11th March 2025
ಸರ್ಕಾರದ ಯೋಜನೆಗಳ ಯಶಸ್ಸಿಗೆ
ಪ್ರಾಮಾಣಿಕತೆ ಅತ್ಯವಶ್ಯ.
ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಅಂಕಲಗಿ ೧೧- ಗುತ್ತಿಗೆದಾರರು ಪಡೆದ ಗುತ್ತಿಗೆ ಕಾಮಗಾರಿಗಳು ಸಾರ್ವಜನಿಕರ ಹಿತಕ್ಕೆ ಪೂರಕವಾಗಿರಬೇಕು. ಸರ್ಕಾರದ ಯೋಜನೆ ಗಳ ಯಶಸ್ಸಿಗೆ ನಮ್ಮಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ಗೋಕಾಕ ಯುವ ನಾಯಕ ಅಮರನಾಥ್ ಜಾರಕೀಹೊಳಿ ಹೇಳಿದರು. ಅವರು ಮಂಗಳವಾರ ಸಮೀಪದ ಮುಸಲ್ಮಾರಿ ಮಲ್ಲಾಪುರ ದಲ್ಲಿ ೧ ಕೋಟಿ ಅನುದಾನದಲ್ಲಿ ಮಂಜೂರಿಯಾದ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆಯ ವೈಭವ ಮತ್ತಷ್ಟು ಹೆಚ್ಚಲಿ , ಜನರಲ್ಲಿ ಪ್ರೀತಿ ಪ್ರೇಮಗಳ ಸಂಗಮವಾಗಿ ಸಂತಸದಲ್ಲಿ ನಲಿದಾಡುವಂತಾಗಲಿ ಎಂದು ಶುಭ ಹಾರೈಸಿದರಲ್ಲದೆ, ಜಾತ್ರೆ ನಂತರದ ದಿನಗಳಲ್ಲಿ ಉಳಿದ ಮತ್ತಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವದಾಗಿ ಹೇಳಿದರಲ್ಲದೆ, ಕರೆದು ಸನ್ಮಾನಿಸಿದ ಗ್ರಾಮದ ಜಾತ್ರಾ ಕಮಿಟಿಯ ಹಿರಿಯರಿಗೆ, ಧುರೀಣರಿಗೆ ಧನ್ಯವಾದ ಹೇಳಿದರು.
ಗ್ರಾಮದ ಧುರೀಣ, ಗೋಕಾಕ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸರ್ವರನ್ನು ಸ್ವಾಗತಿಸಿ, ಮಾತನಾಡಿ ನೆಚ್ಚಿನ ಶಾಸಕರಾದ ರಮೇಶ ಜಾರಕಿಹೊಳಿ ಅವರು ನಾಡಿನಲ್ಲಿ ಅತ್ಯಾವಶ್ಯಕವಾದ ರಸ್ತೆ, ಕುಡಿಯುವ ನೀರು, ಆಸ್ಪತ್ರೆಗಳು ಸೇರಿದಂತೆ ಮೂಲ ಸೌಕರ್ಯಗಳ ಅಭಿವ್ರದ್ಧಿಗೆ ಹೆಗಲು ಕೊಟ್ಟವರಾಗಿದ್ದು, ಸದ್ಯ ಅಧಿವೇಶನದಲ್ಲಿದ್ದುದರಿಂದಾಗಿ ಅವರಿಗೆ ಬರಲಾಗಿಲ್ಲ ಎಂದರಲ್ಲದೆ, ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕಿಹೊಳಿ ಮತ್ತು ಕೆ ಜೆ ಎಸ್ ಸಂಘದ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ ಅವರನ್ನು ಗ್ರಾಮದ ಪರ ಸನ್ಮಾನಿಸಿ ಅಭಿನಂದಿಸಿದರಲ್ಲದೆ, ವಂದಿಸಿದರು.
ಈ ಸಂದರ್ಭದಲ್ಲಿ ಕುಂದರನಾಡ ಶಿಕ್ಷಣ ಸಂಘದ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ, ಅಡಿವೆಪ್ಪಾ ಮಳಗಲಿ, ನಿತಿನಚಂದ್ರ ಕರಗುಪ್ಪಿಕರ, ಪಿ ಡಿ ಓ ಸುನಿಲ್ ನಾಯಕ್, ಇಂಜನೀಯರ್ ಶಿವಲಿಂಗ, ಗಂಗಪ್ಪ ಅಂಗಡಿ, ಗಂಗಾಧರ ಪಾಟೀಲ, ಮಾರುತಿ ನಾರಿ, ಚಂದ್ರಪ್ಪ ಗಸ್ತಿ, ದುಂಡಪ್ಪಾ ನಾಯಿಕ್, ಗೂಳಪ್ಪಾ ಹಡಗಿನಾಳ, ಬಸಲಿಂಗಪ್ಪಾ ಗುಡದವರ, ಮುದಕಪ್ಪಾ ಹಾಲವ್ವಗೋಳ, ಬಸ ಲಿಂಗಪ್ಪ ದಡ್ಡಿ, ಅಸದ್ ಪಾಟೀಲ, ವಿರುಪಾಕ್ಷಿ ಅಂಗಡಿ , ಬಸಪ್ಪಾ ಗುಡದವರ, ರಾಜು ಇರಪನ್ನಗೋಳ ಬಾಳಪ್ಪ ನಾಯ್ಕ, ಗೋಪಾಲ ಬೊಂಬ್ರಿ ಅಮರನಾಥ ಜಾರಕೀಹೊಳಿ ಅವರನ್ನು ಗ್ರಾಮದ ಪರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮತ್ತು ನಾಡಿನ ಅಭಿಮಾನಿಗಳು, ಜಾತ್ರಾ ಕಮಿಟಿಯು ಸದಸ್ಯರು ಉಪಸ್ತಿತರಿದ್ದರು.
11th March 2025
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ.
ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಬೆಳಗಾವಿ. ೧೦, ಬೆಳಗಾವಿ ಸುಪ್ರಸಿದ್ಧ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಕೊಳವೆ ಬಾವಿ ಕಲ್ಪಿಸಿದ ದಾನಿ ಶ್ರುತಿ ಪಾರ್ಕ್ ನಿವಾಸಿ, ಉದ್ಯಮಿ, ದಯಾನಂದ ಬಾಪು ಪಾಟೀಲ ಕಾರ್ಯ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು. ಅವರು ಸೋಮವಾರ ರಾಮತೀರ್ಥನಗರದಲ್ಲಿಯ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಅಂಗಳದಲ್ಲಿ ಕೊಳವೆ ಬಾವಿ ಕೊರೆಯುವ ಮಷಿನಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ವಾರ್ಥದಿಂದ ಸಮಾಜ ಸೇವೆ ಮರೆಯಾಗುತ್ತಿದ್ದು ದುರದ್ರಷ್ಟಕರ ಸಂಗತಿಯಾಗಿದ್ದು, ಸಮಾಜಕ್ಕೆನಮ್ಮಸೇವೆ ಸಂದಾಗ ಮಾತ್ರ ಅದು ದೇವರು ಮೆಚ್ಚುವ ಕಾರ್ಯವಾಗುವದು. ಇಂಥಹ ಅಪರೂಪದ ಕಾರ್ಯಕ್ಕೆ ಮುಂದಾಗಿರುವ ಈ ಮಂದಿರದ ಕಮಿಟಿ ಮತ್ತು ಸ್ನೇಹ ಸಮಾಜ ಸೇವಾ ಸಂಘದ ಕಾರ್ಯ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದರು.
ಸಂಘದ ಅದ್ಯಕ್ಷ ಸುರೇಶ ಉರಬಿನಟ್ಟಿ ಪ್ರತಿಕ್ರಿಯಿಸಿ ಮುಂಬರುವ ಎಪ್ರಿಲ್ ೧೨ನೇ ತಾರೀಖಿನಂದು ಸಂಜೆ ಸೇರುವ ಸುಮಾರು ೫ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಿದ್ದು, ಈ ಶುಭ ಸಂದರ್ಭಕ್ಕೆ ಅಂಕಲಗಿ ಹಾಗೂ ಕಾರಂಜಿ ಶ್ರೀ ಗಳು, ಸಂಸದರು, ಶಾಸಕರು, ವಿಧಾನ ಪರಿಷತ ಸದಸ್ಯರು , ಧುರೀಣರು ಚಾಲನೆ ನೀಡಲು ಆಗಮಿಸಲಿದ್ದು ಎಲ್ಲರೂ ಉಪಸ್ತಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಬೇಕೆಂದರಲ್ಲದೆ, ದೇವಸ್ಥಾನದ ಅಭಿವ್ರದ್ಧಿಗೆ ಸಹಕಾರ ನೀಡಿದ ಎಲ್ಲ ಮಹನೀಯರು ಅಭಿನಂದನಾರ್ಹರು. ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ನಮ್ಮ ಸಂಘಟನೆಯ ಪ್ರೀತಿ ಗೆದ್ದವರಾಗಿದ್ದಾರಲ್ಲದೆ, ದೊಡ್ಡ ಶಕ್ತಿಯಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಮನೋಹರ ಕಾಜಗಾರ , ಕಾರ್ಯದರ್ಶಿ ಮಂಜುನಾಥ ಪಾಟೀಲ, ಸದಸ್ಯರಾದ ಮಹೇಶ ಚಿಟಗಿ, ಕ್ರಷ್ಣಾ ಪಾಟೀಲ, ಮಲ್ಲಪ್ಪ ದಂಡಿನವರ, ಶಿವಾನಂದ ಮಠಪತಿ, ಮಹೇಶ ಬಾಗೇವಾಡಿ, ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಸಿದ್ದಬಸಯ್ಯಾ ಹಿರೇಮಠ ಸೇರಿದಂತೆ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸುರೇಶ ಉರಬಿನಟ್ಟಿ
3rd March 2025
ಕುಡಿವ ನೀರಿಗಾಗಿ ರಹವಾಸಿಗಳಿಂದ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾವಲಗಟ್ಟಿ ಗೆ ಮನವಿ. ಬೆಳಗಾವಿ. ೨೪- ಬೆಳಗಾವಿ ರಾಮತೀರ್ಥನಗರ ರಹವಾಸಿಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರ ನೋವಿಗೆ ಸ್ಪಂದಿಸುವಂತೆ ಒತ್ತಾಯಿಸಿ ಸೋಮವಾರ ರಾಮತೀರ್ಥನಗರ ಕುಂದರನಾಡ ರಹವಾಸಿಗಳ ಸಂಘ ಸ್ನೇಹ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಂದರನಾಡ ರಹವಾಸಿಗಳ ಸಂಘ ದ ಅದ್ಯಕ್ಷರು ಮತ್ತು ಮಾಜಿ ಮಹಾಪೌರರಾದ ಎನ್ ಬಿ ನಿರ್ವಾಣಿ, ನಮಗೆ ಕಳೆದ ೧೦ ದಿನಗಳಿಂದ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟ ದಲ್ಲಿದ್ದೇವೆ.
ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಅಧಿಕಾರಿಗಳನ್ನೊಳಗೊಂಡು ಶಾಸಕರು, ಸಚಿವರಲ್ಲಿ ವಿನಂತಿಸಿದ್ದು,
ನಮ್ಮ ನೀರಿನ ಭವನೆ ತಪ್ಪಿಲ್ಲ. ಎಂದರಲ್ಲದೆ, ನಾನು ನಗರದ ಮಹಾಪೌರನಿದ್ದಾಗ ನೀರು ಪೂರೈಕೆಯಲ್ಲಿ ತೊಂದರೆಯಾದಾಗ ಸಂಕಷ್ಟ ಪ್ರದೇಶದಲ್ಲಿ ಗಾಡಿಗಳ ಮೂಲಕ ಕುಡಿವ ನೀರು ಕೊಟ್ಟಿದ್ದೆ. ಈಗಿನ ನಮ್ಮ ತೊಂದರೆಗೆ ಸೂಕ್ತ ಕ್ರಮ ಜರುಗಿಸಿ ನಿಯಮಿತವಾಗಿ ನೀರು ಸರಬರಾಜು ಗೊಳ್ಳದಿದ್ದರೆ ಖಾಲಿ ಕೊಡಗಳೊಂದಿಗೆ.ಮಹಿಳೆಯರು ಸಮೇತ ಬೀದಿಗಿಳಿಯುವದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಮನವಿಗೆ ಸ್ಪಂದಿಸಿದ ವಿನಯ ನಾವಲಗಟ್ಟಿ ಮಾನ್ಯ ಉಸ್ತುವಾರಿ ಸಚಿವರಿಗೆ ಮನವಿಯ ತೀವ್ರತೆ ಕುರಿತು ವಿವರಿಸಿ ಸದ್ಯ ಸಮರ್ಪಕ ನೀರು ಸರಬರಾಜು ಆಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದರಲ್ಲದೆ ನಾನೂ ಅದೇ ಬಡಾವಣೆಯ ನಿವಾಸಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಟ್ರಸ್ಟ್ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ, ಉಪಾಧ್ಯಕ್ಷ ಎಸ್ ಜಿ ಕಲ್ಯಾಣಿ, ಖಜಾಂಚಿ ಮನೋಹರ ಕಾಜಗಾರ ಸದಸ್ಯರಾದ
ಬಸವರಾಜ ಗೌಡಪ್ಪಗೋಳ, ಜಿ ಐ ದಳವಾಯಿ ಸೇರಿದಂತೆ ರಹವಾಸಿಗಳು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ
4th February 2025
ಪ್ರಸಕ್ತ ಅವಧಿಗೆ
ಬಿಜೆಪಿ ಮಂಡಳ ಅಧ್ಯಕ್ಷರಾಗಿ ರಾಜೇಂದ್ರ ಗೌಡಪ್ಪಗೋಳ ಪುನರ್ ನೇಮಕ
ಅಂಕಲಗಿ. ೦೩- ಗೋಕಾಕ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷರಾಗಿ ಸಮೀಪದ ಎಸ್ ಎ ಮಲ್ಲಾಪುರ ಗ್ರಾಮದ ರಾಜೇಂದ್ರ ಗೌಡಪ್ಪಗೋಳ ಪನ ರ್ ನೇಮಕ ಗೊಂಡಿದ್ದಾರೆ.. ಈ ನೇಮಕವನ್ನು ರಾಜ್ಯ ಮತ್ತು ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರುಗಳು ಮತ್ತು ಪಕ್ಷದ ಚುನಾವಣಾಧಿಕಾರಿಗಳು ಖಚಿತ ಪಡಿಸಿ ಅಧಿಕ್ರತ ಆದೇಶ ಹೊರಡಿಸಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ನಿರ್ದೇಶನದಂತೆ ಈ ಪುನರ್ ನೇಮಕ ಪ್ರಕ್ರಿಯೆ ಜರುಗಿದ್ದು, ರಾಜೇಂದ್ರ ಗೌಡಪ್ಪಗೋಳ ಅವರು ಈ ಮೊದಲು ಸಹ ಗೋಕಾಕ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷರಾಗಿ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿ ಬಿಜೆಪಿ ಪಕ್ಷದ ಬಲವರ್ಧನೆಗೆ ಗ್ರಾಮೀಣ ವಲಯದಲ್ಲಿ ಶ್ರಮಿಸಿ ಕಾರ್ಯಕರ್ತರನ್ನು ಸಂಘಟಿಸಿ ಶಿಸ್ತಿನ ಶಿಪಾಯಿಯೆನಿಸಿದ್ದ ಕಾರಣ ಮತ್ತೆ ಇವರಿಗೆ ಅದ್ಯಕ್ಷ ಪಟ್ಟಒದಗಿ ಬಂದಿದ್ದು ಇವರ ಈ ಅಧಿಕಾರವಧಿಯು ಮುಂದಿನ ಮೂರು ವರ್ಷದ ವರೆಗೆ ಇರುವದು.. ಇವರ ಈ ಮರು ನೇಮಕದಿಂದ ಗೋಕಾಕ ಹಾಗು ಕುಂದರನಾಡ ಬಿಜೆಪಿ ವಲಯದಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ..
ಸುರೇಶ ಉರಬಿನಹಟ್ಟಿ
29th January 2025
ಇವತ್ತು ಬೆಳಗಾವಿ ನಗರದ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು
*ಸರ್ವಾನುಮತದಿಂದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಸುಭಾಷ್ ಪಾಟೀಲ್ ಮರು ಆಯ್ಕೆ*
ಸರ್ವಾನುಮತದಿಂದ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ಸುಭಾಷ್ ಪಾಟೀಲ್ ಅವರ ಹೆಸರನ್ನು ಘೋಷಣೆ ಮಾಡಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿ ರಾಜಶೇಖರ್ ಶೀಲವಂತ ಅವರು ಮಾತನಾಡಿ ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟ ಪಕ್ಷವಾಗಿದೆ ಗ್ರಾಮಾಂತರ ಜಿಲ್ಲೆಯಲ್ಲಿ
ಒಟ್ಟು 2115 ಚುನಾವಣಾ ಬೂತ್ ಗಳು , 418 ಪಕ್ಷದ ಶಕ್ತಿ ಕೇಂದ್ರಗಳು , 66 ಮಹಾಶಕ್ತಿ ಕೇಂದ್ರಗಳು ಜಿಲ್ಲೆಯಲ್ಲಿ 2115 ಬೂತ್ ಗಳಲ್ಲಿ ಬೂತ್ ಸಮಿತಿಗಳನ್ನು ರಚನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರತಿಶತ ನೂರರಷ್ಟು ಪಕ್ಷದ ಬೂತ್ ಸಮಿತಿ ರಚನೆ ಮಾಡಿದ ಪ್ರಪ್ರಥಮ ಜಿಲ್ಲೆಯಾಗಿದೆ. ಕಳೆದ ಹಲವು ದಿನಗಳ ಹಿಂದೆ ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಜಿಲ್ಲಾಧ್ಯಕ್ಷರ ಆಯ್ಕೆ ಬಗ್ಗೆ ಪ್ರಕ್ರಿಯೆಗಳ ಬಗ್ಗೆ ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು ನಂತರ ಜಿಲ್ಲೆಯ ವ್ಯಾಪ್ತಿಗೆ ಬರುವ ಒಂಬತ್ತು ಸಂಘಟನಾತ್ಮಕ ಮಂಡಲಗಳ ಅಧ್ಯಕ್ಷರುಗಳ ಸರ್ವಾನು ಮತದಿಂದ ಅಧ್ಯಕ್ಷರ ಘೋಷಣೆ ಮಾಡಲಾಯಿತು ನಂತರ ಸುಭಾಷ್ ಪಾಟೀಲ್ ಅವರನ್ನು ಸರ್ವಾನುಮತದಿಂದ ಮೂರು ವರ್ಷಗಳ ಅವಧಿಗೆ ಬೆಳಗಾವಿ ಗ್ರಾಮಾಂತರ ಜಿಲ್ಲೆಗೆ ಭಾರತೀಯ ಜನತಾ ಪಾರ್ಟಿ ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸುತ್ತಿದ್ದೇನೆ ಎಂದು ಹೇಳಿದರು. ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಷ್ ಪಾಟೀಲ್ ಅವರು ಮಾತನಾಡಿ ಕಳೆದ ಒಂದು ವರ್ಷಗಳ ಅವಧಿಗೆ ನಾನು ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮವಹಿಸಿ ದ್ದೇನೆ ಮತ್ತೆ ಈಗ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಮತ್ತೆ ಮೂರು ವರ್ಷಗಳ ಅವಧಿ ವರೆಗೆ ಜಿಲ್ಲೆಯ ಎಲ್ಲ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬೂತ್ ಮಟ್ಟದಿಂದ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಇದಕ್ಕೆ ಎಲ್ಲಾ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ವಿಶ್ವನಾಥ್ ಪಾಟೀಲ್, ಅರವಿಂದ ಪಾಟೀಲ, ರಾಷ್ಟ್ರೀಯ ಓ.ಬಿ.ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಚುನಾವಣಾ ಸಹ ಸಂಚಾಲಕ ಈರಣ್ಣ ಚಂದರಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಶ್ರೀ ದೇಸಾಯಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿಧ್ಧನಗೌಡ್ರ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ,ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ್ ಕೊಲಕಾರ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು
29th January 2025
ಸಾಮಾಜಿಕ ಬದ್ಧತೆ ಕಾಪಾಡಲು ನಂಬಿಕೆ ಮತ್ತು ಪ್ರೀತಿಯ ಹೊಕ್ಕುಳಬಳ್ಳಿಯನ್ನು ಬಲಪಡಿಸುವುದು ಮುಖ್ಯ: ಎಪಿಎಂಸಿ ಅಧ್ಯಕ್ಷ ನಿಂಗಪ್ಪ ಜಾಧವ*
*ಜಿಲ್ಲಾ ಆಸ್ಪತ್ರೆಯಲ್ಲಿ ಅಖಿಲ ಭಾರತ ಪ್ರಗತಿಶೀಲ ಎಲ್ಗಾರ್ ಸಾಮಾಜಿಕ ಸಾಹಿತ್ಯ ಪರಿಷತ್ತಿನ ವಿವಿಧೋದ್ದೇಶ ಸಂಸ್ಥೆ ಮತ್ತು ದೀಪಜ್ಯೋತಿ ಫೌಂಡೇಶನ್ ಹಣ್ಣು ಮತ್ತು ತಿಂಡಿ ವಿತರಣೆ*
ಬೆಳಗಾವಿ, ದಿನಾಂಕ 29 ಜನವರಿ 2025 : ಸಮಾಜಕ್ಕೆ ನಾವು ಯಾವ ಮನೋಭಾವನೆಯನ್ನು ಸಲ್ಲಿಸುತ್ತೇವೆಯೋ ಅದೇ ಮನೋಭಾವದಿಂದ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನಾಗಿ ಬದುಕುವ ಪ್ರವೃತ್ತಿಯನ್ನು ಸರಿದೂಗಿಸಲು ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು ಸಮಾಜಕ್ಕೆ ಏನಾದರೂ ಋಣಿಯಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿ ನಡೆಯುವಾಗ ನಮಗೆ ತಿಳಿದೋ ತಿಳಿಯದೆಯೋ ಅನೇಕ ಹಿರಿಯ ಗೆಳೆಯರ ಒಡನಾಟದಿಂದ ಲಾಭವಾಗುತ್ತದೆ. ನಾವು ಅವರೊಂದಿಗೆ ಬಲವಾದ ನಂಬಿಕೆ ಮತ್ತು ಪ್ರೀತಿಯ ಬಂಧವನ್ನು ಹೊಂದಿದ್ದೇವೆ. ಅಂತಹವರಿಂದ ಜೀವನದಲ್ಲಿ ನಮಗೆ ಅಮೂಲ್ಯವಾದ ಮಾರ್ಗದರ್ಶನ ಸಿಗುತ್ತದೆ. ಅಂತಹ ನಿಪುಣ ವ್ಯಕ್ತಿತ್ವದ ಮೂಲಕ ಬೆಳಗಾವಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ಮೂಲಕ ಎಲ್ಲ ವಿಭಾಗಗಳೂ ತಮ್ಮ ಕಾರ್ಯಸಾಧನೆಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ, ರೋಗಿಗಳು ಸರಿಯಾದ ಚಿಕಿತ್ಸೆಯಿಂದ ಹೇಗೆ ಪ್ರಯೋಜನ ಪಡೆಯಬಹುದು ಮತ್ತು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಅವರ ಆರೋಗ್ಯಕ್ಕೆ ಹೇಗೆ ಪ್ರಯೋಜನವಾಗಬಹುದು ಎಂಬುದನ್ನು ನೋಡಲು ವೈದ್ಯರು ಪ್ರಯತ್ನಿಸುತ್ತಾರೆ ಇದು ಗಡಿಯಾರದ ಸುತ್ತ ಕೆಲಸ ಮಾಡುತ್ತಿದೆ ಮತ್ತು ನಾವು ಗಂಭೀರವಾಗಿ ಗಮನಿಸಬೇಕು ಮತ್ತು ಅವುಗಳನ್ನು ಮುಂದುವರಿಸಬೇಕು. ಅವರ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹ ನೀಡಲು ಸಮಾಜ ಮುಂದೆ ಬಂದು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಕೆಲಸ ಮಾಡಲು ಪ್ರಯತ್ನಿಸಬೇಕು. * ಈ ಸಮರ್ಥನೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಜಾಧವ್ ಮಾಡಿದ್ದಾರೆ
ಅಖಿಲ ಭಾರತೀಯ ಪ್ರಗತಿಶೀಲ ಎಲ್ಗಾರ್ ಸಾಮಾಜಿಕ ಸಾಹಿತ್ಯ ಪರಿಷತ್ತು ವಿವಿಧೋದ್ದೇಶ ಸಂಸ್ಥೆ ಬೆಳಗಾವಿ ಕರ್ನಾಟಕ ಹಾಗೂ ದೀಪಜ್ಯೋತಿ ಫೌಂಡೇಶನ್ ಬೆಳಗಾವಿ ಇವರ ಸಹಯೋಗದಲ್ಲಿ ನರೇಗಾ ಕಾರ್ಯಕರ್ತೆ ಯಮಕನಮರಡಿ ಟೆಂಪೋ ಅಪಘಾತ ರೋಗಿಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಉಭಯ ಸಂಘಟನೆಗಳ ವತಿಯಿಂದ ಹಣ್ಣು ಹಂಪಲು ನೀಡಿ ಆರೋಗ್ಯ ವಿಚಾರಿಸಿದರು. ಮಂಗಳವಾರ 29 ಜನವರಿ 2025 ರಂದು ಬೆಳಗಾವಿಯ ಬೀಮ್ಸ್ ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳನ್ನು ವಿಚಾರಣೆ ನಡೆಸಲಾಯಿತು. ಅವರ ಆರೋಗ್ಯ ಉತ್ತಮವಾಗಲೆಂದು ಬೆಳಗಾವಿ ಜಿಲ್ಲೆಯ ಪರವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ನೀಡುವ ಮೂಲಕ ಎರಡೂ ಸಂಸ್ಥೆಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಜಾಧವ ವಹಿಸಿದ್ದರು. ಸ್ವಾಗತ ಮಂಡಳಿ ಅಧ್ಯಕ್ಷ ಶ್ರೀಧರ ಪಾಟೀಲ ಇದ್ದರು. ಸಮಾಜ ಸೇವಕ ಮಾರುತಿ ಬಡಿಗೇರ್ ಪರಿಚಯಿಸಿದರು. ಪ್ರಥಮೇಶ ಸಾವಂತ್ ಪರಿಚಯಿಸಿದರು. ವೇದಿಕೆಯಲ್ಲಿ ದೀಪಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷೆ ಜ್ಯೋತಿ ಗವಿ, ಸಮಾಜ ಸೇವಕ ಕವಿ ಪ್ರೊ.ನೀಲೇಶ ಶಿಂಧೆ, ಕಾರ್ಯದರ್ಶಿ ಕವಿತಾ ಸೋನವಾಲ್ಕರ್, ಕಲಕಂಬ ಗ್ರಾ.ಪಂ ಸದಸ್ಯ ಮಂಜುನಾಥ ಕಾಂಬಳೆ, ದಲಿತ ಸಮಾಜದ ಅಧ್ಯಕ್ಷ ಹರೀಶ್ ಮೇತ್ರಿ, ಮಾಜಿ ಕಾರ್ಪೊರೇಟರ್ ಅನಿಲ್ ಪಾಟೀಲ್ ವಿಚಾರ ಮಂಡಿಸಿದರು. ಶೋಭಾ ಲೋಹರ, ಮಾರುತಿ ಲೋಹರ, ಗಜಾನನ ಮಾದರ, ಡಾ.ಗಜಾನನ ವರ್ಪೆ, ಅಷ್ಟೆ ಗ್ರಾ.ಪಂ.ಅಧ್ಯಕ್ಷ ಬಾಳು ಕುರಬಾರ, ಚಂದ್ರಕಾಂತ ಭೈರತಕರ, ವಿನಾಯಕ ಲೋಹರ, ತಾಲೂಕಾ ಪಂಚಾಯತ ಮಾಜಿ ಸದಸ್ಯ ಕಮಲಮನೋಳಕರ, ಸುಧೀರ ಲೋಹರ, ನಾರಾಯಣ ಪಾಟೀಲ, ಸಾಗರ್ ಗುಂಜಿಕರ, ಪ್ರಾ. ವಿಶಾಲ ಕರಂಬಾಳ್ಕರ್, ಪ್ರೊ. ಶಶಿಕಾಂತ ಧಾಮನೇಕರ, ಬೆಳಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ ಹಡಗಲ್, ಜಿಲ್ಲಾ ಸರ್ಜನ್ ವೈದ್ಯ ವಿಠ್ಠಲ್ ಶಿಂಧೆ, ವೈದ್ಯಕೀಯ ದ್ವಿತೀಯ ಡಾ. ಈರಣ್ಣ ಪಲ್ಲದ್, ಅಧೀಕ್ಷಕ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುಧಾಕರ ಎಸ್. , ಡಾ.ಗಿರೀಶ್ ದಂಡಗಿ, ಡಾ. ಸಂದೀಪ್ ರೆಡ್ಡಿ, ಡಾ. ಸಂಜಯ ಕರ್ಪೂರ್, ಡಾ. ಸುಧೀರ್ ಭಟ್, ಭೀಮ್ಸ್ ನಿರ್ದೇಶಕ ಡಾ. ಅಶೋಕ್ ಶೆಟ್ಟಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ನೌಕರರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ವೈದ್ಯರು, ಗ್ರಾಮಸ್ಥರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಸಂದರ್ಭದಲ್ಲಿ ನಿಂಗಪ್ಪ ಜಾಧವ, ಶ್ರೀಧರ ಪಾಟೀಲ, ಜ್ಯೋತಿ ಗವಿ, ಪ್ರೊ.ನೀಲೇಶ ಶಿಂಧೆ, ಮಾರುತಿ ಬಡಿಗೇರ್, ಹರೀಶ್ ಮೇತ್ರಿ, ಮಂಜುನಾಥ ಕಾಂಬಳೆ, ಪ್ರಥಮೇಶ ಸಾವಂತ, ಗಜಾನನ ಮಾದರ, ಚಂದ್ರಕಾಂತ ಭೈರತಕರ ಮತ್ತಿತರರು.
23rd January 2025
ಶ್ರೀ. ವಿಜಯ್ ಎಲ್. ಪಾಟೀಲ ಬೇಳಗಾವಿ ಜಿಲ್ಲಾಧ್ಯಕ್ಷರು ನೆತೃತ್ವದಲ್ಲಿ ಆಮ್ ಆದಿ ಪಕ್ಷದ ಸದಸ್ಯರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸುಮಾರು 1,80/- ಕೋಟಿ ಕಿಂತ ಹೆಚ್ಚು ರೂಪಾಯಿಗಳು ಬೆಳಗಾವಿ ಜಿಲ್ಲೆಯಲ್ಲಿ ಸೂಪರ ಸ್ಪೇಸಾಲಿಟಿ ಆಸ್ಪತ್ರೆ ಕಟ್ಟಡ ಸಲುವಾಗಿ ಅನುದಾನ ಬಿಡುಗಡೆ ಆಗಿದೆ ಆಸ್ಪತ್ರೆ ಕಟ್ಟಡ ಕೇಲಸ 2 ವರ್ಷ ಪೂರ್ಣಗೊಂಡಿದೆ. ಆದರೆ ಇನ್ನುವರೆಗು ಸೂಪರ ಸ್ಪೇಸಾಲಿಟಿ ಆಸ್ಪತ್ರೆ ಪ್ರಾರಂಭ ಮಾಡಲಿಲ್ಲ. ಇದರಿಂದ ಜನ ಸಾಮಾನ್ಯರಿಗೆ ತಿವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಆಮ್ ಆದಿ ಪಕ್ಷದ ಸದಸ್ಯರು ಹೋಗಿ ಬಿ ಅಧಿಕಾರಿಗಳನ್ನು ಭೇಟಿ ಮಾಡಿದರು. ಆಸ್ಪತ್ರೆ ಕಟ್ಟಡ ಕೇಲಸ ಪೂರ್ಣಗೊಂಡಿದೆ. ಸುವರ್ಣ ಸೌಧದಲ್ಲಿ ಈ ಅಧಿವೇಶನದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ ಎಂದು ಬಿಮ್ಸ್ ಅಧಿಕಾರಿ ನಮಗೆ ತಿಳಿಸಿದ್ದರು, ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ, ಪ್ರಸ್ತುತ ಕೇವಲ 2 ಸೂಪರ್ ಸ್ಪೆಷಾಲಿಸ್ಟ ವೈಧ್ಯರು ಮಾತ್ರ ಲಭ್ಯವಿದ್ದಾರೆ ಎಂದು ಅವರು ನಮಗೆ ತಿಳಿಸಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಾರ್ಯರಚಣೆ ತರಲು ಹೇಚ್ಚಿನ ಸೂಪರ್ ಸ್ಪೆಷಾಲಿಸ್ಟ ವೈಧ್ಯರ ಅಗತ್ಯವಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ವಾದರು ಇನ್ನು ವೈಧ್ಯರನ್ನು ಎಕೆ ನೇಮಿಸಿಲ್ಲ. ಇದಕ್ಕೆ ಯಾರು ಹೋಣೆ. ಈ ನಿರ್ಲಕ್ಷದಿಂದ ಜನಸಾಮಾನ್ಯರಿಗೆ ಚಿಕಿತ್ಸೆ ಸಿಗುತ್ತಿಲ್ಲ.
ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆದಷ್ಟು ಬೇಗ ಕಾರ್ಯರಂಭ ಮಾಡಿ ಜನಸಾಮಾನ್ಯರಿಗೆ ಸೌಲಭ್ಯ ಕಲ್ಪಿಸುವಂತೆ ನೋಡಿಕೋಳ್ಳಬೇಕೆಂದು ವಿನಂತಿಸುತ್ತವೆ.
ನಮ್ಮ ಬೇಡಿಕೆಗಳನ್ನು ತಕ್ಷಣವೆ ಈಡೆರಿಸದಿದ್ದರೆ ಜನಸಾಮಾನ್ಯರ ಹೀತದೃಷ್ಟಿಯಿಂದ ನಾವು ಬಿದ್ದು ಆಸ್ಪತ್ರೆಯ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಹೋಗಬೇಕಾಗುತ್ತದೆ ಎಂದು ನಾವು ಜಿಲ್ಲಾಧಿಕಾರಿಯನ್ನು ತಿಳಿಸಿದ್ದೆವೆ.
ತಮ್ಮ ವಿಶ್ವಾಸಿಕರು
ದಿನಾಂಕ: 23/01/2025
: ಬೆಳಗಾವಿ
ಎಎಮ್ ಎಎಡಿಎಂ ಬಿ
ಅಗವಿಯಲ್
ಅನಿಸ ಎಮ್. ಸೌದಾಗರ ಪ್ರಧಾನ ಕಾರ್ಯದರ್ಶಿ
: 8150992222
ಕಚೇರಿ ವಿಳಾಸ: CCB 381, 2 ನೇ ಮುಖ್ಯ, 5 ನೇ ಕ್ರಾಸ್, ಸದಾಶಿವ ನಗರ, ಬೆಳಗಾವಿ. ಮೊ: 9741091854 / 8150992222 ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆ, ಬೆಳಗಾವಿ, ಕರ್ನಾಟಕ,
ವಿಷಯ :- ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಗಳ ಸುಧಾರಣೆಯ ಬಗ್ಗೆ,
ಮಾನ್ಯರೇ,
ಶ್ರೀ, ರಿಜವಾನ ಅಹ್ಮದ ಮಕಾನದಾರ ಅವರ ನೇತೃತ್ವದಲ್ಲಿ ಬೆಳಗಾವಿ ನಗರ ಅಧ್ಯಕ್ಷರು ಮತ್ತು ಆಮ್ ಅಡ್ಡಿ ಪಕ್ಷದ ಸದಸ್ಯರು ಇತ್ತಿಚಿಗೆ ಬೆಳಗಾವಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಶಾಲೆ ಅತ್ಯಂತ ಕಳಪೆ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಇಂತಹ ಕಳಪೆ ಮೂಲಸೌಕರ್ಯದಿಂದ ಗುಣಮಟ್ಟದ ಶಿಕ್ಷಣವನ್ನು ಹೋರತರುವುದು ಅಸಾಧ್ಯವಾಗಿದೆ. ಈ ಕಾರಣದಿಂದ ಇಂದು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದುವಂತೆ ಒತ್ತಾಯಿಸುತ್ತಿದ್ದಾರೆ. ಇಂದು ಖಾಸಗಿ ಶಾಲೆಗಳ ಭಾರಿ ಶುಲ್ಕವನ್ನು ಪಾವತಿಸಲು ಪೋಷಕರು ಆರ್ಧಿಕವಾಗಿ ಕಷ್ಟಪಡುತ್ತಿದ್ದಾರೆ.
ಮೇಲಿನ ವಿಷಯದಂತೆ ತಮ್ಮಲ್ಲಿ ವಿನಂತಿಸಿಕೋಳ್ಳುವುದೆನೆಂದರೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಈ ಕೇಳಗಿನ ಸಮಸ್ಯೆಗಳನ್ನು ದಯವಿಟ್ಟು ನಿಮ್ಮ ಗಮನಕ್ಕೆ ತರುವುದು.
1. ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ನೌಕರರು ಪೂರೈಸಬೇಕು.
2. ಎಲ್ಲಾ ಶಾಲೆಗಳು 1 ರೀಂದ 4ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ವೆಂಚ ಮತ್ತು ಡೆಸ್ಕ ಅನ್ನು ಒದಗಿಸಬೇಕು. ಯಾವುದೆ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕುಳಿತಕೊಳ್ಳಬಾರದು.
3. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಆಡಿಟ್ ನಡೆಸುವುದು ಮತ್ತು ಎಲ್ಲಾ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದು.
4. ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಏಕೀಕರಣ.
5. ಎಲ್ಲಾ ಸರ್ಕಾರಿ ಶಾಲೆಗಳು ಕ್ರೀಡಾ ಸಾಮಗ್ರಿಗಳೊಂದಿಗೆ ಸರಿಯಾದ ಆಟದ ಮೈದಾನವನ್ನು ಹೋಂದಿರಬೇಕು.
25
6. ಎಲ್ಲಾ ಶಾಲೆಗಳಲ್ಲಿ ಆರ್.ಓ. ಕೂಡಿಯುವ ನೀರು ಇರಬೇಕು.
7. ಎಲ್ಲಾ ಸರ್ಕಾರಿ ಶಾಲೆಗಳು ಸ್ವಚ್ಛ ಶೌಚಾಲಯ ಹೋಂದಿರಬೇಕು.
8. ಪ್ರತಿ ಮಗುವಿಗೆ ಸಮಾನ ಶಿಕ್ಷಣ ಗುಣಮಟ್ಟದ ಶಿಕ್ಷಣವು ಬಡ ವರ್ಗ, ಮಧ್ಯಮ ವರ್ಗ,
21st January 2025
*ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿ ಅನಾವರಣ*
-------------------------------
*"ಗಾಂಧೀ ಭಾರತ ನಿರ್ಮಾಣದ ಕನಸು"*
ಬೆಳಗಾವಿ, ಜ.21ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕವನ್ಮು ತಿರುಗಿಸುವ ಮೂಲಕ ಮಂಗಳವಾರ (ಜ.21) ಅನಾವರಣಗೊಳಿಸಿದರು.
ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿಯ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ; ಇಡೀ ಕರ್ನಾಟಕಕ್ಕೆ ಗೌರವ ತಂದಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ಹಾಗೂ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಗಾಂಧೀಜಿವರು ದೇಶಕ್ಕೆ ನೀಡಿದ ಕೊಡುಗೆಯನ್ನು ಈಗ ಎಲ್ಲರೂ ಸ್ಮರಿಸುತ್ತಿದ್ದಾರೆ.
ಗಾಂಧೀಜಿಯವರು ತಮ್ಮ ಅಧ್ಯಕ್ಷತೆಯಲ್ಲಿ 1924 ರಲ್ಲಿ ಜರುಗಿದ ಅಧಿವೇಶನದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕರೆ ನೀಡಿದರು. ಆದ್ದರಿಂದ ಈ ನೆಲವು ಐತಿಹಾಸಿಕ ಮಹತ್ವವನ್ನು ಹೊಂದಿದೆ.
1924 ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿಯೇ ನೂರು ವರ್ಷದ ಬಳಿಕ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.
ಗುಲ್ಬರ್ಗದಲ್ಲೂ ಕೂಡ ಮಹಾತ್ಮಾಗಾಂಧೀಜಿಯವರ ವಿಶೇಷ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಗಾಂಧೀಜಿಯವರು 1924 ರಲ್ಲಿ ಕಾಂಗ್ರೆಸ್ ನ ಐತಿಹಾಸಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಮಹಾತ್ಮಾ ಗಾಂಧೀಜಿಯವರು ಅಂದು ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಕುರಿತು ಪ್ರತಿಪಾದನೆ ಮಾಡಿದ್ದರು.
ಗಾಂಧೀಜಿಯವರು ಸದಾ ಶ್ರೀರಾಮನ ಸ್ಮರಣೆಮಾಡುತ್ತಿದ್ದರು. ಅವರು ಅಪ್ಪಟ ಹಿಂದೂ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಅವರು ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ; ಆದರೆ ಹಿಂದೂ ಧರ್ಮದಲ್ಲಿ ಸಮಾನತೆ ಮತ್ತು ಸಹೋದರತೆಯನ್ನು ಬಯಸಿದ್ದರು.
"ಹೇ ರಾಮ್" ಎನ್ನುತ್ತಲೇ ಕೊನೆಯುಸಿರೆಳೆದರು. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ.
ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಅದಕ್ಕೆ ನಾವು ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು.
ಇಂದಿನ ಯುವಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಗಾಂಧೀಜಿಯವರ ವಿಚಾರಧಾರೆಯನ್ನು ತಲುಪಿಸುವ ಉದ್ಧೇಶದಿಂದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು, "ಇದೊಂದು ಐತಿಹಾಸಿಕ ಕಾರ್ಯಕ್ರಮ; ಇದು ಕೇವಲ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾತ್ರವಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಮತ್ತು ಸಂವಿಧಾನದ ಘನತೆ ಎತ್ತಿ ಹಿಡಿಯುವ ಪವಿತ್ರ ಕಾರ್ಯಕ್ರಮವಾಗಿದೆ" ಎಂದು ಅಭಿಪ್ರಾಯಪಟ್ಟರು.
ಏಕೀಕರಣ ಕೂಡ ಗಾಂಧಿಜಿಯವರ ಪ್ರೇರಣೆ ದೊರೆತಿದೆ. ಏಕತೆ, ಸಮಾನತೆಕಾಪಾಡಿಕೊಂಡು ಗಾಂಧೀಜಿಯವರ ತತ್ವಾದರ್ಶಗಳನ್ನು ಪುನರ್ ಮನನ ಮಾಡಲು ಇದು ಸ್ಫೂರ್ತಿದಾಯಕವಾಗಿದೆ.
ಗಾಂಧೀಜಿಯವರ ತತ್ವಗಳನ್ನು ಬದಿಗಿಟ್ಟು ಸದೃಢ ಭಾರತ ನಿರ್ಮಾಣ ಅಸಾಧ್ಯ. ಆದ್ದರಿಂದ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಗ್ಗೂಡಿಕೊಂಡು ಮುನ್ನಡೆಯಬೇಕಿದೆ.
ರಾಮರಾಜ್ಯ ಮತ್ತು ಗ್ರಾಮರಾಜ್ಯ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಪರಸ್ಪರ ಸಹೋದರತೆ, ತ್ಯಾಗ, ಪತ್ನಿಯ ತ್ಯಾಗವು ರಾಮರಾಜ್ಯದ ನೈಜ ಪರಿಕಲ್ಪನೆಯಾಗಿದೆ ಎಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಅವರು, ಮಹಾತ್ಮಾ ಗಾಂಧೀಜಿಯ ಪ್ರತಿಮೆ ಅನಾವರಣ ಒಂದು ಅವಿಸ್ಮರಣೀಯ ಗಳಿಗೆಯಾಗಿದೆ. ವಿಗ್ರಹವಲ್ಲ ಚೈತನ್ಯದ ಹರವು ಎಂದು ಬಣ್ಣಿಸಿದ ಅವರು, ಪ್ರತಿಮೆಯು ಗಾಂಧೀಜಿ ಅನುಯಾಯಿಗಳಿಗೆ ಪ್ರೇರಣೆಯಾಗಲಿದೆ.
ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವು ಗಾಂಧಿ ಭಾರತಕ್ಕೆ ದಾರಿದೀಪವಾಗಲಿದೆ ಎಂದರು.
ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
*ಗ್ರಾಮೀಣ ವಿವಿಗೆ "ಮಹಾತ್ಮಾ ಗಾಂಧೀಜಿ" ನಾಮಕರಣ:*
ಗದುಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಯಲಯವನ್ನು "ಮಹಾತ್ಮಾ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ" ಎಂದು ಮರುನಾಮಕರಣ ಮಾಡುವುದರ ಜತೆಗೆ ನೂತನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕುಲಪತಿ ಡಾ.ಸುರೇಶ್ ನಾಡಗೌಡರ ಉಪಸ್ಥಿತರಿದ್ದರು.
*ವಿಶೇಷ ಅಂಚೆ ಚೀಟಿ-ಕೃತಿಗಳ ಬಿಡುಗಡೆ*
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಗಾಂಧೀ ಭಾರತ ವಿಶೇಷ ಅಂಚೆ ಲಕೋಟೆಯನ್ನು ಕೂಡ ಬಿಡುಗಡೆಗೊಳಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹೊರತರಲಾದ "ಗಾಂಧಿ ಭಾರತ-ಮರುನಿರ್ಮಾಣ" ಹಾಗೂ ಉದಯ ಕಾಲ ಸಮೂಹದ ಗಾಂಧಿ ಬಿತ್ತಿದ ಬೆಳಕು ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾಗಿದ್ದ ಹುಯಿಲಗೋಳ ನಾರಾಯಣರಾವ್ ಅವರು ರಚಿಸಿದ " ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು" ಗೀತೆಯನ್ನು ಸಾದ್ವಿನಿ ಕೊಪ್ಪ ಅವರು ಪ್ರಸ್ತುತಪಡಿಸಿದರು.
*ಬಾನಂಗಳಕ್ಕೆ ಚಿಮ್ಮಿದ ರಂಗು*
ಚರಕವನ್ನು ತಿರುಗಿಸುವ ಮೂಲಕ ಮಹಾತ್ಮಾಗಾಂಧೀಜಿಯವರ ಪ್ರತಿಮೆ ಅನಾವರಣಗೊಳಿಸಿದ ಕೂಡಲೇ ಬಾನಂಗಳಕ್ಕೆ ಚಿಮ್ಮಿದ ಬಣ್ಣದ ಚಿತ್ತಾರ ಮೂಡಿಸಿ, ಚಿತ್ತಾಕರ್ಷಕ ಕಾಮನಬಿಲ್ಲಿನ ವರ್ಣಗಳನ್ನು ಅರಳಿಸಿ, ಪಟಾಕಿ ಹಾರಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಪರವಾಗಿ ಅತಿಥಿಗಳನ್ನು ಸನ್ಮಾನಿಸಿ, ಗೌರವಿಸಿದರು.
ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವಂದಿಸಿದರು. ಬಿ.ಸಿ.ಭಾನುಮತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕರ್ನಾಟಕ ರಾಜ್ಯದ ಎಲ್ಲ ಸಚಿವರು, ಶಾಸಕರು, ಅನೇಕ ಸಂಸದರು, ಮಾಜಿ ಶಾಸಕರು ಸೇರಿದಂತೆ ಅನೇಕ ಗಣ್ಯರು, ತೆಲಂಗಾಣದ ಜನಪ್ರತಿನಿಧಿಗಳು ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
*****
12th January 2025
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2025
---------------------------------------
ರಾಯಣ್ಣನ ಇತಿಹಾಸ ಅರಿತು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು: ಶಾಸಕ ಮಹಾಂತೇಶ ಕೌಜಲಗಿ
ಬೆಳಗಾವಿ, ಜ.12ರಾಣಿ ಕಿತ್ತೂರು ಚೆನ್ನಮ್ಮರನ್ನು ನೆನೆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಿಸಲೇಬೇಕು. ಬ್ರಿಟಿಷ್ ವಿರುದ್ಧ ಹೋರಾಟದ ಕಿಚ್ಚು ಹಚ್ಚಿ ತಮ್ಮ ಬಲಿದಾನಗಳ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇಂದಿನ ಯುವ ಸಮೂಹ ರಾಯಣ್ಣನ ಇತಿಹಾಸ ಅರಿತು ರಾಷ್ಟ್ರಪ್ರೇಮ ಬೆಳಸಿಕೊಳ್ಳಬೇಕು ಎಂದು ಬೈಲಹೊಂಗಲ ಶಾಸಕರು ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ಕರೆ ನೀಡಿದರು.
ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರವಿವಾರ (ಜ.12) ಸಂಗೊಳ್ಳಿ ಶಾಲಾ ಆವರಣದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2025 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಆಶ್ವಾಸನೆಯಂತೆ ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ಹಾಗೂ ಸೈನಿಕ ಶಾಲೆ ನಿರ್ಮಾಣ ಮಾಡಿ ಈಗಾಗಲೇ ಲೋಕಾರ್ಪಣೆಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಭಾಗದ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಅದೇ ರೀತಿಯಲ್ಲಿ ಬೇವೀನಕೊಪ್ಪ ಸೇತುವೆ ನಿರ್ಮಾಣವಾಗಿದೆ. ಏತನೀರಾವರಿ, ಕೃಷಿ, ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.
ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಬಹುಪಾಲು ಸ್ವಾತಂತ್ರ್ಯ ಹೋರಾಟಗಾರರು ಈ ಭಾಗದವರೇ ಆಗಿದ್ದಾರೆ ಎಂಬುದು ಹೆಮ್ಮಯ ವಿಚಾರ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.
ಕಿತ್ತೂರು ಕಲ್ಮಠ ಸಂಸ್ಥಾನದ ರಾಜಗುರು ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ ತಾಯಿಗೆ ನೀಡಿದ ಮಾತಿನಂತೆ ಸಂಗೊಳ್ಳಿ ರಾಯಣ್ಣ ತಾಯಿ ನಿಷ್ಠೆ ಮೇರಿದಿದ್ದಾರೆ. ರಾಯಣ್ಣ ಪ್ರಾಮಾಣಿಕತೆ, ಪ್ರಬುದ್ಧತೆಯ ಮಹಾ ಶೂರನಾಗಿದ್ದರು. ಕಿತ್ತೂರು ಚಿಕ್ಕ ಸಂಸ್ಥಾನವಾದರೂ ಇಡೀ ಬ್ರಿಟಿಷ್ ಆಡಳಿತದ ನಿದ್ದೆಗೆಡಿಸಿ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದರು. ಚನ್ನಮ್ಮ, ರಾಯಣ್ಣನ ದಿಟ್ಟತನ ಯುವ ಪೀಳಿಗೆಗೆ ಮೈಗೂಡಿಸಿಕೊಳ್ಳಬೇಕು ಎಂದರು.
ಸರ್ಕಾರದಿಂದ ಶಾಲಾ ಪಠ್ಯಕ್ರಮದಲ್ಲಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಈ ನಾಡಿನ ವೀರರ ಪರಿಚಯ ಆಗಬೇಕಿದೆ. ದೆಹಲಿ ಪಾರ್ಲಿಮೆಂಟ್ ನಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಆಗಬೇಕಿದೆ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಆಗಬೇಕು ಎಂಬುದು ಜನರ ಬೇಡಿಕೆಯಾಗಿದೆ. ಅವರ ದೇಶಪ್ರೇಮವನ್ನು ನಾವೆಲ್ಲರೂ ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಒಡನಾಟದಲ್ಲಿದ್ದ ಬಿಚ್ಚುಗತ್ತಿ ಚನ್ನಪಸಪ್ಪನವರ ಮೂರ್ತಿ ಸಂಗೊಳ್ಳಿಯಲ್ಲಿ ನಿರ್ಮಾಣವಾಗಬೇಕಿದೆ. ರಾಯಣ್ಣನ ಇತಿಹಾಸ ಪರಿಚಯಿಸುವ ರಾಕ್ ಗಾರ್ಡನ್ ಈಗಾಗಲೇ ನಿರ್ಮಾಣವಾಗಿದೆ ಸಾಕಷ್ಟು ಪ್ರೇಕ್ಷಕರನ್ನು ಆಕರ್ಷಿಸಿದೆ
ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗೇಶ್ವರ ಹಿರೇಮಠ ಸಂಸ್ಥಾನದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ರಾಕ್ ಗಾರ್ಡನ್ ವೀಕ್ಷಣೆಗೆ ಬಹಳಷ್ಟು ದೂರದಿಂದ ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ಬರುತ್ತಿದ್ದಾರೆ. ಹಾಗಾಗಿ ಮುಂಬರುವ ದಿನಗಳಲ್ಲಿ ಬರುವ ವೀಕ್ಷಕರಿಗೆ ರಾಕ್ ಗಾರ್ಡನ್ ಪ್ರವೇಶ ದರ 50% ಇಳಿಕೆ ಮಾಡಬೇಕು ಇದರಿಂದ ಸಾರ್ವಜನಿಕರಿಗೆ ಅನುಕಲಾಗಲಿದೆ ಎಂದು ಹೇಳಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಬೈಲಹೊಂಗಲ ತಹಶೀಲ್ದಾರ್ ಹಣಮಂತ ಶಿರಹಟ್ಟಿ, ಬೈಲಹೊಂಗಲ ಉಪ ಅಧೀಕ್ಷಕ ರವಿ ನಾಯಕ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸವದತ್ತಿ ಸಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನವರ, ಕಿತ್ತೂರು ತಹಶೀಲ್ದಾರ್ ರವೀಂದ್ರ ಹಾದಿಮನಿ, ಸಂಗೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕೋರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
***
12th January 2025
ಜ್ಯೋತಿ ಸ್ವಾಗತ- ಧ್ವಜಾರೋಹಣ, ಜಾನಪದ ಕಲಾವಾಹಿನಿಗೆ ಚಾಲನೆ
---------------------------
ಸಂಗೊಳ್ಳಿ ಉತ್ಸವಕ್ಕೆ ಅದ್ಧೂರಿ ಚಾಲನೆ
ಬೆಳಗಾವಿ, ಜ.12 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2025 ಕ್ಕೆ ಸಂಗೊಳ್ಳಿಯಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿತು.
ಸಂಗೊಳ್ಳಿಯ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.
ಬೈಲಹೊಂಗಲ ಶಾಸಕರಾಗಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು, ಜ್ಯೋತಿಯನ್ನು ಸ್ವಾಗತಿಸಿದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಅವರು ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.
ಇದಾದ ಬಳಿಕ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ಕುಂಭ ಜೊತ್ತ ಮಹಿಳೆಯರು, ಪೂಜಾಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆಕುಣಿತ, ಸೇರಿದಂತೆ ವಿವಿಧ ಕಲಾತಂಡಗಳು ಉತ್ಸವಕ್ಕೆ ಮೆರುಗು ತಂದವು.
ಸಂಗೊಳ್ಳಿರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕಲಾತಂಡಗಳ ವಾದ್ಯಗಳ ಕರತಾಡನ, ನೃತ್ಯದ ಸೊಬಗು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉ ನಿರ್ದೇಶಕರಾದ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಹನುಮಂತ ಶಿರಹಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
***