃಷಿ ವಿಶ್ವವಿದ್ಯಾಲಯ, ಮಾದರಿ ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗಳಿಸಿದೆ. ಇಲ್ಲಿನ ಸಂಶೋಧನೆಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಇದು ನಮಗೆಲ್ಲ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಅವರು ಹೇಳಿದರು. 


 ಘನ ಉಪಸ್ಥಿತರಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಾತನಾಡಿ, ಭಾರತೀಯರಿಗೆ ಕೃಷಿ ಮೂಲ ಉದ್ಯೋಗವಾಗಿದೆ. ದೇಶದ ಅಭಿವೃದ್ಧಿಗೆ ಇದು ಪೂರಕವಾಗಿದೆ. ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆ ಇರುವಂತೆ ಕೃಷಿಯಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ ಎಂದು ಅವರು ಹೇಳಿದರು.

 

 ಕೃಷಿಯಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿ, ಆದಾಯ ಹೆಚ್ಚಿಸಲು ಕ್ರಮವಹಿಸಬೇಕು. ರೈತರಿಗೆ ಹೆಚ್ಚು ಲಾಭ ಮತ್ತು ಉಪಯುಕ್ತವಾಗುವ ಕೃಷಿ ಸಂಶೋಧನೆಗಳನ್ನು ತಜ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಾಡಬೇಕೆಂದು ಅವರು ತಿಳಿಸಿದರು. 


 ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಜನಸಾಮಾನ್ಯರ ಅದರಲ್ಲೂ ಸಾಮಾನ್ಯ ರೈತರ ವಿಶ್ವವಿದ್ಯಾಲಯವಾಗಿದೆ. ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದೆ. ಕೃಷಿ ಮಹಾವಿದ್ಯಾಲಯಕ್ಕೆ 75 ವರ್ಷ ಪೂರ್ಣಗೊಂಡು, ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. 


 ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಕೇಂದ್ರ ಸರಕಾರದಿಂದ ಹವಾಮಾನ ಸಂಶೋಧನ ಕೇಂದ್ರ ಸ್ಥಾಪಿಸಲು ಅನುಮತಿ ದೊರೆತಿದ್ದು, ಇದು ಸುಮಾರು 175 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ನಿಖರವಾದ ಹವಾಮಾನ ವರದಿಯನ್ನು ನೀಡುತ್ತದೆ. ರೈತರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.

 

 ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೃಷಿ ವಲಯಕ್ಕೆ ಆದ್ಯತೆ ನೀಡಿದ್ದು, ಪ್ರಸಕ್ತ ವರ್ಷ ಕೇಂದ್ರ ಬಜೆಟ್‍ದಲ್ಲಿ 127 ಸಾವಿರ ಕೋಟಿ ರೂ.ಗಳ ಹಣ ಪೂರೈಸಿದೆ. ಸಕ್ಕರೆ ಉತ್ಪಾದನೆ, ತೈಲ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನಗಳ ಹೆಚ್ಚಳಕ್ಕೆ ಅಗತ್ಯವಿರುವ ಕಚ್ಚಾವಸ್ತುಗಳ ಉತ್ಪಾದನೆ, ಸಂಸ್ಕರಣೆ ಪೂರಕವಾದ ಯೋಜನೆ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.


ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್, ಶ್ರೀಮತಿ ಡಾ. ಸುದೇಶ ಜಗದೀಪ ಧನಕರ್ ಅವರು ವೇದಿಕೆಯಲ್ಲಿದ್ದರು.


ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್. ಪಾಟೀಲ ಅವರು ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸವರಾಜ ಕುಂದಗೋಳಮಠ, ರವಿಕುಮಾರ ಮಾಳಿಗೇರ, ಪಾರ್ವತಿ ಕುರ್ಲೆ, ಶ್ರೀನಿವಾಸ ಕೋಟ್ಯಾನ್ ಸೇರಿದಂತೆ ಇತರ ಸದಸ್ಯರು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು, ಕೃಷಿ ವಿವಿ ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು, ಅಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

                ******

News

ಸಂಪ್ರದಾಯಗಳನ್ನು ತಂತ್ರಜ್ಞಾನದೊಡನೆ ಸಂಯೋಜಿಸಿದಾಗ ಹೆಚ್ಚು ಅನುಕೂಲಕರ ಡಾ. ಕಣಚೂರು ಹಾಜಿ ಯು.ಕೆ ಮೋನು.-- ಕಣಚೂರು ಆಯುರ್ವೇದ ಆಸ್ಪತ್ರೆ ಅಂತರ್ಜಾಲ ಸಮಾಲೋಚನಾ ವೇದಿಕೆ.

4th January 2025

ಸಂಪ್ರದಾಯಗಳನ್ನು ತಂತ್ರಜ್ಞಾನದೊಡನೆ ಸಂಯೋಜಿಸಿದಾಗ ಹೆಚ್ಚು ಅನುಕೂಲಕರ ಡಾ. ಕಣಚೂರು ಹಾಜಿ ಯು.ಕೆ ಮೋನು.-- ಕಣಚೂರು ಆಯುರ್ವೇದ ಆಸ್ಪತ್ರೆ ಅಂತರ್ಜಾಲ ಸಮಾಲೋಚನಾ ವೇದಿಕೆ.


ಹೊಸ ಕ್ಯಾಲೆಂಡರ್ ವರ್ಷದ ನೂತನ ಕಾಣಿಕೆಯಾಗಿ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಜನವರಿ ದಿನಾಂಕ 1- 25 ರಂದು ಅಂತರ್ಜಾಲ ಸಮಾಲೋಚನಾ ವೇದಿಕೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.


ದೂರದ ಮೈಸೂರಿನ ರೋಗಿಯೊಬ್ಬರನ್ನು ಈ ವೇದಿಕೆಯ ಮೂಲಕ ಸಂಪರ್ಕಿಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕಾರ್ತಿಕೇಯ ಪ್ರಸಾದರೊಂದಿಗೆ ಸಮಾಲೋಚನೆ ಮಾಡುವುದರ ಮೂಲಕ ಸಂಸ್ಥೆಯ ಚೇರ್ಮನ್ ಡಾ ಹಾಜಿ ಯು ಕೆ ಮೋನು ಅವರ ಹಸ್ತದಿಂದ ಉದ್ಘಾಟನೆ ಮಾಡಲಾಯಿತು.


ರಾಹಿಲಾ ಮತ್ತು ಇರ್ಫಾನರಿಂದ ಪ್ರಾರ್ಥನೆಯಾದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ತಜ್ಞ ವೈದ್ಯರನ್ನೊಳಗೊಂಡ ನಮ್ಮೀ ಆಸ್ಪತ್ರೆಯ ಈ ಹೊಸ ವೇದಿಕೆಯು ಭೌತಿಕ ಭೇಟಿ ಅಸಾಧ್ಯವಾದಾಗ ಅಗತ್ಯ ಸಮಾಲೋಚನೆಗೆ ವರದಾನವಾಗಿದೆ. ತನ್ಮೂಲಕ ರೋಗದ ಲಕ್ಷಣಗಳನ್ನು ಅನುಸರಿಸಿ ರೋಗಿಗೆ ಬೇಕಾದ ಚಿಕಿತ್ಸಾ ಯೋಜನೆಯನ್ನು ಕಾರ್ಯಗತ ಗೊಳಿಸಿ ದಿನಾಂಕ ನಿಗದಿ ಗೊಳಿಸಿ ಮುಂದಿನ ವ್ಯವಸ್ಥೆಗೆ ಅನುವು ಮಾಡಲು ಅನುಕೂಲತೆ ಒದಗಿಸುತ್ತದೆ.ಹಾಗೆಯೇ ಮನೆಯಿಂದಲೇ ತೊಂದರೆಗಳ ವಿವರಣೆ ಸಹಿತ ಅಗತ್ಯ ಚಿಕಿತ್ಸಾ ಮಾಹಿತಿಯನ್ನು ಚಿಕಿತ್ಸಾ ನಂತರವೂ ಪಡೆಯಲು ದಾರಿ ಒದಗಿಸುತ್ತದೆ. ಭಾನುವಾರ ಹೊರತಾಗಿ ವಾರದ ಎಲ್ಲಾದಿನಗಳಲ್ಲೂ ಈ ಸೌಲಭ್ಯ ಲಭ್ಯವಿದ್ದು ಭೌಗೋಳಿಕ ಅಡೆ ತಡೆ ರಹಿತವಾಗಿ ಪ್ರಕೃತಿಯ ಗುಣಪಡಿಸುವ ಶಕ್ತಿಯ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದರು


ಅನಂತರ ಸಂಸ್ಥೆಯ ನಿರ್ದೇಶಕ ಶ್ರೀ ಅಬ್ದುಲ್ ರೆಹಮಾನ್ ಅವರು ಮಾತನಾಡುತ್ತಾ ನಮ್ಮೀ ನೂತನ ಆಯುರ್ವೇದ ಸಂಸ್ಥೆಯು ಈಗಾಗಲೇ ಬಹಳಷ್ಟು ಕಠಿಣತರವಾದ ರೋಗಿಗಳನ್ನೂ ಚಿಕಿತ್ಸಿಸಲು ಸಮರ್ಥವಾಗಿದ್ದು ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ದೂರದೂರಿನ ರೋಗಿಗಳಿಗೂ ಕ್ಷಣಾರ್ಧದಲ್ಲಿ ಸಂಪರ್ಕಿಸಲು ಸಾಧ್ಯವಾಗುವಂತೆ ಜಾಲತಾಣ ಸಮಾಲೋಚನಾ ವ್ಯವಸ್ಥೆಯನ್ನು ಹೊಂದಿದ್ದು ನಮ್ಮ‌ ಮಿಂಚಂಚೆ econsultayurveda@kanachur.edu.in ಹಾಗೂ 0824-2203331 ಅಥವಾ 2203332 ಮುಖಾಂತರ ಬಳಸ ಬಹುದಾಗಿದೆ ಎಂದರು.


ಸಂಸ್ಥೆಯ ಮುಖ್ಯ ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ಆಧುನಿಕ‌ ತಂತ್ರ ಜ್ಞಾನದ ಸಮರ್ಥ ಬಳೆಯ ಬಗೆಗೆ ಸ್ವರಚಿತ ಮುಕ್ತಕ ವಾಚಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


ಪ್ರಾಚಾರ್ಯೆ ಡಾ ವಿದ್ಯಾಪ್ರಭಾ ಸ್ವಾಗತಿಸಿ ಸಂಸ್ಥೆಯ ಲಭ್ಯ ಸೌಕರ್ಯಗಳ ಪಕ್ಷಿನೋಟ ನೀಡಿದರು.


ಸಂಸ್ಥೆಯ ಆಢಳಿತಾಧಿಕಾರಿ ಡಾ .ರೋಹನ್ ಮೋನಿಸ್ ಸಹಿತವಾಗಿ ಸರ್ವ ವೈದ್ಯರು ಹಾಗೂ ಮತ್ತಿತರ ಪರಚಾರಿಕೆಯರು ಉಪಸ್ಥಿತರಿದ್ದರು

@ಡಾ ಸುರೇಶ ನೆಗಳಗುಳಿ

ಸುಹಾಸ

ಬಜಾಲ್ ಪಕ್ಕಲಡ್ಕ ಮಂಗಳೂರು

9448216674

News

ಸನ್ 2025-2030 ಸಾಲಕರೀತಾ ಶ್ರೀ ತುಕಾರಾಂ ಕೋ. ಆಪ್. ಬಂಕೇಚಿ ನಿವಡನೂಕ ಪ್ರಕ್ರಿಯಾ ನಿವಡನೂಕ ಅಧಿಕಾರಿ ಶ್ರೀ. ಸಿ. ಆರ್. ಪಾಟೀಲ್ ಯಾಂಚ್ಯಾ ನಿರ್ಧಾರನಾಖಾಲಿ ಪೂರ್ಣ ಹೋವುನ್ ದಿ. 3-1-2025 ರೋಜಿ 2025-2030 ಸಾಲಸಾಠಿ ಖಾಲಿ ಸಂಚಾಲಕ ಸಂಚಿಕೆ ಅವಿರೋಧ ಆಯ್ಕೆ ಮಾಡಿಕೊಂಡು

3rd January 2025

ಸನ್ 2025-2030 ಸಾಲಕರೀತಾ ಶ್ರೀ ತುಕಾರಾಂ ಕೋ. ಆಪ್. ಬಂಕೇಚಿ ನಿವಡನೂಕ ಪ್ರಕ್ರಿಯಾ ನಿವಡನೂಕ ಅಧಿಕಾರಿ ಶ್ರೀ. ಸಿ. ಆರ್. ಪಾಟೀಲ್ ಯಾಂಚ್ಯಾ ನಿರ್ಧಾರನಾಖಾಲಿ ಪೂರ್ಣ ಹೋವುನ್ ದಿ. 3-1-2025 ರೋಜಿ 2025-2030 ಸಾಲಸಾಠಿ ಖಾಲಿ ಸಂಚಾಲಕ ಸಂಚಿಕೆ ಅವಿರೋಧ ಆಯ್ಕೆ ಮಾಡಿಕೊಂಡು


1) ಶ್ರೀ. ಪ್ರಕಾಶ್ ಆಪಾಜಿ ಮರಗಾಳೆ


2) ಶ್ರೀ. ಪ್ರದೀಪ್ ಶಂಕರರಾವ್ ಊಳಕರ್


3) ಶ್ರೀ. ರಾಜೇಂದ್ರ ಯಶವಂತ ಪವಾರ


4) ಶ್ರೀ. ಅನಂತ ರಾಮಚಂದ್ರ ಜಾಂಗಳೆ


5) ಶ್ರೀ. ನಾರಾಯಣ ಕೃಷ್ಣಾಜಿ ಪಾಟೀಲ


6) ಶ್ರೀ. ಪ್ರವೀಣ ವಸಂತರಾವ ಜಾಧವ


7) ಶ್ರೀ. ರಾಜೂ ಯಶವಂತ ಮರ್ವೆ


8) ಶ್ರೀ. ಮೋಹನ್ ಪರಶರಾಮ್ ಕಾಂಗ್ರೆಸ್


9) ಶ್ರೀ. ಮದನ್ ಬಾಬೂರಾವ್ ಬಾಮಣೆ


10) ಶ್ರೀ. ಸಂಜಯ ಕಲ್ಲಪ್ಪ ಬಾಳೆಕುಂದ್ರಿ


11) ಶ್ರೀ. ಸುನಿಲ್ ನಾರಾಯಣ ಆನಂದಾಚೆ


12) ಶ್ರೀ. ಸಂದೀಪ್ ಶ್ರೀಧರ್ ಮುತಕೇಕರ್


13) ಸೌ. ವಂದನಾ ಅಶೋಕ್ ಧಾಮನೇಕರ್


14) ಸೌ. ಪಲ್ಲವಿ ಲಕ್ಷ್ಮಣ ಸರನೋಬತ್


ಸಲ್ಕುಂದೆಲ್ಕಾಸ್


ವ್ಯವಸ್ಥಾಪಕರು ಶ್ರೀ ತುಕಾರಾಂ ಸಹಕಾರಿ ಬ್ಯಾಂಕ್ ಲಿಮಿಟೆಡ್ ಶಹಾಪುರ, ಬೆಳಗಾವಿ

News

ಸಂತೃಪ್ತಿ ಸಾಧನೆಯ 'ಹೇಮಸಿರಿ' ವ್ಯಕ್ತಿ ತನ್ನ ಜೀವನದ ವೃತ್ತಾಂತವನ್ನು ತಾನೇ ಬರೆದರೆ ಅದನ್ನು ಆತ್ಮಕಥೆ, ಆತ್ಮವೃತ್ತ, ಆತ್ಮಚರಿತ್ರೆ ಎನ್ನುವರು.

26th December 2024

ಸಂತೃಪ್ತಿ ಸಾಧನೆಯ 'ಹೇಮಸಿರಿ'

ವ್ಯಕ್ತಿ ತನ್ನ ಜೀವನದ ವೃತ್ತಾಂತವನ್ನು ತಾನೇ ಬರೆದರೆ ಅದನ್ನು ಆತ್ಮಕಥೆ, ಆತ್ಮವೃತ್ತ, ಆತ್ಮಚರಿತ್ರೆ ಎನ್ನುವರು. ವ್ಯಕ್ತಿ ತನ್ನನ್ನು ತಾನು ಚಿರಸ್ಮರಣೀಯ ಮಾಡಿಕೊಳ್ಳುವ ಪ್ರಯತ್ನವನ್ನು ಈ ಬಗೆಯ ಸಾಹಿತ್ಯದಲ್ಲಿ ಕಾಣಬಹುದು. ತನ್ನ ಜೀವನದ ಸಿಹಿಯಾದ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ಕಹಿ ನೆನಪುಗಳನ್ನು ಕಳೆದುಕೊಳ್ಳುವುದಕ್ಕಾಗಿ, ಕಲಾಮಯವಾದ ಜೀವನ ಚಿತ್ರವನ್ನು ಕೊಡುವುದಕ್ಕಾಗಿ ಬರೆದಿಡುವುದು ಸಹ ಒಂದು ಉದ್ದೇಶ ಎನಿಸುವದು. ಆತ್ಮಕಥೆ ಬರವಣಿಗೆ ಎಂದರೆ ಸತ್ಯಶೋಧನೆಯ ಹಾದಿ ಜೀವನದ ಹಾದಿಯಲ್ಲಿ ಕಂಡದ್ದನ್ನು ಕಂಡ ಹಾಗೆ ದಾಖಲಿಸಬೇಕು. ಕಲಾತ್ಮಕವಾಗಿ, ನೈಜವಾಗಿ ರಚಿಸಿದ ವ್ಯಕ್ತಿಯ ಜೀವನ ಚಿತ್ರದ ಕೃತಿ ಓದುವಾಗ ಆ ವ್ಯಕ್ತಿಯೊಡನೆ ಸಂಭಾಷಣೆ ಮಾಡುತ್ತಿದ್ದೇವೆ, ವ್ಯಕ್ತಿಯೊಡನೆ ಇದ್ದೇವೆ ಎಂಬ ಭಾವನೆ ಬಂದರೆ ಉತ್ತಮ ಆತ್ಮಕಥೆ ಎನಿಸುವದು.

ಬೆಳಗಾವಿ ಜಿಲ್ಲೆಯ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಕವಯಿತ್ರಿ, ವಿಶ್ರಾಂತ ಪ್ರಾಚಾರ್ಯೆ, ಸಮಾಜಮುಖಿ ಚಿಂತಕಿ, ಪಂಚಭಾಷಾ ಪ್ರವೀಣೆ, ಸಂಘಟಕಿ ಡಾ. ಹೇಮಾವತಿ ಸೊನೊಳ್ಳಿ ಅವರ ಆತ್ಮಚರಿತ್ರೆ 'ಹೇಮಸಿರಿ' ಪ್ರಕಟವಾಗಿದೆ. ಅವರ ಬಹುಮುಖ ವ್ಯಕ್ತಿತ್ವವನ್ನು ಆತ್ಮಕಥೆಯಲ್ಲಿ ಕಾಣಬಹುದು ಇದಕ್ಕೆ ಸಾಕ್ಷಿಯಾಗಿ ಬೆಳಗಾವಿ ಜಿಲ್ಲೆಯ ಅನೇಕ ಲೇಖಕಿಯರು ಅವರನ್ನು ಅಪರೂಪದ ಸ್ನೇಹಜೀವಿ, ಸವಿಮಾತಿನ ಸರಸಗಾತಿ, ಕ್ರಿಯಾಶೀಲೆ, ಸಂಘಟನಾ ಚತುರೆ, ಶಿಕ್ಷಣ ತಜ್ಞೆ, ಬಂಗಾರದ ಸ್ವಭಾವ, ಮಹಾದಾನಿ ಎಂದಿದ್ದಾರೆ. ಹೇಮಸಿರಿಯ ಹೇಮಕ್ಕಳಿಗೆ ಕವಯತ್ರಿ ಶ್ರೀಮತಿ. ಹೀರಾ ಚೌಗಲೆ ಅವರು ಡಾ|| ಹೇಮಾವತಿ ಅವರ ಬಗ್ಗೆ 'ಒಡತಿ' ಎಂಬ ಪ್ರಾಸಬದ್ಧ ಕವನ ರಚಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಜನಿಸಿ, 1984 ರಲ್ಲಿ ರಾಜ್ಯಶಾಸ್ತ್ರ ಎಂ.ಎ ಪದವಿ ಹೊಂದಿ ನಂದಗಡದ ಎನ್.ಆರ್.ಇ ಸಂಸ್ಥೆಯ ಮಹಾತ್ಮಾಗಾಂಧಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಪ್ರಾರಂಭಿಸಿ 2014 ರಲ್ಲಿ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತಿ ಹೊಂದಿದರು. ವಿದ್ಯಾರ್ಥಿಗಳ ಅಚ್ಚು ಮೆಚ್ಚನ ಬೋಧಕರಾದರು. ನಂತರ ಎರಡು ಮಹಾ ವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರ ಜೀವನಾದರ್ಶಗಳು ಶರಣರ ತತ್ವಗಳು. ತಾಳ್ಮೆ, ಸಹನೆ ಅವರ ಮಿತ್ರರು ಕೀಳರಿಮೆಯ ತೊರೆದು ಅತ್ಮ ವಿಶ್ವಾಸದಿಂದ ಕಾರ್ಯಗಳಲ್ಲಿ ತೊಡಗಿರುತ್ತಾರೆ. 'ನಾಮಾಡಿದೆ. ಎಂಬ ಭಾವನೆ ಇರಬಾರದು' 'ಎನಗಿಂತ ಕಿರಿಯರಿಲ್ಲ' ' ಉಪಕಾರಸ್ಮತಿ' 'ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ' ಇರುವ ಸ್ಥಿತಪ್ರಜ್ಞತೆ 'ಪ್ರತ್ಯುಪಕಾರ ಬಯಸದಿರುವದು: ಅವರ ಜೀವನದ ಮೌಲ್ಯಗಳು.

'ಮಹಿಳಾ ಸಬಲೀಕರಣ' 'ಏಡ್ಡ ಜಾಗೃತಿ' 'ಮಹಿಳೆಯರಲ್ಲಿ ಕಾನೂನಿನ ಅರಿವು' ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಸಾಮಾಜಿಕ ಕಳಕಳಿಯ 'ಪ್ರಥ್ವಿ ಪೌಂಡೇಶನ್' ಸ್ಥಾಪಿಸಿದ್ದಾರೆ. ಕೊರೊನಾ ಸಮಯದಲ್ಲಿ ಜನ ಜಾಗೃತಿಯನ್ನು ಮಾಧ್ಯಮಗಳ ಮೂಲಕ ಕೈಗೊಂಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿ ಸರಕಾರದಿಂದ ಪರಿಹಾರ ಒದಗಿಸಿದ್ದಾರೆ.

ಹೇಮಾವತಿ ಅವರ ಹವ್ಯಾಸಗಳೆಂದರೆ ಸಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸುವದು, ಭಾಷಣ, ಕಾರ್ಯಕ್ರಮ ನಿರೂಪಣೆ, ನಿರ್ಣಾಯಕಿ, ಬಡವರಿಗೆ. ಅಸಹಾಯಕರಿಗೆ ಸಹಾಯ ಹಸ್ತ, ಬಡ ಮಕ್ಕಳಿಗೆ ಸಹಾಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಕೊಡುವುದು.

ವೈಚಾರಿಕ ಲೇಖನಗಳು, ಪ್ರಬಂಧಗಳು, ಕವನ, ಚುಟುಕು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕವನ ಸಂಕಲನಗಳು, ಕಥಾ ಸಂಕಲನ, ವೈಚಾರಿಕ ಲೇಖನಗಳ ಸಂಕಲನಗಳು, ಸಂಪಾದನಾ ಕೃತಿಗಳು ಪ್ರಕಟವಾಗಿದೆ.

ಡಾ|| ಹೇಮಾವತಿಯವರದು ಸಂತೃಪ್ತ ಕುಟುಂಬ ಪತಿ ನಿವೃತ್ತ ಇನ್ಸೂರನ್ಸ್ ಕಂಪನಿ ಶಾಖಾಧಿಕಾರಿಗಳು ಇಬ್ಬರು ಪುತ್ರಿಯರು, ಡಾಕ್ಟರ್ ಮತ್ತು ಇಂಜನೀಯರ್ ಆಗಿದ್ದಾರೆ. ಪುತ್ರ ದೆಹಲಿ ಸುಪ್ರೀಂ ಕೋರ್ಟನಲ್ಲಿ ವಕೀಲರು.

ಇವರ ಸಾಹಿತ್ಯ ರಚನೆಗೆ ಪ್ರೇರಣೆ ಜನಪದದ ಹಾಡುಗಳು, ಶರಣರ ವಚನಗಳು, ಸರ್ವಜ್ಞನ ತ್ರಿಪದಿಗಳು ಮತ್ತು ದಾಸರ ಪದಗಳು.ತಮಗೆ ಸಹಾಯ-ಸಹಕಾರ-ಸೌಹಾರ್ದತೆಯನ್ನು ನೀಡಿದ ಕುಟುಂಬದ ఎల్ల ಸದಸ್ಯರನ್ನು ಗೆಳತಿಯರನ್ನು, ಮಾರ್ಗದರ್ಶಕರನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಜನ್ಮ ಕ್ಷೇತ್ರ. ಕಾರ್ಯ ಕ್ಷೇತ್ರ ಖಾನಾಪೂರ ತಾಲೂಕು, ಶಿಕ್ಷಣ ಕ್ಷೇತ್ರ ಕಿತ್ತೂರ. ಪತಿಯ ಊರು ಗೋಕಾಕ, ಸದ್ಯದ ವಾಸಸ್ಥಳ ಬೆಳಗಾವಿ ಹೀಗೆ ನಾಲ್ಕು ತಾಲುಕೂಗಳ ನಂಟನ್ನು ಹೊಂದಿದ್ದಾರೆ.

ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ, ರಾಜ್ಯ ಮಟ್ಟದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗೀಯಾಗಿದ್ದಾರೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ರಾಜ್ಯ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಖಾನಾಪೂರ ತಾಲೂಕ 7 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಈ ಎಲ್ಲ ವಿಷಯಗಳನ್ನು ಸವಿಸ್ತಾರವಾಗಿ ಒಳಗೊಂಡ ಅವರ 'ಹೇಮಸಿರಿ' ಡಾ|| ಹೇಮಾವತಿ ಅವರ ಸಮಗ್ರ ಪಾರದರ್ಶಕ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ನಿರೂಪಣೆ ಸರಳ ಆತ್ಮೀಯವಾಗಿದೆ.ಯು ಎನ್ ಸಂಗನಾಳಮಠ

ವಿಶ್ರಾಂತ ಪ್ರಾಚಾರ್ಯರು

ಸಾಹಿತಿಗಳು ಹೊನ್ನಾಳಿ 

ಜಿ ದಾವಣಗೆರೆ

News

ಮೆಗಾ ಕಾರ್ನಿವಲ್ ಈವೆಂಟ್‌ನೊಂದಿಗೆ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಪಿನ್‌ಗಳು ಮತ್ತು ಲೇನ್‌ಗಳು ಬೆಳಗಾವಿ: ಗೌರವಾನ್ವಿತ ಗೊಗ್ಟೆ ಗ್ರೂಪ್ ಒಡೆತನದ ಪಿನ್ಸ್ ಮತ್ತು ಲೇನ್ಸ್ ತನ್ನ ಮೊದಲ ವಾರ್ಷಿಕೋತ್ಸವವನ್ನು ಘೋಷಿಸಲು ರೋಮಾಂಚನಗೊಂಡಿದೆ, ಗೋಗ್ಟೆ ಕಾಂಪೌಂಡ್‌ನಲ್ಲಿ ಮೆಗಾ ಕಾರ್ನಿವಲ್ ಕಾರ್ಯಕ್ರಮಕ್ಕೆ ಕುಟುಂಬಗಳು ಮತ್ತು ವಿನೋದ-ಅನ್ವೇಷಕರನ್ನು ಆಹ್ವಾನಿಸುತ್ತದೆ. ಕಾಕತಿ. ಉತ್ಸಾಹ, ವಿನೋದ ಮತ್ತು ಸಂಭ್ರಮದಿಂದ ತುಂಬಿದ ದಿನಕ್ಕಾಗಿ ಡಿಸೆಂಬರ್ 28, 2024 ರಂದು 11:00 am - 11:00 pm ವರೆಗೆ ನಮ್ಮೊಂದಿಗೆ ಸೇರಿ!     ಕುಟುಂಬಗಳು ಅತ್ಯಾಕರ್ಷಕ ಚಟುವಟಿಕೆಗಳು ಮತ್ತು ಆಕರ್ಷಣೆಗಳ ಒಂದು ಶ್ರೇಣಿಯನ್ನು ಎದುರುನೋಡಬಹುದು: ಮಕ್ಕಳಿಗಾಗಿ ಸ್ಟಾಲ್‌ಗಳು: ವಿನೋದ ತುಂಬಿದ ಆಟಗಳು ಮತ್ತು ಚಟುವಟಿಕೆಗಳನ್ನು ನೀಡುವ ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂತೋಷಕರ ಮಳಿಗೆಗಳು. ಪ್ರೀತಿಯ ಮ್ಯಾಸ್ಕಾಟ್‌ಗಳನ್ನು ಭೇಟಿ ಮಾಡಿ: ಮಕ್ಕಳು ಮತ್ತು ವಯಸ್ಕರು ದಿನವಿಡೀ ತಮ್ಮ ನೆಚ್ಚಿನ ಮ್ಯಾಸ್ಕಾಟ್‌ಗಳನ್ನು ಭೇಟಿಯಾಗುವುದನ್ನು ಆನಂದಿಸಬಹುದು. ರುಚಿಕರವಾದ ಕಾಂಬೊ ಆಫರ್‌ಗಳು ವಿವಿಧ ರುಚಿಕರವಾದ ಆಹಾರ ಆಯ್ಕೆಗಳಲ್ಲಿ ನಮ್ಮ ಅದ್ಭುತ ಕಾಂಬೊ ಕೊಡುಗೆಗಳೊಂದಿಗೆ ನಿಮ್ಮ ಕಡುಬಯಕೆಗಳನ್ನು ಪೂರೈಸಿಕೊಳ್ಳಿ. ಉಚಿತ ಪ್ರವೇಶ ನಾವು ಎಲ್ಲರಿಗೂ ಉಚಿತ ಪ್ರವೇಶದೊಂದಿಗೆ ನಮ್ಮ ಬಾಗಿಲು ತೆರೆಯುತ್ತಿದ್ದೇವೆ, ಹಬ್ಬಗಳಲ್ಲಿ ಸೇರಲು ಪ್ರತಿಯೊಬ್ಬರನ್ನು ಸ್ವಾಗತಿಸುತ್ತೇವೆ. ಎಂಗೇಜಿಂಗ್ ಫನ್ ಗೇಮ್‌ಗಳು ಎಲ್ಲಾ ವಯಸ್ಸಿನ ಪಾಲ್ಗೊಳ್ಳುವವರನ್ನು ಮನರಂಜಿಸಲು ವಿನ್ಯಾಸಗೊಳಿಸಲಾದ ಉತ್ಸಾಹಭರಿತ ಆಟಗಳ ವಿಂಗಡಣೆಯಲ್ಲಿ ಭಾಗವಹಿಸಿ. ವಿಶೇಷ ಆರ್ಕೇಡ್ ರಿಯಾಯಿತಿಗಳು ಎಲ್ಲಾ ಆರ್ಕೇಡ್ ಆಟಗಳ ಮೇಲೆ ರಿಯಾಯಿತಿಯನ್ನು ಆನಂದಿಸಿ, ಅಂತ್ಯವಿಲ್ಲದಂತೆ ಖಾತ್ರಿಪಡಿಸಿಕೊಳ್ಳಿ ಮನರಂಜನೆ ಮತ್ತು ರೋಚಕತೆ. ದಿನದ ಪ್ರಮುಖ ಅಂಶವೆಂದರೆ ಮೆಗಾ ಡ್ರಾ ಆಗಿದ್ದು, ಅಲ್ಲಿ ಭಾಗವಹಿಸುವವರು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ ನಂಬಲಾಗದ ಬಹುಮಾನಗಳು, ಸೇರಿದಂತೆ: ಹೋಂಡಾ ಆಕ್ಟಿವಾ, ಐಫೋನ್ 16, ಲ್ಯಾಪ್‌ಟಾಪ್.   ಕಳೆದ ವರ್ಷದಲ್ಲಿ ನಮ್ಮನ್ನು ಬೆಂಬಲಿಸಿದ ನಮ್ಮ ಅದ್ಭುತ ಪೋಷಕರಿಗೆ ಕೃತಜ್ಞತೆಯನ್ನು ತೋರಿಸಲು ಈ ಆಚರಣೆಯು ನಮ್ಮ ಮಾರ್ಗವಾಗಿದೆ" ಎಂದು ಹೇಳುತ್ತಾರೆ "ಮನೋರಂಜನೆ, ಬಹುಮಾನಗಳು ಮತ್ತು ಸಂತೋಷದಿಂದ ತುಂಬಿದ ದಿನವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ, ಮರೆಯಲಾಗದ ನೆನಪುಗಳನ್ನು ಖಾತ್ರಿಪಡಿಸಿಕೊಳ್ಳುತ್ತೇವೆ. ಕುಟುಂಬಗಳು." ಪ್ರಾರಂಭದಿಂದಲೂ, ಪಿನ್‌ಗಳು ಮತ್ತು ಲೇನ್ಸ್ ಗೊಗ್ಟೆ ಕಾಂಪೌಂಡ್‌ನಲ್ಲಿ ಕೌಟುಂಬಿಕ ಮನರಂಜನೆಯ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸಲು ಸಂತೋಷವಾಗಿದೆ. ಮೊದಲ ವಾರ್ಷಿಕೋತ್ಸವದ ಮೆಗಾ ಕಾರ್ನೀವಲ್ ಸಮುದಾಯ ಸಂಬಂಧಗಳನ್ನು ಬಲಪಡಿಸುವ ಮತ್ತು ಎಲ್ಲಾ ಪೋಷಕರಿಗೆ ಮೆಚ್ಚುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ನಿಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಿ ಮತ್ತು ಒಟ್ಟುಗೂಡಿಸಿ ಸ್ಮರಣೀಯ ದಿನಕ್ಕಾಗಿ ನಿಮ್ಮ ಕುಟುಂಬ ಮತ್ತು ಸ್ನೇಹಿತರು ಈ ಗಮನಾರ್ಹ ಘಟನೆಯ ಭಾಗವಾಗಲು ಮತ್ತು ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: +91 9364106562 ### ಪಿನ್‌ಗಳು ಮತ್ತು ಲೇನ್‌ಗಳ ಬಗ್ಗೆ: ಪಿನ್‌ಗಳು ಮತ್ತು ಲೇನ್ಸ್ ಎಂಬುದು ಗೋಗ್ಟೆ ಕಾಂಪೌಂಡ್‌ನಲ್ಲಿರುವ ಪ್ರಮುಖ ಕೌಟುಂಬಿಕ ಮನರಂಜನಾ ಕೇಂದ್ರವಾಗಿದೆ, ಇದು ಬೆಳಗಾವಿಯ ಕಾಕತಿಯಲ್ಲಿ ಆರ್ಕೇಡ್ ಆಟಗಳು, ಬೌಲಿಂಗ್, ಸೇರಿದಂತೆ ಎಲ್ಲಾ ವಯೋಮಾನದವರಿಗೆ ವಿವಿಧ ರೋಮಾಂಚಕಾರಿ ಚಟುವಟಿಕೆಗಳನ್ನು ಒದಗಿಸುತ್ತದೆ. ಮತ್ತು ಹೆಚ್ಚು. ಗೋಗ್ಟೆ ಗ್ರೂಪ್ ಒಡೆತನದ ಮತ್ತು ನಿರ್ವಹಿಸುತ್ತಿರುವ ಪಿನ್‌ಗಳು ಮತ್ತು ಲೇನ್‌ಗಳು ಕುಟುಂಬದ ವಿನೋದಕ್ಕಾಗಿ ಆರೋಗ್ಯಕರ ಮತ್ತು ತೊಡಗಿಸಿಕೊಳ್ಳುವ ವಾತಾವರಣವನ್ನು ಒದಗಿಸುವಲ್ಲಿ ಹೆಮ್ಮೆಪಡುತ್ತವೆ. ಪಿನ್‌ಗಳು ಮತ್ತು ಲೇನ್‌ಗಳು ಒಂದು ದಿನಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಂತೆ ಡಿಸೆಂಬರ್ 28 ರಂದು ಬನ್ನಿ ಮತ್ತು ನಮ್ಮೊಂದಿಗೆ ಆಚರಿಸಿ ವಿನೋದ, ಉತ್ಸಾಹ ಮತ್ತು ಮರೆಯಲಾಗದ ನೆನಪುಗಳು!

26th December 2024

ಮೆಗಾ ಕಾರ್ನಿವಲ್ ಈವೆಂಟ್‌ನೊಂದಿಗೆ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಪಿನ್‌ಗಳು ಮತ್ತು ಲೇನ್‌ಗಳು

 ಬೆಳಗಾವಿ: ಗೌರವಾನ್ವಿತ ಗೊಗ್ಟೆ ಗ್ರೂಪ್ ಒಡೆತನದ ಪಿನ್ಸ್ ಮತ್ತು ಲೇನ್ಸ್ ತನ್ನ ಮೊದಲ ವಾರ್ಷಿಕೋತ್ಸವವನ್ನು ಘೋಷಿಸಲು ರೋಮಾಂಚನಗೊಂಡಿದೆ, ಗೋಗ್ಟೆ ಕಾಂಪೌಂಡ್‌ನಲ್ಲಿ ಮೆಗಾ ಕಾರ್ನಿವಲ್ ಕಾರ್ಯಕ್ರಮಕ್ಕೆ ಕುಟುಂಬಗಳು ಮತ್ತು ವಿನೋದ-ಅನ್ವೇಷಕರನ್ನು ಆಹ್ವಾನಿಸುತ್ತದೆ.

 ಕಾಕತಿ. ಉತ್ಸಾಹ, ವಿನೋದ ಮತ್ತು ಸಂಭ್ರಮದಿಂದ ತುಂಬಿದ ದಿನಕ್ಕಾಗಿ ಡಿಸೆಂಬರ್ 28, 2024 ರಂದು 11:00 am - 11:00 pm ವರೆಗೆ ನಮ್ಮೊಂದಿಗೆ ಸೇರಿ!

   ಕುಟುಂಬಗಳು ಅತ್ಯಾಕರ್ಷಕ ಚಟುವಟಿಕೆಗಳು ಮತ್ತು ಆಕರ್ಷಣೆಗಳ ಒಂದು ಶ್ರೇಣಿಯನ್ನು ಎದುರುನೋಡಬಹುದು:

 ಮಕ್ಕಳಿಗಾಗಿ ಸ್ಟಾಲ್‌ಗಳು: ವಿನೋದ ತುಂಬಿದ ಆಟಗಳು ಮತ್ತು ಚಟುವಟಿಕೆಗಳನ್ನು ನೀಡುವ ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂತೋಷಕರ ಮಳಿಗೆಗಳು. ಪ್ರೀತಿಯ ಮ್ಯಾಸ್ಕಾಟ್‌ಗಳನ್ನು ಭೇಟಿ ಮಾಡಿ: ಮಕ್ಕಳು ಮತ್ತು ವಯಸ್ಕರು ದಿನವಿಡೀ ತಮ್ಮ ನೆಚ್ಚಿನ ಮ್ಯಾಸ್ಕಾಟ್‌ಗಳನ್ನು ಭೇಟಿಯಾಗುವುದನ್ನು ಆನಂದಿಸಬಹುದು. ರುಚಿಕರವಾದ ಕಾಂಬೊ ಆಫರ್‌ಗಳು ವಿವಿಧ ರುಚಿಕರವಾದ ಆಹಾರ ಆಯ್ಕೆಗಳಲ್ಲಿ ನಮ್ಮ ಅದ್ಭುತ ಕಾಂಬೊ ಕೊಡುಗೆಗಳೊಂದಿಗೆ ನಿಮ್ಮ ಕಡುಬಯಕೆಗಳನ್ನು ಪೂರೈಸಿಕೊಳ್ಳಿ. ಉಚಿತ ಪ್ರವೇಶ ನಾವು ಎಲ್ಲರಿಗೂ ಉಚಿತ ಪ್ರವೇಶದೊಂದಿಗೆ ನಮ್ಮ ಬಾಗಿಲು ತೆರೆಯುತ್ತಿದ್ದೇವೆ, ಹಬ್ಬಗಳಲ್ಲಿ ಸೇರಲು ಪ್ರತಿಯೊಬ್ಬರನ್ನು ಸ್ವಾಗತಿಸುತ್ತೇವೆ.

 ಎಂಗೇಜಿಂಗ್ ಫನ್ ಗೇಮ್‌ಗಳು ಎಲ್ಲಾ ವಯಸ್ಸಿನ ಪಾಲ್ಗೊಳ್ಳುವವರನ್ನು ಮನರಂಜಿಸಲು ವಿನ್ಯಾಸಗೊಳಿಸಲಾದ ಉತ್ಸಾಹಭರಿತ ಆಟಗಳ ವಿಂಗಡಣೆಯಲ್ಲಿ ಭಾಗವಹಿಸಿ. ವಿಶೇಷ ಆರ್ಕೇಡ್ ರಿಯಾಯಿತಿಗಳು ಎಲ್ಲಾ ಆರ್ಕೇಡ್ ಆಟಗಳ ಮೇಲೆ ರಿಯಾಯಿತಿಯನ್ನು ಆನಂದಿಸಿ, ಅಂತ್ಯವಿಲ್ಲದಂತೆ ಖಾತ್ರಿಪಡಿಸಿಕೊಳ್ಳಿ

 ಮನರಂಜನೆ ಮತ್ತು ರೋಚಕತೆ. ದಿನದ ಪ್ರಮುಖ ಅಂಶವೆಂದರೆ ಮೆಗಾ ಡ್ರಾ ಆಗಿದ್ದು, ಅಲ್ಲಿ ಭಾಗವಹಿಸುವವರು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ

 ನಂಬಲಾಗದ ಬಹುಮಾನಗಳು, ಸೇರಿದಂತೆ: ಹೋಂಡಾ ಆಕ್ಟಿವಾ, ಐಫೋನ್ 16, ಲ್ಯಾಪ್‌ಟಾಪ್.

  ಕಳೆದ ವರ್ಷದಲ್ಲಿ ನಮ್ಮನ್ನು ಬೆಂಬಲಿಸಿದ ನಮ್ಮ ಅದ್ಭುತ ಪೋಷಕರಿಗೆ ಕೃತಜ್ಞತೆಯನ್ನು ತೋರಿಸಲು ಈ ಆಚರಣೆಯು ನಮ್ಮ ಮಾರ್ಗವಾಗಿದೆ" ಎಂದು ಹೇಳುತ್ತಾರೆ "ಮನೋರಂಜನೆ, ಬಹುಮಾನಗಳು ಮತ್ತು ಸಂತೋಷದಿಂದ ತುಂಬಿದ ದಿನವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ, ಮರೆಯಲಾಗದ ನೆನಪುಗಳನ್ನು ಖಾತ್ರಿಪಡಿಸಿಕೊಳ್ಳುತ್ತೇವೆ.

 ಕುಟುಂಬಗಳು." ಪ್ರಾರಂಭದಿಂದಲೂ, ಪಿನ್‌ಗಳು ಮತ್ತು ಲೇನ್ಸ್ ಗೊಗ್ಟೆ ಕಾಂಪೌಂಡ್‌ನಲ್ಲಿ ಕೌಟುಂಬಿಕ ಮನರಂಜನೆಯ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸಲು ಸಂತೋಷವಾಗಿದೆ. ಮೊದಲ ವಾರ್ಷಿಕೋತ್ಸವದ ಮೆಗಾ ಕಾರ್ನೀವಲ್ ಸಮುದಾಯ ಸಂಬಂಧಗಳನ್ನು ಬಲಪಡಿಸುವ ಮತ್ತು ಎಲ್ಲಾ ಪೋಷಕರಿಗೆ ಮೆಚ್ಚುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ನಿಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಿ ಮತ್ತು ಒಟ್ಟುಗೂಡಿಸಿ ಸ್ಮರಣೀಯ ದಿನಕ್ಕಾಗಿ ನಿಮ್ಮ ಕುಟುಂಬ ಮತ್ತು ಸ್ನೇಹಿತರು ಈ ಗಮನಾರ್ಹ ಘಟನೆಯ ಭಾಗವಾಗಲು ಮತ್ತು ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳಬೇಡಿ.

 ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:

 +91 9364106562

 ### ಪಿನ್‌ಗಳು ಮತ್ತು ಲೇನ್‌ಗಳ ಬಗ್ಗೆ:

 ಪಿನ್‌ಗಳು ಮತ್ತು ಲೇನ್ಸ್ ಎಂಬುದು ಗೋಗ್ಟೆ ಕಾಂಪೌಂಡ್‌ನಲ್ಲಿರುವ ಪ್ರಮುಖ ಕೌಟುಂಬಿಕ ಮನರಂಜನಾ ಕೇಂದ್ರವಾಗಿದೆ, ಇದು ಬೆಳಗಾವಿಯ ಕಾಕತಿಯಲ್ಲಿ ಆರ್ಕೇಡ್ ಆಟಗಳು, ಬೌಲಿಂಗ್, ಸೇರಿದಂತೆ ಎಲ್ಲಾ ವಯೋಮಾನದವರಿಗೆ ವಿವಿಧ ರೋಮಾಂಚಕಾರಿ ಚಟುವಟಿಕೆಗಳನ್ನು ಒದಗಿಸುತ್ತದೆ.

 ಮತ್ತು ಹೆಚ್ಚು. ಗೋಗ್ಟೆ ಗ್ರೂಪ್ ಒಡೆತನದ ಮತ್ತು ನಿರ್ವಹಿಸುತ್ತಿರುವ ಪಿನ್‌ಗಳು ಮತ್ತು ಲೇನ್‌ಗಳು ಕುಟುಂಬದ ವಿನೋದಕ್ಕಾಗಿ ಆರೋಗ್ಯಕರ ಮತ್ತು ತೊಡಗಿಸಿಕೊಳ್ಳುವ ವಾತಾವರಣವನ್ನು ಒದಗಿಸುವಲ್ಲಿ ಹೆಮ್ಮೆಪಡುತ್ತವೆ. ಪಿನ್‌ಗಳು ಮತ್ತು ಲೇನ್‌ಗಳು ಒಂದು ದಿನಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಂತೆ ಡಿಸೆಂಬರ್ 28 ರಂದು ಬನ್ನಿ ಮತ್ತು ನಮ್ಮೊಂದಿಗೆ ಆಚರಿಸಿ

 ವಿನೋದ, ಉತ್ಸಾಹ ಮತ್ತು ಮರೆಯಲಾಗದ ನೆನಪುಗಳು!

 ಬೆಳಗಾವಿ: ಗೌರವಾನ್ವಿತ ಗೊಗ್ಟೆ ಗ್ರೂಪ್ ಒಡೆತನದ ಪಿನ್ಸ್ ಮತ್ತು ಲೇನ್ಸ್ ತನ್ನ ಮೊದಲ ವಾರ್ಷಿಕೋತ್ಸವವನ್ನು ಘೋಷಿಸಲು ರೋಮಾಂಚನಗೊಂಡಿದೆ, ಗೋಗ್ಟೆ ಕಾಂಪೌಂಡ್‌ನಲ್ಲಿ ಮೆಗಾ ಕಾರ್ನಿವಲ್ ಕಾರ್ಯಕ್ರಮಕ್ಕೆ ಕುಟುಂಬಗಳು ಮತ್ತು ವಿನೋದ-ಅನ್ವೇಷಕರನ್ನು ಆಹ್ವಾನಿಸುತ್ತದೆ.

 ಕಾಕತಿ. ಉತ್ಸಾಹ, ವಿನೋದ ಮತ್ತು ಸಂಭ್ರಮದಿಂದ ತುಂಬಿದ ದಿನಕ್ಕಾಗಿ ಡಿಸೆಂಬರ್ 28, 2024 ರಂದು 11:00 am - 11:00 pm ವರೆಗೆ ನಮ್ಮೊಂದಿಗೆ ಸೇರಿ!

   ಕುಟುಂಬಗಳು ಅತ್ಯಾಕರ್ಷಕ ಚಟುವಟಿಕೆಗಳು ಮತ್ತು ಆಕರ್ಷಣೆಗಳ ಒಂದು ಶ್ರೇಣಿಯನ್ನು ಎದುರುನೋಡಬಹುದು:

 ಮಕ್ಕಳಿಗಾಗಿ ಸ್ಟಾಲ್‌ಗಳು: ವಿನೋದ ತುಂಬಿದ ಆಟಗಳು ಮತ್ತು ಚಟುವಟಿಕೆಗಳನ್ನು ನೀಡುವ ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂತೋಷಕರ ಮಳಿಗೆಗಳು. ಪ್ರೀತಿಯ ಮ್ಯಾಸ್ಕಾಟ್‌ಗಳನ್ನು ಭೇಟಿ ಮಾಡಿ: ಮಕ್ಕಳು ಮತ್ತು ವಯಸ್ಕರು ದಿನವಿಡೀ ತಮ್ಮ ನೆಚ್ಚಿನ ಮ್ಯಾಸ್ಕಾಟ್‌ಗಳನ್ನು ಭೇಟಿಯಾಗುವುದನ್ನು ಆನಂದಿಸಬಹುದು. ರುಚಿಕರವಾದ ಕಾಂಬೊ ಆಫರ್‌ಗಳು ವಿವಿಧ ರುಚಿಕರವಾದ ಆಹಾರ ಆಯ್ಕೆಗಳಲ್ಲಿ ನಮ್ಮ ಅದ್ಭುತ ಕಾಂಬೊ ಕೊಡುಗೆಗಳೊಂದಿಗೆ ನಿಮ್ಮ ಕಡುಬಯಕೆಗಳನ್ನು ಪೂರೈಸಿಕೊಳ್ಳಿ. ಉಚಿತ ಪ್ರವೇಶ ನಾವು ಎಲ್ಲರಿಗೂ ಉಚಿತ ಪ್ರವೇಶದೊಂದಿಗೆ ನಮ್ಮ ಬಾಗಿಲು ತೆರೆಯುತ್ತಿದ್ದೇವೆ, ಹಬ್ಬಗಳಲ್ಲಿ ಸೇರಲು ಪ್ರತಿಯೊಬ್ಬರನ್ನು ಸ್ವಾಗತಿಸುತ್ತೇವೆ.

 ಎಂಗೇಜಿಂಗ್ ಫನ್ ಗೇಮ್‌ಗಳು ಎಲ್ಲಾ ವಯಸ್ಸಿನ ಪಾಲ್ಗೊಳ್ಳುವವರನ್ನು ಮನರಂಜಿಸಲು ವಿನ್ಯಾಸಗೊಳಿಸಲಾದ ಉತ್ಸಾಹಭರಿತ ಆಟಗಳ ವಿಂಗಡಣೆಯಲ್ಲಿ ಭಾಗವಹಿಸಿ. ವಿಶೇಷ ಆರ್ಕೇಡ್ ರಿಯಾಯಿತಿಗಳು ಎಲ್ಲಾ ಆರ್ಕೇಡ್ ಆಟಗಳ ಮೇಲೆ ರಿಯಾಯಿತಿಯನ್ನು ಆನಂದಿಸಿ, ಅಂತ್ಯವಿಲ್ಲದಂತೆ ಖಾತ್ರಿಪಡಿಸಿಕೊಳ್ಳಿ

 ಮನರಂಜನೆ ಮತ್ತು ರೋಚಕತೆ. ದಿನದ ಪ್ರಮುಖ ಅಂಶವೆಂದರೆ ಮೆಗಾ ಡ್ರಾ ಆಗಿದ್ದು, ಅಲ್ಲಿ ಭಾಗವಹಿಸುವವರು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ

 ನಂಬಲಾಗದ ಬಹುಮಾನಗಳು, ಸೇರಿದಂತೆ: ಹೋಂಡಾ ಆಕ್ಟಿವಾ, ಐಫೋನ್ 16, ಲ್ಯಾಪ್‌ಟಾಪ್.

  ಕಳೆದ ವರ್ಷದಲ್ಲಿ ನಮ್ಮನ್ನು ಬೆಂಬಲಿಸಿದ ನಮ್ಮ ಅದ್ಭುತ ಪೋಷಕರಿಗೆ ಕೃತಜ್ಞತೆಯನ್ನು ತೋರಿಸಲು ಈ ಆಚರಣೆಯು ನಮ್ಮ ಮಾರ್ಗವಾಗಿದೆ" ಎಂದು ಹೇಳುತ್ತಾರೆ "ಮನೋರಂಜನೆ, ಬಹುಮಾನಗಳು ಮತ್ತು ಸಂತೋಷದಿಂದ ತುಂಬಿದ ದಿನವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ, ಮರೆಯಲಾಗದ ನೆನಪುಗಳನ್ನು ಖಾತ್ರಿಪಡಿಸಿಕೊಳ್ಳುತ್ತೇವೆ.

 ಕುಟುಂಬಗಳು." ಪ್ರಾರಂಭದಿಂದಲೂ, ಪಿನ್‌ಗಳು ಮತ್ತು ಲೇನ್ಸ್ ಗೊಗ್ಟೆ ಕಾಂಪೌಂಡ್‌ನಲ್ಲಿ ಕೌಟುಂಬಿಕ ಮನರಂಜನೆಯ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸಲು ಸಂತೋಷವಾಗಿದೆ. ಮೊದಲ ವಾರ್ಷಿಕೋತ್ಸವದ ಮೆಗಾ ಕಾರ್ನೀವಲ್ ಸಮುದಾಯ ಸಂಬಂಧಗಳನ್ನು ಬಲಪಡಿಸುವ ಮತ್ತು ಎಲ್ಲಾ ಪೋಷಕರಿಗೆ ಮೆಚ್ಚುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ನಿಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಿ ಮತ್ತು ಒಟ್ಟುಗೂಡಿಸಿ ಸ್ಮರಣೀಯ ದಿನಕ್ಕಾಗಿ ನಿಮ್ಮ ಕುಟುಂಬ ಮತ್ತು ಸ್ನೇಹಿತರು ಈ ಗಮನಾರ್ಹ ಘಟನೆಯ ಭಾಗವಾಗಲು ಮತ್ತು ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳಬೇಡಿ.

 ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:

 +91 9364106562

 ### ಪಿನ್‌ಗಳು ಮತ್ತು ಲೇನ್‌ಗಳ ಬಗ್ಗೆ:

 ಪಿನ್‌ಗಳು ಮತ್ತು ಲೇನ್ಸ್ ಎಂಬುದು ಗೋಗ್ಟೆ ಕಾಂಪೌಂಡ್‌ನಲ್ಲಿರುವ ಪ್ರಮುಖ ಕೌಟುಂಬಿಕ ಮನರಂಜನಾ ಕೇಂದ್ರವಾಗಿದೆ, ಇದು ಬೆಳಗಾವಿಯ ಕಾಕತಿಯಲ್ಲಿ ಆರ್ಕೇಡ್ ಆಟಗಳು, ಬೌಲಿಂಗ್, ಸೇರಿದಂತೆ ಎಲ್ಲಾ ವಯೋಮಾನದವರಿಗೆ ವಿವಿಧ ರೋಮಾಂಚಕಾರಿ ಚಟುವಟಿಕೆಗಳನ್ನು ಒದಗಿಸುತ್ತದೆ.

 ಮತ್ತು ಹೆಚ್ಚು. ಗೋಗ್ಟೆ ಗ್ರೂಪ್ ಒಡೆತನದ ಮತ್ತು ನಿರ್ವಹಿಸುತ್ತಿರುವ ಪಿನ್‌ಗಳು ಮತ್ತು ಲೇನ್‌ಗಳು ಕುಟುಂಬದ ವಿನೋದಕ್ಕಾಗಿ ಆರೋಗ್ಯಕರ ಮತ್ತು ತೊಡಗಿಸಿಕೊಳ್ಳುವ ವಾತಾವರಣವನ್ನು ಒದಗಿಸುವಲ್ಲಿ ಹೆಮ್ಮೆಪಡುತ್ತವೆ. ಪಿನ್‌ಗಳು ಮತ್ತು ಲೇನ್‌ಗಳು ಒಂದು ದಿನಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಂತೆ ಡಿಸೆಂಬರ್ 28 ರಂದು ಬನ್ನಿ ಮತ್ತು ನಮ್ಮೊಂದಿಗೆ ಆಚರಿಸಿ

 ವಿನೋದ, ಉತ್ಸಾಹ ಮತ್ತು ಮರೆಯಲಾಗದ ನೆನಪುಗಳು!

News

ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ ನಾವು ಸಂಸ್ಕಾರ ನೀಡಬೇಕು                    ವಚನ ಪಿತಾಮಹ ಡಾ.ಫ ಗು. ಹಳಕಟ್ಟಿ ಭವನ

25th December 2024

ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ ನಾವು ಸಂಸ್ಕಾರ ನೀಡಬೇಕು                    ವಚನ ಪಿತಾಮಹ ಡಾ.ಫ ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಉಪನ್ಯಾಸವನ್ನು ಶರಣೆ ದಾನಮ್ಮ .ವಿ .ಅಂಗಡಿ ಅವರು ಮಕ್ಕಳು ಸಂಸ್ಕಾರವಂತರಾಗುವಲ್ಲಿ ಕುಟುಂಬದ ಪಾತ್ರ ಕುರಿತು ಉಪನ್ಯಾಸ ನೀಡಿದರು. ಗುರು ಹಿರಿಯರಿಗೆ ಗೌರವ ಕೊಡಬೇಕು. ತಂದೆ ತಾಯಿ ಸೇವೆ ಮಾಡಬೇಕು.ಸಮಯವಿಲ್ಲ ಅಂತ ಅನ್ನಬಾರದು, ಮನಸ್ಸು ಮಾಡಬೇಕು. ಸಂಸ್ಕಾರ ಬಾಲ್ಯದಲ್ಲಿಯೇ ಕೊಡಬೇಕು. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಪ್ರಾರ್ಥನೆಯಲ್ಲಿದೆ. ದಿನಾಲು ಐದು ನಿಮಿಷ ಪ್ರಾರ್ಥನೆ ಮಕ್ಕಳಿಗೆ ಕಲಿಸಿ ಕೊಡಿರಿ. ಬೆಳಗಿನ ರಶ್ಮಿ ಶರೀರಕ್ಕೆ ತಟ್ಟಲಿ,ಮಕ್ಕಳಿಗೆ ಎಂದೂ ಮೊಬೈಲ್ ದಾಸರಾಗಲು ಬಿಡದೆ, ಗಿಡಕ್ಕೆ ನೀರು ಹಾಕುವುದು,ತಂದೆ-ತಾಯಿ ಸೇವೆ, ಎಲ್ಲರಿಗೂ ನಮಸ್ಕಾರ ಮಾಡುವುದು, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ನಾವು ಸಂಸ್ಕಾರ ನೀಡಬೇಕು ಹೊಸ ಆಹಾರ ಪದ್ಧತಿ ಬಿಟ್ಟು ತರಕಾರಿ, ರೊಟ್ಟಿ, ಮೊಳಕೆ ಕಾಳು, ಮತ್ತು ಅಂಬಲಿ,ಇವು ರೂಡಿ ಆಗಲಿ, ಒಳ್ಳೆಯ ಸಂಪ್ರದಾಯ ಇರಲಿ.ಅಭ್ಯಂಗಸ್ನಾನ, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ತಾಯಿ ಪಾತ್ರ ತಂದೆ ಪಾತ್ರ ಇಲ್ಲಿ ಅತಿ ಅವಶ್ಯಕ, ಬಾಲ್ಯ, ಯೌವನ,ಮುಪ್ಪು, ಎಲ್ಲರಿಗೂ ಬರುವುದೇ,ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಂದಿನ ಯಾಂತ್ರಿಕ ಜೀವನ ಬಿಟ್ಟು ಗುರು ಹಿರಿಯರು ಹಿಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಗುರು ಇಲ್ಲದೆ ಯಾವುದೇ ಕಾರ್ಯವಿಲ್ಲ,ಹಂಚಿ ತಿನ್ನುವುದು ಇದರಲ್ಲಿ ಎಷ್ಟು ಖುಷಿ ಇದೆ.ಸಾಮಾಜಿಕ ಬದಲಾವಣೆ ನೆರೆಹೊರೆ ಬಾಂಧವ್ಯ ಕಾಪಾಡಿಕೊಳ್ಳಿ, ಮಕ್ಕಳಿಗೆ ಸಂಸ್ಕಾರ ಡೆಪಾಜಿಟ್ ಮಾಡಿರಿ.ಜನನಿ ತಾಯಿ ಮೊದಲ ಗುರು,ಪ್ರೀತಿ-ವಿಶ್ವಾಸ ಗೌರವ ಹೊಂದಾಣಿಕೆ ನಮ್ಮ ಕರ್ತವ್ಯ ಸಹ ಆಗಿದೆ. ಅನುಭವ ಇರುವಲ್ಲಿ ಅಮೃತವಿದೆ.ಎಂದು ದಾನಮ್ಮ ಅಂಗಡಿಯವರು ಉಪನ್ಯಾಸ ನೀಡಿದರು. ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು, ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಮಹಾಂತೇಶ ಮೆಣಸಿನಕಾಯಿ ಪರಿಚಯಿಸಿದರು ಸಂಗಮೇಶ ಅರಳಿ ನಿರೂಪಿಸಿದರು.ಬಸವರಾಜ ಬಿಜ್ಜರಗಿ, ಬಿ ಪಿ. ಜವನಿ,ವಿ ಕೆ ಪಾಟೀಲ, ಶ೦ಕ್ರಪ್ಪ ಮೆಣಸಗಿ,ಅನೀಲ ರಘಶೆಟ್ಟಿ,ಬಸವರಾಜ ಕರಡಿಮಠ,ಕರಿಕಟ್ಟಿ,ಸೊಮಶೇಖರಕತ್ತಿ, ಸುನೀಲ ಸಾನಿಕೊಪ್ಪ , ಗಂಗಪ್ಪ ಉಣಕಲ, ಪೂಜಾ ಅಶೋಕ ಹುಕ್ಕೇರಿ, ಭಾಗವಹಿಸಿದ್ದರು.

News

ಪುಸ್ತಕವು ಜ್ಞಾನದ ದೀವಿಗೆಯಾಗಿದೆ: ರಾಮಯ್ಯ 

20th December 2024

ಪುಸ್ತಕವು ಜ್ಞಾನದ ದೀವಿಗೆಯಾಗಿದೆ: ರಾಮಯ್ಯ


ಜ್ಞಾನ ಸಂಪಾದನೆ ಮಾಡುವುದು ಮನುಷ್ಯನಿಗೆ ಮಾತ್ರ ಸಿಕ್ಕಿರುವ ಒಂದು ವಿಶಿಷ್ಟ ಶಕ್ತಿ. ಇದನ್ನು ಓದಿನ ಮೂಲಕವೇ ಪಡೆದುಕೊಳ್ಳಬೇಕು. ಓದು ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುತ್ತದೆ ಎಂದು

ಬೆಳಗಾವಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ರಾಮಯ್ಯ ಅವರು ಅಭಿಪ್ರಾಯಪಟ್ಟರು.


ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗದಿಂದ ಡಿ.18ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿ ಪುಸ್ತಕವು ಜ್ಞಾನದ ದೀವಿಗೆಯಾಗಿದೆ. ಪುಸ್ತಕವನ್ನು ಪ್ರೀತಿಯಿಂದ ಕಾಣಬೇಕು. ಅದು ಓದುವ ಹವ್ಯಾಸವನ್ನು ವೃದ್ಧಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಗ್ರಂಥಾಲಯದ ಪಾತ್ರ ಬಹು ದೊಡ್ಡದು. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವುದರ ಜೊತೆಗೆ ಜ್ಞಾನವನ್ನು ಸಂಪಾದನೆ ಮಾಡಬೇಕು. ಜ್ಞಾನ ಮನುಷ್ಯನನ್ನು ದೊಡ್ಡ ಶಕ್ತಿಯನ್ನಾಗಿ ಬೆಳೆಸುತ್ತದೆ. ಜ್ಞಾನ ಹೊಂದಿದ್ದರೆ ಜಗತ್ತಿನಲ್ಲೆಡೆ ಗೌರವ, ಸಮ್ಮಾನವನ್ನು ಪಡೆಯಬಹುದು ಎಂದರು.


ಅಧ್ಯಕ್ಷತೆಯನ್ನು ವಹಿಸಿದ ಮಾವಿದ್ಯಾಲಯದ ಪ್ರಾಚಾರ್ಯ ಎಂ.ಜಿ. ಹೆಗಡೆಯವರು ಓದುವ ಹವ್ಯಾಸ ಮನುಷ್ಯನ ಇತರೆಲ್ಲ ಹವ್ಯಾಸಕ್ಕಿಂತ ಶ್ರೇಷ್ಠವಾದದ್ದು. ಎಲ್ಲಿ ಓದು ಇರುತ್ತದೆಯೋ ಅಲ್ಲಿ ಜ್ಞಾನ ಸಹಜವಾಗಿ ವೃದ್ಧಿಸುತ್ತದೆ. ಜಗತ್ತು ನಿಂತಿರುವುದು ಜ್ಞಾನದಿಂದಲೇ ಇಂದು ಜಗತ್ತನ್ನು ಆಳುತ್ತಿರುವುದು ಜ್ಞಾನ ಮಾತ್ರ. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ. ಪುಸ್ತಕ ಓದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸಾಮಾಜಿಕ ಜಾಲತಾಣಗಳಿಂದಾಗಿ ಪುಸ್ತಕ ಓದು ಕ್ಷೀಣಿಸುತ್ತಿದೆ. ಆದರೆ ವಿದ್ಯುನ್ಮಾನ ಪ್ರತಿಗಿಂತಲೂ ಪುಸ್ತಕ ಓದುವುದು ಆರೋಗ್ಯಕ್ಕೂ ಉತ್ತಮ. ವಿದ್ಯಾರ್ಥಿಗಳು ಪುಸ್ತಕ ಮೇಳ ಮತ್ತು ಪ್ರದರ್ಶನವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಮಹಾವಿದ್ಯಾಲಯದ ಗ್ರಂಥಪಾಲಕರಾದ ಡಾ. ಭವಾನಿ ಶಂಕರ್ ಬಿ. ಸ್ವಾಗತಿಸಿದರು. ಗ್ರಂಥಾಲಯದ ಸಿಬಂದಿಗಳಾದ ರಶ್ಮಿ ಪಾಟೀಲ್ ಮತ್ತು ಭಾಗ್ಯಶ್ರೀ ಕುಲಕರ್ಣಿ ಪರಿಚಯಿಸಿದರು. ಶಿವಾನಂದ ಬಿ. ವಂದಿಸಿದರು. ವಿದ್ಯಾರ್ಥಿನಿಯರಾದ ಪಾರ್ವತಿ ಪಾಟೀಲ್ ಪ್ರಾರ್ಥಿಸಿದರು, ಶಾಂಭವಿ ಥೋರ್ಲಿ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

News

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಿ....

15th December 2024

ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಸಮಿತಿಯ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.16 ರಂದು ಪ್ರತಿಭಟನೆ. ರೈತ ಸಂಘ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿಕೆ


ಒಂದು ಟನ್ ಕಬ್ಬಿಗೆ ಕಾರ್ಖಾನೆಗಳಿಂದ ಸರಕಾರಕ್ಕೆ ಹೋಗುತ್ತಿರುವ 5000 ರೂ. ತೆರಿಗೆ ಹಣದಿಂದ ಒಂದು ಟನಗೆ 2000 ರೂ ಕಡ್ಡಾಯವಾಗಿ ಕೊಡಲೇಬೇಕು ಮತ್ತು ರೈತರ ಸಂಪೂರ್ಣ ಸಾಲಮನ್ನಾ ಮಾಡುವುದರ ಜೋತೆಗೆ ಕಾನೂನಾತ್ಮಕ ಸಾಲ ವಸೂಲಾತಿ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಹೇಳಿದರು ಭಾನುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ರಾಜ್ಯದಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿಗೆಗೋಳಿಸುವುದು. ಹಾಗೂ ನೈಸರ್ಗಿಕ ಮತ್ತು ಸಾವಯುವ ಕೃಷಿಗೆ ಉತ್ತೆಜನ ಬಿಡುವುದು ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ. 16 ರಂದು ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು