
28th September 2024
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಪ್ರಾಥಮಿಕ ವರ್ತಮಾನ ವರದಿ (ಎಫ್ಐಆರ್) ದಾಖಲಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ನಿರ್ದೇಶನದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಂದು ಸಿದ್ದುಗೆ ಮೂರನೇ ಸಂಕಷ್ಟ ಎದುರಾಗಿದೆ. ಹಾಗಾದ್ರೆ ಸಿದ್ದು ಮುಂದಿನ ನಡೆಯಬೇಕು? ಯಾವ ಯಾವ ಕೇಸ್ ಆಗಿದ್ದಾರೆ ಗೊತ್ತಾ? ಈ ಕುರಿತು ಸಂಪೂರ್ಣ ಡೀಟೆಲ್ಸ್ ಇಲ್ಲಿದೆ
ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೈಸೂರಿನ ಲೋಕಾಯುಕ್ತರು ಕೇಸ್ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಆರೋಪಿ (ಎ1) ಆಗಿದ್ದರೆ, ಅವರ ಪತ್ನಿ ಬಿಎಂ ಪಾರ್ವತಿ ಎರಡನೇ ಆರೋಪಿ (ಎ2) ಯಾಗಿದ್ದಾರೆ. ಸಿಎಂ ಬಾಮೈದ ಬಿಎಂ ಮಲ್ಲಿಕಾರ್ಜುನ ಸ್ವಾಮಿ ಮೂರನೇ ಆರೋಪಿಯಾಗಿದ್ದು, ಜಾಗದ ಮಾಲೀಕರಾಗಿದ್ದ ಜೆ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ. ಕೇಸ್ ನಂಬರ್ 11/2024 ಅಡಿ ಲೋಕಾಯುಕ್ತ ಅಧಿಕಾರಿಗಳು ಅಧಿಕೃತವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಉದೇಶ್ ದೂರು ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ ಕ್ರಿಮಿನಲ್ ಪಿತೂರಿ, ಒಳ ಸಂಚು ಇದು ಸಾಬೀತಾದರೆ ಜೀವಾವಧಿ ಶಿಕ್ಷೆ ನೀಡಬಹುದು. ಐಪಿಸಿ ಸೆಕ್ಷನ್ 166 - ಸರ್ಕಾರಿ ಸೇವಕರಿಂದ ಕಾನೂನು ಉಲ್ಲಂಘನೆ. ಐಪಿಸಿ ಸೆಕ್ಷನ್ 403 - ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ. ಐಪಿಸಿ ಸೆಕ್ಷನ್ 406 - ಅಪರಾಧಿಕ ನಂಬಿಕೆ ದ್ರೋಹ ಇದಕ್ಕೆ 3ವರ್ಷ ಜೈಲು ಅಥವಾ ದಂಡ ವಿಧಿಸಬಹುದು. ಐಪಿಸಿ ಸೆಕ್ಷನ್ 420 - ವಂಚನೆ ಅಂದರೆ ಮೋಸದಿಂದ ಲಾಭ ಪಡೆಯುವುದು.
ಐಪಿಸಿ ಸೆಕ್ಷನ್ 426 - ಕಿಡಿಗೇಡಿತನ ಇದಕ್ಕೆ 3 ತಿಂಗಳ ಶಿಕ್ಷೆ ಅಥವಾ ದಂಡ ಹಾಕಬಹುದು. ಐಪಿಸಿ ಸೆಕ್ಷನ್ 465 ನಕಲಿ ದಾಖಲೆ ಸೃಷ್ಟಿ, ಐಪಿಸಿ ಸೆಕ್ಷನ್ 468 - ನಕಲಿ ದಾಖಲೆ ಸೃಷ್ಟಿಸಿ ಲಾಭ ಪಡೆದುಕೊಳ್ಳುವುದು ಅಂದರೆ ಇದಕ್ಕೆ 5 ವರ್ಷ ಜೈಲು ಅಥವಾ ದಂಡವಿದೆ. ಐಪಿಸಿ ಸೆಕ್ಷನ್ 340 ವ್ಯಕ್ತಿಯ ಕಾರ್ಯಚಟುವಟಿಕೆಗೆ ನಿರ್ಬಂಧ. ಐಪಿಸಿ ಸೆಕ್ಷನ್ 351 ನಿರ್ಬಂಧಿಸಿದ ವ್ಯಕ್ತಿ ಕಾರ್ಯಮುಂದುವರಿಸಿದರೆ ದಾಳಿ ನಡೆಸುವ ಬೆದರಿಕೆ. ಐಪಿಸಿ ಸೆಕ್ಷನ್ 9 ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ ಹಾಗೂ ಐಪಿಸಿ ಸೆಕ್ಷನ್ 13 ಸರಕಾರಿ ನೌಕರನಿಂದ ಅಧಿಕಾರ ದುರ್ಬಳಕೆ ಎನ್ನುವ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಮುಡಾ ಅಕ್ರಮ ಆರೋಪ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಸಿಆರ್ಪಿಸಿ ಅನ್ವಯ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಬುಧವಾರ ಆದೇಶಿಸಿತ್ತು. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದೂ ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶ ಸಕ್ಷಮ ಪ್ರಾಧಿಕಾರವಾದ ಲೋಕಾಯುಕ್ತ ಎಡಿಜಿಪಿಗೆ ತಲುಪಿತ್ತು. ಬಳಿಕ ಪ್ರಾಪರ್ ಮಾರ್ಗದಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿಗೆ ವರ್ಗಾವಣೆಯಾಗಿತ್ತು. ಇದೀಗ ಪೊಲೀಸರು ಕೋರ್ಟ್ ಆದೇಶದ ಅನ್ವಯ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ದಿನಕ್ಕೊಂದು ಸಂಕಷ್ಟಗಳು ಎದುರಾಗುತ್ತಿವೆ.
20th September 2024
ದಾವಣಗೆರೆ : ದಾವಣಗೆರೆ ಗಣಪನ ಗಲಾಟೆ ಸಂಬಂಧ ಖಾಕಿ ಪಡೆ ಸುಮಾರು 18 ಜನರನ್ನು ಬಂಧಿಸಿದ್ದು, ಪರಿಸ್ಥಿತಿ ಶಾಂತವಾಗಿದೆ.
ಬೇತೂರು ರಸ್ತೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಎರಡು ಕೋಮಿನ ನಡುವೆ ಘೋಷಣೆ ವಿಚಾರಕ್ಕೆ ಸಬಂಧಪಟ್ಟಂತೆ ಕಲ್ಲು ತೂರಾಟ ನಡೆದಿತ್ತು. ಬಳಿಕ ಹಗಲು, ರಾತ್ರಿ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ
ಎರಡು ಕೋಮಿನ ಒಟ್ಟು 18 ಜನ ಆರೋಪಿಗಳ ನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ಅರೋಪಿಗಳನ್ನು ನ್ಯಾಯಾಧೀಶರ ಮನೆಗೆ ಪೊಲೀಸರು ಕರೆತಂದಿದ್ದಾರೆ.
ಎಂಸಿಸಿ 'ಎ' ಬ್ಲಾಕ್ ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ರ ನಿವಾಸಕ್ಕೆ ಕರೆ ತಂದ ಪೊಲೀಸರು ವಿಚಾರಣೆ ನಡೆಸಿದರು. ಬಳಿಕ 10 ಜನರಿಗೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಅಲ್ಲದೇ ಇದರಲ್ಲಿ ಎಂಟು ಜನ ಗಣೇಶ ಸಮಿತಿಯವರನ್ನು ಅರೆಸ್ಟ್ ಮಾಡಲಾಗಿದೆ.
ಮೆರವಣಿಗೆ ವೇಳೆ ಕಲ್ಲು ತೂರಾಟದಲ್ಲಿ ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿ, ''ಗಣೇಶನ ಮೆರವಣಿಗೆಯು ನಗರದ ಅರಳಿಮರ ಸರ್ಕಲ್ ದಾಟಿ ಚಾಮರಾಜಪೇಟೆ ಸರ್ಕಲ್ ಬಳಿ ಹೋಗುವಾಗ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಗಣಪತಿ ನಿಮಜ್ಜನಕ್ಕೆ ಮೆರವಣಿಗೆಯು ಮುಂದೆ ತೆರಳಿದೆ''
ನಿನ್ನೆ ನಡೆದ ಪ್ರಚೋದನಾತ್ಮಕ ಭಾಷಣವೇ ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದವರ ಮೇಲೆಯೂ ಕ್ರಮ ಜರುಗಿಸಲಾಗಿದೆ. ಪ್ರಚೋದನಾತ್ಮಕ ಭಾಷಣಗಳ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.
ಅಂಗಡಿ ಮುಗ್ಗಟ್ಟು ಬಂದ್
ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದರಿಂದ ಬೇತೂರ್ ವೃತ್ತ, ಅರಳಿಮರ ವೃತ್ತ, ಎನ್ಆರ್ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಲಿಸರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದ್ದಾರೆ. ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ.
20th September 2024
ದಾವಣಗೆರೆ : ಬೇತೂರು ಗಣೇಶ ವಿಸರ್ಜನೆ ವೇಳೆ ಹಳೆ ದಾವಣಗೆರೆಯಲ್ಲಿ ಉಂಟಾದ ಗಲಭೆ ಇಡೀ ಊರನ್ನು ವ್ಯಾಪಿಸಿದ್ದು, ಮಧ್ಯರಾತ್ರಿಯಲ್ಲಿಯೇ ಕಿಡಿಗೇಡಿಗಳ ಮನೆಗೆ ನುಗ್ಗಿದ ಪೊಲೀಸರು, ಕಿಡಿಗೇಡಿಗಳಿಗೆ ಒಬ್ಬರಾದ ನಂತರ ಒಬ್ಬರು ಬೆತ್ತದ ರುಚಿ ತೋರಿಸಿದರು.
ಒಂದು ಏರಿಯಾದಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡರೇ, ಇನ್ನೊಂದು ಏರಿಯಾದಲ್ಲಿ ಗಲಾಟೆ ಶುರುವಾಯಿತು..ಅದರಲ್ಲೂ ಮಧ್ಯರಾತ್ರಿಯಲ್ಲಿಯೂ ಕಿಡಿಗೇಡಿಗಳು ಅಟ್ಟಹಾಸ ಮೆರೆಯುವುದನ್ನು ಬಿಡಲಿಲ್ಲ. ಈ ನಡುವೆ ಹಸಿವು, ನಿದ್ದೆ, ಹೆಂಡತಿ ಬಿಟ್ಟು ಬಂದಿದ್ದ ಪೊಲೀಸರು ಸಿಟ್ಟಿನಲ್ಲಿ ಕಿಡಿಗೇಡಿಗಳಿಗೆ ಸಖತ್ ಮಂಜಾ ಕೊಟ್ಟರು. ಅಯ್ಯೋ , ಅಪ್ಪ, ಅಮ್ಮ ನಾನಲ್ಲ ಬಿಟ್ಟು ಬಿಡಿ ಅಂದ್ರೂ ಖಾಕಿ ಬೆತ್ತದ ಮೂಲಕ ತನ್ನ ಆಕ್ರೋಶ ಹೊರ ಹಾಕಿತು.
ಗಲಭೆ ಹೆಚ್ಚಾದ ಕಾರಣ ಐಜಿಪಿ ಹಾವೇರಿ, ಶಿವಮೊಗ್ಗದಿಂದ 15 ಕೆಎಸ್ ಆರ್ ಪಿ ತುಕಡಿ ಪಡೆ ಕರೆಸಿತ್ತು. ಇವರು ಇಡೀ ಊರನ್ನು ರಾತ್ರಿಯೆಲ್ಲ ಕಾವಲು ಕಾದರು, ಈ ನಡುವೆ ಮಟ್ಟಿಕಲ್ಲು ಏರಿಯಾಗೆ ಕಿಡಿಗೇಡಿಗಳು ನುಗ್ಗಿದರು, ಅಲ್ಲಿಯೂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಲಾಠಿ ಹಿಡಿದು ತಮ್ಮ ಪ್ರದರ್ಶನ ತೋರಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ನಿದ್ದೆ ಮಾಡದ ದಾವಣಗೆರೆ ಎಸ್ಪಿ, ಸ್ಥಳದಲ್ಲಿಯೇ ಮೊಕ್ಕಾಂ
ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಹಾಗೂ ನೇತೃತ್ವದ ತಂಡ ಇಡೀ ದಾವಣಗೆರೆ ಸುತ್ತುವರಿದಿತ್ತು. ಪೊಲೀಸ್ ಜೀಪ್ ಗಳ ಸೈರನ್ ಒಂದು ಸುಮ್ನೆ ಬಡೆಯುತ್ತಾ ಏರಿಯಾಗಳನ್ನು ಸುತ್ತು ಹೊಡೆಯಿತು. ಕೆಲ ಕಿಡಿಗೇಡಿಗಳು ಬೈಕ್ ಗಳನ್ನು ಹಾಳು ಮಾಡಿದರು. ಎಸ್ಪಿ ಕೂಡ ಎಲ್ಲ ಕಡೆ ಮಾಹಿತಿ ತಿಳಿಯುತ್ತಾ, ತಡ ರಾತ್ರಿ ಪರಿಸ್ಥಿತಿ ಶಾಂತಗೊಳಿಸಲು ಯಶಸ್ವಿಯಾದರು. ಈ ನಡುವೆ ವಿಘ್ನ ನಿವಾರಕ ಶಾಂತವಾಗಿ ನೀರಿನಲ್ಲಿ ವಿಸರ್ಜನೆಗೊಂಡು ಎಲ್ಲರಿಗೂ ಒಳ್ಲೆಯದು ಮಾಡಪ್ಪ ಎಂದು ಹರಿಸಿ ತನ್ನ ಪಾಡಿಗೆ ತಾನು ಹೊರಟನು.
.
17th July 2024
ದಾವಣಗೆರೆ : ಭದ್ರಾ ಡ್ಯಾಂನಿAದ ದಿನಾಲು ಸುಮಾರು 600 ಕ್ಯೂಸೆಕ್ಸ್ ನಷ್ಟು ನೀರು ಪೋಲಾಗುತ್ತಿದ್ದು ಕೂಡಲೇ ಶಾಶ್ವತವಾಗಿ ನೀರು ನಿಲ್ಲಿಸುವ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸುಮಾರು ಸಾವಿರ ಕೆರೆಗಳಿಗೆ ನೀರು ತುಂಬಿಸುವಷ್ಟು ನೀರು ಪೋಲಾಗಿ ಹೋಗಿದೆ. ದಿನಂಪ್ರತಿ 4 ರಿಂದ 5 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿದು ಹೋಗಿತ್ತು. ನಂತರ ನಾವು ಹೋರಾಟ ಮಾಡುತ್ತೇವೆಂದು ಅಧಿಕಾರಿಗಳು ರಾತ್ರೋರಾತ್ರಿ ತೇಪೆ ಹಚ್ಚುವ ಕೆಲಸ ಮಾಡಿ, ನೀರು ಪೋಲಾಗುತ್ತಿರುವ ಗೇಟನ್ನು ಸಂಪೂರ್ಣ ಮುಚ್ಚಿದ್ದೇವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ನೀರು ಸಂಪೂರ್ಣವಾಗಿ ಬಂದ್ ಆಗದೇ ಈಗಲೂ ಪ್ರತಿದಿನ 600 ಕ್ಯೂಸೆಕ್ಸ್ ನಷ್ಟು ನದಿಗೆ ಹರಿಯುತ್ತಿದೆ ಎಂದು ಆರೋಪಿಸಿದರು.
ಮೊದಲೇ 2 ಬೆಳೆ ಸರಿಯಾಗಿ ಮಳೆಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇದರ ಚಿಂತೆ ಇಲ್ಲದೇ ಅಧಿಕಾರಿಗಳು ಡ್ಯಾಂ ನಿರ್ಚಹಣೆಯಲ್ಲಿ ನಿರ್ಲಕ್ಷ ತೊರಿದ್ದಾರೆ. ಸರ್ಕಾರಕ್ಕೂ ರೈತನ ಸಮಸ್ಯೆಗಳನ್ನು ಕೇಳುವುದಕ್ಕೆ ಸಮಯವಿಲ್ಲದೇ ಬರಿ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೆ ಹೆಣಗಾಡುತ್ತಿದೆ. ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಭದ್ರ ಡ್ಯಾಂ ತುಂಬಿದರೆ ಮಾತ್ರ ಅಪ್ಪರ್ ಭದ್ರಕ್ಕೆ ನೀರು ಬಿಡಬೇಕು ಆದರೆ ಡ್ಯಾಂ ಇನ್ನೂ ಭರ್ತಿ ಆಗದಿದ್ದರು ಕಳ್ಳತನದಲ್ಲಿ ಅಪ್ಪರ್ ಭದ್ರಗೆ ನೀರು ಬಿಡಲಾಗಿದೆ. ಇದು ಸರಿಯಲ್ಲ ಅಧಿಕಾರಿಗಳು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡ್ಯಾಂನ ನೀರು ಪೋಲಾಗುವುದನ್ನು ತಡೆಯಲು, ಗೇಟ್ಗಳ ದುರಸ್ಥಿ ಮಾಡಿಸಲು, ಸಿಮೆಂಟ್ ಬೆಡ್ಗಳನ್ನು ನಿರ್ಮಿಸಲು ಒಟ್ಟಾರೆ ಡ್ಯಾಂನ ದುರಸ್ಥಿ ಕಾರ್ಯಕ್ಕೆ ಸರ್ಕಾರ ಕೂಡಲೇ 150 ಕೋಟಿ ಹಣ ಬಿಡುಗಡೆ ಮಾಡಿ ಶಾಶ್ವತ ಪರಿಹಾರ ಕಾರ್ಯ ಮಾಡಬೇಕು. ಇಲ್ಲಾವಾದರೆ ಈ ಬಾಗದ ರೈತರು ರಾಷ್ಟಿçÃಯ ಹೆದ್ದಾರಿ ಬಂದ್ ಮಾಡುವುದರÀ ಮೂಲಕ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಹಾಗೂ ನ್ಯಾಯಂಗ ತನಿಖೆಗೂ ಒತ್ತಾಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮೋರ್ಚಾ ರಾಜ್ಯಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ನಷ್ಟು ಅಚ್ಚುಕಟ್ಟು ಭಾಗವಿದೆ. ಕಳೆದ 2 ಬೆಳೆಗಳಿಗೆ ನೀರಿಲ್ಲದೇ ರೈತರು ಸಾಲದಲ್ಲಿ ಮುಳುಗಿದ್ದಾರೆ. ಈಗ ಚೆನ್ನಾಗಿ ಮಳೆ ಆಗುತ್ತಿರುವುದರಿಂದ ಡ್ಯಾಂ ತುಂಬುವ ನೀರಿಕ್ಷೆಯಲ್ಲಿದ್ದಾರೆ. ಕೂಡಲೇ ಸರ್ಕಾರ ಐಸಿಸಿ ಸಭೆ ಕರೆದು ನೀರು ಬಿಡುವ ವೇಳಾಪಟ್ಟಿ ಪ್ರಕಟಿಸಬೇಕು. ಆದರೆ ಜಿಲ್ಲೆಯ ಸಚಿವರಿಗೆ ಇದ್ಯಾವುದರ ಕಾಳಜಿಯೇ ಇಲ್ಲ. ನಮಗೆ ಸಂಬAಧವೇ ಇಲ್ಲ ಎಂಬುವAತೆ ನಿರ್ಲಕ್ಷ ವಹಿಸಿದ್ದಾರೆ. ಇನ್ನಾದರು ಜಿಲ್ಲಾ ಸಚಿವರು ಎಚ್ಚೆತ್ತುಕೊಂಡು ಐಸಿಸಿ ಸಭೆ ಕರೆದು ನೀರು ಬಿಡುವ ವೇಳಾಪಟ್ಟಿ ಪ್ರಕಟಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಡಾಳು ಮಲ್ಲಿಕಾರ್ಜುನ್, ಬಿ.ಜೆ.ಅಜಯ್ ಕುಮಾರ್, ಚಂದ್ರಶೇಖರ್ ಪೂಜಾರ್, ಪ್ರವೀಣ್ ನಾಯ್ಕ, ರಾಜು, ಮಲ್ಲಿಕಾರ್ಜುನ್, ಬಾತಿ ಶಿವಕುಮಾರ್ ಕುಮಾರಪ್ಪ ಇತರರು ಇದ್ದರು.