6th February 2025
ರೋಟರಿ ಕ್ಲಬ್ ಆಫ್ ವೇಣುಗ್ರಾಮನ 25ನೇ ವಾರ್ಷಿಕೋತ್ಸವ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ರೋಟರಿ ಕ್ಲಬ್ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಮ್ಯಾರಾಥಾನ್ ಆಯೋಜಿಸಲಾಗಿದೆ. ಬೆಳಗಾವಿಯ ಸಿಪಿಎಡ್ ಮೈದಾನದಿಂದ ಬೆಳಗ್ಗೆ 5.00 ಘಂಟೆ ಗಂಟೆಗೆ ಆರಂಭವಾಗಲಿದೆ. ಈ ಮ್ಯಾರಾಥಾನ್ ನಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯಿಂದ ಮ್ಯಾರಾಥಾನ್ ಪಟುಗಳು ಭಾಗವಹಿಸಲಿದ್ದಾರೆ ಎಂದರು.
ಮ್ಯಾರಾಥಾನ್ ನಲ್ಲಿ 92 ವರ್ಷದ ವೃದ್ದ ಬೆಳಗಾವಿ ಮ್ಯಾರಾಥಾನ್ ನಲ್ಲಿ ಭಾಗವಹಿಸಲಿದ್ದಾರೆ. ಮ್ಯಾರಾಥಾನ್ ನಲ್ಲಿ ವಯಸ್ಸಿನ ಕ್ಯಾಟೇಗರಿ ಮಾಡಲಾಗಿದೆ. ಮ್ಯಾರಾಥಾನ್ ಪೂರ್ಣಗೊಳಿಸಿದವರಿಗೆ ಬಹುಮಾನ ನೀಡಲಾಗುವುದು ಎಂದರು. ಉಮೇಶ್ ಜಾಂಬೂರವಾಡೆ, ಮಲ್ಲಿಕಾರ್ಜುನ, ನವನ ಚೌಗುಲೆ, ಜಗದೀಶ್ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
23rd November 2024
ಮಕ್ಕಳ ಕಲಾ ಶಿಬಿರ
ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ನಾಯಕ ಸ್ಟೂಡೆಂಟ್ ಫೆಡರೇಶನ್ ಗೋಕಾಕ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ್ ಸಹಯೋಗದೊಂದಿಗೆ ನಿಮ್ಮೊಂದಿಗೆ ನಾವು ಕಾರ್ಯಕ್ರಮದ ನಿಮಿತ್ತ ದಿನಾಂಕ 24-11-2024 ರಂದು ಬೆಳಿಗ್ಗೆ 9:00 ಗಂಟೆ ಗೆಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿ/ನಿಯರಿಗೆ ಚಿತ್ರಕಲಾ ಶಿಬಿರವನ್ನು ಆಯೋಜಿಸಿದ್ದು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿ ತಿಳಿಸಿದೆ. ಮೊದಲು ಬಂದ 100 ವಿದ್ಯಾರ್ಥಿಗಳಿಗೆ ಆದ್ಯತೆ .ಹೆಚ್ಚಿನ ಮಾಹಿತಿಗಾಗಿ ಶ್ರೀ ಲಕ್ಷಣ ಚೌರಿ ಮಕ್ಕಳ ಸಾಹಿತಿಗಳು 9945189275 ಶ್ರೀ ಜಯಾನಂದ ಮಾದರ ಪ್ರಾಚಾರ್ಯರು 9481105667 ಶ್ರೀಮತಿ ವಿದ್ಯಾ ರೆಡ್ಡಿ ಸಾಹಿತಿಗಳು 9242252521 ಶ್ರೀ ಗಾಯಕವಾಡ ಚಿತ್ರ ಕಲಾ ಶಿಕ್ಷಕರು 8884701027 ಸದಸ್ಯ ಸಂಚಾಲಕಿ ಆಶಾರಾಣಿ ಬಿ ನಡೋಣಿ9448237722ಇಲ್ಲಿ ನೋಂದಾಯಿಸಬಹುದು.
9th November 2024
ಮಾರಿಹಾಳ ಗ್ರಾಮದ “ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ”ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನಬಾರ್ಡ್ ಯೋಜನೆಯ ಪ್ರತಿ ಶತ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಯಿತು.ಹಾಗು ಗ್ರಾಮೀಣ ಪ್ರದೇಶದಿಂದ ಶಹರಕ್ಕೆ ಹೋಗಿ ಕರ ಕುಶಲ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲು ಸೈಕಲ್ಮೋಟಾರಗಳನ್ನು ಸಂಘದ ನಿರ್ಧರಿತ ಬಡ್ಡಿ ರೂಪದಲ್ಲಿಕೊಡಲಾಯಿತು. ಈ ಸಂದರ್ಬದಲ್ಲಿ ಟ್ಟ್ರ್ಯಾಕ್ಟರಗಳ ರೈತ ಫಲಾನುಭವಿಗಳಾದ ಶಿವನಗೌಡ ನಿರ್ವಾಣಿ,ಅಲ್ತಾಫ್ ಜಮಾದಾರ ,ಇವರನ್ನು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ,ಹಸಿರು ಶಾಲ ಹಾಕಿ ಸತ್ಕರಿಸಿದರು.ಉಪಾಧ್ಯಕ್ಷರಾದ ಮಹದೇವ ಧನಾಯಿ,ಮುಖ್ಯ ನಿರ್ವಾಹಕರಾದ ರುದ್ರಪ್ಪ ಚನ್ನನ್ನವರ,ನಿರ್ದೇಶಕರಾದ ಜಿ,ಅಕ್ಕತಂಗೇರಹಾಳ,ಎಸ್ ಚಾಟೆ,ಎಸ್ ನಿರ್ವಾಣಿ,ಆರ್ ಹನ್ನೂರ,ವಿ ಚವಾಣ್,ಕೆ ಅಗಸಗಿ,ಎಸ್ ಮುಲ್ಲಾ,ಎಸ್ ಧರ್ಮೋಜಿ,ಜಿ ಪಾಟೀಲ,ಎಸ್ ಪೂಜೇರಿ,ಟ್ರ್ಯಾಕ್ಟರ್ರ ಮತ್ತು ಬೈಕ ಗಳ ಕೀಲಿ ಕೈ ಕೊಟ್ಟು ಅಭಿನಂದಿಸಿದರು.ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸಿಹಿ ಹಂಚಿದರು.
6th November 2024
ರಷಿಯಾದಲ್ಲಿ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ
ಅಕ್ಕತಂಗೇರಹಾಳ ವೈಷ್ಣವಿ ನಿರ್ವಾಣಿ ಗೆ ವಿಶ್ವ ಕರಾಟೆ ವೀರಾಗ್ರಣಿ ಪಟ್ಟ
ಅಂಕಲಗಿ. ೦೬- ರಷಿಯಾದ ಉಜಕಿಸ್ಥಾನ ದಲ್ಲಿ ಮಂಗಳವಾರ ಜರುಗಿದ ಅಂತರ್ರಾಷ್ಟ್ರೀಯ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ ಯಲ್ಲಿ ಕರ್ನಾಟಕ ಪ್ರತಿನಿಧಿಸಿ ಪಾಲ್ಗೊಂಡಿದ್ದ
ಗೋಕಾಕ ನಾಡಿನ ಅಕ್ಕತಂಗೇರಹಾಳ ಗ್ರಾಮದ ಪ್ರತಿಭಾವಂತ ಕರಾಟೆ ಪಟು, ೧೬ ರ ಬಾಲಕಿ, ವೈಷ್ಣವಿ ಶಿವನಗೌಡಾ ನಿರ್ವಾಣಿ ಸ್ವರ್ಣ ಪಡೆದು ವಿಶ್ವ ವೀರಾಗ್ರಣಿ ಪಟ್ಟ ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ಇಂಟರ್ ನ್ಯಾಶನಲ್ ಜೀತ್ ಕುನೆದೊ ಫೆಡರೇಶನ್ ನಿಂದ ಮಂಗಳವಾರ ದಿನಾಂಕ ೦೫ ರಂದು ರಷಿಯಾದ ಉಜಕಿಸ್ಥಾನ ದಲ್ಲಿ ಆಯೋಜಿಸಿದ ,ಉಜಕಿಸ್ಥಾನ ಐಎಂ ಜಿಸಿ -೨೦೨೪ ನ ವರ್ಲ್ಡ್ ಜೀತ್ ಕುನೆದೊ ಚ್ಯಾಂಪಿಯನ್ ಶಿಪ್ ಕರಾಟೆ ಸ್ಪರ್ಧೆ ಇದಾಗಿದೆ.
ಮೊದಲಿನಿನಿಂದಲೂ ಓದುವಿನೊಂದಿಗೆ ಆಟೋಟದಲ್ಲಿಯೂ ಆಸಕ್ತಿ ವಹಿಸಿದ್ದ ವೈಷ್ಣವಿ ಕರಾಟೆ ತನ್ನ ನೆಚ್ಚಿನ ಹವ್ಯಾಸವಾಗಿಸಿಕೊಂಡು, ಆ ಕ್ಷೇತ್ರದಲ್ಲಿ ಅಗಾಧ ಸಾಧನೆ ತನ್ನದಾಗಬೇಕೆಂಬುದು ಕನಸು ಕಂಡು ಆ ದಿಸೆಯಲ್ಲಿ ಹಗಲಿರುಳು ಶ್ರಮಿಸಿ ಈಗ ವಿಶ್ವ ಕರಾಟೆ ಕಿರಿಯರ ವೀರಾಗ್ರಣಿ ಸ್ಪರ್ಧೆಯಲ್ಲಿಯ ಈ ಅಗಾಧ ಸಾಧನೆಯು ಅತ್ಯಂತ ಖುಷಿ ತಂದಿದೆ ಎಂದು ಪತ್ರಿಕೆಗೆ ತನ್ನ ಸಂತಸ ಹಂಚಿಕೊಂಡಿದ್ದಾಳೆ. ವೈಷ್ಣವಿ ಈ ಮೊದಲು ರಾಜ್ಯ ,ಅಂತರಾಜ್ಯ ಮಟ್ಟದ ಅನೇಕ ಕಿರಿಯರ ಕರಾಟೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸೈ ಎನ್ನಿಸಿಕೊಂಡಿದ್ದು, ಚೆನ್ನೈ, ದೆಹಲಿ, ಡೆಹರಾಡೂನ್, ಮೈಸೂರು,ಬೆಂಗಳೂರು ಸೇರಿದಂತೆ ದೇಶದ ಉದ್ದಗಲದ ಹತ್ತಾರು ಮೆಟ್ರೋಪಾಲಿಟನ್ ನಗರಗಳಲ್ಲಿಯ ಕರಾಟೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿ,ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಇವಳ ಈ ವಿಶ್ವ ಮಾನ್ಯ ಸಾಧನೆಗೆ ಕುಂದರನಾಡಿನ ಕ್ರೀಡಾಭಿಮಾನಿಗಳಲ್ಲಿ ಅತ್ಯಂತ ಹರ್ಷ ವ್ಯಕ್ತವಾಗಿದ್ದು, ಇವಳು ಬೆಂಗಳೂರಿನ ಓಕಿನೋವಾ ಗೋಜುಕಾನ್ ಕರಾಟೆ ಶಾಲೆಯ ಎಸ್.ಸಿ.ದುರಾಯಿ ಅವರಲ್ಲಿ ವಿಶೇಷ ತರಬೇತಿ ಪಡೆದಿದ್ದು, ವೈಷ್ಣವಿ ಭಾರತೀಯ ಭೂ ಸೇನಾ ಪಡೆಯ ನಿವ್ರತ್ತ ಕ್ಯಾಪ್ಟನ್ ಶಿವನಗೌಡಾ ಮಲಗೌಡಾ ನಿರ್ವಾಣಿ ಅವರ ಏಕೈಕ ಸುಪುತ್ರಿಯಾಗಿದ್ದಾಳೆ. ಸುರೇಶ ಉರಬಿನಹಟ್ಟಿ
29th October 2024
ಅಂಕಲಗಿಯಲ್ಲಿ ದಶಾವತಾರ ಶ್ರೀ ಕ್ರಷ್ಣ
ಅಂಕಲಗಿ. ೩೦- ಬೆಳಗಾವಿಯ ರಾಮತೀರ್ಥನಗರ ದ ನಿವಾಸಿ ಲಿಟಲ್ ಸ್ಕಾಲರ ಸ್ಕೂಲ್ ನ ೧೦ ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ಮಹೇಶ ಶೆಟ್ಟಿ ಶಾಲೆಯಲ್ಲಿ ಮಂಗಳವಾರ ಜರುಗಿದ ವೇಷಧಾರಿ ಸ್ಪರ್ಧೆಯಲ್ಲಿ ವಿಷ್ಣುವಿನ ೮ ನೇ ದಶಾವತಾರ ಶ್ರೀ ಕ್ರಷ್ಣನ ವೇಷಧಾರಿ ಯಾಗಿ ಸ್ಪರ್ಧಿಸಿ ಎಲ್ಲ ಪ್ರೇಕ್ಷಕರ ವಿಶೇಷ ಗಮನ ಸೆಳೆದು ಪ್ರಶಂಶೆಗೆ ಪಾತ್ರಳಾಗಿದ್ದು, ವೇಷಧಾರಿಯಾಗಿ ಅದೇ ದಿನ ಶ್ರೀ ಕ್ಷೇತ್ರ ಅಂಕಲಗಿ ಮಠ ಕ್ಕೆ ಬಂದು ಕ್ಷೇತ್ರ ದರ್ಶನ ಪಡೆದಳು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಸ್ಫೂರ್ತಿ ಯ ತಂದೆ ಮಹೇಶ ಶೆಟ್ಟಿ, ತಾಯಿ ಜಯಶ್ರೀ ಶೆಟ್ಟಿ ಜೊತೆಗಿದ್ದರು ಸುರೇಶ ಉರಬಿನಹಟ್ಟಿ
28th October 2024
*ಔಷಧಿ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಸಮ್ಮಿಲನ, ಸಂವಾದ ಮತ್ತು ಸಮನ್ವಯ ಕಾರ್ಯಕ್ರಮವು ನಾಗಾವಿಯ* ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದಲ್ಲಿ ಜರುಗಿತು.
ಸಸ್ಯ ಸಂಜೀವಿನಿ ಔಷಧೀ ಹಾಗೂ ಸುಗಂಧಿ ಸಸ್ಯಗಳ ಪಾಲುದಾರರ ಒಕ್ಕೂಟ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ನಾಗಾವಿ, ಅರಣ್ಯ, ಆಯುಷ್, ತೋಟಗಾರಿಕೆ, ಮತ್ತು ಕೃಷಿ ಇಲಾಖೆ ಹಾಗೂ "ಧರಿತ್ರಿ" ಕೃಷಿ ಪರಿವಾರ ಗದಗ, ಮತ್ತು ಶ್ರೀ ಕಪ್ಪತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಕಡಕೋಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ಡೋಣಿಯ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ, ಕುಲಪತಿ. ಡಾ. ಎಸ್.ವಿ.ನಾಡಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಯಿತು.
ಒಕ್ಕೂಟದ ಉದ್ದೇಶ, ನಡೆದುಬಂದ ದಾರಿ ಕುರಿತು, ಕಪ್ಪತಗುಡ್ಡದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಔಷಧೀ ಹಾಗೂ ಸುಗಂಧ ಸಸ್ಯಗಳನ್ನು ಉಳಿಸುವ, ಬಳಸುವ, ಬೆಳೆಸುವ ಅವಶ್ಯಕತೆ ಹಾಗೂ ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಸಹಕಾರಿಯಾಗುವ ಕುರಿತು ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಪ್ರೊ. ಡಾ. ಜಗನ್ನಾಥರಾವ್ ತಮ್ಮ ಪ್ರಾಸ್ತಾವಿಕದಲ್ಲಿ ವಿವರಿಸಿದರು.
ಸಸ್ಯ ಸಂಜೀವಿನಿಯ ಪ್ರಧಾನ ಸಂಚಾಲಕ ಶ್ರೀ ಡಿ.ಕೆ.ಮಹೇಶಕುಮಾರರವರು ಒಕ್ಕೂಟದ ಧ್ಯೇಯೋದ್ದೇಶ, ಕ್ರಮಿಸಿದ ದಾರಿ, ರಾಜ್ಯಾದ್ಯಂತ ಹಮ್ಮಿಕೊಂಡ ಸಂಘಟನಾ ಸಭೆಗಳು, ಸಿದ್ಧತಾ ಸಭೆಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಮ್.ಎಸ್ ಉಪ್ಪಿನರವರು ಮಾತನಾಡುತ್ತಾ ಆಯುಷ್ ಇಲಾಖೆಯು ಒಕ್ಕೂಟದ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ಸಹಕರಿಸುವದಾಗಿ ತಿಳಿಸಿದರು.
ಪ್ರಗತಿಪರರ ರೈತ ಶ್ರೀ ಗುರುನಾಥಗೌಡ ಓದುಗೌಡರ ಒಕ್ಕೂಟದ ರಚನೆ ಹಾಗೂ ರೈತಪರ ಸೇವಾಭಾವ ಸ್ತುತ್ಯಾರ್ಹ ಕಾರ್ಯವಾಗಿದ್ದು, ಔಷಧೀಯ ಸಸ್ಯಗಳ ಅಭಿವೃದ್ಧಿಗಾಗಿ ವ್ಯವಸ್ಥಿತ ಅಧ್ಯಯನದ ಅವಶ್ಯಕತೆಯಿದ್ದು ಆ ನಿಟ್ಟಿನಲ್ಲಿ ಗ್ರಾಮೀಣ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪ್ರಾರಂಭಿಸಿ ಕಪ್ಪತಗುಡ್ಡದಲ್ಲಿಯ ಅಪರೂಪದ ಔಷಧೀಯ ಸಸ್ಯಗಳ ಸಂರಕ್ಷಣೆಯು ಸುಲಭಗೊಳ್ಳುವುದಲ್ಲದೇ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆಯೆಂದು ನುಡಿದರು.
ವಿವಿಧ ಇಲಾಖೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಒಕ್ಕೂಟದೊಂದಿಗೆ ಸಹಕರಿಸಿ ರೈತರ ಹಾಗೂ ಪಾಲುದಾರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಹುಲಕೋಟಿಯ ಕೆ.ವಿ.ಕೆ ಯ ವಿಜ್ಞಾನಿ ಡಾ.ಎಚ.ಆರ್.ಹಿರೇಗೌಡರ, ಹಾಗೂ ಪಾರಂಪರಿಕ ವೈದ್ಯ ಡಾ. ಚನಮಲ್ಲಯ್ಯ ಕಂಬಿ ಈ ಸಂದರ್ಭದಲ್ಲಿ ವಿಷಯ ಮಂಡಿಸಿದರು.
ಸಂವಾದದಲ್ಲಿ ಭಾಗಿಯಾಗಿದ್ದ ಒಕ್ಕೂಟದ ನಿರ್ದೇಶಕ ಭಾಲಚಂದ್ರ ಜಾಬಶೆಟ್ಟಿಯವರು ಮಾತನಾಡುತ್ತಾ ಒಕ್ಕೂಟದ ರೂಪರೇಷೆಗಳು ಸಿದ್ಧಗೊಂಡಿದ್ದು ಪಾಲುದಾರರಲ್ಲಿ ಮುಖ್ಯವಾಗಿ ರೈತರು, ಎಫ್.ಪಿ.ಓ ಗಳು, ಸಂಘ ಸಂಸ್ಥೆಗಳು, ಹಾಗೂ ಸಾಮಾನ್ಯ ಸದಸ್ಯರರನ್ನೊಳಗೊಂಡ ನಾಲ್ಕು ತೆರನಾದ ವಿಭಾಗಗಳಿದ್ದು, ಪರಸ್ಪರ ಸಹಕಾರದಿಂದ ಔಷಧೀ ಸಸ್ಯಗಳನ್ನು ಉಳಿಸುವುದು, ಬಳಸುವದು, ಬೆಳೆಸುವುದು, ಮೌಲ್ಯ ವರ್ಧನೆ ಮಾಡುವುದು, ಹಾಗೂ ವೃತ್ತಿನಿರತ ಪಾರಂಪರಿಕ ವೈದ್ಯರ ಸೇವೆಯನ್ನು ಜನಪ್ರಿಯಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗುತ್ತದೆಯೆಂದು ತಿಳಿಸಿದರು.
ಸಿರಸಿಯ ಪ್ರಗತಿಪರ ಶ್ರೀ ಪ್ರಶಾಂತ ಜೋಷಿಯವರು ಸಾವಯವ ಹಾಗೂ ನೈಸರ್ಗಿಕ ಕೃಷಿಯ ಅನುಭವಗಳನ್ನು ಹಂಚಿಕೊಂಡರು.
ಬೆಂಗಳೂರಿನ ಶ್ರೀ ಮಾರುತಿ ರಾವ್ ರವರು ರೈತರು, ಖರೀದಿದಾರರು, ಮೌಲ್ಯ ವರ್ಧಕರ ಮಧ್ಯ ಸಮನ್ವಯ ಸಾಧಿಸಲು ಆ್ಯಪ್ ಸಿದ್ಧಗೊಳಿಸಲಾಗಿದ್ದು ಅದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ರೈತರ ಹಾಗೂ ಪಾರಂಪರಿಕ ವೈದ್ಯರ ಸಮಸ್ಯೆಗಳನ್ನು ಸಂವಾದದಲ್ಲಿ ಕೂಲಂಕುಷವಾಗಿ ಚರ್ಚಿಸಿ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಒಕ್ಕೂಟ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆಯೆಂದು ಭರವಸೆ ನೀಡಲಾಯಿತು.
ಕಳೆದ 30 ವರ್ಷಗಳಿಂದ ಕಪ್ಪತಗುಡ್ಡದಿಂದ ಔಷಧೀಯ ಸಸ್ಯಗಳನ್ನು ವೈಜ್ಞಾನಿಕ ಪದ್ಧತಿಯಿಂದ ಸಂಗ್ರಹಿಸಿ ಆಯುರ್ವೇದ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ವೈದ್ಯರಿಗೆ ಪೂರೈಸಿ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಯಲ್ಲಿ ತೊಡಗಿರುವ ಹೊಸಳ್ಳಿಯ ಕಸ್ತೂರೆವ್ವ ಹಾರೂಗೇರಿಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಡಾ. ಉಡಚಪ್ಪ ಪೂಜಾರವರು ಮಾತನಾಡುತ್ತಾ ಔಷಧೀಯ ಸಸ್ಯಗಳ ನರ್ಸರಿ ಪ್ರಾರಂಭಿಸಿದ್ದು, ರೈತರಿಗೆ ಸಸಿ ಪೂರೈಸುವ ಕಾರ್ಯದಲ್ಲಿ ವಿಶ್ವವಿದ್ಯಾಲಯವು ತೊಡಗಿಕೊಂದಿದೆಯೆಂದು ತಿಳಿಸಿದರು.
ಕಪ್ಪತಗುಡ್ಡದಲ್ಲಿರುವ ಸಸ್ಯ ವೈವಿಧ್ಯತೆಯನ್ನು ಸಂರಕ್ಷಿಸಲು ವಿಶ್ವವಿದ್ಯಾಲಯವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು
ಕುಲಪತಿ ಡಾ. ಎಸ್.ವಿ.ನಾಡಗೌಡರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಮಿಗಳು
ಆಶೀರ್ವಚನ ನೀಡುವ ಸಂದರ್ಭದಲ್ಲಿ ಕಪ್ಪತಗುಡ್ಡದ ಮಡಿಲಲ್ಲಿ ಅಸಂಖ್ಯಾತ ಅಪರೂಪದ ಸಸ್ಯಗಳಿದ್ದು, ಅವುಗಳ ಸಂರಕ್ಷಣೆಗಾಗಿ ಶ್ರೀ ಮಠವು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಈ ಒಕ್ಕೂಟ ಸ್ಥಾಪನೆಯೂ ಸಹ ಒಂದು ಭಾಗವಾಗಿದೆ.
ರಾಜ್ಯಾದ್ಯಂತದ ವಿವಿಧ ಪಾಲುದಾರರನ್ನು ಸಂಘಟಿಸಿ ಪರಸ್ಪರ ಒಳಿತಿಗಾಗಿ ಸಮನ್ವಯ ಸಾಧಿಸಿ ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತೆ ಯೋಜಿಸಲಾಗುತ್ತದೆಯೆಂದು ನುಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಡಾ. ಬಸವರಾಜ ನಾವಿ ಯವರು ರೈತ ಗೀತೆ ಹಾಡಿದರು.
ರುದ್ರಣ್ಣ ಗುಳಗುಳಿ ಸ್ವಾಗತಿಸಿದರು, ಡಾ. ನಾಭೂಷಣ, ನೈಸರ್ಗಿಕ ಕೃಷಿಕ ದೇವರಡ್ಡಿ ಅಗಸನಕೊಪ್ಪ ಕಾರ್ಯಕ್ರಮ ಸಂಯೋಜಿಸಿದರು.
ಸೊರಟೂರಿನ ಶ್ರೀ ಬಸವರಾಜ ಶೈಲಪ್ಪನವರ ನಿರೂಪಿಸಿದರು.
ಡಾ. ದೀಕ್ಷಿತ, ವಿಶ್ವವಿದ್ಯಾಲಯದ ಸಿಬ್ಬಂದಿ, ನೂರಾರು ರೈತರು, ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು
ಭಾಲಚಂದ್ರ ಜಾಬಶೆಟ್ಟಿ
9741888365
23rd October 2024
ವೀರರಾಣಿ ಚನ್ನಮ್ಮಾಜಿ ಉತ್ಸವದ ಪ್ರಯುಕ್ತ ಕಿತ್ತೂರಿನಲ್ಲಿ ಜರುಗಿದ " ಮಹಿಳೆಯರ ಮ್ಯಾರಥಾನ್ " ಸ್ಪರ್ಧೆಯಲ್ಲಿ ಸಾಕಷ್ಟು ಮಹಿಳಾ ಓಟಗಾರರು ಪಾಲ್ಗೊಂಡು ಮ್ಯಾರಥೋನ್ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು..
23rd October 2024
ಕರ್ನಾಟಕ ರಾಜ್ಯ ಸ್ಪಾಟ್ ಸಾಫ್ಟ್ ಕ್ರಿಕೆಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಂಗಾಧರ ರಾಜು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ಸ್ಟ್ರೀಟ್ ಕ್ರಿಕೆಟ್ ಸ್ಪರ್ಧೆ ಆರಂಭವಾಗಿದ್ದು, ಬೆಳಗಾವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ಬೆಳಗಾವಿಯ ಖಾಸಗಿ ಹೊಟೇಲ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಮಾತನಾಡಿದ ಅವರು ಈ ಟೂರ್ನಿಯಲ್ಲಿ 32 ತಂಡಗಳು ಭಾಗವಹಿಸಲಿವೆ. ನವೆಂಬರ್ 1 ರಿಂದ ಡಿಸೆಂಬರ್ 1 ರವರೆಗೆ ಬೆಂಗಳೂರಿನ ಸೋಲದೇವನಹಳ್ಳಿಯ ಎಸ್ಎಂಟಿ ನಾಗರತ್ನಮ್ಮ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಆಟಗಾರರಿಗೆ ವೇದಿಕೆ ಕಲ್ಪಿಸುವುದು ಮುಖ್ಯ ಉದ್ದೇಶ
ಈ ಎಲ್ಲಾ ಆಟಗಾರರಿಗೆ ಹಣ ನೀಡಲಾಗುತ್ತದೆ. ಬೆಳಗಾವಿಯಿಂದ 20 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, 16 ಸ್ಪರ್ಧಿಗಳು ತಂಡದಲ್ಲಿ ಆಡಲಿದ್ದಾರೆ ಎಂದು ತಿಳಿಸಲಾಗಿದೆ.
23rd October 2024
ಬೆಳಗಾವಿ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಪಂಕಜಾ ರೆವನ್ನಕರ ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್ಶಿಪ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಇಚ್ಛಿತ್ತಿಗೆ ಬೆಂಗಳೂರಿನಲ್ಲಿ ನಡೆದ ಫಡೆರೇಷನ ಆಫ್ ಪ್ಯಾರಾ ಸ್ವಿಮ್ಮಿಂಗ್ ಇಂಡಿಯಾ ಅಡಿಯಲ್ಲಿ ಕರ್ನಾಟಕ ಪ್ಯಾರಾ ಸ್ವಿಮ್ಮಿಂಗ್ ಅಸೋಸಿಯಷನ್ ಆಯೋಜಿಸಿದ ರಾಜ್ಯ ಮಟ್ಟದ ಪ್ಯಾರಾ ಈಜು ಚಾಂಪಿಯನ್ಶಿಪ್ ನಲ್ಲಿ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನುಪಡೆದುಕೊಳ್ಳುವುದರ ಜೋತೆಗೆ ರಾಷ್ಟ್ರೀಯ ಮಟ್ಟದ ಈಜು ಸ್ಫರ್ಧೇಗೆ ಆಯ್ಕೆಯಾಗುವುದರ ಮೂಲಕ ವಿದ್ಯಾರ್ಥಿ ಸಂಸ್ಥೆಗೆ ಕಿರ್ತಿಯನ್ನು ತಂದಿರುತ್ತಾರೆ.
ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಳ್ಳುವ ಮೂಲಕ ತನ್ನ ವಿಶೇಷಾದ ಸಾಮಥ್ಯವನ್ನು ಪ್ರದರ್ಶಿಸುವಲ್ಲಿ ವಿದ್ಯಾರ್ಥಿಯ ಆತ್ಮವಿಶ್ವಾಸ ಎಲ್ಲಿಗೂ ಪ್ರೇರಣಾದಾಯಕವಾಗಿದೆ ಮತ್ತು ಸಂಸ್ಥೆಗೆ ಕೀರ್ತೀ ತರುವ ವಿಷಯವಾಗಿದೆ.
ಬೆಳಗಾವಿ ಬಿಮ್ಸ್ ನ ಗೌರವಾನ್ವಿತ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಮತ್ತು ಬಿಮ್ಸ್ ನ ಮುಖ್ಯ ಆಡಳಿತ ಅಧಿಕಾರಿ ಸಿದ್ದು ಹುಲ್ಲೋಳಿ ಎಲ್ಲ ವಿಭಾಗದ ಮುಖ್ಯಸ್ಥರು ಅಭಿನಂದಿಸಿದರು ಹಾಗೂ ಬಿಮ್ಸ್ ಬೆಳಗಾವಿಯ ಎಲ್ಲ ಭೋದಕ ಹಾಗೂ ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಯ ಸಾಧನೆಯ ಬಗ್ಗೆ ಅತ್ಯಂತ ಹೆಮ್ಮೆಪಡುವುದರ ಮೂಲಕ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.
21st October 2024
ರಾಷ್ಟ್ರ ಮಟ್ಟದ ಟೆನಿಸ್ ಕ್ರಿಕೆಟ್ ನಲ್ಲಿ ಚಿನ್ನದ ಪದಕ ಪಡೆದ ಆಶಾ ಮಂಗೋಜಿ
ಅಂಕಲಗಿ. ೨೧- ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಢಾಲಪುರ ನಲ್ಲಿ ಇತ್ತೀಚೆಗೆ ಜರುಗಿದ ಪ್ರಥಮ ಮಹಿಳಾ ರಾಷ್ಟ್ರೀಯ ಟಿ- ೧೦ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಪ್ರತಿನಿಧಿಸಿ ಪಾಲ್ಗೊಂಡಿದ್ದ ಸಮೀಪದ ಈರನಟ್ಟಿ ಗ್ರಾಮದ ಆಶಾ ಬಸಪ್ಪಾ ಮಂಗೋಜಿ ತೃತೀಯ ಸ್ಥಾನಗಿಟ್ಟಿಸಿ, ಚಿನ್ನದ ಪದಕ ಪಡೆದುಕೊಂಡು, ರಾಜ್ಯ, ಜಿಲ್ಲೆ ಸೇರಿದಂತೆ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಇವಳ ಈ ಸಾಧನೆಗೆ ನಾಡಿನ ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕೃಷಿಕ ಕುಟುಂಬದಿಂದ ಬಂದ ಆಶಾ ಬಿ.ಎಸ್ಸಿ ಪದವಿ ಪಡೆದು, ಬೆಂಗಳೂರಿನ ಸೀನ ಸ್ಪೋರ್ಟ್ಸ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಟೆನಿಸ್ ಕ್ರಿಕೆಟ್ ನಲ್ಲಿ ಸತತ ಅಧ್ಯಯನ ಆಸಕ್ತಿ ಮತ್ತು ಕ್ರಿಯಾಶೀಲತ್ವ ವಹಿಸಿಕೊಂಡಿರುವ ಇವಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇರು ಸಾಧನೆ ತನ್ನದಾಗಬೇಕೆಂಬ ಮನದ ಇಂಗಿತ ವ್ಯಕ್ತಪಡಿಸಿದ್ದಾಳೆ.
ಆಶಾ ಮದವಾಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆಯಾದ ಕಮಲಾಕ್ಷಿ ಬಸಪ್ಪಾ ಮಂಗೋಜಿ ಅವರ ಸುಪುತ್ರಿಯಾಗಿದ್ದಾಳೆ.
ಸುರೇಶ ಉರಬಿನಹಟ್ಟಿ