11th March 2025
ಸರ್ಕಾರದ ಯೋಜನೆಗಳ ಯಶಸ್ಸಿಗೆ
ಪ್ರಾಮಾಣಿಕತೆ ಅತ್ಯವಶ್ಯ.
ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಅಂಕಲಗಿ ೧೧- ಗುತ್ತಿಗೆದಾರರು ಪಡೆದ ಗುತ್ತಿಗೆ ಕಾಮಗಾರಿಗಳು ಸಾರ್ವಜನಿಕರ ಹಿತಕ್ಕೆ ಪೂರಕವಾಗಿರಬೇಕು. ಸರ್ಕಾರದ ಯೋಜನೆ ಗಳ ಯಶಸ್ಸಿಗೆ ನಮ್ಮಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ಗೋಕಾಕ ಯುವ ನಾಯಕ ಅಮರನಾಥ್ ಜಾರಕೀಹೊಳಿ ಹೇಳಿದರು. ಅವರು ಮಂಗಳವಾರ ಸಮೀಪದ ಮುಸಲ್ಮಾರಿ ಮಲ್ಲಾಪುರ ದಲ್ಲಿ ೧ ಕೋಟಿ ಅನುದಾನದಲ್ಲಿ ಮಂಜೂರಿಯಾದ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆಯ ವೈಭವ ಮತ್ತಷ್ಟು ಹೆಚ್ಚಲಿ , ಜನರಲ್ಲಿ ಪ್ರೀತಿ ಪ್ರೇಮಗಳ ಸಂಗಮವಾಗಿ ಸಂತಸದಲ್ಲಿ ನಲಿದಾಡುವಂತಾಗಲಿ ಎಂದು ಶುಭ ಹಾರೈಸಿದರಲ್ಲದೆ, ಜಾತ್ರೆ ನಂತರದ ದಿನಗಳಲ್ಲಿ ಉಳಿದ ಮತ್ತಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವದಾಗಿ ಹೇಳಿದರಲ್ಲದೆ, ಕರೆದು ಸನ್ಮಾನಿಸಿದ ಗ್ರಾಮದ ಜಾತ್ರಾ ಕಮಿಟಿಯ ಹಿರಿಯರಿಗೆ, ಧುರೀಣರಿಗೆ ಧನ್ಯವಾದ ಹೇಳಿದರು.
ಗ್ರಾಮದ ಧುರೀಣ, ಗೋಕಾಕ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸರ್ವರನ್ನು ಸ್ವಾಗತಿಸಿ, ಮಾತನಾಡಿ ನೆಚ್ಚಿನ ಶಾಸಕರಾದ ರಮೇಶ ಜಾರಕಿಹೊಳಿ ಅವರು ನಾಡಿನಲ್ಲಿ ಅತ್ಯಾವಶ್ಯಕವಾದ ರಸ್ತೆ, ಕುಡಿಯುವ ನೀರು, ಆಸ್ಪತ್ರೆಗಳು ಸೇರಿದಂತೆ ಮೂಲ ಸೌಕರ್ಯಗಳ ಅಭಿವ್ರದ್ಧಿಗೆ ಹೆಗಲು ಕೊಟ್ಟವರಾಗಿದ್ದು, ಸದ್ಯ ಅಧಿವೇಶನದಲ್ಲಿದ್ದುದರಿಂದಾಗಿ ಅವರಿಗೆ ಬರಲಾಗಿಲ್ಲ ಎಂದರಲ್ಲದೆ, ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕಿಹೊಳಿ ಮತ್ತು ಕೆ ಜೆ ಎಸ್ ಸಂಘದ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ ಅವರನ್ನು ಗ್ರಾಮದ ಪರ ಸನ್ಮಾನಿಸಿ ಅಭಿನಂದಿಸಿದರಲ್ಲದೆ, ವಂದಿಸಿದರು.
ಈ ಸಂದರ್ಭದಲ್ಲಿ ಕುಂದರನಾಡ ಶಿಕ್ಷಣ ಸಂಘದ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ, ಅಡಿವೆಪ್ಪಾ ಮಳಗಲಿ, ನಿತಿನಚಂದ್ರ ಕರಗುಪ್ಪಿಕರ, ಪಿ ಡಿ ಓ ಸುನಿಲ್ ನಾಯಕ್, ಇಂಜನೀಯರ್ ಶಿವಲಿಂಗ, ಗಂಗಪ್ಪ ಅಂಗಡಿ, ಗಂಗಾಧರ ಪಾಟೀಲ, ಮಾರುತಿ ನಾರಿ, ಚಂದ್ರಪ್ಪ ಗಸ್ತಿ, ದುಂಡಪ್ಪಾ ನಾಯಿಕ್, ಗೂಳಪ್ಪಾ ಹಡಗಿನಾಳ, ಬಸಲಿಂಗಪ್ಪಾ ಗುಡದವರ, ಮುದಕಪ್ಪಾ ಹಾಲವ್ವಗೋಳ, ಬಸ ಲಿಂಗಪ್ಪ ದಡ್ಡಿ, ಅಸದ್ ಪಾಟೀಲ, ವಿರುಪಾಕ್ಷಿ ಅಂಗಡಿ , ಬಸಪ್ಪಾ ಗುಡದವರ, ರಾಜು ಇರಪನ್ನಗೋಳ ಬಾಳಪ್ಪ ನಾಯ್ಕ, ಗೋಪಾಲ ಬೊಂಬ್ರಿ ಅಮರನಾಥ ಜಾರಕೀಹೊಳಿ ಅವರನ್ನು ಗ್ರಾಮದ ಪರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮತ್ತು ನಾಡಿನ ಅಭಿಮಾನಿಗಳು, ಜಾತ್ರಾ ಕಮಿಟಿಯು ಸದಸ್ಯರು ಉಪಸ್ತಿತರಿದ್ದರು.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ
'ನೀರು, ಮಣ್ಣು ದೇವರು ಕೊಟ್ಟ ಕಾಣಿಕೆ ಅದು ಸಂರಕ್ಷಣೆ ಮಾಡಬೇಕು' ಶಿವಶೇಖರ ಸ್ವಾಮಿ ಜಲಾನಯನ ಯಾತ್ರೆ