11th March 2025
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ.
ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಬೆಳಗಾವಿ. ೧೦, ಬೆಳಗಾವಿ ಸುಪ್ರಸಿದ್ಧ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಕೊಳವೆ ಬಾವಿ ಕಲ್ಪಿಸಿದ ದಾನಿ ಶ್ರುತಿ ಪಾರ್ಕ್ ನಿವಾಸಿ, ಉದ್ಯಮಿ, ದಯಾನಂದ ಬಾಪು ಪಾಟೀಲ ಕಾರ್ಯ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು. ಅವರು ಸೋಮವಾರ ರಾಮತೀರ್ಥನಗರದಲ್ಲಿಯ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಅಂಗಳದಲ್ಲಿ ಕೊಳವೆ ಬಾವಿ ಕೊರೆಯುವ ಮಷಿನಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ವಾರ್ಥದಿಂದ ಸಮಾಜ ಸೇವೆ ಮರೆಯಾಗುತ್ತಿದ್ದು ದುರದ್ರಷ್ಟಕರ ಸಂಗತಿಯಾಗಿದ್ದು, ಸಮಾಜಕ್ಕೆನಮ್ಮಸೇವೆ ಸಂದಾಗ ಮಾತ್ರ ಅದು ದೇವರು ಮೆಚ್ಚುವ ಕಾರ್ಯವಾಗುವದು. ಇಂಥಹ ಅಪರೂಪದ ಕಾರ್ಯಕ್ಕೆ ಮುಂದಾಗಿರುವ ಈ ಮಂದಿರದ ಕಮಿಟಿ ಮತ್ತು ಸ್ನೇಹ ಸಮಾಜ ಸೇವಾ ಸಂಘದ ಕಾರ್ಯ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದರು.
ಸಂಘದ ಅದ್ಯಕ್ಷ ಸುರೇಶ ಉರಬಿನಟ್ಟಿ ಪ್ರತಿಕ್ರಿಯಿಸಿ ಮುಂಬರುವ ಎಪ್ರಿಲ್ ೧೨ನೇ ತಾರೀಖಿನಂದು ಸಂಜೆ ಸೇರುವ ಸುಮಾರು ೫ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಿದ್ದು, ಈ ಶುಭ ಸಂದರ್ಭಕ್ಕೆ ಅಂಕಲಗಿ ಹಾಗೂ ಕಾರಂಜಿ ಶ್ರೀ ಗಳು, ಸಂಸದರು, ಶಾಸಕರು, ವಿಧಾನ ಪರಿಷತ ಸದಸ್ಯರು , ಧುರೀಣರು ಚಾಲನೆ ನೀಡಲು ಆಗಮಿಸಲಿದ್ದು ಎಲ್ಲರೂ ಉಪಸ್ತಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಬೇಕೆಂದರಲ್ಲದೆ, ದೇವಸ್ಥಾನದ ಅಭಿವ್ರದ್ಧಿಗೆ ಸಹಕಾರ ನೀಡಿದ ಎಲ್ಲ ಮಹನೀಯರು ಅಭಿನಂದನಾರ್ಹರು. ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ನಮ್ಮ ಸಂಘಟನೆಯ ಪ್ರೀತಿ ಗೆದ್ದವರಾಗಿದ್ದಾರಲ್ಲದೆ, ದೊಡ್ಡ ಶಕ್ತಿಯಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಮನೋಹರ ಕಾಜಗಾರ , ಕಾರ್ಯದರ್ಶಿ ಮಂಜುನಾಥ ಪಾಟೀಲ, ಸದಸ್ಯರಾದ ಮಹೇಶ ಚಿಟಗಿ, ಕ್ರಷ್ಣಾ ಪಾಟೀಲ, ಮಲ್ಲಪ್ಪ ದಂಡಿನವರ, ಶಿವಾನಂದ ಮಠಪತಿ, ಮಹೇಶ ಬಾಗೇವಾಡಿ, ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಸಿದ್ದಬಸಯ್ಯಾ ಹಿರೇಮಠ ಸೇರಿದಂತೆ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸುರೇಶ ಉರಬಿನಟ್ಟಿ
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ
'ನೀರು, ಮಣ್ಣು ದೇವರು ಕೊಟ್ಟ ಕಾಣಿಕೆ ಅದು ಸಂರಕ್ಷಣೆ ಮಾಡಬೇಕು' ಶಿವಶೇಖರ ಸ್ವಾಮಿ ಜಲಾನಯನ ಯಾತ್ರೆ