
24th October 2024
ತುಂಗಭದ್ರ ವಾರ್ತೆ
ಹೂವಿನ ಹಡಗಲಿ : ತಾಲೂಕಿನ ಹೊಳಲು ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸಪ್ಪ ಗುಡುಗೂರು ಅಧ್ಯಕ್ಷರಾಗಿ ಆಯ್ಕೆಗೊಂಡರು ,
ಒಟ್ಟು 25 ಸದಸ್ಯರನ್ನು ಹೊಂದಿದ್ದ ಹೊಳಲು ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ 25 ಸದಸ್ಯರೂ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು ಅದರಲ್ಲಿ 1 ಮತ ಅಸಿಂಧು ವಾಗಿದ್ದು .ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನಬಸಪ್ಪ ಗುಡುಗೂರು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹೊನ್ನಪ್ಪ ಶಾಂತಪ್ಪನವರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಬಸಪ್ಪ ಗುಡುಗೂರು 19 ಮತಗಳ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಹೊನ್ನಪ್ಪ ಶಾಂತಪ್ಪನವರಿಗೆ 5 ಮತಗಳು ಲಭಿಸಿದ್ದವು ,
ಚುನಾವಣಾಧಿಕಾರಿಯಾಗಿ ತಾಲೂಕ ದಂಡಾಧಿಕಾರಿಗಳಾದ ಸಂತೋಷ್ ಕುಮಾರ ಚುನಾವಣೆ ಪ್ರಕ್ರಿಯೆಯನ್ನು ನಡೆಸಿದರು ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಶಿ. ಪಿಡಿಒ ಅನ್ನದಾನ ನಾಯಕ. ಪಿಎಸ್ಐ ಹಿರೇಹಡಗಲಿ. ಭರತ್ ಪ್ರಕಾಶ. ಏ ಎಸ್ ಐ ಮಲ್ಲಿಕಾರ್ಜುನ.ಕಾಂಗ್ರೆಸ್ ಮುಖಂಡರಾದ ಚನ್ನವೀರ ಗೌಡ್ರು. ಬಸಯ್ಯ ಹಿರೇಮಠ. ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಜಯಣ್ಣ ಗುಡುಗೂರ ಹೊಟ್ಟೆಗೌಡ್ರು ಮಂಜಣ್ಣ ಬುಳ್ಳಜ್ಜನವರ ತಾರಕೇಶ ಗ್ರಾಮದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು
24th October 2024
ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಮನವಿ ಸಲ್ಲಿಕೆ
ಸ್ಥಳೀಯ ದಿನಪತ್ರಿಕೆಗಳಿಗೆ ಎರಡು ಪುಟ ಜಾಹೀರಾತು ಕೊಡಿ
ಕೊಪ್ಪಳ ಅ.23:
ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ವ್ಯಾಪ್ತಿಗೆ ಒಳಪಡುವ ಆರು ಜಿಲ್ಲೆಗಳ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಪ್ರದೇಶಾಭಿವೃದ್ಧಿ ಮಂಡಳಿಯ ಅಭಿವೃದ್ಧಿ ಮಾಹಿತಿಯುಳ್ಳ ಮಾಸಿಕ ಎರಡು ಪುಟಗಳ ಜಾಹೀರಾತು ನೀಡಿ ಪ್ರೋತ್ಸಾಹಿಸಬೇಕು ಎಂದು ಮಂಡಳಿಯ ಅಧ್ಯಕ್ಷ ಅಜಯ್ಸಿಂಗ್ ಅವರನ್ನು ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಬುಧವಾರ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನರ್ಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್. ಹರೀಶ್ ಅವರ ನೇತೃತ್ವದಲ್ಲಿನ ಪದಾಧಿಕಾರಿಗಳು, ಅಜಯ್ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷ ಎಚ್.ಎಸ್. ಹರೀಶ್, ಕಲ್ಯಾಣ ಕನರ್ಾಟಕದ ಪ್ರದೇಶ ಅಭಿವೃದ್ಧಿಗೆ ಸಕರ್ಾರ ವಿಶೇದ ಆದ್ಯತೆ ನೀಡಿ ವಾಷರ್ಿಕ ಸಾವಿರಾರು ಕೋಟಿ ರೂಪಾಯಿ ಮೊತ್ತದ ಅನುದಾನ ನೀಡುತ್ತಿದೆ. ಮಂಡಳಿಯ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ.
ಅಲ್ಲದೇ ಸಕರ್ಾರವು, ಉದ್ಯೋಗ, ಶಿಕ್ಷಣ ಸೇರಿದಂತೆ ನಾನಾ ವಲಯದಲ್ಲಿ ಕಲ್ಯಾಣ ಕನರ್ಾಟಕದ ಜನರಿಗೆ ಮೀಸಲಾತಿ ನೀಡಿದೆ. ಕಲ್ಯಾಣ ಕನರ್ಾಟಕದ ಅಭಿವೃದ್ಧಿಗೆ ಮಾಧ್ಯಮಗಳು, ಮುಖ್ಯವಾಗಿ ಆರು ಜಿಲ್ಲೆ ವ್ಯಾಪ್ತಿಯಲ್ಲಿನ ಸ್ಥಳೀಯ ಪತ್ರಿಕೆಗಳು ಹೆಚ್ಚು ಆದ್ಯತೆ ನೀಡಿ ಸಕರ್ಾರ ಮತ್ತು ಸಾರ್ವಜನಿಕರ ಪರವಾಗಿ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದೆ.
ಇಂದಿನ ದಿನಗಳಲ್ಲಿ ಸ್ಥಳೀಯ ಪತ್ರಿಕೆಗಳನ್ನು ನಡೆಸಿಕೊಂಡು ಹೋಗುವುದು ದುಸ್ತರವಾಗಿದ್ದು, ಈ ಹಿನ್ನೆಲೆ ಪತ್ರಿಕೆಗಳು ಆಥರ್ಿಕವಾಗಿ ಚೇತರಿಸಿಕೊಳ್ಳುವಂತೆ ಸಹಕಾರ ನೀಡಲು, ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಾಸಿಕ ಎರಡು ಪುಟ ಜಾಹೀರಾತು ನೀಡಿ ಸಹಕಾರ ನೀಡಬೇಕು.
ಕಲ್ಯಾಣ ಕನರ್ಾಟಕ ಪ್ರದೇಶದ ವ್ಯಾಪ್ತಿಯಲ್ಲಿರುವ ಆಯಾ ಜಿಲ್ಲಾವಾರು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮಪಟ್ಟಿಯಲ್ಲಿರುವ ಪತ್ರಿಕೆಗಳ ಮಾಹಿತಿಯನ್ನು ತರಿಸಿಕೊಂಡು ತಕ್ಷಣ ಮಂಡಳಿಯಿಂದ ಜಾಹೀರಾತು ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಜಯ್ಸಿಂಗ್, ಈಗಾಗಲೆ ಕಲ್ಯಾಣ ಕನರ್ಾಟಕ ಪ್ರದೇಶ ವ್ಯಾಪ್ತಿಯಲ್ಲಿರುವ ಮತ್ತು ಸಕರ್ಾರದ ಮಾಧ್ಯಮಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಪ್ರೋತ್ಸಾಹದ ರೂಪದ ಜಾಹೀರಾತು ನೀಡುವ ಸಂಬಂಧ ಪ್ರಸ್ತಾವನೆ ಬಂದಿದ್ದು, ಈ ಸಂಬಂಧ ಚಚರ್ಿಸಿ ಸೂಕ್ತ ತೀಮರ್ಾನ ಕೈಗೊಳ್ಳಲಾಗುವುದು ಎಂದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೂ ಈ ಸಂದರ್ಭದಲ್ಲಿ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ವೀರಣ್ಣ ಕಳ್ಳಿಮನಿ, ಖಲೀಲ್ ಹುಡೇದ ಸೇರಿದಂತೆ ಇತರರಿದ್ದರು.