
22nd October 2024
ತುಂಗಾಕಿರಣ ಸುದ್ದಿ
ಕುಷ್ಟಗಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಅಡಿಯಲ್ಲಿ ಕುಷ್ಟಗಿ ಯೋಜನಾ ಕಛೇರಿ ವ್ಯಾಪ್ತಿಯ ತಾಲೂಕಾ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ಇಲ್ಲಿಯ ಎನ್ ಸಿ ಹೆಚ್ ಪ್ಯಾಲೇಸ್ ದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ದೇವೇಂದ್ರಪ್ಪ ಬಳೂಟಗಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮ ಬಹಳ ಅರ್ಥಗರ್ಭಿತವಾಗಿ ನಡೆಯುತ್ತವೆ. ಮಧ್ಯವರ್ಜನಂತಹ ಕಾರ್ಯಕ್ರಮಗಳು ಜನರ ಜೀವನವನ್ನೇ ಬೆಳಗಿಸಿದಂತಹ ಕಾರ್ಯಕ್ರಮಗಳಾಗಿವೆ. ಧರ್ಮಸ್ಥಳದ ಯಾವುದೇ ಕಾರ್ಯಕ್ರಮದಲ್ಲಿ ನಾನು ಯಾವುದೇ ಫಲಾಪೇಕ್ಷೆ ಇಲ್ಲದೆ ಸಕ್ರಿಯವಾಗಿ ಭಾಗವಹಿಸುತ್ತೇನೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಂಗಾವತಿ ಶಾಖೆಯ ಪ್ರಬಂಧಕರಾದ ವಿರುಪಾಕ್ಷಪ್ಪ ಮಾತನಾಡಿ ಬ್ಯಾಂಕಿನ ನಿಯಮಗಳು ನಿಬಂಧನೆಗಳು ಮತ್ತು ಸ್ವ ಸಹಾಯ ಸಂಘಗಳ ಸಾಲದ ವ್ಯವಹಾರದ ಬಗ್ಗೆ ತಿಳಿಸಿದರು. ಬ್ಯಾಂಕ್ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿ.ಸಿ ಗಳನ್ನು ಆಯ್ಕೆ ಮಾಡಿಕೊಂಡಿದೆ. ಸಂಘಗಳನ್ನು ರಚನೆ ಮಾಡಿ ಸಾಮಾನ್ಯ ಜನರಿಗೆ ಉಳಿತಾಯದ ಜೊತೆಗೆ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ, ಬ್ಯಾಂಕಿನ ನಿಯಮಗಳು ನಿಬಂಧನೆಗಳು ಮತ್ತು ಸ್ವ ಸಹಾಯ ಸಂಘಗಳ ಸಾಲದ ವ್ಯವಹಾರದ ಬಗ್ಗೆ ತಿಳಿಸಿದರು.
ಕೊಪ್ಪಳ ಜಿಲ್ಲೆಯ ನಿರ್ದೇಶಕರಾದ ಪ್ರಕಾಶರಾವ್ ಮಾತನಾಡಿ ಯೋಜನೆಯ ಕಾರ್ಯಕ್ರಮಗಳು ನಡೆದು ಬಂದ ಹಾದಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗಡೆಯವರ ಉದ್ದೇಶ ಮತ್ತು ಕನಸುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕುಷ್ಟಗಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಡಿದ ಸಾಧನೆಗಳನ್ನು ಯೋಜನಾಧಿಕಾರಿಗಳು ಅಂಕಿ ಅಂಶಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರೇಶ್ ಬಂಗಾರಶೆಟ್ರು, ಶೇಖರ್ ನಾಯ್ಕ, ಮಹಾಂತಯ್ಯ ಅರಳೆಲಿಮಠ, ಜಯತೀರ್ಥ ದೇಸಾಯಿ, ವಿ ವಿ ಹಿರೇಮಠ, ರುದ್ರಪ್ಪ ಅಕ್ಕಿ ಹಾಗೂ ಜನಜಾಗೃತಿ ವೇದಿಕೆ ವೇದಿಕೆ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು. ತಾಲೂಕಿನ 12 ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿಗಳು ಮತ್ತು ಒಟ್ಟು 108 ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
1st September 2024
ಕುಷ್ಟಗಿ : ಛಾಯ ಸಮ್ಮಿಲನ 2024 ರ ಅಂಗವಾಗಿ ನಾಳೆ ದಿನಾಂಕ 01-09-2024 ರವಿವಾರ ದಂದು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಾ ಛಾಯಾ ಗ್ರಾಹಕರ ಹಾಗೂ ಗ್ರಾಮೀಣಭಿವೃದ್ಧಿ ಸಂಘ(ರಿ) ಕುಷ್ಟಗಿ,185ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ನಗರದ ಎನ್.ಸಿ.ಹೆಚ್.ಪ್ಯಾಲೇಸ್ ದಲ್ಲಿ ಮುಂಜಾನೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವು 25ನೇ ವಾರ್ಷಿಕೋತ್ಸವ ಸಮಾರಂಭವೆನಿಸಿದೆ.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಷ.ಬ್ರ.108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ ಹಾಗೂ ಷ.ಬ್ರ.108 ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಹಿರೇಮಠ ಚಳಗೇರಾ ವ, ತಳುವಗೇರಾ, ಮತ್ತು
ಷ.ಬ್ರ.108 ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಪಶ್ಚಕಂತಿ ಹಿರೇಮಠ ನಿಡಶೇಸಿ, ಗೆಜ್ಜೆಭಾವಿ, ಹಾಗೂ ಪ.ಪೂ. ನೀಲಕಂಠಾರ್ಯ ತಾತನವರು ಸುಕ್ಷೇತ್ರ ಎಮ್. ಗುಡದೂರ ಇವರುಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು
ದೊಡ್ಡನಗೌಡ ಹೆಚ್. ಪಾಟೀಲ್, ವಿಧಾನಸಭೆಯ ವಿರೋದ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು ಕುಷ್ಟಗಿ ಮತ್ತು ರವಿಕುಮಾರ ಹಿರೇಮಠ ಸಮಾಜ ಸೇವಕರು ಕುಷ್ಟಗಿ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಅಣ್ಣಿರಯ್ಯ ಹಿರೇಮಠ ಅಧ್ಯಕ್ಷರು ತಾಲೂಕಾ ಛಾಯಾಚಿತ್ರ ಗ್ರಾಹಕರ ಸಂಘ ಕುಷ್ಟಗಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಅಮರೇಗೌಡ ಪಾಟೀಲ ಬಯ್ಯಾಪೂರ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಸಚಿವರು ಕುಷ್ಟಗಿ, ಕೆ. ಶರಣಪ್ಪ ವಕೀಲರು ಮಾಜಿ ಶಾಸಕರು ಕುಷ್ಟಗಿ, ಹಸನಸಾಬ ದೋಟಿಹಾಳ
ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರ ಯೋಜನೆ (ಕಾಡಾ) ಮುನಿರಾಬಾದ,
ಹನಮಂತಪ್ಪ ತಳವಾರ ಪಿ.ಎಸ್.ಐ ಕುಷ್ಟಗಿ, ಚಿರಂಜೀವಿ ಎಸ್. ಹಿರೇಮಠ ಪುರಸಭೆ ಸದಸ್ಯರು ಕುಷ್ಟಗಿ, ದೇವೆಂದ್ರಗೌಡ ಮಲಿಪಾಟೀಲ ಸಾನ್ವಿ ಬೋರ್ವೆಲ್ಸ್ ಕುಷ್ಟಗಿ,
ಸಿದ್ದಣ್ಣ ಫಕೀರಪ್ಪ ಪಟ್ಟಣಶೆಟ್ಟರ ಅಧ್ಯಕ್ಷರು ಬುತ್ತಿಬಸವೇಶ್ವರ ಕಾಲೇಜ್, ಕುಷ್ಟಗಿ,
ಜಿ.ಕೆ.ಹಿರೇಮಠ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಕುಷ್ಟಗಿ,
ವಿಜಯಕುಮಾರ ವಸ್ತ್ರದ ಜಿಲ್ಲಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕೊಪ್ಪಳ,
ಬಸವರಾಜ ಕಂಪ್ಲಿ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕೊಪ್ಪಳ, ಚಾಂದಪಾಷಾ ಗಡಾದ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಗಂಗಾವತಿ, ಉಮಾಪತಿ ಹೊಸಮನಿ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕಾರಟಗಿ, ಪ್ರೀತಮ್ ಕುಂಬಾರ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕನಕಗಿರಿ,
ಶಿವಶರಣಯ್ಯ ಮ್ಯಾಗಳಮಠ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಯಲಬುರ್ಗಾ,
ಮಹ್ಮದರಫೀ ಹಿರಿಯಾಳ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕುಕನೂರ ಇವರುಗಳು ಭಾಗವಹಿಸಲಿದ್ದಾರೆ.
"ಫೋಟೊ ಮಳಿಗೆ ಉದ್ಘಾಟನೆ ಮಾಡಲಿರುವ ಗಣ್ಯ ವ್ಯಕ್ತಿಗಳು"
ಅಮರೇಗೌಡ ಪಾಟೀಲ ಬಯ್ಯಾಪೂರ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಸಚಿವರು ಕುಷ್ಟಗಿ,
ಹೆಚ್. ಎಸ್. ನಾಗೇಶ್ ಅಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆ.ಪಿ.ಎ),
ಪರಮೇಶ್ ಸುಬ್ಬಯ್ಯ ನಿಕಟ ಪೂರ್ವ ಅಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆ.ಪಿ.ಎ), ರವಿಕುಮಾರ ಹೆಚ್. ಎನ್ ರಾಜ್ಯ ಉಪಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆ.ಪಿ.ಎ), ಇವರುಗಳು ಫೋಟೊ ಮಳಿಗೆ ಉದ್ಘಾಟನೆಯನ್ನು ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಛಾಯಾಗ್ರಹಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಪತ್ರಕರ್ತರು ಹಾಗೂ ಛಾಯಾಚಿತ್ರ ಗ್ರಾಹಕರು,
GM Photo Studio Kushtagi.
28th August 2024
ತುಂಗಾಕಿರಣ ಸುದ್ದಿ
ಕುಷ್ಟಗಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಯಂಕಮ್ಮ ಹನುಮಪ್ಪ ಇವರಿಗೆ 1000/- ಮಾಶಾಸದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟೆಸ್ಟ್ ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಆಶೀರ್ವಾದದಿಂದ ಯಂಕಮ್ಮ ಹನುಮಸಾಗರ ಇವರಿಗೆ ಒಂದು ಸಾವಿರ ರೂ. ಗಳ ಮಾಶಾಸನ ಮಂಜೂರಾತಿಯಾಗಿದ್ದು ಇಂದು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮವ್ವ ಶಿವನಪ್ಪ ಕಂದಗಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕುಷ್ಟಗಿ ತಾಲೂಕಿನ ಯೋಜನಾಧಿಕಾರಿಗಳಾದ ಶೇಖರ್ ನಾಯ್ಕ್ ಮತ್ತು ಖಾದರ್ ಸಾಬ್ ಬಾಣದಾರು, ಮೃತ್ಯುಸಾಬ್ ಗಿರಣಿ, ಒಕ್ಕೂಟದ ಅಧ್ಯಕ್ಷರಾದ ಶಂಕ್ರಮ್ಮ ಚಂದಪ್ಪ ಶಾಸ್ತ್ರಿ, ಲಕ್ಷ್ಮೀಬಾಯಿ, ಈರಪ್ಪ ಪತ್ತಾರ್, ನೋಡಲ್ ಅಧಿಕಾರಿ ತಾಲೂಕಿನ ಸಮನ್ವಯ ಅಧಿಕಾರಿ ಸೇವಾ ಪ್ರತಿನಿಧಿ ನಾಗರಾಜ ಕಂದಗಲ್ಲ ಇವರ ಉಪಸ್ಥಿತಿಯಲ್ಲಿ ಮಾಸಾಸನದ ಮಂಜೂರಾತಿ ಪತ್ರವನ್ನು ಯಂಕಮ್ಮ ಇವರಿಗೆ ವಿತರಣೆ ಮಾಡಲಾಯಿತು.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
27th August 2024
ಕುಷ್ಟಗಿ : ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು. ಕಳೆದ ಮೂರು ದಿನಗಳಿಂದ ಜರುಗಿದ ರಾಯರ 353 ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದಿನಾಂಕ 20-08-2024 ರಿಂದ 22-08-2024 ರ ಮೂರು ದಿನಗಳವರೆಗೆ ಮುಂಜಾನೆ 6-00 ಗಂಟೆಗೆ ಸುಪ್ರಭಾತ, 7-30 ಗಂಟೆಗೆ ಶ್ರೀ ರಾಯರ ಅಷ್ಟೋತ್ತರ, 9-00 ಗಂಟೆಗೆ ಪಂಚಾಮೃತ ಅಭಿಷೇಕ, ಮದ್ಯಾಹ್ನ 12-00 ಗಂಟೆಗೆ ನೈವೇದ್ಯ, ಅಲಂಕಾರ, ಹಸ್ತೋದಕ, ತೀರ್ಥಪ್ರಸಾದ ಜರುಗಿತು. ಸಾಯಂಕಾಲ 6-00 ಗಂಟೆಗೆ ಭಜನೆ, ನಂತರ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಮೂರು ದಿನಗಳ ವರೆಗೆ ನಡೆದ ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು. ದಿನಾಂಕ 20-08-2024 ಮಂಗಳವಾರ ಬೆಳಿಗ್ಗೆ 9-00 ಗಂಟೆಗೆ ಶ್ರೀ ರಾಘವೇಂದ್ರ ಅಷ್ಠಾಕ್ಷರ ಹೋಮ ನಡೆಯಿತು. ದಿನಾಂಕ : 21-08-2024 ಬುಧವಾರ ಮಧ್ಯಾರಾಧನೆಯಂದು ಬೆಳಿಗ್ಗೆ : 09-00 ಗಂಟೆಗೆ ಪವಮಾನ ಹೋಮ ತದನಂತರ ಶ್ರೀ ಮಜ್ಜಯತೀರ್ಥರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾತ್ರಿ 7-30 ಕ್ಕೆ ವಸುದೇಂದ್ರ ಎಲ್. ವೈದ್ಯ, ಬೆಂಗಳೂರು ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ದಿನಾಂಕ: 22-08-2024 ಗುರುವಾರ ಉತ್ತರಾಧನೆಯಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮಠದ ಆವರಣದೊಳಗೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಜನಾ ಮಂಡಳಿಯವರು ಭಜನೆ ಮಾಡುತ್ತಾ ರಾಯರ ಆರಾಧನೆಯಲ್ಲಿ ಪಾಲ್ಕೊಂಡು ಕೃತಾರ್ಥರಾದರು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ಯವಾಗಿ ಅರ್ಚಕರಾದ ಶ್ರೀಧರ್ ಆಚಾರ್ ಪುರಾಣಿಕ್ ಇವರಿಂದ ಯತಿದ್ವಯರ ಬೃಂದಾವನಗಳಿಗೆ ಸಂಪೂರ್ಣ ಬೆಳ್ಳಿಯ ಕವಚ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮೂರು ದಿನಗಳ ಕಾಲ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು. ಮೂರು ದಿನಗಳವರೆಗೆ ನಡೆದ ರಾಯರ ಆರಾಧನಾ ಮಹೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಸಂಪನ್ನಗೊಂಡಿತು.