14th March 2025
ರಾಮತೀರ್ಥನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮಿಸಿದ ಹೋಳಿ
ಬೆಳಗಾವಿ. ೧೪- ಬೆಳಗಾವಿ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ವತಿಯಿಂದ ದೇವಸ್ಥಾನ ಬಳಿ ಜರುಗಿದ ಹೋಳಿ ಆಚರಣೆ ಅತೀ ಸಂಭ್ರಮ, ಸಡಗರದಿಂದ ನೆರವೇರಿತು. ಶುಕ್ರವಾರ ಮುಂಜಾನೆ ಸೇರಿದ ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಶ್ರೀ ದುರ್ಗಾ ಮಹಿಳಾ ಮಂಡಳ ಸದಸ್ಯರು ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಗೆ ಪೂಜೆ ಸಲ್ಲಿಸಿ ಆಂಜನೇಯನಿಗೆ ಭಕ್ತಿ ಯಿಂದ ಸಂತಸ, ಸಡಗರದ ಕುರುಹು ಆದ ವಿವಿಧ ಬಣ್ಣಗಳನ್ನು ಎರಚಿ, ನಂತರ ಪರಸ್ಪರರು ಬಣ್ಣ ಎರಚಿ ಶುಭಾಶಯಗಳನ್ನು ಹಂಚಿಕೊಂಡರು.
ಸುಮಾರು ೩ ತಾಸಿಗೂ ಹೆಚ್ಚು ಕಾಲ ಮ್ಯುಜಿಕ್ ನ್ರತ್ಯ ಮಾಡಿ ಬಣ್ಣದ ಹೋಳಿ ಹಬ್ಬಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಟ್ಟಿ, ಕಾರ್ಯದರ್ಶಿ, ಮಂಜುನಾಥ ಪಾಟೀಲ, ಖಜಾಂಚಿ ಮನೋಹರ ಕಾಜಗಾರ ಸದಸ್ಯರಾದ
ಮಹೇಶ ಚಿಟಗಿ, ಕ್ರಷ್ಣಾ ಪಾಟೀಲ ಜೆ ಜಿ ಹುನ್ನೂರ, ಬಸವರಾಜ ಗೌಡಪ್ಪಗೋಳ, ಎಸ್, ಎಲ್ ಸನದಿ, ಆನಂದ ಹಣ್ಣಿಕೇರಿ, ಸಿದ್ದಪ್ಪ ತೇರಣಿ, ವಿಜಯಕುಮಾರ್ ಕನಕಗಿರಿ, ಮೆಳವಂಕಿ, ಚೆಳಗೇರಿ, ಮಹಾದೇವ ಟೊಣ್ಣೆ, ಗುರುಸಂಗಪ್ಪಾ ಚೆಳಗೇರಿ, ಜಿ ಐ ದಳವಾಯಿ ಮತ್ತು ಶ್ರೀ ದುರ್ಗಾ ಸಂಘದ ನಿರ್ಮಲಾ ಉರಬಿನಹಟ್ಟಿ , ಲತಾ ಕಾಜಗಾರ, ಕಾವ್ಯಾ ಚಿಟಗಿ, ಪ್ರೇಮಾ ಬಾಗೇವಾಡಿ, ಸುನೀತಾ ಕೆರೂರ, ವೀಣಾ ಪಾಟೀಲ, ಸೀಮಾ ಸುಬ್ಬಾಪೂರಮಠ, ಮಹಾದೇವಿ ಖಡಕಿ, ವರ್ಷಾ ಶೆಟ್ಟಿ ಸೇರಿದಂತೆ ಅಪಾರ ಮಹಿಳೆಯರು, ವಿದ್ಯಾರ್ಥಿಗಳು ಉಪಸ್ತಿತರಿದ್ದರು. ಸುರೇಶ ಉರಬಿನಟ್ಟಿ
13th March 2025
ಕುಂದರಗಿ ಶ್ರೀ ಅಡವಿಸಿದ್ದೇಶ್ವರ ರಥೋತ್ಸವ ಜಾತ್ರೆ.
ಅಂಕಲಗಿ ೧೨- ಸಮೀಪದ ಕುಂದರಗಿ ಶ್ರೀ ಅಡವಿಸಿದ್ಧೇಶ್ವರ ಮಠದ ರಥೋತ್ಸವ ಜಾತ್ರೆ ಮತ್ತು ಕುಂದರನಾಡೋತ್ಸವ ಇದೇ ಬರುವ ಬುಧವಾರ ದಿನಾಂಕ ೧೯-೦೩-೨೦೨೫ ರಿಂದ ರವಿವಾರ ದಿನಾಂಕ ೨೩-೦೩-೨೦೨೫ ರವರೆಗೆ
ಜರುಗಲಿದೆ. ಶ್ರೀ ಮಠದ ಮಠಾಧ್ಯಕ್ಷರಾದ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಜರುಗುವ ೫ ದಿನಗಳ ಜಾತ್ರೆಯ ವಿವಿಧ ಕಾರ್ಯಕ್ರಮಗಳು ಇಂತಿವೆ.
ಬುಧವಾರ ದಿನಾಂಕ ೧೯ರಂದು ಮುಂಜಾನೆ ೮-೦೦ ಕ್ಕೆ ಧ್ವಜಾರೋಹಣ ,ಕಳಸಾರೋಹಣ,
೧೦-೦೦ ಗಂಟೆಗೆ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಸ್ಮರಣೋತ್ಸವ ಹಾಗೂ ಪಲ್ಲಕ್ಕಿ ಉತ್ಸವ.
ಸಂಜೆ ೪-೦೦ ಕ್ಕೆ ಟಗರಿನ ಕಾಳಗ.
ಗುರುವಾರ ದಿನಾಂಕ ೨೦ ರಂದು ೬-೩೦ಕ್ಕೆ ವಟುಗಳಿಗೆ ಅಯ್ಯಾಚಾರ, ೯-೩೦ ಕ್ಕೆ ಕುದುರೆ ಶರ್ಯತ್ತು, ಮಧ್ಯಾಹ್ನ ೨-೩೦ಕ್ಕೆ ಕುಸ್ತಿ.
ಶುಕ್ರವಾರ ದಿನಾಂಕ ೨೧ ರಂದು ಮಧ್ಯಾಹ್ನ ೨-೩೦ ಕ್ಕೆ ಕುಸ್ತಿಗಳು, ೭-೩೦ ಕ್ಕೆ ಉತ್ಸವ ಮೂರ್ತಿಗೆ ಸಂಗೀತ ಮಹಾಪೂಜೆ.
ಶನಿವಾರ ದಿನಾಂಕ ೨೨ರಂದು ೧೨-೩೦ಕ್ಕೆ ಸಾಮೂಹಿಕ ವಿವಾಹ, ಸಂಜೆ ೪-೦೦ ಕ್ಕೆ ಮಹಾ ರಥೋತ್ಸವ , ಸಂಜೆ ೮-೦೦ಗಂಟೆಗೆ ರಸಮಂಜರಿ ಕಾರ್ಯಕ್ರಮ.
ರವಿವಾರ ಶ್ರೀಗಳ ಆಶೀರ್ವಾದ, ೧೦-೩೦ ಕ್ಕೆ ಜಾನುವಾರಗಳ ಆಯ್ಕೆ, ಬಹುಮಾನ ವಿತರಣೆ. ಸಂಜೆ ೫ -೩೦ ಕ್ಕೆ ತೆಪ್ಪೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಸುರೇಶ ಉರಬಿನಟ್ಟಿ
13th March 2025
ಹೊರ ಜಗತ್ತಿನ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಅದ್ವಿತೀಯ.
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜೇಂದ್ರ ಗೌಡಪ್ಪಗೋಳ ಅಭಿಮತ.
ಅಂಕಲಗಿ. ೧೨- ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸಾಧನೆಯ ಮೆಟ್ಟಿಲಲ್ಲಿ ನಿಲ್ಲುತ್ತಿರುವ ಮಹಿಳೆಯರ ಪಾತ್ರ ನಿಜಕ್ಕೂ ಶ್ಲ್ಯಾಘನೀಯ ವಾಗಿದೆ ಎಂದು ಸಮೀಪದ ಮಲ್ಲಾಪುರ ಗ್ರಾಮದ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು ಅಂಕಲಗಿ ಶ್ರೀ ಅಡವಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಬುಧವಾರ ಮುಂಜಾನೆ ಜಿಲ್ಲಾ ಪಂಚಾಯತಿ ಬೆಳಗಾವಿ, ಆತ್ಮ ಯೋಜನೆ, ಕೃಷಿ ಇಲಾಖೆ ಗೋಕಾಕ, ಜೈ ಜವಾನ, ಜೈ ಕಿಸಾನ ಕೃಷಿ ಗ್ರಾಮೀಣ ಅಭಿವ್ರದ್ಧಿ ಸಂಘ ಖಾನಗಾಂವ ಹಾಗೂ ವಿವೇಕ ಜಾಗ್ರತ ಬಳಗ, ಅಂಕಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ, ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಾಧನೆಗಳು ಪುರುಷರನ್ನು ಮೀರಿದ್ದು, ಎಲ್ಲ ಶಿಕ್ಷಣ, ಸಾಮಾಜಿಕ, ಆರ್ಥಿಕ, ಕೃಷಿ, ರಾಜಕೀಯ, ವೈಜ್ಞಾನಿಕ, ಮಾಹಿತಿ, ತಂತ್ರಜ್ಞಾನ ಸೇರಿದಂತೆ ಆರ್ಥಿಕತೆಯಲ್ಲೂ ಸಬಲತೆ ಸಾಧಿಸಿ ಎತ್ತರದಲ್ಲಿ ಗುರುತಿಕೊಂಡಿದ್ದು , ಹೆಮ್ಮೆಯ ವಿಷಯವಾಗಿದೆ. ಇಂದು ಆಚರಿಸುತ್ತಿರುವ ಈ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರು.
ಗೋಕಾಕ ಕೃಷಿ ಇಲಾಖೆಯ ಅಧಿಕಾರಿ ಎಮ್,ಎಂ ನಧಾಪ್ ಮಹಿಳೆಯರಿಲ್ಲದೆ ಸ್ರಷ್ಠಿ ಇಲ್ಲಾ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆಗಳು ಪುರುಷರನ್ನು ಮೀರಿದ್ದು, ಇಂದಿನ ಈ ಮಹಿಳಾ ದಿನಾಚರಣೆಗೆ ಪೂರಕವೆನಿಸಿದೆ ಎಂದರು.
ವೇದಿಕೆಯಲ್ಲಿ ಬಸವರಾಜ ಪಟ್ಟಣಶೆಟ್ಟಿ, ಶಂಕರ ಭೂಸನ್ನವರ, ಸಿದ್ದಪ್ಪ ಹೊಳೆಯಾಚಿ, ಜೈ ಜವಾನ ಜೈ ಕಿಸಾನ ಕೃಷಿ ಸಂಘದ ಅದ್ಯಕ್ಷ ಈಶ್ವರ ಬಾಗೋಜಿ, ಚಾಯಾ ಯಾದವಾಡ, ಶಿವನಗೌಡಾ ಹೊಳೆಯಾಚಿ, ಉಪ ಕೃಷಿ ನಿರ್ದೇಶಕ, ಎಚ್ ಡಿ ಕೋಳೇಕರ,
ವ್ಹಿ ಎಮ್ ಹೊಸೂರ, ಸುಜಾತಾ ರಾಮಕ್ರಷ್ಣ್, , ವಿಮಲಾ ಪ್ರವೀಣ ಕಡಗದ, ಆಸೀನರಾಗಿದ್ದರು.
ಶ್ರೀ ಅಡವಿಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಚಾಯಾ ಯಾದವಾಡ ಸ್ವಾಗತಿಸಿದರು.
ಆರ್ ಎಸ್ ಕಾಕಡೆ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಂಘಗಳ ಮಹಿಳೆಯರು, ಕುಂದರನಾಡಿನ ಅಭಿಮಾನಿಗಳು ಉಪಸ್ಥಿತರಿದ್ದರು.
ಸುರೇಶ ಉರಬಿನಟ್ಟಿ
9th March 2025
ಬೆಳಗಾವಿ:- ೯-೩-೨೪ ಲಿಂಗಾಯತ ಸ೦ಘಟನೆ ವಾರದ ಪ್ರಾಥ೯ನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನದಲ್ಲಿ ಪ್ರಾಣಾಯಾಮದ ಸದುಪಯೋಗಪಡಿಸಿಕೊಳ್ಳಿ ಯೋಗಾ ಗುರುಗಳಾದ ಸಿದ್ದಪ್ಪ ಸಾರಪುರಿ. ಪ್ರಾಣಾಯಾಮದಿಂದ ರಕ್ತ ಪರಿಚಲಣೆ ಸುಧಾರಣೆ ಆಗುತ್ತದೆ. ಹಾಗೂ ರಕ್ತದಲ್ಲಿ ಆಮ್ಲಜನಿಕ ಮಟ್ಟ ಹೆಚ್ಚಾಗುತ್ತದೆ. ಹೃದಯರಕ್ತನಾಳಗಳು ಬಲಗೊಂಡು ಆರೋಗ್ಯ ವೃದ್ಧಿಯಾಗುತ್ತದೆ. ಅಧಿಕರಕ್ತದೊತ್ತಡ ನಿಯಂತ್ರಣವಾಗುತ್ತದೆ. ಪ್ರಾಣಾಯಾಮ ಎಂದರೆ ಉಸಿರಾಟದ ನಿಯಂತ್ರಣ ಎಂಬುದಾಗಿದೆ. ಕಪಾಲ್ ಭಾತಿ ಎರಡು ಮೂಗಿನ ಹೊಳೆಗಳಿಂದ ಗಾಳಿಯನ್ನು ಉಸಿರಾಡಿ ಸ್ವಲ್ಪ ಶಕ್ತಿಯುತ ಕ್ರಿಯೆಯೊಂದಿಗೆ ಗಾಳಿಯನ್ನು ಬಿಡಿಸಿ ಮತ್ತೆಮತ್ತೆಉಸಿರಾಡಿ ದೇಹದಿಂದ ಹೊರಬರುವ ಗಾಳಿಯನ್ನು ಅನುಭವಿಸಲು ನಿಮ್ಮ ಕೆಲ ಹೊಟ್ಟೆಯ ಮೇಲೆ ನಿಮ್ಮ ಕೈಯನ್ನು ಹಾಕಬಹುದು. ಕಪಾಲ್ ಎಂದರೆ ತಲೆಬುರುಡೆ ಮತ್ತು ಭಾತಿ ಎಂದರೆ ಹೊಳೆಯುವುದು ಅಥವಾ ಪ್ರಕಾಶಮಾನ ವಾಗುವುದು. ಈ ಅಭ್ಯಾಸವು ಮುಂಭಾಗದ ಮೆದುಳನ್ನು ಶುದ್ಧೀಕರಿಸಲು ಮತ್ತು ಆಲೋಚನೆಯ ಸ್ಪಷ್ಟತೆಯನ್ನು ತರಲು ವಿನ್ಯಾಸಗೊಳಿಸಲಾಗಿದೆ. ನಿರ್ವಿಶೀಕರಣ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ.. ಮುಖ್ಯಅತಿಥಿಗಳಾಗಿ ಮನೋಹರ ಪುಡಕಲಕಟ್ಟಿ ಆಗಮಿಸಿದ್ದರು, ದಾಸೋಹ ಸೇವೆ ಶಿವಕುಮಾರ ಅರಳಿ ಸೇವೆಗೈದರು. ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿ ಕೊಟ್ಟರು .ಆರಂಭದಲ್ಲಿ ಬಸವರಾಜ ಬಿಜ್ಜರಗಿ, ವಿ ಕೆ ಪಾಟೀಲ್, ಅಕ್ಕಮಹಾದೇವಿ ತೆಗ್ಗಿ ,ಬಿ ಪಿ ಜವಣಿ, ಅಕ್ಕಮಹಾದೇವಿ ಅರಳಿ, ವಚನ ವಿಶ್ಲೇಷಣೆ ಮಾಡಿದರು. ಸಂಗಮೇಶ ಅರಳಿ ಅವರು ಕಾಯ೯ಕ್ರಮ ನಡಿಸಿಕೊಟ್ಟರು.ರಮೇಶ ಕಳಸಣ್ಣವರ, ಸತೀಶ ಪಾಟೀಲ,ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ,ವಿಜಯ ಹುದಲಿಮಠ,ಸುನೀಲ ಸಾಣಿಕೊಪ್ಪ, ಮಾತನಾಡಿದರು.ಸೋಮಶೇಖರ ಕಟ್ಟಿ, ಶಿವಾನಂದ ನಾಯಕ,ಅನೀಲ ರಘಶೆಟ್ಟಿ,ಬಸವರಾಜ ಮತ್ತಿಕಟ್ಟಿ ವಿರುಪಾಕ್ಷಿ ದೊಡ್ಡಮನಿ ,ಜ್ಯೋತಿಬಾದಾಮಿ, ಸುಜಾತ ಮತ್ತಿಕಟ್ಟಿ , ಸುದೀಪ್ ಪಾಟೀಲ್ ,ಮಂಹಾತೇಶ್ ಮೆಣಸಿನಕಾಯಿ, ಶೇಖರ ವಾಲಿಇಟಗಿ,ಬಾಬಣ್ಣ ತಿಗಡಿ, ಗಂಗಪ್ಪಉಣಕಲ, ಶರಣ ಶರಣೆಯರು ಉಪಸ್ಥಿತರಿದ್ದರು
9th March 2025
ಬೆಳಗಾವಿ - ವಿವಿಧ ಸ್ಪರ್ಧೆಗಳ ವಿಜೇತರೊಂದಿಗೆ ಸತೀಶ ಪಾಟೀಲ್, ಬಿ. ಬಿ. ದೇಸಾಯಿ, ರವಿ ತರಳೆ, ವಿಜಯ ನಂದಿಹಳ್ಳಿ, ಜಿ. ಬಿ. ಪಾಟೀಲ್ ಮತ್ತಿತರರು.
............................
ಮಹಿಳೆಯರ ಪ್ರೋತ್ಸಾಹಕ್ಕಾಗಿ ವೇದಾಂತ ಫೌಂಡೇಶನ್ ನಿಂದ ಶ್ಲಾಘನೀಯ ಕಾರ್ಯ :ಬಿ. ಬಿ. ದೇಸಾಯಿ.
ಮಹಿಳಾ ದಿನಾಚರಣೆಯ ನಿಮಿತ್ತ ವಿವಿಧ ಸ್ಪರ್ಧೆಗಳ ಆಯೋಜನೆ.
ಬೆಳಗಾವಿ. ದಿ. 8.3.2025.:ಮಹಿಳೆ ಇಂದು ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಆದುದರಿಂದ ಇಂದು ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮವಾಗಿ ಸಕ್ಷಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಂತಹ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ವೇದಾಂತ ಫೌಂಡೇಶನ್ ಕೈಗೊಂಡಿರುವ ಕಾರ್ಯವು ಶ್ಲಾಘನೀಯವಾಗಿದೆ ಎಂದು ನಿವೃತ್ತ ಮುಖ್ಯಅಧ್ಯಾಪಕರಾದ ಶ್ರೀ ಬಿ. ಬಿ. ದೇಸಾಯಿ ಯವರು ವೇದಾಂತ ಫೌಂಡೇಶನ್ ನಿಂದ ಆಯೋಜಿಸಲ್ಪಟ್ಟ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ವೇಷಭೂಷಣ, ಮೆಹಂದಿ, ರಂಗೋಲಿ, 100ಮೀ. ಓಟ, ಪೊಟಾಟೋ ರೇಸ್, ಬೆಂಕಿಯಿಲ್ಲದೇ ಅಡಿಗೆ ತಯಾರಿಸುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳ ಉದ್ಘಾಟನೆಯಾದ ನಂತರ ಮಾತನಾಡುತ್ತ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕು ಎಂದು ಅಭಿಪ್ರಾಯ ಪಟ್ಟರು. ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ವಿಜಯ ನಂದಿಹಳ್ಳಿ ಯವರು ಮಹಿಳೆಯರ ಸಕ್ಷಮತೆಗಾಗಿ ಸರಕಾರದಿಂದ ಜಾರಿಯಾಗಿರುವ ಯೋಜನೆಗಳ ಮಾಹಿತಿಯನ್ನು ತಿಳಿಸಿ ಅವುಗಳ ಪ್ರಯೋಜನ ಪಡೆಯಲು ತಿಳಿಸಿದರು. ಶ್ರೀಮತಿ ಲಲಿತ ಮೋಹನ ರೆಡ್ಡಿ, ಗಣಪತ್ ಪಾಟೀಲ್ ರವರು ಮಾರ್ಗದರ್ಶನ ಮಾಡಿದರು.
ವೇದಾಂತ ಫೌಂಡೇಶನ್ ನ ಸಂಸ್ಥಾಪಕರಾದ ಶ್ರೀ ಸತೀಶ ಪಾಟೀಲ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಚಂದಗಡಕರ ಅವರ ಸ್ವಾಗತ ಭಾಷಣದ ನಂತರ ಲಲಿತಾ ರೆಡ್ಡಿ ಶ್ರೀಕಾಂತ ಅಜಗಾವಕರ, ರವೀಂದ್ರ ಹರಗುಡೆ ಯವರು ಸ್ಪರ್ಧೆಗಳ ಉದ್ಘಾಟನೆ ಮಾಡಿದರು.
ಶ್ರೀಮತಿ ಜಯಶ್ರೀ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಎನ್. ಡಿ. ಮಾದಾರ್ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿ. ಬಿ. ಪಾಟೀಲ್, ಮನೋಹರ್ ಬೆಳಗಾವಕರ್,, ಯುವರಾಜ ರತ್ನಾಕರ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ರವಿ ಗುರವ್, ಉಮೇಶ್ ಬೆಳಗುಂದಕರ, ಅರ್ಜುನ ಭೇಕಣೆ ಮತ್ತು ಪ್ರವೀಣ್ ಪಾಟೀಲ್ ರವರು ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರು :
ವೇಷಭೂಷಣ
1.ಶ್ವೇತಾ ಕೋಲಾರ್ (ಪ್ರ )
2.ಪ್ರಿಯಾಂಕ ಚೌಗುಲೆ (ದ್ವಿ )
3.ಗೌತಮಿ ದೇಶಪಾಂಡೆ (ತೃ )
ಮೆಹಂದಿ
1.ಪ್ರನೀತಾ ಧಬಾಲೆ (ಪ್ರ )
2.ವೃಶಾಲಿ ಸುತಾರ್ (ದ್ವಿ )
3.ವರ್ಷಾ ಪಾಟೀಲ್ (ತೃ )
ರಂಗೋಲಿ
1.ಸೋನಾಲಿ ಚೌಗುಲೆ (ಪ್ರ )
2.ಮೇಘಾ ಛೋಡಕೆ (ದ್ವಿ )
3.ವೈಶಾಲಿ ದೊಡಮನಿ (ತೃ )
100ಮೀ ಓಟ
1.ಅನುರಾಧಾ ಮಡಿವಾಳ (ಪ್ರ )
2.ಪ್ರಜ್ಞಾ ಪಾಟೀಲ್ (ದ್ವಿ )
3.ಅಶ್ವಿನಿ ಶ್ರೀನಿವಾಸ (ತೃ )
ಪೊಟಾಟೋ ರೇಸ್
1.ಶೃತಿ ಕೋಲಾರ್ (ಪ್ರ )
2.ಅಶ್ವಿನಿ ಶ್ರೀನಿವಾಸ (ದ್ವಿ )
3.ದಿವ್ಯಾ ಎನಬೇರ (ತೃ )
ಬೆಂಕಿಯಿಲ್ಲದೇ ಅಡಿಗೆ ಮಾಡುವುದು
1.ರೇಣುಕಾ ಕಂಗ್ರಾಳಕರ್ (ಪ್ರ )
2.ಸೋನಿಯಾ ಪಾಟೀಲ್ (ದ್ವಿ )
3.ಚಂದಾ ಪಾಟೀಲ್ (ತೃ )
ಸಂಗೀತ ಖುರ್ಚಿ
1.ಸೋನಾಲಿ ಮಾಯನ್ನಾಚೆ (ಪ್ರ )
2.ರೇಣುಕಾ ಕಂಗ್ರಾಳಕರ (ದ್ವಿ )
3.ಪ್ರಜ್ಞಾ ಪಾಟೀಲ್ (ತೃ )
9th March 2025
ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ
ಸಂಪನ್ನಗೊಂಡ ಅಡವಿಸಿದ್ದೇಶ್ವರ ಮಹಾರಥೋತ್ಸವ.
ಅಂಕಲಗಿ. ೦೭- ಶುಕ್ರವಾರ ಸುಪ್ರಸಿದ್ಧ ಅಂಕಲಗಿ ಅಡವಿಸಿದ್ಧೇಶ್ವರ ಸಂಸ್ಥಾನ ಮಠದ ಮಹಾ ರಥೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರುಗಿತು.
ಜಾತ್ರೆಯಲ್ಲಿ ದೂರದ ಮಹಾರಾಷ್ಟ್ರ, ಗೋವಾ, ಆಂಧ್ರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರಲ್ಲದೆ, ಭಕ್ತಿಯಿಂದ ರಥೋತ್ಸವದ ಮಹಾತಪಸ್ವಿ ಅಡವಿಸಿದ್ದೇಶ್ವರ ರಿಗೆ ಹಣ್ಣು,
ಕಾಯಿ, ಕಾರೀಖು ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡರು. ಜಾತ್ರೆಯಲ್ಲಿ ದನಗಳ ಜಾತ್ರೆ ವೈಭವದಿಂದ ಕೂಡಿತ್ತು. ಜಾತ್ರಾ ಕಮಿಟಿಯು ಯಾತ್ರಿಕರಿಗೆ ಎಲ್ಲ ಸುವ್ಯವಸ್ಥೆ ಕೈಗೊಂಡಿದ್ದರಲ್ಲದೆ, ಅಚ್ಚು,ಕಟ್ಟುತನದಿಂದ ಎಲ್ಲ ಸೌಲಭ್ಯಗಳನ್ನು ಕೈಗೊಳ್ಳಲಾಗಿತ್ತು. ಮಠದ ಮಠಾಧ್ಯಕ್ಷರಾದ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಪೊಲೀಸರು ರಸ್ತೆ ಸಾರಿಗೆ ಬಸ್ಸುಗಳಿಗೆ ಶಿಸ್ತು ಸೇರಿದಂತೆ ಸುವ್ಯವಸ್ಥೆ ಕಲ್ಪಿಸಿದ್ದರು.
ಸುರೇಶ ಉರಬಿನಟ್ಟಿ
6th March 2025
೭೭೦ ವರ್ಷ ತಪಗೈದ ಮಹಾತಪಸ್ವಿ
ಅಡವಿ ಮಹಾಸ್ವಾಮಿಗಳು.
ಮಹಾರಥೋತ್ಸವ ಜಾತ್ರೆ.
ಅಂಕಲಗಿ ೦೫- ಕುಂದರನಾಡು ಗೋಕಾಕ ತಾಲೂಕಿನ ಪಶ್ಚಿಮ ಘಟ್ಟದ ಅಂಚಿನ
ಮತ್ತು ಫಲವತ್ತಾದ ಪ್ರದೇಶ. ಇಲ್ಲಿ ಗುಡ್ಡ ಬೆಟ್ಟಗಳು, ಹಳ್ಳ ಕೊಳ್ಳಗಳು, ಪ್ರವಾಸಿಗರ ಕಣ್ಮನ ಸೆಳೆಯಬಲ್ಲ ತಾಣಗಳು. ೧೨ ನೇ ಶತಮಾನದ ಶರಣರ ಕಲ್ಯಾಣ ಕ್ರಾಂತಿಯ ನಂತರ ಶರಣರು ದಶ ದಿಕ್ಕುಗಳತ್ತ ಚದುರಿ ಹೋಗಿ ಅಲ್ಲಲ್ಲಿ ನೆಲೆ ನಿಂತು ಭಕ್ತರ ಉದ್ಧಾರಗೊಳಿಸಿದವರು..
ಚನ್ನ ಬಸವಣ್ಣನವರ ಅನತಿಯಂತೆ ಅಂದಿನ ಕಲ್ಯಾಣದ ಶಿವಶರಣರಲ್ಲಿ ಅತೀ ಹಿರಿಯರನಿಸಿದ ಹಿಮಾಲಯದಲ್ಲಿ ತಪಗೈದು ದಕ್ಷಿಣದತ್ತ ಬಂದು ಬಸವ ಶಿವಶರಣರಲ್ಲಿ ಕೂಡಿ, ಪೀಠದಲ್ಲಿ ತಾಂಬೂಲು ಸೇವೆ ಗೈದಿದ್ದ, ರೇಚಪ್ಪ ಸ್ವಾಮಿಗಳು, ಕುಂದರನಾಡಿನ ಕುಂದರಗಿಯ ಹುಣಸೆ ಮರದ ಪೊಟರೆಯಲ್ಲಿ ನೆಲೆ ನಿಂತು ತಪಗೈದು ನಂತರ ಅಂಕಲಗಿ ಸಮೀಪದ ಡೊಂಕ ಬಳ್ಳಾರಿ ಯ ತಟದ ಬಿದಿರು ಮೆಳೆಯಲ್ಲಿ ಆರಾಧ್ಯ ದೈವ ಸಿದ್ಧೇಶ್ವರನನ್ನು ಅರಾಧಿಸುತ್ತ ಭಕ್ತರ ಉದ್ಧರಿಸಿ ನಾಡು ಸಂಪನ್ನಗೊಳಿಸಿದವರು. ಮಹಿಮಾ ಪುರುಷರಾಗಿದ್ದ ರೇಚಪ್ಪ ಸ್ವಾಮಿಗಳು ಅಡಿವೆಪ್ಪರೆಂದು ಪ್ರಸಿದ್ಧರಾಗಿ, ಅರಮನೆ ನಾಚಿಸುವಂಥ ಭವ್ಯ ಮಠವನ್ನು ಕಟ್ಟಿ , ೭೭೦ ವರ್ಷಗಳ ಕಾಲ ಭಕ್ತರೊಂದಿಗೆ ಬದುಕಿ , ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಗರ್ಭ ಗುಡಿಯಲ್ಲಿ ಲಿಂಗೈಕ್ಯರಾದವರು. ಅವರು ಸಶರೀರವಾಗಿ ಕೈಲಾಸಕ್ಕೆ ಹೋಗುವಾಗ ಐಖ್ಯ ರಾದ ಸ್ಥಳದಲ್ಲಿ ಅವರು ಬಿಟ್ಟು ಹೋದ ಎರಡು ವಿಭೂತಿ ಗಟ್ಟಿಗಳನ್ನು ಇಂದಿಗೂ ಗದ್ದುಗೆಯ ಎರಡು ಹಿತ್ತಾಳೆ ಕಟ್ಟಿನಲ್ಲಿಟ್ಟು ನಿತ್ಯ ಪೂಜಿಸಲಾಗುತ್ತಿದೆ.
ಅವರ ಮಹಿಮೆಗಳು ಅಪಾರ, ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಮಹಾ ರಥೋತ್ಸವದ ಜಾತ್ರೆಯ ವೈಭವ ಇದೇ ಶುಕ್ರವಾರ ದಿನಾಂಕ ೦೭-೦೩-೨೦೨೫ರಂದು ಜರುಗಲಿದ್ದು, ಈ ಜಾತ್ರೆಯ ವೈಭವ ಕಾಣ್ತುಂಬಿಕೊಳ್ಳುವದೇ ಒಂದು ಸುಯೋಗ. ಸುಪ್ರಸಿದ್ಧಿಯಾದ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಜಾತ್ರೆಯು ಲಕ್ಷಾಂತರ ಭಕ್ತರ ಕೂಟ. ಅಲ್ಲಿ ಜಾತಿ, ಮತ,ಬಿಟ್ಟು ಮಾನವೀಯ ಪ್ರೀತಿ, ಪ್ರೇಮಗಳ ಸಂಗಮವಾಗಿ ವರ್ಷಕ್ಕೊಮ್ಮೆ ಶಿವರಾತ್ರಿಯ ೯ ನೇ ದಿನದಲ್ಲಿ ಅಪಾರ ಸಂಖ್ಯೆಯ ಜನಜಂಗುಳಿ ಯ. ಮಧ್ಯದಲ್ಲಿ ಮಹಾ ರಥೋತ್ಸವ ಜರುಗುತ್ತದೆ.
ಸೇರಿದ ಭಕ್ತ ಕೋಟಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಮಹಾ ರಥೋತ್ಸವಕ್ಕೆ ಕಾಯಿ,ಫಲಗಳನ್ನು ಎಸೆದು ಕ್ರತಾರ್ಥರಾಗುತ್ತಾರೆ. ಜಾತ್ರೆಯಲ್ಲಿ ಸೇರುವ ದನ, ಕರುಗಳಿಗೆ, ಮತ್ತು ಯಾತ್ರಾರ್ಥಿಗಳ ಸುಗಮ ಜಾತ್ರೆಗೆ ಪೂರಕವಾಗಿ ಸರ್ವತೋಮುಖ ಕಾರ್ಯ ಕೈಗೊಂಡಿದ್ದು, ಯಾವುದೇ ಜಾತ್ರೆಯಲ್ಲಿ ಪ್ರಸಿದ್ಧ ಫೈಲವಾನರ ಕುಸ್ತಿಗಳು, ಅತ್ಯುತ್ತಮ ದನಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಆತಂಕಗಳಾಗದಂತೆ ಸ್ವತ್ಃ ಮಠಾಧ್ಯಕ್ಷರಾದ ಶ್ರೀ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಿ, ಎಲ್ಲ ಜಾತ್ರೆಯ ವ್ಯವಸ್ಥೆ ಮಾಡಿ ಸೈ ಎನ್ನಿಸಿಕೊಂಡಿದ್ದು, ವಿಶೇಷವಾಗಿದೆ. ಸುರೇಶ ಉರಬಿನಹಟ್ಟಿ
6th March 2025
ಕಾವ್ಯವು ಸಂವೇದನಾಶೀಲ ಜಗತ್ತಿನ ಸೃಷ್ಟಿಗಾಗಿ : ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ
ಕಾವ್ಯವು ಗದ್ಯಕ್ಕಿಂತ ಶಕ್ತಿಯುತವಾದುದು. ಅದರ ಪ್ರಭಾವ ಮನಸ್ಸಿನ ಮೇಲೆ ಅಗಾಧವಾಗಿರುತ್ತದೆ. ಕಾವ್ಯದಲ್ಲಿನ ಸತ್ವವು ಸಂವೇದನಾಶೀಲ ಬದುಕಿಗೆ ಆಸರೆಯಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಫೆ. 5ರಂದು ಪ್ರೊ. ಸಿ. ಪಿ. ರವಿಚಂದ್ರ ಅವರೊಂದಿಗೆ ಪೊಯೆಟ್ರಿ ಇನ್ ಫೋಕಸ್ ಎಂಬ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ನೋಡುವ ಜಗತ್ತಿಗಿಂತ ಕಾವ್ಯದ ಜಗತ್ತು ಭಿನ್ನವಾಗಿದೆ. ನಮ್ಮೆಲ್ಲ ಏರಿಳಿತಗಳಿಗೆ ಕಾವ್ಯವು ಉತ್ತರವನ್ನು ಒದಗಿಸುತ್ತದೆ. ಬದುಕಿನ ಹೆಜ್ಜೆಯ ಮುಂಗಾಣ್ಕೆಯನ್ನು ನೀಡುತ್ತದೆ. ಭಾಷೆಯ ಮಡಿವಂತಿಕೆಯನ್ನು ಬಿಟ್ಟು ಎಲ್ಲಾ ಭಾಷೆಯ ಕಾವ್ಯ, ಸಾಹಿತ್ಯದ ಸಾರವನ್ನು ಹೀರಬೇಕು. ಕಾವ್ಯವು ಸಂವೇದನಾಶೀಲ ಜಗತ್ತಿನ ಸೃಷ್ಟಿಗಾಗಿ ತನ್ನನ್ನು ತೆರೆದುಕೊಳ್ಳಬೇಕು. ಆಗ ಅಂಥ ಕಾವ್ಯವು ಶಾಶ್ವತ ಸ್ಥಾನ ಪಡೆಯುತ್ತದೆ. ವಿದ್ಯಾರ್ಥಿಗಳು ವ್ಯವಹಾರದ ಚತುರರಾಗಬಾರದು, ವಿದ್ಯೆಯ ಚತುರರಾಗಬೇಕು ಎಂದು ಕಿವಿ ಮಾತು ಹೇಳಿದರು.
ರಾಚವಿ ಹಣಕಾಸು ಅಧಿಕಾರಿಗಳಾದ ಎಂ. ಎ. ಸಪ್ನಾ ಮಾತನಾಡಿ, ಕಾವ್ಯವು ಮನುಷ್ಯನನ್ನು ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುತ್ತದೆ. ಮನುಷ್ಯ ಬದುಕಬೇಕೆಂಬ ಉದ್ದೇಶದಿಂದ ಕಾವ್ಯ ಬರೆದಾಗ ಕಾವ್ಯ ಬದುಕುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಇಂಗ್ಲಿಷ್ ಪ್ರೊ. ಸಿ. ಪಿ. ರವಿಚಂದ್ರ ಅವರು ಮಾತನಾಡಿ, ತಾನು ಕಾವ್ಯ ಜಗತ್ತಿಗೆ ಬಂದಿದ್ದು ನನ್ನ ಗುರುಗಳಾದ ಅನಂತ ರಾಮಯ್ಯ ಅವರಿಂದ. ಅದು ತರಗತಿಯಲ್ಲಿ ನಡೆದ ವಚನದ ಭಾಷಾಂತರದಿಂದ.
ಕಾವ್ಯವು ಒಂದು ಪ್ರಜ್ಞೆಯಿಂದ ಇನ್ನೊಂದು ಪ್ರಜ್ಞೆಯೆಡೆಗೆ ಸಾಗಿಸುತ್ತದೆ. ಕವಿಯಾದವನು ಭಾಷೆಯೊಳಗಿನ ಪ್ರಜ್ಞೆಯನ್ನು ಮರೆಯಬಾರದು. ಪಂಪನನ್ನು ಹಿಡಿದು ಕನ್ನಡದ ಅನೇಕ ಕವಿಗಳು ಸಂಸ್ಕೃತದ ಮೂಲಕ ಕನ್ನಡ ಜಗತ್ತನ್ನು ಪ್ರವೇಶಿಸಿದರೆ, ಕುಮಾರವ್ಯಾಸ ಮಾತ್ರ ಕನ್ನಡ ಜಗತ್ತಿನಲ್ಲಿಯೇ ಕನ್ನಡ ಭಾಷೆಯನ್ನು ಹುಡುಕುವ ಪ್ರಯತ್ನ ಮಾಡಿದ. ಜಗತ್ತಿನ ಶ್ರೇಷ್ಠ ಕವಿಗಳೆಲ್ಲರೂ ಜನಸಾಮಾನ್ಯರ ಬದುಕಿನ ನೋಟವನ್ನು ಹೀರಿಕೊಂಡವರಾಗಿದ್ದಾರೆ.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಎಂ. ಜಿ. ಹೆಗಡೆ ಅವರು ನಮ್ಮಲ್ಲಿನ ಅನುಭವದ ಬುತ್ತಿಯೇ ಕಾವ್ಯದ ಜೀವಾಳ. ಕಾವ್ಯ ಬದುಕಿಗೆ ಎಚ್ಚರಿಕೆಯನ್ನು ಕೊಡುತ್ತಾ, ಭರವಸೆಯನ್ನೂ ತುಂಬುತ್ತದೆ. ಕಾವ್ಯವು ಜೀವ ಪರವಿರಬೇಕು. ಪ್ರೊ. ಸಿ.ಪಿ. ರವಿಚಂದ್ರ ಅವರ ಕಾವ್ಯವು ಅಳಿದ ಮೇಲೆಯೂ ಜೀವ ಸೆಲೆಯದ ಕುರಿತು ಹೇಳುವುದರ ಜೊತೆಗೆ ಕಾಲದೊಂದಿಗೆ ಬದುಕು ನಿರಂತರವಾಗಿರುತ್ತದೆ ಎಂಬ ದರ್ಶನವನ್ನು ನೀಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಡಾ. ಗಿರಿಜಾಶಂಕರ ಮಾನೆ ರಚಿಸಿದ ದಲಿತ್ ರಿಫ್ಲೇಕ್ಷನ್ಸ್ ಇಂಗ್ಲಿಷ್ ಕವನ ಸಂಕಲನವನ್ನು ಬಿಡುಗಡೆ ಮಾಡಿದರು.
ವಿದ್ಯಾರ್ಥಿಗಳಾದ ಅನನ್ಯ ನಾಯಕ ಸ್ವಾಗತಿಸಿದರು, ಮೀರಾ ನದಾಫ್ ಮತ್ತು ಸಾನ್ವಿ ತೆರಣಿ ನಿರೂಪಿಸಿದರು, ಪ್ರಿಯಾಂಕಾ ತೆಲಗಾರ ಪ್ರಾರ್ಥಿಸಿದರು, ಅಫ್ರೋಜಾ ದೇಸಾಯಿ ಪರಿಚಯಿಸಿದರು, ಅನುಷಾ ಮಸ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
3rd March 2025
ವನ್ಯಪ್ರಾಣಿಗಳನ್ನು ಮಕ್ಕಳಂತೆ ಪ್ರೀತಿಸಿ , ಹಸಿರು ಉಳಿಸಿ ಬೆಳೆಸಿ.
ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ ಕರೆ.
ಬೆಳಗಾವಿ. ೦೩ ನಮ್ಮ ಸುತ್ತಲಿರುವ ಹಸಿರು ರಾಶಿ , ಮನುಷ್ಯನ ಕಪಿ ಮುಷ್ಠಿಗೆ ಸಿಲುಕಿ ನಾಶವಾಗುತ್ತಿದ್ದು, ವನ್ಯಜೀವಿ ಬದುಕಿಗೆ ತೀರ ಸಂಕಷ್ಟ ಎದುರಾಗಿದ್ದು, ದುರದೃಷ್ಟದ ಸಂಗತಿಯಾಗಿದೆ ಎಂದು ಬೆಳಗಾವಿ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ ಹೇಳಿದರು. ಅವರು ಸೋಮವಾರ ರಾಮತೀರ್ಥನಗರದಲ್ಲಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಮತ್ತು ಸ್ನೇಹ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ವನ್ಯಜೀವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಸುಂದರವಾಗಿದ್ದರೆ, ವನ್ಯಜೀವಿ ಸುಂದರವಾಗಿರಬಲ್ಲದು. ವನ್ಯಜೀವಿ ಸುಂದರವಾಗಿದ್ದರೆ, ಮನುಷ್ಯ ಸಂಕುಲ ಸುಂದರವಾಗಿರಲು ಸಾಧ್ಯ. ವನ್ಯಜೀವಿ ಸಂಪತ್ತು ಜಗತ್ತಿನಲ್ಲಿ ಅತೀ ದೊಡ್ಡ ಸಂಪತ್ತು. ಬೆಲೆ ಕಟ್ಟಲಾಗದ ಸಂಪತ್ತು ಇದಾಗಿದೆ .ಎಂದರಲ್ಲದೆ, ಬೆಳಗಾವಿ ಸಮೀಪದಲ್ಲಿ ಅಪರೂಪದ ಹಸಿರಿನ ಹೊದಿಕೆ ಇದೆ. ಸಹ್ಯಾದ್ರಿಯ ಜೀವ ಸಂಕುಲಕ್ಕೆ ಕೊಟ್ಟ ಕೊಡುಗೆ ಅತ್ಯಮೂಲ್ಯವಾಗಿದ್ದು, ನಿಸರ್ಗದ ನಿತ್ಯ ಪೂಜೆ ನಮ್ಮದಾಗಬೇಕು. ವನ್ಯಜೀವಿ ಕುರಿತು ಹೆಚ್ಚೆಚ್ವು ಜಾಗ್ರತಿ ನಮ್ಮದಾಗಬೇಕು ಎಂದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಜಿ.ಐ ದಳವಾಯಿ ಮಾತನಾಡಿ, ವನ್ಯಜೀವಿ ಪ್ರೀತಿಸಿ ಆದರಿಸುವ ಮನಸ್ಸುಗಳು ನಾವಾಗಬೇಕು. ಸಮೀಪದ ಭೂತರಾಮನಹಟ್ಟಿ ಮ್ರಗಾಲಯದ ವನ್ಯಪ್ರಾಣಿಗಳನ್ನು ಪ್ರತಿಯೊಬ್ಬರೂ ದತ್ತು ಪಡೆದು ವನ್ಯಜೀವಿ ಸಂಕುಲ ಬೆಳೆಸುವದಾಗಬೇಕು. ಇನ್ನೂ ಮ್ರಗಾಲಯದಲ್ಲಿ ಜಿರಾಫೆ, ಆನೆ ಮುಂತಾದ ಪ್ರಾಣಿಗಳನ್ನು ಸೇರಿಸಬೇಕಾಗಿದ್ದು, ಈ ಕುರಿತು ಮ್ರಗಾಲಯ ಅಭಿವ್ರದ್ಧಿಗೆ ಒತ್ತು ನೀಡುವಂತೆ ಅರಣ್ಯ ಇಲಾಖೆಯ ಸಚಿವರನ್ನು ಕೋರಲಾಗಿದೆ ಎಂದರು. ವನ್ಯಜೀವಿ ಪರಿಸರ ವೇದಿಕೆ ಸದಸ್ಯರಾದ ಡಿ ಎಮ್ ಟೊಣ್ಣೆ, ಎನ್ ಬಿ ಹನ್ನಿಕೇರಿ, ಮಲ್ಲಪ್ಪ ದಂಡಿನವರ, ಬಸವರಾಜ
ಗೌಡಪ್ಪಗೋಳ, ಹಣ್ಣಿಕೇರಿ, ಮನೋಹರ ಕಾಜಗಾರ, ಕಾವ್ಯಾ ಚಿಟಗಿ, ಪ್ರೇಮಾ ಬಾಗೇವಾಡಿ, ಸುಜಾತಾ ಜುಟ್ಟನವರ, ಬಸವರಾಜ ತೇರಣಿ, ಸಿದ್ದಬಸಯ್ಯಾ ಹಿರೇಮಠ, ತೊಂಟಾಪೂರ ಸೇರಿದಂತೆ ವನ್ಯಜೀವಿ ಪರಿಸರ ಪ್ರಿಯರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸುರೇಶ ಉರಬಿನಹಟ್ಟಿ
2nd March 2025
ಬೆಳಗಾವಿ
ಖಾನಾಪುರ ತಾಲೂಕಿನ ಮಲಪ್ರಭಾ ನದಿ ದಡದಲ್ಲಿರುವ ಅಸೋಗಾ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಗಿಡ, ಮರಗಳ ಕೆಳಗಡೆ ಇಟ್ಟಿದ್ದ ದೇವರ ಫೋಟೋ ಸಂಗ್ರಹಿಸಿ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ ಬಸಯ್ಯ ಹಿರೇಮಠ ಅವರು, ರಾಮಲಿಂಗೇಶ್ವರ ದೇವಸ್ಥಾನಕ್ಕೆ ತನ್ನದೆಯಾದ ಇತಿಹಾಸ ಇದೆ. ಭಕ್ತರು ಇಲ್ಲಿಗೆ ಬಂದು ತಮ್ಮ ದೇವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಮನೆಯಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗೆ ಇಡುವ ಬದಲು ಅವುಗಳನ್ನು ಶಾಸ್ರೋಪ್ತವಾಗಿ ವಿಸರ್ಜನೆ ಮಾಡಬೇಕು. ದೇವರ ಫೋಟೋಗಳಿಗೂ ಜೀವ ಇರುತ್ತವೆ ಎಂಬ ಕಲ್ಪನೆ ನಮ್ಮ ಹಿಂದೂ ಪುರಾಣಗಳಲ್ಲಿ ಹೇಳುತ್ತಾರೆ. ಎಲ್ಲರೂ ಇದನ್ನು ತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದರು.
ದೇವರು ನಾನಾ ರೂಪದಲ್ಲಿ ಭಕ್ತರಿಗೆ ಪ್ರತ್ಯಕ್ಷನಾಗುತ್ತಾನೆ. ಸಂಭ್ರದಿಂದ ದೇವಸ್ಥಾನ, ಜಾತ್ರೆಗಳಲ್ಲಿ ದೇವರ ಫೋಟೋ ಹಣ ಕೊಟ್ಟು ಖರೀದಿ ಮಾಡಿ ಮನೆಯಲ್ಲಿ ಪೂಜೆ ಸಲ್ಲಿಸುವ ನಾವುಗಳು ಅದು ಮುಕ್ಕಾದಾಗ ಅದನ್ನು ಗಿಡ, ಮರಗಳ ಕೆಳಗಡೆ ಇಡುವುದರಿಂದ ನಮ್ಮ ಸಂಪ್ರದಾಯವನ್ನು ನಾವೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ದೇವರ ಫೋಟೋಗಳ ವಿಸರ್ಜನೆಗಾಗಿ ನಮ್ಮಗೆ ಸಂಪರ್ಕ ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವು ಬುಡರಕಟ್ಟಿ, ಮಕರಂದ ಲೋಕಂಡೆ, ಸುದೇಶ ತೋರವಾಟ, ಜಯಂತ ಪಾಟೀಲ್, ಮನೋಜ್ ಕೊಲ್ಸೆಕರ್, ಗೌರೀಶ್ ವೀರೇಶ್ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.