
28th September 2024
ದಾವಣಗೆರೆ : ಅರಸಿಕೇರೆ ಕೋಡಿಮಠ ಸಂಸ್ಥಾನದ ಪೀಠಾಧಿಪತಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಂದ್ರೆ ನಡೆದಾಡುವ ದೇವರು. ಅವರ ಮಾತೇ ಮಾಣಿಕ್ಯ. ಅವರು ಹೇಳಿದ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲ. ತಮ್ಮ ಭವಿಷ್ಯದ ಮೂಲಕವೇ ಕೋಡಿಹಳ್ಳಿ ಶ್ರೀಗಳು ಎನ್ನುವ ಖ್ಯಾತಿ ಪಡೆದಿದ್ದಾರೆ. ಕೆಲದಿನಗಳ ಹಿಂದೆ ಅವರ ಹೇಳಿದ್ದ ಭವಿಷ್ಯ ಇಂದು ನಿಜವಾಗಿದೆ.
ಹಾಗಾದ್ರೆ ಶ್ರೀಗಳು ಹೇಳಿದ ಭವಿಷ್ಯವೇನು? ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ? ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ರ‍್ತಾರಾ? ಈ ಕುರಿತು..
ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯಗಳು ಬಹುತೇಕ ನಿಜವಾಗಿವೆ. ಅದರಲ್ಲೂ ರಾಜಕೀಯ ಭವಿಷ್ಯ ಶೇ.100 ರಷ್ಟು ಸತ್ಯವಾಗಿವೆ. ಈ ಹಿಂದೆ ನುಡಿದ್ದ ಭವಿಷ್ಯ ಕೂಡ ನಿಜವಾಗಿದೆ. 2019ರಲ್ಲಿ ಅವರು, ಜಗತ್ತಿಗೆ ಮಾರಕರೋಗ ಒಕ್ಕರಿಸಲಿದೆ ಎಂದಿದ್ದರು. ಅದರಂತೆ ಕರೊನಾ ಮಹಾಮಾರಿ ಜಗತ್ತನ್ನು ಆಳಿತ್ತು.
ಅದೇ ವರ್ಷ ದೇಶ ಕಾಯುವ ರಾಜ ಮತ್ತಷ್ಟು ಬಲಿಷ್ಠ ಆಗಲಿದ್ದಾನೆ ಎಂದಿದ್ದರು. ಅಂದು ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದರು.
ಅಷ್ಟೇ ಅಲ್ಲ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭವಿಷ್ಯ ನುಡಿದ್ದರು. ಚುನಾವಣೆ ಕಾವು ಗೊಂದಲ ಮಯವಾಗಲಿದೆ. ಆದರೆ, ಒಂದು ಪಕ್ಷಕ್ಕೆ ಪೂರ್ಣ ಬಹುಮತ ಬರಲಿದೆ ಎಂದಿದ್ದರು. ಅದರಂತೆ ಕಾಂಗ್ರೆಸ್ ಪಕ್ಷ 135ಸ್ಥಾನ ಪಡೆದು ಅಧಿಕಾರಕ್ಕೆ ಬಂದಿತ್ತು. ಅಷ್ಟೇ ಯಾಕೆ 2024ರ ಲೋಕಸಭೆ ಚುನಾವಣೆ ಭವಿಷ್ಯ ಕೂಡ ಹೇಳಿದ್ದರು. ರಾಷ್ಟ್ರ ಆಳುವ ನಾಯಕರಿಗೆ ಪೂರ್ಣ ಬಹುಮತ ಬರಲ್ಲ. ಆದರೂ ಆತನೇ ರಾಜ ಆಗಲಿದ್ದಾನೆ ಎಂದಿದ್ದರು. ಅದರಂತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 240ಸ್ಥಾನ ಮಾತ್ರ ದಕ್ಕಿತ್ತು. ಎನ್‌ಡಿಎಗೆ ಬಹುಮತ ಬಂದಿದ್ದರಿಂದ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಮಂತ್ರಿ ಆಗಿದ್ದಾರೆ.
ಈಗ ಇತ್ತೀಚೆಗೆ ಕೋಡಿಹಳ್ಳಿ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ಆಳುವ ರಾಜನಿಗೆ ನೂರೆಂಟು ವಿಘ್ನ ಬರಲಿವೆ. ಸಂಕಷ್ಟಗಳು ಕೂಡ ಎದುರಾಗಲಿವೆ. ಮಹಿಳೆಯೊಬ್ಬಳು ರಾಜ್ಯವನ್ನು ಆಳಲಿದ್ದಾಳೆ ಎಂದಿದ್ದರು. ಅವರ ಮಾತು ಈಗ ನಿಜವಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಡಾ ಹಗರಣ ಸಂಕಷ್ಟ ತಂದೊಡ್ಡಿದೆ. ಅಲ್ಲದೆ ಎಫ್‌ಐಆರ್ ಕೂಡ ದಾಖಲಾಗಿದ್ದು ರಾಜೀನಾಮೆ ನೀಡುವಂತ ಸ್ಥಿತಿ ಎದುರಾಗಿದೆ. ಮಹಿಳೆಯೊಬ್ಬಳು ರಾಜ್ಯ ಆಳಿಲಿದ್ದಾಳೆ ಎನ್ನುವ ಮಾತು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಶಾಸಕಿ ಲಕ್ಷಿö್ಮ ಹೆಬ್ಬಾಳಕರ್ ಮಾತ್ರ ಏಕೈಕ ಮಹಿಳಾ ಸಚಿವೆ. ಅವರನ್ನು ಹೊರತುಪಡಿಸಿದರೆ ಯಾರು ಸಿಎಂ ಆಗಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ಕೋಡಿಹಳ್ಳಿ ಶ್ರೀಗಳು ಹೇಳುವ ಭವಿಷ್ಯ ನಿಜವಾಗುವ ಕಾಲ ಕೂಡಿಬಂದಿದೆ.
28th September 2024
*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕*
*🌄🪐ದಿನ ಭವಿಷ್ಯ28/09/2024 ಶನಿವಾರ*🪐🌄
*01🌹,⚜️,ಮೇಷ ರಾಶಿ*⚜️
ಸ್ನೇಹಿತರೊಂದಿಗೆಪುಣ್ಯಕ್ಷೇತ್ರಗಳಿಗೆ,ಭೇಟಿನೀಡುತ್ತೀರಿ.ವ್ಯಾಪಾರ,ಮತ್ತು ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ. ಕೆಲವು ಕೆಲಸಗಳಲ್ಲಿ ಕಠಿಣ ಪರಿಶ್ರಮ ಹೆಚ್ಚಾಗುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ . ಮನೆಯ ಹೊರಗೆಅನಿರೀಕ್ಷಿತವಿವಾದ
ಗಳು ಉಂಟಾಗುತ್ತವೆ. ವೃತ್ತಿ ಮತ್ತುವ್ಯಾಪಾರನಿರಾಶಾದ
ಯಕವಾಗಿರುತ್ತವೆ,
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ
*02🌹,⚜️,ವೃಷಭ ರಾಶಿ*⚜️
ಉದ್ಯೋಗದಲ್ಲಿನಸಮಸ್ಯೆ
ಗಳಿಂದ ಮುಕ್ತಿ ಪಡೆಯುತ್ತೀರಿ. ಕೆಲಸದಲ್ಲಿನ ಅಡಚಣೆಗಳು ನಿವಾರಣೆಯಾಗುತ್ತವೆ.ವ್ಯಾಪಾರಗಳುಹೆಚ್ಚುಉತ್ತೇಜನಕಾರಿಯಾಗಿರುತ್ತವೆ. ದೀರ್ಘಕಾಲದ ವಿವಾದಗಳುಇತ್ಯರ್ಥವಾಗುತ್ತವೆ.ಕುಟುಂಬದಸದಸ್ಯರೊಂದಿಗೆ,ದೈವ ದರ್ಶನಪಡೆಯುತ್ತೀರಿ. ಹೊಸ ವಾಹನ ಯೋಗವಿದೆ,
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಸಿರು
*03🌹,⚜️,ಮಿಥುನ ರಾಶಿ*⚜️
ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶಸ್ವಲ್ಪನಿರಾಶಾದಾಯಕವಾಗಿರುತ್ತದೆ. ಸಣ್ಣ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಬಂಧು ಮಿತ್ರರೊಂದಿಗೆ ಅನಿರೀಕ್ಷಿತ ವಾದ ವಿವಾದಗಳು ಉಂಟಾಗುತ್ತವೆ. ವ್ಯರ್ಥ ಪ್ರಯಾಣಗಳನ್ನುಮಾಡಬೇಕಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳುಕಿರಿಕಿರಿಯನ್ನುಂಟುಮಾಡುತ್ತವೆದೈವಿಕ ಚಿಂತನೆ ಹೆಚ್ಚಾಗುತ್ತದೆ,
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ನೀಲಿ
*04🌹,⚜️,ಕರ್ಕ ರಾಶಿ*⚜️
ಸಮುದಾಯದ ಪ್ರಮುಖ ವ್ಯಕ್ತಿಗಳ ಪರಿಚಯ ಹೆಚ್ಚಲಿದೆ. ವ್ಯಾಪಾರಮತ್ತುಉದ್ಯೋಗಗಳಲ್ಲಿನ,ಸಮಸ್ಯೆಗಳುನಿವಾರಣೆಯಾಗುತ್ತವೆ,ನಿರುದ್ಯೋಗಿಗಳಿಗೆ ಹೊಸಉದ್ಯೋಗಾವಕಾಶಗಳು ದೊರೆಯುತ್ತವೆ. ಕೈಗೊಂಡ ಕಾರ್ಯಗಳಲ್ಲಿಯಶಸ್ವಿಯಾಗುತ್ತೀರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ,
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಳದಿ
05🌹,⚜️,ಸಿಂಹ ರಾಶಿ*⚜️
ಕೈಗೆತ್ತಿಕೊಂಡ ಕೆಲಸಗಳಲ್ಲಿ ಸಮಸ್ಯೆಗಳು ದೂರವಾಗುತ್ತವೆ. ಹೊಸವಸ್ತ್ರ,ಆಭರಣಖರೀದಿ
ಸಲಾಗುತ್ತದೆ.ಸ್ಥಿರಾಸ್ತಿಮಾರಾಟದಲ್ಲಿ ಲಾಭ ದೊರೆಯುತ್ತದೆ. ಹೊಸ ವ್ಯಕ್ತಿಗಳಪರಿಚಯಗಳು ಅನುಕೂಲವಾಗಗಿರುತ್ತದೆ. ದೂರದ ಸಂಬಂಧಿಕರಿಂದ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರ ವಿಸ್ತರಣೆಗೆ ಅವಕಾಶಗಳು ದೊರೆಯುತ್ತವೆ,
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ನೀಲಿ
06🌹,⚜️,ಕನ್ಯಾ ರಾಶಿ*⚜️
ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗುತ್ತವೆ. ಕೈಗೆತ್ತಿಕೊಂಡಕೆಲಸಪ್ರಗತಿ
ಯಾಗದೆ ಕಿರಿಕಿರಿ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ,
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕಂದು
7🌹,⚜️,ತುಲಾ ರಾಶಿ*⚜️
ಹಳೆಸಾಲವಸೂಲಿಯಾಗುತ್ತದೆ. ಸಹೋದರರೊಂದಿಗೆ ಭೂ ವಿವಾದಗಳು ಒಂದು ಹಂತಕ್ಕೆ ಬರುತ್ತವೆ. ಸ್ಥಿರ ಆಸ್ತಿಗಳನ್ನು ಖರೀದಿಸುವ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಪ್ರಮುಖ ಕಾರ್ಯಗಳು ಯೋಜಿತವಾಗಿಪೂರ್ಣಗೊಳಿಸುತ್ತೀರಿ, ಬಂಧು ಮಿತ್ರರಿಂದ ಶುಭ ಸುದ್ಧಿ ದೊರೆಯುತ್ತದೆ. ವ್ಯಾಪಾರ, ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ದೊರೆಯುತ್ತದೆ,
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ
08🌹,⚜️,ವೃಶ್ಚಿಕ ರಾಶಿ*⚜️
ಬಂಧು ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ. ಆಧ್ಯಾತ್ಮಿಕ ಚಿಂತನೆಹೆಚ್ಚಾಗುತ್ತದೆ.ವ್ಯಾಪಾರಗಳು ಸ್ವಲ್ಪ ನಿಧಾನವಾಗಿ ಸಾಗುತ್ತವೆ, ಉದ್ಯೋಗದಲ್ಲಿ ನಿರಾಶೆ ಉಂಟಾಗುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಕೆಲವುವಿಚಾರಗಳಲ್ಲಿಸ್ನೇಹಿತರಿಂದ ಒತ್ತಡ ಉಂಟಾಗುತ್ತದೆ. ಉದರಸಂಬಂಧಿತಅನಾರೋಗ್ಯ, ಸಮಸ್ಯೆಗಳು ನೋವುಂಟು ಮಾಡುತ್ತವೆ,
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ಹಳದಿ
*09🌹,⚜️,ಧನು ರಾಶಿ*⚜️
ಕೆಲವು ವ್ಯವಹಾರಗಳಲ್ಲಿ ಇತರರೊಂದಿಗೆಜಾಗರೂಕರಾಗಿ ವ್ಯವಹರಿಸಬೇಕು.ಪ್ರಯಾಣದಲ್ಲಿ ಹಠಾತ್ಬದಲಾವಣೆಗಳನ್ನು ಮಾಡುತ್ತೀರಿ. ಹಣಕಾಸಿನ ತೊಂದರೆಗಳು ಮಾನಸಿಕ ಸಮಸ್ಯೆಗಳನ್ನುಉಂಟುಮಾಡುತ್ತವೆ.ಸಹೋದರರೊಂದಿಗೆಭಿನ್ನಾಭಿಪ್ರಾಯ ಉಂಟಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಆತುರದನಿರ್ಧಾರತೆಗೆದು
ಕೊಳ್ಳುವುದು ಒಳ್ಳೆಯದಲ್ಲ,
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬೂದು
*10🌹,⚜️,ಮಕರ ರಾಶಿ*⚜️
ಮಹತ್ವದ ಕಾರ್ಯಗಳಲ್ಲಿ ಮುಂದೆ ಯೋಚಿಸುವುದು ಉತ್ತಮ.ವೃತ್ತಿಪರವ್ಯವಹಾರಗಳಲ್ಲಿ,ಪ್ರಮುಖನಿರ್ಣಯಗಳನ್ನು ಜಾರಿಗೊಳಿಸುತ್ತೀರಿ. ಹೊಸ ವಾಹನವನ್ನುಖರೀದಿಸಲಾಗುತ್ತದೆ.ನಿರುದ್ಯೋಗಿಗಳಪ್ರಯತ್ನಗಳು,ಮಂದಗತಿಯಲ್ಲಿಸಾಗುತ್ತವೆಉದ್ಯೋಗದ ವಾತಾವರಣ ಉತ್ಸಾಹದಾಯಕವಾಗಿರುತ್ತದೆ,
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ
*11🌹,⚜️,ಕುಂಭ ರಾಶಿ*⚜️
ಸಹೋದರರೊಂದಿಗಿನ ಸ್ಥಿರಾಸ್ತಿ ಒಪ್ಪಂದಗಳುಮುಂದೂಡಲ್ಪಡುತ್ತವೆ. ಕೈಗೊಂಡಕೆಲಸಗಳಲ್ಲಿ ಅಡೆತಡೆಗಳುನಿವಾರಣೆಯಾಗುತ್ತವೆ. ಮನೆಯ ಹೊರಗೆ ಅನುಕೂಲಕರವಾತಾವರಣವಿರುತ್ತದೆ. ಸ್ನೇಹಿತರೊಂದಿಗೆ ಸಾಮರಸ್ಯದಿಂದವರ್ತಿಸುತ್ತೀರಿ. ವ್ಯಾಪಾರಗಳು ಸ್ವಲ್ಪ ಗೊಂದಲಮಯವಾಗಿರುತ್ತವೆ. ಉದ್ಯೋಗದಲ್ಲಿನತೊಂದರೆಗಳು, ನಿವಾರಣೆಯಾಗುತ್ತವೆ,
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ನೀಲಿ
*12🌹,⚜️,ಮೀನ ರಾಶಿ*⚜️
ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಬೇಕು. ಉದ್ಯೋಗ ಪ್ರಯತ್ನಗಳಲ್ಲಿಅಡೆತಡೆಗಳಿರುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಕಿರಿಕಿರಿಗಳು ಉಂಟಾಗುತ್ತವೆ. ಹಠಾತ್ಪ್ರಯಾಣಸೂಚನೆಗಳಿವೆ. ಮನೆಯ ಹೊರಗೆ ಕೆಲವರ ವರ್ತನೆ ಬೇಸರ ತರಿಸುತ್ತದೆ. ದೈವ ದರ್ಶನಗಳನ್ನು ಪಡೆಯುತ್ತೀರಿ,
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಕಂದು
🚩