THUNGAKIRANA
News

ತಾಲೂಕಾ ಗ್ರಾಮ ಆಡಳಿತಾಧಿಕಾರಿಗಳು ಗ್ರಾಮ ಸಹಾಯಕರ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೈಗೆ ಕಪ್ಪು ಬಟ್ಟೆ ಧರಿಸಿ ಮುಷ್ಕರ

28th September 2024

ತುಂಗಾಕಿರಣ ಸುದ್ದಿ

ಕುಷ್ಟಗಿ: ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರವನ್ನು ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಮುಂದೆ ಹಮ್ಮಿಕೊಳ್ಳಲಾಗಿತ್ತು.


ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಖಜಾಂಚಿ ಶರಣಪ್ಪ ಮಾತನಾಡಿ, ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ

ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವದಾಗಿ ಹೇಳಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ರಾಜ್ಯಾದ್ಯಂತ ಕರ್ತವ್ಯಕ್ಕೆ ಹಾಜರಾಗದೆ ಈ ಒಂದು ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ 31 ಜಿಲ್ಲೆಯ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲೂಕಾ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಸರ್ವಾನುಮತದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಕಂದಾಯ ಇಲಾಖೆ ಬೆಂಗಳೂರು ಇವರಿಗೆ ಮನವಿ ಸಲ್ಲಿಸಲಾಗುತ್ತಿದೆ.

ಆದರೆ ಸರಕಾರವು ಯಾವುದೇ ರೀತಿಯಿಂದ ನಮ್ಮಗಳಿಗೆ ಸ್ಪಂದಿಸದೆ ಇದ್ದರೆ ನಾಳೆ ಜಿಲ್ಲಾಧಿಕಾರಿಗಳ ಮುಂದೆ ಮುಷ್ಕರ ನಡೆಸಲಾಗುವದು ಎಂದರು.


ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ವೆಂಕಟೇಶ ಕುರ್ಮಾಚಾರಿ ಮಾತನಾಡಿ, ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕತೆ ಇರುವ ಮೊಬೈಲ್ ಸಾಧನ ಹಾಗೂ ಲ್ಯಾಪ್ ಟಾಪ್ ನೀಡದೇ ಒತ್ತಡ ಹೇರುತ್ತಿರುವುದು ಬಹಳ ತೊಂದರೆ ಉಂಟಾಗುತ್ತಿದ್ದು, ಕಾರ್ಯ ನಿರ್ವಹಿಸುತ್ತಿರುವ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಳಿತು ಕೆಲಸ ಮಾಡಲು ಒಂದು ಮಳಿಗೆಯ ವ್ಯವಸ್ಥೆ, ಕುಳಿತು ಕೆಲಸ ಮಾಡಲು ಟೇಬಲ್, ಕುರ್ಚಿ, ಮತ್ತು ಕೆಲಸ ನಿರ್ವಹಿಸಲು ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್ , ಸಿಯುಜಿ ಸಿಮ್ ಮತ್ತು ಡಾಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳಿದ್ದು ಕೂಡಲೇ ಸ್ಪಂದಿಸಬೇಕು ಎಂದು ಹೇಳಿದರು.


ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ತಹಸೀಲ್ದಾರ್ ಅಶೋಕ್ ಸಿಗ್ಗಾವಿ ಅವರ ಮುಖಾಂತರ ಸರಕಾರದ ಕಂದಾಯ ಇಲಾಖೆ ಬೆಂಗಳೂರು ಇವರಿಗೆ ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಕುಷ್ಟಗಿ ಘಟಕದ ಅಧ್ಯಕ್ಷ ವೆಂಕಟೇಶ ಕುರ್ಮಾಚಾರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಾಲಾಜಿ ಬಳೆಗಾರ,

ಗೌರವಾಧ್ಯಕ್ಷರಾದ ಶ್ರೀನಿವಾಸ್ ನಾಯಕ್,

ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾಗ್ಮೊರೆ,

ರಾಜ್ಯ ಪರಿಷತ್ ಸದಸ್ಯರಾದ ಶರಣಯ್ಯ ನಿಡಗುಂದಿ ಮಠ, ಉಪಾಧ್ಯಕ್ಷರಾದ ಪರಶುರಾಮ್, ನಿರ್ದೇಶಕರಾದ ಹಾಗೂ ಕ.ರಾ.ಗ್ರಾ.ಆ.ಅ. ಸಂಘದ ಖಜಾಂಚಿ ಶರಣಪ್ಪ ಹುಡೇದ, ಕಂದಾಯ ನಿರೀಕ್ಷಕರಗಳಾದ ಉಮೇಶ್ ಗೌಡ, ಶರಣಪ್ಪ ದಾಸರ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಸಂಗಮೇಶ್, ಸಂಘಟನಾ ಕಾರ್ಯದರ್ಶಿ ಮೌನೇಶ, ಗಿರೀಶ್, ರವಿ ಮದನ, ಪ್ರಸನ್ನ, ವೀರೇಶ ಎತ್ತಿನಮನಿ, ಮಂಜುನಾಥ್ ಗುಡ್ಡದ, ಸೂರ್ಯಕಾಂತ, ಅನಿತಾಬಾಯಿ, ಪ್ರತಿಭಾ, ವಿದ್ಯಾಶ್ರೀ, ಹಜರತ್ ಬಿ, ರಜೆಯಾಬೇಗಂ, ರಫಿಕಾ ಬಾನು,ಹಾಗೂ ಗ್ರಾಮ ಸಹಾಯಕರ ಸಂಘದ ತಾಲೂಕಾಧ್ಯಕ್ಷ ಬಸಪ್ಪ ವಾಲಿಕಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.