ಗಾವಡಗೆರೆಹೋಬಳಿಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗಾವಡಗೆರೆ ನಾಡಕಚೇರಿಯಲ್ಲಿ ಮೂವರು ಯೋಧರು ಹಾಗೂ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯನ್ನು ಸನ್ಮಾನಿಸಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಉಪ ತಹಸೀಲ್ದಾರ್ ಅರುಣ್ ಕುಮಾರ್ ನೆರವೇರಿಸಿದರು ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಹೇಮಂತ್ ಗ್ರಾಮ ಆಡಳಿತ ಅಧಿಕಾರಿಗಳಾದ ವಿಜಯ್ ಕುಮಾರ್, ಪಲ್ಲವಿ, ಚೈತ್ರ, ಶ್ರೀವತ್ಸ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು. ಕರ್ನಾಟಕ ಪಬ್ಲಿಕ್ ಶಾಲೆ:- ಗಾವಡಗೆರೆ ಪದವಿ ಪೂರ್ವ ಕಾಲೇಜಿನ ಧ್ವಜಾರೋಹಣವನ್ನು ಪ್ರಾಂಶುಪಾಲ ಜನಾರ್ಧನ್ ನೆರವೇರಿಸಿದರು ಈ ಸಂದರ್ಭದಲ್ಲಿ ಸಿಡಿಸಿ ಉಪಾಧ್ಯಕ್ಷ ಹೊನ್ನಪ್ಪರವ ಕಾಳಿಂಗೆ ಸಿಡಿಸಿ ಸದಸ್ಯರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು. ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ:- 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಗ್ರಾಮ ಅಧ್ಯಕ್ಷೆ ರುಕ್ಮಿಣಿ ನೆರವೇರಿಸಿದರು ಸಂದರ್ಭದಲ್ಲಿ ಪಿಡಿಒ ಶಿಲ್ಪಾಶ್ರೀ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ನೌಕರರು ಹಾಜರಿದ್ದರು. ಸರ್ಕಾರಿ ಪ್ರೌಢಶಾಲೆ:- ಇಲ್ಲಿನ ದ್ವಜಾರೋಹಣವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುಟ್ಟರಾಜ ನೆರವೇರಿಸಿದರು. ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸರಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು. ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಳೆದ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದ 9 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ :-ಇಲ್ಲಿನ ಧ್ವಜಾರೋಹಣವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ ನೆರವೇರಿಸಿದರು ಮುಖ್ಯ ಶಿಕ್ಷಕ ಮಹೇಶ್ ಸಹ ಶಿಕ್ಷಕ ರಮೇಶ್, ಕವಿತಾ, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ:- ಇಲ್ಲಿನ ಧ್ವಜಾರೋಹಣವನ್ನು ವೈದ್ಯಾಧಿಕಾರಿಗಳಾದ ಡಾ. ಶ್ರೀಕಾಂತ್ ನೆರವೇರಿಸಿದರು ಈ ಸಂಧರ್ಭದಲ್ಲಿ ಇಲಾಖೆಯ ನೌಕರರು ಹಾಜರಿದ್ದರು. ಅನುದಾನಿತ ವೇಣುಗೋಪಾಲ ವಿದ್ಯಾ ಸಂಸ್ಥೆ:- ಇಲ್ಲಿನ ಧ್ವಜಾರೋಹಣವನ್ನ ಸಂಸ್ಥೆ ಅಧ್ಯಕ್ಷ ವಿಶ್ವೇಶ್ವರಯ್ಯ ನೆರವೇರಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಗ್ರಾಮ ಪಂಚಾಯಿತಿ ಸದಸ್ಯರುಗಳು ಸಹ ಶಿಕ್ಷಕರು ಗ್ರಾಮದ ಮುಖಂಡರು ಹಾಜರಿದ್ದರು