3rd March 2025
ಕುಡಿವ ನೀರಿಗಾಗಿ ರಹವಾಸಿಗಳಿಂದ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾವಲಗಟ್ಟಿ ಗೆ ಮನವಿ. ಬೆಳಗಾವಿ. ೨೪- ಬೆಳಗಾವಿ ರಾಮತೀರ್ಥನಗರ ರಹವಾಸಿಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರ ನೋವಿಗೆ ಸ್ಪಂದಿಸುವಂತೆ ಒತ್ತಾಯಿಸಿ ಸೋಮವಾರ ರಾಮತೀರ್ಥನಗರ ಕುಂದರನಾಡ ರಹವಾಸಿಗಳ ಸಂಘ ಸ್ನೇಹ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಂದರನಾಡ ರಹವಾಸಿಗಳ ಸಂಘ ದ ಅದ್ಯಕ್ಷರು ಮತ್ತು ಮಾಜಿ ಮಹಾಪೌರರಾದ ಎನ್ ಬಿ ನಿರ್ವಾಣಿ, ನಮಗೆ ಕಳೆದ ೧೦ ದಿನಗಳಿಂದ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟ ದಲ್ಲಿದ್ದೇವೆ.
ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಅಧಿಕಾರಿಗಳನ್ನೊಳಗೊಂಡು ಶಾಸಕರು, ಸಚಿವರಲ್ಲಿ ವಿನಂತಿಸಿದ್ದು,
ನಮ್ಮ ನೀರಿನ ಭವನೆ ತಪ್ಪಿಲ್ಲ. ಎಂದರಲ್ಲದೆ, ನಾನು ನಗರದ ಮಹಾಪೌರನಿದ್ದಾಗ ನೀರು ಪೂರೈಕೆಯಲ್ಲಿ ತೊಂದರೆಯಾದಾಗ ಸಂಕಷ್ಟ ಪ್ರದೇಶದಲ್ಲಿ ಗಾಡಿಗಳ ಮೂಲಕ ಕುಡಿವ ನೀರು ಕೊಟ್ಟಿದ್ದೆ. ಈಗಿನ ನಮ್ಮ ತೊಂದರೆಗೆ ಸೂಕ್ತ ಕ್ರಮ ಜರುಗಿಸಿ ನಿಯಮಿತವಾಗಿ ನೀರು ಸರಬರಾಜು ಗೊಳ್ಳದಿದ್ದರೆ ಖಾಲಿ ಕೊಡಗಳೊಂದಿಗೆ.ಮಹಿಳೆಯರು ಸಮೇತ ಬೀದಿಗಿಳಿಯುವದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಮನವಿಗೆ ಸ್ಪಂದಿಸಿದ ವಿನಯ ನಾವಲಗಟ್ಟಿ ಮಾನ್ಯ ಉಸ್ತುವಾರಿ ಸಚಿವರಿಗೆ ಮನವಿಯ ತೀವ್ರತೆ ಕುರಿತು ವಿವರಿಸಿ ಸದ್ಯ ಸಮರ್ಪಕ ನೀರು ಸರಬರಾಜು ಆಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದರಲ್ಲದೆ ನಾನೂ ಅದೇ ಬಡಾವಣೆಯ ನಿವಾಸಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಟ್ರಸ್ಟ್ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ, ಉಪಾಧ್ಯಕ್ಷ ಎಸ್ ಜಿ ಕಲ್ಯಾಣಿ, ಖಜಾಂಚಿ ಮನೋಹರ ಕಾಜಗಾರ ಸದಸ್ಯರಾದ
ಬಸವರಾಜ ಗೌಡಪ್ಪಗೋಳ, ಜಿ ಐ ದಳವಾಯಿ ಸೇರಿದಂತೆ ರಹವಾಸಿಗಳು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ
'ನೀರು, ಮಣ್ಣು ದೇವರು ಕೊಟ್ಟ ಕಾಣಿಕೆ ಅದು ಸಂರಕ್ಷಣೆ ಮಾಡಬೇಕು' ಶಿವಶೇಖರ ಸ್ವಾಮಿ ಜಲಾನಯನ ಯಾತ್ರೆ