22nd December 2024
ಸಂಗೊಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಕ್ಷೇತ್ರ ಕಾರ್ಯ
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು 2024-25ರ ಶೈಕ್ಷಣಿಕ ಕ್ಷೇತ್ರಕಾರ್ಯಕ್ಕಾಗಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಪ್ಪಣ್ಣ ಜಿರನಾಳ, ಡಾ. ಪ್ರೀತಿ ಪದಪ್ಪಗೊಳ ನೇತೃತ್ವದಲ್ಲಿ ಬೆಳಗಾವಿಯ ಮಹೇಶ್ ಫೌಂಡೇಶನ್ ಗೆ ಭೇಟಿ ನೀಡಿದರು. ಮಹೇಶ್ ಫೌಂಡೇಶನ್ ನ ಮುಖ್ಯಸ್ಥರಾದ ಮಹೇಶ ಜಾದವ್ ಹಾಗೂ ಅಲ್ಲಿನ ಮಕ್ಕಳೊಂದಿಗೆ ಯುವ ಜನಾಂಗದಲ್ಲಿ ಹರಡುತ್ತಿರುವ ಎಚ್. ಐ. ವಿ. ಹಾಗೂ ಮಕ್ಕಳ ಸಮಸ್ಯೆಯ ಕುರಿತು ಚರ್ಚಿಸಿದರು. ಅದನ್ನು ತಡೆಗಟ್ಟುವಲ್ಲಿ ಸಮಾಜದ ಪಾತ್ರ, ಯುವಜನತೆಯ ಸಾಮಾಜಿಕ ಜವಾಬ್ದಾರಿ ಕುರಿತು ಸಂವಾದ ನಡೆಸಿದರು.
ಮಹೇಶ್ ಫೌಂಡೇಶನ್ ನ ಮುಖ್ಯಸ್ಥರಾದ ಮಹೇಶ್ ಜಾದವ್ ತಮ್ಮ ಫೌಂಡೇಶನ್ ನಡೆದು ಬಂದ ದಾರಿ, ಅದರ ಉದ್ದೇಶ, ಸಮಾಜದಲ್ಲಿ ಎಚ್. ಐ. ವಿ. ಮಕ್ಕಳ ಬಗೆಗೆ ಇರುವ ಅಂದು ಮತ್ತು ಇಂದಿನ ಸಮಸ್ಯೆಗಳು, ಒಂದು ಸಂಘವನ್ನು ಕಟ್ಟಿ ಬೆಳೆಸುವಲ್ಲಿ ನಮ್ಮಗಳ ತ್ಯಾಗ, ವಿದ್ಯಾರ್ಥಿಗಳ ಜವಾಬ್ದಾರಿ ಇವುಗಳ ಕುರಿತು ನಮ್ಮೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರಕ್ಕಾಗಿ ಸಿದ್ಧ ಮಾಡಿಕೊಂಡು ಬಂದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದುಕೋಂಡರು.
ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ
ಶ್ರೀ ರಾಮರಾಜು ಫೌಂಡೇಶನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ- 500ಕ್ಕೂ ಹೆಚ್ಚು ಜನರಿಂದ ರಕ್ತದಾನ ಶಿಬಿರ ಯಶಸ್ವಿ-ರಾಮರಾಜು