
23rd August 2024
ಕಾಳಗಿ: ಪಟ್ಟಣದ ತಾಲೂಕು ತಹಶಿಲ್ದಾರರ ಕಛೇರಿಯಲ್ಲಿ ಬೆಳಗ್ಗೆ 10:30 ಗಂಟೆಯಾದರೂ ಸಿಬ್ಬಂದಿಗಳು ಮಾತ್ರ ಕಛೇರಿಗೆ ಬರುವುದಿಲ್ಲ ಎಂದು ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕಾಧ್ಯಕ್ಷ ದತ್ತು ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕೇಂದ್ರವಾದ ಕಾಳಗಿ ಪಟ್ಟಣದಲ್ಲಿ ಹೆಸರಿಗೆ ಮಾತ್ರ ತಹಶಿಲ್ದಾರ ಕಛೇರಿ ಎನ್ನುವಂತಾಗಿದ್ದು, ಕೆಲಸಕ್ಕಾಗಿ ದಿನನಿತ್ಯ ಸಾರ್ವಜನಿಕರ ಅಲೆದಾಟ ತಪ್ಪುತ್ತಿಲ್ಲ. ತಹಸೀಲ್ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳು ಬೆಳಗ್ಗೆ 10:30 ಗಂಟೆಯಾದರೂ ಬರುವುದಿಲ್ಲ.
ಈ ಕುರಿತು ತಹಶಿಲ್ದಾರ ಅವರಿಗೆ ಕೇಳಿದರೆ ಫೀಲ್ಡ್ ಕೆಲಸಕ್ಕೆ ಹೋಗಿದ್ದಾರೆ, ಮೀಟಿಂಗ್ ಹೋಗಿದ್ದಾರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ.
ಇದರ ಕುರಿತು ತಹಸೀಲ್ ಕಛೇರಿಗೆ ಯುವ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಭೇಟಿ ನೀಡಿ, ಸಮಯಕ್ಕೆ ಸರಿಯಾಗಿ ಕಛೇರಿಗೆ ಹಾಜರಾಗುವಂತೆ ಡಿಸಿ ಆದೇಶವಿದ್ದರೂ ಕೂಡಾ ಮೇಲಾಧೀಕಾರಿಗಳ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡದ ಇಲ್ಲಿಯ ತಹಶಿಲ್ದಾರ ಘಮಾವತಿ ರಾಠೋಡ ಅವರನ್ನು ತರಾಟೆಗೆ ತೆಗೆದುಕೊಂಡರು.
ತಹಶೀಲ್ದಾರ್ ಕಚೇರಿಯ ಬಹುತೇಕ ಸಿಬ್ಬಂದಿ ನಿತ್ಯವೂ ಕಲಬುರಗಿಯಿಂದ ಬರುತ್ತಾರೆ. ಬೆಳಿಗ್ಗೆ 11 ಗಂಟೆಯ ನಂತರ ಒಬೊಬ್ಬರಾಗಿ ಕಚೇರಿಗೆ ಆಗಮಿಸುತ್ತಾರೆ. ಮಧ್ಯಾಹ್ನ 1 ಗಂಟೆ ವೇಳೆಗಾಗಲೇ ಊಟಕ್ಕೆ ತೆರಳುತ್ತಾರೆ. 4 ಗಂಟೆಗೆ ಊರಿಗೆ ಮರಳುವ ತರಾತುರಿಯಲ್ಲಿರುತ್ತಾರೆ. ಕೆಲಸದ ಬಗ್ಗೆ ನಿರ್ಲಕ್ಯ ತೋರುತ್ತಿದ್ದು, ಪ್ರತಿಯೊಂದು ಸಣ್ಣ-ಪುಟ್ಟ ಕೆಲಸಗಳಿಗೂ ಸಿಬ್ಬಂದಿಗಳಿಗೆ ಹಣ ನೀಡಬೇಕು. ಇಲ್ಲಿ ಸಾವಿರಾರು ಬಾರಿ ದೂರದ ಊರುಗಳಿಂದ ಅಲೆದಾಡಬೆಕಾಗಿರುವ ಪರಿಸ್ಥಿತಿಯಿಂದ ತೀವ್ರ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇಲ್ಲಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ಎಲ್ಲಾ ವಿಭಾಗಗಳಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯ ಕುರ್ಚಿಗಳು ಖಾಲಿ ಇರುತ್ತವೆ. ಅವರು ಯಾವಾಗ ಬರುತ್ತಾರೋ, ಯಾವಾಗ ವಾಪಸ್ ಹೋಗುತ್ತಾರೋ ತಿಳಿಯುವುದಿಲ್ಲ.
ಸಿಬ್ಬಂದಿಯನ್ನು ನಿಯಂತ್ರಿಸಬೇಕಾದ ತಹಶೀಲ್ದಾರರೇ ಕಚೇರಿಯಲ್ಲಿ ಸರಿಯಾಗಿ ಇರುವುದಿಲ್ಲ. ದಿನದಲ್ಲಿ ಒಂದೆರೆಡು ಬಾರಿ ಮಾತ್ರ ಕಚೇರಿಯಲ್ಲಿ ಕಾಣಸಿಕೊಳ್ಳುವ ತಹಶೀಲ್ದಾರ್, ಸದಾ ಹೊರಗೆ ಇರುತ್ತಾರೆ. ಸಿಬ್ಬಂದಿಯನ್ನು ಕೇಳಿದರೆ ತಹಶಿಲ್ದಾರ ಮೇಡಂ ಫೀಲ್ಡಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ನಿತ್ಯ ಹಳ್ಳಿಗಳಿಂದ ಬರುವವರು ಅಹವಾಲು ಕೇಳುವವರಿಲ್ಲದೇ ಬರಿಗೈಲಿ ಹಿಂತಿರುತ್ತಿದ್ದಾರೆ ಎಂದು ಪರಮೇಶ್ವರ ಕಟ್ಟಿಮನಿ, ದೀಲಿಪ ಭರತನೂರ, ಅನೀಲಕುಮಾರ ಗುತ್ತೇದಾರ, ಇಬ್ರಾಹಿಂ ಶಾ ದೂರಿದರು.
ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಕಛೇರಿಗೆ ಹಾಜರಾಗಿ ಸಾರ್ವಜನಿಕರ ಕೆಲಸಗಳನ್ನು ಸುಗಮವಾಗಿ ಮಾಡಿಕೊಡದೆ ಇದ್ದಲ್ಲಿ ತಹಶಿಲ್ದಾರ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕಾಧ್ಯಕ್ಷ ದತ್ತು ಗುತ್ತೇದಾರ ಎಚ್ಚರಿಕೆ ನೀಡಿದರು.
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಗಳಾಗಿವೆ: ಯೋಜನಾಧಿಕಾರಿ ಶೇಖರನಾಯ್ಕ ಹೇಳಿಕೆ
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು